ಒಟ್ಟು 494 ಕಡೆಗಳಲ್ಲಿ , 78 ದಾಸರು , 430 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ ಸಾರಸಭವನ ವೀರ ಮಾತೆಯೆ ನೀರಜಾಕ್ಷಿಯೆ ಹೇ ಮಾತೆ ಸಾರಸಾಕ್ಷ ಪರಮಪ್ರಿಯಳೆ ಸಾರಿಬಾರೆನ್ನ ಹೇ ಮಾತೆ 1 ತುರುವು ತನ್ನ ಕರುವ ಧ್ವನಿಯಂ ಅರಿತು ಬಾರದೆ ಹೇ ಮಾತೆ ಈ ತೆರದಿ ಎನ್ನ ಮೊರೆಯ ಕೇಳಿ ಕರವ ಹಿಡಿಯೆ ಹೇ ಮಾತೆ 2 ಪರಿಯು ಯಾರೆ ಸಿರಿಯು ನಿನಗೆ ಪರಮಪಾವನೆ ಹೇ ಮಾತೆ ಕರುಣದಿಂದ ಪೊರೆದು ತೋರೆ ಸಿರಿರಂಗೇಶವಿಠಲನ ಹೇ ಮಾತೆ 3
--------------
ರಂಗೇಶವಿಠಲದಾಸರು
ಸರ್ವ ಸಹಕಾರಿ ಶ್ರೀಹರಿ ಸರ್ವ ಸಹಕಾರಿ ಧ್ರುವ ಸುರಜನ ಪಾಲ ಸಕಲಕಾಧಾರಿ ಪರಮ ಪುರುಷ ಪೀತಾಂಬರಧಾರಿ 1 ಶರಣ ರಕ್ಷಕ ಸುದಯದಲ್ಯುದಾರಿ ವಾಹನ ಮುಕುಂದ ಮುರಾರಿ2 ತೋರುವ ನಿತ್ಯಾನಂದದ ಲಹರಿ ಬೀರುವ ಸುಖ ಸಾಧನೆ ಪರೋಪರಿ 3 ಕರುಣದಾಕ ಮಹಿಪತಿ ಸಹಕಾರಿ ಸಿರಿಯನಾಳುವ ಸ್ವಾಮಿಯು ನರಹರಿ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಲಹಯ್ಯಾ ಲಕ್ಷೀರಮಣ ಸರುವದ ನಮ್ಮನು ನೀ ಪ ಊರೊಳಗಿರಲಿ ಊರು ಬಿಟ್ಟಿರಲಿ ದಾರಿಯ ಬಿಟ್ಟು ನಾ ಸಂಚರಿಸುತಿರಲಿ ಮಾರಮಣ ಮುರಾರಿ ನಿನ್ನಯ ಪಾದ ವಾರಿಜನ ನಂಬಿ ಸೇರಿದ ಭಕುತರ 1 ಸಿರಿಯೆನಗಿರಲಿ ಎಡರೆನಗಿರಲಿ ಮರುಳುತನವೆನಗೇ ಆವರಿಸಿರಲಿ ನರಹರಿ ನಿನ್ನಯ ಚರಣದ ಮಹಿಮೆಯ ಪರಿಪರಿಯಿಂದ ಪೊಗಳುವ ಮತಿಯಿತ್ತು 2 ದೊರೆತನ ಬರಲಿ ತಿರುಕನು ಆಗಲಿ ಬಂದೆ ಡಂಭದೊಳು ತಿರುಗುತಲಿರಲಿ ಕರಿವರದ ಶ್ರೀ ರಂಗೇಶವಿಠಲ ನಿನಮರೆಯದೆ ಹರುಷದಿ ನೆನೆವಂತೆ ಮಾಡಿ3
--------------
ರಂಗೇಶವಿಠಲದಾಸರು
