ಒಟ್ಟು 3159 ಕಡೆಗಳಲ್ಲಿ , 111 ದಾಸರು , 1823 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲ್ಲೆ ದುರಿತಗಳೊಲ್ಲೆ ಒಲ್ಲೆಫುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ ಪ. ದುರ್ಜನರ ಸಂಗವನೆಂದೆಂದಿಗೂ ಒಲ್ಲೆಸಜ್ಜನರ ವಿರಸಗಳೊಲ್ಲೆ ಒಲ್ಲೆಅರ್ಜುನಸಖ ನಿನ್ನ ಸೇವೆಯ ಬಿಡಲೊಲ್ಲೆಅಬ್ಜಬಾಣನ ಮೇಳ ಒಲ್ಲೆ ಒಲ್ಲೆನೊ ಸ್ವಾಮಿ 1 ಬಲ್ಲೆನೆಂಬೊ ಅಹಂಕಾರ ಎಂದೆಂದಿ[ಗೂ]ಒಲ್ಲೆಸಲ್ಲದ ಸುಖಗ[ಳ]ಒಲ್ಲೆ ಒಲ್ಲೆಬಲ್ಲಿದ ಹರಿ ನಿಮ್ಮ ಪಾದವ ಬಿಡಲೊಲ್ಲೆಕ್ಷುಲ್ಲದೇವರ ಪೂಜೆ ಒಲ್ಲೆ ಒಲ್ಲೆನೊ ಸ್ವಾಮಿ 2 ಹರಿನಾಮ ಸ್ಮರಣೆಯ ಮನದಿ ತೊರೆದಿರಲೊಲ್ಲೆದುರುವಿಷÀಯದಿ ಹರುಷ ಒಲ್ಲೆ ಒಲ್ಲೆಕರುಣ ಹಯವದನನ್ನ ಕಂಡಲ್ಲದೆ ಮಿಕ್ಕಕಾರುಣ್ಯದ[ಹವಣು]ಒಲ್ಲೆ ಒಲ್ಲೆನೊ ಸ್ವಾಮಿ 3
--------------
ವಾದಿರಾಜ
ಒಳ್ಯಾವರ ಕೇಳಿ ಉಳುವ ಉಪಾಯದ ಮಾತು ಧ್ರುವ ನಿಜ ಕಂಡು ಸುಖದಲಿ ಹೇಳ್ಯಾಡಿಕೊಳ್ಳುದು ಜಗದಲಿ ತಿಳಿದು ಮನದಲಿ 1 ಪಾಮರ ಹೊಡಹುಳ್ಳಿ ಉಳ್ಳವರ ಪಾದಕೆ ಬಲಗೊಳ್ಳಿ ಕಳೆದುಹೋಗುದು ತಳ್ಳಿ 2 ಮಹಿಪತಿ ಸ್ವಧನ ಹೊಳೆವುತದೆ ಸದ್ಗುರುಕರುಣ ಬಲಗೊಂಬುದು ಪೂರ್ಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಓಡದಿರು ಓಡದಿರು ಖೋಡಿ ಮನವೆ ಮೂಢತನದಲಿ ಬರುವ ಕೇಡುಗಳನರಿದರಿದು ಪ. ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ ಬೀಸುವನು ಬೇಡನೊಬ್ಬನು ಬಲೆಯನಿಕದಕೊ1 ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು ಒತ್ತಿ ಮೋಹದಿ ವಹಿಸಿಕೊಂಡಿರುವಳು ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ ತುತ್ತಾಗ ಎನುತ ಬಾಯ್ ತೆರೆದಿರುವಳು 2 ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು ಹಂಗಿಗನು ನೀನಾಗಿ ಬೇಡ ಅವರ ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ 3 ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ ಏಳು ಮೆಟ್ಟಲ ದಾಂಟಿ ಲೋಲತನದಿ ಅಲದೆಲೆ ಮಂಚದಲಿ ಲೋಲನಾಗಿಹನ ಪದ ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ 4 ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು ಭೂರಿ ಮಾಯಾಭ್ರಾಂತಿಗೊಳಗಾಗದೆ ಕಾರಣಿಕ ಲಕ್ಷ್ಮೀನಾರಾಯಣನ ಪಾದ ವಾರಿಜದಿ ನಲಿದು ಸುಖಿಯಾಗು ನೀ ಮನವೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಓಡದಿರು ಓಡದಿರು ಖೋಡಿ ಮನವೆ ಮೂಢತನದಲಿ ಬರುವ ಕೇಡುಗಳನರಿದರಿದುಪ. ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ ಬೀಸುವನು ಬೇಡನೊಬ್ಬನು ಬಲೆಯನಿಕದಕೊ1 ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು ಒತ್ತಿ ಮೋಹದಿ ವಹಿಸಿಕೊಂಡಿರುವಳು ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ ತುತ್ತಾಗ ಎನುತ ಬಾಯ್ ತೆರೆದಿರುವಳು 2 ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು ಹಂಗಿಗನು ನೀನಾಗಿ ಬೇಡ ಅವರ ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ 3 ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ ಏಳು ಮೆಟ್ಟಲ ದಾಂಟಿ ಲೋಲತನದಿ ಅಲದೆಲೆ ಮಂಚದಲಿ ಲೋಲನಾಗಿಹನ ಪದ ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ4 ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು ಭೂರಿ ಮಾಯಾಭ್ರಾಂತಿಗೊಳಗಾಗದೆ ಕಾರಣಿಕ ಲಕ್ಷ್ಮೀನಾರಾಯಣನ ಪಾದ ವಾರಿಜದಿ ನಲಿದು ಸುಖಿಯಾಗು ನೀ ಮನವೆ5
--------------
ತುಪಾಕಿ ವೆಂಕಟರಮಣಾಚಾರ್ಯ
ಓಹೊ ಎನ ಜೀವ ಮೈಯೆಲ್ಲ ನವಗಾಯ ಪ ಗಾಯ ಕಟ್ಟುವರಿಲ್ಲ ಗಾಳಿ ಹಾಕುವರಿಲ್ಲ ಅ ಮಾಡಿಲ್ಲ ಮಳೆಯಿಲ್ಲ ಮರದ ಮ್ಯಾಲೆ ನೀರ ಕಂಡೆಕಾಡು ಸುಡುವುದ ಕಂಡೆ ಬೂದಿಯ ಕಾಣಲಿಲ್ಲ 1 ಬಿತ್ತಲಿಲ್ಲ ಬೆಳೆಯಲಿಲ್ಲ ನೆಟ್ಟು ನೀರ ತೋರಲಿಲ್ಲಹೊತ್ತುಕೊಂಡು ತಿರುಗಿದೆ ರೊಕ್ಕದಾ ಪ್ರಾಣಿಯನ್ನು 2 ಅಡಿಕೆಯಷ್ಟು ಆಕಳಣ್ಣ ಹಿಡಿಕೆಯಷ್ಟು ಕೆಚ್ಚಲಣ್ಣಒಡನೆ ಕರೆದಾರ ಕರಿತೈತಿ ರಂಜಣಿಗಿ ಹಾಲಣ್ಣ 3 ಮೂರು ಮೊಳದಾ ಬಳ್ಳಿಗೆ ಆರು ಮೊಳದ ಕಾಯಣ್ಣಆರು ಹತ್ತರ ಮೊಳದ, ಕಾಯಿ ಕೊಯ್ಯುವ ಕುಡುಗೋಲಣ್ಣ 4 ಊರ ಮುಂದೆ ಹಿರಣ್ಯಕನ ಕೊರಳ ಕೊಯ್ವುದ ಕಂಡೆಕೊರಳ ಕೊಯ್ವುದ ಕಂಡೆ ರಕುತವ ಕಾಣಲಿಲ್ಲ 5 ಕಾಗಿನೆಲೆಯ ಕನಕದಾಸ ಹೇಳಿದಂಥ ಮುಂಡಿಗೆಯಮಿಗೆ ಒಳ ಹೊರಗೆಲ್ಲ ಬಲ್ಲ ಬಾಡದಾದಿ ಕೇಶವರಾಯ 6
--------------
ಕನಕದಾಸ
ಕಂಗಳಿಗೆ ಹಬ್ಬವಾಯಿತಯ್ಯಮಂಗಳಾತ್ಮಕ ಪುರಂದರದಾಸರನು ಕಂಡು ಪ ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು 1 ಇವರ ನರರೆಂದವರು ನರಕದಲಿ ಬೀಳುವರುಕವಿಜನರು ಒಪ್ಪಿ ಕೈಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು 2 ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿಮಾನ್ಯನಾದೆನು ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು 3
--------------
ವ್ಯಾಸರಾಯರು
ಕಂಜನಯನನ ಕಂಡೆ ಕಾಮನಯ್ಯನ ಪ. ಮಂಜುಗುಣಿಯೊಳಿಪ್ಪನ ತಿಮ್ಮಪ್ಪನಅ.ಪ ಪುಟ್ಟ ಪಾವುಗೆಯೊಳ್ಮೆಟ್ಟಿ ತೊಟ್ಟಂಬುಚಕ್ರವಕಟ್ಟಿದ ಕಠಾರಿಯಿಂದ ದುಷ್ಟರ ಹುಡಿಗುಟ್ಟುವ 1 ಚಕ್ರ ಶಂಖಧರನಾಗಿ ಕಕ್ಕಸರ ರಕ್ಕಸರಶಿಕ್ಷಿಸಿ ಶಕ್ರಮುಖ್ಯರ ಅಕ್ಕರಿಂದ ರಕ್ಷಿಸುವ 2 ಆಗಮವೈರಿಯನು ಕೊಂದಾಗ ಹಯವದನನ್ನಈಗ ಮಾನಿಸರಿಗೆ ಸೌಭಾಗ್ಯವೀವ ದೇವನ3
--------------
ವಾದಿರಾಜ
ಕಂಜಾಕ್ಷ ಹರಿಯ ಕಂಡಲ್ಲದೆ ಈಪಂಜರದಿ ಈ ಗಿಣಿ ನಿಲ್ಲದೆ ಪ. ಬಾಲತÀನದಲ್ಲಿ ಮನೆಮನೆಯ ಪೊಕ್ಕುಪಾಲಕುಡಿದನು ಮನದಣಿಯಲಾಲಿಸಿದವನು ಇನ್ನು ಮುನಿಯಲೋಲಾಕ್ಷಿ ಬಿಡನ್ಯಾಕೀ ಗÀಸಣೆಯ 1 ಏಳುವರುಷದ ಶಿಶು ಪೋಗಿಆಲಸ್ಯ ಹಸುತೃಷೆÉಯ ನೀಗಿಶೈಲವಾಗಿ ನಿಂತಿದ್ದ ನಮಗಾಗಿಕಾಲಮ್ಯಾಲೆ ಬಿದ್ದನಿಂದ್ರ ಬಾಗಿ 2 ಕಾಳಿಂದಿಯ ಮಡುವಿನೊಳಾಡಿಕಾಳಿಯಾ ನಾಗಗೆÉ ಮದ ಹುಡಿಮೇಲೆ ಅವರೊಳು ಕೃಪೆಮಾಡಿಪಾಲಿಸಿದ ಕರುಣದಿ ನೋಡಿ3 ಪಾರಿಜಾತದ ಪೂಗಳ ತಂದುನಾರದ ಮುನೇಂದ್ರ ತಾನೆ ಬಂದುಸಾರಿದನಲ್ಲೆ ಗತಿ ನೀನೆಂದುನರ ಸುರರುಗಳಿಗೆ ಬಂಧು 4 ವೃಂದಾವನದೊಳಿವನ ಲೀಲೆ ಆ-ನಂದವನುಣಿಸಿತೆಲೆ ಬಾಲೆಎಂದವನ ಕತೆ ಕರ್ಣದೋಲೆ ಹಾ-ಗೆಂದು ಭಾವಿಸೆ ಪುಣ್ಯಶೀಲೆ 5 ಸಕಲ ಸುರರ ಶಿರೋರನ್ನಮುಕುತಿದಾಯಕ ಸುಪ್ರಸನ್ನಶ್ರೀಕೃಷ್ಣ ಅಟ್ಟಿದ ಉದ್ಧÀ್ದವನ್ನ ಬಂದುವಾಕು ಕೇಳಿ ಮನ್ನಿಸಿಯವನ6 ಚೆಲ್ವ ಹಯವದನನ್ನ ನೀರೆ ನಮ್ಮನಲ್ಲನವನಿಲ್ಲಿ ಬಾರದಿರೆಸುಲಭನ್ನ ಬೇಗ ಕರೆತಾರೆ ನಾ-ವೆಲ್ಲರವನಲ್ಲಿ ಹೋಹ ಬಾರೆ 7
--------------
ವಾದಿರಾಜ
ಕಟಕಟಾ ಕಂಡೆವಲ್ಲಾ ಕುಟಿಲವರ್ತನ ಕೆಲಕೆಲವು ಈ ಕಲಿಯುಗದೀ ಪ ಮಳೆಯಿಲ್ಲ ಬಂದರಿಳೆ ಬೆಳೆಯದು ಬೆಳೆಯೆ ಧರಣಿ ಹುಲಿಸಿಲ್ಲ ಹುಲಿಸಾದರಿಲ್ಲಾ ಪ್ರಜೆಗೇ ಸಲುವಕೋರಲ್ಪವನು ಬಿಡರು ರಾಜರುಗಳ ಹಾ ವಳಿಯಲುಳುಹಿಲ್ಲ ಇನ್ನೆಂತು ಕೃಷಿಕರಿಗೇ 1 ಧನವಗಳಿಸಿಯೆ ಪಡುವುದನ್ಯಾಯವೇ ಮೊದಲು ಮನವರಿತು ಪಾತಕಂಗಳ ಮಾಡುತಿಹರೂ ಇನಿತು ಗಳಿಸಿದ ಕೃತ್ಯದರ್ಥಕ್ಕೆ ಚೋರರು ಜನಪರೊಡೆಯರು ಬಯಲಮಮತೆಗಳ ಬಿಡರೂ 2 ಕಕ್ಕುಲತೆ ಪರನಿಂದೆ ರಾ ಕ್ಷಸಕೃತ್ಯ ಹಿಂಸೆ ಮತ್ಸರ ಅನಾಚಾರಾ ಕುಹಕ ಕುಟಿಲ ಕುಮದ ಸ್ವಾಮಿದ್ರೋಹ ವಸುಮತಿಯ ಸುರರ ವಧೆ ಘನವಾಯಿತಲ್ಲಾ 3 ತೊಡುವೊಡವೆಗಳ ಬೇಡಲೊಡನೆರಡು ಕಂಗಳಲಿ ಕಿಡಿಸೂಸಿ ಬಾಯಿ ನೊರೆಸುತ್ತಿ ಘರ್ಜಿಸುತಾ ಜಡಿವ ಕೋಪದಿ ಮಧುಪರಂತೆ ಜರೆವೀ ಬಾಯಿ ಬಡುಕರೇ ಮೇದಿನಿಗೆ ಹೊರೆಯಾದರಲ್ಲಾ 4 ರಸನಬಿಡುವರು ಕಸವಪಿಡಿವರೊರೆಯನು ಪಿಡಿದು ಬಿಸುಡುವರಲಗ ಪರುಸವನು ಬಿಟ್ಟು ಕಲ್ಲಾ ಒಸೆದು ಬಿಡುವರು ಶ್ರೀ ವೈಕುಂಠಕೇಶವನಿರಲು ನುಸಿ ದೈವಗಳ ಭಜಿಸಿ ಹಸಗೆಡುತಲಿಹರೂ 5
