ಒಟ್ಟು 8337 ಕಡೆಗಳಲ್ಲಿ , 130 ದಾಸರು , 4215 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯೆತ್ತುವೆ ಆತ್ಮೇಶ್ವರಗೆ ಪ ಮಾರ ಕೋಟಿ ಲಾವಣ್ಯ ಮತ್ಪ್ರಿಯ ಸ್ವಾಮಿಗೆ ಅ.ಪ ಮನಕೊಡೆಯನೆನ್ನಿಸಿ ಮಮತೆಯ ವಿಸ್ತರಿಸಿ ಅನುದಿನ ಬೇಡಿದಿಷ್ಟಾರ್ಥವನೀವಗೆ 1 ಶುಭದಾಯಕನಾಗಿ ಶೋಭಿಸುತಿರ್ಪಗೆ2 ಗುರುರಾಮವಿಠ್ಠಲ ಕರುಣಾನಿಧಿಗೇ 3
--------------
ಗುರುರಾಮವಿಠಲ
ಆರತಿಯೇತ್ತುವೆ ನಾಂ ಪ ಸತತ ಮನ್ಮನೋರತದೊಡೆಯಗೆ ಅ.ಪ ಯಾವಾಗಲು ನಾಮಾಡುತಿರುವ ಸಂ ಸೇವೆಯಕೈಕೊಂಬ ಮಹಾತ್ಮಗೆ 1 ಬೇಡಿದಭೀಷ್ಟವ ನೀಡುತ ಎನ್ನಯ ನಾಮವ ಜಪಿಸುತ ನಲಿಯುವ ಪತಿಗೆ 3
--------------
ಗುರುರಾಮವಿಠಲ
ಆರಿಗ್ಯಾತಕೆ ಮೊರೆಯಿಡಲಿ ಸಾರಿದವರನ ಪೊರೆವ ಶ್ರೀರಮಣ ನೀನಿರಲು ಪ ಬೆಳಸಿಗೊಬ್ಬನ ಕೇಳೆ ಮಳೆಗೆ ಮತ್ತೊಬ್ಬನೆ ಅಳತಿಗೆ ಇನ್ನೊಬ್ಬನೆ ಹಾಗೆವೆ ವಳತಿಗೊಬ್ಬರು ದೊರೆಗಳೆ ಮ್ಯಾಲೆನ್ನ ಪ್ರಳಯಕೆ ಮತ್ತೊಬ್ಬನೆ ಪರಿಪರಿ ಖಳರ ಮಾತುಗಳೇ ಸ್ವಾಮಿ 1 ಆಕಾಲ ನೀನೆವೆ ಈ ಕಾಲದಲಿ ನೀನೆ ಸಾಕುವನು ಇನ್ನೊಬ್ಬನೆ ಸ್ಥಿರವಾಗಿ ತಾಕು ತಗಲಿಲ್ಲದೆಲೆ ಬೊಮ್ಮಾದಿ ಲೋಕಪತಿಗಳ ಒಡಿಯನೇ ಈ ವ್ಯಾಳ್ಯ ಲೋಕರನ ಕಾಯಬೇಕೊ ಸ್ವಾಮಿ 2 ಕಾಸು ಒಬ್ಬರಿಗಿಲ್ಲ ಲೇಸು ತೋರದಲೇವೆ ದೇಶಕೊಬ್ಬರು ಪೋದರೋ ಪೊಟ್ಟಿಗೆ ಕೂಸುಗಳ ಮಾರುಂಡರೋ ಈ ಜನರ ಕ್ಲೇಶಬಡಸದಲೆ ಪೊರಿಯೊ ಕರುಣದಲಿ ವಾಸುದೇವವಿಠಲ ಸ್ವಾಮಿ 3
--------------
ವ್ಯಾಸತತ್ವಜ್ಞದಾಸರು
ಆರಿಲ್ಲಿಲ್ಲೋ ಮನುಜಾ | ಅರಿಲ್ಲಿಲ್ಲೋ | ಹರಿಭಕ್ತರಿಗೆ ಸರಿ ಉಂಟೇನಣ್ಣಾ | ಆರಿಲ್ಲಿಲ್ಲೋ ತಮ್ಮಾ | ಬಿರದಿನ ಘಲಗಳ ನಡೆಸುವರಯ್ಯಾ ಪ ಕಂಭದೊಳಗ ಹರಿ ಬಿಂಬವ ತೋರಿಸಿ | ಹಿರಣ್ಯ ಕನಾ | ವೆಂಬ ಶಾರ್ದೂಲ ಕರಳವ ಹಾರಿಸಿದ | ನಂಬಿದ ಪ್ರಲ್ಹಾದ ಮಾಸಾಳ ನಮಾ 1 ಕಂಡು ಸೀತಾಪತಿ ನೊಯ್ದು ರಾವಣ ನೆಂಬಾ | ಖಂಡಿಸಿ ಮದ ಸೊಕ್ಕಿದಾನಿಯನು | ತುಂಡ ಮುಂಡ ಮಾಡಿ ಪದವಿಯ ಪಡದಾ | ಚಂಡ ವಿಭೀಷಣ ಮಾಸಾಳ ನಮಾ 2 ಖಂಡ ದಾಸನಬೇಡಿ ಹೊಂದಿದ್ದ ಕಾಯನ | ಸಂದ ಬಿಡಿಸಿ ಮಲ್ಲಯುದ್ಧದಲಿ | ಮಂದರ ಧರನತಿ ಮೆಚ್ಚಿಸಿ ಮೆರೆದಾ | ನಂದ ಭೀಮಶೇನ ಮಾ-ಸಾಳ ನಮಾ 3 ಬೊಮ್ಮ ಸಾರಥಿ | ಉರಗಸ ಹದಿ ಮೇರು ಗಿರಿ ಪಾಪವು | ಹರಿಶರದಿಂದಲಿ ತ್ರಿಪುರವ ಕೆಡಹಿದ | ಸುರ ರಕ್ಷ ಮಹೇಶ ಮಾಸಾಳನಮಾ 4 ಹಿಂದಿನ ಮಾತಿಂದು ಇಂದಿಲ್ಲ ವೆನಬ್ಯಾಡಿ | ಎಂದೆಂದು ಸ್ವರ್ಗದ ಸುಖಗಳಿಗೆ | ಕುಂದವ ನಿಡುವರು ಮಹಿಪತಿ ಸುತ ಪ್ರಭು | ಹೊಂದಿದ್ದ ದಾಸರು ಮಾಸಾಳರೈಯ್ಯಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರು ಕೊಟ್ಟರು ಕೊಟ್ಟರಾರುಂಡರಾರಿಲ್ಲಿಬೇರೆ ನಾ ನೀ ನಾನೆಂದು ಕೆಡುವುದೀ ಲೋಕ ಪಕಾಲ ಚ್ಟೇಸಿತು ಕರ್ಮವು ಕೊಟ್ಟಿತೀ ಕಿವಿಗಳಾಲಿಸಿತು ಕಂಡಿತಕ್ಷಿಗಳೆಂದಿತಂಘ್ರಿಲೀಲೆಯಲಿ ಕೈಪಿಡಿಯುತಾ ಘ್ರಾಣಿ ಘ್ರಾಣವೀ ಲೋಲ ಚಿತ್ತವನುಸಂಧಾನಗೆಯ್ತು 1ಪ್ರಾಣ ಒಳಕೊಂಡಿತನ್ನವನು ಸಂಕಲ್ಪಿಸಿತುದೀನ ಮನಮತಿಗೆ ನಿಶ್ಚಯವಾುತೂತಾನಿದರೊಳಾರು ಕೊಂಬವನೊ ಕೊಡುವನೊ ದುರಭಿಮಾನದಿಂ ಕೆಡುತಿಹರು ನೀನು ನಾನೆಂದು 2ಭಾನು ಜಲದಲಿ ಪೊಳೆಯಲದರ ಕಂಪಾದಿಗಳುಭಾನುವಿನದೆಂದು ಭ್ರಮಿತರು ಬಗೆವ ತೆರದಿಜ್ಞಾನಮಯ ನಾದಾತ್ಮ ಹಮ್ಮಿನೊಳ್ಪೊಳೆಯಲಜ್ಞಾನದಿಂದೀ ರಾಸಿ ನಾನೆನ್ನುತಿಹರೊ 3ಈಯನಿರ್ವಚನೀಯ ಜೀವತ್ವವೆಂದರಿದುಕಾಯದಲಿ ಕೂಟಸ್ಥ ಸತ್ಯವೆಂದೂಮಾಯದಿಂದ ತೋರಿ ತಾನೀ ವಿಶ್ವಪುಸಿ ಎಂದುಹೇಯ ಭೋಗದಲನಾಸಕ್ತನಾಗಿರದೆ 4ತಾನು ನಿರ್ಲೇಪನೆಂದರಿಯದೆ ಶರೀರಾಭಿಮಾನದಿಂ ಗೋಪಾಲ ಯತಿಯ ಚರಣವನೂಸಾನುರಾಗದಲಿ ಸೇವಿಸದೆ ಮಿಥ್ಯಾವಿಷಯದೀನತೆಯನೈದಿ ರಾಗಾದಿಗಳ ಬಿಡದೆ 5
--------------
ಗೋಪಾಲಾರ್ಯರು
ಆರು ಬಣ್ಣಿಪರಮ್ಮಶ್ರೀ ಹರಿಯ ದ್ವಾರಕೆಯ ದೊರೆಯ ಪ. ಭಾರ ಚರಿಯ ಹೇಳ ಸಿರಿಯು ಸೋತಳು 1 ಪಾದ ಬೇಡಿ ದೊರೆಯಭಾರ ಕೊಡಲಿ ಪೊತ್ತ ಹಿರಿಯ ನಾರಿ ತಂದ ಧೀರ ವರ್ಯ 2 ಚರಿಯ ನಾರಿಯರ ವೃತವನಳಿದ ಪರಿಯಏರಿದ ರಾಮೇಶ ಕುದುರೆಯ3
--------------
ಗಲಗಲಿಅವ್ವನವರು
ಆರು ಬದುಕಿದರಯ್ಯ ಹರಿ ನಿನ್ನ ನಂಬಿ ಪ ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ ಅ ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆಸುಲಭದಲಿ ಕೌರವರ ಮನೆಯ ಮುರಿದೆನೆಲನ ಬೇಡಲು ಪೋಗಿ ಬಲಿಯ ಭೂಮಿಗೆ ತುಳಿದೆಮೊಲೆಯನುಣ್ಣಲು ಪೋಗಿ ಪೂತನಿಯ ಕೊಂದೆ 1 ಕರುಳೊಳಗೆ ಕತ್ತರಿಯನಿಟ್ಟೆ ಹಂಸಧ್ವಜನಸರಸದಿಂ ಮಗಳ ಗಂಡನ ಕೊಲಿಸಿದೆಮರುಳಿನಿಂದಲಿ ಪೋಗಿ ಭೃಗುಮುನಿಯ ಕಣ್ಣೊಡೆದೆಅರಿತು ನರಕಾಸುರನ ಹೆಂಡಿರನು ತಂದೆ2 ತಿರುಪೆ ಕೂಳ್ ಪುಟ್ಟದೈ ಕೃಷ್ಣ3
--------------
ಕನಕದಾಸ
ಆರು ಹಿತವರು ಎಂದು ನಂಬಬೇಡ ಪ ಆರಿಗಾರಿಲ್ಲ ಆಪತ್ತು ಬಂದೊದಗಿದಡೆ ಅ ಜನಕ ಹಿತದವನೆಂದು ನಂಬಬಹುದೇ ಹಿಂದೆತನಯ ಪ್ರಹ್ಲಾದನಿಗೆ ಪಿತ ಮುನಿದನುಜನನಿ ರಕ್ಷಿಪಳೆಂಬೆನೇ ತಿಳಿತಿಳಿದು ಕುಂತಿತನಯ ರಾಧೇಯನಿಗೆ ಎರಡೆಣಿಸಿದ ಮೇಲೆ 1 ಅನುಜ ಕೊಲಿಸಿದ ಮೇಲೆ2 ತನಗೆ ದೇಹಾನುಬಂಧಿಗಳೆ ಬಂಧುಗಳೆಂದುಮನದಿ ನಿಚ್ಚಳವಾಗಿ ನಂಬಬೇಡಘನ ಕೃಪಾನಿಧಿ ಕಾಗಿನೆಲೆಯಾದಿಕೇಶವನಅನುದಿನದಿ ನಂಬಿದವಗಿಹಪರದಿ ಸುಖವು 3
--------------
ಕನಕದಾಸ
ಆರುತಿ ಮಾಡುವೆನಾ ಕೃಷ್ಣಮೂರುತಿಗೆ ಪ ಆರುತಿ ಮಾಡುವೆ ನಾರಿ ದ್ರೌಪದಿಗೆ ಸೀರಿಗಳುಡಿಸಿದ ಮಾರಪಿತಗೆ ಸಖಿ ಅ.ಪ ಅಂಗುಟಾಗ್ರದಿಂದ ಗಂಗೆಯ ಪಡೆದಂಥ ಮಂಗಳಪ್ರದ ಶಿರಿರಂಗನ ಚರಣಕೆ1 ಭವ ಬಂಧವ ಬಿಡಿಸುವ ನಂದಗೋಪನ ಮುದ್ದು ಕಂದ ಶ್ರೀಕೃಷ್ಣಗೆ 2 ಆರಾದಿಸುವ ರಘ ದೂರಮಾಡುವ ಶÀುಭ ಕಾರಿ ಕೊಪ್ಪರ 'ಸಿರಿನಾರಶಿಂಹಗೆ ' ಬೇಗ 3
--------------
ಕಾರ್ಪರ ನರಹರಿದಾಸರು
