ಒಟ್ಟು 2371 ಕಡೆಗಳಲ್ಲಿ , 107 ದಾಸರು , 1698 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕಂಡೆನೊ ಕಂಗಳಲಿ ಭೂ | ಮಂಡಲಾಬ್ಧಿಗೆ ಸೋಮನೆನಿಪ ಅ | ಖಂಡ ಮಹಿಮಾ ವಾದೇಂದ್ರ ಗುರುಗಳ ಪ ನಸುನಗಿಯ ಮೊಗ | ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ | ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ ಹಸನಾದ ಎಳೆ ತುಲಸಿ ಶೋಭಿಸಿ | ಬೆಸಸುವ ಒಂದೊಂದು ಮಾತಾ | ಲಿಸಿದರದು ವೇದಾರ್ಥತುಲ್ಯಾ | ಲಸವ ಗೈಯಿಸದೆ ಬರುವ ಗುರುಗಳ1 ಮೊಸಳಿವಾಯಪಲಕ್ಕಿ ಸುತ್ತಾ ಭಾ | ರಿಸುವ ನಾನ ವಾದ್ಯಾದಾ ಘೋಷಾ | ಪುಸಿಕರೆದೆದಲ್ಲಣರು ಎಂಬಾ | ದಶ ದಿಕ್ಕಿನೊಳು ಕೀರ್ತಿ ತುಂಬಿರೆ | ಶಿಶುವು ಮೊದಲಾದವರು ತಮ ತಮ | ಬೆಸನೆ ಪೇಳಲು ಕೇಳಿ ಅವರು | ಋಷಿಕುಲೋತ್ತಮರಾದ ಗುರುಗಳ2 ಶ್ವಶನ ಮತ ವಾರಿಧಿಗೆ ಪೂರ್ಣ | ಶಶಿ ಎನಿಸಿಕೊಂಬ ಧೀರುದಾರರೆ | ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ | ಲೋಕೇಶ ಇವರನ್ನ ವಸುಧಿ ಅಮರರು | ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ | ರಸಭರಿತರಾಗಿ ನೋಡುತ್ತ ಮಾ | ಸನದಿ ಹರಿಪದ ಭಜಿಪ ಗುರುಗಳ3 ಕುಸುವಶರನ ಬಾಣವನು ಖಂಡ್ರಿಸಿ ಬಿಸುಟ ಸಂಪನ್ನ ವಿದ್ಯಾ | ವಸುವಿನಲಿ ಆವಾಗ ತಲೆ ತೂ | ಗಿಸುವರು ಪಂಡಿತರ ಮೆಚ್ಚಿಸಿ | ವಶವೆ ಪೊಗಳಲು ಎನಗೆ ಇವರ ದ | ರುಶನದಿಂದಲಿ ಗತಿಗೆ ಪಥನಿ | ವಿಷದೊಳಗೆ ಇದು ಸಿದ್ಧವೆಂದು ವಂ | ದಿಸಿದಿರೊ ಮರಿಯದೆ ಈ ಗುರುಗಳಾ 4 ಮಿಸುಣಿ ಮಂಟಪದೊಳಗೆ ರಂ | ಜಿಸುವ ರಾಮನÀ ಕುಳ್ಳಿರಿಸಿ ಅ | ರ್ಚಿಸುವ ಚಿತ್ತೇಕಾಗ್ರದಲಿ ವೊ | ಲಿಸುವ ತಂತ್ರ ಸಾರೋಕ್ತ ಬಗೆಯನು | ಕುಶಲರಾದ ಉಪೇಂದ್ರ ಮುನಿಕರ | ಬಿಸಜದಿಂದಲಿ ಜನಿಪ ಭಕುತಿಲಿ | ಸಿರಿ ವಿಜಯವಿಠ್ಠಲನ್ನ | ಪೆಸರುಗಳು ಎಣಿಸುವ ಗುರುಗಳ 5
--------------
ವಿಜಯದಾಸ
ಕಂಡೆ ನನ್ನನು ಕಾಯ್ವನೆಂಬುದ ಕಂಡೆ ಪಾವನನಾದುದಪುಂಡರೀಕದಳಾಯತಾಕ್ಷನೆ ಗಂಡುಮಾಡುವ ಗೂಢವ ಕಂಡೆಕಂಡೆ ಪ.ಮಲಿನವೆಂಬುದು ಮನಕೆ ತೋರಲು ಮಲಿನ ಹೇತುವು ಮೂಡಲುಮಲಿನಕಳುಕುತಲಿದ್ದ ಸಮಯಕೆ ಬಲುಹಿನರಿಕೆಯ ಬೀರಲುಮಲಿನವೇ ಹುಸಿಯೆಂಬ ನಿಶ್ಚಯ ಬಲಿದು ಬಲು ಹುರಿಯಾಗಲುಕಲಕಿ ಸಂಶಯ ಕಡೆಗೆ ಜಾರಲು ನಿಲುಕಿ ನೀನಿದಿರಾಗಲು 1ಶುದ್ಧವೆಂಬುದಶುದ್ಧವೆಂಬುದು ಬುದ್ಧಿಕಲ್ಪಿತಮಾತ್ರವುಇದ್ದು ಸುತ್ತಲು ಈಶನಂತಿರೆ ಹೊದ್ದುವನ್ಯವದಾವದುಶುದ್ಧ ಶ್ರೀಹರಿ ಪೂರ್ಣ ಮಿಕ್ಕಿನ ಬದ್ಧನೆಂಬುದೆ ಭ್ರಾಂತಿಯುಅದ್ವಯಾನಂದಾಬ್ಧಿ ಯೆಂಬೀ ನಿರ್ಧರವ ನೆರೆ ತೋರಲು 2ಅಳುಕದಿರು ನಾ ವಿಶ್ವವಾಗಿಯೆ ಹೊಳೆದು ತೋರಿದೆನೊಬ್ಬನೇಬಳಸಬೇಡತಿಭೀತಿಯೆಂಬುದ ತಿಳಿದು ನೋಡೆಂದರುಹಿದೆಹುಳುಕು ತಾನದು ಹೊಂದದೆಂದಿಗು ಸುಳಿದು ಶುದ್ಧನ ಮಾಡಿದೆಒಳಗೆ ನೀನಿಹೆ ನಲಿದು ತಿರುಪತಿ ನಿಳಯ ವೆಂಕಟನಾಥನೆ 3ಕಂ||ಇಂತೀ ಭಾವನೆಗೈಯುವುದೆಂತೊದಗಿದುದೆನಲು ಸದ್ಗುರುವ ಕರುಣವು ತಾಬಂತೆನಗೆ ತಿರುಪತೀಶನೆಸಂತೋಷದಿ ವಾಸುದೇವ ಯತಿಯಾರ್ಗೀಯಲ್‍ಓಂ ದಯಾನಿಧಯೇ ನಮಃ
--------------
ತಿಮ್ಮಪ್ಪದಾಸರು
ಕಂಡೆ ನಾಕಂಡೆ ನಾಕಂಡೆ ಕಾಳಿಂಗನ ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ- ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ ಹೆಡೆಯ ಮೇಲೆ ತಾ ಎಡಗಾಲಿರಿಸಿ ಎಡಗೈಯಲಿ ಬಾಲ ಹಿಡಿದವನ ಬಿಡದೆ ಅಭಯಹಸ್ತವ ತೋರೊ ಒಡೆಯ ಕೃಷ್ಣಮೂರುತಿಯ ನಾಕಂಡೆ ಸ್ವಪ್ನದಲಿ ನಾಕಂಡೆ ಕಂಡೇನೊ ಸಂಪನ್ನಮೂರ್ತಿಯ ಕಂಡೇನೊ 1 ಗೋವಲರ ಮನೆಯ ಪಾಲುಂಡವನ ಗೋವುಗಳ ಕಾಯ್ದ ಗೋಪಾಲನ್ನ ಗೋವಿಂದನೆಂಬ ದೇವರದೇವನ್ನ ಓವಂತೆ ನಾನು ಕಂಡೇನು ಕಂಡೇನು ಕುಣಿಯುತ ಬಂದ ಕೃಷ್ಣನ್ನ ತಣಿಯುವ ಹಾಗೆ ನೋಡಿದೆನು 2 ಗೋವಿಂದನಾಗಿ ತಲೆಕಾಯ್ವವನ ಗೋವರ್ಧನವನೆ ಕೊಡೆಯಾದವನ ಗೋವನಿತೆಯರ ಮಾಮಾಯನನ್ನ ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ ಆ ಮುದ್ದು ಬಾಲಕೃಷ್ಣನ್ನ ಕಂಡೆ ಸಾಮುದ್ರಿಕಾ ಸಿರಿಯನ್ನಕಂಡೆ 3 ಅಸುರ ಕಂಸನ ಅಸುವನ್ನು ನೀಗಿದನ ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ ಅಸುತೆಗೆಯ ಬಂದವಳ ಅಸುವನೆ ಹೀರಿದನ ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ ಜಾಜಿಪುರೀಶನ ಕಂಡು ಧನ್ಯನಾದೆ ಸಾಜದಿ ದಾಸಾನುದಾಸನಾದೆ 4 ಪಾಪಿನಾ ಕರುಣೆಯ ತೋರಿ ಸಲಹೊ ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು ಮೋಪಾಗಿ ಮೆರೆವ ದುಷ್ಟರ ಮೆಟ್ಟೊ ಪುಂಡರ ಪುಂಡರಿಗೆ ಪುಂಡನಾದವನೆ ಪುಂಡರೀಕಾಕ್ಷ ಚನ್ನಕೇಶವನೆ 5
--------------
ನಾರಾಯಣಶರ್ಮರು
ಕಂಡೆ ನಿಂದಾನಂದೋಬ್ರಹ್ಮನ ಮಂಡಲೇಶನ ಧ್ರುವ ಪಿಂಡ ಬ್ರಹ್ಮಾಂಡ ತಂಡಕ ಜಡದ ಖಂಡಿತವಾಗ ಸುಪಂಡಿತರಾತ್ಮನ 1 ಸನ್ಮಾರ್ಗ ಸದ್ಗತಿ ಸಾಧನ ಸದ್ಗುರು ನಿಧಾನ ಸದ್ಬ್ರಹ್ಮಾಕರ ಸದ್ವಾಸನೆ ಪೂರಿಸಿ ಸದ್ಗೈಸುವ ಸದ್ಭಾವ ಬೋಕ್ತನ 2 ನಿಜಸುಖ ಭಾಸುವ ಮಹಿಪತಿಗೋಸುಗ ಭಾಸ್ಕರ ಕೋಟಿ ಪ್ರಕಾಶನ ಕಂಡೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆನಿಂದು ಕುಳಿತರಂಗನ ಪುಂಡರೀಕನಯನನ ಅಂಡಜಾರಿಶಯನ ಶ್ರೀರಂಗಪಟ್ಟಣದರಸನ ಪ ಏಳು ಏಳು ಎಂದೆ ತಾಳು ತಾಳೆನೆ ಮನದಿ ನೊಂದೆ ತೋಳ ಚಾಚಿ ವಂದನೆಗೈದೆ (ಅಪೂರ್ಣ) 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂಡೆವಯ್ಯ ನಿಮ್ಮ ಗುರುಪುಣ್ಯ ಚರಣಮಹಿಮೆ ಮಂಡಲದೊಳು ಗುರುಕೃಪೆಯಿಂದ ದ್ರುವ ಕಣ್ಣಮುಚ್ಚಿದರೆ ತಾ ಕಣ್ಣನೊಳಗದೆ ಕಣ್ದೆರದರೆ ಕಾಣಿಸುತದೆ ಸಣ್ಣ ದೊಡ್ಡದರೊಳು ತುಂಬಿತುಳುಕುತದೆ ಬಣ್ಣ ಬಣ್ಣದಲೆ ಭಾಸುತಲ್ಯದೆ 1 ಆಲಿಸಿಕೇಳಲು ಹೇಳಗುಡುತಲ್ಯದೆ ತಾಳಮೃದಂಗ ಭೇರಿ ಭೋರಿಡುತ ಒಳಹೊರಗೆ ಧಿಮಿಧಿಮಿಗೊಡುತಲ್ಯದೆ ಹೇಳಲಿನ್ನೇನು ಕೌತುಕವ 2 ಸುಳಿ ಸುಳಿದಾಡುತಹೊಳೆಯುತ ಎನ್ನೊಳಗೆ ಥಳಥಳಿಸುವ ತೇಜ:ಪುಂಜವಿದು ಪರಿ ಕಳೆದೋರುತಲ್ಯದೆ ಝಳಝಳಿಸುತ ಎನ್ನ ಮನದೊಳಗೆ 3 ತುತ್ತಾಯಿತಾ ಮಾಡಿನಿತ್ಯ ಸಲುಹುತದೆ ಎತ್ತಹೋದರೆ ತನ್ನಹತ್ತಿಲ್ಯದೆ ದತ್ತವುಳ್ಳವಗೆ ತಾ ಪ್ರತ್ಯಕ್ಷವಾಗ್ಯದೆ ಮೊತ್ತವಾಗ್ಯದೆ ತನ್ನ ನೆತ್ತಿಯೊಳಗೆ 4 ಧನ್ಯಗೈಸಿತು ಎನ್ನ ಪ್ರಾಣ ಜೀವನವಿದು ಚೆನ್ನಾಗಿ ಪೂರ್ಣ ಗುರುಕೃಪೆಯಿಂದ ಕಣ್ಣಾರೆ ಕಂಡೆ ಭಾನು ಕೋಟಿಪ್ರಕಾಶ ನಿಮ್ಮ ಧನ್ಯಧನ್ಯವಾದ ಮಹಿಪತಿಯು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣ ಹಬ್ಬವಾಯಿತು ಎನಗಿಂದು ಧನ್ಯಧನ್ಯಗೈಸಿದ ದೀನಬಂಧು ಧ್ರುವ ತುಂಬಿತುಳುಕುತಲ್ಯದ ಬ್ರಹ್ಮಾನಂದ ಹಂಬಲಿಟ್ಟು ನೋಡನುಭವದಿಂದ ಗುಂಭಗುರತವಾಗದೇ ನಿಜಾನಂದ ನಂಬಿ ನಡಿಯಲಿಕ್ಕಿದೆ ಬಲು ಚಂದ 1 ಕಣ್ಣು ಮುಟ್ಟಿನೋಡಲು ಖೂನಗೊಟ್ಟು ಪುಣ್ಯ ಹೊಳೆಯುತಲ್ಯದೆ ಎದುರಿಟ್ಟು ಎನ್ನ ಮ್ಯಾಲೆ ಸದ್ಗುರು ದಯವಿಟ್ಟು ಚಿನ್ನುಮಯದೋರಿದ ನಿಜಗುಟ್ಟು 2 ಹೇಳಲಿನ್ನೇನದನುಭವಸುಖಾ ಥಳಥಳಗುಡುತದೆ ಕೌತುಕಾ ಕೇಳಿಕೋ ಬೇಕಿದುವೆ ಗುರುಮುಖಾ ಹೇಳಿಕುಡುವ ಮಹಿಪತಿಗುರು ಥೋಕಾ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಾರೆ ಕಂಡೆವಯ್ಯಾ ಕಣ್ಣಾರೆ ನಾ ಧ್ರುವ ಕಣ್ಣಾರೆ ಕಂಡೆ ಹರಿಯ ಎನ್ನ ಪ್ರಾಣಧೊರಿಯ ಧನ್ಯಗೈಸಿದ ಪರಿಯ ಏನೆಂದ್ಹೇಳಲಯ್ಯ 1 ಸ್ವಾನುಭವದ ಖೂನ ಜನಕ್ಹೇಳಲೇನು 2 ಆಡೇನಂದರ ಅಮಾತು ನಾಡಿಗೇನು ತಿಳದೀತು ಪಡೆದವಗೆ ದೋರಿತು