ಒಟ್ಟು 49270 ಕಡೆಗಳಲ್ಲಿ , 136 ದಾಸರು , 11161 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣಯುಗವ ತೋರೋ ಪ ಶರಣರ ಪೊರೆಯುವ ಕರುಣಿಗಳರಸನೆ ನಿರುತವು ನಿನ್ನನೆ ನೆರೆನಂಬಿದೆ ಹರಿ ಅ.ಪ ದಿಕ್ಕು ನೀನೆ ಎಂದು ನಂಬಿದೆನಕ್ಕರಿಂದ ಬಂದು ತಕ್ಕುದೇನು ಘನ ರಕ್ಕಸವೈರಿಯೆ 1 ಇಷ್ಟದೇವನಾರೋ ಮನಸಾಭೀಷ್ಟವ ಕೊಡುಬಾರೋ ಕೃಷ್ಣಮೂರ್ತಿ ನೀಂ ದೃಷ್ಟಿಸು ನಮ್ಮನು2 ಕೇಣವ್ಯಾಕೋ ಹರಿಯೆ ಕಣ್ಣಲಿ ಕಾಣು ಬಾರೋ ದೊರೆಯೇ ಕಾಣೆನಿನಗೆ ಸರಿ ಜಾಣತನದಿ ಹರಿ 3 ವಾರಿಧಿಕೃತಶಯನ ವಿಕಸಿತ ವಾರಿಜದಳನಯನ ಕ್ಷೀರದೊಳದ್ದುನೀ ನೀರೊಳಗದ್ದು ಕಂ ಸಾರಿ ನಿನ್ನನೆ ಸಾರಿದೆ ನರಹರಿ 4 ಧರೆಯೊಳಧಿಕವಾದ ಶ್ರೀ ಪುಲಿಗಿರಿಯೊಳು ನೆಲೆಯಾದ ವರದವಿಠಲ ದೊರೆ ದಯಾನಿಧೆ 5
--------------
ವೆಂಕಟವರದಾರ್ಯರು
ಚರಣವ ತೋರೈ ಚಲುವರಸನೇ ಚರಣವ ತೋರೈ ಪ ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ಅ.ಪ ರಮ್ಮೆಯ ಮನಕೆ ಬೆಡಗು ತೋರುವ ಚರಣ ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ 1 ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ 2 ಬಿಡದಲೆ ಸರ್ವಜ್ಞತೀರ್ಥರಿಗೊಲಿದಾ ಚರಣವ ತೋರೈ ಬಡವರಾಧಾರ ದಿವ್ಯಭೂಷಣವಿಟ್ಟು ಚರಣವ ತೋರೈ ಕಡು ಮುದ್ದು ಸಿರಿಕೃಷ್ಣ ವಿಜಯವಿಠ್ಠಲ ನಿನ್ನ ಚರಣವ ತೋರೈ ಪೂಜೆಯಗೊಂಬ ಚರಣವ ತೋರೈ3
--------------
ವಿಜಯದಾಸ