ಆರುತಿಯ ತಾರೆ ಸಖಿ | ನೀರಜಾಕ್ಷಿ ವಾರುಣೀಶನಿಗೆ ಪ ವಾರಿಚರಗಿರಿಧಾರ ಹರಿ ಗೋಚರ ಹರಿ | ನರಸಿಂಹಗೆ ಮೂರಡಿ ಧಾರುಣಿ ದಾನವ ಬೇಡಿದವಗೆ 1 ದಾಶರಥಿದಾಸ ಹರಿಕೃಷ್ಣಗೆ ವಸನವರ್ಜಿತ ಕಲ್ಕಿಗೆ ಶ್ರೀಶನಿಗೆ ಸರ್ವೇಶನಿಗೆ ವಾಸುಕಿಗಿರಿ ವಾಸನಿಗೆ 2 ಸಾಮಗಾನ ವಿಲೋಲಗೆ ಶಾಮಸುಂದರವಿಠಲಗೆ | ರಾಮಗೆ ನಿಸ್ಸೀಮಗೆ | ಕಾಮಿತಾರ್ಥಪ್ರದಾತಗೆ 3
--------------
ಶಾಮಸುಂದರ ವಿಠಲ
ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ ಬೇಗನೆ ಸಾರಸಾಂಬಕಿಅ.ಪ ಮಾರಜನಕಗೆ ವಾರಿಜಭವ ಕು- ಮಾರ ಜನಕ ಮುಖಾಮರೇಡ್ಯಗೆ ಚಾಪ ಮುರಿದ ಸುಕು- ಮಾರ ಶರೀರ ಸೀತಾರಾಮ ಚಂದ್ರಗೆ 1 ಇಂದಿರವರಗೆ ಮಂದರಧರ ಪು- ರಂದರಾನುಜ ಸಿಂಧುಶಯನಗೆ ಮಂದಯಾನೆ ಛಂದದಿಂದ ಬಂದೀಗ ವಂದೀಶ್ಯಾನಂದಾದಿ ಬೆಳಗಲು 2 ವಾರಣಭಯ ನಿವಾರಣ ಜಗ- ತ್ಕಾರಣಗೆ ಸುಖಪೂರ್ಣದೇಹಗೆ ಸೇರಿ ತನ್ನ ಸೇವಿಪರಘ ದೂರ ಕೊಪ್ಪರ ಶ್ರೀ ನಾರಸಿಂಹನಿಗೆ 3
--------------
ಕಾರ್ಪರ ನರಹರಿದಾಸರು
ಆರೂ ಸಂಗಡ ಬಾಹೋರಿಲ್ಲ ಪ ನಾರಾಯಣ ನಾಮ ನೆರೆ ಬಾಹೋದಲ್ಲದೆ ಅ ಪರಿಯಂತ ಗರ್ಭದಲಿಹೆತ್ತು ಅತ್ಯಂತ ನೋವು ಬೇನೆಗಳಿಂದಲಿತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆಹೊತ್ತುಗಳೆವರಲ್ಲದೆ ಬೆನ್‍ಹತ್ತಿ ಬಹರೆ 1 ಹರಣ ದಾರು ಗತಿಯೆಂದಳುವಳು2 ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರುಧನಕಾಗಿ ನಿನ್ನನೆ ನಂಬಿದವರುಅನುಮಾನವೇಕೆ ಜೀವನು ತೊಲಗಿದಾಕ್ಷಣದಿಇನ್ನೊಂದು ಅರಗಳಿಗೆ ನಿಲ್ಲಗೊಡರು 3 ಸುತ್ತಲು ಕುಳ್ಳಿರ್ದ ಮಿತ್ರ ಬಾಂಧವರೆಲ್ಲಹೊತ್ತು ಹೋದೀತು ಹೊರಗೆ ಹಾಕೆನುವರುಹಿತ್ತಲಾ ಕಸಕಿಂತ ಅತ್ತತ್ತ ಈ ದೇಹಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರು 4 ಹರಣ ಹಿಂಗದ ಮುನ್ನು ಹರಿಯ ಸೇವೆಯ ಮಾಡಿಪರಗತಿಗೆ ಸಾಧನವ ಮಾಡಿಕೊಳ್ಳೊಕರುಣನಿಧಿ ಕಾಗಿನೆಲೆಯಾದಿಕೇಶವರಾಯನನಿರುತದಲಿ ನೆನೆನೆನೆದು ಸುಖಿಯಾಗೊ ಮನುಜ5 * ಈ ಕೀರ್ತನೆ ಪುರಂದರಾಸರ ಅಂಕಿತದಲ್ಲೂ ಇದೆ.
