ಒಟ್ಟು 8888 ಕಡೆಗಳಲ್ಲಿ , 133 ದಾಸರು , 4838 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಥವನೇರಿದ ರಥಿಕನಾರೇ ಪೇಳಮ್ಮಯ್ಯ ಕಥಿತಧ್ಯಾತ ಸಂಸ್ತುತ ವಿತತಾನತ ಹಿತಕರ ದಿವಿಷÀತ್ಪತಿ ಕಾಣಮ್ಮ ಪ ಕೋಟಿ ಭಾಸ್ಕರ ಪ್ರಭಾಟೋಪದಿ ರಾಜಿಸುವ ಪೇಳಮ್ಮಯ್ಯ ಅ.ಪ. ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ ಆಟದೆ ಕುರುಜ ಮಹಾಟವಿ ಸವರಿ ಕಿ ರೀಟಯ ಸಲಹಿದ ಖೇಟವಾಹನನೇ ಕೇಳಮ್ಮಯ್ಯ 1 ಭುಜಗರಾಜ ಫಣಿಮಣಿ ಮಂಡಲ ಮಂಡಿತನೇ ನೋಡಮ್ಮಯ್ಯ ವಿಜಯವರದ ಅರಿಗದಾಂಬುಜಧರ ಭುಜನೇ ನೋಡಮ್ಮಯ್ಯ ಗಜಚರ್ಮಧರಾದ್ಯನಿಮಿಷಗಣಸೇವಿತನ ನೋಡಮ್ಮಯ್ಯ ಅಜನ ನಾಭಿಯಲಿ ಪಡೆದು ಚರಾಚರ ಸೃಜಿಸಿ ಪೇಳ್ದ ನೀರಜಲೋಚನ ಕಾಣಮ್ಮ 2 ಏತಾದೃಶ ಮಹಾಮಹಿಮ ರಮಾವಲ್ಲಭನೆ ಪೇಳಮ್ಮಯ್ಯ ಶ್ವೇತ ದ್ವೀಪಾನಂತಾಸನ ವೈಕುಂಠನುಳಿದು ಪೇಳಮ್ಮಯ್ಯ ವೀತಭಯ ಜಗನ್ನಾಥವಿಠಲ ಬರಲೇಕೆ ಪೇಳಮ್ಮಯ್ಯ ಭೂತಳ ಜನರಭಿಲಾಷೆ ಸಲಿಸಲು ವಾತಾಶನ ಗಿರಿಗಿಳಿದ ಕಾಣಮ್ಮಯ್ಯ 3
--------------
ಜಗನ್ನಾಥದಾಸರು
ರಥವಾನೇರಿದ ಶ್ರೀ ಹನುಮಂತ | ಭೀಮ ಬಲವಂತ ಪ ಗತ ಶೋಕನ ಪದ | ರತಿ ಇಚ್ಛಿಪರಿಗೆಹಿತದಿಂದಲಿ ಸದ್ | ಗತಿಯ ಕೊಡುವೆನೆಂದು ಅ.ಪ. ಪತಿ ಕರಿಸೆನ್ನಲು |ಪ್ರತಿ ಪ್ರತಿ ತತುವರು | ಗತ ವಿಭವದಲಿರೆಪ್ರತಿ ನಿನಗಿಲ್ಲೆಂದೆ | ನುತಲಿ ತೋರಿದ 1 ಗರ ಉದುಭವಿಸಲುಹಿತದಿಂದಲಿ ಜಗ | ಪತಿಯಾಣತಿಗಳ |ಪತಿ ಕರಿಸುತ ನೀ | ಪಾತ್ರಗ ಗರವನುಮತಿ ವಂತನೆ ಕುಡಿ | ದತಿಶಯ ತೋರಿದೆ 2 ಮೂರು - ಕೋಟಿಯ ರೂಪ - ಧರನೆ | ಮೂರ್ವಿಕ್ರಮ ಸೇವಕನೆಮೂರು ಲೋಕಂಗಳ ವ್ಯಾಪಕನೆ | ರಕ್ಕಸಾಂತಕನೆ ||ಆರು ಮೂರುಗಳು | ಎರಡೊಂದನೆ ದಶನೂರು ಮೇಲೆ ಆ | ರ್ನೂರ್ ಜಪಗಳ |ಮೂರು ಭೇದ ವಿಹ | ಜೀವರುಗಳಲಿವಾರ ವಾರಕೆ ನೀ | ಗೈಯ್ಯುವೆ ಗುರುವೇ 3 ವಿಶ್ವ ಕ ಕರ್ಮ ಸಮೂಹವಸಾಕ್ಷಾತ್ತಾಗಿ ತಾನೆ | ಗೈಯ್ಯುವೆನೆಂದು 4 ಆನನ ಕಮಲಕೆಭಾನುವೆನಿಸುತಲಿ | ದುಶ್ಯಾಸನನಗೋಣ ಮುರಿದುರದಿ | ಕೋಣನ ವಿರಚಿಸಿಶೋಣಿತ ಕುಡಿದಂತೆ | ಕಾಣುವೆನೆಂದು 5 ಚಕ್ರಧರ | ಅಂಬುಜ ನಯನನಬೆಂಬಿಡದಲೆ ನೀ | ಸಂಭಮ್ರದಲಿ ನಿನ |ಅಂಬಕದಲಿ ನಿನ | ಬಿಂಬನ ಕಾಣುತತ್ರ್ಯಂಬಕನಿಂ ಸಂ | ಭಾವನೆ ಗೊಳ್ಳುತ 6 ಮಾಘ ಶುದ್ಧವು ನವಮಿಯ ದಿನದಿ | ಪಾರ್ಥಿವ ವತ್ಸರದಿಸಾಗರ ಕಟ್ಟೆ ಯತಿ ಸಮ್ಮುಖದಿ | ಕುಳ್ಳಿರುತಲಿ ರಥದಿ ||ನಿಗಮಗಳಿಗೆ ಸಿಗ | ದಗಣಿತ ಗುಣಮಣಿಖಗವರ ಗುರು ಗೋ | ವಿಂದ ವಿಠ್ಠಲನ |ಸುಗುಣ ಗಣಂಗಳ | ಬಗೆ ಬಗೆಯಿಂದಲಿಪೊಗಳುವರಘಗಳ | ನೀಗುವೆನೆನ್ನುತ 7
--------------
ಗುರುಗೋವಿಂದವಿಠಲರು
ರಮಣನಾ ವಿಭವವನು ಅಮಮ ವಿವರಿಪೆ ನಾನು ಕಮಲಾಕ್ಷಿ ಕೇಳ್ನೀನು ಕ್ರಮದೊಳಿದನು ತನಯರೊಳು ಜಡನೊರ್ವನನಂಗನೆ ಮತ್ತೊರ್ವ ವನಿತೆ ಚಂಚಲೆಯಚಲೆಯೆನಿಪರವರು ವಕ್ರಗಮನೆಯೆ ಸುತೆಯು ಚಕ್ರವೆ ನಿಜಾಯುಧವು ಪಕ್ಷಿಯೇ ವಾಹನವು ದಕ್ಷನಿವನು ಶರಧಿಯೇ ಮಂದಿರವು ಉರಗವೇ ಹಾಸಿಗೆಯು ಇರವನರಿಯರದಾರು ಭುವಿಯ ಜನರು ಬರಿಯ ಮಾತಿಗೆ ಮನವು ಕರಗಿದುದಕೆ ಅರಿಯದಾನೈತಂದು ನೆರೆದೆನೇಕೆ ಪರಿಕಿಸಲ್ ಮತಿಭ್ರಮೆಯಿದುವೆ ಸಾಕೆ
--------------
ನಂಜನಗೂಡು ತಿರುಮಲಾಂಬಾ
