ಒಟ್ಟು 14553 ಕಡೆಗಳಲ್ಲಿ , 132 ದಾಸರು , 6967 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತಿ ಗುರುವರ ಗುರುಮಾರುತಿ ಕರುಣಿಸೊ ಸಾರಿದೆ ತವ ಪದ ಸಾರಸವ ಪ ದಾಶರಧಿಗೆ ನಿಜ ದಾಸನೆನಿಸಿ | ಕಮಲಾ ಸನ ಪದವಿಯ ಪೊಂದಿದ್ಯೋ ನೀ ಭೂಸುತೆ ಚೋರನ ಭಾಸುರ ಪುರವ ಹು ಕೀಶ ನಮೋ 1 ಪುನಃ ದ್ವಾಪರದಲಿ ಜನಿಸಿ ಧ ರ್ಮಾನುಜನೆನಿಸಿ | ಭೂಭಾರ ದನುಜರ ರಣದಿ ಹೂಂಕಾರದಿ ಕುಣಿದು ಹರಿ ಮನ ಘನ ಮೆಚ್ಚಿಸಿದ ಭೀಮ ನಮೋ 2 ಶ್ರೀಮದಾನಂದ ಮುನಿ ನಾಮದಿ ಪರಾತ್ವರ ನೇಮದಿ ಭಜಪರ ಕಾಮಿತ ಗರಿಯುವ ಧಾಮ ನಮೋ 3
--------------
ಶಾಮಸುಂದರ ವಿಠಲ
ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ಭಾರತಿ ಭರತನ ರಮಣಿ ಶಿರಬಾಗುವೆ ತ್ರಿಜಗಜ್ಜನನಿ ಪ. ಭಾರತ ಭಾಗವತಾರ್ಥ ಬೋಧಿನಿ ಶಾರದೇಂದುನಿಭವದನಿ ಅ.ಪ. ಹರಿಗುರುಗಳಲಿ ಸದ್ಭಕ್ತಿ ದೃಢ ಕರುಣಿಸು ಸರಸಿಜನೇತ್ರಿ ಗಿರೀಶಾದಿ ಸರ್ವಸುರೌಘಪ್ರಣೇತ್ರಿ ಶರಣು ಶರಣು ಸುಪವಿತ್ರಿ 1 ಕಾಳಿ ದ್ರೌಪದಿ ಸುನಾಮೆ ನಮ್ಮ ಪಾಲಿಸು ಭೀಮಪ್ರೇಮ ಶ್ರೀ ಲಕ್ಷ್ಮೀನಾರಾಯಣನ ಭೃತ್ಯೆ ಕಾಲತ್ರಯ ಕೃತಕೃತ್ಯೆ 2
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಭಾಗ್ಯವತಿ ಜಯತಿ ಪ. ಸೂರಿಜನೋದ್ಧರೆ ಸುಗುಣಾಲಂಕಾರ ಸಾರಸದಳನೇತ್ರಿ ಜಯತಿ 1 ಚಿತ್ರಚರಿತ್ರೆ ಚಿತ್ಸುಖಗಾತ್ರೆ ಸತಿ ಜಯತಿ 2 ಅನಘ ಲಕ್ಷ್ಮೀನಾರಾಯಣನ ಶ್ರೀಚರಣಾ- ವನತರ್ಗೆ ನೀನೆ ಗತಿ ಜಯತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಮರುತನ ರಾಣಿ ಶುಭ ವಾಣಿಯಾಗಿರುವಿ ಕಲ್ಯಾಣಿ ನಾರಸಿಂಹನ ಸೊಸೆಯಾದಿ ಸರ್ವ ನಾರಿಯರಿಗೂ ನೀ ಮೇಲಾದಿ ಪ ಭೀಮನು ಶೂದ್ರನೆಂದಿರಲು ನೀನು ಶೂದ್ರೆಯೆಂದೆನಿಸುತಲಿರುವಿ ಕಾಮಿ ಕೀಚಕನಿಗೆ ಮೃತ್ಯುವಾಗಿ ನಿನ್ನ ಪ್ರೇಮವನೇನು ಬಣ್ಣಿಸಲಿ 1 ಜುಟ್ಟನು ಕೈಯೊಳು ಸೆಳೆದ ದುಷ್ಟ ದೈತ್ಯನ ಪಂಥದಿ ಮಥಿಸಿ ಪಟ್ಟದರಸನು ತೋರಿದುದದ್ಭುತವು ಸಿಟ್ಟು ನಿನಗಾಗಿ ತೋರ್ದುದಾಶ್ಚರ್ಯ 2 ರಾಜಧರ್ಮನು ಸುಮ್ಮನಿರಲು ರಾಜನಾಥ ಶ್ರೀಹಯಮುಖ ದಾಸ ರಾಜ ಭೀಮನು ತೋರ್ದ ಶಾಂತತೆಯ ರಾಜೀವಾಕ್ಷ ನಿನ್ನೊಳು ತೋರಿದ ಕರುಣ 3
--------------
ವಿಶ್ವೇಂದ್ರತೀರ್ಥ
ಭಾರತಿ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ಪ ಭವ ಸಂಹಾರಣ ಪರಾಶರ ಮತ ವಿಸ್ತರಣಅ.ಪ. ತ್ರೇತೆಯೊಳಂಜನೆ ಉದರದಿ ಜನಿಸಿ ಸೀತಾನಾಥನ ಪಾದಕೆ ನಮಿಸಿ ದೌತ್ಯವ ವಹಿಸಿ ಕೀರ್ತಿಯ ಗಳಿಸಿ ಭಕ್ತಾಗ್ರಣಿಯೆನಿಸಿದ ಗುರುವೆ 1 ದ್ವಾಪರದಲಿ ನೃಪ ಕುಲದಲಿ ಬಂದು ಪಾಪಿ ಮಾರ್ಗದ ಪ್ರಮುಖರ ಕೊಂದು ದ್ರೌಪದಿ ಬೇಡಿದ ಸುಮವನು ತಂದು ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2 ಕಲಿಯೊಳು ಕುಜನರ ಮತಗಳ ಜರಿದು ಸುಲಲಿತ ಭಕ್ತಿಯ ಮತವನು ಒರೆದು ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ ತುಳುವ ವಿಪ್ರನಲಿ ಉದಿಸಿದೆ ಗುರುವೆ 3
--------------
ಲಕ್ಷ್ಮೀನಾರಯಣರಾಯರು
ಭಾರತಿದೇವಿ ಭಕ್ತಿಯನು ನೀಡಮ್ಮ ಭಾರತೀದೇವಿ ಪ. ಭಕ್ತಿ ದಾತೆಯು ಎಂದು ಶ್ರುತಿ ಶಾಸ್ತ್ರ ಸಾರುತಿವೆಅ.ಪ. ಕಾಮ ಕ್ರೋಧಗಳೆಲ್ಲ ಮನೆಮಾಡಿಕೊಂಡುತಾವೆನೇಮದಿಂ ಪರಿಪರಿ ಕಾಡುತಿಹವುಪ್ರೇಮಿ ನಿನ್ನಯ ಪಾದಕಮಲದಲಿ ಮತಿ ಕೊಟ್ಟುಕಾಮನಯ್ಯನ ತೋರು ಸೋಮಶೇಖರ ಜನನಿ 1 ಮಧ್ವಮತದಲಿ ಎನಗೆ ಶ್ರದ್ಧೆ ಪುಟ್ಟದೆ ಪೋಯ್ತುಸಿದ್ಧವಾಗಿಹುದು ಮನ ದುರ್ವಿಷಯಕೆಬುದ್ಧಿವಂತಳೆ ನಿನ್ನ ಮುದ್ದು ಮುಖವನು ತೋರಿಉದ್ಧಾರ ಮಾಡೆ ಶ್ರೀ ಹದ್ದುವಾಹನ ತನಯೆ 2 ಕರುಣವಾರಿಧಿಯೆಂದು ಮರೆಯ ಪೊಕ್ಕೆನು ತಾಯೆಕರಪಿಡಿದು ಕಾಪಾಡೆ ಉರಗವೇಣಿಕರುಣಸಾಗರ ತಂದೆವರದವಿಠಲನನ್ನುನಿರುತದಿ ಭಜಿಸುವ ಭರತರಾಜನ ರಾಣಿ 3
--------------
ಸಿರಿಗುರುತಂದೆವರದವಿಠಲರು
ಭಾರತೀ ದೇವಿ ಜಗದುದರನ ಸೊಸೆಯೆ ಶ್ರೀ ವಾಯು ಸತಿಯೆ ಜಗದುದರನ ಸೊಸೆಯೆ ಪ. ಸುಗುಣಿ ನಿನ್ನ ನಾ ಬಗೆ ಬಗೆ ವರ್ಣಿಸೆ ಜಗದೊಳು ಖ್ಯಾತೆಯೆ ನಗಧರ ಪ್ರೀತೆಯೆ ಅ.ಪ. ಸಾರಿ ಬಂದೆ ನಿನ್ನ ನಾರಿಮಣಿಯಳೆ ಭೂರಿ ಕರುಣದಿ ನೀ ಸತಿ ಪದಕೆ ಪತಿ ಸಹ ಭಾರತಿ ನಿನ್ನಯ ವಾರಿಜಪದವನು ಸೇರಿ ಸುಖಿಸುವಂಥ ದಯ ತೋರೆ ನೀ 1 ದಾರಿ ತೋರಿ ನೀ ಪಾರುಗಾಣಿಸೆ ತಾರತಮ್ಯದಿ ವಾರಿಜಾಂಬಕಿಯೆ ಆರು ಅರಿಯದ ಹರಿಯ ಮಹಿಮೆಯ ಸಾರತತ್ವ ನೀ ಪತಿಯಿಂದರಿತಿಹೆ ಬಾರದು ಅಜ್ಞತೆ ನಿನಗೆ ಪ್ರಳಯದಿ ನಾರಿ ರನ್ನೆ ಸರ್ವ ಬುದ್ಯಭಿಮಾನಿಯೆ 2 ಹಾರಪದಕವು ದೋರೆ ಕಂಕಣ ನಾರಿ ನಿನ್ನನು ಯಾರು ವರ್ಣಿಪರೆ ನಾರಿ ನಿನ್ನ ಪತಿದ್ವಾರದಿ ಎನ್ನ ಶ- ರೀರದಿ ಸರ್ವನಿಯಾಮಕರೊಡನೆ ತೋರೆ ಗೋಪಾಲಕೃಷ್ಣವಿಠ್ಠಲನ ನೀರಜನಾಭನ ಶ್ರೀ ರಮೇಶನ 3
--------------
ಅಂಬಾಬಾಯಿ
ಭಾರತೀ ದೇವಿ ಪಾಲಿಸು ಭಾರತಿಯೆ ದೇವಿಯೆ ಕಾಲಮಾನಿಯ ತಾಯೆ ಪ ಶ್ರದ್ಧಾ ಮೂರುತಿ ತಾಯೆ ಕಾಯೆ ಪ್ರದ್ಯುಮ್ನ ಕುವರಿಯೆ ಶ್ರದ್ಧಾನಾಮಕಳೆ ನೀ ಶ್ರದ್ಧಾಭಕುತಿ ಕೊಟ್ಟು ಶುದ್ಧ ಮುಗ್ಧನೆನ್ನ ಉದ್ಧರಿಸುವುದೀಗಾ 1 ಚಿತ್ತ ವೃತ್ತಿಯ ಬಲ್ಲೆ ಎನಗೆ ನೀ ಉತ್ತಮಗತಿ ಈಯೆ ಚಿತ್ತಶುದ್ದ ಬುದ್ಧಿಯಿತ್ತು ನೀ ಪಾಲಿಸಿ ಚಿತ್ತಜನಯ್ಯನಾ ಹತ್ತಿರಕೊಯ್ಯೆ 2 ಪಂಕಜ ಭವನ ರಾಣಿ ಗುಣಮಣಿ ಶಂಕರನಾ ಜನನಿ ಕಿಂಕರನೆಂದು ಮನ ಶಂಕೆಯ ಹರಿಸಿ ಶ್ರೀ ವೆಂಕಟೇಶನ ಪಾದಪಂಕಜ ತೋರಿಸೆ3
--------------
ಉರಗಾದ್ರಿವಾಸವಿಠಲದಾಸರು
