ಒಟ್ಟು 56123 ಕಡೆಗಳಲ್ಲಿ , 139 ದಾಸರು , 12212 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಜಯ ಸಕಲಾಧಾರಾ | ಕೃಷ್ಣ ಜಯ ಜಯ ಭಕ್ತೋದ್ಧಾರಾ ಜಯಸಕಲಾಲಂಕಾರಾ | ಕೃಷ್ಣಾ ಯಮುನಾ ವೇಗ ಸಂಹಾರಾ ಜಯ ಜಯ ನಂದಕುಮಾರಾ ಕೃಷ್ಣ ಜಯ ಜೀಮೂತ ಶರೀರಾ ಪ ದೇವಕೀಕುಮಾರಾ ನಿಗಮಗೋಚರಾ ಶಂಖಚಕ್ರಧರ ವಸುದೇವಾನಂದಕರ ಸುರುಚಿರ ಪೀತಾಂಬರಧರ 1 ನಯನ ಮನೋಹರ ಗೋಪೀ ಮಂದಿರ ಸರಸಿಜ ದುರುಳ ಭಯಂಕರ ಶಕಟ ಬಕಾಂತಕ ಶೂರಾ ಕೃಷ್ಣ ಪೂತನಿ ಸಂಹಾರಾ ಅಜ ಸುರ ಮುನಿ ಪರಿವಾರ2 ಧೇನುಕ ದೈತ್ಯವಿದಾರಾ | ಕೃಷ್ಣ ಮರಕತ ಮಣಿಮಯ ಹಾರಾ ತರುಣೀ ಮಣಿಗಣನಿಕರಾ | ಕೃಷ್ಣ ಸರಸಿಜಲಸದಾಕಾರಾ ನವನೀತಕರಾ ಘನ ಮುರಳೀಧರ | ಕುಂಜವಿಹಾರಾ ವಿಷಧರ ಭಯಹರ ಗೋವರ್ಧನಧರ | ಮುಷ್ಟಿಕ ಮಧುರಾ 3 ವಿಹಾರಾ | ಕೃಷ್ಣ ನಾದಾನಂದ ಪ್ರಚಾರಾ ಅಕ್ರೂರಾನತ ಚರಣಾ | ಕೃಷ್ಣ ಮುನಿಜನ ಹೃದಯಾಭರಣ ಕುಬ್ಜಾವಂದಿತ ಚರಣ | ಕೃಷ್ಣ ಘನಮಹಿಮಾ ವಿಸ್ತರಣ ಗೋಪೀಜನಗಣ ಮೌಢ್ಯನಿವಾರಣ 4 ದುರುಳ ವಿದಾರಣ | ಭವಜನಕರುಣ ಹಲಧರ ಭುಜಬಲ ಪ್ರಾಣಾ ಕೃಷ್ಣ ಬೃಂದಾರಕಗಣ ಪ್ರಾಣ 5 ಶಿಶುಪಾಲೋತ್ಸವ ಬಾಣಾ | ಕೃಷ್ಣ ರುಕ್ಮ ಲೋಭ ಮದ ಯಾಣಾ ಅರಿಕುಲ ಸೈನ್ಯ ಕೃಪಾಣಾ | ಕೃಷ್ಣ ಚತುರೋಪಾಯ ಪ್ರವೀಣಾ ರುಕ್ಮಿಣೀರಮಣ ಶುಭಕರಕಂಕಣ ಪಾಂಡವಪೋಷಣ ಹರಣ ಚಕ್ರವಿಭೂಷಣ6 ದ್ರುಪದಸುತಾನತಚರಣಾ | ಕೃಷ್ಣ ಪರಮಾನಂದಾವರಣ ವಿದುರಾನತ ನೀಲಾಂಗ | ಕೃಷ್ಣ ಕರಧೃತವ್ಯರಥಾಂಗ ಕುರುಕುಲ ವನ ಸಾರಾಂಗಾ | ಕೃಷ್ಣ ಗೀತಾವನಜತರಂಗಾ ಕಮಲಾ ಅಂಗ | ಸತ್ವ ತುರಂಗಾ | ಧರ್ಮವಿಹಂಗಾ 7 ಮಾಂಗಿರಿ ರಂಗ ಸುಧಾಂಗಾ ಶುಭಾಂಗ | ಜಯ ಜಯ ಮಾಂಗಿರಿ ರಂಗಾ | ಕೃಷ್ಣ ಜಯ ಜಯ ಗರುಡ ತುರಂಗಾ 8
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ಜಯ ಸ್ವರಸತಿ ಜಯವರ ಪೂರಣಮತಿ ತ್ರಯಲೋಕ್ಯದಲಿ ಖ್ಯಾತಿ ಜಯ ಸುಕೀರ್ತಿ ಧ್ರುವ ವಿದ್ಯಾವರದಾಯಿನಿ ಸಿದ್ಧಿಗೆ ಶಿಖಾಮಣಿ ಬುದ್ಧಿ ಪ್ರಕಾಶಿನಿ ಸದ್ಭೂಷಿಣಿ 1 ಕರಕಮಲದಲಿ ವೀಣೆ ಸುರಸ ಅಮೃತವಾಣಿ ವರವಿದ್ಯದಲಿ ದಾನಿ ಸುಪ್ರವೀಣೆ 2 ಪ್ರಸನ್ನವದನಿ ವಿಶ್ವದಲಿ ನೀ ಪೂರ್ಣೆ ಹಂಸವಾಹಿನಿ ಪೂರ್ಣಿ ಸ್ವಸಿದ್ಧಿಣಿ 3 ಸದಾ ಸದ್ಗುರುಸ್ತುತಿ ಒದುಗುವ್ಹಾಂಗ ಸ್ಫೂರ್ತಿ ಇದೇ ಮಹಿಪತಿ ಕುರ್ತಿ ಬೋಧಿಸುವ ಮತಿ4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯರಾಘವೇಂದ್ರ ಸಜ್ಜನಪಯೋನಿಧಿಚಂದ್ರ ಜಯದೇವ ಭೂಸುರವೃಂದ ಸುಗುಣಸಾಂದ್ರ ಪ. ದಶಕಂಠ ಕುಲಕಾಲ ದಾನಶೀಲ ಶಶಿಮೌಳಿಧನುರ್ಭಂಗ ಭುವಿಜಾ ಮನೋಹರಾಂಗ [ಋಷಿ] ಮನೋಂಬುಜಭೃಂಗ ಕರುಣಾಂತರಂಗ 1 ಶ್ರೀಕಾಮಿನೀಸದನ ಭೂವೈಕುಂಠ [ಕಾರಣ] ಶ್ರೀ ಕೌಸ್ತುಭಾ ಭರಣ ಶೇಷಗಿರಿರಮಣ 2
--------------
ನಂಜನಗೂಡು ತಿರುಮಲಾಂಬಾ
ಜಯ ಜಯವೆನ್ನಿ ಕೈಯ ಮುಗುಬನ್ನಿ ದಯವುಳ್ಳ ಮಹಿಮಗಾರುತಿ ಮಾಡುವ ಬನ್ನಿ ಧ್ರುವ ಮನವೆ ಬತ್ತಿ ತನುವಾರತಿ ಘನಕೆ ಮಾಡವ ಬನ್ನಿ ನೆನವು ತುಪ್ಪ ಙÁ್ಞನದೀಪವನ್ನು ಬೆಳಗುವ ಬನ್ನಿ 1 ಭಾವಗುಟ್ಟು ಠಾವಿಲಿಟ್ಟು ದೈವ ನೋಡು ಬನ್ನಿ ಮಾವಮಕರಗುಣ ಬಿಟ್ಟು ಸೇವೆಮಾಡು ಬನ್ನಿ 2 ಮಹಿಪತಿಸ್ವಾಮಿಗಿನ್ನು ಜಯಜಯವೆನ್ನಿ ಬಾಹ್ಯಾಂತ್ರ ಬೆಳಗಿ ಪೂರ್ಣ ಧನ್ಯವಾಗು ಬನ್ನಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿ ಗುರು ಜಗದೀಶಗೆ ಜಯ ಜಯ ಜಗತ್ರಯ ಪಾವನಗೆ ಧ್ರುವ ಆನಂದೊ ಬ್ರಹ್ಮ ಆನಂದ ಕಂದಗೆ ಅನುದಿನ ಜಯ ಜಯ ಅನುಪಮಗೆ ಸನಕ ಸನಂದನ ವಂದಿತಗೆ ಮುನಿಜನ ಹೃದಯ ನಿವಾಸಗೆ 1 ನಿತ್ಯ ನಿರ್ಗುಣಗೆ ಅಗಣಿತಗುಣ ಪರಿಪೂರ್ಣಗೆ ಝಗಿಝಗಿಸುವ ಜಗನ್ಮೋಹನಗೆ ಜಗಜ್ಜೀವ ಜಗದಾತ್ಮಗೆ 2 ಜಯ ಜಯ ಮಂಗಳ ಮಹಾಮುನಿಗೆ ಮಹಿಮಾನಂದ ಗುರುಮೂರ್ತಿಗೆ ಮಹಿಪತಿ ಸ್ವಾಮಿ ಸರ್ವೋತ್ತಮಗೆ ಜಯ ಜಯವೆನ್ನಿರೊ ಜಗದೊಳಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿ ಸ್ವಾಮಿ ಶ್ರೀಹರಿಗೆ ದಯೆಯುಳ್ಳ ಮಹಿಮ ಶ್ರೀಮುಕುಂದ ಮುರಾರಿಗೆ ಧ್ರುವ ಭಾವಿಸಿ ನಿಮ್ಮೊಳಗೆ ದೇವಾಧಿ ಶ್ರೀದೇವಿಗೆ 1 ಅನುಭವಿಸುವ್ಹಾಂಗೆಂದೆಂದು ಮನೋಮಂದಿರಕೆ ತಂದು 2 ಕಾಣುವನ ಕಂಡು ನೋಡಿ ಕಾಣಿಸಿಕೊಂಬ್ಹಾಂಗೆ ಮಾಡಿ 3 ಪಾವನಗೈಸುವ ದೇವಗೆ ಕಾವ ಕರುಣನಿಧಿಗೆ 4 ಸಿರಿ ಸುಖಲೋಲಗೆ 5 ಅಂತರಾತ್ಮಲಿಹಗೆ ಸಂತತ ಸದೋದಿತಗೆ 6 ಭಾನುಕೋಟಿ ತೇಜಗೆ ದೀನಮಹಿಪತಿ ಸ್ವಾಮಿಗೆ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆನ್ನಿರೊ ಶ್ರೀ ಗುರುವಿಗೆ ದಯಾಸಿಂಧು ಶ್ರೀಸ್ವಾಮಿ ಸದ್ಗುರುವಿಗೆ ಧ್ರುವ ಗುಹ್ಯಗುರುತ ದೋರುವ ಗುರುಮಣಿಗೆ ಮಾಯರಹಿತ ನಿರಾಳ ನಿರ್ವಾಣೆಗೆ ತ್ರೈಲೋಕ್ಯವಂದಿತ ವರಮುನಿಗೆ ದಯಯುಳ್ಳ ಶ್ರೀ ದೇವಶಿಖಾಮಣಿಗೆ 1 ತ್ರಿಗುಣಾತೀತ ತಾರಕ ನಿರಂಜನಗೆ ಝಗಿ ಝಗಿಸುವ ಜಗನ್ಮೋಹನಗೆ ಜಾಗಿಸುವ ಜಗತ್ರಯ ಜೀವನಿಗೆ ಯೋಗಿಜನ ಧ್ಯಾಯಿಸುವ ನಿರ್ವಾಣೆಗೆ 2 ಜಯ ಜಯವೆನ್ನಿರೊ ಗುರುಮೂರ್ತಿಗೆ ಇಹಪರ ಪೂರ್ಣ ಪರಂಜ್ಯೋತಿಗೆ ಬಾಹ್ಯಾಂತ್ರ ಭಾಸುವ ಶ್ರೀಪತಿಗೆ ಮಹಿಪತಿಯ ಶ್ರೀ ಸ್ವಾಮಿ ಜಗತ್ಪಿತಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯವೆಂಬೆ ನಾನು ಶ್ರೀವರ ನಿನಗೆ ಪ ಜಯವೆಂಬೆ ಶ್ರೀವರನೆ ಭಯ ದೋಷವರ್ಜಿತನೆ ಅಯನ ವತ್ಸರಗಳೆಂಬ ನಿಯಮವು ಇಲ್ಲದವನೆ ಅ.ಪ. ತಿರುಗಿಣಿ ಪಾಲಿಸುವಿ ಪಾಲಗಡಲಿನಲ್ಲಿ ಆಲದೆಲೆಯಮೇಲೆ ಕಾಲನು ನೀಡಿ ನೀ ಮಲಗಿರುವಿ 1 ಸೃಷ್ಟಿಕರ್ತನು ಸೃಷ್ಟಿಪಾಲಕ ನೀನು ಶಿಷ್ಟ ಜನರಭಿಪ್ರದ ನೀನು ಕಷ್ಟಲೇಶವಿಲ್ಲದೆ ಶಿಷ್ಟ ಜನರುಗಳರಿಷ್ಟವೆಲ್ಲವ ನೀ ಕಟ್ಟಿ ಕೆಡಹುವಿ 2 ದೇವ ಶ್ರೀವತ್ಸಾಂಕಿತನೆ3
--------------
ಸಿರಿವತ್ಸಾಂಕಿತರು
ಜಯ ಜಯಾ ದೇವ ದೇವಾ ಮಾರ್ತಾಂಡ ಭೈರವಾ ದಯದಿಂದ ಪಾಲಸೆನ್ನಾ ಭಕ್ತರನುದಿನಕಾವಾ ಪ ಶರಣರ ಮೊರೆಯ ಕೇಳಿ | ಶಿವ ಅವತಾರವ ತಾಳಿ ಭವರೂಪಮಣಿಮಲ್ಲನಾ | ಮರ್ಧಿಸಿದೆ ತನುಶೀಳಿ 1 ವಿವೇಕಹಯವನೇರಿ | ಭೋಧನಾಸ್ತ್ರವನು ದೋರಿ ಅವಗುಣ ಬಲಮುರಿದೇ | ಜಗಕಭಯವ ಬೀರಿ 2 ಮ್ಯಾಲಕರದಿಂದ ಉಘೇ | ಯನ್ನಲು ಕೂಗಿ 3 ಘನಗುರು ಮಹಿಮಪತಿ | ಸುತ ಪ್ರಭು ಮಾಪತಿ ಮನದೊಳು ಜ್ಞಾನ ದೀಪಾ | ದಿಂದಬೆಳಗುವೆ ಆರತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯ ಜಯಾ ಶಿವ ಪುತ್ರ ಶರಜ ಜಯ ಜಯಾ ಗುಹಾ ಪ ಜಯ ಜಯ ಪಾರ್ವತಿ ಕುಮಾರ ಜಯ ಜಯಾ ದೇವಾ ||ಜಯ|| ಸುರರ ಪೊರೆದ ದೇವಾ 1 ಉರಗ ವರವನಿತ್ತ ಕರುಣಿ ದೇವಾ 2 ಜೇಶ ಕಾರ್ತಿಕೇಯ ದೇವಾ 3
--------------
ಬೆಳ್ಳೆ ದಾಸಪ್ಪಯ್ಯ