ಸಂಸಾರ ಸುಖವಿಲ್ಲ ನಾ ಹಿಂಸೆಯ ತಾಳಲಾರೆ ಪ ಮಾತೆಯ ಮಾಂಸದ ಹೇಸಿಗೆ ಕೋಶದೊಳ್ ಮಾಸ ಒಂಭತ್ತನು ಕ್ಲೇಶದಿಂದ ತಳ್ಳಿದೆ ಈಶ ಲಕ್ಷ್ಮೀಶನು ಕೋಪದಿಂದ ಬೀಸಲು ಕೂಸಾಗಿ ಭೂಮಿಗೆ ವಾಸಕ್ಕೆ ಬಂದೆನು 1 ನಡೆ ನುಡಿಯ ಕಲಿಯುತಲಿ ಹರುಷದಲಿ ಕುಣಿಯುತಲಿ ಹುಡುಗತನ ಕಳೆಯುತಿರೆ ಹರುಷಗಳು ತೊಲಗಿದವು ದುಡಿಕಿನಲಿ ಭ್ರಮಿಸಿದೆನು ಮಡದಿಯಳ ಸಡಗರಕೆ ಭವ ಕಡಲೊಳಗೆ ಮುಳುಗಿ 2 ಕಡುಬಡತನ ಕೊರೆಯುತಲಿದೆ ಕಿರಿಕಿರಿಗಳು ಉರಿಸುತಲಿವೆ ತನುಮನಗಳು ಜರಿಯುತಲಿವೆ ಅಣಕಿಸುವರು ನಿಜ ಜನಗಳು ಪರಮ ಪುರುಷ ಸಿರಿಯರಸನೆ ಮರೆಯದಿರುವೆ ಉಪಕೃತಿಗಳ ದಡಕೆಳೆಯೊ ಪ್ರಸನ್ನ ಹರೇ 3
--------------
ವಿದ್ಯಾಪ್ರಸನ್ನತೀರ್ಥರು
ಸಂಸಾರದೊಳು ಸುಖವಿಲ್ಲ ಪ ದುಂಡನೆ ಬಂದಿಹೆ ದುಂಡನೆ ಹೋಗುವೆ ಹೆಂಡಿರು ಮಕ್ಕಳ ನಡುವೆಯಲಿ ತಂಡ ತಂಡದಿ ಹುಟ್ಟಿ ಕೊಂಡವರು ನಚ್ಚಿ ಕೊಂಡಿವರನು ಪರಗತಿಯ ಕೆಡಿಸದಿರು 1 ಹುಟ್ಟುತ ತರಲಿಲ್ಲ ಹೋಗುತ ವೈಯೊಲ್ಲ ನಟ್ಟ ನಡುವೆ ಬಂದ ಸಿರಿಯಿದು ಕಟ್ಟ ಕಡೆಗೆ ನೀನು ಮಡಿಯಲಿ ಕರುವೆಯ ಬಟ್ಟೆಯ ಶವ ಕಿತ್ತಲಿದು ಬಳ್ಳಿತೆಂಬರು 2 ಎನ್ನಮನೆಯು ಎನ್ನತೋಟ ತುಡಿಗೆಯಿದು ದೆನುತ ಹಿಗ್ಗದಿರು ಇದರೊಳಗೊಂದು ಚಿನ್ನ ಬಾರದು ಕಾಲನವರೆಳೆದೊಯ್ವಾಗ 3 ಘಟ್ಟದ ಕೆಳಗುಷ್ಟು ಬೆಟ್ಟದ ಮರಗಾಯಿ ಹುಟ್ಟಿದ ಬಯಲ ಸೀಮೆಯ ಮೆಣಸು ಬಟ್ಟಾದ ಲವಣ ಶಾಕದ ವೋಲು ಸಂಸಾರ 4 ಜಾಣನಾದರೆ ಪರಗತಿಯ ನೀ ನೊಲುವೊಡೆ ತ್ರಾಣ ವಿರಲಿಕೆ ತೊಡಕಬಿಟ್ಟು ಕಾಣುಸಂಸಾರವ ವಿಷವೆಂದು ತ್ಯಜಿಸಿ ಗೀರ್ವಾಣವಂದಿತ ಲಕ್ಷ್ಮೀರ ಮಣನ ಮೊರೆಹೋಗು 5
--------------
ಕವಿ ಪರಮದೇವದಾಸರು
