ಒಟ್ಟು 19 ಕಡೆಗಳಲ್ಲಿ , 13 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸೆಲವೋ ಸ್ಮರಿಸೆಲವೋ ಮನವೇ | ನಿರುತದಿ ಗುರುಮಹೀಪತಿ ಪಾದಾ ಪ ಆದ್ಯಾತ್ಮದಘನ ವಿದ್ಯೆಯ ಸಾಧಿಸಿ | ಸಿದ್ಧರ ನಡುವೆ ಪ್ರಸಿದ್ಧರಾದವರ 1 ನೆಟ್ಟನೆ ಶರಣರ ಪುಟ್ಟಿಸಿರಧಿಕಾ | ಬಿಟ್ಟುಪದೇಶವ ಕೊಟ್ಟು ಸಾಕುವರಾ 2 ಧಾರುಣಿಯೊಳು ಸಂಸಾರ ಮಾಡಿದರ | ಸಾರಸಜಲದಂತೆ ರಚಿಸಿದರಾ 3 ಯೋಗಧಾರುಣದಿ ಸಾಗಿಪದಿನಗಳು | ಭಾಗವತಾಗ್ರಣಿ ಎನಿಪಶ್ರೀಗುರುಪಾದಾ4 ವಿತ್ತಜನರು ತಂದಿತ್ತರೆ ಹಿಡಿಯದೆ | ನಿತ್ಯವ್ಯಯವ ಪವಡಿಸುತಿಹರವರಾ5 ಯುಕ್ತದಿ ವಿಷಯಾಸಕ್ತಿಯತ್ಯಜಿಸಿ | ವಿ ರಕ್ತಿ ಬೆಳಿಸಿ ಸುಮುಕ್ತಿ ಪಡೆದವರಾ 6 ಸ್ವಸ್ಥದಿ ನಾಲ್ಕು ಅವಸ್ಥೆಯ ಮೀರಿ | ಸ ಮಸ್ತರಲಿ ನಿಜ ವಸ್ತು ಕಂಡವರಾ7 ಕಾಖಂಡಕಿ ಸ್ಥಳ ಶ್ರೀಕರವಂದ್ಯೆ | ನಿ ರಾಕರಿಸದೆ ಅಂಗೀಕರಿಸಿದರಾ 8 ಎಂದೆಂದಿಗೂ ಹೊರಗೊಂದಿನ ಹೋಗದೆ | ಮಂದಿರದೊಳಗಾನಂದದಲಿಹರಾ9 ತಾಪತೃಯದಾ ಭವಪರಿಹರಿಸುತ | ತಾಪೋರೆದನು ಗುರು ಶ್ರೀಪತಿಗುರುಪಾದಾ 10 ಅಂಕಿತ-ಗುರುಶ್ರೀಪತಿ
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹುಚ್ಚುಮನವೆ ನಿನ್ನ ಹುಚ್ಚಾಟವನೆ ಕಂಡು ರೊಚ್ಚುಬರುತಿದೆ ಎನಗೆ ಎಚ್ಚರಿರೆಲೆಲೇ ಪ ಉಚ್ಚೆಕುಣಿಯಲಿ ಬಂದು ಭವದ ಮಾಯಾ ಜಗವ ನೆಚ್ಚಿ ಸಕಲ ಮರೆದು ಮುಂದಿನ ಎಚ್ಚರವೆ ಮರೆತೆಲ್ಲೋ ಪಾಪಿ ಅ.ಪ ಒಳಗೊಂದು ಹೊರಗೊಂದು ತಿಳಿಯುತಲಳಿಯುವಿ ಅಳಿದುಹೋಗುವ ಇಳೆಯ ಸಲೆ ಸುಖಕೊಲಿದು ಮಲದ ಭಾಂಡದಿ ಸಿಲುಕಿ ಅನುದಿನ ಮಲಿನಗುಣದಿಂ ತೊಳಲಿಬಳಲುತ ಗಳಿಸಿಕೊಂಡು ಬಂದ ಸಮಯ ಕಳೆದುಕೊಳ್ಳುವಿಯಲ್ಲೋ ಪಾಪಿ 1 ಹಿಂದೊಂದು ಮುಂದೊಂದು ವಂದಿಸಿ ನುಡಿಯುತ ಮಂದ ನೀನಾಗಿ ಹಂದಿಯು ಮಲ ಮೆದ್ದತೆರದಿ ಕುಂದಿಪೋಗುವ ಬಂಧುಬಳಗಕೆ ನಂದುನಂದೆಂಬ ವಿಷಯಲಂಪಟ ರಂಧ್ರೆಯಲ್ಲಿ ಬಿದ್ದು ಕೆಡುವಿ ಪಾಪಿ 2 ನುಡಿಯೊಂದು ನಡೆಯೊಂದು ಕಡುದೃಢ ನುಡಿಯಾಡಿ ಒಡಲಕಿಚ್ಚಿಗೆ ಬಲು ಮಿಡುಕುತಲಿ ಕೆಡುವ ತನುವಿನ ಮೋಹ ಬಿಡದೆ ಪೊಡವಿಗಧಿಕ ನಮ್ಮೊಡೆಯ ಶ್ರೀರಾಮ ನಡಿಯ ನಂಬದೆ ಮಡಿದುಪೋಗುವಿ ಕಡೆಗೆ ಹೆಡತಲೆಮೃತ್ಯುಗೆದೆಯಾಗಿ 3
--------------
ರಾಮದಾಸರು
ಯಾರೂ ಸಂಗಡ ಬಾಹೋರಿಲ್ಲನಾರಾಯಣ ನಿಮ್ಮ ನಾಮವೊಂದಲ್ಲದೆ ಪ.ಹೊತ್ತು ನವಮಾಸ ಪರಿಯಂತರವು ಗರ್ಭದಲಿಹೆತ್ತು ಬಲು ನೋವು ಬೇನೆಗಳಿಂದಲಿತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿಅತ್ತು ಕಳುಹುವಳಲ್ಲದೆ ನೆರೆಬಾಹಳೆ 1ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನಭಾವಶುದ್ಧಿಯಲಿ ಧಾರೆಯೆರಿಸಿಕೊಂಡದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು ಇನ್ನಾವ ಗತಿಯೆಂದೆನುತ ಗೋಳಿಡುವಳಲ್ಲದೆ 2ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗಎತ್ತಿವನ ಹೊರಗೊಯ್ಧ ಹಾಕೆಂಬರುಎತ್ತಿದ ಕಸಕಿಂತ ಕಡೆಯಾಯಿತೀ ದೇಹವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ 3ಪುತ್ರಮಿತ್ರರು ಸಕಲ ಬಂಧು ಬಳಗಗಳೆಲ್ಲಹತ್ತಿರ ನಿಂತು ನೋಡುವರಲ್ಲದೆಮೃತ್ಯುದೇವಿಯ ಬಂದು ಅಸುಗಳನು ಸೆಳೆವಾಗಮತ್ತೆ ತನ್ನವರಿದ್ದು ಏನು ಮಾಡುವರು 4ಯಮನ ದೂತರು ಬಂದು ಪಾಶಂಗಳನೆ ಎಸೆದುಮಮತೆಯಿಲ್ಲದೆ ಪ್ರಾಣ ಎಳೆಯುತಿರಲುವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗಕಮಲಾಕ್ಷ ಪುರಂದರವಿಠಲ ನೀನಲ್ಲದೆ * 5
--------------
ಪುರಂದರದಾಸರು
ಸುಲಭವಲ್ಲವೊ ಮಹಾನಂದ ತ -ನ್ನೊಳಗೆ ತಿಳಿಯಬೇಕುಗುರುದಯದಿಂದಪ.ಬೆಕ್ಕನು ಇಲಿ ನುಂಗುವನಕ - ಕಡು -ರಕ್ಕಸಿಯನು ಕಂಡು ಗಿಣಿ ನುಂಗುವನಕ ||ಮಕ್ಕಳ ಭಕ್ಷಿಸುವನಕ - ಮದ -ಸೊಕ್ಕಿದ ಗಜವನು ನರಿ ನುಂಗುವನಕ 1ಇಬ್ಬರೊಡನೆ ಕೊಡುವನಕ - ಮೂರು -ಹಬ್ಬಿದ ಬೆಟ್ಟವ ನೊಣ ನುಂಗುವನಕ ||ಒಬ್ಬರೊಡನೆ ಸೇರುವನಕ - ಕೆಟ್ಟ -ಗುಬ್ಬಿಯ ರಾಜಹಂಸವು ನುಂಗುವನಕ 2ಒಳ ಹೊರಗೊಂದಾಗುವನಕ - ತಾನು -ತಿಳಿದೆನೆಂಬಭಾವ ಬಯಲಾಗುವನಕ ||ಬೆಳಕಿನೊಳಗೆ ಕಾಣುವನಕ ನಮ್ಮ -ಚೆಲುವ ಪುರಂದರವಿಠಲನ ದಯವಾಗುವನಕ 3
--------------
ಪುರಂದರದಾಸರು