ಜಯ ಜಯಾ ಶ್ರೀ ವೆಂಕಟೇಶ ಜೀಯ ಪ ಜಯ ಶ್ರೀ ವೆಂಕಟೇಶಜೀಯ ನೀನೆ ಭಯಪ್ರದಾಯಕನಯ್ಯ ||ಆಹಾ|| ಭಯಕೃದ್ಭಯನಾಶನ ನೀ ಎನ್ನ ಕೈಬಿಡದೆ ಕಾಯೊ ಎನ್ನೊಡೆಯನೆ ವೇಂಕಟರಾಯ ಅ.ಪ ಮಂಕುಮಾನವನಾದ ಎನ್ನ ಮನದ ಡೊಂಕು ತಿದ್ದಿದಿ ಸ್ವಪನವನ್ನ ನಿನ್ನ ಅಂಕಿತದಂತೆ ನುಡಿಸೆನ್ನ ಇನ್ನು ಮಂಕುಹರಿಸಿದೆ ಪ್ರಸನ್ನ ||ಆಹಾ|| ಬಿಂಕದಿಂದ ಇಹ ಶಂಕೆ ಹರಿಸಿ ನಿನ್ನ ಕಿಂಕರ ಕಿಂಕರ ಕಿಂಕರನೆನಿಸಿದೆ 1 ಹಿಂದನೇಕ ಪರಿಯಿಂದ ಮನ ಬಂದಂತೆ ನುಡಿಸಿದ್ದರಿಂದ ತಂದೆ ಮುದ್ದು ಮೋಹನ ವಿಠ್ಠಲಾನಂದ ಪೊಂದಿ ಸಂದೇಹ ಹರಿಸಿದ ಚಂದ ||ಆಹಾ|| ಇಂದು ಮುಂದು ಎಂದೆಂದಿಗೂ ನೀ ಭವ ಬಂಧ ಹರಿಸಿ ಕಾಯಬೇಕು ಇಂದಿರೆರಮಣ2 ತ್ವರಿತಾದಿ ದಯಮಾಡೋ ಹರಿಯೆ ನೀನೆ ನಿರುತ ಎನ್ನಯ ಕುಲದ ದೊರೆಯೇ ಭಕ್ತ ಪರಿಪಾಲ ಮೋಕ್ಷದ ಹರಿಯೇ ನಿನ್ನ ಹೊರತು ರಕ್ಷಕರ ನಾನರಿಯೆ ||ಆಹಾ|| ಪರಮಕರುಣಿ ಶ್ರೀ ವೇಂಕಟೇಶಾಭಿನ್ನ ಉರಗಾದ್ರಿವಾಸವಿಠಲ ಜಗದೀಶನೆ 3
--------------
ಉರಗಾದ್ರಿವಾಸವಿಠಲದಾಸರು
ಜಯ ಜಯಾನಂದ ಕಂದ ಜಯ ನಿರ್ಗುಣ ನಿದ್ರ್ವಂದ್ವ ಧ್ರುವ ಒಳಗೆ ಹೊರಗೆ ನೀನೆ ಪೂರ್ಣ ಬೆಳಗಿ ಬೆಳಗಾಗಿಹುದ ಥಳಥಳಿಸುವ ಗುಣ ಹೊಳವು ಸುಳವು ಪಾವನ 1 ದೇವಾಧಿದೇವ ದೇವ ಭುವನತ್ರಯಕೆ ಜೀವ ಭಾವಿಕರಿಗೆ ಕಾವ ಭವನಾಶಗೈಸುವ 2 ಅಜ ಸುರವರ ಮುನೀಂದ್ರ ನಿಜಘನಸುಖಮುದ್ರ ರಾಜ ರಾಜರಾಜೇಂದ್ರ 3 ಮುನಿಜನರ ಪ್ರಾಣಪದಕ ಅನುಭವದ ನಿಜಸುಖ ಖೂನ ವಿಶ್ವತೋಮುಖ ಅಣುರೇಣು ವ್ಯಾಪಕ 4 ಮೂರು ಗುಣಕೆ ರಹಿತ ಗುರುಮೂರ್ತಿ ಸಾಕ್ಷಾತ ತರಳ ಮಹಿಪತಿದಾತ ಹೊರಿಯೊ ನೀ ಸದೋದಿತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಾನಕೀನಾಥ ಜಯ ಕುಶೀಲವ ತಾತ ಜಾಮಾತ ಪ ಜಯ ಜಯತು ಸುಖದಾತ ಜಯ ಜಗನ್ನಾಥ ಅ.