ರಾಮ ಭಜನೆ ಮಾಡೋ ಮನುಜ ರಾಮ ಭಜನೆ ಮಾಡೋ ಪ ರಾಮ ರಾಮ ಜಯ ರಾಘವ ಸೀತಾ ರಾಮನೆಂದು ಸುಸ್ವರದಲಿ ಪಾಡುತಅ.ಪ ತಾಳವನು ಬಿಡಬೇಡ ಮೇಳವನು ಮರೆಬೇಡ ತಾಳಮೇಳಗಳ ಬಿಟ್ಟು ನುಡಿದರೆ ತಾಳನು ನಮ್ಮ ಇಳಾಸುತೆಯರಸನು 1 ಭೃತ್ಯ ಮನೋಭಾವದಲಿ ಸತ್ಯ ಜ್ಞಾನ ಅನಂತ ಬ್ರಹ್ಮನು ಹೃದ್ಗತನೆಂದರಿಯುತ ಭಕುತಿಯಲಿ 2 ಭಲರೆ ಭಲರೆಯೆಂದು ತಲೆದೂಗುವ ತೆರದಿ ಕಲಿಯುಗದಿ ವರಕೀರ್ತನೆಯಿಂದಲಿ ಸುಲಭದಿ ಹರಿಯ ಪ್ರಸನ್ನತೆ ಪಡೆಯಲು 3
ರಾಮ ರಮಾರಮ ರಾಮ ಶ್ರೀರಾಮ ಪ ರಾಮ ಸೀತಾರಾಮ ರಾಮ ಜಯರಾಮ ಅ.ಪ. ಶ್ರೀ ರಘುವಂಶ ಲಲಾಮನೆ ರಾಮ ತಾರಕ ಮಂಗಳ ರಾಮನೆ ರಾಮ ನೀರದ ನಿರ್ಮಲ ಶ್ಯಾಮನೆ ರಾಮ ಸಾರಸಲೋಚನ ಸೌಮ್ಯನೆ ರಾಮ 1 ಕೌಸಲ್ಯದೇವಿ ಕುಮಾರಕ ರಾಮ ಕೋಸಲ ದೇಶಾನಂದಕ ರಾಮ ಆಸುರೀ ತಾಟಕ ಶಿಕ್ಷಕ ರಾಮ ಕೌಶಿಕ ಯಜ್ಞ ಸಂರಕ್ಷಕ ರಾಮ 2 ಮುನಿಪತಿ ಶಾಪ ವಿಮೋಚಕ ರಾಮ ಕಾರ್ಮುಕ ಭಂಜಕ ರಾಮ ಜನಕ ಸುತಾನಂದ ವರ್ಧಕ ರಾಮ ಅನುಪಮ ಲೀಲಾದ್ಯೋತಕ ರಾಮ 3 ಸತ್ಯಪರಾಕ್ರಮ ಸಾತ್ವಿಕ ರಾಮ ಪಿತೃವಾಕ್ಯ ಪರಿಪಾಲಕ ರಾಮ ಉತ್ತಮ ಚರಿತಾದರ್ಶಕ ರಾಮ ಚಿತ್ರಕೂಟಾದ್ರಿ ನಿವಾಸಕ ರಾಮ 4 ಕಾಕುತ್ಥವಂಶ ಸುಧಾರಕ ರಾಮ ಲೋಕೇಶ ಲೋಕ ಮನೋಹರ ರಾಮ ಶ್ರೀಕರಾಶ್ರಿತ ಜನ ಮಂದಾರ ರಾಮ ಶ್ರೀ ಕರಿಗಿರೀಶ ಸುಂದರ ರಾಮ 5
