ಒಟ್ಟು 2964 ಕಡೆಗಳಲ್ಲಿ , 122 ದಾಸರು , 2123 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ | ಪಂಥದಲ್ಲಿ ಕೆಡಲಿಬೇಡ ಎರಡು ದಿನ | ಸಂತೆ ನೆರೆದಂತೆ ಮೂಢ ಇಪ್ಪದಿದು | ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ಪ ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ | ಸಂಚಿತಾರ್ಥವ ತಿಳಿಯದೆ ಮರುಳಾದ | ಪರ | ಪಂಚವನು ನೀ ಕಳಿಯದೆ ವ್ಯರ್ಥಾಯ | ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು | ಹಂಚಿಕೆ ತೋರಿದಂತೆ ಮೃತ್ಯುವಿನ | ಪಂಚದಲಿ ಸೇರಿದಂತೆ | ಆಗುವುದು | ಕಂಚು ಕೆಳಗೆ ಬಿದ್ದಂತೆ ಪ್ರಾಣಿ 1 ನುಗ್ಗು ನುಸಿಯಾಗದಿರು | ನೂಕು ನಿನ್ನಹಂಕಾರ | ಮುಗ್ಗದಿರು ಈ ಬಲಕಿಗೆ ಸ್ಥಿರವಾಗಿ | ಬಗ್ಗು ನಡೆವಳಿ ನಡೆದು | ವೆಗ್ಗಳದ ನಡೆವಳಿ ನಡೆದು | ವೆಗ್ಗಳದ ಧರ್ಮದಾ ಸುಗ್ಗಿಯಲಿ ದಿನವ ಹಾಕೊ | ಬಿಡು ಬಿಡು ಅಗ್ಗಳಿಕೆತನವೆ | ಸಾಕು ಆವಾಗ ತೆಗ್ಗಿಕೊಂಡಿರಲಿ ಬೇಕು | ಪ್ರಾಣಿ 2 ಇನ್ನಾದರೂ ಕೇಳು | ಪುಣ್ಯವಂತರ ಕೂಡು | ನಿನ್ನವರು ನಿನಗೆ ದಾರೊ | ಕಣ್ಣಾಗೆ ಎಣ್ಣೆ ಬಿದ್ದಂತೆ ಸಾರೊ ಬಾಯಿಂದ | ಬೆನ್ನಿಗೆ ಬಂದ ವಿಚಾರೊ ತುದಿಯಲಿ | ಮಣ್ಣು ಮಣ್ಣನೆ ಕಲಿತು ಹೋಗುವುದು ನಿಶ್ಚಯವು | ಚೆನ್ನಾಗಿ ಎಚ್ಚೆತ್ತುಕೋ ಈ ಮಾತಿಗೆ | ಖಿನ್ನನಾಗುವದೇತಕೊ ಸಾವಿರಕು | ಮುನ್ನಿಲ್ಲವೊ ಮನಸಿತೊ ಪ್ರಾಣಿ 3 ವೇದಶಾಸ್ತ್ರವನರಿಯೆ ಆದಿಪುರಾಣಗಳು | ಅದ್ವೈತ | ವಾದವರ ಕೂಡದಿರು ಇದೆ ಮಿಗಿ ಲಾದರು ಮರಿಯದಿರು ಉತ್ತಮ | ಸಿರಿ ವಿಜಯವಿಠ್ಠಲನ ಶ್ರೀ | ಪಾದವನು ಒಂದೇ ಭಕ್ತಿಯಿಂದಲಾ | ರಾಧಿಸು ಇದಕೆ ಯುಕ್ತಿ ಕಡಿಯದಲೆ | ಮಾಧವನು ಕೊಡುವ ಮುಕ್ತಿ ಪ್ರಾಣಿ4
--------------
ವಿಜಯದಾಸ
ಎಂತು ರಕ್ಷಿಪೆ ಎನಗೆಂತು ಶಿಕ್ಷಕರಿಲ್ಲ ಪ ಸಕಳ ಸಂಶಯಗಳ ವಿಕಳವ ಮಾಡಿಸಿ ಅಕಳಂಕ ಮತಿ ಸೋಮ ಸುಕಳ ಮಾಡುವರಿಲ್ಲ 1 ಸಂತತ ನಿನಗೇನು ಅಂತರ ಸ್ಥಿತಿಯೆಂದು ಚಿಂತಿಪ ಬಂಧು ಆದ ಸಂತ ಜನರ ಕಾಣೆ 2 ಪರಿಪರಿ ಬಗೆಯಿಂದ ಪರತತ್ವಗಳನು ಅರಿದು ತಿಳಿಪದ್ಯಚ್ಚರಿಪರು ಎನಗಿಲ್ಲ3 ತುತಿ ಮಾಡಿ ಕೆಲರು ಸನ್ಮತಿಯಾಗೊಡಿಸುವರು ಕ್ಷಿತಿಯೊಳಗೆನಗುಪಕೃತಿಯ ಮಾಡುವರಿಲ್ಲ 4 ಹಲವು ಪರಿಯಲೆನ್ನ ಸಲಹುವ ಗುರುದೈವ ಕುಲಪ ವಾಸುದೇವವಿಠಲ ನೀ ಕರುಣಿಸೊ 5
--------------
ವ್ಯಾಸತತ್ವಜ್ಞದಾಸರು
ಎಂತು ವರ್ಣಿಪೆ ನಮ್ಮಮ್ಮಾ | ಯಂತ್ರೋದ್ಧಾರಕÀನಾಗಿ ಮೆರೆವನಾ ಪ ಕೋತಿ ರೂಪದಲಿ ಬಂದು | ಭೂತಳಕೆ ಬೆಡಗು ತೋರಿ || ಈ ತುಂಗಭದ್ರೆಯಲ್ಲಿ | ಖ್ಯಾತಿಯಾಗಿಪ್ಪ ಯತಿಯಾ1 ಸುತ್ತಲು ವಾನರ ಬದ್ಧ | ಮತ್ತೆ ವಲಯಾಕಾರ ಮಧ್ಯ || ಚಿತ್ರಕೋಣ ಅದರೊಳು | ನಿತ್ಯದಲಿಯಿಪ್ಪ ಯತಿಯಾ 2 ವ್ಯಾಸ ಮುನಿರಾಯರಿಂದ | ಈ ಶಿಲೆಯೊಳಗೆ ನಿಂದು || ಶ್ರೀಶ ವಿಜಯವಿಠ್ಠಲನ್ನ | ಏಸು ಬಗೆ ತುತಿಪನ್ನ 3
--------------
ವಿಜಯದಾಸ
ಎಂಥ ಗುರುಶಿಷ್ಯರ ಜೋಡಿಯು ನೋಡಿರಿಇಂಥವರ ಸ್ಮರಿಸಿದರೆ ಚಿಂತೆ ದೂರಾಗುವದು ಪಧ್ರುವರಾಜವಂಶದಿಂದಿಳೆಯೊಳಗೆ ಅವತರಿಸಿಸರ್ವದುರ್'ಷಯದಲಿ ವೈರಾಗ್ಯ ಬೆಳೆಸಿಬಾಲ್ಯದಲಿ ಪರಮಹಂಸಾಶ್ರಮ ಸ್ವೀಕರಿಸಿಶ್ರೀಪಾದ-ರಾಜರೆಂದೆನಿಸಿ ಮೆರೆವರು ನೋಡು 1ಶ್ರೀಶನನು ಕಂಬದಿಂದ ತಂದ ಪ್ರಲ್ಹಾದನೆವ್ಯಾಸಮುನಿಯಾಗಿ ಅವತರಿಸಿ ಬಂದುದೇಶಾಧಿಪತಿಗೆ ಬಂದಾಪತ್ತು