ಒಟ್ಟು 44128 ಕಡೆಗಳಲ್ಲಿ , 139 ದಾಸರು , 10983 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರಮ್ಮಯ್ಯಾ ರಘುಕುಲ ರಾಮಚಂದಿರನ ಪ ಈರೇಳು ವರುಷವು ಮೀರಿ ಪೋಗುತಲಿದೆಸೇರದನ್ನೋದಕ ಮಾರಪಿತನ ಕರೆ ಅ.ಪ. ಪರ್ಣ ಶಾಲೆಯಂತೆ ಅಲ್ಲಿ ಸು-ವರ್ಣದ ಮೃಗವಂತೆ ||ಕನ್ಯೆ ಸೀತಾಂಗನೆ ಬಯಸಿದಳಂತೆಸ್ವರ್ಣಾಂಬರ ಬೆನ್ಹತ್ತಿ ಪೋದನಂತೇ 1 ಲಕ್ಷ್ಮಣ ಅಲ್ಲಿಂದ ಪೋಗಲುತಕ್ಷಣ ಖಳ ಬಂದ ||ಲಕ್ಷ್ಮಿಯಾಕೃತಿಯ ಕೊಂಡು ಪೋಗೆ ಕಮ-ಲೇಕ್ಷಣ ಪೊರಟನು ತೀಕ್ಷಣವಲ್ಲಿಗೆ 2 ಅಂಜನೆ ಸುತ ಬಂದ ಹರಿಪದಕಂಜಕೆರಗಿ ನಿಂದಾ ||ಕುಂಜರಗಮನೆಯ ಕುರುಹು ಪೇಳೆನೆ ನಿ-ರಂಜನ ಮೂರ್ತಿಗೆ ಅಂಜದೆ ಬೆಸಸಿದ 3 ಶರಧಿಯನೇ ಹಾರಿ ಉಂಗುರಧರಣಿಸುತೆಗೆ ತೋರೀ ||ತರು ಪುರ ಗೋಪುರ ಉರುಹಿ ಚೂಡಾಮಣಿಹರಿಗೆ ಸಮರ್ಪಿಸಿ ಹರುಷದಲಿಹನಂತೆ 4 ಸೇತುವಿಯನೆ ಕಟ್ಟಿ ಖಳಕುಲನಾಥನ ತರಿದೊಟ್ಟೀ ||ಸೀತೆ ಸಹಿತ ಮೋಹನ್ನ ವಿಠ್ಠಲ ಜಗ-ನ್ನಾಥ ಹೊರಟನಂತೇ ಕಾಂತೇ 5
--------------
ಮೋಹನದಾಸರು
ತಾರಿಸೆನ್ನ ನೀ ಭವದಿಂದಲಿ ಪ ನಾನಾ ಯೋನಿಯಲಿ ಬಹು ಹೀನ ಜನುಮವನು | ನೀ ನೆವೆ ಕಳೆಯಲು ಕರ್ತನು | ಏನು ಅರಿಯದ ನಾ ಮೂಢನು 1 ಭಜಕರ ಪ್ರೀಯಾ ಕೃಪಾಬ್ಧಿಯು | ನಿಜವರಿಲಿಲ್ಲಾ ಜ್ಞಾನಿಯು 2 ಮೆರೆಯುತಲಿದೆ ನಿಮ್ಮ ಕೀರ್ತಿ | ಸಾರಥಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಾರೆ ಆರುತಿ ಸಾರಸಾಂಬಕಿ ಭಾರತೀವರಗೆ ಬೆಳಗುವೆನು ಪ ನರಸಿಂಹಾರ್ಯ ಶೇವಿತಗೆ ಅ.