ರಮಣಿ ಮಂಜುಳವಾಣಿ ಕಮನೀಯ ಸುಶ್ರೋಣಿ ವಿಮಲ ಪಲ್ಲವಪಾಣಿ ಫಣಿಪವೇಣಿ ಮೀನಾಕ್ಷಿ ಯೀ ಚಿಂತೆ ನಿನಾಂತುದೇಂಕಾಂತೆ ಮೌನಮೇಂ ಮತಿವಂತೆ ಬಿರುಸದೆನಿತೆ ಕುಹಕರುಕ್ತಿಯ ಕೇಳಿ ಕಡುಕೋಪವನು ತಾಳಿ ಬಹುವಿಧದಿ ಬಳಲಿಸುವೆ ವಿಹಿತವೇನೆ ಹೆಬ್ಬುಲಿಯ ತೆರದಿಂದ ಬೊಬ್ಬಿರಿದು ಮತಿಯುಳಿದು ಅಬ್ಬರಿಸಿ ಕೂಗುವರೆ ಅಬ್ಜನೇತ್ರೆ ಕೈಪಿಡಿದ ರಮಣನೊಳು ಮುನಿಸೆ ತರುಣಿ ತಾಪಶಮನವ ಮಾಡು ನೋಡು ರಮಣಿ ಓಪನೆಂದೊಲಿದಾಡು ಕರವನೀಡು ಭೂಪಶೇಷಾದ್ರೀಶನತ್ತ ನೋಡು
--------------
ನಂಜನಗೂಡು ತಿರುಮಲಾಂಬಾ
ರಮಾ ಮನೋಹರನೆ ದೀನ - ಪತಿತಪಾವನಾ ಪ ಚೆಂದದಿಂದ ವೇದ ತಂದ ಮಂದರೋದ್ಧಾರಾ ಅರ ವಿಂದನಯನ ಬಂಧು ರಕ್ಷಿಸೊ ಇಂದು ಭೂಧರಾ 1 ಕರುಳಮಾಲೆ ಧರಿಸಿದ ಶ್ರೀ ವರದ ವಾಮನಾ ಧೃತ ಕರದ ಪರಶುರಾಮ ರಾಘವ ಯರು ಕುಲೋತ್ತಮಾ 2 ಲೋಕ ಮೋಹಕ ಬುದ್ಧನಾಗಿ ತೇಜಿಯೇರಿದಾ ಜಗ ದೇಕ ಜಗನ್ನಾಥ ವಿಠಲ ಭೀಕರಾಂತಿಕಾ 3
--------------
ಜಗನ್ನಾಥದಾಸರು
ರಮಾವಧು ಮನೋಹರ ಪ ಅಂಗಜಪಿತ ಪುಂಗವಾ ವಿಹಂಗಗಮನ ರಂಗಧಾಮ ಅ.ಪ ಮಾಧವ ಸುರ- ಬೃಂದನುತಾ ಪದಾಬ್ಜ ಮಂದಹಾಸದಿಂದ ಬಂದು 1 ಕೋರಿಕೆಗಳನು ನಡೆಸು ನಾರಿರುಹಲೋಚ ಹರಿ ಸುಕು ಮಾರ ಶರೀರೋತ್ತಮ ವರ ಧೀರಶೂರ ನಾರಸಿಂಹ2 ಮಾವರನೆ ನಿನ್ನಡಿಯ ಸೇವಿಸುತ್ತ ಭಾವಿಸುವೆ ಕಾವುದು ರಾಜೀವನೇತ್ರ ದೇವದೇವ ಜಾಜಿಶ್ರೀಶ 3
--------------
ಶಾಮಶರ್ಮರು
ರಮಾವಿನುತ ವಿಠಲ ಪೊರೆಯಬೇಕೊ ಇವಳ ಪ ಕ್ರಮಾನುಸಾರ ತವದಾಸ್ಯ ಕಾಂಕ್ಷಿಪಳ ಅ.ಪ. ಪತಿಸುತರು ಹಿತರಲ್ಲಿ ವ್ಯತಿರೇಕ ಮತಿ ಕೊಡದೆಅತುಳ ಪ್ರೀತಿಯಲಿ ಅವರಂತರಾತ್ಮಕನಾ |ಹಿತ ಸೇವೆಯೆಂಬ ಸನ್ಮತಿಯನೇ ಕರುಣಿಸುತಕೃತ ಕಾರ್ಯಳೆಂದೆನಿಸೊ ಕ್ಷಿತಿರಮಣ ಹರಿಯೇ 1 ಭವಶರಧಿ ದಾಟಿಸುವ ಪ್ಲವವೆನಿಪ ತವನಾಮಸ್ತವನಗಳ ಸರ್ವತ್ರ ಸರ್ವಕಾರ್ಯದಲಿಹವಣಿಸುತ ನೀನಾಗಿ ಪ್ರವರ ಸಾಧನಗೈಸೊಪವಮಾನ ಸನ್ನಿಹಿತ ಭುವನ ಮೋಹನನೇ 2 ಪ್ರಾಚೀನ ಕರ್ಮಗಳ ಯೋಚಿಸಲು ಎನ್ನಳವೇಕೀಚಕಾರಿಪ್ರೀಯ ಮೋಚಕೇಚ್ಛೆಯನುಸೂಚಿಸುವುದೋ ಸವ್ಯಸಾಚಿಸಖ ಶ್ರೀಹರಿಯೆನೀಚೋಚ್ಚ ತರತಮವ ತಿಳಿಸಿ ಪೊರೆ ಇವಳಾ 3 ನಂದ ಗೋಪನ ಕಂದ ಇಂದಿರೇಶನೆ ಹೃದಯಮಂದಿರದಿ ತವರೂಪ ಸಂದರುಶನಾ |ನಂದವನೆ ಇತ್ತಿವಳ ಅಂದದಲಿ ಸಲಹೆಂದುಕಂದರ್ಪಪಿತ ನಿನ್ನ ವಂದಿಸುತ ಬೇಡ್ವೆ4 ಅನಿರುದ್ಧ ರೂಪಾತ್ಮಮಧ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ರಮಿಸುವೆವೆಂದಿಗೆ ಮುರಳೀಧರನ ಪ ಸುಮನಸವಂದಿತ ವಿಮಲ ಚರಿತನ ಅ.ಪ ಮಂದಮಾರುತ ಸುಮಗಂಧ ಬೀರುತಲಿರೆ ಸುಂದರವದನ ಗೋವಿಂದನ ನೊಸಲಲಿ1 ವನರುಹನೇತ್ರನ ಪರಮ ಪವಿತ್ರನ ವನಜಾಕ್ಷಿಯರೆಲ್ಲ ವನವಿಹಾರದಲಿ 2 ಹೇಮವಸನನ ಕೋಮಲ ರೂಪನ ಕಾಮಿನಿಯರು ನಾವು ಪ್ರೇಮವ ಬೀರುತ 3 ಕಲಭಾಷಣದಿಂದ ಸೆಳೆಯುತ ಮನವನು ಜಲಜಾಕ್ಷಿಯರೆಲ್ಲ ಜಲ ವಿಹಾರದಲಿ 4 ಭಾಸುರಾಂಗನ ಪರಿಹಾಸ ಮಾಡುತಲಿ ಬೇಸರವಿಲ್ಲದೆ ರಾಸಕ್ರೀಡದಿ 5 ಸಂಗೀತವ ಪಾಡಿ ರಂಗನ ಒಡಗೂಡಿ ಅಂಗನೆಯರೆಲ್ಲ ಅನಂಗ ಕೇಳಿಯಲಿ 6 ಬಿನ್ನನೆ ಬಾರೆಂದು ಕೆನ್ನೆಯ ಪಿಡಿಯುತ ಸನ್ನೆಯ ಮಾಡಿ ಪ್ರಸನ್ನಮುಖಿಯರು 7
--------------
ವಿದ್ಯಾಪ್ರಸನ್ನತೀರ್ಥರು
