ಒಟ್ಟು 20 ಕಡೆಗಳಲ್ಲಿ , 11 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೇರಿ ಸುಖಿಸು ಮಾನವ ಗುರು ಚರಣ ಸರೋಜವ ಪ ಸೇರಿದ ಶರಣರ ಘೋರ ಪಾತಕವೆಂಬ ವಾರಿಧಿ ಭವಕೆ ಸಮೀರ ಜಗನ್ನಾಥ ಸೂರಿವರ್ಯ ದಾಸಾರ್ಯರಂಘ್ರಿಯನು 1 ತಾರತಮ್ಯವ ತಿಳಿಯದೆ ಕಲಿಯುಗದಿ ಮುಕ್ತಿ- ದಾರಿಕಾಣದೆ ಭವದಿ ಬಿದ್ದ ಜ- ನರುದ್ಧಾರ ಮಾಡಲು ದಯದಿ ಬ್ಯಾಗವಾಟದಿ ನರಸಿಂಗಾಖ್ಯ ವಿಪ್ರಗಾರ ದೋಳುದ್ಭವಿಸಿ ಚಾರು ಕಥಾಮೃತ ಸಾರವ ಧರೆಯೋಳು ಬೀರಿದಂಥವರ 2 ಮೇದಿನಿಯೊಳು ಚರಿಸಿ ವಾಕ್ಯಾರ್ಥದಿ ಬಹು ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ ಬೋಧ ಮತಾಬ್ಧಿಗೆ ಶಶಿನೃಪ ಮಾನ್ಯರೆನಿಸಿ ಶ್ರೀದ ಪ್ರಹ್ಲಾದನನುಜ ಸಹ್ಲಾದರೆ ಇವರೆಂದು ಸಾದರ ಬಿಡದ ಪಾದಪಂಕಜಾರಾಧಕರಿಗೆ ಸುರಪಾದರೆನಿಪರ 3 ಕ್ಷೋಣಿ ವಿಬಂಧ ಗಣದಿ ಸೇವೆಯಗೊಂಡು ಮಾನವಿ ಎಂಬ ಕ್ಷೇತ್ರದಿ ಮಂದಿರ ಮಧ್ವ ಸ್ಥಾಣುವಿನೊಳು ಮುದದಿ ಕಾರ್ಪರವೆಂಬ ಕಾನನದಲ್ಲಿ ಕೃಷ್ಣವೇಣಿ ಕುಲದಿ ಮೆರೆವ ಶ್ರೀನಿಧಿ ನರಪಂಚಾನನಂಘ್ರಿಯುಗ ಧ್ಯಾನದಿ ಕುಳಿತ ಮಹಾನುಭಾವರನು 4
--------------
ಶ್ರೀನಿಧಿವಿಠಲರು
ಹರಿ ಗೋಪಾಲ ವಿಠಲ | ಪೊರೆಯ ಬೇಕಿವಳಾ ಪ ದುರಿತ ದುಷ್ಕøತವೆಲ್ಲ | ದೂರ ಓಡಿಸುತಾ ಅ.ಪ. ತರಳೆ ದ್ರೌಪದಿ ವರದ | ಮರಳ್ಯಹಲ್ಯಯ ಪೊರೆದತರಳ ಪ್ರಹ್ಲಾದನನ | ಪೊರೆದ ನರಹರಿಯೇ |ವರುಷ ಐದರ ಧೃವಗೆ | ವರದನಾಗೀ | ತೋರ್ದೆಕರುಣಾಳು ನಿನ್ಹೊರತು | ಬೇರನ್ಯಕಾಣೇ 1 ಕಂಸಾರಿ ನಿನ್ನ ಪದಪಾಂಸುವನೆ ಶಿರದಿ ನಿ | ಸ್ಸಂಶಯದಿ ಧರಿಸೀಶಂಸಿಸಲು ಮಹಿಮೆ ತವ | ದಾಸ್ಯ ಪಾಲಿಸುತಿನ್ನುಹಂಸವಾಹನ ಪಿತನೆ | ವಂಶ ಉದ್ಧರಿಸೋ 2 ಕರ್ಮ ಪ್ರಾಚೀನಗಳ | ಮರ್ಮ ತಿಳಿದವರ್ಯಾರೊಕರ್ಮನಾಮಕನೆ ದು | ಷ್ಕರ್ಮ ಪರಿಹರಿಸೀ |ಪೇರ್ಮೆಯಿಂದಿವಳ ಪೊರೆ | ನಿರ್ಮಲಾತ್ಮಕ ದೇವಧರ್ಮ ಗೋಪ್ತ ಸ್ವಾಮಿ | ಬ್ರಹ್ಮಾಂಡದೊಡೆಯಾ 3 ಮಧ್ವಮತ ಸಿದ್ಧಾಂತ | ಪದ್ಧತಿಗಳರುಹೃತ್ತಶುದ್ಧಸಾಧನ ಗೈಸೊ | ಮಧ್ವಾಂತರಾತ್ಮಾಅಧ್ವಯನು ನೀನೆಂಬ | ಶುದ್ಧ ಬುದ್ಧಿಯನಿತ್ತುಉದ್ಧರಿಸೊ ಈಕೆಯನು | ಪ್ರದ್ಯುಮ್ನ ದೇವಾ 4 ಸರ್ವಜ್ಞ ಸರ್ವೇಶ | ನಿರ್ವಿಕಾರನೆ ದೇವಸರ್ವದ ತವನಾಮ | ಸ್ಮರಿಪ ಸುಖವಿತ್ತುದುರ್ವಿ ಭಾವ್ಯನೆ ದೇವ | ಅಸ್ವತಂತ್ರಳ ಕಾಯೊಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಜಯಮಂಗಳಂನಿತ್ಯ ಶುಭಮಂಗಳಂ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಯತುಂಗಲಕ್ಷ್ಮೀಪತಿ ನರಸಿಂಹಗೆಪ.ಕಂದರ್ಪನಯ್ಯಗೆ ಕೋಟಿ ಲಾವಣ್ಯಗೆಮಂದರೋದ್ಧಾರ ಮಧುಸೂದನನಿಗೆ ||ಕಂದ ಪ್ರಹ್ಲಾದನನು ಕಾಯ್ದ ದೇವನಿಗೆ ಶ್ರೀ -ಇಂದಿರಾ ರಮಣ ಸರ್ವೋತ್ತಮನಿಗೆ 1ಕರಿರಾಜ ವರದನಿಗೆ ಕರುಣಾ ಸಮುದ್ರನಿಗೆಸರಸಿಜೋದ್ಭವ - ಭವವಂದ್ಯ ಹರಿಗೆ ||ಗಿರಿಯರಸು ಕಾವೇರಿಪುರದ ರಂಗಯ್ಯಗೆಗಿರಿರಾಜಪತಿವಂದ್ಯ ಸುರರ ನಿಧಿಗೆ 2ಅಂಬರೀಷನ ಶಾಪ ಅಪಹರಿಸಿದವನಿಗೆತುಂಬುರ ನಾರದ ಮುನಿವಂದ್ಯಗೆ ||ಕಂಬುಕಂಧರಪುರಂದರ ವಿಠಲರಾಯಗೆಅಂಬುಜನಾಭಗೆ ಅಜನಪಿತಗೆ 3
--------------
ಪುರಂದರದಾಸರು
ನೀನೊಲಿದರೇನಾಹುದು - ಶ್ರೀಹರಿಯೆ - |ಮುನಿಯೆ ನೀನೆಂತಾಹುದು ಪವಾಲಿಬಲ್ಲಿದ ವಾನರರಿಗೆ - ಶ್ರೀಹರಿಯೆನೀ ಮುನಿದು ಎಚ್ಚವನ ಕೊಂದೆ |ಮೇಲೆ ಕಿಷ್ಕಿಂಧೆಯ ಪುರದ ಸುಗ್ರೀವನವಾಲಿಯ ಪದದಲ್ಲಿಟ್ಟೆ 1ಮೂರು ಲೋಕವನಾಳುವ - ರಾವಣನಊರ ಬೂದಿಯ ಮಾಡಿದೆ |ವಾರಿಧಿಯ ಒಳಗಿಪ್ಪ ಲಂಕೆಯ ವಿಭೀಷಣಗೆಸ್ಥಿರಪಟ್ಟವನು ಕಟ್ಟಿದೆ 2ಪನ್ನಗವನುದ್ಧರಿಸಿದೆ - ಕೌರವರ -ಹನ್ನೊಂದಕ್ಷೋಣಿ ಬಲವ |ಛಿನ್ನಛಿದ್ರವ ಮಾಡಿ ಅವರನ್ನು ಮಡುಹಿದೆಪಾಂಡವರ ಪದವಿಯಲಿಟ್ಟೆ 3ಹಿರಣ್ಯಕನು ಸುತನ ಕೊಲಲು - ಆಗ ನೀಕರುಣದಿಂದೋಡಿ ಬಂದೆ |ಮರಣವೈದಿಸಿ ಪಿತನತರಳ ಪ್ರಹ್ಲಾದನನುಶರಣರೊಳು ಸರಿಮಾಡಿದೆ 4ಭಾಷೆ ಪಾಲಿಪನೆನುತಲಿ - ನಾ ಬಹಳಆಸೆ ಮಾಡುತಲಿ ಬಂದೆ |ಶೇಷಗಿರಿವಾಸ ಪುರಂದರವಿಠಲ ದಾರಿದ್ರ್ಯನಾಶಮಾಡೆನ್ನ ಸಲಹೊ 5
--------------
ಪುರಂದರದಾಸರು
ಭಯ ನಿವಾರಣವು ಶ್ರೀ ಹರಿಯ ನಾಮ |ಜಯಪಾಂಡುರಂಗವಿಠಲ ನಿನ್ನ ನಾಮ ಪಧಾರಿಣೀದೇವಿಗಾಧಾರವಾಗಿಹ ನಾಮ |ನಾರದರು ನಲಿನಲಿದು ನೆನೆವ ನಾಮ |ಘೋರಪಾತಕಿ ಅಜಾಮಿಳನ ಸಲಹಿದ ನಾಮ |ತಾರಕವು ಬ್ರಹ್ಮ - ಭವರಿಗೆ ನಿನ್ನ ನಾಮ 1ಮೊರೆಯಲಾಲಿಸಿ ಮುನ್ನ ಗಜವ ಸಲಹಿದ ನಾಮ |ಕರುಣದಿಂ ದ್ರೌಪದಿಯ ಕಾಯ್ದ ನಾಮ |ಮರುಗುತಿಹ ಧ್ರುವನ ಉನ್ನತನ ಮಾಡಿದ ನಾಮ |ಪರತತ್ತ್ವ ಇಹಕಲ್ಲವೇ ನಿನ್ನ ನಾಮ 2ಚರಣದಲಹಲ್ಯೆಯನು ಸೆರೆಯ ಬಿಡಿಸಿದ ನಾಮ |ಕರುಣದಲಿ ಪ್ರಹ್ಲಾದನನು ಕಾಯ್ದ ನಾಮ |ತೊರೆಯಲಕ್ರೂರನಿಗೆ ನಿಜವ ತೋರಿದ ನಾಮ |ಸ್ಮರಿಸ ಜನರಿಗೆ ಸಮಸ್ತವನಿತ್ತ ನಾಮ 3ಚಂದ್ರಶೇಖರ ಗಿರಿಜೆಗೊರೆದ ಸಿರಿಹರಿನಾಮ ||ಬಂದಾ ವಿಭೀಷಣನ ಪಾಲಿಸಿದ ನಾಮ |ಕಂದಮುಚುಕುಂದನಿಗೆ ಕಾಮಿತವನಿತ್ತ ನಾಮ |(ಸಂದ ಪಾಂಡಪಕ್ಷ ಪಾವನವು ನಾಮ ) 4ಅಖಿಳವೇದಪುರಾಣ ಅರಸಿಕಾಣದ ನಾಮ |ಸಕಲಯೋಗಿ - ಜನಕೆ ಸೌಖ್ಯ ನಾಮ ||ಪ್ರಕಟಿಸಲು ಜಗವ ಪಾವನವ ಮಾಡಿದ ನಾಮ |ರುಕುಮಿಣೀಯರಸ ವಿಠಲ ನಿನ್ನ ನಾಮ 5ಭಕ್ತಿಯಲಿ ನೆನೆವರನು ಎತ್ತಿ ಸಲಹುವ ನಾಮ |ಮುಕ್ತಿ ಮಾರ್ಗಕೆ ಯೋಗ್ಯಹರಿ ನಿನ್ನ ನಾಮ |ಎತ್ತರಕೆ ಏರಿಪುದು ಸ್ವಾಮಿ ನಿನ್ನಯ ನಾಮ |ಚಿತ್ತಜನ ಪೆತ್ತ ಶ್ರೀ ಹರಿಯ ನಾಮ 6ವಾರಿಜಾನನೆ ತುಳಸಿಗೊಲಿದ ಹರಿನಾಮ ಕಾ - |ವೇರಿ ಮಧ್ಯದಲಿ ನೆಲಸಿದ ನಿನ್ನ ನಾಮ ||ಕ್ಷೀರಸಾಗರದಲ್ಲಿ ಶಯನವಾಗಿಹ ನಾಮ |ನಾರಾಯಣಾ ಕೃಷ್ಣಹರಿ ನಿನ್ನ ನಾಮ7ಹೊಂದಿದ್ದ ಭಕ್ತವೃಂದವ ಸಲಹಿದಾ ನಾಮ |ತಂದು ಅಮೃತವ ಸುರರಿಗೆರೆದ ನಾಮ ||ಅಂದಂಬರೀಷನನು ಕಾಯ್ದ ಶ್ರೀ ಹರಿನಾಮ |ತಂದೆ ಪುರಂದರವಿಠಲಹರಿ ನಿನ್ನ ನಾಮ8
--------------
ಪುರಂದರದಾಸರು