ಛಂದದಿಂದ ಬಂದು ಸಲಹೊ ಫಂಡರೀಶ ನಿನ್ನ ನಂಬಿದೆ ಪ ತಂದೆ ನೀನೆ ಸರ್ವರಿಗೆ ಅನಿಮಿತ್ತ ಬಂಧುವಲ್ಲವೆ ಅ.ಪ ದೋಷಿನಾನು ಮೂಢನಾನು ವಲಿಯೆನೆಂದು ಏಕೆ ಹೇಳು ದೋಷದೂರ ಜ್ಞಾನರೂಪ ಬಿಂಬ ನಿನ್ನ ದಾಸನಲ್ಲವೆ 1 ಎಲ್ಲಾ ಸತ್ತಾದಾತ ನೀನು ಇಲ್ಲ ನಿನಗೆ ಭೇದವೇನು ನಲ್ಲ ಶರಣು ಎಂದಮೇಲೆ ವಲ್ಲೆ ಎನ್ನೆ ಬಿರುದು ಪೋಗದೆ 2 ಕಾಕುಮಾಡಿ ಎನ್ನ ಜಗದಿ ನೂಕಿ ಬಿಟ್ಟು ಭಂಟರಲ್ಲಿ ಸಾಕದೇನೆ ಬಿಟ್ಟರೀಗ ಲೋಕನಗದೆ ಭಕ್ತರಾಣೆ 3 ಮುಂದುಮಾಡಿ ಹಿಂದೆ ಎನ್ನ ಹಿಂದು ಮಾಡಿ ಈಗ ನಗುವೆ ಇಂದಿರೇಶ ನಿನ್ನ ನ್ಯಾಯ ಮಂದನಾನು ಅರಿಯೆ ಶರಣು 4 ಲಕುಮಿ ಮೊದಲು ಎಲ್ಲಾ ಜಗಕೆ ಶಕುತ ನೀನೆ ಒಬ್ಬ ಆಶ್ರಯ ನೀಡಿಕಾಯೋ ಬೇಗನೆ 5
ಜಲಧಿ | ನಿಮ್ಮ ಮೊರೆಹೊಕ್ಕವರ ಕಾಯ್ದು ಪೊರೆಯುವಿರಿ ದಯದಿ ಪ. ಅರಿಯರು ಜಗದೊಳಗೆ ನರರು ನಿವಿ್ಮೂ ಮಹಿಮೆ ಕರಕರೆಪಡುತಿಹರು ಭವದೊಳಗೆ ಪರಮ ನಮ್ರತೆಯಿಂದ ಚರಣಕೆರಗಲು ಬಂದು ಉರುತರದ ಕಾರುಣ್ಯದಿಂದ ಪೊರೆಯುವಿರಿ 1 ಇಲ್ಲವೊ ಆಸೆ ಆಡಂಬರದ ದ್ರೌವ್ಯದಲಿ ಎಲ್ಲೆಲ್ಲಿ ನೊಡಲು ತತ್ವಬೋಧೆ ಉಲ್ಲಾಸದಿಂದ ಸಜ್ಜನರಿಗರುಹುತ ಮೋದ ಎಲ್ಲೆ ಕಾಣಿಸದಂಥ ಆನಂದವೀವ ಗುರು 2 ತಂದೆ ಮುದ್ದುಮೋಹನವಿಠ್ಠಲನೆಂದೆಂಬ ಬಹು ಚಂದದ ಅಂಕಿತದಿ ಜಗದಿ ಉದಿಸಿ ಮಂದರಿಗೆ ಸುಜ್ಞಾನ ತಂದು ರಕ್ಷಿಸುವಂಥ ಒಂದೊಂದು ಮಹಿಮೆಗಳ ಪೇಳಲೆನ್ನೊಶವೆ 2 ಅನಾದಿಯಿಂದಲಿ ಹೀನ ದೆಸೆಯೊಳಗಿದ್ದು ನಾನಾ ಜನ್ಮದಿ ಬಂದು ಕರ್ಮದಲಿ ತೊಳಲಿ ದೀನತ್ವವೈದುವ ಮಾನವನ ಕರುಣಿಸಿ ಸಾನುರಾಗದಿ ಹರಿಯ ಪದಕೆ ಸೇರಿಸುವಂಥ 3 ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತ ಹರಿ ಎಂತೆಂದು ಶ್ರೇಷ್ಠ ಕನಿಷ್ಠದ ಅರ್ಥ ತತ್ವ ತಿಳಿಸಿ ಕಷ್ಟ ಬಿಡಿಸುವ ಜಗತ್ಕರ್ತ ಒಬ್ಬನೆ ಹರಿಯು ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆನುವ 5
ಜೀವ ನಾನೆನ್ನಬೇಡ ಮುಕ್ತಾ ಜೀವ ನಾನೆನ್ನ ಬೇಡ ಮುಕ್ತಾ ನೀನೆದೇವ ಚಿದಾನಂದನು ನೀನೆ ಸತ್ಯ ಅವಶ್ಯಕ್ತಾ ಪ ಸತಿ ಇಲ್ಲಿ ಸುತರು ಎಂಬುದಿಲ್ಲಭಾಗ್ಯವು ಎಂಬುದಿಲ್ಲ ಮನೆಇಲ್ಲವು ಇಲ್ಲವು ದೇಹವು ನಿನಗೆಎಲ್ಲವು ಭ್ರಾಂತಿಯು ನೀ ಪರಮಾತ್ಮ 1 ಆರು ನಿನಗೆ ತಾಯಿಯು ಯಾರು ತಂದೆಯ ತಾ ನಾರು ಹಿತರುಯೆಂಬರಾರು ಮೊದಲು ನೀನಾರುಆರಾರಿಲ್ಲವು ಕೆಡಬೇಡ ವ್ಯರ್ಥವುಪೂರಣ ತಿಳಿ ನಾ ಸಾಕ್ಷಾತ್ತೆಂದು 2 ಒಳಗೆ ದೃಷ್ಟಿಯಿಡು ದೃಷ್ಟಿಯೊಳಗೆ ಉಕ್ಕುವ ಕಳೆಯೊಳಗೆ ಉಕ್ಕುವ ತೇಜದೊಳಗೆ ಆ ಬೆಳಗಿನ್ನೊಳಗೆಥಳಥಳಿಸುತ ಕಲೆ ತಾ ಬಂಡದಿನಳನಳಿಸುವ ಚಿದಾನಂದನೆ ಆಗೋ 3