--------------
ಕನಕದಾಸ
ಆರೇನು ಮಾಡುವರು ಅವನಿಯೊಳಗೆ | ಕರ್ಮ ಫಣಿಯಲ್ಲಿ ಬರೆದುದಕೆ ಪ ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು | ಸತಿ ತನ್ನ ಕುಣಿಸ್ಯಾಡಲು ನಿಜದಿ || ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು | ಆಡಿದ ಮತುಗಳು ಅಖಿಳಿರು ನಿಜವೆನಲು 1 ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ | ತಲೆಗೆ ತನ್ನ ಕೈ ಪೆಟ್ಟು ತಾಕಿದರೆ || ಹೆರಳು ಹಾವಾದರೆ ಗೆಳೆಯ ರಿಪುವಾದರೆ | ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ 2 ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ | ಪೆತ್ತ ತಂದೆಯು ಹೊರಗೆ ಮಾಡಿದರೆ || ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ | ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ 3 ಕಣ್ಣವೊಳಗಿನ ಗೊಂಬಿ ಕಾದ ಬಂದರೆ | ಹೆಣ್ಣಿನ ಹರಟೆ ಹೆಚ್ಚಾದರೆ | ಅನ್ನವನು ಉಣ್ಣಲು ಅಜೀರ್ಣವಾದರೆ | ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ 4 ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ | ವಾರಿಧಿಗಳು ಮೇರೆ ಮೀರಿದರೆ || ಆರಿದ ಇದ್ದಲಿಗಳು ಅಗ್ನಿಯಾದರೆ | ನಮ್ಮ ವಿಜಯವಿಠ್ಠಲನಿರುವ ತನಕ 5
--------------
ವಿಜಯದಾಸ
