ಒಟ್ಟು 28 ಕಡೆಗಳಲ್ಲಿ , 19 ದಾಸರು , 28 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿಗಾದರು ಬಿಡದು ಪೂರ್ವಾರ್ಜಿತ ಬೆನ್ನ ಸಾರಿಹುದು ಭವಭವದೊಳದು ಕಾಡುತ ಪ ಇಂದ್ರ ದೊಡ್ಡವನೆಂದರವಗೆ ಮೈಕಣ್ಣೆಲ್ಲ ಚಂದ್ರ ದೊಡ್ಡವನೆನಲು ಹೆಚ್ಚು ಕುಂದು ಇಂದ್ರ ಜಾಲೆಯು ಲಕ್ಷ್ಮೀದೇವಿ ದೊಡ್ಡವಳೆನಲು ಮ ಹೇಂದ್ರ ಜಾಲೆಯು ಒಂದು ಕಡೆ ನಿಲ್ಲಳು 1 ಸರಸಿರುಹಭವ ದೊಡ್ಡವನೆನಲು ನಡುತಲೆಯಿಲ್ಲ ತರುಣಿ ದೊಡ್ಡವನೆನಲು ಸಂಚಾರವು ಉರಿಯು ದೊಡ್ಡವ ನೆನಲು ಮೈಯೆಲ್ಲ ಧೂಮಮಯ ಉರಗ ಮಿಗಿಲೆನೆ ಶಿರದಿ ಪೊತ್ತಭಾರ 2 ಮೇರು ದೊಡ್ಡವ ನೆನಲು ಏಳಲಿ ಬಗೆಯಿಲ್ಲ ವಾರಧಿಯು ದೊಡ್ಡಿತೆನೆ ಪಾನಕಿಲ್ಲ ಮಾರುತಾತ್ಮಜ ಕೋಣೆ ವಾಸ ಲಕ್ಷ್ಮೀರಮಣ ಯಾರಿಗೂ ಸ್ವತಂತ್ರವನು ಕೊಟ್ಟುದಿಲ್ಲ 3
--------------
ಕವಿ ಪರಮದೇವದಾಸರು
ವಂದಿಸು _ ಶ್ರೀ ಹರಿಯ ಪ ಇಂದಿರೆನಾಥ ಮಹೇಂದ್ರ ಪರಾತ್ವರ ಸುಂದರ ಜಗಪಿತ ನಂದ ಮಹೋದಧಿ ಸಿಂಧು ಶಯನ ಅರ- ವಿಂದ ಸುನಾಭ ಮುಕುಂದ ಮುರಾರಿಯ ಅ.ಪ. ವೇದಸುಗೋಚರ _ ಖೇದವಿವರ್ಜಿತ _ ಸಾದರನುತಿಪರ ಖೇದವಿಮೋಚಕ ಮಾಧವ ಗೀತಾ _ ಬೋಧಕ ವಿಧಿಗುರು 1 ನಿರಂಜನ _ ಪಕ್ಷಿ ಧ್ವಜ ಜಗ ಕುಕ್ಷಿ ಪರಾಮೃತ _ ರಕ್ಷಿಸಿ ಜಗವಂ ಭಕಿÀ್ಷಪಧೋಕ್ಷಜ _ ಸಾಕ್ಷಿ ನಿರಪೇಕ್ಷ ಸುಪಕ್ಷನ2 ಸತ್ಯಾಧಾರ ವಿಚಿತ್ರ ಗುಣಾರ್ಣವ _ ಸತ್ಯವ್ರತ ಪುರು ಷೋತ್ತಮ ನಿರ್ಮಲ_ ಸತ್ಯವತೀಸುತ _ ನಿತ್ಯತೃಪ್ತ ಮ ಹಾತ್ಮಜಗಾತತ _ ಭೂತಿದ ಹೃಸ್ಥನ 3 ಭೂಮಿಯ ವರಜಯ ಧಾಮಸಖಖಳಭ್ರಾಮಕ ಕಲ್ಕಿಯೆ4 ಮಾಯಾ ಪರ- ಮೇಷ್ಠ ಜನಕ- ಶ್ರೀ ಕೃಷ್ಣವಿಠಲಪದ ನಿಷ್ಠರ ಸೇರಿ ವಿಶಿಷ್ಠ ಸಮರ್ಪಿಸಿ 5
--------------
ಕೃಷ್ಣವಿಠಲದಾಸರು
ವಾರಿಜಾಕ್ಷನೆ ನಿನ್ನ ಚಾರುಚರಣದ ಸ್ಮರಣೆ ಬಾರಿ ಬಾರಿಗೆ ಮಾಳ್ಪ ಭಾಗ್ಯವೀಯೊ ಸಾರಸಾಕ್ಷನೆ ಸಂಸಾರ ದು:ಖದಿ ಎನ್ನ ಸೇರದಂದದಿ ಮಾಡೋ ಸರ್ವವಂದಿತ ಕೃಷ್ಣ 1 ಅಂಬುಜಾಕ್ಷನೆ ನಿನ್ನ ನಂಬಿದೆನೊ ಈ ಭವದ ಬಂಧ ತಪ್ಪಿಸಿ ಕಾಯೊ ಇಂದಿರೇಶ ಹಿಂದು ಮುಂದ್ಯಾರಿಲ್ಲವೆಂದು ನಂಬಿದೆ ನಿನ್ನ ಛಂದದಿಂದ ಸಲಹೊ ಮಹೇಂದ್ರತೀರ ನಿವಾಸ 2 ಸುಂದರಾಂಗನೆ ದೇವ ವಂದಿಸುವೆ ತವಪಾದ ಧ್ವಂದ್ವ ಭಜಕರ ಸಂಗ ಬಂದುನೀಡೈ ಇಂದಿರಾರಮಣನೆ ನಂದಗೋಪನ ಕುವರ ಬಂದು ಭಕುತರ ಪೊರೆವ ಆನಂದ ಮೂರುತಿ ಕೃಷ್ಣ3 ಶರಣಜನರನು ಪೊರೆಯೆ ತ್ವರಿತದಲಿ ಬಂದು ಈ ಗಿರಿಯ ಮಧ್ಯದಿನಿಂದೆ ಮಧುಸೂದನ ಶರಣುಶರಣೆಂದು ನಿನ್ನಡಿಗೆರಗುವ ಜನರ ದುರಿತವೆಲ್ಲವ ಕಳೆದು ಪೊರೆವ ದಯಾನಿಧಿ ಕೃಷ್ಣ4 ಕನಕಗರ್ಭನ ಪಿತನೆ ಕಡುಲೋಭವನೆ ಬಿಟ್ಟು ದೃಢವಾದ ಅಭಯವನು ದಯಪಾಲಿಸೊ ಪೊಡವಿಗೊಡೆಯನೆ ದೇವ ಕಮಲನಾಭವಿಠ್ಠಲ ಬಿಡದೆ ನಿನ್ನನು ಭಜಿಪ ಧೃಢ ಮನವ ನೀಡೈ5