ಪ ನೂರುಯೋಜನ ವಾರಿನಿಧಿಯನು ಹಾರಿ ಜಾನಕಿಗೆ ಚಾರು ಮುದ್ರಿಕೆಯನಿತ್ತು ಪುರದಿಭಯ ತೋರಿರಾಕ್ಷಸಗೆ ನಾರಿಮಣಿಯ ಶುಭವಾರುತಿಯ ರಘುವೀರಗರುಹಿದ ಮಾರುತಾತ್ಮಜಗೆ 1 ಇಂದು ಕುಲದಲಿ ಬಂದು ಕುಂತಿಯ ಕಂದನೆಂದೆನಿಸಿ ನಿಂದು ರಣದಿ ಖಳವೃಂದ ಸಹಿತ ಕುರುವೃಂದವನು ಮಥಿಸಿ ಛಂದದಲಿ ಪಡೆದಂಥ ಭೀಮಗೆ 2 ಭೂತಳದಿ ಸುಖತೀರ್ಥರೆನಿಸಿ ಸಚ್ಛಾಸ್ತ್ರವನು ರಚಿಸಿ ಭೀತಿ ಪುಟ್ಟಿಸುತ ಖ್ಯಾತಮಾಯ್ಗಳ ವ್ರಾತವನು ಜಯಿಸಿ ಪೂತ ಕಾರ್ಪರ ಕ್ಷೇತ್ರ ನರ ಮೃಗನಾಥನ ಪರಮಪ್ರೀತಿ ಪಾತ್ರನಿಗೆ 3
--------------
ಕಾರ್ಪರ ನರಹರಿದಾಸರು
ತಾರೊ ನಿನ್ನಯ ಕರವಾರಿಜವನು ಕೃಷ್ಣ ಸಾರಿ ಬೇಡಿಕೊಂಬೆ ಮುರಾರಿ ದಯಮಾಡಿಪ ಮಾರಮಣನೆ ಸಂಸಾರ ಶರಧಿಯೊಳೀಸ ಲಾರದೆ ಬಳಲುತ ಚೀರೂತಲಿರುವೆ ಅ.ಪ ದಾರಾ ಪುತ್ರರೆನಗೆ ದಾರಿ ತೋರುವರೆಂದು ಮಾರ ಜನಕನೆ ಕೇಳೊ ಮೋರೆ ತೋರದೆ ಅವರು ಜಾರಿಕೊಂಡರಯ್ಯ ಭೂರಿ ಬಳಗದವರ್ಯಾರು ಬಾರರೊ ದೇವ 1 ಧಾರುಣಿ ಧನ ಧಾನ್ಯ ಹೇರಳವಾಗಿದೆ ಜೀವ ಹಾರಿ ಹೋಗುವಾಗ ಯಾರಿಲ್ಲವಯ್ಯ ಕೋರಿ ಭಜಿಪೆ ನಿನ್ನ ಬಾರಿ ಬಾರಿಗೆ ನಾನು ಕ್ಷೀರ ವಾರಿಧಿವಾಸ ವೀರ ಮಾರುತೀಶ 2 ಘೋರಾಂಧಕಾರದಿ ಮೇರೆಯು ಕಾಣದೆ ಮಿತಿ ಮೀರಿದ ಭಯದಿಂದ ಗಾರು ಪಡುತಿಹೆನೊ ಕಾರುಣ್ಯನಿಧಿಯೆ ನೀ ಪಾರು ಮಾಡದಿರೆ ಮತ್ತ್ಯಾರು ಕೇಳುವರೆನ್ನ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು
ತಾರೋ ವಸನ-ಎಷ್ಟೋ ವಿನೋದ ಪ ಕಡಹದ ಮರನೇರಿ ಕಾಡುವುದುಚಿತವೆ ತಡವಾಗುವುದೈ ಒಡೆಯರುಳ್ಳವರಿಗೆ 1 ಚಿತ್ತಜನೈಯನೆ ಮತ್ತಗಮನೆಯರ ಬತ್ತಲೆ ನಿಲಿಸುವುದುತ್ತಮವಲ್ಲವೊ2 ಸಿರಿ ವಿಜಯವಿಠ್ಠಲ 3
--------------
ವಿಜಯದಾಸ