ಪ ಮರುತಸಂಭವ ಪಕ್ಷ ಮಹನೀಯ ಸುಕಲಾಕ್ಷ ಸರಿಸಿಜದಳ ನಿಭಾಕ್ಷ ಸಾಧು ಸಂರಕ್ಷಾ ಶರಧಿ ಬಂಧನದಕ್ಷ ಶಾತ್ರವನಿಕರ ಶಿಕ್ಷ ವರವಿಶಾಲಸು ವಕ್ಷ ವಂದ್ಯ ಪಾಲಾಕ್ಷ 1 ಘೋರ ಪಾಪವಿದೂರ ಕುಜನಸಂಹಾರ ಸಾರತತ್ವವಿಚಾರ ಸದಸದ್ವಿಹಾರ 2 ಶಿವವಿನುತ ಶುಭನಾಮ ಜೀಮೂತನಿಭಶ್ಯಾಮ ನವತುಳಸಿದಳಧಾಮ ನತಜನಪ್ರೇಮ ಅವನಿಪಾಲಲಲಾಮ ಅಖಿಳಾಮರಸ್ತೋಮ ಕವಿಗೇಯ ಗುರುರಾಮವಿಠಲ ರಿಪುಭೀಮ3
--------------
ಗುರುರಾಮವಿಠಲ
ಜಯ ಜಾನಕೀಪ್ರಿಯ ರಾಘವ ಜಯ ಪಾವನ ಚರಣಾ ಪ ಜಯ ದಾನವಭಯ ತಾರಣ ಜಯ ಭವಸಾಗರ ತರಣಾ ಅ.ಪ ಸೇವ್ಯ ಚರಣ ದಾನವ ಕುಲ ಹರಣಾ ಚಾರು ಚರಿತ ಮಾರಜನಕ ಸಾಗರಜಾ ರವiಣಾ 1 ಸುರುಚಿರ ಮಣಿಗಣ ವಿತರಣ ಸುರನಾಯಕ ಶರಣಾ ಉರಗಶಯನ ಮರಕತ ಮಾಂ ಗಿರಿನಾಯಕ ಕರುಣಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಜಯ ದೇವ ಜಯ ದೇವ ಜಯ ಗುರು ನಾಗೇಶ ದಯಗುಣದಲಿ ನೀ ಮಾಡೊ ಭವತಾಪ ನಾಶ ದ್ರುವ ಜನ್ಮ ಮರಣಗಳೆಂಬ ಖಚ್ಚಿಖವಡಿಗಳು ನಿಮ್ಮ ನಾಮಸ್ಮರಣಿಲೆ ಓಡುದು ದುರಿತಗಳು ಬ್ರಹ್ಮಾನಂದದ ಸುಖ ಭಾಸುದು ಮನದೊಳು ನಮ್ಮ ಸ್ವಾಮಿ ನೀನೆ ಅಹುದೊ ಕೃಪಾಳು 1 ತಾಪತ್ರಯವೆಂಬುದು ಬಲು ಪೀಡಿಯ ಗುಣ ಆಶೆÀ ನೀನೆ ಪರಿಹಾರ ಮಾಡೊ ಘನ ಕರುಣ ಕೋಪತಾಪವೆಂಬುದು ತದ್ದುದುರೀಯ ಗುಣ ಕೃಪೆಯಿಂದಲಿ ಮಾಡುದು ನಿಮ್ಮ ಶ್ರಮ ನಿರ್ವಾಣ 2 ದುರಿತ ಸಂಹಾರ ಸುರಜನ ಸಹಕಾರ ಕರುಣಾಕರ ಗುರುಮೂರ್ತಿ ಮುನಿಜನ ಮಂದಾರ ತರಳ ಮಹಿಪತಿಸ್ವಾಮಿ ಘನ ಕೃಪಾಕರ ಶರಣ ರಕ್ಷಕ ಪೂರ್ಣ ನೀ ಜಗದೋದ್ಧಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು