ಮಂಗಳಂ ಜಯ ಮಂಗಳಂ ಪ
ಆದಿನಾರಾಯಣನೆನಿಸಿದಗೆ
ಪಾದದಿ ಗಂಗೆಯ ಪಡೆದವಗೆ
ಸಾಧುಸಜ್ಜನರನ್ನು ಸಲುಹುವ ದೇವಗೆ ವಿ
ನೋದ ಮೂರುತಿಯಾದ ವೆಂಕಟಗೆ 1
ಶಂಖ ಚಕ್ರಧರಿಸಿಪ್ಪವU
ಪಂಕಜ ಹಸ್ತವ ತೋರ್ಪವಗೆ
ಬಿಂಕದೊಳಸುರರ ಕೆಡಹಿದ ಧೀರಗೆ ಮೀ
ನಾಂಕನ ಪಿತನಾದ ವೆಂಕಟಗೆ 2
ಪೀತಾಂಬರಧರನೆನಿಸಿದಗೆ
ನೂತನ ನಾಮದಿ ಮೆರೆವವಗೆ
ಪಾತಕನಾಶನ ಪರಮಪಾವನಗೆ ಅ
ತೀತ ಮಹಿಮನಾದ ವೆಂಕಟಗೆ 3
ಖಗವಾಹನನೆಂದೆನಿಸಿದಗೆ
ನಗಧರನಾಗಿಹ ಅಘಹರಗೆ
ಮೃಗಧರರೂಪಗೆ ಮುಂಚಕಲಾಪಗೆ
ಜಗದಾಧಾರಕ ವೆಂಕಟಗೆ 4
ಲೋಕನಾಯಕನಾದ ಕೇಶವಗೆ
ಶೋಕಭಂಜನನಾದ ಮಾಧವಗೆ
ಸಾಕಾರ ರೂಪಗೆ ಸರ್ವಾತ್ಮಕನಿಗೆ
ಶ್ರೀಕರನೆನಿಸುವ ವೆಂಕಟಗೆ 5
ಆಲದ ಎಲೆಯೊಳ್ವೊರಗಿದಗೆ ಆ
ಕಾಲದಿ ಅಜನನು ಪೆತ್ತವಗೆ
ನಿಗಮ ವಿದೂರಗೆ
ಕಾಲಕಾಲಾಂತಕ ವೆಂಕಟಗೆ 6
ಸ್ವಾಮಿ ಪುಷ್ಕರಣಿಯ ವಾಸನಿಗೆ
ಭೂಮಿ ವರಾಹತಿಮ್ಮಪ್ಪನಿಗೆ
ಪ್ರೇಮದಿ ಜಗವನು ಸಲುಹುವ ನಾಮದ
ಸೋಮ ಸನ್ನಿಭನಾದ ವೆಂಕಟಗೆ 7