ಪರಿಹರಿಸಿಶ್ರೀ ಪಾದರಾಜರಿಗೆ ಶಿಷ್ಯರಾದರು ನೋಡು 2ಜ್ಞಾನ ವೈರಾಗ್ಯ ಭಕ್ತಿಯು ತುಂಬಿರುವುದುದೀನಜನ ಮಂದಾರ ಭಕ್ತ ಪುರಧೇನು'ಜುೀಂದ್ರ ವಾದಿರಾಜರಿಗೆ ಗುರು ಪರಮಗುರುಭೂಮಪತಿ'ಠ್ಠಲನ ಕುಣಿಸಿದ ಮಹಾತ್ಮರು 3ಸೋದೆ ವಾದಿರಾಜರು
--------------
ಭೂಪತಿ ವಿಠಲರು
ಎಂಥ ಪಾಪಿ ನಾನು ಹರಿ ಹರಿ ಪ ಕರ್ಮ ತಿಂತಿಣಿಗಳ ಬಾಧೆಗಳನು | ಅಂತ್ಯಗಾಣದಾದೆನಯ್ಯ ಅ.ಪ ಪರಹಿತಾರ್ಥ ಮನದೊಳೆಣಿಸದೆ || ನರಕದುಃಖದೊಳು ಗೋಳಿಡಲು | ಬರುವರಾರು ಕಾಣದಿರಲು 1 ಪರ ಇರುತ ಮಾಯಾಬಲೆಯೊಳಗೆ ಬಿದ್ದೆ || ಕರೆದರಾರು ಬಾರದಿನಿತು | ಪರಿಯ ಭವಕಿಲ್ಬಿಷವನುಣುವ 2 ಶ್ವಾನನಂತೆ ನಾನು ತೊಳಲಿದೆ || ತಾನು ತನ್ನದೆಂದಧರ್ಮ ನಾ | ಏನನೆಂದರು ಕೇಳರಯ್ಯ 3 ಅನ್ಯರೆಂದು ಪರರ ನಿಂದಿಸಿ | ಪುಣ್ಯಹೀನನಾದೆನಯ್ಯ 4 ಸರ್ವವಿಧದಿ ಭಜಿಸಿ ನಿಜ | ಸರ್ವೇಶ ಶ್ರೀನಿವಾಸನೆನದೆ 5
--------------
ಸದಾನಂದರು
ಎಂಥÀ ಮಗನೆ ನಿಮ್ಮ ಗೋಪಮ್ಮ ಧ್ರುವ ನವನೀತ ಚೋರ ಜಾರ 1 ಎಳೆವನು ಹಾದಿ ಬೀದಿ ಯೊಳಗೆ ಸೆರಗ ಸುಳಹು ಕಂಡಾರೆಂದರೆ ತಾ ತಿರಗ 2 ಹಿಡಿದೇನೆಂದರೆ ಕೈಯೊಳು ಸಿಲುಕ ಮಾಡಿ ಮಾಡದಿದ್ಹಾಂಗ ಇವ ಬಲು ಠಕ್ಕ 3 ಹೇಳಬೇಕಿನ್ನಾರಿಗೆ ಈ ದೂರ ತಿಳಿದುಕೊಳ್ಳಮ್ಮ ಮಗನ ವಿಚಾರ 4 ಬಿಡ ಇವನೆಂದೂ ಪಿಡಿದವರ ಕೈಯ ಬಿಡದೆ ಸಲಹುತಿಹ್ಯ ಮೂಢಮಹಿಪತಿಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಂಥಾ ಜಾಣೆಯೋ ಸುಪ್ರವೀಣೆಯೋ ಮುನ್ನಾಕೆಎಂಥಾ ನೋಂಪಿಯನೋಂತ ಫಲವೋಕಾಂತನ ಪರಕೀಯ ಕಾಂತೆಯೆಡೆಗ ಬಿಡ-ದಂತೆ ಸಂತಸದೊಳೇಕಾಂತ ಸುಖದೊಳಿರ್ಪ ಪ ನುತ ಹಂಸತೂಲತಲ್ಪದೊಳು ನಾನಾ ಬಂಧಗತಿಯಲಿ ಕಾಮಕೇಳಿಯನೆಸಗಿರತಿಸುಖಪಾರವಶ್ಯದೊಳೊಂದು ವರುಷದಮಿತಿಯನು ತೃಟಿಕಾಲವೆಂದುಸುರುವಳು ತಾ 1 ಹೆಣ್ಣು ಜನ್ಮದಿ ಹುಟ್ಟಿದುದಕೆ ಫಲವದುಕನ್ನೆಯರೊಳಗೆ ಕಟ್ಟಾಣಿಯಾಕೆಮುನ್ನೆಷ್ಟುಗಾಲ ತಪವ ಮಾಡಿ ತಾನಿಂಥಾಪುಣ್ಯವ ಪಡೆದಳಾಕೆಯ ಜನ್ಮ ಸಫಲವೋ2 ವರುಷವಾಗಲಿ ಒಂದು ದಿನವಾದರಾಗಲಾತರುಣಿಯ ಭೋಗದಂತಿರಬೇಡವೆಇರುಳು ಹಗಲು ಕಾಣದಂತೆ ಶ್ರೀ ಕೆಳದಿಯಪುರದ ರಾಮೇಶನೊಳ್ಪರಸದೊಳಿರುವಳಿಂ 3
--------------
ಕೆಳದಿ ವೆಂಕಣ್ಣ ಕವಿ
ಎಂಥಾ ನಿರ್ದಯನಾದ್ಯೋ ಎಲೆ ದೇವನೆ ಕಂತುಪಿತ ನಿನ್ನ ಅಂತ:ಕರುಣ ಎನ್ನ ಮೇಲೆ ಇಲ್ಲದೆ ಪ ಅಂತರಂಗದಿ ಮನದಿ ಅನುದಿನವು ಬಿಡದೆ ನಿಮ್ಮಾ ಚಿಂತನೆಯ ಮಾಡಿದರೆ ಚಿತ್ತಕರಗದೇಕೆ ಅಂಥ ಮಹಾದೋಷ ದತಿಶಯನಗೇನುಂಟ- ನಂತಗುಣ ಪರಿಪೂರ್ಣ ಆದಿನಾರಾಯಣ 1 ವಾಸುದೇವನೆ ನಿಮ್ಮ ವರ್ಣಿಸುವೆನು ವಸುಧಿಯೊಳು ಭೂಸುರರ ಪೋಷಿಸುವ ಪುಣ್ಯಪುರುಷಾ ಘಾಸಿಗೊಳಗಾಗಿ ನಿಮ್ಮ ಧ್ಯಾಸವೇಗತಿಯೆಂದು ಏಸೋ ಪರಿಯಲಿ ಭಜಿಸಿ ಈಶ ನಿನ್ನ ಕೃಪೆಯಾಗದೂ 2 ಸಕಲಲೋಕಾಧೀಶ ಸಕಲಭಾರಕರ್ತನಾಗಿ ಪ್ರಕಟ ಭಕುತರೊಳಗೆ ಪಾಲಿಸದೆ ಎನ್ನಾ ಮುಕುತಿದಾಯಕ ಹೆನ್ನ ವಿಠ್ಠಲ ನೀನೆ ಗೋವಿಂದ ಅಕಲಂಕ ಮಹಿಮ ನಿನ್ಹರುಷವನು ತೋರದಿನ್ನಾ 3
--------------
ಹೆನ್ನೆರಂಗದಾಸರು
ಎಂಥಾ-----------ಈಗ ಪಿಡಿಯೊ ಎನ್ನ ಕೈಯ್ಯ ಬೇಗ ಅನಂತಾ ಭಗವಂತಾ ಶ್ರೀಕಾಂತಾ ಜಗದಂತ ....... ಪ ಒಂದೊಂದು ದಿನವು ಎಂಬುದು ಒಂದೊಂದು ಯುಗವು ಆಗಿ ಬೆಂದು ಬಹಳ ಬೇಸರದಿಂದ ತಂದೆ ----------ಬಂದೀ ಕಂದನೆಂದು ಕರುಣದಿಂದ ---------ಗೋವಿಂದ ನಂದ ಮುಕುಂದಾ ಶ್ರೀ ಮಂದರಧರ 1 ಮಕ್ಕಳು ಮರಿಗಳು ಎಲ್ಲಾ ------ಕಾಣದ ದೇವಾ ಶುಷ್ಕ ಭೂತರಾಗಿ ಇನ್ನು ಸುಖವು ಕಾಣದೆ ---ನೆಗೊಂಡು ಬಹಳಘೋರ ನಾ ಬಡುವದು ಕಂಡು ನಿಕ್ಕಾಸಲಾರದೆ ನಿನ್ನ ಮೊರೆಯ ಹೊಕ್ಕ ಕಾಯಯ್ಯ ನೀನೆ --------- ಶ್ರೀ ಲೋಕನಾಯಕ ಹರಿಯೆ 2 ಮನಸು ನಿನ್ನ ಧ್ಯಾನವು ಬಿಟ್ಟು ತಿರಸೂ? ಚಿಂತನೆಗೊಳಗೆ ಆಗಿ ಕನಸಿನಲ್ಲಿ ಕಾಣೋನಿಲ್ಲಾ ಕಾಯದ ಸುಖವೆಂಬಾದಿನ್ನು ಅನಿಮಿತ್ತ ಬಂಧು ಕೃಷ್ಣ ಹರಿ 'ಹೊನ್ನ ವಿಠ್ಠಲ' ರಾಯ ಮನಸಿಜನಯ್ಯ ಮೋಹನ್ನ ನಿಧಾನಾ ಸುರಧೇನು ಸದ್ಗುಣಪೂರ್ಣ 3
--------------
ಹೆನ್ನೆರಂಗದಾಸರು
ಎಂದಿಗೆ ನೀ ಕರುಣಿಸುವಿ ಸುಂದರಾಂಗ ಎನ್ನೊಳು ಕುಂದಿ ಪೋದೆನಲ್ಲೊ ಬೇಗ ಬಂದು ಕಾಯೊ ಕರುಣಾಳು ಪ. ಧರ್ಮ ಕರ್ಮಗಳು ಮಾಳ್ಪ ಮರ್ಮವರಿಯದಿದ್ದರು ಭರ್ಮದಾಶೆಗಾಗಿ ಹೀನ ಕರ್ಮದೊಳಗೆ ಬಿದ್ದರು ದುರ್ಮದಾಂಧರನು ಗೆಲುವ ನಿರ್ಮಲ ಚಿದಾತ್ಮ ನಿನ್ನ ಹಮ್ರ್ಯದ ಮುಂದೊದರಿ ಸರ್ವಶರ್ಮಪೊಂದಿಚ್ಛಿಸುವೆನು 1 ಜೀಯ ನಿನ್ನ ಪೊಗಳಿ ಪಾಡುವಾಯವಿರಲು ಸಾಕಯ್ಯ ರಾಯರೊಲವು ತನ್ನಂತೆ ನಿರಾಯಾಸದಿಂದಹುದೈಯ್ಯ ವಾಯುವೀಯ ಜನರ ಕೂಡಿ ಮಾಯ ಗೆಲಲು ಮಾನವೀಯ ಕಾಯವನ್ನು ನೋಯದಂತೆ ಕಾಯೊ ಸಕಲದಾಯಕಾರಿ 2 ನಿತ್ಯಾನಂದ ನಿನ್ನ ಪಾಡಿ ಹೊತ್ತ ಕಳೆವ ಕಾರ್ಯಕ್ಕೆ ಒತ್ತಿ ಬರುವ ವಿಘ್ನಬಾಧೆ ಹತ್ತದಂತೆ ಓಡಿಸು ಸತ್ಯರಮಣ ಶರಣ ಪುರುಷೋತ್ತಮ ಶ್ರೀ ವೆಂಕಟೇಶ ಚಿತ್ತದಲ್ಲಿ ನಿನ್ನ ದಿವ್ಯ ಮೂರ್ತಿದೋರೊ ಮರಿಯದಿರು 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಂದಿಗೆ ಶ್ರೀಹರಿಯಾ ಮಾತಿಲಿ ಕಾಲವು ಕಳೆದಲ್ಲಿ ಘನವೇನಿಲ್ಲಯ್ಯ ಪ ಸ್ಥಳಕುಲ ಮೋದಿಸಿ ತಾಂಡವಮೂರ್ತಿಯ ಕುಲನೆನಿಸಿ ಮಾರ್ಗದಲಿ ಕುಲನೆಲೆ ತಿಳಿದು ಕಾಣುತಹೋಗುವ ನೆನೆಗಳ್ಳರ ಕೂಡೆ ಚಲೊ ಚಲೊ ಬೋಧಿಗೆ ಒಳಗಾಗಿ ಮಧುರಸ ಚಂಚಲ ನತಿ------ದು ಭಲ ಭಲ ಎನಿಸಿಕೊ ಬೇಗನೆ ಪರಮ ಭಕ್ತರ ಒಳಗೆಂದೂ 1 ಸರಸರ ಮಾರ್ಗದ ಸರಳಿಯ ತಿಳಿದಾ ಶರಣರ ನೆಲೆಗಾಣೊ ನೆರೆಹೊರೆಲಿರುವರ ಕರಕರಿಗಳುಯೆಂಬ ಕಲ್ಮಿಷ-----ಕಾಣೊ ಹರಿಗುರು ಕರುಣಾದಿ ಅಂತರಂಗದಿ ಅರಿತಿರುವರ ಕೂಡೋ ಪರಿ ಪರಿಯಲಿ ಆ ಭಂಡಾರದ ಗುರುಭಾರವು ನೀನೋಡೊ 2 ಮನಘನ ಕಾಂತಿಯ ಮಹಿಮೆಯ ತಿಳಿದಾ ಮರ್ಮಜ್ಞರ ಬೆರಿಯೊ ದಿನ ದಿನ ಸಂಭ್ರಮವನು ಅಘಸರಿಸಿ ದೃಢಭವವು ಪಿಡಿಯೊ ತನುವನು------ದ್ರಿಸಿ ತಾರಕ ಜಪಿಸಿ ಧನ್ಯನಾಗೊ ಇನ್ನೂ ದೀನಜನ ರಕ್ಷಕ ಧೀರ 'ಹೆನ್ನೆ ವಿಠ್ಠಲನ’ ಧಿಟ್ಟದಿ ಸ್ಮರಿಸಿನ್ನು 3
--------------
ಹೆನ್ನೆರಂಗದಾಸರು
ಎಂದಿಗೋ ಆಗುವುದಕೆ ಈಗ್ಯಾಕೆ ವ್ಯಾಜ್ಯ ಪ ಮುಂದೆ ನೋಡಿ ನಡಿಯದಿರೆ ಮುಕ್ತಿ ಪೂಜ್ಯ ಅ.ಪ ಬ್ರಹ್ಮಗೆ ಜೀವತ್ವ ಯಾವಾಗ ಬಂತು ನಮ್ಮೊಳಗೆ ಗೊತ್ತಿಲ್ಲದ ಭ್ರಾಂತು 1 ಮಾಯಾ ಮಿಥ್ಯ ಸತ್ಯ ನಾವು ನೋಡಿಕ್ಕೊಂಡರೆರಡು ಅಗತ್ಯ 2 ಗುರುರಾಮವಿಠಲ ಇದರ ಕುರುಹಲ್ಲಾ 3
--------------
ಗುರುರಾಮವಿಠಲ
ಎಂದು ಕಾಂಬುವೆ ಮಾಧವತೀರ್ಥರ ಸುಂದರ ಮಂದಿರ ಪ ಚಾರುಚಿತ್ರ ಕಲಶಕನ್ನಡಿ ಆರೊಂದು ನೆಲೆಗೋಪುರವ ಸವಿ ಸ್ತಾರಮಾಗಿ ತೋರುವ ಮಹಾ ದ್ವಾರದಮುಂದೆ ಬಿದ್ದು ನಮಿಸಿ 1 ತೊಲೆತುಂಡು ಕಂಭ ಬೋದುಗೆ ಶಿಲೆಯಿಂದ ನಿರ್ಮಿತವಾಗಿ ಹೊಳೆವ ಮಂಟಪ ರಂಗು ಮಧ್ಯ ದೊಳಗೆಚೆಲುವ ವೃಂದಾವನವ 2 ಮೂಲ ಪ್ರತಿಮೆ ಸಾಲು ಸಾಲು ವಿ ಮೂಲಪೀಠದ ಪವಿತ್ರಶಾಲೆ ಕಾಲತ್ರಯದಿ ವೇದಘೋಷ 3 ಧಾತ್ರಿಜನರು ಬಂದು ಕೂಡಿ ಯಾತ್ರೆಗೈದು ಜನುಮ ನಿತ್ಯ ಸಾರ್ಥಮಾಡಿಕೊಂಡು ಸತತ ಅರ್ಥಿಯಿಂದ ಪೋಪ ಸಮಯ 4 ಧರೆಯೊಳಧಿಕ ಬುದ್ಧಿನ್ನಿಪುರದಿ ಮೆರೆವ ಶ್ರೀಗುರು ಮಾಧವೇಂದ್ರ ವರಮಂದಿರದಮಿತ ವೈಭವ ಕರುಣಿ ಶ್ರೀರಾಮ ನಿಂತು ನಡೆಸುವ 5
--------------
ರಾಮದಾಸರು
ಎಂದು ದೂರಮಾಡುವಿ ಎನ್ನ ಬಂಧನವನು ಸಿಂಧುಶಯನ ತಂದೆ ಈ ಭವದಂದುಗವನು ಸಹಿಸಲಾರೆ ಪ ಸತಿಪತಿಯ ರತಿಯ ಕಲಹದಿ ಪತನಾದಿಂದ್ರಿಯಿಂದೆ ನಾನು ಪೃಥಿವಿಮೇಲೆ ಬಿದ್ದು ಘನ ವ್ಯಥೆಯಬಡುವ ತಾಪತ್ರಯವ 1 ಮಂದಭಾಗ್ಯನಾಗಿ ಆಗಿ ನಾನಾ ಸಂದಿನೊಳಗೆ ಬಂದು ಬಂದು ಮಂದಿಸೇವೆಗೈದು ನರಕ ಬಂಧರುರುಳವಂಥ ಕೆಡುಕು 2 ಆಸೆದೆಳಸಿ ಪರರಾಸ್ತಿ ಮೋಸತನದಿ ಕದಿಸಿ ಯಮನ ಪಾಶದೊಳಗೆ ನೂಕುವಂಥ ಹೇಸಿ ಎನ್ನ ನಾಶಬುದ್ಧಿ 3 ಅವನಿಯೊಳು ಜನಿಸಿಬಿಟ್ಟ ಬವಣೆ ನೆನೆಸಿ ನೆನೆಸಿ ಎನಗೆ ಸವೆಯದಯ್ಯೋ ದು:ಖ ಈ ದು ರ್ಭವ ಪಾಪ ಸಂಕಟ 4 ದಾಸಜನರ ಪ್ರಾಣಪ್ರಿಯ ಶ್ರೀಶ ಶ್ರೀರಾಮ ನಿಮ್ಮ ಚರಣ ಧ್ಯಾಸ ಮರೆಗೆ ಬಳಲಿಸುವ ಹೇಸಿಭವದ ವಾಸನವ 5
--------------
ರಾಮದಾಸರು
ಎಂದೆಂದು ಕಂಡುದಿಲ್ಲಮ್ಮಎಂದೆಂದು ಕಂಡುದಿಲ್ಲಮ್ಮ ಗುರುಇದೀಗ ತೋರಿದ ನಮ್ಮ ಮನಸಂದೇಹವು ಹರಿಯಿತಮ್ಮ ನೀನೇಎಂದೆನೆ ಹರುಷಾದೆ ನಮ್ಮ ಬ್ರಹ್ಮವನಮ್ಮ ಪ ರೂಪುನಾಮವು ಅದಕ್ಕಿಲ್ಲವಮ್ಮ ಅದುಹೋಗುವುದಿಲ್ಲ ಬರುವುದಿಲ್ಲಮ್ಮ ಎಲ್ಲವ್ಯಾಪಕವಾಗಿಹುದಮ್ಮ ದೀಪವೆ ತುಂಬಿಹುದಮ್ಮ ಬ್ರಹ್ಮವದಮ್ಮ1 ಕಾಯದ ಒಳಗೆ ಹೊರಗಮ್ಮ ಗುರುರಾಯನ ದಯವಾಗಬೇಕಮ್ಮ ತನ್ನಮಾಯೆ ಬಿಟ್ಟರೆ ತೋರುವುದಮ್ಮ ಬ್ರಹ್ಮವದಮ್ಮ 2 ಮಂದಿರ ಮನೆ ಪಶುರೂಪವಮ್ಮ ಜಗವೊಂದೆ ಅಖಂಡವಿಹುದಮ್ಮತಂದೆ ತಾಯಿ ಮಕ್ಕಳು ತಾನೆ ಅಮ್ಮಚಿದಾನಂದನೆ ತಾನೆಂದ ನಮ್ಮ ಬ್ರಹ್ಮವನಮ್ಮ 3
--------------
ಚಿದಾನಂದ ಅವಧೂತರು