ಚರಣವ ನರ್ಚಿಸುವೆ ಹರಿ ನಿನ್ನ ಮರೆಯದೆ ಕೀರ್ತಿಸುವೆ ನೀನೆ ಎನ್ನರಸ ರಕ್ಷಿಸು ಎಂದು ಪ ರಕ್ಷಿಸು ಎಂದು 1 ಸುಗುಣಂಬರೀಶ ಭೂಪಗೆ ಕೊಡಲಾಕ್ಷಣ ಗಮನ ಚನ್ನಿಗನೆ ರಕ್ಷಿಸು ಎಂದು 2 ಮುಳಿದು ಗಜವ ನೆಗಳೆಳೆಯಲು ಭಯದಲಿ ನಳಿನಾಕ್ಷ ನಿನಗೆ ದೂರಲು ಬೇಗದಲಿ ಸಾರಿ ಸುಲಲಿತ ಮಹಿಮನೆಗಳ ಸೀಳಿ ಕರಿಯನು ಸಲಹಿದೆ ದೇವ ಗೋವಳನೆ ರಕ್ಷಿಸು ಎಂದು 3 ಬೇಗದಲಿ ಕಂಬದಿಬಂದು ಸದೆದು ದಾನವನ ದಾಯದಲಿ ಕಾಯ್ದು ಪದುಮಾಕ್ಷ ನರಹರಿ ಮುದದಿ ರಕ್ಷಿಸು ಎಂದು 4 ದುರುಳ ದುಶ್ಯಾಸನ ಭೂವರ ಪಾಂಡು ತನುಜರ ಅರಸಿಯ ಸೀರೆಯ ಭರದಿ ಸೆಳೆಯಲಾಗ ಮೊರೆಯಿಡಲಕ್ಷಯ ವರವನಿತ್ತು ಸಲಹಿದ ಹರಿ ಸುತ ಕೋಣೆಯ ಲಕ್ಷ್ಮೀಶ ರಕ್ಷಿಸು ಎಂದು 5
--------------
ಕವಿ ಪರಮದೇವದಾಸರು
ಚರಣವದೋರಿ ಸಲಹೋ ಮುರಾರಿ | ಧರಿಯೊಳು ಸಾರಿದವರ ಸಹಕಾರಿ ಪ ಸುರಧೇನು ನೀನು | ಕರೆದುಂಬೆ ನಾನು | ಸುರತರು ನೀನು | ಆಶ್ರಯಿಸುವೆ ನಾನು 1 ಸುರಮಣಿ ನೀನು | ಅರ್ಥಾರ್ಥಿ ನಾನು | ದೊರೆಯನ್ನ ನೀನು | ಸುಖಿಸುವೆ ನಾನು 2 ಗುರುಮಹಿಪತಿ ಪ್ರಭು | ಪರದೈವ ನೀನು |
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಣವನೀಗ ಹೊಂದಬೇಡ ಕೇಡಿಗಗುರುವಿನ ಚರಣವನೀಗ ಹೊಂದಬೇಡ ಪ ಜಾರಣ ಮಾರಣ ಬೋಧಿಸಿ ಗುರುವಜೀವನ ನೀಗಲೆ ತಿನ್ನುವ ಗುರುವಕಾರಣಿಕವನೆ ನುಡಿಯುವ ಗುರುವಕಾಮಿತವನೆ ಹೇಳುವ ಗುರುವ ಕೇಡಿಗ ಗುರುವ 1 ಮಹಿಮೆ ಗಿಹಿಮೆ ತೋರುವ ಗುರುವಮರಳಿ ಜನ್ಮಕೆ ತರುವ ಗುರುವದಹಿಸಿ ಮನೆಯ ಹೋಹ ಗುರುವದಂಡಣೆಯ ಗುರುವ ಕೇಡಿಗ ಗುರುವ 2 ಹರಿದು ತಿನ್ನುವ ಮೋಸದ ಗುರುವಬರಕತವಿಲ್ಲದ ಗುರುವಕರಕೊಳ್ಳುತಲಿರುವ ಕರ್ಮಿತಾಗುರುವ ಕೇಡಿಗ ಗುರುವ 3 ಶಾಂತಿ ಶಮೆ ದಮೆಗಳು ದೊರಕದ ಗುರುವಸೈರಣೆ ಎಂದಿಗು ನಿಲುಕದ ಗುರುವಕರುಣೆಯ ತಾತೋರದ ಗುರುವ ದಯವಿಲ್ಲದಗುರುವ ಕೇಡಿಗ ಗುರುವ4 ಆಸೆಯನು ಬಿಡದಿಹ ಗುರುವಅಂಗದ ಹಸಿವನು ತಿಳಿಯದ ಗುರುವಬಾಸ ಚಿದಾನಂದನ ನರಿಯದ ಗುರುವಬ್ರಹ್ಮನಾಗದ ಕೇಡಿಗ ಗುರುವ 5