ರವಿಕುಲಾಂಬುಧಿ ಸೋಮನೆ ಭುವನ ಪಾವನ ರಾಮನೆ ಪ ಕವಿವರಾರ್ಚಿತ ಭೂಮನೆ ದಿವಿಜಸನ್ನುತ ನಾಮನೆ ಅ.ಪ. ಚಂಡ ರಾವಣನುಪವನದೊಳು ಚಂದ್ರ ಮಂಡಲಾಸ್ಯೆ ಇರುವಳು 1 ಸುಂದರಿ ನಿನ್ನನು ಧ್ಯಾನಿಪಳು ಕುಂದುತ್ತ ಚಿತ್ತದಿ ಶೋಕಿಪಳು ಬಿಡುವಳು ಬಂಧನ ದೊಳಿರುವಳು2 ಮಾಸಿದ ಸೀರೆಯನುಟ್ಟಿಹಳು ದೂಸರ ವೇಣಿಯ ಸುತ್ತಿಹಳು ಭೂಷ ವಿಶೇಷದೊಳಾಸೆಯನಿಡಳುಪವಾಸವನೆ ಗೈವಳು 3 ತಾಮರಸಾಕ್ಷಿಯು ನೊಂದಿಹಳು ರಾಮ ರಾಮೆನ್ನುವಳು 4 ಜ್ಞಾನ ವಿಜ್ಞಾನವ ಪೊಂದಿಹಳು ಪತಿ ಭಕ್ತಿದೇವಿಯಾಗಿರುವಳು ಧೇನುಪುರೀಶ ಕೇಳು 5
--------------
ಬೇಟೆರಾಯ ದೀಕ್ಷಿತರು
ರಾಘವೇಂದ್ರ ಗುಣಸಾಗರ ನೋಡೆನ್ನಹರಿಯ ತೋರಿನ್ನ ಪ ಮಂತ್ರಾಲಯದೊಳು ಮಂದಿರ ಮಾಡಿರುವಿ ಮನೆಮನೆಯಲ್ಲಿರುವಿಸಂತತಿ ಸಂಪತ್ತುಗಳನು ನೀ ಕೊಡುವಿಸಂತರ ರಕ್ಷಿಸುವಿತಂತ್ರ ದೀಪಿಕೆಯೆಂಬೊ ಗ್ರಂಥವರಚಿಸಿರುವಿ ಸೂತ್ರಾರ್ಥಗಳರುಹಿ 1 ಎಷ್ಟೋ ಗ್ರಂಥಗಳ ವ್ಯಾಖ್ಯಾನವ ಮಾಡಿದೇವಾರ್ಥವ ನೋಡಿಕೆಟ್ಟವಾದಿಗಳ ವಾದದಿ ಜಯಮಾಡಿಸೂರಿಗಳನು ಕೂಡಿಕುಷ್ಠಮದಾದಿ ರೋಗಗಳನು ಹರಿ ಬೇಡಿಕಳೆಯುವ ಗುರುಮೇಧಿ 2 ಒಂದು ಚರಿತೆಯ ಪೇಳಲು ನಾನರಿಯೆಇರುವೆನು ಈ ಪರಿಯೆನಂದಬಾಲನ ಪ್ರಿಯ ನೀ ಎನಗೊಲಿಯೆದುರಿತಾಬ್ಧಿಗೆ ಸರಿಯೇಇಂದಿರೇಶನ ಪದ ಸಂದರುಶನ ದೊರೆಯೆನಿನ್ನಯ ನಾ ಮರೆಯೆ 3
--------------
ಇಂದಿರೇಶರು
ರಾಘವೇಂದ್ರ ಗುರುವರ್ಯ ಮಮಾಘನಾಶನಾ ಪ ಪಾದ ಪದ್ಮಕ್ಕನುದಿನ ಅ.ಪ ಕನಕ ಕಶ್ಯಪನಾತ್ಮಜನೆಂದೆನಿಸಿ ಮೋದದಿ ವನಜನಯನ ಸ್ಥಂಭದಿ ಬರುವಂದದಿ ಗೈದಿ 1 ದೋಷರಹಿತ ಹರಿಭಕ್ತರಿಗೆ ಸುರತರುವೆ 2 ಗುರುರಾಮ ವಿಠಲನ ಪ್ರಿಯಕಿಂಕರವರೇಣ್ಯನೆವರಮಂತ್ರಾಲಯನಿಲಯ ನೀಂ ಕರುಣಿಸೆನ್ನನೆ 3
