ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ |
ಲೋಕ ದೊಳಗನುಗಾಲ ತಿರಿದು ತಿಂಬುವಂತೆ ಮಾಡಿ ಪ
ಒಡಲಿಗಾಗಿ ಒಬ್ಬನ ಸಂಗಡ ಹೋಗಲು |
ಕೊಡುವವನು ಇಲ್ಲೆಂದು ಪರಿಹರಿಸುವ ||
ಸುಡು ಈ ಶರೀರವ ಬಳಲಲಾರೆನೊ ವಿಷದ,
ಮಡುವನಾದರು ಧುಮುಕಿ ಮರಣವಾಗುವೆ ರಂಗಾ 1
ಪ್ರತಿದಿನವೂ ಅನ್ನ ಕೊಡುವವನ ಬಾಗಿಲಿಗ್ಹೋಗೆ |
ಹುತವಾಗುವನು ಎನ್ನ ನೋಡುತಲಿ ||
ಪರಿ ಬದುಕಿ ಇಹೋದಕಿಂತ |
ಹತವಾಗಬಹುದಂಬಿನ ಮೊನೆಗೆ ಬಿದ್ದು ರಂಗಾ 2
ಎಲ್ಲಿ ಬೇಡಿದಲ್ಲವೆಂಬೋ ಸೊಲ್ಲಿಲ್ಲಿದೇ |
ಒಲ್ಲೆನೋ ಸಾಕು ಈ ನರ ಜನ್ಮವು
ಸಿರಿ ವಿಜಯವಿಠ್ಠಲ ನಿ- |
ನ್ನಲ್ಲಿ ದೂತರ ಸಂಗದಲ್ಲಿ ಸುಖಬಡಿಸೊ 3