--------------
ಚಿದಾನಂದ ಅವಧೂತರು
ಚರಣವನೆನೆಮನವೆ | ನಂಬಿ ಚರಣವ ನೆನೆಮನವೆ | ಶ್ರೀರಾಮವೇದವ್ಯಾಸರ ಪಾದಕಮಲವ | ನಿರುತದಿ ಪೂಜಿಪಗುರು ಸತ್ಯಪೂರ್ಣರ ಪ ಶ್ರೀ ಮಧ್ವಶಾಸ್ತ್ರದಾ | ಸರೋವರ | ಪ್ರೇಮದಿಹಂಸರಾ | ವ್ಯೋಮ ಕೇಶನಪ್ರಿಯನಾಮ ಮುಕ್ತಾಫಲ | ಪ್ರೇಮದಿಸೇವಿಪ ಕೋಮಲ ಕಾಯರ 1 ಪೋಕದುರ್ವಾದಿಗಳಾ | ವದನಕೆ | ಹಾಕಿದ ಕೀಲಿಗಳಾ | ಬೇಕಾದ ಸಂಪದನೇಕವನುಣಿಸುವ | ಲೋಕಕೆ ಮಾನ್ಯಾಗಿ ಸಾಕುವರೊಡೆಯರ 2 ಮುನಿ ಅಭೀನವತೀರ್ಥರ | ಶುಭಕರ | ವನಜದಿಜನಿಸಿದರಾ | ವನಿಯೊಳು ಮಹೀಪತಿಜನ ಸಲಹುವರಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಣವೆಂಬ ದುರ್ಗಮ ದುರ್ಗ ಸೇರಿದೆ ನಿಜಭಕ್ತ ಜನರಿಗೆ ಆಭಯವ ಕೊಡುವಂಥ ಧ್ವಜವುಳ್ಳ ಪುರವಿದು ಪರರಿಗಸಾಧ್ಯ 1 ತನ್ನ ನಂಬಿದ ಇಂದ್ರ ಗಣಪತಿ ಇಹರೆಂದು ಚನ್ನ ವಜ್ರಾಂಕುಶ ಧರಿಸಿದೆ ನಿಧಿ ಪೂರ್ಣ 2 ನಿತ್ಯ ನಿರ್ಮಲವಿದು ಅಜ ಮೊದಲಾದವರು ಇಲ್ಲೆ ಸೇರುವರಯ್ಯ 3 ಕೆಳಗ ರವಿಯ ಕಾಂತಿ ಮ್ಯಾಲರ್ಧಾ ಶಶಿ ಛವಿ ಸ್ಥಳವಿದೆ ಭಾಗ್ಯಾಭಿಮಾನಿ ದೇವತೆಗೆ 4 ಸವಿಯಾದ ನದಿ ಇಲ್ಲಿ ಜನಿಸಿದೆ ಫಲ ಪದ್ಮ ಯವ ಮೊದಲಾದವಿವೆ ವಾಸುದೇವವಿಠಲನ್ನ ಚರಣವೆ 5
--------------
ವ್ಯಾಸತತ್ವಜ್ಞದಾಸರು
ಚರಣಾರಾಧಿಸೋ ಚಾರುತರ ಭೂ ವರಹ ವೇಂಕಟೇಶನಾ ಉರಗಾದ್ರಿವಾಸನಾ ವರ ಶ್ರೀನಿವಾಸನಾ ಪ ದುರಿತಕೋಟಿಯ ಹರಿವ ಸ್ವಾಮಿ ಪು ಷ್ಕರಿಣಿ ತೀರ ವಿಹಾರನಾ ಸಿರಿಮನೋಹರನಾ ಪರಮ ಉದಾರನಾ 1 ವಾಹನೋತ್ಸವದಲ್ಲಿ ಪರಿಪರಿ ಮಹಿಮೆ ಜನರಿಗೆ ದೋರ್ವನಾ ಸಹಜದಿ ಮೆರೆವನಾ ಬಹಳ ಪೂರ್ವನಾ 