ಹರಿಯೇ ಶ್ರೀಗುರು ನಮ್ಮ ಹರಿಯೇ ಸದ್ಗುರು ನಮ್ಮ
ಹರಿಯೇ ಮದ್ಗುರು ಪರಾತ್ಪರ ಪೂರ್ಣನು ಧ್ರುವ
ಹರಿಯೇ ಗುರುವೆಂದೆನಿಸಿ ಗುರವೆ ಹರಿ ಎಂದೆನಿಸಿ
ಕರಸಿಕೊಂಡವನೊಬ್ಬನೆ ಪರಬ್ರಹ್ಮನು
ನರಮನುಜಾಗಾಗುವದು ದುರ್ಗತಿಯ 1
ಒಂದು ವಸ್ತುವೆ ತಾನನೇಕ ನಾಮವ ಧರಿಸಿ
ಸಂದಿಸಿ ಹ್ಯಾ ನಂದ ರೂಪದೊಳಗೆ
ಮಂದಮತಿಗಳ ವಿವರ ಮರ್ಮವನು ಅರಿಯದೆ
ದ್ವಂದ್ವ ಭೇದದಿ ಗಾಢಸುತ್ತಿಹರು 2
ಹರಿಯೇ ಶ್ರೀಗುರುವಾಗಿ ಗುರುವೆ ಶ್ರೀಹರಿಯಾಗಿ
ತೋರಿದನೇಕೋಮಯವಾಗಿ ಎನಗೆ
ತರಳ ಮಹಿಪತಿ ಸಬಾಹ್ಯಾಂತ್ರ ಪರಿಪೂರ್ಣದಲಿ
ಗುರುತವಾದನು ಹರಿಯೇ ಸಾಕ್ಷತನು 3