ಆರೋಗಣೆ ಮಾಡಮ್ಮ ಮಂಗಳಗೌರಿ ಬೇಡಿಕೊಂಬೆನೆ ನಿನಗೆ ಬೇಡಿದಡಿಗೆ ಎಡೆ ಮಾಡಿ ತಂದಿಟ್ಟಿಹೆ ಜೋಡಿಸಿ ನಿನಗೆ ಕೈ ಮುಗಿವೆನೆ ಮಹಾತಾಯೆ ಪ ನಂದಿವಾಹನನರ್ಧಾಂಗಿಯ ಪೂಜಿಸಿ ಗಂಧಕುಂಕುಮದಿಂದ ತಂದು ಕಸ್ತೂರಿ ಕಮಲದ ಪುಷ್ಪಗಳುಡಿ ತುಂಬಿ ನೈವೇದ್ಯವ ತಂದಿರಿಸುವೆ ತಾಯೆ 1 ಅಚ್ಚ ಮುತ್ತಿನ ಹರಿವಾಣದಿ ಮಾಲತಿ ಬಟ್ಟ್ಟಿವಿ ಗೌಲಿಗಳು ಅಷ್ಟಗುಳ್ಳವು ಶಾವಿಗೆ ಪರಡಿ ಪಾಯಸ ಭಕ್ಷ ಎಣ್ಣೋರಿಗೆ ಭಾರಿಬಟ್ಟಲು ತುಪ್ಪ 2 ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ ದುಂಡುಗುಳ್ಳೋರಿಗೆಯು ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯ್ಗಳು ಅಂದವಾದ ಕಾಯಿರಸ ಶಾಖ ಪಾಕವು 3 ಸಣ್ಣ ಅಕ್ಕಿಯ ಶಾಲ್ಯಾನ್ನಕೊಪ್ಪುವ ತವ್ವೆ ಇನ್ನು ದಧ್ಯನ್ನಗಳು ಸನ್ಮತವಾಗಿದ್ದ ಶಾವಿಗೆಫೇಣಿ ಸಕ್ಕರೆ ರುಬ್ಬಿದ ಆಂಬೊಡೆ ರುಚಿಯಾದ ಕಲಸನ್ನ 4 ಘೃತ ಸೀಕರ್ಣೆ ಕಾಯ್ಹಾಲು ಹೊಯ್ಗಡುವನಿಟ್ಟು ಸಾರು ಸಾಂಬಾರ ಚಟ್ಟಣಿ ಕೋಸಂಬರಿ ನೀರೆ ನಿನಗೆ ಪನ್ನೀರು ತಂದಿರಿಸುವೆ 5 ದೇವಿ ನಿನ್ನ ಮನೋಭಾವ ತಿಳಿದು ನಾ ಭೀಮೇಶಕೃಷ್ಣನಿಗೆ ಬ್ಯಾಗ ಸಮರ್ಪಣೆ ಮಾಡಲು ಮಹಾದೇವ ಸ್ವಾದ ಸವಿದಾಸುಖದಿಂದಡ್ವಿಳ್ಯವ ಕೊಳ್ಳೆ 6
--------------
ಹರಪನಹಳ್ಳಿಭೀಮವ್ವ
ಆರೋಗಣೆಯ ಮಾಡು ಶ್ರೀವೆಂಕಟೇಶ ಸಾಗರಶಯನನೆ ಸರ್ವವ್ಯಾಪಕ ಕೃಷ್ಣ ಪ ಗಂಗೆಯ ಜನಕಗೆ ಮಂಗಳ ಅಭಿಷೇಕ ಸಂಭ್ರಮದಲಿ ಮಾಡಿ ತವಕದಲಿ ಶಂಭುವಂದಿತಗೆ ಪೀತಾಂಬರನುಡಿಸಿ ಪಾ- ದಂಗಳನೆ ಪೂಜಿಸುತ ಸ್ತುತಿಪರು ಇಂದಿರಾಪತಿ ಶೀಘ್ರದಿಂದಲಿ 1 ಅಪ್ರಮೇಯನೆ ನಿನಗೆ ಅಪ್ಪಾಲು ಅತಿರಸ ವಪ್ಪಾದ ವಡೆದೋಸೆ ಚಿತ್ರಾನ್ನವೂ ಸತ್ಯಮೂರುತಿ ನಿನಗೆ ಮುತ್ತಿನಂಥಲಾಡುಓಗರ ಮತ್ತೆ ಪಾಯಸ ಮೊಸರು ಬುತ್ತಿ ವಿ- ಚಿತ್ರದಲಿ ತಂದರ್ಪಿಸಿಹರು2 ಕನಕ ಮಂಟಪದೊಳು ಕರ್ಪೂರದಾರತಿ ವಿನಯದಿ ಮಾಡುತ್ತ ನಮಿಸುವರು ಮನಕೆ ಬೇಸರ ಬೇಡ ಕಮಲನಾಭ ವಿಠ್ಠಲ ಘಮ ಘಮಿಪ ತಾಂಬೂಲ ವೀಳ್ಯವ ತವಕದಲಿ ಸ್ವೀಕರಿಸು ಶ್ರೀಶಾ 3
--------------
ನಿಡಗುರುಕಿ ಜೀವೂಬಾಯಿ