ಒಟ್ಟು 4775 ಕಡೆಗಳಲ್ಲಿ , 127 ದಾಸರು , 3268 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾರನ್ಯಾತಕೆ ವಾರಿಜಾನನೆ ಶ್ರೀಮಾರಜನಕಸಕಲ ಸುಖಕೆ ಕಾರಣನು ಕರುಣಿಸಿ ತಾನೆಪ.ಭುವನೇಶನಿನಿಯಳಣುಗ ತಾ ಪಿಡಿದು ಜರಿದ ಬಲಹಗೆಹ್ಯಾವಿಲೆಳೆದವನೊಳು ಕಾದಿ ತಾವೊಲಿದ ದೊರೆಯ ನಮಿಸಿಭಾವಕದಿದು ಇಷ್ಟವ ಪಡೆದನ ಜನನಿಸುತರಜೀವಕೆಡರು ಬರಲಿ ಕಳಿದನೆ ರಂಧ್ರ ಪೊಳಲದೇವ ಭಗಿನಿ ತುತಿಯ ಕೇಳ್ದನೆಇಂದುವದನೆ1ಹರಿಪದಸ್ಥನೆರೆಯನಿಂದ ಹರುಷದೊರೆದ ಪುರುಷನುಗ್ರಕರಿಯ ಮೈಯು ಬರಲಿ ಕಳೆದ ನರಟುನುಳ್ಳವನು ಭುವಿಲಿಹರಗೊಲಿಸಿ ಎಬಡ ಗಡ ಹೆಣ್ಣಿನ ಒಡಲ ಪೊಡೆಯುಉರಿಯಲರಿದ ಸಿರಿಯವರದನೆ ಬಾಳರುಚಿಯುಳ್ಹರಿಯನಟ್ಟಿಜವದಿಕಾಯ್ದನೆಕುಂದರದನೆ2ಭಾರಮಣನ ಅಗ್ರಜಳ ಕಿಶೋರಬಾಣಪ್ರಿಯಜನವತಾರನರಮನೆಗೊಲಿದು ವಿಷದ್ವಿಜನ್ನ ಧ್ವಜ ಕರೆದರೆಬಾರದೇನೆ ಮೂಗಮುರಿವನೆ ತನ್ನ ನಂಬಿಸಾರಿದವರ ಮನದೊಳಿರುವನೆ ಪ್ರಸನ್ನವೆಂಕಟಧೀರನೊಬ್ಬ ಜಗಕೆ ಚೆಲುವನೆ ಭಾಮಿನಿ 3
--------------
ಪ್ರಸನ್ನವೆಂಕಟದಾಸರು
ಬಾರಮ್ಮ ಮನೆಗೆ ಸೌಭಾಗ್ಯದ ಮಹಲಕ್ಷ್ಮಿ ಪಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರುಮಾರನಯ್ಯನ ಕೂಡಿ ಮನ ಹರುಷದಿ ಬೇಗ ಅ.ಪಶಂಖು ಚಕ್ರ ಗದ ಪದ್ಮವು ಧರಿಸಿದಪಂಕಜಾಕ್ಷನಸಿರಿಪಟ್ಟದರಸಿದೇವಿಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆಬಿಂಕಮಾಡದಲೆ ಬಾ ವೆಂಕಟನರಸಿಯೆ1ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರಇಷ್ಟ್ಯಾರ್ಥಗಳ ಕೊಟ್ಟುದ್ಧರಿಪಭಾರ್ಗವಿತಾಯೆಭಕ್ತವತ್ಸಲನೊಡಗೂಡುತ ಬಾರಮ್ಮಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ 2ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿರನ್ನ ಪವಳ ಹಾರಾಲಂಕೃತ ಶೋಭಿತೆಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿಕರ್ನೇರು ಕರೆವರು ಕಮಲಾಕ್ಷನೊಡಗೂಡಿ 3ನಿಗಮವೇದ್ಯಳೆ ನಿನ್ನಅಗಣಿತಗುಣಗಳಪೊಗಳುವ ಸುಜನರಅಘಪರಿಹರಿಸುತ್ತಬಗೆ ಬಗೆ ನಾಮಗಳಿಂದ ಪೂಜೆಯಗೊಂಬಖಗವಾಹನನ ರಾಣಿ ಲಗುಬಗೆಯಿಂದಲಿ 4ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತಬಡನಡು ಬಳುಕುತ್ತ ಕೊಡುತ ವರಗಳನ್ನುಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರುಕಡಲೊಡೆಯನ ರಾಣಿ ಸಡಗರದಿಂದೊಮ್ಮೆ 5ಕ್ಷೀರವಾರಿಧಿಯ ಕುಮಾರಿಯೆ ಬಾರೆಂದುಸಾರಸಮುಖಿಯರು ಸರಸದಿ ಕರೆವರುಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆಚಾರುಮಂಗಳೆ ಸತ್ಯ ಶ್ರೀ ಭೂದುರ್ಗಾಂಬ್ರಣೆ 6ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದುನಮಿಸಿ ಬೇಡುವೆ ನಿನ್ನಭ್ರಮರಕುಂತಳೆ ತಾಯೆಕಮಲನಾಭ ವಿಠ್ಠಲನ ಕೂಡಿ ಹರುಷದಿಸುಮನಸರೊಡೆಯನಸತಿಸಾರ್ವಭೌಮಳೆ7
--------------
ನಿಡಗುರುಕಿ ಜೀವೂಬಾಯಿ
ಬಾರೈ ರಂಗ ಬಾರೈ ಕೃಷ್ಣ ಬಾರೈ ದೇವ ಕೃಷ್ಣತೋರೈ ನಿನ್ನಯ ಚಾರುಚರಣವತೋಯಜಾಕ್ಷಪಘಲು ಘಲುರೆನ್ನುತ ರುಳಿಗೆಜ್ಜೆಯನಿಟ್ಟು ಬಾರೈ ದೇವ ಕೃಷ್ಣಕುಣಿಕುಣಿಯುತ ಬಾ ಕುಂತಿಸುತರಪ್ರಿಯ ಬಾರೈ ದೇವ ಕೃಷ್ಣಥಳಥಳಿಸುವ ಪೀತಾಂಬರ ಹೊಳೆಯುತ ಬಾರೈ ದೇವ ಕೃಷ್ಣನಡುವಿಲಿ ಹೊಳೆಯುತ ಪಟ್ಟೆವಲ್ಲಿಯು ಬಾರೈ ದೇವ ಕೃಷ್ಣ 1ಕಂಕಣ ಕರಭೂಷಣಗಳು ಹೊಳೆಯುತ ಬಾರೈ ದೇವ ಕೃಷ್ಣಪಂಕಜನಾಭಪಾರ್ಥಸಖನೆ ಕೃಷ್ಣ ಬಾರೈ ದೇವ ಕೃಷ್ಣಶಂಖ ಚಕ್ರಗಳ ಧರಿಸುತ ಮುದದಲಿ ಬಾರೈ ದೇವ ಕೃಷ್ಣಶಂಕಿಸದೆಲೆ ಬಾ ಬಿಂಕವ ತೊರೆದು ಬಾರೈ ದೇವ ಕೃಷ್ಣ 2ಮುಂಗುರುಳಲಿ ಮುತ್ತಿನರಳೆಲೆ ಹೊಳೆಯುತಬಾರೈ ದೇವ ಕೃಷ್ಣಶೃಂಗಾರದ ಕಿರೀಟವು ಹೊಳೆಯುತಬಾರೈ ದೇವ ಕೃಷ್ಣಸುಂದರ ಕಸ್ತೂರಿ ತಿಲಕವು ಹೊಳೆಯುತಬಾರೈ ದೇವ ಕೃಷ್ಣಕಂಧರದಲಿ ಶೋಭಿಪ ಪದಕಗಳಿಂದಬಾರೈ ದೇವ ಕೃಷ್ಣ 3ಪೊಂಗೊಳಲೂದುತ ಹೆಂಗಳರೊಡನೆಬಾರೈ ದೇವ ಕೃಷ್ಣಮಂಗಳ ಮಹಿಮ ವಿಹಂಗವಾಹನ ಕೃಷ್ಣಬಾರೈ ದೇವ ಕೃಷ್ಣಅಂಗಳದೊಳಗಾಡುತ ನಲಿಯುತ ಬಲು ಚಂದದಿಬಾರೈ ದೇವ ಕೃಷ್ಣಇಂದಿರೆಯರಸನೆ ವಂದಿಸಿ ಬೇಡುವೆ ಬಾರೈ ದೇವ ಕೃಷ್ಣ 4ಕಿಲಿಕಿಲಿನಗುತಲಿ ಕುಣಿಕುಣಿಯುತಬೇಗ ಬಾರೈ ದೇವ ಕೃಷ್ಣಕನಕಾಭರಣಗಳಿಂದೊಪ್ಪುತ ಬೇಗ ಬಾರೈದೇವ ಕೃಷ್ಣನಲಿನಲಿಯುತ ಬಾ ಮಣಿಯುತ ಬೇಡುವೆಬಾರೈ ದೇವ ಕೃಷ್ಣದಣಿಸದೆ ಕಮಲನಾಭವಿಠ್ಠಲ ಬೇಗ ಬಾರೈ ದೇವ ಕೃಷ್ಣ 5
--------------
ನಿಡಗುರುಕಿ ಜೀವೂಬಾಯಿ
ಬಾರೋ ಬ್ರಹ್ಮಾದಿವಂದ್ಯಾಬಾರೋ ವಸುದೇವ ಕಂದ ಪಧಿಗಿಧಿಗಿ ನೀ ಕುಣಿದಾಡುತ ಬಾರೋದೀನ ರಕ್ಷಕನೇಜಗದೀಶಾ ಕುಣಿದಾಡುತ ಬಾರೋಚನ್ನಕೇಶವನೇ 1ಗೊಲ್ಲರ ಮನೆಗೆ ಪೊಗಲು ಬೇಡಗೋವಿಂದಾ ಕೇಳೋಹಾಲು ಬೆಣ್ಣೆ ಮೊಸರಿಕ್ಕುವೆನೀನುಣ್ಣ ಬಾರೋ 2ದೊಡ್ಡ ದೊಡ್ಡ ಮುತ್ತಿನ ಹಾರವ ಹಾಕಿನೋಡುವೆ ಬಾರೋದೊಡ್ಡ ಪುರದ ದ್ವಾರಕಿವಾಸಪುರಂದರವಿಠಲ3
--------------
ಪುರಂದರದಾಸರು
ಬಾರೋ ಮಗನೆ ಬಳಲಿದೆಯಾಡಿಬಾರೊ ಮಗನೆ ಪ.ಎಲ್ಲಿಗೆ ಹೋಗಿದ್ಯೊ ಎನ್ನೆದೆಝಲ್ಲು ಝಲ್ಲು ಎನುತಲಿದೆಮೆಲ್ಲೆದೆಗಾರ್ತಿ ಗೊಲ್ಲತೀರು ನಿನ್ನಗಲ್ಲ ಕಚ್ಚಿಹರಲ್ಲೊ ಹಸುಳೆ 1ಬಾಡಿತೊವದನಇಂದಾರೊಳುಮಾಡಿದ್ಯೊಕದನಕಾಡುವ ಬಾಲ ಪ್ರೌಢಿಯರ ತೋರಿಸುನಾಡ ಬಿಟ್ಟವರನೋಡಿಸುವೆ ನಡೆ 2ಕೂಸಿನಾಟವಲ್ಲೊ ಜಟ್ಟಿಗನವಿೂಸಲಂಜಿಕಿಲ್ಲೊಹೇಸದೆ ಬೆಣ್ಣೆಯ ಸವಿದು ನಿರ್ದೋಷ ಕೃಷ್ಣ ನೀ ಘಾಸಿಯಾದೆ 3ಕೋಮಲಾಂಗವಿದು ಕಲ್ಲೆದೆಕಾಮಿನಿಯರೊಯಿದುಕಾಮುಕಿಯರತಿ ಪ್ರೇಮದಲಪ್ಪಪ್ಪಿದಾಮಸಡಿಲ್ಯದೆ ಶ್ರೀಮುರಾರಿ4ಮುದ್ದಿನಾಮೃತೆ ಬಾ ಪೊಂದೊಟ್ಟಿಲೊಳ್ನಿದ್ರೆಗೈಯಲಿಲ್ಲ ಎದೆಗದ್ದಿಗೆಲಿದ್ದು ನಲಿದಾಡೊ ಪೂರ್ಣಶುದ್ಧ ಪ್ರಸನ್ವೆಂಕಟ ಶ್ರೀಕೃಷ್ಣ 5
--------------
ಪ್ರಸನ್ನವೆಂಕಟದಾಸರು
ಬಾರೋ ವೆಂಕಟಗಿರಿನಾಥ| ದಯ-ದೋರೈ ಭಕುತರ ಪ್ರೀತ ಪ.ಮಾರಪಿತ ಗುಣಹಾರ ಮಂದರ-ಧಾರ ದೈತ್ಯಸಂಹಾರ ಸುಜನೋದ್ಧಾರ ಮಮಹೃದಯಾರವಿಂದಕೆಬಾರೋ ಕೃಪೆದೋರೋ ವೆಂಕಟ ಅ.ಪ.ವೃಷಭಾಸುರನೊಳು ಕಾದಿ ಸಾ-ಹಸವ ಮೆರೆಸಿದ ವಿನೋದಿವಶಗೈದು ದೈತ್ಯನ ಶಿರವ ಕತ್ತ-ರಿಸುತಲಿ ನೀನಿತ್ತೆ ವರವವಸುಧೆಯೊಳಗಿಹ ಸುಜನರನು ಮ-ನ್ನಿಸುತಲಿಷ್ಟವನಿತ್ತು ಕರುಣಾ-ರಸದಿ ಸಲಹುವ ಬಿಸಜನಾಭ ಶ್ರೀ-ವೃಷಭಾಚಲವೊಡೆಯ ವೆಂಕಟ 1ಅಂಜನೆಯೆಂಬಳ ತಪಕೆ ಭಕ್ತ-ಸಂಜೀವನೆಂಬ ಶಪಥಕೆರಂಜಿಪ ಪದವಿತ್ತೆ ಮುದದಿ ಖಿಲ-ಭಂಜನಮೂರ್ತಿ ಕರುಣದಿ|ಮಂಜುಳಾಂಗ ಶ್ರೀರಂಗ ಸುರವರಕಂಜಭವವಿನುತಾದಿ ಮಾಯಾ-ರಂಜಿತಾಂಘ್ರಿ ಸರೋರುಹದ್ವಯಅಂಜನಾಚಲವೊಡೆಯ ವೆಂಕಟ 2ಶೇಷನ ಮೊರೆಯ ತಾಕೇಳಿಬಲುತೋಷವ ಮನಸಿನೊಳ್ತಾಳಿದೋಷರಹಿತನೆಂದೆನಿಸಿ ಕರು-ಣಾಶರಧಿಯ ತಾನೆ ಧರಿಸಿಶ್ರೀಶಹರಿಸರ್ವೇಶ ನತಜನ-ಪೋಷ ದುರ್ಜನನಾಶ ರವಿಶತ-ಭಾಸ ಕೌಸ್ತುಭಭೂಷವರಶ್ರೀ-ಶೇಷಾಚಲವಾಸ ವೆಂಕಟ 3ಮಾಧವವಿಪ್ರ ವಿರಹದಿ ಭ್ರಷ್ಟಹೊಲತಿಗಳನು ಸೇರ್ದ ಮುದದಿಸಾದರದಲಿ ನಿನ್ನ ಬಳಿಗೆ ಬರೆನೀ ದಯಾನಿಧಿ ಕಂಡು ಅವಗೆಶೋಧಿಸುತ ಪಾಪಗಳೆಲ್ಲವಛೇದಿ ಬಿಸುಡುತನಿಂದುವೆಂಕಟ-ಭೂಧರದ ನೆಲೆಯಾದ ನಾದವಿ-ಭೇದಬಿಂದು ಕಲಾದಿಮೂರುತಿ 4ಧನಪತಿಯೊಳು ತಾನು ಸಾಲಕೊಂಡಘನಕೀರ್ತಿಯಿಂದ ಶ್ರೀಲೋಲವನಿತೆ ಪದ್ಮಾವತಿಪ್ರೀತ ಭಕ್ತ-ಜನಸುರಧೇನು ಶ್ರೀನಾಥವನಧಿಶಯನ ಮುರಾರಿಹರಿಚಿ-ಧ್ವನಿನಿಭಾಂಗ ಸುಶೀಲ ಕೋಮಲವನಜನಾಭನೀಯೆನ್ನ ಕೃಪೆಯೊಳ-ಗನುದಿನದಿ ಕಾಯೊ ಕೃಪಾಕರ 5ಛಪ್ಪನ್ನೈವತ್ತಾರು ದೇಶದಿಂದಕಪ್ಪವಗೊಂಬ ಸರ್ವೇಶಅಪ್ಪ ಹೋಳಿಗೆಯನ್ನುಮಾರಿಹಣ-ಒಪ್ಪಿಸಿಕೊಂಬ ಉದಾರಿಸರ್ಪಶಯನ ಕಂದರ್ಪಪಿತ ಭಜಿ-ಸಿರ್ಪವರ ಸಲಹಿರ್ಪ ಕುಜನರದರ್ಪಹರಿಸುತ ಕಪ್ಪಕಾಣಿಕೆಒಪ್ಪಿಗೊಂಬ ತಿಮ್ಮಪ್ಪಶೆಟ್ಟಿಯೆ 6ಚಾರುಚರಣತೀರ್ಥವೀಂಟಿ ನಿನ್ನೊ-ಳ್ಸಾರಿ ಬರುವ ಪುಣ್ಯಕೋಟಿಸೇರಿದೆ ಕೊಡು ಮನೋರಥವ ಲಕ್ಷ್ಮೀ-ನಾರಾಯಣನೆನ್ನೊಳ್ದಯವತೋರುನಿರತಸಮೀರಭವ ವರ-ದಾರವಿಂದದಳಾಕ್ಷ ತಿರುಪತಿವೀರ ವೆಂಕಟರಮಣ ಮದ್ಬಹು-ಭಾರನಿನ್ನದು ಪಾಲಿಸೆನ್ನನು7
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಿಟ್ಟು ಹೋಗುವರೇನೊ ಕೃಷ್ಣಕೋಮಲೆಯರವೃಷ್ಟಿವÀರ್ಯ ಸಕಲ ಇಷ್ಟದ ಬಾಲೆಯರ ಪ.ಮಿತ್ರೆಯರ ಕೂಡಿ ರಮಣ ಚಿತ್ತದಿ ಚಿಂತಿಸಿರಾತ್ರಿ ಕೊಳಲು ವಿಚಿತ್ರದಿಂದ ಊದಿದಿ 1ಎಲ್ಲ ವಿಷಯ ಬಿಟ್ಟು ನಿಲ್ಲದೆ ಬಂದರುಒಲ್ಲದೆ ಅಡಗಿದಿ ಕಲ್ಲೆದೆ ಅಂದ ಪಾರ್ಥ 2ಇಟ್ಟು ನಿನ್ನಲೆ ಮನ ಬಿಟ್ಟು ವಿಷಯ ಸುಖಗಟ್ಯಾಗಿ ರಾತ್ರಿಲೆ ಬಂದು ಎಷ್ಟು ನಂಬಿದ್ದಾರಲ್ಲೊ 3ಇಂಥ ವಂಚಕನೆಂದು ಕಾಂತೆಯರು ಅರಿಯರುಭ್ರಾಂತಿಯ ಗೈಸಿದಿ ಎಂತು ಅರ್ಜುನ ನುಡಿದ 4ಹಸಿದವಗೊಂದೆÉ ತುತ್ತು ಅಶನವÀ ಕೊಟ್ಟು ಅನ್ನವ್ಯಸನವ ಹಚ್ಚಿದಂತೆ ಕುಸುಮನಾಭ ಮಾಡಿದ 5ಬೆಂದು ಬಿಸಲೆÉೂಳು ಬಹಳ ಬಂದ ಪುರುಷಗೆಉದಕಒಂದು ಗುಟುಕುಕೊಟ್ಟು ಆನಂದವ ಮಾಡಿದೆ 6ಕಂದಗೆ ಸ್ತನ ಕೊಟ್ಟುಬಿಂದು ಬಾಯೊಳಗೆ ಇಟ್ಟುಹಿಂದಕ್ಕೆ ಸರೆಯದಂತೆ ತಂದೆ ರಾಮೇಶ ಮಾಡಿದ 7
--------------
ಗಲಗಲಿಅವ್ವನವರು
ಬಿಡಲಾರೆ ಬಿಡಲಾರೆ ನಿನ್ನಡಿದಾವರೆಯ ನೀಕೊಡು ಕಂಡ್ಯ ಅಭಯವಿಡಿದೆಮ್ಮ್ಮಯ ತಂದೆ ಪ.ಕೂಗುವೆ ಕೂಗುವೆ ಕೃಪಾಸಾಗರನೆಂದ್ಹೇಳಿ ತಾಕೂಗಿದರೊದಗಿ ಕಾಯಿದೆ ನಾಗನ್ನಕೇಳಿತಂದೆ1ಬಡವ ನಾ ಬಡವನು ಕಾಣೊ ಬಾಡದೊನಮಾಲಿ ಕಡುಬಡವ ಸುದಾಮನ ಕೈಯವಿಡಿದ್ಯೆಂದುಕೇಳಿತಂದೆ2ಡೊಂಕುನಡೆದೆಡೊಂಕುನುಡಿದೆ ಶಂಕಿಲ್ಲದಲೆ ಮೂಡೊಂಕಿಯ ತಿದ್ದಿದ ಬಿರುದಾಂಕನಕೇಳಿತಂದೆ3ಬಲ್ಲೆನೊ ಬಲ್ಲೆನೊ ನೀನಿದ್ದಲ್ಲಿ ವ್ರಜದಲ್ಲಿ ಗೋಗೊಲ್ಲರು ಪುಲ್ಗಲ್ಲಿಗೆ ಕೈವಲ್ಯವುಕೇಳಿತಂದೆ4ಅವರೇವೆ ನಿನ್ನವರು ನಾನೇನವರ ಶಿಶುವಲ್ಲೆ ತನ್ನವರಹೊರೆವಪ್ರಸನ್ವೆÉಂಕಟ ತವರೂರಕೇಳಿತಂದೆ5