ರಾಮ ರಾಮ ಶ್ರೀ ರಘುರಾಮ ನೀಲಮೇಘ- ಶ್ಯಾಮ ನಿಸ್ಸೀಮ ಕಾಮಿತಾರ್ಥವಕರೆದತಿ- ಪ್ರೇಮದಿಂದ ಪಾಲಿಸುವುದು ನಿನ್ನ ನಾಮ ಪ ಕಲ್ಲೋದ್ಧಾರಕ ಕರುಣಾಳು ರಾಮ ಬಿಲ್ಲನೆತ್ತಿದ್ದ ಬಿರುದಾತ ರಾಮ ಸೊಲ್ಲು ಸೊಲ್ಲಿಗಿರಲು ಹರಿನಾಮ ಚೆಲ್ಲ್ಯಾಡುವ ದಯ ಅವರಲ್ಲಿ ಪ್ರೇಮ 1 ಧೀರಪುರುಷನೆ ದಿಗ್ವಿಜಯ ರಾಮ ವಾರಿಧಿಯ ಕಟ್ಟಿದ್ವನಜಾಕ್ಷ ರಾಮ ಕ್ರೂರರಾಕ್ಷಸರನು ಕೊಂದು ಲಂಕಾ ಸೂರೆಯನು ಮಾಡಿದಂಥ ನಿಸ್ಸೀಮ 2 ದುಷ್ಟರಾವಣಶತ್ರು ಶ್ರೀರಾಮ ಹುಟ್ಟಿ ಭಾನುವಂಶದಿ ಸೀತಾರಾಮ ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ- ಧಾಮ 3
ರಾಮ ರಾಮ ಹರಿ ರಾಮ ರಾಮ ಸೀತಾ ರಾಮ ರಾಮ ನುತಪ್ರೇಮ ರಾಮ ಓಂ ಪ ರಾಮ ರಾಮ ಪುಣ್ಯನಾಮ ಪಾಪವಿ ರಾಮ ಕುಜನಕುಲ ಭೀಮ ರಾಮ ಓಂ ಅ.ಪ ಶಾಮಸುಂದರ ಸುಖಧಾಮ ದಾಮೋದರ ಕಾಮಿತದಾಯಕ ಸ್ವಾಮಿ ಶ್ರೀರಾಮ ಓಂ ಸೋಮಕಸಂಹರ ಕಾಮಜನಕ ತ್ರೈ ಭೂಮಿಪಾಲಯ ನಿಸ್ಸೀಮ ರಾಮ ಓಂ 1 ಕಡಲಮಥನ ಪಾಲ್ಗಡಲನಿಲಯ ಮಹ ಕಡಲಬಂಧಕ ದಯಗಡಲ ರಾಮ ಓಂ ಜಡಜನಾಭ ಭವತೊಡರು ನಿವಾರಣ ಕಡಲಸುತೆಯ ಪ್ರಾಣದೊಡೆಯ ರಾಮ ಓಂ2 ದೋಷ ವಿನಾಶನ ಶೇಷಶಯನ ದಯ ಭೂಷಣ ಕೇಶವ ರಾಮರಾಮ ಓಂ ಭಾಸುರಕೋಟಿಪ್ರಕಾಶ ಅಪ್ರಮೇಯ ಸಾಸಿರನಾಮಕ ರಾಮ ರಾಮ ಓಂ3 ಭಕ್ತಾಂತರ್ಗತ ಭಕ್ತವತ್ಸಲ ನಿತ್ಯ ನಿರ್ಮಲಾತ್ಮ ರಾಮ ರಾಮ ಓಂ ಸತ್ಯ ಸರ್ವೋತ್ತಮ ಮೃತ್ಯು ವಿಜಯ ನಿಜ ಸತ್ಯಸಂಕುಲಧಾಮ ರಾಮ ರಾಮ ಓಂ 4 ಜಾನಕಿರಮಣ ದೀನ ಪಾಲನ ದಾನವಾಂತಕ ಹರಿ ರಾಮ ಓಂ ಧ್ಯಾನದಾಯಕ ಜಗತ್ರಾಣ ಪ್ರವೀಣ ಮಮ ಪ್ರಾಣೇಶ ಶ್ರೀರಾಮ ನಮ:ನಮ:ಓಂ 5