ಸಾರ ಪ ಧರೆಯನಾಳಿದ ತ್ರಿಶಂಕು ದೊರೆಯು ತಾನೆಲ್ಲಿಹರಿಶ್ಚಂದ್ರ ಮೊದಲಾದ ಚಕ್ರವರ್ತಿಗಳೆಲ್ಲಿಶರಧಿ ಮಧ್ಯದೊಳಿದ್ದ ರಾವಣಾಸುರನೆಲ್ಲಿಸಿರಿಯುಳ್ಳ ಕೌರವರು ಪಾಂಡವರು ತಾವೆಲ್ಲಿಧರೆಗಿಳಿದು ಪೋದಾತ ವಾಲಿಯು ತಾನೆಲ್ಲಿಸುರರೊಡನೆ ಹೋರಿದಾ ಬಲಿಯು ತಾನೆಲ್ಲಿ 1 ದಶರಥ ಮೊದಲು ಷೋಡಶ ರಾಯರುಗಳೆಲ್ಲಿಅಸಹಾಯ ಶೂರ ವೀರ ವಿಕ್ರಮರೆಲ್ಲಿಅಸಮಬಲ ವಸುಮತಿಯ ಹಿರಣ್ಯಾಕ್ಷನೆಲ್ಲಿವಸುಧೆಯೊಳಗಿದ್ದ ಹದಿನಾರು ಸಾವಿರರೆಲ್ಲಿಕುಸುಮ ಬಾಣನ ಪಡೆದ ದೇವ ತಾನೆಲ್ಲಿಸುಶರೀರ ಎನಿಸಿದ ಅಭಿಮನ್ಯು ತಾನೆಲ್ಲಿ 2 ಈ ಪರಿಯೆ ಈ ಧರೆಯನಾಳಿ ಹೋದವರೆಷ್ಟುಈ ಪರಿಯೆ ಸ್ವರ್ಗಕ್ಕೆ ಇಂದ್ರಾದಿಗಳು ಎಷ್ಟುಈ ಪರಿಯೆ ಹರಬ್ರಹ್ಮರಾದವರು ತಾವೆಷ್ಟುಈ ಪರಿಯೆ ಯುಗಪ್ರಳಯವಾಗಿ ಹೋದವು ಎಷ್ಟುಈ ಪರಿಯೆ ಜಲ ಪ್ರಳಯವಾಗಿ ಹೋದವು ಎಷ್ಟುಶ್ರೀಪತಿ ಕೇಶವನಲಿಡು ಭಕುತಿ - ಕೊಡುವ ಮುಕುತಿ 3
--------------
ಕನಕದಾಸ
ಸಾರಸಾಕ್ಷ ಘೋರದುರಿತ ದೂರಮಾಡೈ ಪ ಮಾರಜನಕಪಾರ ಮಹಿಮ ದೂರ ನೋಡದೆ ಬಾರೊ ಬೇಗ ಬಾರಿಬಾರಿಗೆ ನಿನ್ನ ನಂಬಿ ಸಾರಿಕೂಗಿ ಬೇಡುವೆನು 1 ಮೂಢತನದಿ ನಾಡ ತಿರುಗಿ ಖೋಡಿಯಾದೆ ಗಾಢಭಕುತಿಲಿ ಗಾಢ ನಿಮ್ಮ ಪಾವನ ಚರಿತ ರೂಢಿಯೊಳು ಧನ್ಯವಾಗದೆ 2 ಸಿರಿಯರಮಣ ಚರಣನಳಿನ ಮರೆಯಹೊಕ್ಕೆ ಕರುಣದೆನ್ನ ಮೊರೆಯ ಕೇಳಿ ದುರಿತದಿಂದ ಸೆರೆಯ ಬಿಡಿಸೆನ್ನ ಸಿರಿಯರಾಮ 3
--------------
ರಾಮದಾಸರು
