ಒಟ್ಟು 10544 ಕಡೆಗಳಲ್ಲಿ , 133 ದಾಸರು , 5597 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರ ಜಗದೇಕವೀರ ನಿನ್ನ ಕೊಮಾರ ನೀ ದುಃಖದೂರ ಸುಖಕರ ಎಲೆ ನಾರಾಯಣ ಜಗದ್ಧರ ಮುಕ್ತಿದಾ-ತಾರ ಎನಗೆ ನಿನ್ನ ತೋರ ಇನ್ನುಬಾರಾ ನಾನರಿಯೆ ಸಿರಿಧರ ಪ. ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನುಹೀನಜನರೊಡನಾಡಿ ಕಡುನೊಂದೆನುಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದುದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು 1 ಕಂಡಕಂಡವರ ಬೇಡಿ ಬೇಸರಲಾರೆನೊ ತಂದೆಪುಂಡರೀಕಾಕ್ಷ ಪುರುಹೂತವಂದ್ಯಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನತೊಂಡರೊಳಗೆನ್ನನಿರಿಸಿ ದುರುಳರಸಂಗವ ಬಿಡಿಸು 2 ಶ್ರೀ ಹಯವದನರಾಯ ಆಶ್ರಿತಜನಸುಖೋಪಾಯಮೋಹಾಂಧಕಾರ ಮಾರ್ತಾಂಡ ಶೂರನೇಹದಿಂದೆನ್ನ ಕೈವಿಡಿದು ದುಷ್ಟರ ಬಡಿದುಕಾಹುಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು 3
--------------
ವಾದಿರಾಜ
ಮಾರಜನಕ ನಂಬಿದೆ ನಿನ್ನ ಪಾರುಮಾಡೆನ್ನ ಪರಮಪಾವನ್ನ ಪ ಮೀರಿತು ಭವಬಾಧೆ ಸೈರಿಸೆನಿನ್ನು ಸಾರಸಾಕ್ಷನೆ ಪರಿಹರಿಸು ಮೋಹನ್ನ ಅ.ಪ ದುಷ್ಟಸಂಸಾರಸಾಗರದೊಳು ಕೆಟ್ಟ ನಿಂದೆಗಳೆಂಬ ಘನತೆರಿಗಳು ಹುಟ್ಟಿ ಏಳುತಲಿಹವು ಸಾಲಿಗೆ ಸಾಲು ಬೆಟ್ಟದಂತೆ ಮಹ ಭೀಕರದೊಳು ಎಷ್ಟಂತ ಈಸಬೇಕಿನ್ನಿದರೊಳು ಸೃಷ್ಟಿಕರ್ತ ನೀನೆ ಮೊರೆ ದಯದೊಳು 1 ವಾಸನ್ಹಿಡಿದು ಸೆಳೆದುನುಂಗ್ವವೈದಾರು ಮೋಸ ಜಲಚರಗಳ ಮೀರಿದ ತೊಡರು ಆಸೆಯೆಂಬ ಮಹ ಸೆಳವಿನ ಜೋರು ಸುಳಿ ಮಡುವು ಸಾವಿರಾರು ಈಸುವುದು ಮುಂದಕ್ಕೆ ಅಗದು ಮಾರು ಶ್ರೀಶನೆ ಪಿಡಿದೆತ್ತಿ ಕರುಣವ ತೋರು 2 ಇಂತು ಭವದ ಸಾಗರವನ್ನು ಎಂತು ದಾಟಿ ನಾ ಪಾರಾಗುವೆನು ನಿಂತುನೋಡಲು ಅಂಜಿ ಮನಸಿಗೆ ಇನ್ನು ಭ್ರಾಂತಿಬಡುತ ನಿನ್ನ ಮರೆಯ ಹೊಕ್ಕೆನು ಚಿಂತಾಯಕ ಭಕ್ತ ತೀವ್ರಬಂದಿನ್ನು ಸಂತಸದಿಂ ಪೊರೆಯೊ ಶ್ರೀರಾಮ ಎನ್ನನು 3
--------------
ರಾಮದಾಸರು
ಮಾರಪಿತನ ತೋರಿದಲ್ಲದೆ ನಾ ಬಿಡೆ ನಿನ್ನ ಪಾದವ ಪ ಧೀರ ಹನುಮ ಘೋರ ರೂಪವ ತೋರಿ ಪಾರಲು ದೂರ ನಾ ಸಾರೆನು ಅ.ಪ. ಭಾರ ಧರಿಸಿ ಕೋರೆ ತೋರುತ ಘೋರ ರೂಪದಿ ಪೋರನೆನ್ನಿಸಿ ನಾರಿ ಹತ್ಯದಿ ಚಾರುವನವ ಸೇರಿದವನ 1 ಜಾರನೆನ್ನಿಸಿ ನಾರಿ ಮಾನವ ಸೂರೆಗೊಳ್ಳುತ ಪಾರಿಪೋಗುವ ಶೂರ ತೇಜಿಯನೇರಿ ಮೆರೆದ ವಾರಿಜಾಕ್ಷನ ಧೀರ ಕಲ್ಕಿಯ 2 ದಾರಿ ತೋರದೆ ಸಾರಿ ನಿನ್ನನು ಕೋರಿ ಭಜಿಪೆನು ಬಾರಿ ಬಾರಿಗೆ ಭಾರತೀಶನೆ ತೋರು ಕರುಣದಿ ಸಾರಸಾಕ್ಷ ರಂಗೇಶವಿಠಲನ 3
--------------
ರಂಗೇಶವಿಠಲದಾಸರು
ಮಾರಿ ಬೇರೆಂದೇಕೆ ಹಲುಬುವರು ಜಗದಿ ನಾರಿಯೇ ಮಕ್ಕಮಾರ್ಯೆಂದೆನ್ನಬಾರದೆ ಪ ಹಿತದೋರಿ ಮನಸೆಳೆದು ಮತಿಗೆಡಿಸಿ ವಿಧವಿಧ ದು ಷ್ಕøತ ಪೇಳಿ ಬಂಧುಗಳ ಹಿತವನೆ ಮರೆಸಿ ಸತತ ಬೆನ್ನ್ಹತ್ತಿ ಬಿಡದೆ ಕ್ಷಿತಿಮೇಲೆ ಅತಿಯಾಗಿ ವ್ಯಥೆಬಡಿಪ ಮಾರಿ ನಿಜಸ್ಥಿತಿ ವಿಚಾರಿಸದೆ 1 ಮನೆ ಧನ ಗುಣ ಸುಲಿದು ಘನತೆಯನು ಕೆಡಿಸಿ ಮ ತ್ತನುಕೂಲವನು ಇತ್ತು ತನುಶಕ್ತಿ ಹೀರಿ ಕುಣಿಕುಣಿಸಿ ಜಗದೊಳಗೆ ಬಿನಗುರಲಿ ಬಿನುಗೆನಿಸಿ ಘನ ಬಾಧಿಸುವ ಮಾರಿದಿನಿಸು ಕಾಣದಲೆ 2 ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರೆನಿಸಿ ಭುವಿಯೊಳು ಮುಕ್ತಿಕಾಮಿನಿಯ ತೊರೆಸಿ ನೇಮವಿಲ್ಲದ ಕಷ್ಟ ನೇಮಿಯೊಳಳಿಸಲಿಕೆ ಯಮನೊಶಕೆ ಕೊಡುವಂಥ ಈ ಮಾರಿನೊದೆಯದೆ 3
--------------
ರಾಮದಾಸರು