2 ನಡೆದು ಯಾತ್ರೆಗೆ ಬರಲು ಹಯಮೇಧ ಅಡಿಅಡಿಗೆ ಫಲ ನೀವನಾ ಬಿಡದೆವಾ ಕಾವನಾ ಮೃಡಜರ ದೇವನಾ3 ಸಕಲರಿಗೆ ನೈವೇದ್ಯನುಣಿಸುವಿ ಅಖಿಳ ಸಂಶಯ ಹಾರಸೀ ವೈಕುಂಠ ಸೇರಿಸೀ ಸ್ವಕರದಿ ತೋರಿಸೀ 4 ಇಂದು ನಮ್ಮನಿ ದೈವವಾಗಿಹ ತಂದೆ ಮಹಿಪತಿ ಪ್ರೀಯನಾ ಸುಂದರ ಕಾಯನಾ ವೃಂದಸುರ ಧ್ಯೇಯಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚರಿತೆಯ ಪೇಳಬೇಕೆ ಪ ಕೊರತೆಗಳೆಣಿಸದೆ | ಸ್ಥಿರಸುಖದೊಳು ಬಾಳಿ ಅ.ಪ ಚದುರ ಚೆನ್ನಿಗ ಮುದ್ದು | ಪದುಮದಳಾಕ್ಷನ 1 ಕಾಲಿನೊಳೊದೆದೆಲ್ಲ | ಶ್ರೀಲೋಲನುಣಲೊಲ್ಲ 2 ಹರಿಣಾಕ್ಷಿಯರಿರೇನು | ಮರುಳರಂತೊರೆವಿರೆ 3 ಮೆಚ್ಚಿನ ಮಾತಿದು | ಸಚ್ಚರಿತವಿದೆಂದು 4 ಬಿಗಿವೆ ಸದಾನಂದ | ವಾಗಲಿ ನಿಮಗೆಲ್ಲ 5
--------------
ಸದಾನಂದರು
ಚರಿಯ ಪೇಳುವೆನು ಚರಿಯ ಪೇಳುವೆವು ಪ. ಕೃಷ್ಣ ಬಂದೆಮ್ಮಾಲಯದೊಳು ಲೂಟಿಗೈದಿಪನೆ ಅ.ಪ. ಗುಲ್ಲು ಮಾಡದೆ ಘುಲ್ಲ ಲೋಚನ ಮೆಲ್ಲಡಿ ಇಡುತ ಬಂದೂ ಗಲ್ಲಕೆ ಮುತ್ತು ಕೊಟ್ಟು ಎಮ್ಮಾ ಗಲ್ಲ ಪಿಡಿಯುವನೆ ಶ್ರೀಕೃಷ್ಣ ಗುಲ್ಲು ಮಾಡುವನೆ ಯಶೋದೆ 1 ನೆಲುವಿಲಿದ್ದ ಬೆಣ್ಣೆ ಕದ್ದ ಚೆಲುವ ಕೃಷ್ಣನೆ ದೇವಾ ಛಲದಿ ಪಿಡಿಯಾಪೋದರೆಮ್ಮಾ ಅಣಕ ಮಾಡುತ್ತಾ ಮುರಾರಿ ಪರಾರಿಯಾದನೇ ಯಶೋದೆ 2 ಹಿರಿಯಕಾಲದ ಸಾಲಿಗ್ರಾಮ ಕರಿಯ ಕಲ್ಲೆಂದು ಶ್ರೀ ಕೃಷ್ಣ ಭರದಿ ಬಾಯೊಳ ನುಂಗಿ ಜಗಕೆ ತಾನ್ಹಿರಿಯನೆಂಬುವನೆ ಯಶೋದೆ ಹಿರಿಯನೆಂಬುವನೆ 3 ಗೊಲ್ಲಸತಿಯೇರೊಡನೆ ಪೋಗಿ ಮೆಲ್ಲ ಮೆಲ್ಲನೆ ಶ್ರೀಕೃಷ್ಣ ಚೆಲ್ಲಿಮೊಸರ ಗಡಿಗೆಯೊಡೆದು ಸಲ್ಲಾಪತೋರೆಂಬುವನೆ ಯಶೋದೆ ಸರಸತೋರೆಂಬುವನೆ 4 ಸಿರಿರಮಣನ ಕರೆದು ನೀನು ಬರೆಯ ಬೇಕಮ್ಮಾ ಬುದ್ಧಿ ಥರವೆಯಮ್ಮಾ ಕೂಡಿ ತರಳಾ ಸರಸವಾಡುವುದು ಶ್ರೀ ಶ್ರೀನಿವಾಸ 5
