ಒಟ್ಟು 457 ಕಡೆಗಳಲ್ಲಿ , 82 ದಾಸರು , 401 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಸಾರ ಸುಖವಿಲ್ಲ ನಾ ಹಿಂಸೆಯ ತಾಳಲಾರೆ ಪ ಮಾತೆಯ ಮಾಂಸದ ಹೇಸಿಗೆ ಕೋಶದೊಳ್ ಮಾಸ ಒಂಭತ್ತನು ಕ್ಲೇಶದಿಂದ ತಳ್ಳಿದೆ ಈಶ ಲಕ್ಷ್ಮೀಶನು ಕೋಪದಿಂದ ಬೀಸಲು ಕೂಸಾಗಿ ಭೂಮಿಗೆ ವಾಸಕ್ಕೆ ಬಂದೆನು 1 ನಡೆ ನುಡಿಯ ಕಲಿಯುತಲಿ ಹರುಷದಲಿ ಕುಣಿಯುತಲಿ ಹುಡುಗತನ ಕಳೆಯುತಿರೆ ಹರುಷಗಳು ತೊಲಗಿದವು ದುಡಿಕಿನಲಿ ಭ್ರಮಿಸಿದೆನು ಮಡದಿಯಳ ಸಡಗರಕೆ ಭವ ಕಡಲೊಳಗೆ ಮುಳುಗಿ 2 ಕಡುಬಡತನ ಕೊರೆಯುತಲಿದೆ ಕಿರಿಕಿರಿಗಳು ಉರಿಸುತಲಿವೆ ತನುಮನಗಳು ಜರಿಯುತಲಿವೆ ಅಣಕಿಸುವರು ನಿಜ ಜನಗಳು ಪರಮ ಪುರುಷ ಸಿರಿಯರಸನೆ ಮರೆಯದಿರುವೆ ಉಪಕೃತಿಗಳ ದಡಕೆಳೆಯೊ ಪ್ರಸನ್ನ ಹರೇ 3
--------------
ವಿದ್ಯಾಪ್ರಸನ್ನತೀರ್ಥರು
ಸಾಧು ಸಜ್ಜನ ಸಂತರ ಸಲಹುವ ಪತಿ ಹರಿ ಯಶೋದ ನಂದನಾ ಪ ಕನಕಾಂಬರಧರ ಕಮಲಸಂಭವ ಪಿತ ಇನಕುಲ ಭೂಷಣ ವೀರಾಧಿವೀರ ಘನಮಕುಟಧರ ಶಿರ ಕಾರುಣ್ಯಸಾಗರ ಅನಿಮಿತ್ತ ಬಂಧು ಜಗದಾದಿ ಪ್ರಿಯ ದಿನಕರ ಕೋಟಿ ತೇಜ ದೇವಾದಿದೇವ ದೀನರಕ್ಷಕ ರಾಮ ಜಾನಕಿ ಪ್ರೇಮಾ ಅನಿಮಿಷ ರೊಡೆಯ ಶ್ರೀ ಆದಿನಾರಾಯಣ ಕನಿಕರಿಸಿ ಎನ್ನಮೇಲೆ ಕೃಪೆ ಮಾಡೋ ಗೋವಿಂದಾ1 ವಾಸುಕಿಶಯನ ಶ್ರೀವಸುದೇವ ತನಯಾ ಸಾಸಿರನಾಮದ ಸರ್ವೇಶಾ ಈಶಾ ವಾಸುದೇವಾಕೃಷ್ಣಾ ವಾರಿಜೋದರ ಶ್ರೀನಿವಾಸ ವೇದೋದ್ಧಾರ ವೈದೇಹಿ ರಮಣ ಭೂಸುರ ವಂದಿತ ಪೂಜಿತ ಸರ್ವತ್ರ ಶ್ರೀಶವೇಣನಾದ ಶೀತ ಜನಪೋಷಾ ಭಾಸುತ ಕೀರ್ತಿ ವಿಶಾಲ ಭಕ್ತವತ್ಸಲ ದಾಸನು ನಾ ನಿನ್ನ ದಯಮಾಡಿ ರಕ್ಷಿಸೆನ್ನ 2 ಸುಂದರ ವದನ ಸುರೇಂದ್ರ ಅರ್ಚಿತ ಪರಮಾನಂದ ಮುಕುಂದ ಮಹಾದೇವನೆ ಹೊಂದಿ ನಿಮ್ಮಯ ಚರಣದ್ವಂದ್ವ ಪೂಜಿಪ ರಂದದಿ ಪುರವಂತ ಬಿರುದುಳ್ಳ ದೇವಾ ಸಿಂಧು ಶಯನನಾದ 'ಶ್ರೀಹೆನ್ನವಿಠ್ಠಲಾ’ ಕರೆದೆನ್ನ ------------------------- ------ ಎನ್ನನ್ನು ಕರುಣಿಸು ಕಾಯೋ
--------------
ಹೆನ್ನೆರಂಗದಾಸರು
ಸಾಮಜ ವಸ್ತ್ರಾಂಗಂ ಸುಮನೋತ್ತುಗಂ ಪ ನಿಗಮ ಶಿರಲೋಲ ಸದಾನಂದಿತಂ ಮೇ ಮನಸಾ 1 ತಾಪ ಭೀಷಣಂ ಈಶ್ವರವಿಶ್ವೇಶನಾದ ಘೋಷಣಂಭಾಸುರ ಕೋಟಿ ಸೇವಿತ ಸಂಕಾಶ ಮಹೇಶ ಸದಾನಂದಿತಂ ಮೇ ಮನಸಾ2 ಪರಮ ಪರಾಪುರುಷಂ ಪಾರ್ವತಿ ಮನೋಹರ ಹರಿ ವಿಶ್ವಾರ್ಚಿತಂವರ ಚಿದಾನಂದ ಗುರುವೇ ಸಾಕ್ಷಾತಂಸ್ಮರಣ ಮನೋನಿಶ್ಚಿತಂ ಮೇ ಮನಸಾ3
--------------
ಚಿದಾನಂದ ಅವಧೂತರು
ಸಾರ್ಥಕವು ವರ ವೈಷ್ಣವ ಜನುಮವು ಸಾರ್ಥಕವು ಪ ಸಾರ್ಥಕವಿದು ಪುರುಷಾರ್ಥಕೆ ಸಾಧನಅ.ಪ ಸ್ವಾಮಿದಾಸ ಭಾವವನು ನಿರಂತರ ನಿಯಮದಿಂದ ಬೋಧಿಸುತಿರುವ ಕಾಮಕ್ರೋಧಗಳ ಜರಿದು ಶ್ರೀ ಹರಿಯಲಿ ಪ್ರೇಮವೇ ಪರಮ ಸಾಧನವೆಂದರಿತರೆ 1 ದಾನ ಸ್ನಾನ ಜಪ ಸಂಧ್ಯಾತ್ರಿಯಗಳು ಜ್ಞಾನಕೆ ಸಾಧನವೆಂಬುದರಿಯುತ ಕಾಣಲು ಹರಿಯನು ಹೃದಯಾಂಬರದಲಿ ಕರ್ಮ ಸವೆಯುತಿರೆ 2 ವಿಶ್ವ ಜನನ ಸ್ಥಿತಿ ಪ್ರಳಯಗಳಿಗೆ ಸದಾ ಈಶ್ವರ ತಾನು ಪ್ರಸನ್ನನಾಗಲು ಶಾಶ್ವತವಾದ ಸ್ವರೂಪಾನಂದವ ಸ್ವಪ್ನಯೋಗ್ಯ ರೀತಿಯಲಿ ಪಡೆಯುವುದೇ 3