ಸಾರಿ ದೂರಿ ಹೇಳುತೇನೆ ಕೆಟ್ಟಿ ಕಂಡ್ಯ ಬಡ್ಡಿ ಮನವೆ ಪ ದೂರೋ ಬುದ್ಧಿ ಮಾಡಬೇಡ ಕೈಯೊಳಿಕೋ ಕಡ್ಡಿನಿನ್ನ ಕೈಯೊಳಿಕೋ ಕಡ್ಡಿ ಅ ಕೋಪವನ್ನೆ ಮಾಡದಿರು ಪಾಪಕೆ ಗುರಿಯಾಗದಿರುಶ್ರೀಪತಿಯ ನಾಮವನು ನೀ ಪಠಿಸುತಲಿರು ಮನವೆ 1 ಅಷ್ಟಮದದಿ ಮೆರೆಯದಿರು ನಷ್ಟಕೆ ಗುರಿಯಾಗದಿರುದುಷ್ಟಸಂಗವನ್ನು ಮಾಡಿ ಭ್ರಷ್ಟನಾಗಬೇಡ ಮನವೆ 2 ಸಿರಿಯ ಮೆಚ್ಚಿ ಮೆರೆಯದಿರು ಬರಿದೆ ಹೊತ್ತ ಕಳೆಯದಿರುಪರರ ನಿಂದೆಯನ್ನು ಮಾಡಿ ನರಕಿಯಾಗಬೇಡ ಮನವೆ 3 ಕಾಯವನ್ನು ನಂಬದಿರು ಮಾಯಕೆ ಮರುಳಾಗದಿರುಸ್ತ್ರೀಯರನ್ನು ಕಂಡು ನೀನು ಬಯಸದಿರು ಮರುಳು ಮನವೆ 4 ನಿನ್ನ ನಿಜವ ನಂಬದಿರು ಉನ್ನತಾಸೆ ಮಾಡದಿರುಚೆನ್ನಾದಿಕೇಶವನ ಪಾದವನ್ನು ನೀನು ನಂಬು ಮನವೆ 5
--------------
ಕನಕದಾಸ
ಸಾರಿ ಸಾರಿ ಹೇಳು ತೀನಿ ಕಡ್ಡಿ ಮುರಿದು ನಾನು ಬಾರಿ ಬಾರಿಗೆ ಸತ್ತು ಹುಟ್ಟತಲಿಹೆ ನೀನು ಪ ಇರುಳು ವಿಷಯದೊಳಗೆ ಮನವ ನಿರಿಸಿ ಮಡದಿ ಮಕ್ಕಳೆಂಬಲೆಯಲಿ ಪರಿಯನರಿಯದಿದು ಇನ ಸುತನ ದೂತರೊಡನೆ ಕೊಲಿಸಿ ಕೊಳದಿರು 1 ನೀನು ಹುಟ್ಟಿ ಬರುವ ಮುನ್ನ ಇವರಿಗೆಲ್ಲ ವಾಸವೆಲ್ಲಿ ನೀನದೆಲ್ಲಿ ನಟ್ಟನಡುವೆ ಬಂದ ಸಿರಿಯಿದು ಕಾನ ಕಪಿಗಳಂತೆ ನೆರೆದು ಮಡದಿ ಮಕ್ಕಳೆಂದು ಈಗ ಪ್ರಾಣವನ್ನು ತಿನಲು ಬಂದ ನರಿಗಳಿವದಿರು 2 ದಾರಿ ಹೋಕರಿವರು ನಿನ್ನ ಋಣವು ತೀರಿ ಹೋದ ಬಳಿಕ ಯಾರಿಗಾರು ಇಲ್ಲ ನಿನಗೆ ನೀನದಲ್ಲದೆ ವೈರಿ ಕೋಣೆಲಕ್ಷ್ಮೀಪತಿಯ ಸೇರಿ ನಾಮ ಸ್ಮರಣೆಯಿಂದ ಮುಕ್ತಿ ಪಡೆದಿರು 3
--------------
ಕವಿ ಪರಮದೇವದಾಸರು
ಸಾಲವನು ಕೊಳುವಾಗ ಸಡಗರದ ಸಿರಿಯೋ ಸಾಲಿಗನು ಬಂದು ಕೆಳಲಾಗಡರಿತುರಿಯೋ ಪ ಡಬ್ಬುಗೈದಿದ್ದವನೊಳ್ ಎಬ್ಬಿಸಿ ಹಣತಂದು ಉಬ್ಬುಬ್ಬಿ ಸತಿಮುಂದೆ ಹೆಬ್ಬುಲಿಯ ತೆರದಿ ಒಬ್ಬರೀಡಿಲ್ಲೆನಗೆಂದಬ್ಬರಿಸುತ್ಹೇಳುವನು ತಬ್ಬಲು