--------------
ಸರಸ್ವತಿ ಬಾಯಿ
ಚರ್ಯನಾಮುಗಿವೆನು ಕೈಯ್ಯಾ ಪ ಮಂತ್ರಸದನ ಪದ ಚಿಂತಕ ಶ್ರೀ ರಘು ಕಾಂತಕರಜ ರಘು ದಾಂತ ಯತೀಂದ್ರರ ಅ.ಪ ಅಂತರಂಗದಿ ಸಂತತ ಶ್ರೀಹರಿಯ ಚಿಂತಿಸುತಲಿ ಭೂಮಿಯ ಕಾಂತ ದಂಷ್ಟ್ರದಿ ಸಂಜನಿಸಿದ ನದಿಯ ಸಂಗಮ ಶುಭನಿಲಯ ವಿಶ್ರಾಂತ ಸುಮಹಿಮರ 1 ಪತಿ ಲಕ್ಷ್ಮಣರ ಪಾದಾಂಬುಜ ಮಧುಪರ ಮೋದಾಶ್ರು ಸುರಿಸುತ ಪೂಜಿಸಿದವರ ಪುಲಕೀತ ವಿಗ್ರಹರ ವಾದಿವಾರಣ ಮೃಗಾಧಿಪರೆನಿಸುತ ಮೋದತೀರ್ಥ ಸುಮ ತೋದಧಿ ಚಂದಿರ 2 ಇಳಿಯೊಳು ಚರಿಸುತ ಬುಧ ಜನರನ್ನು ಚಲಿಸುತ ಛಾತ್ರರನು ತಿಳಿಸೀ ಸಚ್ಛಾಸ್ತ್ರವ ಮರ್ಮಗಳನ್ನು ಉದ್ಧರಿಸ್ಯವರನ್ನು ಯಳಮೇಲಾರ್ಯರ ಒಲುಮೆ ಪಡೆದು ಭವ ಕಲುಷ ವಿದೂರರ 3 ದಾಸರ ಶುಭಚರಿಯ ಸ್ತುತಿಸಿ ಶೇವಿಸಿ ಪಡೆದರು ಗುರುಕೃಪೆಯ ನೋಳ್ಪರಿಗಾಶ್ಚರ್ಯ ನತ ಜನರಘ ಪರ್ವತ ಪವಿ ಸನ್ನಿಭ ಕ್ಷಿತಿ ಸುರತತಿ ಸೇವಿತ ಪದ ಪದ್ಮರ 4 ಜಾಣ ಮಾನವರನ ಸಾನುರಾಗದಿ ಧ್ಯಾನಿಸಲಿವರನ್ನ ಕಾಮಿತ ಗರಿವರನ ಶ್ರೀನಿಧಿ ಕಾರ್ಪರ ಸ್ಥಾನಗ ನರಪಂಚನನನೊಲಿಸಿದ ಮೌನಿವರೇಣ್ಯರ 5
--------------
ಕಾರ್ಪರ ನರಹರಿದಾಸರು
ಚಲಿಸದಂದದಿ ಮಾಡು ಎನ್ನನು ಶೈಲೇಂದ್ರವರ್ಯಾ ಪ ನಿನ್ನಾಣೆ ನಿನ್ನಾಣೆ ಸಹಿಸಲಾರದೆ ನಿನ್ನ ಶರಣು ಬಂದೆನೊರಾಯಾ ಅ.ಪ. ಪರಿ ನಗುತಿಪ್ಪುದು ಥರವೇ 1 ಸೂತ್ರ ಏನು ಸರಿಯಾದ ಕಾಲದಲಿ ಹರಿಯಲು ಸರಿದೋರುವುದೇ ರಸಿಕರಿಗೆ2 ಭಾರ ತಾಳೆನೊಬೇಗ ಬರುವಂತೆ ಮಾಡಿ ಪಾಂಡುರಂಗ ಪ್ರಾಯ ಗುರುಕೃಷ್ಣತಂದೆವರದಗೋಪಾಲವಿಠ್ಠಲನಾಣೆ ಪೊರೆಯದಿರೆ 3
--------------
ತಂದೆವರದಗೋಪಾಲವಿಠಲರು
