ಒಟ್ಟು 1740 ಕಡೆಗಳಲ್ಲಿ , 104 ದಾಸರು , 1431 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳೇ ಯಶೋದೆ ನಿನ್ನ ತನಯನ ಲೀಲೆಯ ಪೇಳಲು ಅಳವಲ್ಲವೇ ಪ ಬಾಳುವ ಸತಿಯರ ಧಾಳಿ ಮಾಡುವ ಯದÀು ಮೌಳಿ ಶ್ರೀ ಕೃಷ್ಣಗೆ ಪೇಳೀ ವಿವೇಕವ ಅ.ಪ ಇಂದುವದನ ಎಮ್ಮ ಮಂದಿರಗಳ ಪೊಕ್ಕು ಪೊಂದುವ ಪಾಲ್ಬೆಣ್ಣೆಯ ಇಂದು ಸಿಕ್ಕಿದನೆಂದು ಕರಗಳಿಂ ಪಿಡಿಯಲು ಮಂದಹಾಸವ ಬೀರಿ ಮನವ ಸೋಲಿಸುವನು 1 ನೀರಿಗೆ ಪೋಗಲು ಯಾರೂ ಇಲ್ಲದ ವೇಳೆ ಸೇರುವ ಎಮ್ಮೊಡನೆ ಮೀರಿ ಪೋಗಲು ಕಾಲು ಬಾರದ ಎಮ್ಮೊಳು ಸಾರಸಾಕ್ಷ ಕೃಷ್ಣ ಸರಸವ ತೋರುವ 2 ನಿನ್ನ ತನಯ ಪ್ರಸನ್ನ ಶ್ರೀಕೃಷ್ಣನು ಅನ್ಯಾಯಕಾರನಮ್ಮ ಚನ್ನಾಗಿ ಇವನಿಗೆ ಬುದ್ಧಿ ಕಲಿಸದಿರೆ ಬೆನ್ನು ಹತ್ತುವೆವು ಕನ್ಯೆಯರೆಲ್ಲರು 3
--------------
ವಿದ್ಯಾಪ್ರಸನ್ನತೀರ್ಥರು
ಕೈಪಿಡಿದೆನ್ನನು ಕಾಪಿಡು ನಲವಿಂ ಕನ್ನಡ ನುಡಿವೆಣ್ಣೆ ಪ. ಈ ಪಸುಳೆಗೈದಾ ಪಾಪವದಾವುದು ಕೋಪಿಸದಿರೆನ್ನಾಣೆ ಅ.ಪ ಮುಳಿವಿಂತೇತಕೆ ನಳಿನದಳಾಂಬಕೆ ಎಳೆಗೂಸಿನ ಮನಕೆ ಕಳವಳದಿಂದತಿ ಬಳಲಿಕೆಯಾದರು ತಳುವುದಿದೇನಿದು ಸಾಕೇ 1 ಮಾತೆಯ ಮಮತೆಗೆ ಸೋತು ಭಜಿಸುವೀ ಪೋತನ ನೆರೆನೋಡಿ ಪ್ರೀತಿಯಿಂ ಕರೆದಾತುಕೋ ನಲ್ವಾತಿನಿಂ ಕೈನೀಡಿ 2 ಪರಿಪರಿಯೆಡರಿನ ಗಿರಿದುರ್ಗಂಗಳಾವರಿಸಿರುತಿಹುದೆ ಪರಿಯಿಂದದನುತ್ತರಿಸಿ ಬಂದಪೆ ಕರುಣಿಸು ಭರದೆ 3 ಕಾರ್ಯ ಕಾರಣ ಕರ್ತೃ ನೀನಹುದಾರ್ಯೆ ಸದಾ ಪೊರೆಯೇ ಕೋರಿಕೆಗಳನೀಡೇರಿಸಿಯಣುಗರ ನಿರಪಾಯದೆ ಕಾಯೇ 4 ಭಾಷೆಗೆ ತಪ್ಪಿದ ದೋಷಿಯೆನ್ನುತುಪೇಕ್ಷಿಸಬೇಡೆನ್ನ ಶೇಷಗಿರೀಶನೆ ಪೋಷಕನಾಗಿರೆ ನಿರ್ದೋಷಿಯೆನಿಸುವೆ ನೀಂ5
--------------
ನಂಜನಗೂಡು ತಿರುಮಲಾಂಬಾ
ಕೈಯ ತೋರೋ ರಂಗ ಕೈಯ ತೋರೋ ಪ. ಕೈಯ ತೋರೋ ಕರುಣೆಗಳರಸನೆ ಅ.ಪ. ಶರಧಿ ಮಥನದಿ ದೇವಾಸುರರಿಗೆ ಮೋಹಿನಿಯೋಲ್ ಸುರರಿಗೆ ಸುಧೆಯಿತ್ತು ಸುರರಿಗಾಸರೆಯನಿತ್ತಾ 1 ಶಿರಮಂ ಸದ್ಗತಿವೊಂದಿಸಿ ಹರನಂ ನಲವಡಿಸಿದ 2 ಹರನ ವರದಿ ಭಸ್ಮಾಸುರ ಗರ್ವಿತನಾಗಿ [ಆ] ಹರನಂ ಬೆನ್ನಟ್ಟಿ ಬರೆ ದುರುಳನ ದಂಡಿಸಿದಾ 3 ತರಳಧ್ರುವ ತಾಯ ಬಿರುನುಡಿಗೆ ಮನನೊಂದು ಶರಣೆನೆ ಮೈದೋರಿ ತರಳನ ಮೈದಡಹಿದ4 ಕಂದ ಪ್ರಹ್ಲಾದನ ತಂದೆಯುಗ್ರದಿ ಜಡಿಯೆ ಕಂಬದಿಂ ಬಂದು ಖಳನ ಕರುಳನು ಕಿತ್ತೆಸೆದಾ 5 ಮೊಸಳೆ ಬಾಯೊಳು ಸಿಕ್ಕಿ ಬಸವಳಿದು ಬಾಯ್ಬಿಡುತಿರೆ ಎಸೆದ ಚಕ್ರದಿ ಸೀಳಿ ನಕ್ರನ ಕರಿಯನುದ್ಧರಿಸಿದ 6 ಚಕ್ರಧರ ರುಕ್ಮಿಣಿಯ ಕೈಪಿಡಿದ7 ತರುಣಿಯಭಿಮಾನವ ನೆರೆಕಾಯ್ದು ನರನಿಗೆ ವರಸಾರಥಿಯಾಗಿ ತೇರನೆ ನಡೆಸಿದ 8 ವರಶೇಷಗಿರಿಯಲ್ಲಿ ಸ್ಥಿರವಾಗಿ ಶರಣರ ಕರೆದಾದರಿಸಿ ವರಗಳ ಕೊಡುತಿಪ್ಪ 9
--------------
ನಂಜನಗೂಡು ತಿರುಮಲಾಂಬಾ
ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ- ಮಂಡಲದೊಳು ಹಯಗ್ರೀವಮೂರ್ತಿ ಪ. ವೇದಂಗಳ ಜಲದಿಂದ ತಂದೆ ನೀ ಪೋದ ಗಿರಿಯ ಬೆನ್ನೊಳಾಂತು ನಿಂದೆ ಮೇದಿನಿಯ ಕದ್ದೊಯ್ದನ ಕೊಂದೆ ಸಂ- ವಾದದಿಂದ ಕಂಬದಿಂದಲಿ ಬಂದೆ 1 ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ ಪರಶು ಪಿಡಿದು ಬಾಹುಜರ ಕಿತ್ತೆ ನೆರೆನಂಬಿದಗೆ ಸ್ಥಿರಪಟ್ಟವನಿತ್ತೆ ದೊಡ್ಡ ದುರುಳಕಾಳಿಂಗನ ಶಿರದಿ ನಿಂತೆ 2 ಪರವ್ರತೆಯರ ಮಾನಭೇದನ ಚತುರ ತುರಗವೇರಿ ನಲಿವನ ಕ್ಷಿತಿಯೊಳುತ್ತಮ ವಾದಿರಾಜನ ಸ್ವಾಮಿ ಸತತ ರಕ್ಷಿಪ ಶ್ರೀ ಹಯವದನ 3
--------------
ವಾದಿರಾಜ
ಕೊಡು ಕೊಡು ವರವ ಕಿಂಕರ ನಾನಲ್ಲೆ ಪಿಡಿಕೈ ಹೂವಿನ್ಹಡಗಲಿ ಹನುಮಂತರಾಯ ಪ ನೂರುಗಾವುದ ಶರಧಿಯ ದಾಟಿ ಲಂಕೆ ಊರು ಸುಟ್ಟು ಬಂದ ಧೀರ ನೀನಲ್ಲೆ 1 ಕ್ರೂರ ಕೌರವರ ಮಡುಹಿ ಕರಿಪತಿ ರಾಜ್ಯ ರಾಯ ಧರ್ಮಗೆ ಪಟ್ಟ ಕಟ್ಟಿದೆಯಲ್ಲ 2 ಮಾಯಾವಾದಿಗಳ ಮರ್ದಿಸಿ ಮಧ್ವಮುನಿಯೆ ಭೀಮೇಶಕೃಷ್ಣಧಿಕೆಂಬೊ ಬಿರುದೆತ್ತಿದ್ಯಲ್ಲ 3
--------------
ಹರಪನಹಳ್ಳಿಭೀಮವ್ವ
ಕೊಡು ಬ್ಯಾಗಭೀಷ್ಟವ ತ್ವರದೀ - ನೀ ಸನ್ಮನದೀ ಪ ಕೊಡುವೊದೆನುತ ನಿನ್ನಡಿಯನು ಭಜಿಸುವ ಬಡವನ ಕರವನು ಪಿಡಿದೀ ಕಾಲದೀ ಅ.ಪ ವಡೆಯ ನೀನೆನುತತಿ ಹರುಷದಲಿ ನಂಬಿದೆ ನಿನ್ನಾ ಬಿಡದಲೆ ಪೊರೆ ಎನ್ನ ಕರುಣದಲಿ ಎನ್ನಯ ಕರವ ಪಿಡಿದು ಭವಶ್ರಮ ಕಳಿಯುತಲಿ - ಬಹು ತೋಷದಲೀ ನುಡಿದ ವಚನವ ಚಿತ್ತಕೆ ತಂದು ಪತಿ ಗುರುರಾಯನೆ ನೀ 1 ನಮಿಪ ಜನರಿಗೆ ಸುರಧೇನು ಭಜಿಸುವ ಜನಕೆ ಸುಮನಸೋತ್ತಮ ವರತರು ನೀನು - ಚಿಂತಿಪ ಜನಕೆ ಅಮರೋತ್ತಮ ರತುನವು ನೀನು - ಎನುತಲಿ ನಾನು ಅಮಿತ ಮಹಿಮವ ತೋರುತಲೀಗ ಶ್ರಮವ ಕಳೆದು ಸುಖಸುರಿಸುತ ನೀ 2 ಭೂತಳ ಮಧ್ಯದಲತಿ ಖ್ಯಾತ - ನೆನಿಸಿದ ನಾಥ ಪಾತಕ ಕುಲವನ ನಿರ್ಧೂತಾ - ಮಾಡುತ ನಿಜಪದ ದೂತಜನ ತತಿಮನೋರಥ - ಪೂರ್ತಿಪ ದಾತಾ ವಾತ ಗುರುಜಗನ್ನಾಥ ವಿಠಲಗತಿ ಪ್ರೀತಿಪಾತ್ರ ಸುಚರಿತ್ರ ಸುರಮಿತ್ರ3
--------------
ಗುರುಜಗನ್ನಾಥದಾಸರು
ಕೊಡು ವರವಾ ಪಿಡಿ ಕರವಾ ಪ ಜಡಜ ಸದನೆ ಪಾಲ್ಗಡಲ ನಂದನೆ ಪೊಡವಿ ಜನನಿ ನಿಮ್ಮಡಿಗಳಾಂಬುಜವಾ ಧೃಡ ಸುಜ್ಞಾನದಿ ಬಿಡದೆ ಪೂಜಿಸುವೆ 1 ಇಕ್ಷುಶರನ ಪಿತ ವಕ್ಷನಿಲಯೆ | ಕಮ ಲಾಕ್ಷಿ ಕೋಮಲೆ ಮೋಕ್ಷದಾತಳೆ ಲಕ್ಷ್ಮಿಯ ಕರುಣ ಕಟಾಕ್ಷದಿಂದೀಕ್ಷಿಸಿ 2 ಧಿಟ್ಟ ಶಾಮಸುಂದರವಿಠಲನ ನಿಷ್ಟೆಯಿಂದಲಿ ಮನಭಜಿಸೊ ಸುಖ ಕೊಟ್ಟು ಭವ ಕಟ್ಟಿ ಓಡಿಸಿ 3
--------------
ಶಾಮಸುಂದರ ವಿಠಲ
ಕೊಡುವುದನೆ ಕೊಡುಮತ್ತೆ ಎಷ್ಟಾದರಭವ ಪ ಅಸುವನೀಗಲು ನಾನ್ಹಸಗೆಟ್ಟು ಬೇಡದ ಅಸಮಶುಚಿಮನ ನೀಡೊ ಕುಸುಮಾಕ್ಷ ಹರಿಯೆ 1 ಅತಿಶಯದ ಬಡತನವು ಸತತ ಪೀಡಿಸಲೆನಗೆ ಗತಿಯಿಲ್ಲದವವೆನುತ ಸತಿಸುತರು ಜರಿಲಿ ಧೃತಿಗುಂದಿ ಮತಿಗೆಟ್ಟು ವ್ಯಥೆಬಡುವ ಸ್ಥಿತಿಯನ್ನು ಹಿತದಿಂದ ತೊಲಗಿಸೈ ರತಿಪತಿಪಿತನೆ 2 ಬಿರುಕಿನೊಳು ಬಂದು ಈ ಮುರುಕು ಕಾಯದ ಇರುವು ಹರಕೊಂಡು ಹೋಗಲಿ ಹರಿ ಕರುಣದೋರೊ ನರಕಿಯೆನಿಸುವ ಮಹ ತಿರಕಿ ಸಂಸಾರದ ಮರುಕವನು ಪರಿಹರಿಸೊ ಪರಕೆ ಪರತರನೆ 3 ಊರು ನಾ ಸೇರಿರಲಿ ಅರಣ್ಯದೊಳಗಿರಲಿ ಮೀರಿದ ರೋಗದಿಂ ಘೋರ ಬಡುತಿರಲಿ ಆರೈಸದಾರನ್ನು ಸಾರಸಾಕ್ಷನೆ ನಿನ್ನ ಪಾರನಾಮದ ಸವಿ ಸುಸಾರ ಎನಗಿರಲಿ 4 ಕೊಡೋಧರ್ಮ ನಿನ್ನದಿದೆ ಬೇಡುವುದು ನನ್ನ ಧರ್ಮ ಕೊಡುವುದಾದರೆ ನೀನೆ ಕೊಡು ಎನಗೆ ಇದನು ಪೊಡವಿಯವರಿಗೆ ಬಾಗಿ ಬೇಡದ ಪದವಿಯನು ಪಿಡಿವೆ ತವಪಾದ ಎನ್ನೊಡೆಯ ಶ್ರೀರಾಮ 5
--------------
ರಾಮದಾಸರು
ಕೊಡುವೆ ತಾಂಬೂಲವ ಪಿಡಿಯೊ ಪಿಡಿಯೊ ದೇವಾ ಅಡಿಗಳಿಗೆರಗುವೆನಾ ಪ ವಿಪ್ರ ಮಡದಿಯರನ್ನವ ಕೊಡಲು ಭುಂಜಿಸಿದ ಪಾಲ್ಗಡÀಲ ಶಯನ ಕೃಷ್ಣ ಅ.ಪ ಮಡದಿಯ ನುಡಿಕೇಳಿ ಕಡುಭಕುತಿಯಲವ ಪಿಡಿಯವಲಕ್ಕಿಯನು ಕೊಡಲು ಭುಂಜಿಸಿಮಿತ್ರ ಬಡವ ಸುದಾಮನಿಗೆ ಕೆಡದ ಸಂಪದವನ್ನು ಗಡನೆ ನೀಡಿದ ದೇವಾ1 ಕುಬ್ಜೆಗಂಧಕೆ ಒಲಿದು ಕಬರಿಯ ಪಿಡಿದೆತ್ತಿ ಸುಭಗರೂಪಳ ಮಾಡಿದ ಅಬ್ಜನಾಭನೆ ತ್ವತ್ಪಾ- ದಬ್ಜಕರ್ಪಿಸಿದಂಥ ಶಬರಿಯ ಫಲಮೆದ್ದ ಪ್ರಭು ಶ್ರೀರಾಮನೆ ನಿನಗೆ 2 ಲಲನೆ ದ್ರೌಪದಾದೇವಿ ಗೊಲಿದಕ್ಷಯಾಂಬರ- ಗಳನೆ ಪಾಲಿಸಿಪೊರೆದ ಬಲುವಿಧ ಭಕುತರ ಬಳಗವ ಸಲಹಲು ಇಳೆಯೊಳು ಕಾರ್ಪರ ನಿಲಯ ಶ್ರೀ ನರಹರಿಯೇ3
--------------
ಕಾರ್ಪರ ನರಹರಿದಾಸರು
ಕೊಳಲಕೃಷ್ಣ ಬಂದು ನಿಲ್ಲೊ ಹೃದಯ ಕಮಲದಿ ನಳಿನನಾಭ ನಿನ್ನ ದಿವ್ಯ ಚಲುವ ರೂಪದಿ ಪ. ಶಿರದಿ ಮಕುಟ ಫಣೆಯ ತಿಲುಕ ಒಲಿವ ಮುಂಗುರುಳು ನಾಸಿಕ ಗಲ್ಲ ಹೊಳೆಯುತ 1 ಕರ್ಣದಲಿ ಕುಂಡಲಗಳು ಸ್ವರ್ಣ ಕಂಠವು ನಿನ್ನ ದಂತ ಹೊಳೆಯುತಿರಲು ಚನ್ನ ಶ್ರೀಹರಿಯೆ 2 ಅಧರ ಉರದಿ ಲಕ್ಷಿಯು ನಳಿತೋಳಿನಲಿ ಶಂಖ ಚಕ್ರ ವೇಣು ಪಿಡಿದಿಹ 3 ಕಮಲ ಮಾಲೆ ಮೇಲೆ ತುಳಸಿಯು ಮಾರಜನಕ ಹೊಳೆವೊ ಜರಿಯ ಪೀತ ವಸನವು 4 ರಕ್ತವರ್ಣ ವಸನ ಉಟ್ಟು ಕಟ್ಟಿ ಕಿರುಗೆಜ್ಜೆ ಮುಕ್ತರೊಡೆಯ ಮುಕ್ತಿಕೊಡುವ ಪಾದಕಮಲವು 5 ಕ್ಲೇಶ ಕಳೆಯುತ ದಾಸ ಜನರ ಕಾಯ್ವ ಕೃಷ್ಣ ಘಾಸಿಗೊಳಿಸದೆ 6 ಗುರುಗಳಲ್ಲಿ ನಿಂತು ಎನ್ನ ಹರುಷಪಡಿಸೊ ನೀ ಪರಮಪುರುಷ ನರಹರಿಯೆ ದುರಿತದೂರನೆ 7 ನೀರೊಳಾಡಿ ಭಾರಪೊತ್ತು ಕೋರೆ ತೋರಿದೆ ಘೋರರೂಪಿ ಬ್ರಹ್ಮಚಾರಿ ಕ್ಷತ್ರಿಯಾರಿ ನೀ 8 ಶ್ರೀ ಹರಿ ರಾಮ ಕೃಷ್ಣ ಬೌದ್ಧ ಕಲ್ಕಿಯೆ ಗೋಪಾಲಕೃಷ್ಣವಿಠ್ಠಲ ರೂಪ ತೋರೊ ನೀ 9
--------------
ಅಂಬಾಬಾಯಿ
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯತಳಿರಂದದಿ ತಾ ಪೊಳೆವ ಕರದಿ ಪಿಡಿದು ಪ ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ಒರೆದಿತು ಖಗಕುಲ ಸಾಧಿಸಿ ನೋಡಲು ಕೃಷ್ಣನ ಈಗಲೆಸಾಧ್ಯವೆ ನೀ ಬೃಂದಾವನದೊಳು1 ಮೇವು ಮರೆತವು ಗೋವುಗಳೆಲ್ಲವುಸಾವಧಾನದಿ ಹರಿದಳು ಯಮುನಾಆವು ಕಾವುತಲಿ ಗೋವಳರೆಲ್ಲರಹಾವ ಭಾವದಲಿ ಬೃಂದಾವನದೊಳು 2 ಕದಂಬ ವನದೊಳು 3
--------------
ವ್ಯಾಸರಾಯರು
ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ. ಕರದ್ವಯದಲಿ ಶಂಖ ಚಕ್ರಪಿಡಿದಿಹ ಕಿರುನಗೆ ನಗುತ ಸುಲಿಪಲ್ಲಿನ ಚಲುವ ಸ್ವರಗಳ ಪಿಡಿಯುತ ವೇಣು ನುಡಿಸುವ ಸರಸಿಜನಾಭ ಹೃನ್ಮಂದಿರದಿ ಮೆರೆವ 1 ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ ಸತಿ ಹೆಗಲಲಿ ಇಡುವ ನಗಧರ ನರ್ತನವಾಡಿ ಮುದವೀವ 2 ಕಾಲಕಡಗ ಗೆಜ್ಜೆ ಪಾಡಗರುಳಿಯು ಮೇಲೆ ಪೀತಾಂಬರ ಜರಿಯ ವೈಭವವು ಸಾಲ ಮುತ್ತಿನಹಾರ ಪದಕದ್ವಜ್ರಗಳು ಓಲಾಡುವ ನೀಲಾಂಬರ ಹೊದ್ದಿಹ ಒಲಪು 3 ಕಂಠ ಕೌಸ್ತುಭಮಣಿ ಅಧರದ ಕೆಂಪು ಕರ್ಣ ಕದಪು ಕನ್ನಡಿಯು ಬಂಟರಾದವರನ್ನು ಪೊರೆಯುವ ದೃಷ್ಟಿ ವೈ - ನಾಸಿಕ ಫಣೆಯ ತಿಲುಕವು 4 ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ ಪಾಪವ ದಹಿಸುವ ಪಾವನ ವೇಣು ಆಪಾದ ಮೌಳಿಯ ರೂಪದ ಚಲುವ ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5
