ಜಯ ಜಯ ಕರುಣಾಕರ ಕೃಪಾಲ
ಜಯ ಜಯ ಗುರುಮುನಿಜನ ಪ್ರತಿಪಾಲ ಧ್ರುವ
ರಾಜತೇಜೋನಿಧಿ ರಾಜ ರಾಜೇಂದ್ರ
ಮಣಿ ಸುರೇಂದ್ರ
ಮಣಿ ಸಾಂದ್ರ
ಅಜಸುರ ಸೇವಿತ ಸುಜ್ಞಾನ ಸುಮೋದ 1
ಅಗಣಿತ ಗುಣ ಅಗಾಧ ಅಪಾರ
ನಿಗಮಗೋಚರ ನಿರುಪಮ ನಿರ್ಧಾರ
ಸಗುಣ ನಿರ್ಗುಣನಹುದೊ ಸಾಕ್ಷಾತ್ಕಾರ
ಭಕ್ತವತ್ಸಲ ಮುನಿಜನ ಮಂದಾರ 2
ಧೀರ ಉದಾರ ದಯಾನಿಧಿ ಪೂರ್ಣ
ತಾರಕ ಸ್ವಾಮಿ ಸದ್ಗುರು ನಿಧಾನ
ತರಳ ಮಹಿಪತಿ ಜನ್ಮೋದ್ಧರಣ
ಚರಣ ಸ್ಮರಣಿ ನಿಮ್ಮ ಸಕಲಾಭರಣ 3