--------------
ನಿಡಗುರುಕಿ ಜೀವೂಬಾಯಿ
ವೈಭವ ನೋಡಿರೈ ಪ ಗುರುವರೇಣ್ಯ ಸತ್ಯ ಪ್ರಮೋದ ತೀರ್ಥರು ಸಂಭ್ರಮದಲಿ ಮೆರೆದು ಬರುವ ವೈಭವ ನೋಡಿರೈ 1 ಪರಮಹಂಸ ಪರಿವ್ರಾಜಕಾದಿ ಸ ದ್ಬಿರುದುಗಳಿಂದಲಿ ಕರೆಸಿಕೊಳ್ಳುವ 2 ಅಂದಣದಲಿ ನಲುವಿಂದ ಪರಾಶರ ಕಂದನ ನಿರಿಶ್ಯಾನಂದ ಬಡುವ 3 ಸುಂದರ ರಾಜಮಹೇಂದ್ರ ಪುರದಿ ಜನ ಸಂದಹಿಯೋಳ್ಬುಧ ವೃಂದ ಬರುವ 4 ಮೋದತೀರ್ಥ ಸುಮತೋದಧಿ ಚಂದ್ರ ಪ್ರ ಮೋದ ತೀರ್ಥರಿವರೆಂದು ನುಡಿವ 5 ಮೇದಿನಿ ಸುರಕೃತ ವೇದ ಘೋಷಣ ಸು- ನಾದ ಭರಿತ ಬಹುವಾದ್ಯ ನಿನದ 6 ಪರವಶದಲಿ ತನುಮರೆದು ಕುಣಿವ7 ಕಂಡೆನು ಪರಮತ ಖಂಡನದಿ ಸುಧೆಯ ಮಂಡನೋತ್ಸವದಿ ಕಂಡುಬರುವ 8 ಚಲುವ ಗುರು ಚರಣ ಜಲಜಕೆ ನಮಿಸುತ ಲಲನೆಯರಾರುತಿ ಬೆಳಗುತಿರುವ 9 ನೇಮದಿ ಎಡಬಲ ಭೂಮಿಸುರರು ಕೈ ಚಾಮರ ಬೀಸುತ ಸಾಮ ಪಠಣ10 ಭಯವ ಪುಟ್ಟಿಸಿ ಹೃದಯದಿ ಮಾಯ್ಗಳ ಜಯ ಘೋಷದಿ ನಿರ್ಭಯದಿ ಬರುವ 11 ಕಾಣೆನು ಸತ್ಯಜ್ಞಾನ ತೀರ್ಥರ ಸ- ಮಾನ ಗುರುಗಳೆಂದಾನಮಿಸುವ 12 ಪಾವನತರ ಗೋದಾವರಿ ಸ್ನಾನದಿ ಶ್ರೀವರನಂಘ್ರಿಯ ಶೇವಿಸುವರ 13 ವಿದ್ವಜ್ಜನನುತ ಮಧ್ವಮುನಿಯ ಮತ ವೃದ್ಧಿಕಾರಿಣಿ ಪ್ರಸಿದ್ಧ ಸಭೆಯ 14 ಸಿರಿ ಕಾರ್ಪರ ನರಸಿಂಹನೆ ಪರನೆಂದರುಹುತ ಮೆರೆವ ಸಭೆಯ 15
--------------
ಕಾರ್ಪರ ನರಹರಿದಾಸರು
ಶರಣು ಶರಣು ಕೃಷ್ಣಕೃಷ್ಣ ಶರಣು ಶರಣು ರಾಮ ರಾಮ ಶರಣು ಶರಣು ಶ್ರೀನಿವಾಸ ಶರಣು ಶರಣು ಶ್ರೀ ಹರೇ ಪ ಗುರುಸು ಭಕ್ತಿ ನೀಡಿ ಎನಗೆ ವರಿಸಿ ಶುದ್ಧ ದಾಸನೆಂದು ಕರುಣ ತೋರೊ ಕೇಶವ ಅನಂತ ರೂಪಿಯೇ ಅ.ಪ ಲೇಸಿನಿಂದ ಬ್ರಹ್ಮಶಿವರ ಪ್ರೇರಿಸುತ್ತ ಜಗವ ಪೊರೆವೆ ದಾಸನೆಂದು ಮೊರೆಯ ಹೊಕ್ಕೆ ಕಾಯೊ ಕೇಶವಾ 1 ವಾರಿನಿಲಯ ದೋಷದೂರ ಪೂರ್ಣಕಾಮ ಮುಕ್ತರೀಶ ಶರಧಿ ನಾರಾಯಣ 2 ವೇದಮಾತೆ ಶೃತಿ ಸುಗೀತೆ ವೇದಮಾನಿ ಲಕ್ಷಿರಮಣ ಶೂನ್ಯ ಮಾಧವ 3 ವಿನುತ ಸಾರ ವೇದಬಲ್ಲ ಸಾಧು ಪ್ರಾಪ್ಯ ವೇದಪಾಲ ಶರಣು ಗೋವಿಂದ 4 ವಿಶ್ವಜನಕ ವಿಶ್ವಪಾಲ ವಿಶ್ವವ್ಯಾಪ್ತ ವಿಶ್ವಭೋಕ್ತ ವಿಶ್ವಜೂತಿ ವಿಶ್ವಬಲನೆ ಶರಣು ವಿಷ್ಣುವೆ 5 ಆದಿ ದೈತ್ಯರನ್ನು ಕೊಂದು ಮೇದಿನೀಯ ಪೊರೆದ ದೇವ ಬಾಧೆ ಹರಿಸು ಮೂರು ವಿಧಧ ಮಧುಸೂದನ 6 ಲೋಕತ್ರಯವ ನಳೆದ ನೇಕ ಏಕನಿನಗೆ ಸಾಟಿಯಾರು ಜೋಕೆಯಿಂದ ಸಾಕಬೇಕು ತ್ರಿ-ವಿಕ್ರಮ 7 ಸೋಮ ಹಳಿದ ಕಾಂತಿಧಾಮ ನೇಮದಿಂದ ಬಲಿಯ ಕಾಯ್ದೆ ಹೇಮ ಜ್ಯೋತಿ ಪೂರ್ಣ ಸುಖಿಯೆ ಶರಣು ವಾಮನ 8 ಬೊಮ್ಮಶಿವರ ಕುಣಿಸಿ ಆಳ್ವ ಅಮ್ಮ ಪ್ರಕೃತಿಯನ್ನು ಧರಿಸಿ ಸುಮ್ಮಗೇನೆ ಜಗವ ಕಾವೆ ಶರಣು ಶ್ರೀಧರ 9 ಕರಣ ವ್ರಾತದಲ್ಲಿ ನಿಂತು ಕರಣಕಾರ್ಯಗಳನು ನಡಿಸಿ ಕರಣ ಪತಿಗಳನ್ನು ಪೊರೆವೆ ಹೃಷಿಕೇಶನೆ 10 ಉದರದಲ್ಲಿ ಜಗವ ಪೊತ್ತು ಸದರದಿಂದ ಒಪ್ಪಿಕೊಂಡೆ ಉದರದಲ್ಲಿ ರಜ್ಜುಭಂಧ ದಾಮೋದರ 11 ಚೊಕ್ಕವಿಧಿಯ ಹಾಗೆ ಜಗವ ಕುಕ್ಷಿಯಲ್ಲಿ ಪಡೆದ ದೇವ ಶರಧಿ ಶಯನ ಪದ್ಮನಾಭನೆ12 ಭಕ್ತಜನರ ಪಾಪಸೆಳೆವ ಶಕ್ತ ಪ್ರಲಯ ಸ್ತುತಿಗೈವ ದೇವ ಮುಕ್ತಿದಾತ ವಿಶ್ವಕುಕ್ಷಿ ವಾಸುದೇವನೆ 14 ಮೇರೆಯಿರದ ಕಾಂತಿಮಯನೆ ಸೇರಿ ಭಾಸ ಕೊಡುವೆ ರವಿಗೆ ಬೀರಿ ಜ್ಞಾನ ಭ್ರಾಂತಿ ಹರಿಸು ಪ್ರ-ದುಮ್ನನೆ 15 ನೀ ನಿರೋಧ ಕಾಣೆ ಎಂದು ನೀನೆ ಸಿಗುವೆ ಭಕ್ತಿ ಬಲೆಗೆ ಕೃಪಣ ಕ್ಷಮಿಸು ಅನಿ-ರುಧ್ಧನೆ 16 ಕ್ಷರರು ಜೀವ ರಾಶಿ ಎಲ್ಲಕ್ಷರ ವಿರುಧ್ಧ ಲಕ್ಷ್ಮಿತಾನು ವರನು ಭಿನ್ನ ಉಭಯರಿಂದ ಪುರುಷೋತ್ತಮ 17 ಕರಣಗಳಿಗೆ ಸಿಗುವನಲ್ಲ ಕರಣಗಳಲಿ ಭೇದವಿಲ್ಲ ಕರಣಜಯವ ಸಿಧ್ಧಿಸೆನಗೆ ಅ-ಧೋಕ್ಷಜ18 ದೋಶರಹಿತ ಮುಕ್ತರೀಶ ನಾಶರಹಿತ ಲಕ್ಷ್ಮಿರಮಣ ಈಶಬಿಂಬ ಜೀವ ಹೃಸ್ಥ ನಾರಸಿಂಹನೆ 19 ಜೀವರೊಡನೆ ವಿತತ(ಇರುವೆ) ಅಚ್ಯುತ 20 ಇಂದ್ರನನುಜ-ನಿಜಮಹೇಂದ್ರ ತಂದೆ ಸುಖವ-ದಿವಿಜಣಕೆ ವಂದ್ಯ ವಂದ್ಯ-ವಂದಿಸುವೆನು ಶ್ರೀ- ಉಪೇಂದ್ರನೆ 21 ಸೃಷ್ಠಿಗೈದು ಜಗವ ಲಯಿಪೆ ದುಷ್ಟದಮನ ಶಿಷ್ಟವರದ ಹುಟ್ಟು ಸಾವು ಕಟ್ಟು ಬಿಡಿಸೊ ಶ್ರೀ ಜನಾರ್ದನ 22 ಯಜ್ಞಭೋಕ್ತ ಮನುವ ಪೊರೆದೆ ಭಗ್ನಗೈಸಿ ದೋಷವೆನ್ನ ಜ್ಞಾನ ನೀಡೋ ಸುಜ್ಞನೆನಿಸು ವಾಜಿವದನ ಶರಣು ಶ್ರೀಹರೇ 23 ವಿಭವ ಮೂರ್ತಿ ಭಕ್ತಮನವ ಪಾಪ ಸೆಳಿವೆ ರಿಕ್ತನಾನು ಸರ್ವವಿಧಧಿ ಕಾಯೊ ಶ್ರೀಕೃಷ್ಣ 24 ಸರ್ವ ಶಬ್ದವಾಚ್ಯ “ಶ್ರೀಕೃಷ್ಣವಿಠಲ”ನನ್ನು ನೆನೆಯೆ ಸರ್ವಸುಖಗಳಿತ್ತುಕಾವ ಜಿಷ್ಣು ತೆರದಿ ಸತ್ಯಹೋ 25
--------------
ಕೃಷ್ಣವಿಠಲದಾಸರು
ಶ್ರೀಮತ್ಕಾಂಚನ ಕೋಟಿರನ್ನತನಯಾ | ಕ್ಷೀರಾಂಬುನಿಧಿ ಮಧ್ಯದಿ | ನೇಮದಿಂ ನಿಜಧಾಮದಲ್ಲಿ ರಮೆಯಾ | ಒಡಗೂಡಿ ಸುರಸಿದ್ಧದೀ | ಸಾಮಗಾಯನ ಪ್ರಿಯನಾಗಿನಿರುತಾ | ಪಾಲಿಪ ಲೋಕಂಗಳಂ | ಮಾಧವ ದಯಾನಿಧೇ ವಧುವರಾ | ಕುರ್ಯಾತ್ಸದಾ ಮಂಗಳಂ | 1 ಭಾನುಕೋಟಿಯ ತೇಜದಿಂ ಬೆಳಗುವಾ | ಮುಕಟವು ಮಸ್ತಕದಿ | ಶ್ರೀ ನೀಲಾಳಕ ಭಾಲಮಧ್ಯಮೆರೆವಾ | ಕೇಶರ ಪೌಂಡ್ರಕದಿ | ಸೂನಾಸಿಕದಿ ವಾರಜಾಕ್ಷಅಧರಿಂ | ದೊಪ್ಪುವ ಕರ್ಣಂಗಳಂ | ತಾನೀಕುಂಡಲ ಭೂಷಣಾ ವಧುವರಾ | ಕುರ್ಯಾತ್ಸದಾ ಮಂಗಳಂ 2 ಶ್ರೀ ಲಕ್ಷ್ಮೀ ನಿಜಶಾರದಾಗಿರಿಸುತೇ | ಭಾರತೀ - ಶಚಿ- ಭಾಮಿನೀ | ಕಾಲಿಂದೀವರ ನರ್ಮದಾ ಸರಸ್ವತೀ | ಗಂಗಾ ತ್ರಿಪಥಗಾಮಿನೀ | ಪಾಲಿಸುವ ಗೋದಾವರೀ ಭೀಮರಥೀ | ಶ್ರೀ ಕೃಷ್ಣ ವೇಣಿಂಗಳಂ | ಮೇಲೆ ಕಾವೇರಿತುಂಗೆ ತಾವಧುವರಾ | ಕುರ್ಯಾತ್ಸದಾ ಮಂಗಳಂ 3 ವಾರಿಜಾಸನ ವಾಯು ಶಂಕರಗುರು | ತ್ವಂಹೇಂದ್ರ ವಸಿಷ್ಠನು | ಭಾರದ್ವಾಜ ಪರಾಶರಾತ್ರಿ ಭೃಗು ಕ- ಶ್ಯಪ ಕೌಶಿಕ ಶ್ರೇಷ್ಠನು | ಕಾರುಣೀ ಜಮದಗ್ನಿ ರಾಮ ಮರಿಚೀ | ವ್ಯಾಸಾದಿ ಋಷಿ ಪುಂಗಳಂ | ನಾರದಾದಿ ಮುನೀಂದ್ರರೀ ವಧುವರಾ | ಕುರ್ಯಾತ್ಸದಾ ಮಂಗಳಂ 4 ಇಂದ್ರೋವಹ್ನಿ ಪಿತೃಪತಿ - ನಿಋಋತಿ | ಮಕರೇಶ ಪ್ರಭಂಜನಾ | ಸಾಂದ್ರೈಶ್ವರ್ಯ ಕುಬೇರ ಈಶದಿಕ್ಪಾ ಲಾದಿತ್ಯಶಶಿರಂಜನಾ | ಚಂದ್ರಾತ್ಮಜನುಭೌಮದೇವಗುರುತಾ | ಕವಿಮಂದ ಗ್ರಹಂಗಳಂ | ಸಾಂದ್ರಾಗೀಹ ಸಮಸ್ತಗಿರೀ ವಧುವರಾ | ಕುರ್ಯಾತ್ಸದಾ ಮಂಗಳಂ 5 ಶ್ರೀ ಮತ್ಸ್ಯಾಕೃತಿ ಕೂರ್ಮನಾಗಿ ವರಹಾ | ನರಸಿಂಹನೆಂದೆ ನಿಸಿದಾ | ವಾಮನಾಭೃಗುವರ್ಯರಾಮರಘುಪಾ | ಯದುವಂಶದಲಿ ಜನಿಸಿದಾ | ತಾ ಮತ್ತೇ ನಿಜ ಬೌದ್ಧಕಲ್ಕಿ ಎನಿಸೀ | ತಾಳ್ದಾವತಾರಂಗಳಂ | ಶ್ರೀ ಮನೋಹರ ದೇವಕೀ ವಧುವರಾ | ಕುರ್ಯಾತ್ಸದಾ ಮಂಗಳಂ 6 ಕಾಶೀ ಕಂಚಿ ಅವಂತಿಕಾ ವರಪುರೀ | ದ್ವಾರಾವತೀ ಮಥುರಾ | ದೋಷನಾಶಿಕ ಪುಣ್ಯಕ್ಷೇತ್ರ ಬದರೀ | ಶೇಷಾದ್ರಿವರ ಸೇತುಬಧ ತುಹಿನಾ | ರಜತಾದ್ರಿ ಸೈಲಂಗಳಂ | ಈ ಸಪ್ತಾಂಬುಧೀ ಸರ್ವದೀ ವಧುವರಾ | ಕುರ್ಯಾತ್ಸದಾ ಮಂಗಳಂ 7 ದಶರಥಾತ್ಮಜನಾದ ರಾಮಜಗದೀ | ಜನಕಾತ್ಮಜಾ ಸೀತೆಯಾ | ಕುಶಲದೀ ನರಲೀಲೆಯಿಂದ ಮೆರೆವಾ ವೈಭವ ಸಂಗsತಿಯಾ ಉಸರೀದಾ ಗುರುಮಹಿಪತಿಸುತ ಕ- ನ್ನಡ ಭಾಡೆ ಶ್ಲೋಕಂಗಳಂ | ವಸುಧೆಯಲಿ ಸ್ಮರಿಸುವವರಿಂಗೆ ಕೊಡುವಾ | ರಘುನಾಥ ಜಯಮಂಗಳಂ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ) ಹರಿಕಥಾಮೃತಸಾರ ಶ್ರೀಮ- ದ್ಗುರುವರ ಜಗನ್ನಾಥದಾಸರ ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ ಪರಮಪಂಡಿತಾಭಿಮಾನಿಗಳು ಮ- ತ್ಸರಿಸಲೆದೆಗಿಚ್ಚಾಗಿ ತೋರುವು- ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1 ಭಾಮಿನಿಯ ಷಟ್ಪದಿಯ ರೂಪದ- ಲೀ ಮಹಾದ್ಭುತ ಕಾವ್ಯದಾದಿಯೊ- ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ ಯಾಮಯಾಮಕೆ ಪಠಿಸುವರ ಸು- ಧಾಮಸಖ ಕೈಪಿಡಿಯಲೋಸುಗ ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2 ಸಾರವೆಂದರೆ ಹರಿಕಥಾಮೃತ ಸಾರವೆಂಬುವುದೆಮ್ಮ ಗುರುವರ ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ ಸಾರಥಿಯ ಬಲಗೊಂಡು