ಭಾರತೀ ಭವಹಾರಿಯೆ | ಭಕ್ತರಪ್ರಿಯೆ | ಭಾರತೀ ಭವಹಾರಿಯೇ ಪ ಈರೈದು ಇಂದ್ರಿಯಗಳುಗಾರು | ಮಾಡದಂತೆ ಸಾಕಾರವಾಗಿ ಪಾಲಿಸು ಅ.ಪ. ಮತಿವಂತನ ಮಾಳ್ಪುದು | ಇದಕೆ ನಿನ್ನ | ಪತಿಯ ಈಗಲೆ ಕೇಳ್ವುದು | ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು- ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು 1 ಮಹತ್ತತ್ವದಭಿಮಾನಿ ನೀ | ಕಲಿರಹಿತೆ | ಅಹಿಪತಿ ಅಪ್ಪ ಖಗಪ ಜನನೀ || ಮಹಾಪ್ರಮಾಣು ವ್ಯಾಪುತೆ ಸರ್ವಜೀವರ | ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ 2 ಶರಣು ಶರಣು ಗುಣಮಣಿ | ಚಂದ್ರಪ್ರಕಾಶೆ | ಪಾವನಿ ಕಲ್ಯಾಣಿ ತರತಮ್ಯ ಭಾವದಿ || ಅರಿದು ಕೊಂಡಾಡುವ ಚಿಂತೆ ಇರಲಿ | ವಿ- | ಸ್ಮರಣೆಯಾಗದಂತೆ ವಿಜಯವಿಠ್ಠಲನ್ನ ನಿರುತ ಪೊಂದಿಸು 3
--------------
ವಿಜಯದಾಸ
ಭಾರತೀ ಮಜ್ಜನನಿಯ ಭಾರತೀ ಪ ಭಾರತೀ ಭರತನಾರ್ಧಾಂಗಿ ಕರು ಣಾರಸ ಪೂರಿತಾಪಾಂಗಿ ಅಹ ತಾರಕ್ಷ್ಯ ಪ್ರಮುಖ ವೈಕಾರಿಕ ದೇವಗ ಣಾರಾಧಿತಾಂಘ್ರಿ ಸರೋರುಹೆ ಪಾಲಿಸೆ ಅ ವಿದ್ಯುನಾಮ್ನಮಕೆ ವಿಧಿಜಾತೆ ಕೃತಿ ಪ್ರದುಮ್ನ ಜಠರಸಂಭೂತೆ ಅನ ವದ್ಯ ಸದ್ಗುಣಗಣವ್ರಾತೆ ಬ್ರಹ್ಮ ವಿದ್ಯವ ಪಾಲಿಸು ಮಾತೆ ಅಹ ಬುಧ್ಯಾಭಿಮಾನಿಯೆ ಸದ್ಯೋಜಾತನ ಪೆತ್ತ ಶ್ರದ್ಧಾ ನಾಮಕೆ ಅನಿರುದ್ಧನ ತೋರಿಸೆ 1 ಗುಣತ್ರಯಾತ್ಮಕವಾದ ಲಿಂಗದೊಳು ಅಣರೂಪಳಾಗಿ ತುರಂಗ ಮುಖ ಅನಿಲಾಂತರ್ಗತ ಪಾಂಡು ರಂಗನಂಘ್ರಿ ಭೃಂಗ ಆಹ ಅನಿರುದ್ಧ ದೇಹಸ್ಥ ಅನಿಮಿಷರೊಳು ಪೊಕ್ಕು ದ್ವಿನವರೂಪದಿ ಮಾಳ್ಪೆ 2 ಕಾಳಿದ್ರೌಪದಿ ಶಿವಕನ್ಯಾ ಮನ್ಮ ನಾಲಯದೊಳು ನಿಲ್ಲೆ ಘನ್ನ ಪ್ರಾಜ್ಞ ನಿತ್ಯ ಎನ್ನ ಪರಿ ಪಾಲಿಸು ನಂಬಿದೆ ನಿನ್ನ ಆಹ ಶೈಲಜೆ ಶ್ಯಾಮಲೆÉ ಪೌಲೋಮಿ ಉಷೇರಿಂದ ಓಲಗ ಕೈಕೊಂಬ ಕಾಲಾಬ್ಧಿ ಮಾನಿಯೆ 3 ವಂದಿಪೆ ನಿನಗಿಂದ್ರಸೇನಾ ನಳ ನಂದಿನಿ ಕರುಣಿಸು ಜ್ಞಾನ ಶ್ರೀ ಮು ಕುಂದನ ಪರಮ ಕಲ್ಯಾಣ ಗುಣ ಸಿಂಧುವಿನೊಳಗೆ ಪಾಠೀನ ಆಹ ನಂದದಿ ಚರಿಸುವ ಗಂಧವಾಹನ ರಾಣಿ ಸಿಂಧೂರ ಗಮನೆ ಪುರಂದರಾರಾಧಿತೆ 4 ನಿಗಮತತಿಗಳಭಿಮಾನಿ ನಿನ್ನ ಪೊಗಳಲೆನ್ನೊಳವೆ ಕಲ್ಯಾಣಿ ಆ ಪ ನ್ನಗರಾಜ ಸಹಸ್ರ ವಾಣಿಯಿಂದ ಬಗೆ ಬಗೆ ತುತಿಪ ಸುಶ್ರೋಣೆ ಆಹ ಮುಗಿವೆ ಕರಗಳೆನ್ನವಗುಣಗಳೆಣಿಸದೆ ಜಗನ್ನಾಥವಿಠಲನಂಘ್ರಿಗಳ ಧ್ಯಾನವನೀಯೆ 5
--------------
ಜಗನ್ನಾಥದಾಸರು
ಭಾರತೀ ರಮಣ ಸುರವಿನುತ ಚರಣ ಶಾರದಾ ಪುರ ಶರಣ ಪ ನೂರು ಯೋಜನಮಿರ್ದವಾರಿಧಿ ಲಂಘಿಸಿ ಬೇಗ ಧಾರುಣಿ ಸುತೆಯ ಕಂಡು ದೂರ ನಮಿಸಿ ಸಾರಿ ಮುದ್ರಿಕೆಯ ನಿತ್ತು ತೋರಿರಾಕ್ಷಸಗೆ ಭಯ ಶ್ರೀರಾಮಗೆ ಬಂದು ಕ್ಷೇಮ ವಾರುತಿಯ ಪೇಳಿದಂಥ 1 ಇಂದು ಕುಲದಲ್ಲಿ ಪಾಂಡುನಂದನನೆನಿಸಿ ಜರಾ ಸಂಧ ಮುಖರನು ಗದೆಯಿಂದವರಸಿ ಅಂದುರಣದಲ್ಲಿ ಕರುವೃಂದವ ಮಥಿಸಿ ಆ ನಂದ ಕಂದನೊಲಿಮೆಯ ಛಂದದಿ ಪಡೆದು ಗುರು 2 ಮೇದಿನಿ ಮೋದ ತೀರ್ಥರೆಂದೆನಿಸಿ ವಾದದಿಂದಲಿ ವಾದಿ ಮತ್ತ ವಾರಣ ಮೃಗಾಧಿಪರೆನಿಸಿ ಪಂಚ ಬೇಧ ಬೋಧಿಸುವ ಶಾಸ್ತ್ರ ಸಾದರದಿ ವಿರಚಿಸಿದ 3 ಕಾಲಕಾಲದಲಿ ದ್ವಿಜರಾಲಯದಿ ಬಂದು ನಿನ್ನ ಬಾಲವನಿತೆರ ಸಹ ಶೇವಿಸುವರು ಪಾಲಿಕಿ ಉತ್ಸವದಲ್ಲಿ ಶೇರುವದು ಪೌರಜನ ಪಾಲಿಸಬೇಕಯ್ಯ ಪಾಂಚಾಲಿರಮಣನೆ ನಮೊ 4 ಭವ ಕೂ ಪಾರ ನಾವಿಕನೆ ಎಂದು ಪ್ರಾರ್ಥಿಸುತಲಿ ಸೇರಿದ ಸಜ್ಜನರಘ ದೂರಮಾಡಿ ಪೊರೆವಂಥಕಾರ್ಪರ ನಿಲಯ ಸಿರಿನಾರಸಿಂಹ ನೊಲಿಸಿದ 5
--------------
ಕಾರ್ಪರ ನರಹರಿದಾಸರು
ಭಾರತೀದೇವಿ ಭಾರತಾದೇವಿಯರ ಪಾದ ಚಾರು ಚರಣಕೆರಗುವೆ ಪ ವಾರಿಜಾಕ್ಷಿ ನಿನ್ನ ಮಹಿಮೆ ಬಾರಿ ಬಾರಿ ಪೊಗಳುವೆ ಅ.ಪ ಸುಂದರಾಂಗಿ ಶುಭಕರಾಂಗಿ ಬಂದು ಎನ್ನ ಪಾಲಿಸು ಇಂದಿರೇಶನನ್ನು ಸದಾ ಆ- ನಂದದಿಂದ ಭಜಿಸಲು 1 ಬಾರಿ ಬಾರಿ ನಿನ್ನ ಸ್ತುತಿಪೆ ಮಾರುತನರ್ಧಾಂಗಿಯೆ ಸಾರಿ ಸಾರಿ ಶ್ರೀರಮಣನ ಸಾರ ಕೃಪೆಯ ಕರುಣಿಸು2 ಕರುಣಿಸಮ್ಮ ನಿನ್ನ ಪತಿಯ ಸ್ಮರಣೆ ನಿರುತ ಮರೆಯದೆ ಕರುಣಾಕರನೆ ಕಮಲನಾಭ ವಿಠಲನಂಘ್ರಿ ಧ್ಯಾನವೀಯೆ 3
--------------
ನಿಡಗುರುಕಿ ಜೀವೂಬಾಯಿ
ಭಾರತೀದೇವಿಯ ಸ್ತೋತ್ರ ಮಾರುತನ್ನ ಜಾಯೆ - ಮೊರೆಯ ಹೊಕ್ಕೆನು ಕಾಯೆ ಪ ಮಾರಾಂತಕ ಶಂಬರಾರಿ ಭಿದುರಧರತಾರೇಶ ಶರವಿನುತೇ ಅಮ್ಮಯ್ಯ ಅ.ಪ. ಭ್ರಮರ ಕುಂತಳೆ ಜಾಣೆ ಅಮರ ವಂದಿತ ಚರಣೆಸುಮನಸೇಶನ ಪದಕಮಲ ಪೂಜಿಪುದಕೆವಿಮಲಮತಿಯನೀಯೇ ಅಮ್ಮಯ್ಯ 1 ಶೃತಿದೇವಿಯಲ್ಲಿ ಸುತೆಯಾಗಿ ಜನಿಸಿದೆಸತತ ಎನ್ನಯ ದುರ್ಮತಿ ಖಂಡಿಸಿ ಸು-ಮತಿವಂತನ ಮಾಡೇ ಅಮ್ಮಯ್ಯ 2 ಎರಡೇಳು ಭುವನ ಜಠರದೊಳಗಿಂಬಿಟ್ಟಪರಿಪೂರ್ಣ ಕಾಮ ಶ್ರೀ ಮೋಹನ ವಿಠ್ಠಲನಚರಣ ಭಕುತಿಯನೀಯೇ ಅಮ್ಮಯ್ಯ 3
--------------
ಮೋಹನದಾಸರು
ಭಾರತೀಪತಿ ಮೂರುತಿ ಮಾರುತಿ ಕಾಯೊ ಪ ಘೋರದುರಿತೌಘ ಪರಿಹಾರ ಸುಸಮೀರ ಧೀರಾ ಅ.ಪ ಸತ್ತ್ವ್ವ ಸತ್ತ್ವಾತ್ಮಕ ತತ್ತ್ವದೇವತೆಗಳ ನಿತ್ಯ ನಿಯಾಮಕ ಗುರು 1 ಪಟುತರಾಂಗನೆ ಧೂರ್ಜಟಿಯ ಸೇವೆಗೆ ಮಚ್ಚಿ ಪರಮೇಷ್ಠಿ ಪದ 2 ನಂಜಯನಾಗ್ರಜನೆ ಮೂರ್ಜಗ ಗುರು 3 ಶ್ರೇಷ್ಠಮೂರುತಿ ಜಗಚ್ಚೇಷ್ಟಾಪ್ರದಾಯಕ ಪ್ರವಿಷ್ಠ ಸರ್ವಸೃಷ್ಟಿಕಾರ್ಯ ತೊಟ್ಟಿರುವೆ4 ಮುಖ್ಯವಾಚ್ಯನು ದೇವ ಅಮುಖ್ಯವಾಚ್ಯನು ನೀನು ಮುಖ್ಯ ಜೀವಕೋಟಿಯೊಳು ಪ್ರಮುಖನಯ್ಯ ಮುಖ್ಯಪ್ರಾಣ5 ಶ್ವಾಸನಿಯಾಮಕ ನಿಶೆಯೊಳು ನಿದ್ರೆಯೊಳು ಅಸುರಾದಿ ಜೀವರೊಳು ಶ್ವಾಸಭೂರ್ಭುವನೆನಿಸುವೆ 6 ಸರ್ವನಿಯಾಮಕ ಶರ್ವರೊಂದಿತಪಾದ ಸರ್ವೋತ್ತಮ ಶ್ರೀ ವೇಂಕಟೇಶನೋರ್ವನೆ ಮುಖ್ಯನೆಂದೆ7
--------------
ಉರಗಾದ್ರಿವಾಸವಿಠಲದಾಸರು