ಜಂಗಮನು ಇಂತಿವನು ಸರ್ವಸಂಗ ದೂರಾದವನೀಗ ಜಂಗಮ ಪ
ತನ್ನ ತಿಳಿದು ತಾನಾದವ ಜಂಗಮ ಜಗವಭಿನ್ನವೆಂದು ಕಾಣದವ ಜಂಗಮಹೊನ್ನು ಹೆಣ್ಣು ಬಿಟ್ಟವನು ಜಂಗಮ ಸಂ-ಪನ್ನ ಸಾಧು ಸಂಗವಿಹ ಜಂಗಮ 1
ಒಳಗೆ ಹೊರಗೆ ಒಂದಾದವ ಜಂಗಮ ಎಲ್ಲಹೊಳೆವುದೊಂದೆ ಜ್ಯೋತಿಯು ಎಂಬುವ ಜಂಗಮಹೊಲೆಯು ಶುದ್ಧವ ಕಳೆದವ ಜಂಗಮ ಎನಗೆಕುಲವು ಛಲವು ಇಲ್ಲವೆಂಬುವ ಜಂಗಮ 2
ಅಂಗ ಲಿಂಗವಾಗಿಹ ಜಂಗಮಲಿಂಗ ಅಂಗ ಏಕವಾಗಿಹ ಜಂಗಮಮಂಗಳವೇ ನಿತ್ಯವಿಹ ಜಂಗಮ ಗುರುಲಿಂಗವಾದ ಚಿದಾನಂದ ಜಂಗಮ 3