--------------
ವಿದ್ಯಾಪ್ರಸನ್ನತೀರ್ಥರು
ಸಾವಧಾನೊ ಜೀವ ಭವಸಂತತಂಜೀವನ್ಮುಕ್ತಿ ಸಾಧನ ಸಂತತೋದ್ಧರಂ ಪಆಶಾ ಪಿಶಾಚಿ ಕಾಮ ವಧೂಯ ಕಷ್ಟತರಪಾಶ್ಯಾಕಾವೃತಿಂ ಪರಿಭೂಯಚಈಶಣತ್ರಯ ಮೂಲ ಮುತ್ಪಾಟ್ಯಚೌಥನಿಷ್ಕೋಶಾಸಿವಜ್ವಲಣ ಸರ್ವ ವಿಷಯೋಝ್ಝಿತಃ 1ಏಕಾಗ್ರತಾಮಾಕಲಯ್ಯ ಕೂಟಸ್ಥಾತ್ಮನಾಕಲಿತ ಚಿಂತಯಾನ್ಯದ್ವಿಲಾಪ್ಯಶೋಕ ಮೋಹಾದಿ ಪರಿಹೃತ್ಯಸುಪ ಬ್ರಹ್ಮಾಕಾರ ತಾಮನುಭವನ್ನಿತ್ಯ ಮುಕ್ತಯೋ 2ತಾಪತ್ರಯಂತ್ಯಜನ್ ತದಹಮಿತ್ಯಾನಂದರೂಪಿಣ ನಿತ್ಯತೃಪ್ತಿಂ ಪ್ರಪದ್ಯೆವ್ಯಾಪಕಾತ್ಮ ಭವ ನಿಜಾದ್ವೈತ ಬೋಧತೋಗೋಪಾಲಾರ್ಯ ದಯಯಾತೀವ ಧನ್ಯಃ 3
--------------
ಗೋಪಾಲಾರ್ಯರು
ಸಿರಿಯನಾಳುವ ದೊರೆಯ ಮರೆಯದೆ ಮುರಾರಿಯ 1 ಕರುಣದಾಯಕನೀತ ಶರಣಜನರ ಸುಶೋಭಿತ ವರಮುನಿಗಳ ಹೃದಯ ಸದೋದಿತ ಹರಿಯ ಸಾಕ್ಷಾತ 2 ನಂಬಿದವರ ಕಾವ ಬಿಂಬಿಸುವ ಮನದೊಳಗೀವ ಇಂಬು ಅಗಿಹ್ಯ ದೈವ 3 ದೇಶಿಕರಿಗೆ ದೇವ ವಸುದೇವಸುತ ವಾಸುದೇವ ಲೇಸಾಗಿ ಸುಭಕ್ತರ ಪಾಲಿಸುವ ಈಶ ಶ್ರೀಕೇಶವ 4 ದೃಢ ಭಕ್ತರಿಗೊಲಿವ ಮೂಢ ಮಹಿಪತಿ ಮನದೈವ ಪಿಡಿದು ಕೈಯ ಕಡೆಗಾಣಿಸುವ ಬಿಡದೆ ಸಲಹುವ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸೀತೆಯ ಭೂಮಿಜಾತೆಯ ಜಗ-| ನ್ಮಾತೆಯ ಸ್ಮರಿಸಿ ವಿಖ್ಯಾತೆಯ ಪ ಕ್ಷೀರ ವಾರಿಧಿಯ ಕುಮಾರಿಯ ತನ್ನ | ಸೇರಿದವರ ಭಯಹಾರಿಯ || ತೋರುವಳು ಮುಕ್ತಿಹಾರಿಯ ಸರ್ವ | ಸಾರ ಸುಂದರ ಶ್ರೀನಾರಿಯ 1 ಈಶಕೋಟಿಯೊಳ್ ಗಣನೆಯ ಸ್ವಪ್ರ-| ಕಾಶವಾದ ಗುಣಶ್ರೇಣಿಯ || ಈಶಾದ್ಯರ ಪೆತ್ತ ಕರುಣಿಯ ನಿ-| ರ್ದೋಷ ವಾರಿಧಿಕಲ್ಯಾಣಿಯ2 ವಿಜಯವಿಠ್ಠಲನ್ನ ರಾಣಿಯ ಪಂ-| ಕಜಮಾಲೆ ಪಿಡಿದ ಪಾಣಿಯ || ನಿತ್ಯ | ಸುಜನವಂದಿತೆ ಅಹಿವೇಣಿಯ 3
--------------
ವಿಜಯದಾಸ
ಸುಮ್ಮನೊಲಿವನೆ ಪರಬೊಮ್ಮನಾದ ತಿಮ್ಮರಾಯ ಸುಮ್ಮನೊಲಿವನೆ ಪ ಮಂದವಾರ ದಿವಸದಲ್ಲಿ ಮಿಂದು ಮಡಿಯನುಟ್ಟುಕೊಂಡು ಗೋ ವಿಂದ ಎನುತ ನಾಮವಿಕ್ಕಿ ವಂದನೆಯ ಮಾಡದನಕ 1 ಗರ್ವವನು ಉಳಿದು ಮನದಿ ಸಾರ್ವಭೌಮನನ್ನು ನೆನೆದು ನಿರ್ವಹಿಸಿ ಶೇಷನು ಸುತ್ತಿದ ಪರ್ವತವನ್ನು ಏರದನಕ 2 ಕಾಸು ದುಡ್ಡು ಚಕ್ರ ನಾಣ್ಯ ವೀಸವುಳಿಯದಂತೆ ಬಡ್ಡಿ ವಾಸಿಯಿಕ್ಕಿ ಗಂಟ ಕಟ್ಟ ಈಸುಕೊಂಡು ಸೂಸದನಕ 3 ದೇಶ ದೇಶದಿಂದ ಕಪ್ಪ ಗಾಸಿಯಾಗದಂತೆ ತರಿಸಿ ಕೋಶಕಿಕ್ಕಿ ಕೊಂಬ ಲಕ್ಷ್ಮಿಯ ಈಶನನ್ನು ನೆನೆಯದನಕ 4 ಗುಡವ ಕದಡಿಕೊಂಡು ಸಂಗಡ ಕಡಲೆಯನ್ನು ನೆನಸಿಯಿಟ್ಟು ಒಡೆದ ನಾರಿಕೇಳವು ಸಹಿತ ಒಡೆಯಗೆಂದು ಇಡದ ತನಕ 5 ಆಶಾಪಾಶವನ್ನು ಬಿಟ್ಟು ದೇಶವನ್ನು ತೊಳಲಿ ಬಳಲಿ ಕೇಶವಾದಿ ನಾಮದೊಳಗೆ ವಾಸುದೇವನ ನೆನೆಯದನಕ 6 ಸೃಷ್ಟಿಪಾಲ ಮೆಟ್ಟಿದಂಥ ಬೆಟ್ಟವನ್ನು ಏರಿ ಹೋಗಿ ವರಾಹ ತಿಮ್ಮ ಶೆಟ್ಟಿಯನ್ನು ನೋಡದನಕ 7
--------------
ವರಹತಿಮ್ಮಪ್ಪ
ಸುಳ್ಳುಗಳ ಬೋಧಿಸಿ ನೀ ಪೊಳ್ಳಾಗದಿರಲೊ ಪ ನೀರ್ಗುಳ್ಳೆಯಂಥ ದೇಹ ನಂಬಿ ನಿಜಭಕ್ತ ನಾನೆಂದೂ ಅ.ಪ ಎಳ್ಳುಕಾಳಿನಷ್ಟಾದರೂ ಈಶನಲ್ಲಿ ಭಕ್ತಿಕಾಣೆ ಡೊಳ್ಳತುಂಬುವದಕೆ ನಾಲ್ಕಲ್ಲಿ ಇಲ್ಲಿ ಕಲಿತುಕೊಂಡು 1 ಪರರಿಗೆ ಹೇಳುವಂತೆ ನೀ ನಡೆಯುವೆಯೇನೊ ಪರಗತಿಯಾಗದು ನಿಜ ನಿಜ ನಿಜ ಕಾಣೊ 2 ನಿನ್ನಯೋಗ್ಯತಾನುಸಾರ ನೀನರಿಯಲೊ ಬನ್ನಬಡುವದೆ ಸಾಕ್ಷಿ ಪುಣ್ಯವೇನಿದರೊಳು 3 ಹಿಡಿ ಹಿಡಿ ಹಿಡಿ ಹಿಡಿ ಹಿರಿಯರ ಪಾದವ 4 ಶರಣ ಜನರ ನೋಡಿ ಶಾಂತನಾಗುತ ಗುರುರಾಮವಿಠಲನ ಗುರುತರಿಯದೇ ನೀ 5
--------------
ಗುರುರಾಮವಿಠಲ
ಸೈ ಸೈ ಸದ್ಗುರುವಿನ ದಯದಿಂದೆಲ್ಲಾ ಮೈ ಮರೆತೆನೆ |ಐ ಅದು ಏನು ಕಾರಣ ಮೈ ಮರೆದು ಮತ್ತುಳಿದೆನೆ | ಕೈ ಕೈ ತಲೆ ಮೇಲಿಡಲು ವೈರಾಗ್ಯ ಪಡೆದೆನೆ |ಥೈ ಥೈಯಂತ ಕುಣಿಸಿ ತನ್ನಂತೆ ತಾ ಮಾಡಿದನೆ ¥ ನಾನೂ ನೀನೆಂಬುದು ಮರೆಸಿ ತಾನೇ ತಾನಾದನೆ |ಮಾನ ಅಪಮಾನ ಎರಡೂ ಪಾನ ಮಾಡಿದನೆ |ಜ್ಞಾನ ಮಾರ್ಗವ ತೋರಿ ಧ್ಯಾನ ಹೇಳಿದನೆ |ಖೂನ ತೋರಿಸಿ ವಿನೋದ ಮಾಡಿದನೆ 1 ನಾದ ಶಬ್ದದಿ ಮನಲುಬ್ಧ ಮಾಡಿದನೆ |ವಾದಿ ದುರ್ವಾದಿಗೂಡ ಕಾದಿ ಗೆಲಿಸಿದನೆ |ಭೇದಾಭೇದವ ಅರಿಯದ ಹಾದೀ ತೋರಿದನೆ |ಈದ ಹುಲಿಯಂಥ ಮನಸು ಸಾದ ಮಾಡಿದನೆ 2 ಭೃಕುಟಿ ಮಧ್ಯದಿ ವಸ್ತು ಪ್ರಕಟ ಮಾಡಿದನೆ | ಆಸನ ದ್ವಾರ ಕವಾಟವ ಬಲಿಸಿ ಶ್ವಾಶಗಳೆಲ್ಲಾ ನಿಲಿಸಿದನೆ | ನಾಸಿಕಾಗ್ರದ ಕೊನೆಯ ಮೇಲೆ ಭಾನು ಪ್ರಕಾಶವ ತೋರಿದನೆ | ಈಶನು ದತ್ತ ಮಹೇಶ ದಿಗಂಬರ ಘೋಷದೊಳಗೆ ಮನವೀಸಿದನೆ 3
--------------
ಭೀಮಾಶಂಕರ
ಸ್ಮರಿಸುಮನವೆ ನೀ ದೇವಕಿ ಕಂದನ ಧ್ರುವ ಪಾಲನ ಕುರುಳರ ನಾಶನ 1 ಉರಗಶಯನನ ಗರುಡವಾಹನನ 2 ಸಿರಿಯ ಲೋಲನ ಪರಮ ಪಾವನನ 3 ಸುರರಾಜವಂದ್ಯನ ಕರಿರಾಜಪ್ರಿಯನ 4 ಗಿರಿಯನೆತ್ತಿದನ ತುರುಗಳಗಾಯದ್ದವನ 5 ಸಾರ ಸಂಜೀವನ 6 ಭಂಜನ ದುರಿತ ನಿವಾರಣ 7 ಸರ್ವಾರ್ಥಕಾರಣ ಹರುಷದ ಜೀವನ 8 ಪರಿಪೂರ್ಣವಿಹನ ಪೂರಿತ ಕಾಮನ 9 ಗುರುಶಿರೋರತ್ನನ ಕರುಣಲೋಚನ 10 ಸ್ಮರಿಸು ಮನವೆ ನೀ ಮಹಿಪತಿ ಈಶನ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನೃಸಿಂಹ ಸರಸ್ವತಿಗೆ ಮಂಗಳಾ |ಕಾಮಿತ ಕಾಮ ಫಲ ತೃಪ್ತಿಗೆ ಮಂಗಳಾ ಪ ನಿತ್ಯ ನಿರ್ಮಾಯಗೆ ಮಂಗಳಾ |ನಿರ್ವಾಣ ಸುಖ ಯತಿರಾಯಗೆ ಮಂಗಳಾ 1 ಭಕ್ತಜನರ ಕಲ್ಪವೃಕ್ಷಗೆ ಮಂಗಳಾ |ಭಕ್ತಿಯಿಂದ ಭಜಿಸುವ ಮೋಕ್ಷಗೆ ಮಂಗಳ |ಭೀಮಾ ಗಂಧರ್ವಪುರ ವಾಸಗೆ ಮಂಗಳಾ |ಶ್ರೀ ಭೀಮಾಶಂಕರ ಗುರು ಈಶಗೆ ಮಂಗಳಾ 3
--------------
ಭೀಮಾಶಂಕರ
ಸ್ವಾಮಿಯು ನೀನಲ್ಲವೊ ಪಾಮರನೆ ಪ ಸ್ವಾಮಿಯು ನೀನಾಗೆ ಭೃತ್ಯಾನು ನಿನಗ್ಯಾರು ಈ ಮಾತಿಗೇನೆಂಬೆಯೊ ಸೋಮಾರಿ ಮನುಜನೆ ಅ.ಪ. ನಿತ್ಯತೃಪ್ತನು ದೇವದೇವೋತ್ತಮನವನು ಸತ್ಯ ಸಂಕಲ್ಪನು ಸಕಲ ಜಗವರಿಯೆ ಹೊತ್ತು ಹೊತ್ತಿಗೆ ಗ್ರಾಸಕಿಲ್ಲದವ ಗೃಹಪಾಲ ಸತ್ಯದನುಭವವಿಲ್ಲವೊ ನಿನಗೆ 1 ಸ್ವಾಮಿ ಭೃತ್ಯರಿಗೆ ಬೇಧವಿಲ್ಲೆಂಬುವ ನಿನ್ನ ಭೃತ್ಯ ತಾ ಬರಲು ಕಾಮಾರಿಯಂತೆ ಕೋಪವ ತಾಳುವೆ ನಮ್ಮ ಸ್ವಾಮಿಗೆ ತಾಮಸ ಗುಣವೆಲ್ಲಿಹುದೊ 2 ಕಾಸು ಕೊಟ್ಟರೆ ನೀನು ಹೇಸಿಕ್ಯಾದರು ಬಳಿವೆ ದಾಸ ನೀನಲ್ಲದೆ ಈಶನೆಂತಾದೆಯೊ ವಾಸುದೇವ ನೀನೆಂದು ಘಾಸಿಯಾಗಲು ಬೇಡ ರಂ- ಗೇಶವಿಠಲನ ದಾಸರ ದಾಸ ನೀನಾಗೊ 3
--------------
ರಂಗೇಶವಿಠಲದಾಸರು