ತಾವಲ್ಲಿ ನೆನೆಯಲು ದಶಮತಿ ಗುರುಗಳು ನಾವಿಲ್ಲಿ ಸುಖಿಗಳು ಸುಲಭದಿಂದ ಪ ಪೂರತಿ ಮನದೊಳಗಾಗುವಂತೆ ತಾರಾ ರಮಣನು ತಾ ಮ್ಯಾಲೆ ಉದಿಸಲು ವಾರಿಧಿ ಹರುಷದಿ ಉಕ್ಕುವಂತೆ 1 ತರಣಿ ಕಿರಣ ಪಸರಿಸೆ ಸರೋವರದಲ್ಲಿ ಸರಸಿಜ ವಿಕಸಿತವಾಗುವಂತೆ ವಾರಿದ ಮ್ಯಾಲಿರೆ ತಾ ನೋಡಿ ಮಯೂರ ಮೀರಿ ಹರುಷದಿ ಕುಣಿ ಕುಣಿದಾಡುವಂತೆ2 ವ್ಯಾಸ ದೇವರ ಕೂಡ ಮಾತುಗಳಾಡುವಾಗ ಶುಭ ನಮಗೆ ವಾಸುದೇವವಿಠಲ ಪಾಶದಿಂದಾಡುವಾಗ ವಾಸ ಅಕ್ಷಯವೆನ್ನಿ ಕೃಷ್ಣೆಯಂತೆ 3
--------------
ವ್ಯಾಸತತ್ವಜ್ಞದಾಸರು
ತಾಸು ಬಾರಿಸುತಿದೆ ಕೇಳೋ ಮನುಜತಾಸು ಬಾರಿಸುತಿದೆ ಕೇಳೋ ಪ ಮೋಸ ಹೋಗಲು ಬೇಡ | ಆಶಪಾಶಕೆ ಶಿಲ್ಕಿವಾಸುದೇವನ ಮನ | ಒಲಿಸುವುದೆಂದೂ ಅ.ಪ. ಶ್ರೀ ತರುಣೇಶನ ಜಗಕೇಕನೆನಿಪನಮಾತು ಮಾತಿಗೆ ನೆನೆ ಮನುಜಾ |ಗಾತುರಗೋಸುಗ ಆತುರ ಪಡದಲೆಪ್ರೀತಿ ಬಿಡಿಸೊ ಸಂಕೀರ್ತಿಸಿ ಎಂದು 1 ಕಾಲ ಕಳೆಯ ಬೇಡ ||ವ್ಯಾಳ ಶಯ್ಯ ಶ್ರೀ ವೆಂಕಟ ನಿಲಯನ |ವ್ಯಾಳೆ ವ್ಯಾಳೆಕೆ ನೆನೆ ಅಲಸದಲೆಂದು 2 ಹೆಣ್ಣು ಹೊನ್ನು ಮಣ್ಣುಗಳ ನೆಚ್ಚಿಬನ್ನ ಬಹಳವ ಪಡವಿಯೊ ಮನುಜಮುನ್ನವೆ ಯೋಚಿಸಿ ಎಚ್ಚರದಲ್ಲಿ |ಪನ್ನಗಶಯ್ಯನ ನೆನೆವುದೆಂದೂ 3 ಭವ ಸಿಂಧುವ ಕಳೆಯೋನಂದವನೀಯುವ ಇಂದಿರೆಯರಸನಚಂದದ ಚರಣಾರವಿಂದತುತಿಪುದೆಂದು 4 ತನುವು ಅಸ್ಥಿರ ಮನವು ಚಂಚಲವೊಧನವೂ ಸಾಧನಗಳು ಬಲು ದುಷ್ಟಾ |ಘನ ಮಹಿಮನು ಗುರು ಗೋವಿಂದ ವಿಠಲನದಿನ ದಿನ ನೆನೆದು ಸುಖಿಸುವುದೆಂದೂ5
--------------
ಗುರುಗೋವಿಂದವಿಠಲರು