--------------
ಗುರುರಾಮವಿಠಲ
ರಾಘವೇಂದ್ರ ತೀರ್ಥರು ಕರುಣಿಗಳೊಳಗೆಣೆಗಾಣಿ ನಾ ನಿನಗೆ ಸ ದ್ಗುರುವರ ರಾ‌ಘವೇಂದ್ರ ಚರಣ ಕಮಲಯುಗ ಮೊರೆಹೊಕ್ಕವರ ಮನದ ಹರಕೆಯ ನಿರುತ ಈವೆ ನೀ ಕಾವೆ ಪ ರಾಘವೇಂದ್ರ ಗುರುವೆ ನೀ ಗತಿ ಎಂದನು ರಾಗದಿಂದಲಿ ಭಜಿಪ ಭಾಗವತರ ದುರಿತೌಘಗಳಳಿದು ಚ ನ್ನಾಗಿ ಸಂತೈಸುವೆ ನೀ ಸನ್ಮೌನಿ 1 ಸುಧೀಂದ್ರ ಯತಿಕರ ಪದುಮ ಸಂಭವ ಮಧು ವದ ಪಾದಾಂಬುಜ ಮಧುಪಾ ತ್ರಿದಶ ಭೂರುಹದಂತೆ ಬುಧ ಜನರೀಪ್ಸಿತ ಒದಗಿ ಪಾಲಿಸಿ ಪೊರೆವೆ ಮದ್ಗುರುವೆ 2 ಕುಧರದೇವನ ದಿವ್ಯರದನದಿ ಜನಿಸಿದ ನದಿಯ ತೀರದಿ ಶೋಭಿಪ ಸದಮಲ ಘನಮಂತ್ರ ಸದನನಿಲಯ ಜಿತ ಮದನ ಶ್ರೀ ಜಗನ್ನಾಥ ವಿಠಲದೂತ 3
--------------
ಜಗನ್ನಾಥದಾಸರು
ರಾಘವೇಂದ್ರ ನೀನೆನ್ನ ರಕ್ಷಕನಯ್ಯ ನಾಗಶಯನಧ್ಯಾನ ಒದಗಿಸೋ ಜೀಯ ಪ ಭಾಗ್ಯದೇಯ ವೈಶಾಲ್ಯ ಹೃದಯ ಮಂತ್ರಾಲಯ [ತುಂಗಾತೀರ] ಕ್ಷೇತ್ರ ನಿಲಯ ಅ.ಪ ಭಕ್ತರಕ್ಷಕ ನೀ ರಾಘವೇಂದ್ರ ಭಕ್ತ ಪಾಲಕ ನೀ ರಾಘವೇಂದ್ರ ಮುಕ್ತಿದಾಯಕ ನೀ ರಾಘವೇಂದ್ರ ಶಕ್ತಿ ಸ್ವರೂಪ ನೀ ರಾಘವೇಂದ್ರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಘವೇಂದ್ರಂ ಭಜೇಹಂ ||ಶ್ರೀ|| ಪ ಆಗಮಚಯ ವಿಜ್ಞಾನ ಸುಗೇಹಂ ಶ್ರೀಗದಾಬ್ಜ ಚಕ್ರಾಂಕಿತ ದೇಹಂ ಅ.