--------------
ಪ್ರಸನ್ನವೆಂಕಟದಾಸರು
ಬಿಡು ನಾಚಿಕೆಯನು ಉಗ್ಗಡಿಸು ಚಕ್ರಿಯನುಹಿಡಿಯೈ ವೈಕುಂಠ ಚಾವಡಿಯವನಡಿಯ ಪ.ಎಳೆತನ ಯೌವನ ಮುಪ್ಪೆಂದಲಸಿಸಿ ಹೆಬ್ಬುಲಿಯಂಥ ಮೃತ್ಯುಗಂಟಲ ಬಲೆಗೆಸಿಲುಕಿ ಸಿಲುಕಿ ಸಂದುಗಡಿಯದ ಲೇಖವನಳಿಯೆ ರಾಮನ ಪೊಗಳೆಲೆಲೆ ಜೀವವೆ 1ಅಹಂಕಾರ ವಾರಿಧಿಯಲ್ಲೀಸಾಡಿ ಬರೆಬಹಿರ ಸದ್ಗುಣದಿ ನಿರಯಕೆ ಸಾಗದೆಅಹರ್ನಿಶಾಂಬುಜನಾಭನೊಲಿವಂತೆ ಭಕುತಿಯಸಹಸ ಸಾಧಿಸು ಡಂಭವ್ಯಾಕೆನ್ನ ಮನವೆ 2ಯೋಚನೆಗೊದಗದ ಅನಂತ ಮಹಿಮನೆಂದುವಾಚಿಸ್ಯವನ ಕರ್ಮಗುಣ ನಾಮವಲೋಚನ ದಣಿಯೆ ಪ್ರತಿಮೆಯ ನೋಡಿ ಪ್ರಸನ್ವೆಂಕಟಾಚಲಪತಿ ಮುಂದೆ ಕುಣಿದಾಡು ಗಡ 3
--------------
ಪ್ರಸನ್ನವೆಂಕಟದಾಸರು
ಬಿದಿಗೆಯ ದಿವಸ(ಹನುಮಂತನನ್ನು ಕುರಿತು)ಸಮನಸನಾಗಿ ತೋರುವನಲ್ಲೆ ನೀರೆ ಪ.ಧನ್ಯನಾಗಿರುವ ದೊರೆಯ ಧರಿಸುತ್ತಚೆನ್ನಿಗನಾಗಿ ತೋರುವನಲ್ಲೆ ಈತ 1ಪಟ್ಟೆಕಂಬಿಯ ನಿರುದುಟ್ಟುಕೊಂಡಿರುವಕಟ್ಟಿದುತ್ತರೀಯ ಭೂಷಣದಿಂದ ಮೆರೆವ 2ಸೋಮಾರ್ಕಶಿಖಿಯಂತಿರುವುದು ತ್ರಿನಾಮರಾಮಣೀಯಕ ಮನೋಹರ ಪೂರ್ಣಕಾಮ 3ವೀರವೈಷ್ಣವ ಮುದ್ದು ಮೋಹನಕಾಯಭೂರಿಭೂಷಣಭುಜಬಲ ಹರಿಪ್ರಿಯ 4ರೂಪನೋಡಲು ಕಾಮರೂಪನಂತಿರುವಚಾಪಲ ಪ್ರೌಢ ಚಿದ್ರೂಪನಂತಿರುವ 5ಬಾಲವ ನೆಗಹಿ ಕಾಲೂರಿ ಶೋಭಿಸುವನೀಲದುಂಗುರದ ಹಸ್ತವ ನೀಡಿ ಮೆರೆವ 6ಗೆಜ್ಜೆ ಕಾಲುಂಗರ ಪದಕಕಟ್ಟಾಣಿಸಜ್ಜನನಾಗಿ ತೋರುವನು ನಿಧಾನಿ 7ಊರ್ವಶಿ :ತರುಣಿ ಕೇಳೀತನೆ ದೊರೆಮುಖ್ಯಪ್ರಾಣವರನಿಗಮಾಗಮ ಶಾಸ್ತ್ರಪ್ರವೀಣ1ಮಾಯವಾದಿಗಳ ಮಾರ್ಗವ ಖಂಡಿಸಿದವಾಯುಕುಮಾರ ವಂದಿತ ಜನವರದರಂಭೆ : ದಿಟವಾಯ್ತು ಪೇಳ್ದ ಮಾತಾದರು ಜಾಣೆಚಟುಳ ಹನುಮನ ಉತ್ಕಟರೂಪ ಕಾಣೆ 1ವಾಮನನಾದ ಕಾರಣವೇನೆ ಪೇಳೆನಾ ಮನಸೋತೆ ಎಂತುಂಟೊ ಹರಿಲೀಲೆ 2ಊರ್ವಶಿ : ನಾಗವೇಣಿ ನೀ ಕೇಳೆ ನಾಗವೈರಿಯೊಳುಸಾಗಿತು ಸೇವೆಯೆಂಬುದು ಮನಸಿನೊಳು 1ವಾದವ ಮಾಡಿ ವಿನೋದದಿ ಹರಿಯಪಾದಸೇವೆಗೆ ಮನನಾದ ಕೇಳಿದೆಯೊ 2ವೀರ ವೇಷವನಿದ ಕಂಡು ಶ್ರೀಹರಿಯದೂರವಾದನೋ ಎಂದು ಮನದೊಳು ನಿಜವು 3ತೋರಲು ಬೇಗದಿ ದೊರೆ ಹನುಮಂತಭೂರಿಭೂಷಣ ಸುಂದರ ರೂಪವಾಂತ 4ಇಂದಿನ ಸೇವೆಯೆನ್ನಿಂದತಿ ದಯದಿಮಂದರಧರಿಸಿಕೊಳ್ವುದು ಎಂದು ಭರದಿ 5ಒಯ್ಯನೆ ಪೇಳುತ್ತ ವಯ್ಯಾರದಿಂದಕೈಯನು ನೀಡಿ ಸಾನಂದದಿ ಬಂದ 6ಕಂತುಪಿತನು ಹನುಮಂತ ಮಾನಸಕೆಸಂತಸ ತಾಳಿ ಆನಂತನು ದಿಟಕೆ 7ಏರುತ ಹನುಮನಭೂರಿವೈಭವದಿಸ್ವಾರಿಯು ಪೊರಟ ಸಾಕಾರವ ಮುದದಿ 8ತೋರಿಸಿ ಭಕ್ತರಘೋರದುರಿತವಸೂರೆಗೊಳ್ಳುವನು ವಿಚಾರಿಸಿ ನಿಜವ 9ಹದನವಿದೀಗೆಲೆ ಬಿದಿಗೆಯ ದಿನದಿಮದನಜನಕನು ಮೈದೋರುವ ಮುದದಿ 10ಪ್ರತಿದಿನದಂತೆ ಶ್ರೀಪತಿ ದಯದಿಂದಅತಿಶಯ ಮಂಟಪದೊಳು ನಲವಿಂದ 11ಎಂತು ನಾ ವರ್ಣಿಪೆ ಕಂತುಜನಕನಅಂತ್ಯರಹಿತ ಗುಣಾನಂಮಹಿಮನ 12ಏಕಾಂತದಿ ಲೋಕೈಕನಾಯಕನುಶ್ರೀಕರವಾಗಿ ನಿಂದನು ನಿತ್ಯಸುಖನು 13* * *ರಂಭೆ : ಇವನತಿಜಾಣನಮ್ಮಾ ಇವನ್ಯಾರಮ್ಮಾ ಪ.ಇವನತಿಜಾಣ ಲಕ್ಷ್ಮೀಧವನಿಗಿಂತಲು ಮುಂದೆತವಕದಿ ಬರುವತ್ತಿತ್ತವರನ್ನು ನೋಡದೆ 1ಅಂದಣವೇರಿ ಮತ್ತೊಂದ ತಾ ನೋಡದೆಒಂದೇ ಮನದಿ ಬೇಗ ಮುಂದೆ ಬರುವನಮ್ಮಾ 2ಬಾಲಬ್ರಹ್ಮಚಾರಿ ಶಿಲೆಯಂತಿರುವನುಅಲೋಚಿಸಲಿವ ಮೂಲಪುರುಷನಮ್ಮಾ 3ಪುಟ್ಟನಾದರು ಜಗಜಟ್ಟಿಯಂತಿರುವನುದಿಟ್ಟನಿವನವನ ಮುಟ್ಟಿ ನೋಡಮ್ಮ 4ಊರ್ವಶಿ :ನಾರೀ ಇವನೀಗಹೊಂತಕಾರಿಲೋಕಕ್ಕಾಧಾರಿಪ.ಕೊಬ್ಬಿದ ದೈತ್ಯರಿಗೀತನೆಕಾಲಹಬ್ಬುವದಾತ್ಮಕ್ಕೀತನೆ ಮೂಲಉಬ್ಬುವ ಹರಿಯೆಂದರೆ ಮೈಯೆಲ್ಲಒಬ್ಬನಿಗಾದರೂ ಬಗ್ಗುವನಲ್ಲ 1ಎಲ್ಲಿರುವನುಹರಿಅಲ್ಲಿಹನೀತಬಲ್ಲಿದನಾರಾಯಣಗಿವ ದೂತಖುಲ್ಲರ ಮನಕತಿ ಝಲ್ಲೆನುವಾತಸುಲ್ಲಭನೆಯಿವ ಮುಂದಿನ ಧಾತ 2ಭೇದವಿಲ್ಲೆಂಬುದವರಿಗೆಯಿವ ತುಂಟಮೇದಿನಿಬಾಧಕರಿಗೆ ಯಿವ ಕಂಟಆದಿ ಮೂರುತಿ ಕೇಶವನಿಗೆಬಂಟಮಾಧವಭಕ್ತರಿಗೀತನೆ ನೆಂಟ 3ದುರಿತಾರಣ್ಯದಹನ ನಿರ್ಲೇಪವರವೆಂಕಟಪತಿಯಿದಿರೊಳಗಿಪ್ಪಪರಮಾತ್ಮನ ಪರತತ್ತ್ವ ಸ್ವರೂಪಮರೆಮಾತೇನಿವ ದೊರೆ ಹನುಮಪ್ಪ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬುದ್ಧಿ ಧೃತಿಯೆಂಬ ನಾರೇರು ಶ್ರೀಮುದ್ದು ಕೃಷ್ಣನ ಒಲಿಸಿಕೊಂಡರು ಪ.