--------------
ಬೇಲೂರು ವೈಕುಂಠದಾಸರು
ಕಂಡ ಕಂಡದ್ದು ಅದು ಔಷಧವಲ್ಲವೋ ಗಿಂಡಿ ಗಿಂಡೀದು ಅದು ತೀರ್ಥವಲ್ಲವೋ ಪ ಮೂರು ವರ್ಗಂಗಳಿಗೆ ಆರು ವೈರಿಗಳು ತೋರುತ್ತಿರುವÀರೆಂತೋ ಬೇರೆಯಾಗಿ 1 ಈ ರೀತಿಯಿಲ್ಲದೆ ಬೇರೊಂದು ತಿಳಿವರೆ ಮೂರು ವಿಧ ಬೇವÀರಿಗಾರು ಫಲಪ್ರದರು 2 ಮಾರಜನಕ ಹರಿ ಪಾರ್ವತೀಧವರಿವರು ಬೇರೆ ಎಂಬರಿತೆವೊ ಬಾರದೆ ಸರಿಯಾಗಿ 3 ಇಳೆಯ ಮೇಲಿರುತಿಹ ಜಲಾಶಯಗಳು ಬಳಿಕೆಗೋಸುಗ ತಾವಿಳದಿಹವಲ್ಲದೆ 4 ನಳಿನನಾಭನ ಪೂಜಾಗಳಿಗೆ ಬಾಂಬೊಳೆಯ ಮೈಲೆನಿಪದಲ್ಲದೆ ಮಿಕ್ಕಿಸಲು ಉಂಟೆ 5 ಚಿತ್ತಶುದ್ಧಿಯನೈದಿ ಉತ್ತಮ ಜಲದಿ ಮಿಂದು ಚಿತ್ತಜÀ್ಹನೈಯನ ಮಜ್ಜನಗೈಯಲು ಹತ್ತಾವತಾರನ ಮತ್ತೆ ಪೂಜೆಯ ಗೈದು ಉತ್ತಮ ಪದ ಸೇವಿಪುದೇ ತೀರ್ಥಾ 6 ಶಿರಿವರ ಪದಜಲ ವರ ತುಲಸೀದಲ ಬೆರೆÀಸಿ ಪಾವÀನ ಗೈಯೆ ಇರುವುದೆ ರೋಗವು ಉರಗಶಯನ ಶ್ರೀ ನರಸಿಂಹ ವಿಠಲನು ಪರಮ ವೈದ್ಯನು ತನ್ನ ಶರಣರಿಗೇ 7
--------------
ನರಸಿಂಹವಿಠಲರು
ಕಂಡ ದೈವಕ್ಕೆ ಕಂಗೆಟ್ಟು ಕೈ ಮುಗಿದು | ದಣಿದಿಯಾತಕೋ ಪ ಶರಧಿ ಗರ್ವ ಪರಿಹರನಸೇರಿ ಹೋದ ದಿವಿಜರ ಬಿಡಿಸಿ ಸಿರಿಯಿತ್ತು ಸಲಹಿದಾತನ 1 ಸುರರು ಪೊಗಳಲು |ಹುರುಳಿಲ್ಲದ ಭವವನಳಿದು ಪರಮ ಪದವಿಯನಿತ್ತನ 2 ವೈರಿ ತಮ್ಮಗೆ |ರುಕ್ಮನಗರ ಧಾರೆಯೆರೆದ ಶ್ರೀ ರಾಮಚಂದ್ರನ 3
--------------
ರುಕ್ಮಾಂಗದರು
ಕಂಡದಿಲ್ಲದ ಚಿತ್ರ ನಾ ಕಂಡೆ ಪ ಕೋತಿ ಸತ್ತುದ ಕಂಡೆ ಕೋಣನಳಿದುದ ಕಂಡೆಮಾತಿಗೆ ಬಾರದ ನಾಯ ಹರಿ ತಿಂಬುದ ಕಂಡೆ 1 ಕಾಗೆ ಕಣ್ಣು ಹೋದುದ ಕಂಡೆ ಕಳ್ಳರ ತಲೆ ಬಿದ್ದುದ ಕಂಡೆಕೋಗಿಲೆ ಕೊನೆಯಲಿ ಕೂಗಿದುದ ಕಂಡೆ 2 ಮರವ ಕಡಿದುದ ಕಂಡೆ ನೆರಳಲಿ ನಿಂತುದ ಕಂಡೆಬರಿಯ ವೋಡಲಿ ಹಾಲ ಕರೆದುಂಬುದ ಕಂಡೆ 3 ನೀರ ಮೇಲೆ ಒಲೆ ಉರಿವುದ ಕಂಡೆಮೇರುವಿನ ಶಿಖರದಿ ಜ್ಯೋತಿಯ ಕಂಡೆ 4 ಇರುಳು ಹಗಲು ಒಂದಾಗಿ ಇರುವುದ ಕಂಡೆಗುರು ಚಿದಾನಂದ ಬ್ರಹ್ಮವ ಗುರುತಿಲ್ಲದ ಕಂಡೆ5
--------------
ಚಿದಾನಂದ ಅವಧೂತರು
ಕಂಡದ್ದು ಬಯಸಿ ಕಂಗೆಡು ಬೇಡಾ ಪಾದ ಬಿಡಬೇಡಾ ಪ ಕಾಲನಿನ್ನದಲ್ಲ ಕಡುಮೂರ್ಖ ಆ ಕಾಲ ಪುರುಷ ಮಾಡಿದನೇಕಾ ಪರಿಗಳಿಂದ ಇನ್ನು ಯಾಲೋಕಾದಲಿ ನಡುವುದಲ್ಲಾ ಸುಖದು:ಖ ಪಾಲಿಗೆ ಬಂದದ್ದು ಬಿಡದನಕಾ ಪ್ರಾಪ್ತಿ ಇದ್ದಷ್ಟೇ ಇಲ್ಲಧಿಕಾ ಶ್ರೀಲೋಲನ ನೀನಿರುವತನಕಾ ಸ್ಮರಿಸದೆ ಇರಬೇಡ ಅವಿವೇಕಾ 1 ಘಣಿಯಲ್ಲಿ ಬರದದ್ದು ತಪ್ಪದಲ್ಲೆ ಜಗ ಭಗವಂತ ನೀ ಮಾಡಿದಲ್ಲೆ--- -------- ನಿನ್ನದಲ್ಲೆ ಅನುಗ್ರಹ ಮಾಡುವ ಭರದಲ್ಲೆ ನಗಧರನಾ ನಾಮ ಬಲದಲ್ಲೆ ಅಘಗಳ ಕಳಿ ನೀ ತೀವ್ರದಲ್ಲೆ 2 ಇಷ್ಟಾರ್ಥ ನೀ ಮಾಡಬೇಕಂದಿ ಸಂಚಿತ ಎಲ್ಲೆಂದಿ ಕಷ್ಟವ ಪಡಕೊಂಡು ನೀ ಬಂದಿ ಕಾಮಕೆ ಸುಖವು ಇಲ್ಲೆಂದಿ ಇಷ್ಟದಿ ಶ್ರೀ ಹರಿ ಪದಹೊಂದಿ ಇರದೆ ನೀ ಇರಬೇಡಾ ಇಬ್ಬಂದಿ ಸ್ಪಷ್ಟದಿ 'ಹೊನ್ನಯ್ಯ ವಿಠ್ಠಲಂದಿ’ ಸಾರ್ವದಿ ಮುಂದಕ ನೀ ಬಂದಿ3
--------------
ಹೆನ್ನೆರಂಗದಾಸರು
ಕಂಡರ ಕಾಣಬೇಕು ಮಂಡಲ ದೊಡೆಯನ ತುಂಡ ಮುಂಡಾಗ್ಹೋಗುದು ಖಂಡಿ ತಾಗ್ಯನುಮಾನ ಧ್ರುವ ಕಾಣುವದೊಂದೆ ಖೂನ ಜ್ಞಾನಾಗಬೇಕು ಪೂರ್ಣ ಸ್ವಾನುಭವದ ಸ್ಥಾನ ತಾನೆ ಗುರು ನಿಧಾನ 1 ಸಾಧಿಸಲಿಕ್ಕ್ಯುಪಾಯ ಇದೆ ಸದ್ಗುರು ಕೈಯ ಬೋಧಿಸುವ ನಮ್ಮಯ್ಯ ಆದಿತತ್ವದ್ಹಾದಿಯ 2 ತನ್ನಿಂದ ತಾನೆ ಎಂದು ಕಣ್ಣಿನೊಳಾದ ಸಿಂದು ಧನ್ಯಗೈಸಿದ ಮಹಿಪತಿ ಗುರು ಕೃಪಾಸಿಂಧು3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡಳು ಶ್ರೀ ಹರಿಯ ಶತಮಾ- ರ್ತಾಂಡ ತೇಜೋನಿಧಿಯ ಪ. ಪುಂಡರೀಕಾಂಬಕನ ಪೂರ್ಣಾ- ಖಂಡ ಜಗನ್ಮಯನ ಅ.ಪ. ಶಂಖಚಕ್ರಾಂಕಿತನ ಧ್ವಜವ- ಜ್ರಾಂಕುಶಪದಯುಗನ ಶಂಕರಹಿತಕರನ ಕೌಸ್ತುಭಾ- ಲಂಕೃತಕಂಧರನ 1 ಮಕರಕುಂಡಲಧರನ ಸಜ್ಜನ ನಿಕರೇಷ್ಟಪ್ರದನ ಪ್ರಕೃತಿನಿಯಾಮಕನ ಸತ್ಯಾ- ತ್ಮಕ ಪೀತಾಂಬರನ 2 ಅಕ್ಷಿಗೋಚರನ ಭಕ್ತರ ಪಕ್ಷದೊಳಿರುತಿಹನ ಪಕ್ಷೀಂದ್ರವಾಹನನ ಶ್ರೀಹರಿ ಲಕ್ಷ್ಮೀನಾರಾಯಣನ 3
--------------
ತುಪಾಕಿ ವೆಂಕಟರಮಣಾಚಾರ್ಯ