ಸಾಕಲಾರದಿರೆ ಎನ್ನ ಯಾಕೆ ಪುಟ್ಟಿಸಿದ್ಯೊ ಹರಿಯೆ ಪ
ಬೇಕು ಬೇಡದಿದ್ದರೆ ನಿನಗೆ -----ಯುಗ ಜನರೊಳೆನ್ನಾ ಅ.ಪ
ಹಿಂದಿನಿಂದ ಬಂದಾ ದೋಷಗಳಿಂದ ನಾನು ಬಹಳ
ಬೆಂದು ಬಳಲುತ ನಿನ್ನ ಪಾದವ ಹೊಂದಿ ನಿನ್ನ ಸೇರೆ
ಬಂಧು ಬಳಗ ನೀನೆ ಇನ್ನು ಎಂದು ಮೊರೆಯ ಇಡಲೂ
ತಂದೆ ತಾಯಿಗಳು ಕಂದನ ಪೊರೆದಂತೆ ಮಂದರಧರ ಶ್ರೀ
ಮಾಧವ ಕೃಷ್ಣಾ 1
ವಸುಧೆಯೊಳಗೆ ನಿನ್ನ ಬಿಡದೆ ಮನಸಿನಲಿ ಸ್ತುತಿಸುವಾ
ಪಶುಪತಿ ಪಾಲಕನೆ ಎನ್ನ ಪಾಲಿಸೊ ಕೈ ಹಿಡಿದೂ
ಶಿಶುವಿನಂದ ನಿನ್ನ ನಿಜ ಸೇವಕ ಜನರಂತೆ
ಸೂನುವು ಎನಗೆ ಅಡಗಿಸಿ ರಕ್ಷಿಸಿದರೆ ವಸುಧೆಯೊಳಗೆ ಎನ್ನ 2
ಎಲ್ಲ ಜನಕೆ ಇನ್ನು ಕರ್ತನಲ್ಲವೇನೊ ನೀನು
ಎಲ್ಲರಂತೆ ಎನ್ನಾ ಕರುಣಿಸಿ ಯಾಕೆ ನೋಡವಲ್ಲೆ
ಹೊಲ್ಲನೊ ನಾ ನಿಮಗೆ ನಿಮ್ಮ ಧ್ಯಾನದಲ್ಲಿರುವನಲ್ಲೊ
ಭಲೆ `ಹೆನ್ನೆ ವಿಠ್ಠಲನೆ' ನೀನಿಷ್ಟು ಭಾಗ್ಯವಂತ ನಾಗಿ
ಬಡವನ ನೋಡಿ 3