ಬಿಡದ್ಹಾಂಗಾದೀತು 3 ಗುರುಕರುಣ ಕಟಾಕ್ಷ ಗುರುತಾಗ್ಯದ್ಯನ್ನಪೇಕ್ಷಾ ಇರುಳ್ಹಗಲೆ ದೋರುವದಧ್ಯಕ್ಷ 4 ಎನಗದೆ ಬ್ರಹ್ಮಾನಂದ ಭಾನುಕೋಟಿ ತೇಜನಿಂದ ದೀನಮಹಿಪತಿ ಬಂದ ಅನುಭವ ಆನಂದ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಾರೆ ಕಂಡೆವು ಚಿನ್ಮಯದ ರೂಪ ಕಣ್ಣಾರೆ ಕಂಡೆವು ಮಾ ಧ್ರುವ ದೋರುವದು ಮಾ ಪೂರ್ಣಗೈಸುವದು ಮಾ 1 ತಾನಾಗಿಹುದು ಮಾ ಘೋಷಗೈವದು ಮಾ 2 ದೋರುದು ಮಾ ಕೈಗೂಡದು ಮಾ 3 ತಿಳಿಯಗೊಡದು ಮಾ ತಾನೆ ಭಾಸುದು ಮಾ 4 ಉತ್ತಮರೊಳಗೆ ಅತ್ಯಂತವಾಗಿನ್ನು ಅತ್ತಿತ್ತಲಾಗದೆ ಇಹುದು ಮಾ ಹೃತ್ಕಮಲದೊಳು ಕಂಡೆನು ಮಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಣ್ಣಿಲಿ ನೋಡಿರೋ ಸಾಕ್ಷ ಘನಗುರು ಪ್ರತ್ಯಕ್ಷ ಧ್ರುವ ಕಣ್ಣಿನೊಳದೆ ನಿಜ ವಸ್ತದ ಖೂನ ಪುಣ್ಯವಂತನೆ ಬಲ್ಲನುಸಂಧಾನ ಧನ್ಯಗೈಸುವದನುಭವದ ಖೂನ ತನ್ನೊಳಗದೆ ಗುರು ಆತ್ಮಙÁ್ಞನ 1 ಕಣ್ಣಿನ ಹಿಂದಾಡುತಲದೆ ಮನ ಕಣ್ಣಿಗೆ ಕಣ್ಣು ನೋಡಲುನ್ಮನ ಕಣ್ಣಿನೊಳಾಡುತಲದೆ ಚಿದ್ಛನ ಅಣುರೇಣುಕ ತಾ ಇದೆ ಪರಿಪೂರ್ಣ 2 ಕಣ್ಣಿನೊಳಾಡುವ ಭಾಸ್ಕರ ಕರುಣ ಭಿನ್ನವಿಲ್ಲದೆ ಚೆನ್ನಾಗ್ಯನುದಿನ ಚಿನ್ನ ಮಹಿಪತಿಗೆ ನೋಡೇವ ಧ್ಯಾನ ಧನ್ಯಗೈಸುವ ತಾ ದೀನೋದ್ಧರಣ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಂದ ಕೃಷ್ಣ ನೀನು ಪವಡಿಸಲೆಂದು ನಾ- ನೊಂದು ಕಥೆಯ ಪೇಳ್ವೆನೋ ನಂದನನೇ ಒಂದು ಕಥೆಯ ಪೇಳ್ವೆನು ಪ ಹಿಂದಿನ ಯುಗದಲ್ಲಿ ಶ್ರೀರಾಮನೆಂಬೊರ್ವ ಕಂದ ಕೌಸಲ್ಯಗಾದ ಮುಂದೆ ಪೇಳು ಹುಂಕಾರದಿ ಕೇಳಿದೆ ಚಂದವಾದೀ ಕಥೆಯ ಸುಧೇಯ 1 ಆತನ ಪತ್ನಿ ಸುಶೀಲೆ ಸೀತೆಯೆಂದು ಖ್ಯಾತಳಾದಳು ಜಗದಿ ಮೂಡಿದನೆಂದೆ ಹುಂ ಮಾತೆ ಮುಂದಕೆ ಪೇಳು ಸೀತಾರಾಮರ ಕಥೆಯು ಸುಶ್ರಾವ್ಯ 2 ಪಂಚವಟಿಯಲಿ ಸಂಚರಿಸುತ್ತಿರೆ ಪಂಚದ್ವಯಾನನನು ಕೊಂಚ ಮಾತ್ರ ಹುಂಕಾರವ ನುಡಿ ವಿ- ರಿಂಚಿ ಪಿತನು ಮುನಿದಾ ಸದ್ದಾದ3 ಮಿಥ್ಯಾಯೋಗಿ ಯಾಗಿ ಸತ್ಯಮಹಿಮಳ ತಾ- ನೆತ್ತಿ ಕೊಂಡೋದನಯ್ಯ ಒತ್ತರಿಸಿತು ಕೋಪ ಮತ್ತೆ ನುಡಿದ ಹರಿ ಎತ್ತ ಸೌಮಿತ್ರೆ ಧನುರ್‍ಧರರ ಧನುರೇತ್ತ ಸೌಮಿತ್ರಿ ಧನುರ್ 4 ಪುಟ್ಟ ಕೂಸÉ ಆರ್ಭಟವೆಷ್ಟು ಮಾಡುವೆ ನಿಟ್ಟಿಪುದಸದಳವು ಥsÀಟ್ಟನೆ ಮಲಗೈಯ್ಯಾ ದಿಟ್ಟಿ ನರಸಿಂಹವಿಠಲ ಪಟ್ಟರಿಸುವೆನಯ್ಯ ರಂಗೈಯ್ಯಾ ಪಟ್ಟರಿಸುವೆನಯ್ಯಾ 5
--------------
ನರಸಿಂಹವಿಠಲರು
ಕದರಿ ನರಹರಿ ವಿಠಲ | ಮುದದಿ ಪೊರೆ ಇವಳಾ ಪ ಬೆದರಿ ಬೆಂಡಾಗಿ ತವ | ಪದಕೆ ಬಿದ್ದಿಹಳಾ ಅ.ಪ. ಬನ್ನ ಬವಣೆಗಳೇ ?ಇನ್ನು ಪೇಕ್ಷಿಸದೆ ಕಾ | ರುಣ್ಯ ವೀಕ್ಷಣ ತೋರೊಪನ್ನಂಗಶಯ್ಯ ಹರಿ | ಮನುಜ ಮೃಗವೇಷಾ 1 ಸ್ವಾಪದಲಿ ನೀ ತೋರ್ದ | ಆಸನಿಯ ಅಂಕಿತವ ಪ್ರಾಪಿಸಿಹೆ ಇವಳಿಗೆ | ಶ್ರೀಪತಿಯೆ ಕೇಳೋ |ನೀ ಪಾಲಿಸುತ್ತಿವಳ | ತಾಪತ್ರಯಗಳ ಕಳೆಯೆಹೇ ಪಯೋಜ ಭವನುತ | ಪಾಪಾತಿದೂರಾ 2 ಪಾದ | ಪದ್ಮಗಳ ಭಜಿಪಾಮುಗ್ದೆಯನು ಪೊರೆಯೆಂದು | ಮಧ್ವಾಂತರಾತ್ಮಕನೆಬುದ್ಧಿ ಪೂರ್ವಕ ಬೇಡ್ವೆ | ಶ್ರದ್ಧೆ ಪತಿಸುತನೇ 3 ಐಹಿಕಾಮುಷ್ಮಿಕದ | ಬಹು ಪರಿಯ ಸುಖ ಸೌಖ್ಯಶ್ರೀಹರಿಯೆ ಕರುಣಿಸುತ | ಕಾಪಾಡೊ ಇವಳಾಸ್ನೇಹ ಸತ್ಸಂಗದಲಿ | ಪಾಲಿಸುತ ನೀನಾಗಿಮೋಹ ಮಮತೆಯ ಕಳೆದು | ಸಾಧನವ ಗೈಸೋ 4 ತರಳ ಪ್ರಹ್ಲಾದನನ | ಪೊರೆಯಲಿಲ್ಲವೆ ಹರಿಯೆವರ ಧ್ರುವನನ ಪಾಂಚಾಲಿ | ಅಜಮಿಳರ ಪೊರೆದೆಮರುತಾಂತರಾತ್ಮ ಗುರು | ಗೋವಿಂದ ವಿಠ್ಠಲನೆಪೊರೆಯ ಬೇಕಿವಳ ಬಹು | ಕಾರುಣ್ಯದಲಿ ಹರಿಯೇ 5
--------------
ಗುರುಗೋವಿಂದವಿಠಲರು
ಕನಸಿನಲಿ ಕಂಡೆನಾ ಶ್ರೀನಿವಾಸನ ಧ್ಯಾನಗೈವಮುನಿ ಮಾನಸದಲಿ ನಿಧಾನಿಸಿ ನೋಡಲು ಕಾಣದಾತನ ಪ ಕರಗಳಿಂ [ಶಂಖ] ಚಕ್ರಗಳನು ಧರಿಸಿರ್ಪಾತನ 1 ಹೇಮಸೂತ್ರಮಣಿಧಾಮಭೂಷಣ ಸ್ತೋಮ ದಿವ್ಯಗುಣರಾಮಣೀಯನ 2 ವರದಪುಲಿಗಿರಿ ವರದವಿಠಲನ 3
--------------
ವೆಂಕಟವರದಾರ್ಯರು
ಕನಸು ಕಂಡೆನು ಕೇಳೇ ಪ್ರಾಣ ಸಖೀ ಒಳ್ಳೆ ಪ ಕನಸು ಕಂಡೆನು ಕೇಳು ಘನತರ ಸುಖದೊಳೂ ಮನದೊಳಗನುದಿನ ನೆನೆಸೇ ಸಖಿಅ.ಪ ಎಳೆಯ ಚಂದ್ರನ ಚೆಲ್ವ ಪೊಳೆವ ಬೆಳಕಿನೊಳು ಝಳಿಪಾ ಚೆಂದುಟಿಯಂ ತಿಳಿವೇ ಸಖಿ 1 ವಾಸವಾರ್ಚಿತ ಹರಿದಾಸ ತುಲಸಿರಾಮಾ ದೇಶಿಕನಾದಾನು ತಾನಹುದೇ ಸಖಿ ಅಸ್ಮದ್ದೇಶಿಕನಾದಾನು 2 ಯಾತರ ಸುಖ ಬರಿ ಮಾತಿನೊಳಿಗೆ ಜಾಣೆ ಪ್ರಿತಿಯಿಲ್ಲದೆಲೇ ತಾಮಾತರಮಳಿವುದೇನೇ 3 ಬರಿಯ ಮಾತಿನೊಳೆನ್ನಾ ಬೆರಗು ಮಾಡಲಿಬೇಡಾ ಸುರತಕೇಳಿಗೆ ಬಂದೂ ಸರಸವನಾಡೆಲೆ 4 ವಾಸವನುತ ಹರಿ ದಾಸತುಲಸಿರಾಮಾ ಆಸೆಯ ತೋರಿಯೀಪರಿಯೋಳ್ ಮೋಸಗೈವುದು ಸರಿಯೆ 5
--------------
ಚನ್ನಪಟ್ಟಣದ ಅಹೋಬಲದಾಸರು
ಕನ್ಯೆ ಕುವರಿ ಕರುಣಿಸೆಮ್ಮನೂ | ಕಮಲನಯನೆಅನ್ಯ ದೇವತೆಯನ್ನ ಭಜಿಸೆನೇ ಪ ಮನ್ಯು ಮಿಕ್ಕ ದೋಷ ಹರಿಸಿ | ನಿನ್ನ ಪತಿಯ ಚರಣ ಕಮಲವನ್ನೆ ಭಜಪ ಮತಿಯ ಕೊಟ್ಟು | ಘನ್ನ ಪದಕೆ ದಾರಿ ತೋರೆ ಅ.ಪ. ಇಂಬು ಡಿಂಬ ಪೋಗದವರವ ಪಡಿಯೆ 1 ಖುಲ್ಲ ಕಂಸ ತನ್ನ ಭಗಿನಿಯ | ಒಯ್ದ ಬೇಗನಲ್ಲನೊಡನೆ ಗೈದ ಖೈದಿಯ |ಅಲ್ಲಿ ಉದಿಸೆ ಚೆಲ್ವ ಕೃಷ್ಣ | ನಲ್ಲೇ ನೀನು ದುರ್ಗೆ ಎನಿಸೆವಲ್ಲದವರ ಬಿಡದೆ ನೀನು | ಕೊಲ್ವೆನೆಂದು ಹಾರಿ ಪೋದೆ 2 ಶರಧಿ | ನಿಂತೆ ಅಲ್ಲಿ ಕನ್ಯೆಯಾಗಿ 3 ಮದುವೆ ನಿನಗೆ ಮಾಳ್ಪ ಮನದೊಳೂ ವರುಣ ಬೇಡೆರುದ್ರ ಅಜರು ಬಂದು ನಿಲ್ಲಲೂ ||ಒದಗಿ ಕಲಿಯ ಯುಗವು ಆಗ | ವಿಧಿಯು ಹರರು ತಾವು ಬೇಗಸುಧಿಯ ಇಂದ್ರ ಪುರದಿ ನಿಲ್ಲೆ | ಮುದದಿ ನಿಂತೆ ಶರಧಿಯಲ್ಲೇ4 ಇಂದಿರೆ ತವ ಮಾತಿನಂತೆ ಬಂಧ ಹರಿಸಿ ಮುಕ್ತಿ ಸುಖವ | ಛಂದದಿಂದ ಕೊಟ್ಟು ಕಾಯ್ವ 5
--------------
ಗುರುಗೋವಿಂದವಿಠಲರು