ಅಕ್ಕ ಬುದ್ಧಿವಂತೆ ತಂಗಿಗೆ ಬಲುನಿಕ್ಕರದಲಿ ಹಿತವಾಡಿದಳುಚಿಕ್ಕವಳೆಂದಂಜದೆÉ ಧೃತಿಯು ತಮ್ಮಕ್ಕನೊಳು ಬಡಿದಾಡಿದಳು 1ಕಟ್ಟಲೆ ಮೀರಿ ಮಾತಾಡದಿರೆ ತಂಗಿಸಿಟ್ಟು ಬರುತಿದೆ ಕಾಡದಿರೆಕಟ್ಟಲೆ ಮೀರಿ ಮೊದಲೆ ನವೆದೆ ನಿನ್ನಕಟ್ಟಿನೊಳಗೆ ಸಿಕ್ಕಿ ಬಲು ದಣಿದೆ 2ಒಗತನ ದಾರದೆ ಸಣ್ಣವಳೆ ನೀಜಗಳಕ್ಕೆ ನಿಂತೆ ದೊಡ್ಡೆದೆಯವಳೆನಗೆಗೇಡು ಮಾಡಿಕೊಂಡೆಲೆಯಕ್ಕ ನಿನಗೊಗತನ ನನ್ನಿಂದ ತಗಲಕ್ಕ 3ಹರಿನಿನಗೆ ದಕ್ಕಿದನೆಂದು ಉಣ್ಣದುರಿಯಬೇಡೆಲೆ ತಂಗಿ ಹೋಗಿಂದುಅರಸ ದಕ್ಕುವನೆ ಇನ್ನಾರಿಗೆ ಅಕ್ಕಕಿರುಕುಳು ಮಾತ್ಯಾಕೆ ಹಿರಿಯಳಿಗೆ 4ನನ್ನ ಹಿರಿಯತನ ಕೆಣಕಿದ್ಯಲ್ಲೆನನ್ನ ಕಣ್ಣ ಮುಂದೆ ನಿನ್ನೆ ಬಂದವಳೆಹುಣ್ಣಿಮೆ ಚಂದ್ರ ದಿನಕೆ ಹಿರಿಯ ಜಗಮನ್ನಣೆಗೆ ಬಾಲಚಂದ್ರನಲ್ಲೆ 5ಪಟ್ಟ ನನ್ನದು ಮೊನ್ನೆ ಬಂದವಳೆ ನಿನ್ನದಿಟ್ಟತನವನೇನ ಹೇಳಲೆಕೃಷ್ಣ ನಿನಗೆ ದೂರನಲ್ಲೆ ಅಕ್ಕ ಹರಿಯಗುಟ್ಟಿನ ಮೋಹವೆ ನನಗೆ ಅಕ್ಕ 6ತಂಗಿ ಮನವ ನೋಯಿಸ್ಯಾಡದಿರೆ ಶ್ರೀರಂಗನೆನಗೆರವು ಮಾಡದಿರೆಮಂಗಳ ಮಹಿಮ ಮುರಾರಿಯ ಅರ್ಧಾಂಗಿಯೆ ನಾ ನಿನಗೆ ಸರಿಯೆ 7ಹಿರಿಯ ಕಿರಿಯಳಲ್ಲ ಸರಿ ಹೇಳೆಹರಿಗೆರವಿನ ಮಾತಿಲ್ಲಖರೆಕೇಳೆಪರಮಪುರುಷ ವಾಸುದೇವನೆ ಕೊಟ್ಟವರಕೆಂದು ತಪ್ಪದೆ ಕಾವನೆ 8ಕನ್ಯೆ ಲಕ್ಷುಮಿಯ ರಮಣನೆ ಸ್ವಾಮಿತನ್ನ ನಂಬಿದವರ ಹೊರೆವನೆಪುಣ್ಯ ಗೋಪೀಜನಜಾರನೆ ಪ್ರಸನ್ನವೆಂಕಟಪತಿ ಧೀರನೆ 9
--------------
ಪ್ರಸನ್ನವೆಂಕಟದಾಸರು
ಬೂಚಿಬಂದಿದೆ-ರಂಗ-ಬೂಚಿ ಬಂದಿದೆಪಚಾಚಿ ಕುಡಿದು ಸುಮ್ಮನೆ ನೀಪಾಚಿಕೊಳ್ಳೊ ಕೃಷ್ಣಯ್ಯ ಅ.ಪನಾಕು ಮುಖದ ಬೂಚಿಯೊಂದು |ಗೋಕುಲಕ್ಕೆ ಓಡಿ ಬಂದು ||ತೋಕರನ್ನು ಎಳೆದುಕೊಂಡು |ಕಾಕುಮಾಡಿ ಒಯ್ಯುವುದಕೆ 1ಮೂರು ಕಣ್ಣಿನ ಬೂಚಿಯೊಂದು |ಊರು ಊರು ಸುತ್ತಿ ಬಂದು ||ದ್ವಾರದಲ್ಲಿ ನಿಂದಿದೆ ನೋಡೊ |ಪೋರರನ್ನು ಒಯ್ಯುವುದಕೆ 2ಅಂಗವೆಲ್ಲ ಕಂಗಳುಳ್ಳ |ಶೃಂಗಾರ ಮುಖದಬೂಚಿ||ಬಂಗಾರದ ಮಕ್ಕಳನೆಲ್ಲ |ಕೆಂಗೆಡಿಸಿ ಒಯ್ಯುವುದಕೆ 3ಆರು ಮುಖದ ಬೂಚಿಯೊಂದು |ಈರಾರುಕಂಗಳದಕೆ ||ಬಾರಿಬಾರಿಅಳುವ ಮಕ್ಕಳ |ದೂರ ಸೆಳೆದು ಒಯ್ಯುವುದಕೆ 4ಮರದ ಮೇಲೆ ಇರುವುದೊಂದು |ಕರಿಕರಾಳದ ಮುಖದಬೂಚಿ||ತರಳರನ್ನು ಎಳೆದುಕೊಂಡು |ಪುರಂದರವಿಠಲಗೊಪ್ಪಿಸಲಿಕ್ಕೆ 5
--------------
ಪುರಂದರದಾಸರು