ಪ ರಾಗ ಮೋಹನಾದಿ ರಹಿತಂ ಸುಚರಿತಂ ಭೋಗಿರಾಟ್ ಶಯನ ಗುಣಮತಿ ಮಹಿತಂ ಭಾಗವತೋತ್ತಮ ಮತಿ ಸುಮತಿಯುತಂ ಯೋಗಿ ಜನಹಿತಂ ಶ್ರೀ ಗುರು ನಿರುತಂ 1 ಅತಿಪಾವನ ಕಾಷಾಯ ಸುವಸನಂ ನತಜನೇಷ್ಟ ವಿಶ್ರಾಣನ ನಿಪುಣಂ ಧೃತ ದಂಡ ಕಮಂಡಲ ಶುಭಪಾಣಿಂ ಕೃತ ಹರಿಸುತಿ ಸಂಗೀತ ಸುವಾಣೀಂ 2 ನಿಜತಪಸಾ ಸಮುಜಾರ್ಜಿತ ತೇಜಂ ಸುಜನಾವನ ಗುಣಹಿತ ಸುರಭೂಜಂ ಹರಣ ಕೃಷ್ಣ ವಿಜಯವಿಠ್ಠಲರೇಯಂ ಅಜಿನಾಸನ ಸುಸ್ಥಿರ ಯತಿರಾಜಂ3
--------------
ವಿಜಯದಾಸ
ರಾಘವೇಂದ್ರ ರಾಯರಡಿಗೆ ಬಾಗಿ ನಮಿಸಿರೊ ನೀಗಿ ಭವದ ಬಂಧದಿಂದ ಮುಕ್ತರಾಗಿರೊ ಪ ಶಂಕೆಯಿಲ್ಲದೆ ವರಗಳ ಕೊಟ್ಟು ಚಿಂತೆ ಹರಿಸುವರ ಕಂತುಪಿತನ ಭಕ್ತರಿಗೆ ನಿರಂತರ ಸಂತಸ ನೀಡುವರ ಪಂಕಜನಾಭನ ಕಿಂಕರರ ಭಯ ಚಿಂತೆಯ ನೀಗುವರ ಶಂಖು ಕರ್ನರಿವರೆನ್ನುತ ಅಭಯದ ಕಂಕಣ ಕಟ್ಟಿಹರ 1 ಹಾಟಕಶ್ಯಪುತ್ರನು ವಿನಯದಿ ಪ್ರಾರ್ಥಿಸಿ ಪೂಜಿಸಿದ ಮಾಟಮುಖದ ದೇವನ ಪಾದಾಂಬುಜ ಧ್ಯಾನಿಸಿ ಸೇವಿಸಿದ ಕೋಟಲೆ ಭವದೊಳು ತಾಪವ ಪಡುವರ ಆಪದ ಪರಿಹರಿಸಿ ಭ- ವಾಟವಿದಾಟಿಸಿ ಪೊರೆದ ಪ್ರಹ್ಲಾದರ ಉಲ್ಲಾಸದಿ ಭಜಿಸಿರಿ2 ವ್ಯಾಸರಾಯರೆಂದು ಜಗದಿ ಪ್ರಖ್ಯಾತಿ ಪಡೆದವರ ದೇಶ ದೇಶದ ಭಕುತರ ಉಲ್ಲಾಸ ಕೊಡುವರ ಶ್ರೀ ಸುಧೀಂದ್ರಾರ್ಯರ ಪುತ್ರರೆನಿಸಿಕೊಂಬರ ಕ್ಲೇಶಗಳನೆ ಕಳೆವರೆಂಬ ಕೀರ್ತಿಪಡೆದರ3 ಕಂಗೊಳಿಪ ಕೋರೆಯಿಂದ ಬಂದ ಭದ್ರೆಯ ತೀರದಿ ಚಂದದಿಂದ ಮೆರೆವ ರಾಘ- ವೇಂದ್ರ ರಾಯರ ಕೊಂಡಾಡಿ ಪಾಡಿರೊ ಮನಕೆ ಸಂಭ್ರಮ ನೀಡುವರು ಪೊಂದಿದ ಪಾಪಗಳೆಲ್ಲವ ನೀಗಿಸಿ ಚಂದದಿ ಸಲಹುವರು 4 ಕರುಣದಿಂದ ಭಕ್ತರನೆಲ್ಲ ಸಲಹುತಿರ್ಪರ ಕಮಲನಾಭ ವಿಠ್ಠಲನಂಘ್ರಿ ಭಜನೆ ಮಾಳ್ಪರ ಕನಕಮಯದ ಮಂಟಪದಲಿ ಮರೆಯುತಿರ್ಪರ ಕರೆದು ಪ್ರಾರ್ಥಿಸುವವರ ಮನಕೆಹರುಷ ತೋರ್ಪರ 5
--------------
ನಿಡಗುರುಕಿ ಜೀವೂಬಾಯಿ