ಮಾರುತ ಒಲಿದವಗೆ ಮಾರಮಣನು ಒಲಿವಾ ಪ ಭಾರತೀರಮಣ ಮುನಿಯೆ ಭವಹರ ಹರಿ ಮುನಿವ ಅ.ಪ. ಸುಗ್ರೀವನು ಬಂದು ಹನುಮನ್ನ ಅನುಸರಿಸೆಶೀಘ್ರದಿಂದ ಹರಿ ವಾಲಿಯ ಕೊಂದನು ||ವಿಗ್ರಹದೊಳಗೆ ಕರ್ಣನ ಗೆದ್ದ ಅರ್ಜುನನುಅಗ್ರಜನ ಕೃಪೆ ಇದ್ದ ಕಾರಣಾ1 ಹನುಮಗ್ಹರಿ ಒಲಿಯಲು ರಾವಣನ ಒಂದುಕ್ಷಣದೊಳಗೆ ಹರಿ ಖಂಡಿಸಿದನು ||ಅನುಮಾನವಿಲ್ಲದೆ ಅವನನುಜ ವಿಭೀಷಣಗೆಘನ ಪದವಿಯನಿತ್ತ ಹನುಮ ಬೋಧಿತ ಹರಿ2 ದಾತ ದಾತ 3
--------------
ಮೋಹನದಾಸರು
ಮಾರುತನ ನಿಜ ಜಾಯೆ ಪ ಬಾರಿ ಬಾರಿಗೆ ನಿನ್ನ ಚರಣವ ಸ್ಮರಿಸುವೆ ಚಾರುಮತಿಯನೀಯೆ ಅ.ಪ. ಮೂರನೆ ಯುಗದಲಿ ಧೀರ ದ್ರುಪದನಧ್ವರದೊಳುದಿಸಿ ಶೂರ ಪಾಂಡವರೈವರ ವೀರಪತ್ನಿಯು ನೀನೆನಿಸಿ ಕೌರವನ ಸಭೆಯಲಿ ಸೀರೆಯನು ಸೆಳೆಯಲು ನೀ ಮಾರಪಿತನ ಭಜಿಸಿ ಭೂರಿವಸನ ಪೊಂದಿದೆ ಧೀರೆ 1 ವೀರ ಮಾರುತಿಯ ಗದೆ ಕುರುಪನ ಊರು ಮುರಿಯಲೆಂದು ವಾರಿಧಿ ಮಿತಿ ಮೀರುತಿರೆ ನೀ ಸಾರಿದೆ ಪತಿಗಳ ಗಂಭೀರೆ 2 ಆ ರಣಾಗ್ರದಿ ಕ್ರೂರ ದುಶ್ಶಾಸನ ಸಾರಿ ಬರುವುದ ನೋಡಿ ದಾರಿ ಹಿಡಿದಪ್ಪಳಿಸವನ ದೋರೆ ಕರುಳ ಹಿರಿದೀಡ್ಯಾಡಿ ಮೋರೆಯಿರಿದು ಪಲ್ಮುರಿದು ಹಂಗಿಸಿದಂಥ- ಸತಿ 3
--------------
ರಂಗೇಶವಿಠಲದಾಸರು
ಮಾರುತಿ ನಿನ್ನಾ ನಿರುತದಿ ಭಜಿಪೆ ತ್ವರಿತದಿ ಹÀರಿ ಸರ್ವೋತ್ತಮನೆಂಬುವ ಸರಸ ವಿಜ್ಞಾನವ ಸರಿ ಇಲ್ಲದೆ ಇತ್ತು ಪರಿಪಾಲಿಸು ಎಂದು ಶಿರಸದಿ ನಮಿಪೆ ಆರಿಸಿ ನೋಡಲು ಆರಾರು ಇಲ್ಲವೊ ಕಾರುಣ್ಯಸಾಗರ ಕರುಣಿಸೆ ನೀ ಎನ್ನಾ ಹರಿ ತಾ ಕರುಣಿಪನೆಂದು ಅರಿತು ನಿನ್ನಯ ದಿವ್ಯ ಚರಣ ಸೇರಿದೆನಯ್ಯಾ ಸರಿಬಂದದ್ದು ಮಾಡೋ ಹರಿ ಕುಲಾವರಿಯಾನೆ ಪರಿಪರಿ ಜನರನ್ನು ಪಾಲಿಸಿ ಎನ್ನನು ದೂರದಿ ಇಟ್ಟರೆ ದೊರೆತನವೇನಯ್ಯಾ ಸಾರುವೆ ಸಾರುವೆ ಸರಸಿಜನಾಭನ ಸುತನೆ ಆರುಮೂರೆರಡೊಂದು ಸಾವಿರಾ ಮೂರೆರಡು ಶತಶ್ವಾಸ ಜಪಗಳನು ಮೂರುಜೀವರಲ್ಲಿ ನೀರಜಜಾಕಲ್ಪ ಪರಿಯಂತರ ಮಾಡಿ ಅವರವರ ಗತಿಯಾ ಮರಿಯದೆ ನೀಡುವಿ ಗಿರಿಶಾನುತಪಾದ ಗುರುಜಗನ್ನಾಥ ವಿಠಲನ್ನ ಅರಿವಂತೆ ಮಾಡೋ ಧೀರಾ ಕರುಣಿಯೇ