--------------
ಅಂಬಾಬಾಯಿ
ಕೊಳಲೂದೋ ರಂಗಯ್ಯ ರಂಗ ನೀ ಕೊಳಲೂದೋ ಕೃಷ್ಣಯ್ಯ ಪ ಕೊಳಲೂದೋ ಗೋವಳರೊಡಗೂಡಿ ಚೆಲುವ ಶ್ರೀ ವೇಣುಗೋಪಾಲ ಕೃಷ್ಣ ನೀ 1 ಕಡಲೊಳಗಿದ್ದು ಬಂದ್ಹಡಗದಿಂದಲಿ ಕಡಗೋಲ ಪಿಡಿದ ಉಡುಪಿಯ ಕೃಷ್ಣ ನೀ 2 ಎಂಟು ಮಂದ್ಯತಿವರ್ಯರು ನಿನ್ನ ಸೇವೆಗೆ ಬಂಟರಾಗಿಹರ್ವೈಕುಂಠಪತಿ ಕೃಷ್ಣ ನೀ 3 ನಿಜಭಕ್ತರು ಕೈಬೀಸಿ ಕರೆಯಲು ರಜತಪೀಠದ ಪುರವಾಸ ಕೃಷ್ಣ ನೀ 4 ಸತ್ಯವಾದ ಜ್ಞಾನ ಪೂರ್ಣಾನಂದ- ತೀರ್ಥರ ಕರವಶವಾದ ಕೃಷ್ಣ ನೀ 5 ಅಂದಿಗೆ ಕಿರುಗೆಜ್ಜೆ ಘಲ್ಲು ಘಲ್ಲೆನುತ ಕಾ- ಳಿಂಗನ್ನ್ಹೆಡೆಯಲಿ ಕುಣಿದಾಡೊ ಕೃಷ್ಣ ನೀ 6 ದಾಸರ ಮನದಭಿಲಾಷೆ ಪೊರೈಸಿ ಭೀ- ಮೇಶಕೃಷ್ಣನೆ ದಯ ಮಾಡೊ ರಂಗ ನೀ 7
--------------
ಹರಪನಹಳ್ಳಿಭೀಮವ್ವ
ಕೋಲ ಕೋಲನ್ನ ಕೋಲ ಕೋಲ ಕೋಲನ್ನ ಕೋಲಕೋಲ ಹೊಯ್ದುಪಾಡಿ ನಮ್ಮ ಜಾಣರಂಗಗೆ ಪ. ಲೋಕನಾಯಕ ವ್ಯಾಸ ಮುನಿಗಳಿಗೆ ಏಕೋ ಭಾವದಿಂದ ನಮಿಸಿಹಾಕಿರೆಮ್ಮ ಕೋಲ ಹೊಯ್ದುವಾಕ್ಯಗೆಲಿಸೆಂದು1 ಮಿತ್ರೆ ರುಕ್ಮಿಣಿದೇವಿ ಕರೆದುಮಿತ್ರಾದಿಗಳಿಗೆ ಹೇಳಿದಳುಮುತ್ತಿನ ಕೋಲ ತೊಳಿಯಿರವ್ವಉತ್ತಮ ಜಲದೊಳು 2 ರಾಸ ಕ್ರೀಡೆಯಲ್ಲಿ ವನಿತೆಯರುವಾಸುದೇವ ಪಿಡಿದ ಕೋಲ ಸೋಸಿಲೆ ಪೂಜಿಸಿರಮ್ಮಲೇಸು ಕೊಡಲೆಂದು 3 ಮಂದಗಮನೆಯರೆಲ್ಲ ಕೋಲಿಗೆ ಗಂಧ ಅಕ್ಷತೆ ಏರಿಸಿರೆ ಮುಂದಾಗಿ ಬಲಗೊಳ್ಳಿರೆಲ್ಲವೃಂದಾರಕರನ್ನ4 ನಲ್ಲೆಯರು ಮುತ್ತಿನ ಕೋಲಿಗೆ ಮಲ್ಲಿಗೆ ಸಂಪಿಗೆ ಏರಿಸಿರೆಎಲ್ಲಾ ಫಲಗಳಿಟ್ಟು ಕೈಯ್ಯನಲ್ಲೆಯರು ಮುಗಿದಿರೆ 5 ಜಾಣೆಯರು ನೀವೆಲ್ಲ ಮೊದಲೆವಾಣಿಯ ಬಲಗೊಳ್ಳಿರೆ ಕಲ್ಯಾಣವಾಗಲೆಂದು ಕೈಯ್ಯಮಾಣಗೆ ಮುಗಿದಿರೆ 6 ಮೃಡನ ಮಗನ ಮೊದಲೆ ನೆನೆದುಪಿಡಿಯಿರಮ್ಮ ಕೋಲ ನಿಮ್ಮನುಡಿಯಗೆಲಿಸಲೆಂದು ದ್ರವ್ಯವಕೊಡಿರೆ ದಾನವ 7 ಇಂದು ಗೆಲಿಸೆಂದು 8
--------------
ಗಲಗಲಿಅವ್ವನವರು
ಕೋಲ ಕೋಲೆನ್ನಿ ಕೋಲ ಕೋಲ ಕೋಲೆನ್ನಿ ಕೋಲಕೋಲೆಂದು ಹರಿಯ ಪಾಡುವರು ಎಷ್ಟಪ. ನಾಗಶಯನನ ಮುಂದೆ ಪೂಗಿ ಫಲಗಳ ಇರಿಸಿನಾಗವೇಣಿಯರು ಸಾಗುವರು ಎಷ್ಟ 1 ಪಂಕಜಾಕ್ಷನ ಮುಂದೆ ಕುಂಕುಮ ಅರಿಷಿಣ ಪಿಡಿದುಕಂಕಣದ ಕೈಯ ಶಂಕಿನಿಯರೆಷ್ಟ2 ಅಂಬುಜಾಕ್ಷನ ಮುಂದೆ ತಾಂಬೂಲ ತಬಕಗಳುಸಂಭ್ರಮದಿ ಧರಿಸಿದ ರಂಭೆಯರು ಎಷ್ಟ3 ಮಂದಗÀಮನೆಯರ ಮುಂದೆಗಂಧ ಕಸ್ತೂರಿ ಪುನಗುಛsÀಂದದಲಿ ಧರಿಸಿ ಮುಂದಾಗÀುವರೆಷ್ಟ4 ಚಲ್ವ ರಂಗನ ಮುಂದೆ ಮಲ್ಲಿಗೆ ಹೂವಿನ ಝಲ್ಲೆಗಳ ಧರಿಸಿದ ನಲ್ಲೆಯರು ಎಷ್ಟ 5 ಬುಕ್ಕಿಟ್ಟು ಮೊದಲಾಗಿ ವಿಶಿಷ್ಠ ಪರಿಮಳ ಧರಿಸಿಕೃಷ್ಣರಾಯನ ಮುಂದೆ ನಡೆವೋರು ಎಷ್ಟ6 ಕ್ಯಾದಿಗೆ ಸಂಪಿಗೆ ಊದಿನ ಖಡ್ಡಿಗಳುಮುದದಲಿ ಧರಿಸಿ ಮುಂದಾಗುವರಷ್ಟ7 ಉತ್ತತ್ತಿಕದಳಿ ಜಂಬುದ್ರಾಕ್ಷ ಚೂತÀ ಫಲ ಹೊತ್ತುಹರುಷದಲ್ಲಿ ಮಿತ್ರೆಯರು ಸಾಗುವರೆಷ್ಟ8 ಹಾಲು ಮೊಸರಿನ ಕುಂಭ ಬಾಲೆಯರು ಧರಿಸುತ ಸಾಲು ಸಾಲಾಗಿ ಸಾಗುವರೆಷ್ಟ 9 ಬೆಂಡು ಬತ್ತಾಸ ದುಂಡುಗಡಲೆ ಕಬ್ಬುತಂಡ ತಂಡದಲಿ ಹಿಡಿದವರು ಎಷ್ಟ10 ರಂಗರಾಯನ ಮುಂದೆ ಗಂಗೋದಕ ಧರಿಸಿಶೃಂಗಾರದಿಂದ ಸಾಗಿದವರು ಎಷ್ಟ11 ಚಲ್ವರಮಿಅರಸಗೆ ಸಲ್ಲಿಸಬೇಕೆಂದುಕಲ್ಲು ಸಕ್ಕರೆ ಹೊತ್ತ ನಲ್ಲೆಯರು ಎಷ್ಟ 12
--------------
ಗಲಗಲಿಅವ್ವನವರು