ಬೇಡವೆನ್ನೆ ನೀನು ಗೋಪಮ್ಮ ಪಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಬೇಡುವೆ ವರಗಳ | ಜೋಡಿಸಿ ಕರಗಳ |ನೀಡು | ಕೃಪೆಯೊಳ ಮಾಡದೆ ಮುನಿಸುಗಳ ||ಗೋಪಾಲ||ಬೇಡನು ಮರಗಳ ನೋಡುತ ತಪಗಳ ಮಾಡಲು ವರಗಳ |ನೀಡಿದೆ ಕರುಣದೊಳ್ ||ಶ್ರೀ ಲೋಲ|| 1ಜಪವನು ಮಾಡಲಾರೆ | ತಪವನು ಮಾಡಲಾರೆ |ಉಪವಾಸ ಮಾಡಲಾರೆ ||ಶಪಥವ ಮಾಡಲಾರೆನು || ನಿನ್ನೊಳು ನಾನೂ ||ದ್ರುಪಜೆಯುಟ್ಟ ಸೀರೆ | ಕುಪಿತಾತ್ಮ ಸೆಳೆವರೆ |ಉಪಕರಿಸಿದನ್ಯಾರೆ || ನಿಪುಣ ನೀ ದಯವ ತೋರೆ ||ಮುರಾರೆ 2ಹುಲುನರಜನ್ಮವೆತ್ತೀ | ಹುಲುಗಾವಲೊಳು ಸುತ್ತೀ |ಹುಲು ಗೋವರ್ಧನವೆತ್ತಿ | ಹುಲುಗೈದೆ ಸುರಶಕ್ತೀ ||ಗೊಲ್ಲರೊಳ್ ಅರ್ಥೀ || ಕಲುಷವ ಬಿಡಿಸುತ್ತಿ |ಫಲ್ಗುಣಸಾರಥಿ| ಸಲಹೆನ್ನ ಮನದರ್ಥಿ |ಚೆಲುವ ಗೋವಿಂದ ಮೂರುತಿ | ದಾಸರೊಳ್ ಪ್ರೀತಿ 3
--------------
ಗೋವಿಂದದಾಸ
ಬ್ರಹ್ಮಾದಿಕರನು ಪರಬ್ರಹ್ಮದಿಚ್ಛಿಲಿ ಪಡೆದಳಮ್ಮಪರಂಜ್ಯೋತಿ ಪರಬ್ರಹ್ಮಿಣೀಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ವಾಣಿ ಕಲ್ಯಾಣಿಫಣಿವೇಣಿ| ರುದ್ರಾಣಿಶರ್ವಾಣಿಸುವಾಣಿ ಗೀರ್ವಾಣಿ ವರದೆ | ಗಾಣಿತ್ರಿನಯನ ಅಜನ ರಾಣಿ ಶಂಕರ ಪ್ರಾಣಿ ಪುಸ್ತಕಪಾಣಿನಾರಾಯಣೀ1ಅಂಬೆ ಲೋಕಾಂಬೆ ಭ್ರಮರಾಂಬೆ ಮೂಕಾಂಬೆಹರಡಿಂಬೆ ಪ್ರತಿಬಿಂಬೆ ಕುಚಕುಂಭೆ ಸಾಂಬೆ |ರಂಭೆ ಹೇರಂಬೆ ಶರಣೆಂಬೆ ವರಗೊಂಬೆ ಭಕ್ತರಬೊಂಬೆ ಹೊಳೆವ ಗೊಂಬೆ2ಕಾಳೆ ಹಿಮ ಬಾಳೆ ಭೂ ಪಾಳೆ ಕುಸುಮಾಳೆವನಮಾಳೆಕಂದರಮೌಳೆ ಕುಟಿಲ ಕುರುಳೆ |ಕೇಳಿನಿನ್ನಯ ಲೀಲೆ ಕಾಲಿಗೆರಗುವರಘವ ಮೂಲಕೆತ್ತೆತ್ತಿಬಿಸುಟುವ ಕೃಪಾಳೆ3ಬೇಕೆಂಬೊ ಬಯಕಿತ್ತು ಸಾಕು ಸಾಕೆನಿಸುವರುಲೋಕದೊಳಗ್ಯಾರುಂಟು ನಿನ್ನ ಬಿಟ್ಟು |ಏಕೆ ವಿವೇಕೆ ಎನ್ನೀ ಕುಟಿಲಗುಣನೋಡ ಬೇಕೆಕ್ಷಮೆಮಾಡಿದರೆ ಮೈಯುಳಿಯುವದು4ಕಾಯಜನ ಮಾತೆ ಸಿತಕಾಯನರ್ಧಾಂಗಿ ಜಗಕಾರ್ಯನಿರ್ಮಿಸುವ ನರರುದಿಸಿ ಮೂರು || ಕಾಯಡಗಿ ಹೋದನಿಷ್ಕಾಯ ಪರಶಕ್ತ್ಯೆನ್ನ ಕಾಯ್ದುಕೊಳ್ಳೆಲೆತಾಯಿ ಸ್ತ್ರೀಯರನ್ನೆ5ಸಾರಿದರಹೊರೆವಸಂಸಾರದೊಳು ಮುಳುಗಿದರೆತಾರಿಸುವ ತವಕದಿಂತರುಳೆತರುಣೀ |ಸೇರಿಸುತ ತಿರುಗಿ ತನು ಬಾರದ್ಹಾದಿಗೆ ಒಯ್ದುತಾರಿಸುವ ಸ್ಥಿರದಿ ನೀ ತೋಯಜಾಕ್ಷಿ6ಕುಸುಮಸರ್ಪಾದಿಗಳು ಕುಸುಮಗಂಧಿಯ ಪದಕೆಕುಸುಮವೃಷ್ಟಿಗವು ದೇವಿಯ ಸುಕೃತಿಗಳೂ |ಕುಸುಮದೊಳು ಕರಕಂಜ ಕುಸುಮದೊಳುವರವಿಡಿದ ಕುಸುಮಶರರಿಪುಶಂಕರನ ಶಂಕರೀ7
--------------
ಜಕ್ಕಪ್ಪಯ್ಯನವರು