ಧಣಿಬಂದು ಮಬ್ಬಿನೊಳೆದ್ದೋಡ್ವ 1 ಹಣತಂದ ದಿನ ಅವನ ಮನೆಯೊಳಗೆ ಹಬ್ಬೂಟ ವನಿತೆಯೊಳೆನುತಿಹ್ಯನು ನನಗಾರು ಸರಿಯೆ ಹಣಕೊಟ್ಟ ಧಣಿಬಂದು ಮನೆಮುಂದೆ ಕುಳ್ಳಿರಲು ಹೆಣಇರುವ ಮನೆಗಿಂತ ಘನದು:ಖಕೇಳೊ 2 ಕಡುಹಿಗ್ಗಿನಿಂದೊಸನ ಒಡವೆ ಉದ್ದರಿತಂದು ಬಡಿವಾರ ಬಿಂಕ ಕೊಡುವ ವಾಯಿದೆ ಕಳೆದು ಬಡಿಗೆಯು ಬರಲಾಗ ಮಡದಿ ಸತ್ತವನಂತೆ ಇಡುವ ತಲಿ ಬುವಿಗೆ 3 ಅಕ್ಕಿಬೇಳೆ ಬೆಲ್ಲತಂದು ಅಕ್ಕರದಿಂ ಸತಿಸುತರಿ ಗಿಕ್ಕುವಾಗ ನೋಡವನವಕ್ಕರಂಗಳನು ಮಕ್ಕಮಾರಿಯಂದದಿ ತಿಕ್ಕುವಾಗಕೊಟ್ಟವರು ಸಿಕ್ಕದೆ ತಿರುಗುವನು ಬಿಕ್ಕೆ ಬೇಡುಣುತ 4 ಮನೆಮುರಿದು ಹೋಗಲಿ ವನಿತೆಯರು ಜರಿಯಲಿ ಎನಗೆಡರು ಬಂದೊದಗಿ ಅನ್ನ ಸಿಗದಿರಲಿ ಘನಮಹಿಮ ಶ್ರೀರಾಮ ಮಣಿದುಬೇಡುವೆ ನಿನಗೆ ಋಣದ ಬಾಳುವೆ ಬೇಡ ಜನಮಜನುಮಗಳಲಿ 5
--------------
ರಾಮದಾಸರು
ಸಿರಿದೇವಿ ವರಬೇಗ ಕರುಣಿಸೊ ದಯದಿಂದ ಶರಣಾಗತ ಪರಿಪಾಲನೆಂಬಿ ಘನ ಬಿರುದಿಹದೊರೆ ನರಹರಿಕರುಣಾಕರ ಪ. ಕರಿರಾಜ ಮೊರೆಯಿಡುವ ಸ್ವರವ ಕೇಳುತಲಂದು ಸಿರಿಯೊಳಗುಸುರದೆ ಗರುಡನ ಪೆಗಲೇರಿ ಸರಸಿ ತಡಿಗೆ ಬಂದು ಕರಿಯನುದ್ಧರಿಸಿದಿ 1 ಘೋರ ಕಿಂಕರರಿದಿರು ಸಾರೆಜಾಮಿಳ ಭಯದಿ ನಾರಾಯಣನೆಂದು ಬೇಡಿದ ಮಾತ್ರದಿ ವಾರಿಜಭವಪಿತ ಪಾರಗಾಣಿಸಿದಿ 2 ತರಳ ಪ್ರಹ್ಲಾದನನು ಹಿರಣ್ಯಕನು ಬಾಧಿಸಲು ಹರಿ ನೀನೆ ಗತಿಯೆನುತಿರೆ ಕಂಭದಿ ಇರವ ತೋರಿ ಬಹು ಪರಿಯಲಿ ಸಲಹಿದಿ 3 ದುರುಳ ಸೀರೆಯ ಸೆಳೆಯೆ ಹರಿಕೃಷ್ಣ ಸಲಹೆನೆ ಸೀರೆಯ ಮಳೆ ಗರದಂದದಲಿತ್ತು ಪರಿಪಾಲಿಸಿದೆ 4 ಎನ್ನ ದುಷ್ಕøತದಿಂದ ನಿನ್ನ ನಾಮದ ಮಹಿಮೆ ಭಿನ್ನವಾಗುವದೆ ನಿನ್ನ ಪದಾಂಬುಜ ವನ್ನು ನಂಬಿದ ಮೇಲಿನ್ನುದಾಸೀನವೆ 5 ಪಾಕಶಾಸನನಘವ ನೀಕರಿಸಿ ಸಲಹಿದನೆ ಭೀಕರವಾಗದೆ ಸಾಕು ಸಾನುಭವ ಕೃಪಣ ದಯಾಕರ ಮೂರುತಿ 6 ಒಳಗೆ ನೀ ತಳಿಸುತಲಿ ಗಳಿಸಿ ಪಾಪಗಳೆನಗೆ ತಳಮಳಗೊಳಿಸುತ ಬಳಲಿಪದುಚಿತವೆ ಉಳುಹಿನ್ನಾದರು ನಳಿನನಾಭ ಹರಿ 7 ಬಡವ ಮಾನವನೊಬ್ಬ ಪಡೆಯ ತನ್ನವರನ್ನು ಕೆಡಲು ಬಿಡನು ಜಗದೊಡೆಯ ನೀ ಎನಗಿರೆ ತಡವ ಮಾಡಿ ಕಂಡ ಕಡೆಯಲಿ ಬಿಡುವುದೆ 8 ನಿನ್ನ ಕಥಾಮೃತಸಾರವನ್ನೆ ಶಿರದಿ ಧರಿಸಿ ಇನ್ನು ಬಳಲಿದರೆ ನಿನ್ನ ಘನತೆಗಿದು ಚೆನ್ನಾಗುವುದೆ ಪ್ರಸನ್ನ ಮುಖಾಂಬುಜ 9 ಮಾನಾಮಾನವ ತೊರೆದು ನಾನಾ ದೇಶದಿ ತಿರಿದು ಶ್ರೀನಿವಾಸ ನಿನ್ನಾನನ ದರುಶನ- ವನು ಮಾಡಿದ ಮೇಲೇನಿದು ತಾತ್ಸಾರ 10 ಆಶಾಪಾಶವ ಬಿಡಿಸಿ ಮನದಾಸೆಗಳ ಪೂರೈಸಿ ದಾಸದಾಸನೆಂಬೀ ಸೌಖ್ಯವನಿತ್ತು ಪೋಷಿಸು ಶೇಷಗಿರೀಶನೆ ತವಕದಿ 11
--------------
ತುಪಾಕಿ ವೆಂಕಟರಮಣಾಚಾರ್ಯ
ಸಿರಿಯ ಮದವೆ ಮುಕುಂದ - ನಿನ್ನಚರಣ ಸೇವಕನ ಬಿನ್ನಹ ಪರಾಕೆಲೊ ದೇವ ಪ ಅಷ್ಟದಿಕ್ಪಾಲಕರ ಮಧ್ಯದಲಿ ವೈಕುಂಠಪಟ್ಟಣವು, ಸಿರಿಯೋಲಗವ ನಿತ್ಯದಿಕಟ್ಟಿ ಓಲೈಸುತಿಹ ದಾಸರನಿಮಿಷರು, ಮನಮುಟ್ಟಿ ಪಾಡುವ ನಾರದರ ಗೀತ ಸಂಭ್ರಮದ 1 ಸಕಲ ಐಸಿರಿಯ ಅಧಿದೇವಿಯೆ ಪಿರಿಯರಸಿಯುಕುತಿಯೊಳು ಲೋಕಗಳ ಸೃಜಿಸುವಂಥಶಕುತ ನಿನ್ನಯ ಹಿರಿಯ ಮಗನು, ಜೀವಿಗಳ ಮೋ-ಹಕದಿ ಮರುಳು ಮಾಳ್ಪಾತ ಕಿರಿಮಗನೆಂಬ 2 ಅರಿ ಹೃದಯದಲ್ಲಣನೆಂಬ ಬಿರುದು ಸಾಹಸಇಲ್ಲ ನಿನಗಾರು ಇದಿರೆಂಬ ಗರ್ವದಿ ಎನ್ನಸೊಲ್ಲು ಕಿವಿ ಕೇಳದಂತಾಯಿತೆ ಹರಿಯೆ ? 