--------------
ಗುರುಜಗನ್ನಾಥದಾಸರು
ಮಾರುತಿಪಾದವ ಸ್ಮರಿಸಿರೋ ಸಾರದುರಿತ ಪರಹರಿಸ್ಪೊರೆಯುವ ಧೀರ ಪ ದುರುಳದಾನವನ ವರನಗರುರುಹಿತಾ ಪರತರ ವಿಭೀಷಣನೊರ ಕರುಣದಿ ಕಾಯ್ದ 1 ಬುವಿಯಂ ಕೈಲಾಸಕ್ಕೆ ಜವದಿ ಜಿಗಿದು ವೀರ ಭವಭಯಹರ ವರ ಶಿವನ ಚಿತ್ತರಿದಂಥ 2 ಭಕ್ತವತ್ಸಲ ವರ ಮುಕ್ತಿಕರ್ತ ಗುರು ದತ್ತ ಶ್ರೀರಾಮನ ಭೃತ್ಯನೆನಿಸಿಕೊಂಡ 3
--------------
ರಾಮದಾಸರು
ಮಾರುತೀ ಕೊಡು ಭಕುತಿ ನುಡಿಸು ಕೀರ್ತಿ ಪ ತೋರೊ ನಿನ್ನೊಳು ಇಹ ನಿರ್ಮಲ ಮೂರುತಿಯಅ.ಪ ಶ್ರವಣಮಾಡಲು ಭಕುತಿ ಆವಕಾಲಕು ಇತ್ತು ತವಪದದಾಸರ ದಾಸ್ಯ ಕೊಡಿಸೋ ದೇವ 1 ಕೀರ್ತನದೊಳು ಹರಿಕೀರ್ತಿ ಕೊಂಡಾಡೆ ಸಂ ಕೀರ್ತನ ಭಕುತಿಗೆ ಕರ್ತದಾತ ನೀನೆ2 ಸ್ಮರಣೆಯು ಹರಿಯಲ್ಲಿ ನಿರುತವು ನಿನ್ನಲ್ಲಿ ಕರುಣಿಸಿ ಪೊರೆಯೊ ಗುರುವರ ಸುಂದರ 3 ಪಾದ ಸೇವೆಯ ಕೊಡು ಸಾದರದಿಂದಲಿ ಶ್ರೀಧರನಾ ಕೃಪಾಪಾತ್ರನೆಂದೆನಿಸಯ್ಯ 4 ಅಚ್ಯುತನಿಗೆ ನೀನಚ್ಚುಮೆಚ್ಚಾಗಿಹೆ ನಿಚ್ಚದಿ ಹರಿಪಾದರ್ಚನೆ ಮಾಡಿಸಯ್ಯ 5 ವಂದನಾಭಕುತಿ ಎನ್ನಿಂದ ನೀ ಮಾಡಿಸಿ ನಂದನಂದನಗಾನಂದಪಡಿಸೊ ದೇವ 6 ದಾಸಭಕುತಿ ಭಾಗ್ಯ ಆಶಿಸುವೆನು ನಿನ್ನ ವಾಸುದೇವನ ನಿಜದಾಸನೆ ಸರ್ವದಾ 7 ಸಖ್ಯಭಕುತಿ ಕೊಡೋ ಮುಖ್ಯಪ್ರಾಣೇಶನೆ ಮುಖ್ಯಕಾರಣ ಹರಿಯ ಮುಖ್ಯ ಪ್ರೇಮಪಾತ್ರ 8 ಆತ್ಮನಿವೇದನ ಭಕುತಿಯನ್ನು ಪರ ಮಾತ್ಮನಲ್ಲಿತ್ತು ನಿರ್ಮಲಾತ್ಮನೆಂದೆನಿಸೊ 9 ನವವಿಧ ಭಕುತಿಯ ಕೊಟ್ಟು ಸಲಹೋ ದೇವ ಅವಕಾಲಕು ಪವಮಾನ ನೀನೆ ಗತಿ 10 ಸಂಕಟ ಹರಿಪ ಶ್ರೀ ವೇಂಕಟೇಶನ ದೂತ ಭಂಟನೆಂದೆನಿಸೆನ್ನ ಸಂಕಟ ಹರಿಸಯ್ಯ11