ಚಲುವನಿವನೆಂದೆನುತೆ ಪಲತೆರದೆ ಬಣ್ಣಿಸುತೆ ನಲಿದಿತ್ತ ಹಲುಗಿರಯಗೆನ್ನ ತಾತ ಕೆಂಗಣ್ಣು ಕಿಡಿರೋಷ ಸಿಂಗದಾಮುಖಭಾವ ಭಂಗಿಯನು ಕುಡಿದವೋಲ್ ಕಂಡುಬರುವ ರುಧಿರ ಪಾನವಮಾಡಿ ಅಧರವಿದು ಕೆಂಪಾಗಿ ವಿಧವಿಧದಿ ಹೂಂಕರಿಸಿ ಬೆದರಿಸುತಿಹ ವರರತ್ನಹಾರವನು ತೊರೆದು ರಕ್ಕಸನುರವ ಹರಿದು ಕರುಳನು ಧರಿಸಿ ಮೆರೆವನಕಟ ಘೋರವದನನೆ ಎನಗೆ ನೀರನಾಗೆ ಹಾರಮಳವಡಿಸಿದೆನೆ ಕುಪಿತಗಿವಗೆ ಸಾರೆ ಫಲವೇನಿನ್ನು ನಡೆದೆಬಗೆ ಧೀರಶೇಷಗಿರೀಶನೊಡೆಯನೆನಗೆ
--------------
ನಂಜನಗೂಡು ತಿರುಮಲಾಂಬಾ
ಚಲುವಾ ಕೃಷ್ಣಾ ನಿನ್ನ ನಿಲುವು ನೋಡದೆ ದುಃಖಬಲು ಭಾರವಾಗಿಹುದೋ ಪ ಇಂದು ಮಧ್ಯಾನ್ಹ ಒಂದೇ ಮನದಿ ನಾನುನಿನ್ನ ಮಾತೇ ಚಿಂತಿಸಿಕುಂದಣ ಕೆತ್ತಿದ ಸುಂದರಾಭರಣಗಳುಇಂದು ಶೋಭಿಪ ರೂಪದಿ ನೀ ಪೊಳೆದಿ 1 ಇಂಥಾ ರೂಪವೆ ಮತ್ತೆ ಕಂತುಪಿತನೆ ತೋರೋಅಂತರಂಗದಿ ಎನ್ನಲಿ ಚಿಂತಿಸಿದೆನುಸಿರಿಕಾಂತಾ ತೋರದ ದಾರಿಭ್ರಾಂತಿಯಾಗಿದೆ ಮನಕೆ ಪೇಳದಕ್ಕೆ 2 ಕರವ ಇಂದು ಪ್ರಾರ್ಥಿಪೆ ಬೇಗಾನಂದ ಬಾಲನೆ ಸುಳಿಯೋ ನೀ ನಲಿಯೋ 3
--------------
ಇಂದಿರೇಶರು
ಚಾಮರವನು ಹಾಕಿರೆ ಕೋಮಲಾಂಗಿಯರುಶ್ರೀ ಮಹಾಮಾರುತನ ಸ್ಮರಿಸುತ ನೀವೆಲ್ಲರು ಪ. ರಾಮ ನರಹರಿ ಕೃಷ್ಣ ಶ್ರೀಮಹಿಧರಗೆಇಹ ಆಲದೆಲೆಯ ಮೇಲಿದ್ದು ಕ್ರೀಡಿಪಗೆ ಅ.ಪ. ಗೋಪಿ ಪುತ್ರಗೆ ನೀವು 1 ರಾಮ ಕುಳಿತಿರುವ ನಿಜ ಕಾಮಿನಿಯ ಸಹಿತಶ್ರೀ ಮಹೀ ಸಹಿತ ಭೂಮಿಧರನುತಾತಾಮಸರ ನಯನ ಮುನಿ ಕಾಮಿನಿವರ ಪ್ರೀತಶ್ರೀಮಲಸಹಾರ ಸಿರಿಧಾಮ ವಿಖ್ಯಾತ 2 ಸುಂದರಾಂಗಿಯರು ತ್ವರದಿಂದ ಪಾಡುತಲಿಮಂದಾಕಿನಿಯರ ಪ್ರಮುಖರಿಂದ ಸರತಿಗಳೇಮಂದಹಾಸ್ಯಗಳ ಮುಖದಿಂದ ನೋಡುತಲಿಇಂದಿರೇಶನ ಹತ್ತಿರ ಹೊಂದಿ ನಿಲ್ಲುತ್ತಲೆ3
--------------
ಇಂದಿರೇಶರು