ತಾಳಬೇಕು ಭಕ್ತಿಯೇಳಬೇಕು ಪ ತಾಳಬೇಕಾದವನು ಮೇಳದಲಿ ಬಾಳಬೇಕು ಅ.ಪ ಹಾಡಲು ತಾಳಬೇಕು ಬೇಡಲು ತಾಳಬೇಕು ಓಡಾಡಿ ಕುಳಿತು ಮಾತಾಡಲು ತಾಳಬೇಕು ನೋಡಬೇಕಾದವನು ನೋಡಲು ತಾಳಬೇಕು ಮಾಡಿ ಮುಳುಗುವ ಜನ್ಮಬೇಡೆಂದು ತಾಳಬೇಕು 1 ತಾಳರಿತಮೇಲಂತರಾಳವನು ಕಾಣಬೇಕು ತಾಳದವ ಬಾಳುವನೇ ಮೇಳದೊಳಗೇ ತಾಳ ನೋಡುವರೆಲ್ಲ ಹೂಳನೋಡಲಿಬೇಕು ತಾಳಿ ಮಾಂಗಿರಿರಂಗನೂಳಿಗಕ್ಕೆ ನುಗ್ಗಬೇಕು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತಾಳರವವನು ತೋರ್ಪೆನು ತಾನೇಳು ವಿಧಗಳಾಗಿ ತಿರುಗುವ ಗತಿಯುಳ್ಳಪಧ್ರುವವೆಂದು ಮಠ್ಯವೆಂದು ಧ್ವನಿಯು ರೂಪಕವೆಂದುತ್ರಿವಡೆ ಜಂಪೆಗಳೆಂದು ತಾವೆರಡುಅವು ಐದು ಗಣನೆಯೊಳಟ್ಟತಾಳವಾರದುಇವರ ಹಾಗೆಕ್ಕ ತಾಳವದೇಳು ಬಗೆಯೆಂಬ 1ಕಾಲ ಮಾರ್ಗವು ಕ್ರಿಯೆ ಕೂಡಿದಂಗಗಳೆಂದುಕೇಳಿ ಗ್ರಹವು ಜಾತಿ ಕಳೆಗಳೆಂದುಆ ಲಯವೆನ್ನುತಲೆತಿ ಪ್ರಸ್ತಾರಕವೆಂದುಈ ಲಲಿತದ ವಸ್ತುುವು ಹತ್ತು ಪರಿಯೆಂಬ 2ಒಂದೊಂದು ಬಹುವಾಗಿಯೊಡೆದು ನಾನಾ ಭೇದದಿಂದ ಗಾನಕೆ ಕೂಡುತಿಷ್ಟವಾಗಿನಿಂದು ನಾದಿಸುತಿವೆ ನಿನ್ನಾಜ್ಞೆ ಯಲಿ ದೇವಇಂದಿದ ತಿರುಪತಿಯೊಡೆಯ ಲಾಲಿಸು ಕೃಷ್ಣ 3ಓಂ ತಮಾಲಶ್ಯಾಮಲಾಕೃತಯೇ ನಮಃ
--------------
ತಿಮ್ಮಪ್ಪದಾಸರು
ತಾಳಲಾರೆ ರಂಗಯ್ಯ ನಾ ತಾಳಲಾರೆ ತಾಳಲಾರೆ ಕರುಣಾಳು ರಾಜೇಂದ್ರನೆ ಖೂಳ ಜನರು ಕೂಡಿ ಪೇಳುವ ನುಡಿಯನ್ನು ಪ. ದೇವ ನಿನ್ನ ಪಾದಾಂಬುಜ ಸೇವೆಯನ್ನು ಭಾವಶುದ್ಧದಿ ಮಾಳ್ವ ಭಾಗ್ಯ ಪೊಂದಿರಲು ಮೂ- ದೇವಿ ಎಂದೆನ್ನನು ಮೂದಲಿಸುವ ಮಾತ 1 ಹೇಡಿ ಜನರು ಮನಕೆ ಬಂದಂ- ತಾಡುತ್ತಿಹರು ರೂಢಿಪ ಮುಖದಿ ನೀ ಮಾಡುವ ಕೃತ್ಯದ ಪ್ರೌಢಿಮೆಯರಿಯದೆ ಮೂಢ ಜನರ ಮಾತ 2 ಹೆತ್ತ ಮಗನು ಹಸ್ತಕನಾಗಿ ಹತ್ತಲಿರಲು ಉತ್ತಮ ಪದವಿಯ ತೊತ್ತಿನ ಕುವರರಿಗಿತ್ತದು ಸರಿಯೆ ಸ- ರ್ವೋತ್ತಮ ದೊರೆಯೆ ನಾ 3 ತೋರೊ ಸೂಕ್ತಿ ತಾತ್ಸಾರವ್ಯಾಕ- ಪಾರ ಯುಕ್ತಿ ಕ್ರೂರ ಮಾನವರಹಂ- ಕಾರ ಖಂಡಿಸಿ ಮುಖ್ಯ ಧಾರುಣಿ ಪರೊಳಂತ:ಪ್ರೇರಿಸುವುದು ಶಕ್ತಿ 4 ಲೋಕನಾಥ ನೀನಹುದೆಂಬ- ದ್ಯಾಕೆ ಗಾಥಾ ಈ ಕಪಟದ ಕೃತ್ಯ ಯಿಕ್ಕಡಿವುತ ಬೇಗ ಸಾಕೆನ್ನ ಭಕ್ತ ಪ- ರಾಕು ವೆಂಕಟನಾಥ 5
--------------
ತುಪಾಕಿ ವೆಂಕಟರಮಣಾಚಾರ್ಯ
ತಾಳಲಾರೆನಮ್ಮಾ ಬಾಲಕನಟ್ಟುಳಿ ಗೋಪೀಘನವಮ್ಮ ಕೇಳಿದುಳವಿಲ್ಲಾ ಕೇಳಿದುಳವಿಲ್ಲಾ ಕಾಲಕಾಲದಲಿಟ್ಟ ಬೆಣ್ಣೆ ಮೂಲವಿರಲಿಕ್ಕಿಲ್ಲಾ ಪ ಅತ್ತನೋಡ ಲಿಹಾ ಇತ್ತ ನೋಡಲಿಹಾ ಸುತ್ತಸೂಸುತ ಬಾಲೆಯರಾ ಚಿತ್ತಮೋಹಿಸುತಿಹಾ1 ಹಿಡಿದೇನೆಂದರೆ ಸಿಕ್ಕಾ ತುಡುಗ ಬಲುದಕ್ಕಾ ಹಿಡಿದು ನಿಲ್ಲಿಸುವರಿಲ್ಲಾ ಪೊಡವಿಲಿವನ ತುಕ್ಕಾ2 ಆರಿಗೇ ವಿಚಾರಾ ಸಾರಬೇಕು ದೂರಾ ಸೂರೆಹೋಗುತಿದೆ ಸಂಸಾರಾ ಸುಖಸಾರ 3 ತಂದೆಮಹಿಪತಿ ನಂದನ ಸಾರಥಿ ಇಂದು ನಮ್ಮ ಕಾಡಿದರ ಮುಂದಾರುಗತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ತಾಳಲಾರೆನು ದೇವ ಪಾಪ ತಪ್ಪಿಸಿ ಬೇಗ ಸಂಜೀವ ಕಾಳಭೈರವನಿಗಪ್ಪಣೆಯ ಕೊಡೊ ದೈತ್ಯಕುಲ ಕಾಲ ಬಿಡಿಸುವುದೆನ್ನ ನೋವ ಪ. ನರಹರಿಯೆ ಸರ್ವತ್ರ ಇರುವಂಥ ನಿನಗೆ ನಾ- ನರುಹಲೇನಿಹುದಿನ್ನು ಜೀಯ ಉರಿಯನುಗುಳುವ ಘೋರ ಶರಗಳೋಲ್ ಪ್ರತಿನಿಮಿಷ ವಿರಿವುತಿದೆ ಬಲ್ಲಿ ಮಹರಾಯ ತರಹರಿಸಿ ದಿನದಿನಕೆ ಕರುಗುತಿಹ ಮದ್ದೇಹ ಸ್ಥಿರವಾಗಲೀ ನಿನ್ನ ಪಾಯ ದರ ಚಕ್ರ ಶಾಙ್ರ್ಗನಂದಕ ಚರ್ಮಗದೆಗಳನು ಧರಿಸಿ ವೋಡಿಸು ಶತ್ರುಮಾಯ 1 ಕಾಶೀಶ ಕಳುಹಿಸಿದ ಪೈಶಾಚ ದಕ್ಷಿಣಾಗ್ನಿಯನು ದೋಷವೆಣಿಸದ ಅಂಬರೀಷನಲಿ ಮುನಿದ ದು- ರ್ವಾಸ ಮುನಿಕೃತ ಕೃತ್ರಿಮವನು ನಾಶಗೈದಖಿಳಗುಣ ಭೂಷಣನೆ ನಿನಗೆನ್ನ ಪೋಷಣೆಯು ಬಹು ಭಾರವೇನು 2 ಸರ್ವಶಕ್ತಿಯೆ ನಿನಗೆದುರ್ವಾದ್ಯವುಂಟೆ ಗುರು ಶರ್ವ ಸುರನಾಥ ಮುಖವಂದ್ಯ ಗೀರ್ವಾಣ ಪಕ್ಷಜನ ನಿರ್ವಹಿಸಿ ನೀನೆ ಯೆನ- ಗಿರ್ವೆ ಗತಿಯಾಗಿ ಸುರವಂದ್ಯ ಬರ್ವ ದುರಿತಗಳ ಮಹದೂರ್ವಣೆಗೆ ಪುಡಿಗೈದು ಗರ್ವಿ ವೈರಿಗಳ ಸದೆ ಬಡಿದು ಪೂರ್ವದಿಂದಲಿ ಸೇವೆ ಸ್ವೀಕರಿಸು ಸರ್ಪವರ ಪರ್ವತೇಶನೆ ಬೇಗ ಒಲಿದು 3
--------------
ತುಪಾಕಿ ವೆಂಕಟರಮಣಾಚಾರ್ಯ
ತಾಳಲೆಂತೈ ಹರಿಯೆ | ಭವಬಾಧೆ ರಮಾಕಾಂತ ಅನಂತ ಗುಣವಂತ ರಕ್ಷಿಸು ಪ ದುರಿತ ಪಾರಾವಾರ ದಯಾಸಾರ ಉದಾರ ಎನ್ನ ಪಾರಗಾಣಿಸು 1 ಕಾವರಾರೈ ನೀನುಳಿದಿಹ ಪರದಿಕೃಪೆದೋರೈ ನೀ ಬಾರೈ ನಿನ್ನೊಳು ಸೇರೈಸಿ ಮನ 2 ವಾಸುದೇವ ರಮೇಶ ದೀನಬಂಧು ಜಗಜ್ಜೀವ ಕೇಶವ ಎನ್ನದಾವ ಪಾಲಿಸು 3
--------------
ಅನ್ಯದಾಸರು
ತಾಳಲ್ಲಲ್ಲಲ್ಲಲ್ಯೋ ಮಾಸಾಳಲ್ಲಲ್ಲಲ್ಲಲ್ಯೋ ಪ ಹೆಚ್ಚಿದ ತಮನೆಂಬ ದನುಜ ವೇದವ ಕದ್ದುಬಚ್ಚಿಟ್ಟು ನೀರೊಳು ಮುಳುಗಿರಲುಮಚ್ಚ ರೂಪದಿಂದ ಪೋಗಿ ಅವನ ಕೊಂದಅಚ್ಯುತರಾಯನೆಂಬ ಮಾಸಾಳಮ್ಮ1 ಕೂರ್ಮ ರೂಪಿನಿಂದೆತ್ತಿದ ಗೋ-ವಿಂದನೆಂಬುವ ಮಾಸಾಳಮ್ಮ2 ವರಾಹ ರೂಪಿ ಮಾಸಾಳಮ್ಮ 3 ಲೇಸು ತಪ್ಪಿದನೆಂದು ಹಿರಣ್ಯಕ ತನಯನಘಾಸಿ ಮಾಡಲು, ಕಂಬ ಒಡೆದುದಿಸಿರೋಷದಿ ದೈತ್ಯನ ಕರುಳ ಕಿತ್ತ ನರಕೇಸರಿ ರೂಪಿನ ಮಾಸಾಳಮ್ಮ 4 ಆ ಮಹಾಸಿರಿಯ ಗರ್ವದಿ ಮುಂದರಿಯದೆಭೂಮಿಯನು ಬಲಿ ತಾನಾಳುತಿರೆನೇಮಿಸಿ ಎರಡೇ ಹೆಜ್ಜೆಯೊಳಳಕೊಂಡವಾಮನ ರೂಪಿನ ಮಾಸಾಳಮ್ಮ 5 ಕಾಮಧೇನುವಿಗಾಗಿ ಕಾರ್ತವೀರ್ಯಾರ್ಜುನಆ ಮಹಾಮುನಿಯ ಪ್ರಾಣಕೆ ಮುನಿಯೆತಾಮಸವಿಲ್ಲದೆ ಕ್ಷತ್ರಿಯರ ಸಂಹರಿಸಿದರಾಮ ಭಾರ್ಗವನೆಂಬ ಮಾಸಾಳಮ್ಮ 6 ಜನಕ ಸುತೆಯನು ಕದ್ದೊಯ್ಯಲು ಲಂಕೆಗೆಗಣಿತಾತೀತ ಶರಧಿಯ ಕಟ್ಟಿಘನ ಕೋಪದಿ ದಶಿಶಿರನ ಕತ್ತರಿಸಿದಇನಕುಲ ರಾಮನೆಂಬ ಮಾಸಾಳಮ್ಮ 7 ದೇವಕಿ ಬಸುರೊಳು ಬಂದು ಗೋಕುಲದಿಆವ ಕಾವ ಗೊಲ್ಲರ ಸಲಹಿಮಾವನ ಕೊಂದು ಮತ್ತೈವರ ಸಲಹಿದದೇವ ಕೃಷ್ಣನೆಂಬ ಮಾಸಾಳಮ್ಮ8 ಪತಿವ್ರತೆಯರ ವ್ರತವಳಿಯಬೇಕೆನುತಲಿಅತಿಶಯದಿ ತ್ರಿಪುರದ ಸ್ತ್ರೀಯರನುತ ಬೌದ್ಧ ರೂಪದಿ ಬಹು ಭಂಗಪಡಿಸಿದರತಿಪತಿಪಿತನೆಂಬ ಮಾಸಾಳಮ್ಮ 9 ಖುಲ್ಲ ಮನುಜರನು ಕೊಲ್ಲಬೇಕೆನುತಲಿಭಲ್ಲೆ ಹಿಡಿದು ತುರಗವನೇರಿಅಲ್ಲಲ್ಲೆ ಸೊಲ್ಲಡಗಿಸಿ ವಲ್ಲಭನೆನಿಸಿದಬಲ್ಲಿದ ಕಲ್ಕಿಯೆಂಬ ಮಾಸಾಳಮ್ಮ 10 ಮಂಗಳ ಮಹಿಮ ಭುಜಂಗ ಶಯನ ಕಾ-ಳಿಂಗ ಮರ್ದನ ದೇವೋತ್ತುಂಗಅಂಗಜಪಿತ ನೆಲೆಯಾದಿಕೇಶವ ಅಂತ-ರಂಗದೊಳಿರುವ ಮಾಸಾಳಮ್ಮ 11
--------------
ಕನಕದಾಸ
ತಾಳು - ತಾಳು - ತಾಳಬೇಕೆನ್ನುವಿರೋ ಗುರುವೇ ಪ ಇನ್ನೆಷ್ಟುದಿನ ತಾಳಬೇಕೋ ತಿಳಿಯಾದೋ ಅ.ಪ. ಆಶ್ರಿತಜನ ರಕ್ಷಕನೆಂದೂ ನಂಬಿದೇನೊ ಪ್ರಭುವೇ | ಪಾದ ಶ್ರೀ ರಾಘವೇಂದ್ರ ಪ್ರಭವೇ 1 ತನುವಿನೊಳಗೆ ಬಲವು ಇಲ್ಲಾ ಮನದೊಳಗೆ ಧೃಡಾವಿಲ್ಲ ಇನ್ನಾದರು ದಯಮಾಡಿ ಸಲಹಯ್ಯ ಪ್ರಭವೇ2 ದುರಿತ ರಾಶಿಗಳ ನಾಶಗೊಳಿಸೆ ನಿನ್ಹೊರತ್ಯಾರಿಲ್ಲ ಪ್ರಭುವೇ ತ್ವರಿತದಿ ಕರುಣ ಕಟಾಕ್ಷದಿ ನೋಡು ಶ್ರೀ ರಾಘವೇಂದ್ರ ಗುರುವೇ 3 ಈ ಸಂಸಾರ ಶರಧಿಯೋಳ್ ಮುಳುಗಿ ಬಳಲಿದೆ ಗುರುವೇ ಘಾಸಿಗೊಂಡಿಹೆ ಕೃಪೆಮಾಡೈ ಶ್ರೀ ರಾಘವೇಂದ್ರ ಗುರುವೇ 4 ತಡೆಮಾಡದೆ ಕಡೆಹಾಯಿಸೋ ಶ್ರೀ ರಾಘವೇಂದ್ರ ಪ್ರಭವೇ 5
--------------
ರಾಧಾಬಾಯಿ