3 ಶೇಷ ಹಾಸು ಮಂಚವು, ಗರುಡ ತುರುಗವು, ಪೀತವಾಸದುಡುಗೆಯು, ಕೊರಳಲಿ ವೈಜಯಂತಿಮೀಸಲಳಿಯದ ಪುಷ್ಪಮಾಲೆಗಳ ಧರಿಸಿ ಜಗದೀಶನೆಂಬುವ ಬಿರುದು ಹೊಗಳಿಸಿಕೊಳ್ಳುವ 4 ಭಕ್ತವತ್ಸಲನೆಂಬ ಬಿರುದು ಬಿಡು, ಅಲ್ಲದೊಡೆಶಕ್ತ ಎನ್ನನು ಕಾಯೋ ಸುಲಭದಿಂದಮುಕ್ತಿಯನ್ನು ಪ್ರಕಟಿಸಲು ಲೋಕದೊಳು ಭಜಕರ್ಗೆಯುಕ್ತ ಕರ್ತ ಕಾಗಿನೆಲೆಯಾದಿಕೇಶವರಾಯ5
--------------
ಕನಕದಾಸ
ಸಿರಿಯ ರಮಣ ನರಹರಿಯ ಚರಣಗಳ ನಿರತ ಭಜಿಪರಿಗೆ ಸ್ಥಿರ ಸುಖವಿಹುದು ಪ ದುರಳ ವಿಷಯಗಳ ತೊರೆದು ಮುದದಿ ಮೈ ಮರೆಯುವ ತೆರದಲಿ ಉರುತರ ಭಕುತಿಯಲಿ ಅ.ಪ ತನಯ ಪ್ರಹ್ಲಾದನು ಜನಕನ ವಚನವ ನನುಸರಿಸದೆ ತನ್ನ ಮನದಲಿ ಸಂತತ ನೆನೆದು ಶ್ರೀಹರಿಯನು ದಿನದಿನ ನಾರಾಯಣನ ಸುಮಂಗಳ ಗುಣಗಳ ಪೊಗಳುತ ಕುಣಿ ಕುಣಿಯುತ ತನ್ನ ಜನಕನ ಕೋಪಕೆ ಹೊಣೆಯಾಗುತಲಿರೆ ಕ್ಷಣದಲಿ ಪೊರೆದ 1 ಖೂಳನು ತನ್ನಯ ಬಾಲನ ನಡತೆಯ ತಾಳಲಾರದೆ ಕೋಪ ಜ್ವಾಲೆಯಿಂದುರಿಯುತ ಪೇಳೊ ಇಲ್ಲಿಹನೇನೊ ತಾಳೊ ನೋಡುವೆನೆಂದು ಪೇಳಿ ಕಂಬವ ತನ್ನ ಕಾಲಲಿ ಒದೆಯಲು ಸೀಳಿ ಛಟ ಛಟನೆ ತಾಳಿ ಘೋರತನು ಖೂಳ ರಕ್ಕಸನಲಿ ಧಾಳಿಯ ಗೈದ 2 ದುರುಳ ಹಿರಣ್ಯಕನ ಕರಳ ಬಗೆದು ತನ್ನ ಕೊರಳಲ್ಲಿ ಮಾಲೆಯ ಧರಿಸಿ ಸಿಡಿಯುತಿರೆ ಉರಿಯಿಂದ ಧರಣಿಯು ತರತÀರ ನಡುಗಲು ಸುರರ ಮೊರೆಯ ಕೇಳಿ ವರಲಕುಮಿಯು ನರ ಹರಿಯನು ಸ್ತುತಿಸಲು ಮರೆತು ಕೋಪವನು ವರ ಭಕುತನಿÀಗೆ ಪ್ರಸನ್ನತೆಯಿತ್ತ 3
--------------
ವಿದ್ಯಾಪ್ರಸನ್ನತೀರ್ಥರು
ಸಿರಿಯನನುರಾಗದಿ ಭಜಿಸುವೆನು 1 ಕ್ಷೀರಸಾಗರಾತ್ಮಜೆಯರಸ ಕೃಪಾವಾರಿಧಿ ಸರ್ವೇಶ | ಅ ಪಾರಗುಣಾರ್ಣವ ಜಗದೀಶ ಬೆಂಬಿಡದಿರು ಶ್ರೀಶಾ 2 ಸದಾ ಸದ್ಭಕ್ತ ಜನಪ್ರೇಮಿ ವಿನುತ ನಂಬಿದವನೆ ನಿಷ್ಕಾಮಿ 3 ಪ್ರಪಂಚಕು ಟುಂಬಿ ಸದಾನಂದ 4 ದುರ್ವಿಷಯ ಸುಟ್ಟು ನಿನ್ನ ಚಿಂತೆ ಮನಕೆ ಕೊಟ್ಟು 5 ಸಂಜೀವ 6 ದುರ್ಜನರ ಬಿಟ್ಟೆ ದೈತ್ಯರನ್ನು ಪರ ಮೇಷ್ಠಿ ಪೊಗಳುತಿಹನು ಎನ್ನಳವೆ ಶಿಷ್ಟರ ದೊರೆ ನೀನು 7 ಭೂಮಿಯನೆ ತ್ತಿದೆ ಕೋರೆದಾಡೆಯಲಿ ಸಾಕಾಗದೆ ನಿರುತವು ಭಜಿಸುವ ಶಶಿ ಶೇಖರ ಮೋದದಲಿಎಂದುಸು ರುತಲಿದೆ ವೇದದಲಿ 8 ಕಂಬದೊಳವÀ ತರಿಸಿದೆ ಮೋದದೊಳು ಮನಸರು ಭಲಾ ಎನಲು 9 ಬಲಿಯಯಾಗ ಮಂಟಪಕ್ಕೆ ಪೋಗಿ ಯೋಗಿ 10 ಸಮುದ್ರ ವನ್ನೊತ್ತಿದೆ ಜಗಜಟ್ಟಿ ನಾಚರಿಸಲು ಮನವಿಟ್ಟಿ 11 ಸತಿ ಸತ್ಕೀರ್ತಿಯ ಪಡೆದು ಜಗದಿ ಮೆರೆದೆ 12 ಮೆರೆದೆ ಕೌರವರ ಭೀಮನಿಂ ಕೊಲ್ಲಿಸಿದೆ 13 ಜನಾದ್ಯರ ಗೆದ್ದು ಸುಮನಸಾಳಿ ಯರಸಂ ಹರಿಸಿದನಾ ಶೂಲಿ 14 ಕೃತಯುಗದ ಧರ್ಮ ನಡೆಸಿದೆಯ್ಯಾ ಎನ್ನ ಪಾಲಿಸಯ್ಯ ಜೀಯಾ 15 ಜನರುನೆನೆಯಲು ತಾ ಇಷ್ಟಾರ್ಥವ ಪಡೆವರು ಸದಾ ತನ್ನ ಸಂತರೊಳಗಿಡುವನು16 ಸುಜನ ಕಾಮಿತದಾಯಕ ರಕ್ಷ ಕೋಮಲಾಂಗ ನೂತನ ಪುರಿ ಮಂದಿರ ಕುಜನನಿಕರ ಶಿಕ್ಷಾ | ವರದ ರಾಜನಿಖಿಲ ಸಂರಕ್ಷಾ 17
--------------
ಗುರುರಾಮವಿಠಲ
ಸಿರಿಯನಾಳುವ ದೊರೆಯ ಮರೆಯದೆ ಮುರಾರಿಯ 1 ಕರುಣದಾಯಕನೀತ ಶರಣಜನರ ಸುಶೋಭಿತ ವರಮುನಿಗಳ ಹೃದಯ ಸದೋದಿತ ಹರಿಯ ಸಾಕ್ಷಾತ 2 ನಂಬಿದವರ ಕಾವ ಬಿಂಬಿಸುವ ಮನದೊಳಗೀವ ಇಂಬು ಅಗಿಹ್ಯ ದೈವ 3 ದೇಶಿಕರಿಗೆ ದೇವ ವಸುದೇವಸುತ ವಾಸುದೇವ ಲೇಸಾಗಿ ಸುಭಕ್ತರ ಪಾಲಿಸುವ ಈಶ ಶ್ರೀಕೇಶವ 4 ದೃಢ ಭಕ್ತರಿಗೊಲಿವ ಮೂಢ ಮಹಿಪತಿ ಮನದೈವ ಪಿಡಿದು ಕೈಯ ಕಡೆಗಾಣಿಸುವ ಬಿಡದೆ ಸಲಹುವ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು