ಒಟ್ಟು 24 ಕಡೆಗಳಲ್ಲಿ , 14 ದಾಸರು , 20 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೋಗುತಿದೆ ಹೊತ್ತು ಬರಿದೆ ವ್ಯರ್ಥವಾಗಿಹರಿಗುರುಗಳ ನೆನೆಯದೆ ಪ. ನರರ ನೂರಮೂವತ್ತೆರಡುಕೋಟಿವರುಷ ದಿವಸವೊಂದೆ ಬೊಮ್ಮಗೆಪರೀಕ್ಷಿಸಲು ಬ್ರಹ್ಮಕಲ್ಪಸಾಸಿರ ಕೋಟಿನರಕದೊಳಗೆ ಬಿದ್ದು ಮರಳಿ ಭವದಿ ಬಂದು1 ಒಂದೊಂದಕೆ ಇಪ್ಪತ್ತೊಂದುಲಕ್ಷ ಯೋನಿಎಂದೆನಿಸುವ ಸ್ವೇದಜ ಉದ್ಬಿಜಬಂದು ಜರಾಯುಜಾಂಡಜ ಕುಲದಿ ಪುಟ್ಟಿನೊಂದೆ ಎಂಬತ್ತುನಾಲ್ಕುಲಕ್ಷ ಯೋನಿಯಲಿ 2 ಮಾಸ ಒಂಭತ್ತು ಮತಿಗೆಟ್ಟು ಗರ್ಭದಿಹೇಸದೆಬಂದು ಜೀವಿಸಿ ಬಳಲಿಮೋಸವನರಿಯದೆ ಮುನ್ನಿನ ಕರ್ಮದಿಘಾಸಿಯಾದೆನೊ ಯೌವನಮದದಿ ಸೊಕ್ಕಿ 3 ಕೆಲಹೊತ್ತು ಚದುರಂಗÀ ಪಗಡೆ ಆಟಗಳಿಂದಕೆಲಹೊತ್ತು ಹಸಿವೆ ನಿದ್ರೆಗಳಿಂದಲಿಕೆಲಹೊತ್ತು ಕಾಕಪೋಕರ ಕತೆಗಳಿಂದಕೆಲಹೊತ್ತು ಪರನಿಂದೆ ಪರವಾರ್ತೆಗಳಿಂದ 4 ಕಾಲವು ಕಡೆಯಾಗಿ ಹರಿ ನಿಮ್ಮನರ್ಚಿಸೆವೇಳೆಯಿಲ್ಲದೆ ಹೋಯ್ತು ಬಂಜೆಯಾಗಿಜಾಲಿಸಿಹೋಗುತಿದೆ ಈ ವಿಧದಿ ಹೊತ್ತು ಬೇಗನೆಪಾಲಿಸಿ ದಯಮಾಡೊ ಸಿರಿಹಯವದನ 5
--------------
ವಾದಿರಾಜ
ಕೃಷ್ಣೇತಿ ಮಂಗಳಂ ದಿವ್ಯನಾಮ ಪಇಷ್ಟರಿಂದಲಿ ಭವಬಂಧನನಷ್ಟವಾಗಿ ಹೋಹುದೋ ಅ.ಪನಾರದಮುನಿ ತಾನು ನರಕ ಪಟ್ಟಣಕೆ ಹೋಗಿವಾರೀಜನಾಭ ಎಂದು ಒದರಿದಾಗ ||ಘೋರ ಪಾತಕವೆಲ್ಲ ದೂರವಾಗಿ ಹೋಯ್ತುಸೂರೆಯಾಯಿತು ಸ್ವರ್ಗಲೋಕವೆಲ್ಲ 1ಅಜಮಿಳನು ಈ ನಾಮ ಅಂತ್ಯಕಾಲಕೆ ಸ್ಮರಿಸೆನಿಜಪದವಿಯೈದಿದನು ನಿಮಿಷದಲಿ ||ಭುಜಗಭೂಷಣನು ತಾ ಶ್ರೀರಾಮನಾಮವನಿಜಕಾಂತೆಯನು ಕರೆದು ಉಪದೇಶವಿತ್ತ 2ಪಂಚಪಾಂಡವರನು ಪರಿಪಾಲಿಸಿತು ನಾಮಪಾಂಚಾಲೀ ಮೊರೆಕೇಳಿ ಪೊರೆಯಿತು ನಾಮ ||ವಂಚನೆ ಮಾಡಿ ಕೌರವರ ಮಡುಹಿ ನಿ -ಶ್ಚಿಂತೆಯಲಿ ಪಾಂಡವರ ಪಟ್ಟಗಟ್ಟಿದ ನಾಮ 3ಸರಸಿಯೊಳಗೆ ಮುಳುಗಿ ಅರಿಯ ಬಾಧೆಗೆ ಸಿಲುಕಿಕರಿರಾಜ ಹರಿಯೆಂದು ಮೊರೆಯಿಡಲು ||ತ್ವರಿತದಿಂದಲಿ ಬಂದು ಕರಿಯನುದ್ಧರಿಸುತಕರಿರಾಜವರದನೆಂದೆನಿಸಿಕೊಂಡ ನಾಮ 4ಧ್ರುವ ತನ್ನ ತಂದೆ ತೊಡೆಯ ಮೇಲೇರಲು ಪೋಗೆಅವನ ಮಲತಾಯಿ ಗರ್ಜಿಸಿದಳಾಗ ||ಧ್ರುವ ಸುಖಬಿಟ್ಟು ವನಕೆ ಪೋಗಿ ತಪ ಮಾಡಿಸವಿಯಾದಚಲಪದವ ಪಡೆದನಾಗ 5ಹಿರಣ್ಯಕಶಿಪು ತನ್ನ ಮಗನ ಬಾಧೆಯ ಪಡಿಸೆಗಿರಿಯ ಶಿಖರದಿಂದೀಡಾಡಲು ||ನರಹರೆ ನರಹರೆ ರಕ್ಷಿಸೆಂದನ್ನಲುನರಸಿಂಹ ರೂಪದಿಂದವನ ಪಾಲಿಸಿದ 6ಕಂದನ ಅಪರಾಧವ ಕೇಳದೆ ನೃಪನು ತಾನಂದತಿ ದಾರುಣ ಕಡಹದೋಳು ಕೆಡಹೆ ||ಅಂದು ಸುಧನ್ವ ಶ್ರೀಕೃಷ್ಣನೆಂದೆನಲಾಗಿಬೆಂದು ಕಂದಿವ ಎಣ್ಣೆ ತಣ್ಣೀರಾಯಿತು 7ಅಸುರ ಬಾಧೆಗೆ ಸಿಲುಕಿ ಅಶೋಕವನದಲಿಶಶಿಮುಖಿ ಬೀಜಮಂತ್ರವ ಜಪಿಸೆ ||ಅಸುರನ ಕೊಂದು ಅಶೋಕವನವ ಬಿಡಿಸಿವಸುಧೀ ಸುತೆಯ ಸಲಹಿದ ರಾಮನಾಮ 8ಪರಿಪರಿ ಭಕ್ತರನು ಪಾಲಿಸಿತು ಈ ನಾಮಪರಮ ಮಂಗಲವು ಪಾವನವು ಈ ನಾಮ ||ಸುರರು ಬ್ರಹ್ಮಾದಿಗಳು ಸ್ರೋತ್ರ ಮಾಡುವ ನಾಮಧರೆಯೊಳುಸಿರಿಪುರಂದರ ವಿಠಲ ನಾಮ9
--------------
ಪುರಂದರದಾಸರು
ತಪ್ಪ ಪಾಲಿಸಯ್ಯ ತಿಮ್ಮಯ್ಯತಪ್ಪ ಪಾಲಿಸಯ್ಯ ಪ.ತಪ್ಪ ಪಾಲಿಸದೆಯಿಪ್ಪರೆ ಯೆನ್ನೊಳುಒಪ್ಪಿಗೆ ಪಟ್ಟೊಲಿಯಪ್ಪ ತಿಮ್ಮಪ್ಪನೆ ಅ.ಪ.ಜಲಜನಾಭ ನಿನ್ನ ಮಹಿಮೆಯನೆಲೆಯನರಿಯದೆನ್ನ ಮನವದುನೆಲೆಯಿಲ್ಲದ ಭವಜಲಧಿಯೊಳಾಡುತ್ತಲಲನಾ ವಿಷಯದ ಬಲೆಗೆ ಮೋಹಿಸಿ ಮನಸಿಲುಕಿ ಮಲಿನವಾಯ್ತು ತತ್ವದನೆಲೆಯನರಿಯದಾಯ್ತು ಹೀಗೆನ್ನುತಕಳೆದುಹೋಯ್ತು ವಿಂಶತಿ ವತ್ಸರಗಳುತೊಳಲಿ ಸಕಲ ಭವದೊಳಗಾರ್ಜಿತವಹ 1ಹಾಳು ಮನವು ಕೂಡಿ ನಾನಾಚಾಳಿ ಮಾಳ್ಪುದಾಡಿ ಬುದ್ಧಿಯಪೇಳಿದಷ್ಟು ದುಶ್ಯೀಲವೆ ಮಾಳ್ಪುದುತಾಳೆಂದರೆ ಒಂದು ವೇಳೆಗೆ ಸುಮತಿಯಆಲೋಚನೆಯೊಳಗೆ ಬಿದ್ದರೆಮೇಲಿಲ್ಲವು ಕ್ಷಣಕೆ ತನ್ನಯಶೀಲವನೆ ಸ್ವೀಕರಿಸುತಿರುವುದುಪೇಳಲೇನು ಕರುಣಾಳು ನೀ ಯೆನ್ನಯ 2ನಾನಾ ಕಷ್ಟಪಟ್ಟೆ ಇನ್ನಾದರುಮಾನಿಸಬೇಕಷ್ಟೆ ಎನ್ನೊಳುಊನ ಗ್ರಹಿಸಿ ಅನುಮಾನ ಸಾಧಿಸಿದರೆನಾನೆಂಬುವದೇನು ಸ್ವತಂತ್ರವಕಾಣೆನು ಎನ್ನೊಳಗೆ ಸಂತತನೀನೇ ಗತಿಯೆನಗೆ ಇದಕನು-ಮಾನವಿಲ್ಲ ಪಾದಾನತಜನರಾಧೀನನೆಂಬ ಬಿರುದಾನಬೇಕಾದರೆ 3ಅಪರಾಧಿಯೆ ನಾನು ಹೇಗೈಅಖಿಲಾತ್ಮನು ನೀನು ಹೃದಯದಿಕೃಪೆಯ ಬೀರಿ ತೋರಿಪ ಪರಮಾತ್ಮನೆಚಪಲನಾಗಿ ಎನ್ನುಪಮೆಗೆಯೊಡ್ಡಿದೆಸಫಲವಾಯ್ತು ಎನಗೆ ಕೀರ್ತಿಯುಅಪಕೀರ್ತಿಯು ನಿನಗೆ ಪಾದವಜಪಿಸುವಂತೆ ಕರುಣಿಪುದಿನ್ನಾದರೂಕಪಟವಾಯ್ತೆ ಸರೀಸೃಪಗಿರಿರಾಜನೆ 4ದೂಷಣಾರಿ ನಿನ್ನ ಪಾದದದಾಸಗೈಯ್ಯೊ ಎನ್ನ ಎನ್ನೊಳುದೋಷವಿಲ್ಲ ಜಗದೀಶ ಜನಾರ್ದನದಾಶರಥಿಯ ಕರುಣಾಶರಧಿಯೊಳಗೆಈಸಾಡಿದ ದಾಸ ಕಾರ್ಕಳಾಧೀಶ ಶ್ರೀನಿವಾಸ ರವಿಶತಭಾಸ ಶ್ರೀಲಕ್ಷ್ಮೀನಾರಾಯಣ ಸರ್ವೇಶ ಭಕ್ತಜನಪೋಷ ನೀಯೆನ್ನಯ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಭಂಡನಾದೆನು ನಾನು ಸಂಸಾರದಿ |ಕಂಡು ಕಾಣದ ಹಾಗೆ ಇರಬಹುದೆ ನರಹರಿಯೆ ಪಕಂಡ ಕಲ್ಲುಗಳಿಂಗೆ ಕೈಮುಗಿದು ಸಾಕಾದೆ |ದಿಂಢೆಗಾರರ ಮನೆಗೆ ಬಲು ತಿರುಗಿದೆ ||ಶುಂಡಾಲನಂತೆನ್ನ ಮತಿ ಮಂದವಾಯಿತೈ |ಪುಂಡರೀಕಾಕ್ಷನೀ ಕರುಣಿಸೈ ಬೇಗ1ನಾನಾವ್ರತಂಗಳನು ನಾ ಮಾಡಿ ಬಳಲಿದೆನು |ಏನಾದರೂ ಎನಗೆ ಫಲವಿಲ್ಲವು ||ಆ ನಾಡು ಈ ನಾಡು ಸುತ್ತಿ ನಾ ಮರುಳಾದೆ |ನೀನಾದರೂ ಕೃಪೆಯನಿಡು ಬೇಗ ಹರಿಯೇ 2ಬುದ್ಧಿಹೀನರ ಮಾತಕೇಳಿನಾ ಮರುಳಾದೆ |ಶುದ್ಧಿ ಇಲ್ಲದೆ ಮನವು ಕೆಟ್ಟು ಹೋಯ್ತು ||ಮಧ್ವನುತಸಿರಿಪುರಂದರವಿಠಲ ತತ್ವದ |ಸಿದ್ಧಿಯನು ದಯೆಗೆಯ್ದು ಉಳುಹು ನೀ ಎನ್ನ 3
--------------
ಪುರಂದರದಾಸರು
ಹುಚ್ಚು ಮಾಡಿದ ಎನ್ನ ಗುರುವುಈ ಹುಚ್ಚನರಿವೊಡೆ ಸಚ್ಚರಿತರಿಗರಿವುಪಆಶ್ರಮ ಧರ್ಮವು ಹೋಯ್ತುನಿರಾಶ್ರಮವೆಂಬುದು ನಿಜವಾಯ್ತುಕುಶ್ರಮಗಳು ನಾಶವಾಯ್ತುಜೀವಭ್ರಮೆಯೆಂಬುದು ಖಿಲವಾಯ್ತು1ಸ್ನಾನವು ಮನದಿಚ್ಛೆಯಾಯ್ತು ಸಂಧ್ಯಾದಿಜಪವೆಲ್ಲ ಮರತೇಹೋಯ್ತುಮೌನವೆಂಬುದು ಬಹಳವಾಯ್ತು ಗುರುತಾನೆಎಂದೆಂಬ ಧ್ಯಾನವುಪೂರ್ಣವಾಯ್ತು2ಕುಲಗಳೆಂಬುವು ಕಾಣದಾಯ್ತುಕುಲಛಲಗಳು ಮರತೇಹೋಯ್ತುಹೊಲೆ ಶುದ್ಧಗಳು ಬರಡುನುಡಿಯಾಯ್ತುನಿಶ್ಚಲನಿಜಾನಂದವೆಂಬುದೇ ಸತ್ಯವಾಯ್ತು3ಭೇದಾಭೇದವು ಮಾಯವಾಯ್ತುಹಾಳುವಾದಗಳು ಕೇಳದಂತಾಯ್ತುಸಾಧುಸಂಗವ ಬಿಡದಂತಾಯ್ತುಸುವಾದವಮಾಡಿ ಸುಖಿಸುವಂತಾಯ್ತು4ದಯೆ ನಿರ್ದಯೆಗಳ ತೊರೆದಾಯ್ತುಭಯ ನಿರ್ಭಯಗಳು ಅದೃಶ್ಯವಾಯ್ತುಜಯಾಪಜಯಗಳು ಕಾಣದಾಯ್ತು ಸ್ವಕ್ಷೇಮಪರಕ್ಷೇಮಗಳ ವಿಚಾರ ಹೋಯ್ತು5ಕೋಪ ತಾಪವು ಶಮವಾಯ್ತುತಾಪತ್ರಯದಬಿತ್ತು ಮೊಳೆಯದಾಯ್ತುಯೋಗ ವಿದ್ಯೆಯ ಹರಿತವಾಯ್ತುನಿರ್ವಾಣವಾಗಿ ಎಲ್ಲ ಇಂತಾಯ್ತು6ಇಂತಹ ಹುಚ್ಚನು ಎನಗೆ ಕವಿಯಿಸಿನಿರಂತರ ಚಿಂತೆಯ ನೆನ್ನ ಪಾಲಿಗಿರಿಸಿಅಂತರಂಗದಿ ತಾನೆ ನೆಲೆಸಿ ಚಿಂತಾಯಕಚಿದಾನಂದ ತಾ ಬೆರೆಸಿ7
--------------
ಚಿದಾನಂದ ಅವಧೂತರು