--------------
ಉರಗಾದ್ರಿವಾಸವಿಠಲದಾಸರು
ಮಾರುತೀ ಗುರುಮಾರುತಿ ನಿನ್ನ ಸಾರಥಿ | ಜಯ ಪ ಶರಧಿ ಗಂಭೀರ ನತಜನೋ- ದ್ಧಾರ ಪವಿನಿಭ ಶರೀರ ಮಹಾವೀರ ಅ.ಪ ಭವ ಭಂಜಕ ನೀನೆ ಪ್ರಭಂಜನ ತನಯ 1 ದಾತ ಶ್ರೀರಾಮನ ದೂತಾಗ್ರಣಿಯೆ 2 ರೋಮರೋಮಕೆ ಕೋಟಿಲಿಂಗವುದರಿಸಿ ಗುರು- ರಾಮ ವಿಠಲನ ನಿಷ್ಕಾಮದಿ ಭಜಿಸುವ 3
--------------
ಗುರುರಾಮವಿಠಲ
ಮಾರುತೀ ಜ್ಞಾನ ಮೂರುತೀ ಪ ಬಾರಿಬಾರಿಗೆ ಬಹದುರಿತ ಪರಿಹಸಯ್ಯ ಅ.ಪ ಜೀವ ಕೃತಕರ್ಮ ಕ್ರಿಯೆಗಳೂ ಹಗಲಿರುಳೊಳು ಪವಮಾನ ನೀನೆ ನಡೆಸೆ ಸಡೆಸೋರು ತತ್ತ್ವೇಶರು ಭವಬಂಧ ಹರಿಸಿ ಕಾಪಾಡಯ್ಯ ಬೇಡುವೆ ಜೀಯ ತವಪಾದದಾಸ್ಯವ ಕೊಡಿಸಯ್ಯ ಯಾಕೆ ನಿರ್ದಯ 1 ಬಹುಜನುಮವನೆತ್ತಿ ಬಂದೆನೊ ಇಲ್ಲಿ ನಿಂದೆನೊ ಅಹರಹರ ನೀ ನಡೆಸೆ ನಡಿವೆನೊ ನುಡಿಸೆ ನುಡಿವೆನೊ ಇಹಪರ ಸಾಧನ ನಿನ್ನಿಂದ ಎನ್ನ ಕೈಯಿಂದ ಬಹುಪರಿ ಮಾಡಿಸಿ ಭವದಿಂದುದ್ಧರಿಸೆಂದೇ 2 ಪಂಕಜೋದ್ಭವ ಪದವ ಪಡೆವಯ್ಯ ಆರೆಣೆಯಯ್ಯ ಕಿಂಕರರೊಳಗೇಕೆ ನಿರ್ದಯ ನಂಬಿದೆನಯ್ಯ ಶಂಕರಾನತ ಪೂಜಿತಾಂಘ್ರಿಯ ದಯ ತೋರಯ್ಯ ಶ್ರೀ ವೇಂಕಟೇಶನ ಮುಂದೆ ನಿಂದಿಹ ಭಕ್ತಿಯಿಂದಿಹ3
--------------
ಉರಗಾದ್ರಿವಾಸವಿಠಲದಾಸರು
ಮಾರುತೀ ನಮ್ಮಗುರು ಮೂರುತೀ ಪ ಮಾರುತಿ ಕರುಣಿಸು ಜ್ಞಾನಾ ಎನ್ನ ಸೇರಿದ ಸತತ ಅಜ್ಞಾನಾ ಆಹ ದೂರ ಓಡಿಸಿ ಹರಿ ಆರಾಧನೆ ಇತ್ತು ಪಥ ಸರ್ವಾಧಾರ ಉದಾರನೆ ಅ.ಪ. ದ್ವಿತೀಯ ಯುಗದಲ್ಲವತರಿಸಿ ಸೀತಾ ಅತಿ ವೇಗದಿಂದ ಉತ್ತರಿಸಿ ರವಿ ಸುತಗೊಲಿದವನುದ್ಧರಿಸಿ ಆಹಾ ಕ್ಷಿತಿಜದೇವಿಯಳನು ಸ್ತುತಿಸಿ ಮುದ್ರಿಕೆಯಿತ್ತು ದಿವಿಜರ ಸದೆದ ಭಾರತಿಯ ರಮಣನೆ 1 ಕುರುಕುಲದಲ್ಲಿ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರಣಿ ರೂಪವನೆ ಸಿಂಗರಿಸಿ ನೀಚ ತರ ಕೀಚಕನ ಸಂಹರಿಸಿ ಆಹ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮ ಸಮರ್ಥನೆ 2 ಭೂತಳದೊಳಗೆ ಯತಿಯ ರೂಪ ನೀ ತಾಳಿದೆಯೋ ಶುಭಕಾಯ ಮಾಯಿ ವ್ರಾತ ಗೆಲಿದೆ ಮಧ್ವರಾಯಾ ಕಾಯ ಜಾತ ಜನಕಗತಿ ಪ್ರೀಯಾ ಆಹಾ ಭೂತನಾಥನೆ ಪರಮಾತುಮನೆಂಬ ಪಾತಕರರಿ ಜಗನ್ನಾಥವಿಠಲನ ದೂತ 3
--------------
ಜಗನ್ನಾಥದಾಸರು
ಮಾರ್ಗ ನಡಿಬೇಡಾ ಪ ಸೇವೆಯ ಮಾಡಬೇಡ ಮಾಡದಿರಬೇಡ 1 ನೀ ಬೀಳಬೇಡ ಒಳಗಾಗಿ ಕೆಡಬೇಡ 2 ಜ್ಞಾನಿಗಳ ಸಂಗ ಬಿಡಬೇಡ ಅಜ್ಞಾನಿಯ----ಇರಬೇಡ ಮನ್ನಿಸದಿರಬೇಡ 3 ತಪ್ಪಿನಡೆ ನುಡಿಬೇಡಾ ಹಿರಿಯರ ಬುದ್ಧಿ ಬಿಡಬೇಡಾ 4 ಅನ್ಯಜಾತಿಗೊಳಗಾಗಬೇಡಾ ನಿನ್ನ ಜಾತಿಧರ್ಮ ಬಿಡಬೇಡಾ ಸ್ಮರಿಸದಿನಿರು ಬೇಡಾ 5
--------------
ಹೆನ್ನೆರಂಗದಾಸರು
ಮಾರ್ಗದರ್ಶಕೆ ದೇವಿ ಮಾರ್ಗ ತೋರಮ್ಮ |ಸರ್ವ ಪೂರ್ವದಿ ಕವ್ಯ ಬಾಲನೆಂಬನ ಮಗಳೇ ಪ ಹರಿದೀಕ್ಷೆ ಹರಿತತ್ವ ನಿರ್ಣಯಾದಿಗಳಿರುವನರರು ಕಲಿಯುಗದಲ್ಲಿ ದುರ್ಲಭರು ಎಂದು |ಪರಿಪರಿಯ ಚಿತ್ರಿಸುತ ಸದ್ಬೋಧ ಮಾಡಿರುವೆಹರಿ ಪದಾಬ್ಜದಿ ಭಕುತಿ ಎಷ್ಟಿಹುದೊ ನಿನ್ನಲ್ಲಿ 1 ಶೇಷಾಚಲಕೆ ಬಂದು ಆ ಸುತೀರ್ಥವು ಕಪಿಲಲೇಸಾಗಿ ಮಜ್ಜನವಗೈದು ತಪವಾ |ಸಾಸಿರೊರ್ಷವು ದಿವ್ಯ ಏಕ ಚಿತ್ತದಿ ಗೈದುಭಾಸುರ ಸ್ತೋತ್ರದಿ ಹರಿಯ ತೋಷಿಸಿದೇ 2 ತಂದೆ ತಾಯಿಯು ನೀನು ಬಂಧು ಬಳಗವು ನೀನುಎಂದೆಂದಿU5ಭ್ರಾತ ವಲ್ಲಭನು ನೀನೇ |ಇಂದಿರೇಶನ ಹೊರತು ಮಂದಿ ಬೇರಿಲ್ಲೆನಗೆಎಂದು ನೀತುತಿಸಿ ಹರಿ ಸಂದರ್ಶನವ ಪಡೆದೇ 3 ದ್ವಾಪರದಲಾ ಕವ್ಯ 5À್ನಜಿತು ನೃಪನಾಗೆರೂಪಲಾವಣ್ಯಾತಿಶಯಗಳಿ5 |ಭೂಪ ಕುವರಿಯು ಆಗಿ ನೀಲಾಖ್ಯೆ ಎನಿಸುತ್ತಶ್ರೀ ಪತಿಯ ಕೈ ಪಿಡಿಯೆ ಮನವ ನೀ ಮಾಡ್ಡೇ 4 ದೈತ್ಯ ಸಪ್ತಕರೇವೆ ಗೂಳಿಗಳು ತಾವಾಗಿಸತ್ಯ ಹರಿ ದ್ವೇಷವನೆ ಸಾಧಿಸುವೆವೆಂದೂನಿತ್ಯ ಪುಷ್ಟಾಂಗದಲಿ ಬೆಳೆಯುತ್ತ ನೃಪನಲ್ಲಿಕೃತ್ಯ ಸ್ವಯಂವರ ಕೇಳಿ ಹರ್ಷಿತರು ಆಗೀ 5 ವಿಪರೀತ ಮತಿಯುಳ್ಳ ಅಪರಿಮಿತ ಬಲತೋರ್ವಸಪುತ ಗೂಳಿಗಳನ್ನೆ ಆರು ಬಂಧಿಪರೋ |ನೃಪನೆಂದ ಸುತೆ ನೀಲೆ ಕನ್ಯೆ ಕೊಡುವೆನು ಅವಗೆನೃಪ ನಿಂತು ಪಣತೊಟ್ಟ ಕೌತುಕವ ಕೇಳೀ 6 ಆರು ಬಂದವರೆಲ್ಲ ಹೋರಿಗಳ ಪಿಡಿಯಲ್ಕೆವೀರ್ಯ ಸಾಲದೆ ಮರಳಿ ಹೋಗುತಿರಲೂ |ಮಾರ ಪಿತ ಶಿರಿ ಕೃಷ್ಣ ಹೋರಿ ನಾಸಿಕಗಳಿಗೆದಾರಗಳ ಬಿಗಿಯುತ್ತೆ ಬಂಧವನ ಗೈದಾ 7 ದೇವಿ ಸುಂದರಿ ನೀಲೆ ದಿವ್ಯ ಹಾರವ ಪಿಡಿದು ದೇವ ದೇವೇಶ ಶಿರಿ ಕೃಷ್ಣ ಕಂಠದಲೀಹಾವ ಭಾವದಿ ಬಂದು ಅರ್ಪಿಸಲು ತಕ್ಷಣದಿದೇವ ವಾದ್ಯವು ಮೊರೆಯೆ ಪೂವ ಮಳೆ ಬಿತ್ತು8 ಕೃಷ್ಣ ಮಡದಿಯರಾರು ಮಂದಿಯೊಳು ನೀಲಾಖ್ಯೆಲಗ್ನದುತ್ಸವ ಕೇಳ್ದ ಭಕುತ ಜನರಾ |ಭಗ್ನ ಗೈಸುತ ಪಾಪ ಮಗ್ನವಾಹುದು ಮನವುಕೃಷ್ಣ ಗುರು ಗೋವಿಂದ ವಿಠಲ ಪದದಲ್ಲೀ 9
--------------
ಗುರುಗೋವಿಂದವಿಠಲರು
ಮಾರ್ಗವೇ ಕಾಣಿಸದು ವೈಕುಂಠಕೆ ಪೇರ್ಗಿರಿಗಳ ದಾಂಟಲಾರ್ಗಳವೋ ಕಾಣೆ ಪ ಭೋರ್ಗರೆವುದು ಬಲಮಾರ್ಗದಿ ಜಲನಿಧಿ ಕಾರ್ಗಡಲು ಎಡ ಮಾರ್ಗದಿ ಕಗ್ಗತ್ತಲೆ ಅ.ಪ ಹಿಂದೆ ಮೃಗಂಗಳ ಸಂದಣಿಯಾರ್ಭಟ ದಿಂದ ಮನದ ದೈರ್ಯಕುಂದಿದುದಕಟ ಮ ಹಾಂಧಕೂಪದೊಳೆನ್ನ ಎದೆ ಕುಸಿದು ಬಂಧಿಸಿತೆನ್ನ ಕಾವ ಬಂಧುಗಳಿಲ್ಲ 1 ಕೂಪದಿ ಕ್ರಿಮಿಗಳು ಕೋಪಿಸಿ ತನುವನು ಈ ಪರಿಯೆಲ್ಲವು ತಾಪತ್ರಯಂಗಳ ಧೂಪ ದೀಪಗಳ ಪಾಪದ ಫಲವೋ 2 ದಡವನು ಕಾಣದೆ ತಡಬಡಿಸುವೆನೋ ಮೃಡನು ತಾ ಮಾಂಗಿರಿಯೊಡೆಯ ಶ್ರೀರಂಗ ಕಡುಪಾತಕಿಯ ಕೈಹಿಡಿದೆತ್ತಿ ಕೃಪೆಯಿಂದ ತಡಿಗೆ ಸೇರಿಸಿ ನಿನ್ನ ಅಡಿಯಪಿಡಿಸೋ ದೇವಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್