ಹನುಮ-ಭೀಮ-ಮಧ್ವ ಭಾರತೀರಮಣ ಸಮೀರಣ ನಿನ್ನಯಚಾರುಲೀಲೆಯನೆಂತು ಬಣ್ಣಿಪೆ ಪ ಇನಕುಲ ರಾಮನ ವನಿತೆಯ ಶೋಧಿಸಿಮನುಜನ ರೂಪದ ಹರಿಯ ಚರಿತೆಯ ಸಾಧಿಸಿ 1 ತನುಮನಧನದಿಂದವನ ಸೇವೆಯನುಅನುದಿನ ಭಕುತಿಗಳಿಂದ ಮಾಡಿದಿಘನ ಭಕುತಿಯ ಫಲ ಬ್ರಹ್ಮ ಪದವಿಯಂದೆನಿತು ಮತವ ನೀ ಜಗಕೆ ತಿಳಿಸಿದಿ 2 ಭೀಮನ ನಾಮದಿ ಭೂಮಿಪರುಡಿಗೆಯನೇರಿಸಿಪಾಮರ ಜನರೊಳು ನಿಜ ಗಾರ್ಹಸ್ಥ್ಯರ ಬೀರಿಸಿಸ್ವಾಮಿಯ ವೈರಿಗೆ ಸೋಮನಧಾಮವ ತೋರಿಸಿಶ್ಯಾಮಲ ಕೃಷ್ಣನ ಪ್ರೇಮಕೆ ಸೀಮೆಯ ಮೀರಿಸಿ 3 ಶ್ರೀಮತ ಕೃಷ್ಣನ ಅಂತರಂಗದಲಿಕಾಮರಹಿತ ಭಕ್ತಿಗಳಿಂ ಮೆಚ್ಚಿಸಿಪ್ರೇಮದ ಫಲವಿದು ನೋಡಿರೆಂದು ಜನಸ್ತೋಮಕೆ ತಿಳುಹಿದ ಭೀಮ ಮಹಾತ್ಮಾ 4 ಸಾರಸ ನ್ಯಾಸವ ಯೋಜಿಸಿಸಾಸಿರನಾಮದ ಶ್ರೀಶನ ದಾಸ್ಯವನಾರ್ಜಿಸಿಭಾಸುರ ಗದುಗಿನ ವೀರನಾರಾಯಣ ನ್ಯಾಸದಿಂ ಬಹುಸರಳ ಭಾಷೆಯಲಿಈಶ ಜೀವಿಗಳ ತರತಮ ತಿಳಿಸುತಲೇಸಿದು ಮೋಕ್ಷಕ್ಕೆಂದು ತಿಳುಹಿದಿ 5
--------------
ವೀರನಾರಾಯಣ
ಹರಿ ಗೋವಿಂದ ಮುಕುಂದ ಮನುವಂದ್ಯ ಮಾಧವ ಹರ ಅಜನುತ ಪರಮಾನಂದ ಪ ದೇವ ಗಿರಿಧರ ಸುರನರ ಮುರಹರ ಪರತರ ಶರಧಿಜಾ ವರ ನರಹರಿ ಕೇಶವ ಸ್ಮರಿಪರ ಸುರತರು ಪರಮಪ್ರಕಾಶನೆ ಪುರಹರವರಸುಖ ಸುರೇಶ 1 ಈಶ ಮುನಿಕುಲ ವಸುಕಾಲ ತನುಶೀಲ ವನಮಾಲ ಜನಕಜೆಪತಿ ಭಕ್ತರಾನಂದ ವನಜಾಕ್ಷ ದಿನಕರ ಘನಪ್ರಭೆತನುಶೋಭ ವಿನಮಿತ ಸನಕಾದಿಸಾನಂದ 2 ಜಗದೀಶ ಅಘಪೋಷ ಮೃಗನಾಶ ಲಕುಮೀಶ ಖಗಗಮನ ದಶಶತನಾಮ ಬಗೆಬಗೆ ಪೊಗಳುವ ನಿಗಮ ಆಗಮನುತ ಶ್ರೀರಾಮ 3
--------------
ರಾಮದಾಸರು