ಭೀಮ ಭುಜಬಲೋದ್ದಾಮ
ಸವರಿದಿ ಕುರುಪನ ಕುಲವ ನಿಸ್ಸೀಮ ಪ
ವಿಷದಿ ಕಜ್ಜಾಯ ತಿನಿಸಿ ಮುಸುಕಿನಿಂ ಬಂಧಿಸಿ
ಎಸೆಯಲು ನದಿಯೊಳು ಕುಶಲದಿಂ ಬಂದೆಯೊ 1
ಜನನಿ ಗೌರಿಯ ವ್ರತವನು ಮಾಳ್ಪೆನೆಂದೆನಲು ಅಣ್ಣ
ನನುಮತಿಯಂತೆ ಘನ ಸುರಲೋಕ ಕೈದ್ಯೊ 2
ನಿರುತದಿಂ ಸುರಧೇನು ವರ ಪರುಷಮೃಗವನ್ನು
ಕರೆತಂದು ಗಜಗೌರಿ ವ್ರತವ ಪೂರೈಸಿದಿಯೊ 3
ಬಕನ ಮರ್ದಿಸಿ ಹಿಡಿಂಬಕನ ತರಿದು ಹಿಡಿಂ
ಬಿಕಿಯಳ ಕರಗ್ರಹಣ ಕೈಕೊಂಡ್ಯೊ ರಣಶೂರ 4
ಬಲ್ಲಿದತನದಿ ಆ ಖುಲ್ಲಕೀಚಕನೊದೆದು
ಪುಲ್ಲನಯನೆಯ ಕಾಯ್ದೊ ಬಲ್ಲಿದ ಶ್ರೀರಾಮನ ದೂತ 5