ಸಾರಾ- ಸಾರಗಳ ನಿರ್ಣೈಸಿ ಪೇಳ್ದನು ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3 ದಾಸವರ್ಯರ ಮುಖದಿ ನಿಂದು ರ- ಮೇಶನನು ಕೀರ್ತಿಸುವ ಮನದಭಿ- ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ ಈ ಸುಲಕ್ಷಣ ಕಾವ್ಯದೋಳ್ ಯತಿ ಪ್ರಾಸಗಳಿಗೆ ಪ್ರಯತ್ನವಿಲ್ಲದೆ ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4 ಪ್ರಾಕೃತೋಕ್ತಿಗಳೆಂದು ಬರಿದೆ ಮ- ಹಾಕೃತಘ್ನರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಟಾದ ಬಳಿಕ ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5 ಶ್ರುತಿಗೆ ಶೋಭನವಾಗದೊಡೆ ಜಡ ಮತಿಗೆ ಮಂಗಳವೀಯದೊಡೆ ಶ್ರುತಿ ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ ಮಥಿಸಿ ಮಧ್ವಾಗಮಪಯೋಬ್ಧಿಯ ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6 ಸಕ್ತಿ ಸಲ್ಲದು ಕಾವ್ಯದೊಳು ಪುನ- ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ- ಭಕ್ತಿ ವಿಷಮಗಳಿರಲು ಜೀವ- ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7 ಆಶುಕವಿಕುಲಕಲ್ಪತರು ದಿ- ಗ್ದೇಶವರಿಯಲು ರಂಗನೊಲುಮೆಯ ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು ಈ ಸುಲಕ್ಷಣ ಹರಿಕಥಾಮೃತ ಸಾರ ದೀರ್ಘ ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8 ಪ್ರಾಸಗಳ ಪೊಂದಿಸದೆ ಶಬ್ದ ಶ್ಲೇಷಗಳ ಶೋಧಿಸದೆ ದೀರ್ಘ ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ ದೂಷಕರು ದಿನದಿನದಿ ಮಾಡುವ ದೂಷಣವೇ ಭೂಷಣವು ಎಂದುಪ- ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9 ಅಶ್ರುತಾಗಮಭಾವ ಇದರ ಪ- ರಿಶ್ರಮವು ಬಲ್ಲವರಿಗಾನಂ- ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ ಮಿಶ್ರರಿಗೆ ಮರೆಮಾಡಿ ದಿತಿಜರ ಶಸ್ತ್ರದಲಿ ಕಾಯದಿಪ್ಪರಿದರೊಳು- ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10 ನಿಚ್ಚ ನಿಜಜನ ಮೆಚ್ಚ ಗೋಧನ ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ ಉಚ್ಚವಿಗಳಿಗೆ ಪೊಚ್ಚ ಪೊಸದೆನ- ಲುಚ್ಚರಿಸಿದೀ ಸಚ್ಚರಿತ್ರೆಯ ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11 ಸಾಧು ಸಭೆಯೊಳು ಮೆರೆಯೆ ತತ್ವಸು- ಬೋಧವೃಷ್ಟಿಯ ಗರೆಯೆ ಕಾಮ ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ ವಾದಿಗಳ ಪಲ್ಮುರಿಯೆ ಪರಮವಿ- ನೋದಿಗಳ ಮೈ ಮರೆಯಲೋಸುಗ ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12 ವ್ಯಾಸತೀರ್ಥರ ಒಲವೊ ವಿಠಲೋ- ಪಾಸಕ ಪ್ರಭುವರ್ಯ ಪುರಂದರ ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ ಕೇಶವನ ಗುಣಮಣಿಗಳನು ಪ್ರಾ- ಣೇಶಗರ್ಪಿಸಿ ವಾದಿರಾಜರ ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13 ಹರಿಕಥಾಮೃತಸಾರ ನವರಸ ಭರಿತ ಬಹುಗಂಭೀರ ರತ್ನಾ- ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ ಸರಸ ನರಕಂಠೀರವಾಚಾ- ಜನಿತ ಸುಕುಮಾರ ಸಾತ್ವೀ- ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14 ಅವನಿಯೊಳು ಜ್ಯೋತಿಷ್ಮತಿಯ ತೈ- ಲವನು ಪಾಮರನುಂಡು ಜೀರ್ಣಿಸ- ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ ಶ್ರವಣಮಂಗಳ ಹರಿಕಥಾಮೃತ ಸವಿದು ನಿರ್ಗುಣಸಾರಮಕ್ಕಿಸ- ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15 ಅಕ್ಕರದೊಳೀ ಕಾವ್ಯದೊಳು ಒಂ- ದಕ್ಕರವ ಬರೆದೋದಿದವ ದೇ- ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ ಲೆಕ್ಕಿಸದೆ ಲೋಕೈಕನಾಥನ ಭಕ್ತಿಭಾಗ್ಯವ ಪಡೆದ ಜೀವ ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16 ಒತ್ತಿ ಬಹ ವಿಘ್ನಗಳ ತಡೆದಪ ಮೃತ್ಯುವಿಗೆ ಮರೆಮಾಡಿ ಕಾಲನ ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ ಒತ್ತಿಗೊಳಿಸಿ ವನರುಹೇಕ್ಷಣ ನೃತ್ಯಮಾಡುವನವನ ಮನೆಯೊಳು ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17 ಆಯುರಾರೋಗ್ಯೈಶ್ವರ್ಯ ಯಶ ಧೈರ್ಯ ಬಲ ಸಮಸಹಾಯ ಶೌರ್ಯೋ ದಾರ್ಯ ಗುಣಗಾಂಭೀರ್ಯ ಮೊದಲಾದ ಆಯತಗಳುಂಟಾಗಲೊಂದ- ಧ್ಯಾಯ ಪಠಿಸಿದ ಮಾತ್ರದಿಂ ಶ್ರವ- ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18 ಕುರುಡ ಕಂಗಳ ಪಡೆವ ಬಧಿರನಿ- ಗೆರಡುಕಿವಿ ಕೇಳ್ವಹವು ಬೆಳೆಯದ ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ ಬರಡು ಹೈನಾಗುವುದು ಕೇಳ್ದರೆ ಕೊರಡು ಪಲ್ಲವಿಸುವುದು ಪ್ರತಿದಿನ ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19 ನಿರ್ಜರತರಂಗಿಣಿಯೊಳನುದಿನ ಮಜ್ಜನಾದಿ ಸಮಸ್ತ ಕರ್ಮವಿ- ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ ಸಜ್ಜನರು ಶಿರತೂಗುವಂದದಿ ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20 ಸತಿಯರಿಗೆ ಪತಿಭಕುತಿ ಪತ್ನಿ ವ್ರತ ಪುರುಷರಿಗೆ ಹರಿಷ ನೆಲೆಗೊಂ- ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ ಸತತ ಮಂಗಳವೀವ ಬಹು ಸು- ಕೃತಿಗಳೆನಿಸುತ ಸುಲಭದಿಂ ಸ ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21 ಎಂತು ವರ್ಣಿಸಲೆನ್ನಳವೆ ಭಗ- ವಂತನಮಲ ಗುಣಾನುವಾದಗ- ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ ಚಿಂತನೆಗೆ ಬಪ್ಪಂತೆ ಬಹು ದೃ- ಷ್ಟಾಂತಪೂರ್ವಕವಾಗಿ ಪೇಳ್ದ ಮ- ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22 ಮಣಿಖಚಿತ ಹರಿವಾಣದಲಿ ವಾ ರಣಸುಭೋಜ್ಯ ಪದಾರ್ಥ ಕೃಷ್ಣಾ ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ ಪ್ರಣತರಿಗೆ ಪೊಂಗನಡ ವರವಾ ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23 ದುಷ್ಟರೆನ್ನದೆ ದುರ್ವಿಷಯದಿಂ ಪುಷ್ಟರೆನ್ನದೆ ಪೂತಕರ್ಮ ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣ ಕೈಪಿಡಿಯುವನು ಸತ್ಯ ವಿ- ಶಿಷ್ಟ ದಾಸತ್ವವನು ಪಾಲಿಸಿ ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24
--------------
ಶ್ರೀದವಿಠಲರು
(ಕೇಶವಾಯ ನಮಃ ದಿಂದ ಆರಂಭವಾಗುವ ಆಚಮನ ಸ್ತುತಿ)ಶ್ರೀನಿವಾಸಾಯ ನಮೋ ಪ.ಶ್ರೀನಿವಾಸಾಯ ಶತಭಾನುಪ್ರಕಾಶಾಯಶ್ರೀನಿವಾಸಾಯ ನಿಜ ಭಕ್ತಜನಪೋಷಾಯಶ್ರೀನಿವಾಸಾಯ ಪರಮಾನಂದಘೋಷಾಯ ಅ.ಪ.ದೋಷಗಂಧವಿದೂರ ಕೇಶಿಮುಖದಾನವ ವಿ-ನಾಶವಿಧಿಭವಸುಖನಿವಾಸ ವಾಸುಕಿಶಯನವಾಸವಾದ್ಯಮರಗಣಪೋಷ ಪಾವನವೇಷ ಶ್ರೀಶ ನಿರ್ಗತವಿಶೇಷದಾಸಜನಹೃದಯಾಬ್ಧಿಭೇಶ ಕೌಸ್ತುಭಮಣಿವಿ-ಭೂಷ ಭೂತಾತ್ಮ ಭವಪಾಶಹರ ಪರತರ ದ-ಯಾ ಸಮುದ್ರ ವಿನಿದ್ರ ಭೂಶಯನ ಭೂರಿಪ್ರದಕೇಶವಾಯ ನಮೋನಮಃ 1ಕ್ಷೀರಸಾಗರವಾಸ ಶ್ರೀರಮಾಪ್ರಾಣೇಶಸಾರಭೋಕ್ತøಸ್ವತಂತ್ರ ಚಾರುಷಡ್ಗುಣಭರಿತನಾರದಾದಿಮುನೀಂದ್ರವಾರಸನ್ನುತಪಾದನೀರರುಹದ್ವಂದ್ವನೆವಾರಿಜಾಸನಮುಖ್ಯಸುರರುತಿಳಿಯರು ನಿನ್ನಭೂರಿಮಹಿಮೆಗಳ ಸಾಕಾರವನು ಬಣ್ಣಿಸುವಧೀರನಾವನು ಮಹಾ ವೀರ ವಿಶ್ವಾಧಾರನಾರಾಯಣಾಯ ನಮೋ 2ವೇದವೇದ್ಯನೆ ದುರಿತಶೋಧನೆ ದೈತ್ಯಗಣ-ಛೇದಕನೆ ಸುರಸುಪ್ರಸಾದಕನೆ ಭಕ್ತಜನ-ಮೋದದಾಯಕ ಸ್ವಗತ ಭೇದವರ್ಜಿತಸಮಾನಾಧಿಕ್ಯರಹಿತ ಸತತಆದಿತ್ಯ ಶತಕೋಟಿತೇಜೋವಿರಾಜ ಮಹ-ದಾದಿಕಾರಣ ಮಧುವಿರೋಧಿ ಮಂಗಲಸುಖಾಂ-ಬೋಧಿ ಪದ್ಮಾಲಯವಿನೋದಿ ರಾಧಾರಮಣಮಾಧವಾಯ ನಮೋನಮಃ 3ಇಂದಿರಾಹೃದಯಾಬ್ಧಿ ಚಂದ್ರ ಚಾರ್ವಂಗ ಮುಚು-ಕುಂದಾಪ್ತ ಸರ್ವಶ್ರುತಿವೃಂದಪ್ರತಿಪಾದ್ಯ ಸಾ-ನಂದ ಭರಿತ ಕಾಳಿಂದೀರಮಣ ರಾಮಚಂದ್ರಸನ್ನುತಮಹೇಂದ್ರವಂದಾರುಜನತ್ರಿದಶಮಂದಾರ ಕೋಮಲಿತವೃಂದಾವನವಿಹಾರ ಕಂದರ್ಪಜನಕ ಬಾ-ಳೇಂದುಶೇಖರಸಖ ಸನಂದನಾರ್ಚಿತ ಶ್ರೀಗೋವಿಂದಾಯತುಭ್ಯಂ ನಮಃ 4ಜಿಷ್ಣುರಥಸಾರಥಿ ತ್ರಿವಿಷ್ಟಪಸಭಾಧ್ಯಕ್ಷಮುಷ್ಟಿಕಾಸುರವೈರಿ ಮುನಿಜನಮನೋಹಾರಿಮುಟ್ಟಿ ಭಜಿಪರ ಮನೋಭೀಷ್ಟವ ಸಲ್ಲಿಸುವ ಶ್ರೇಷ್ಠ ಪೂರ್ಣಬ್ರಹ್ಮನೇಭ್ರಷ್ಟಸಂಸಾರದೊಳು ನಷ್ಟ ಬುದ್ಧಿಗಳಿಂಗೆತುಷ್ಟಿಯನು ನೀನಿತ್ತು ಸಲಹೊ ಸಾಮಜವರದಬೆಟ್ಟದೊಡೆಯನೆ ಕೃಪಾದೃಷ್ಟಿಯಿಂದಲಿನೋಡುವಿಷ್ಣವೇತುಭ್ಯಂ ನಮೋ 5ವಿಧಿಭವಾದಿ ಸಮಸ್ತ ತ್ರಿದಶಜನಸುಖದಾತಬುಧಜನಪ್ರಿಯ ಭೂತಭಾವನ ಜಗನ್ನಾಥಪದುಮಾಕ್ಷ ಪಾಂಡವಪ್ರತಿಷ್ಠಾಪನಾಚಾರ್ಯಮದನಕೋಟಿಸ್ವರೂಪವಿದುರನಾಲಯದಲ್ಲಿ ಪಾಲುಂಡ ಬ್ರಹ್ಮಾಂಡ-ಕಧಿಪತಿ ಕಲಿಮಲನಾಶ ಕವಿಜನಮನೋಲ್ಲಾಸವಿಧುಮಂಡಲಸ್ಥ ಸದ್‍ಹೃದಯಪಂಕಜವಾಸಮಧುಸೂದನಾಯ ನಮೋ 6ಅಕ್ರೂರವರದ ಸದತಿಕ್ರಮರ ಗೆಲಿದ ಹಯ-ವಕ್ತ್ರವೈಕುಂಠಾಖ್ಯ ಪುರವಾಸ ಜಗದೀಶಶುಕ್ರ ಶಿಷ್ಯರನೆಲ್ಲ ಪರಿಹರಿಸಿ ಪಾಲಿಸಿದೆ ಶಕ್ರಾದಿಸುರಗಣವನುಚಕ್ರ ಶಂಖ ಗದಾಬ್ಜಧರ ಚತುರ್ಭುಜ ದೇವ-ಚಕ್ರವರ್ತಿಯನಂತಕೀರ್ತಿ ಪಾವನಮೂರ್ತಿನಕ್ರಮದಹರನಾದ ಬ್ರಹ್ಮ ಗಂಗಾಪಿತತ್ರಿವಿಕ್ರಮಾಯ ನಮೋನಮಃ 7ರಾಮಣೀಯಕ ವಪು ನಿರಾಮಯ ನಿರಾಶ್ರಯ ಸು-ದಾಮಸಖ ಪರಿಪೂರ್ಣಕಾಮ ಕೈರವದಳ-ಶ್ಯಾಮ ಕಲ್ಯಾಣ ನಿಸ್ಸೀಮ ಮಹಿಮನೆಸುಜನಸ್ತೋಮಸುರಕಾಮಧೇನುಗೋಮಿನೀಪತಿ ಗೋಗಣಾನ್ವಿತನೆ ಗೋಪೀಲ-ಲಾಮ ಗೋವರ್ಧನೋದ್ಧಾರ ಗೋವಿದಾಂಪತಿ ವಿ-ರಾಮ ವಿಷ್ವಕ್ಸೇನ ವಿಶ್ವತೈಜಸಪ್ರಾಜÕವಾಮನಾಯ ನಮೋನಮಃ8ಆದಿಮಧ್ಯಾಂತವಿರಹಿತ ನಿಖಿಲಸಾರ್ಚಿತ ವಿ-ರಾಧಭಂಜನ ಭವಾಂಬೋಧಿಕುಂಭಜ ಭಜಕ-ರಾದವರನುದ್ಧರಿಪ ಬೋಧರೂಪನೆಚತುಷ್ಟಾದ ಪಾವನಚರಿತನೆಗಾಧಿಜಾಧ್ವರಪಾಲ ಗರುಡಧ್ವಜ ದಯಾಳುನಾದಬಿಂದು ಕಲಾತೀತ ರುಕ್ಮಿಣಿನಾಥಬಾದರಾಯಣನೆ ನಿರುಪಾಧಿ ಮಾಯಾತೀತಶ್ರೀಧರಾಯ ನಮೋನಮಃ 9ಪಾಶಧರನುತ ವೆಂಕಟೇಶ ಸರ್ವೇಂದ್ರಿಯಪ್ರ-ಕಾಶ ಪಾಲಿತನಿಖಿಳಭೂಸುರವ್ರಜ ಮಂದ-ಹಾಸಮುಖ ನವಕುಂದಭಾಸರದನವಿರಾಜದೂಷಣಾದ್ಯ ಸುರಹರನೆಈಶಪತಿಸೇವ್ಯಾಂಬರೀಶನೃಪವರದ ಪರ-ಮೇಶ ಕೋವಳಪೀತವಾಸ ಕರ್ದಮಶುಕಪ-ರಾಶರಾದ್ಯಮಿತಯೋಗೀಶರಕ್ಷಕಹೃಷೀಕೇಶಾಯ ತುಭ್ಯಂ ನಮೋ 10ಶುದ್ಧ ತ್ರಿಗುಣಾತೀತ ತ್ರಿವ್ರತ ತ್ರಿಜಗತ್ಪಾಲಪ್ರದ್ಯುಮ್ನ ಪ್ರಥಮಾಂಗದೊಡೆಯ ಪರಮಾತ್ಮ ಸುರ-ಸಿದ್ಧ ಪೂಜ್ಯ ಪುಂಡರೀಕದಳಾಕ್ಷಬುದ್ಧಬುಧಜನಸುಲಭಮಧ್ವವಲ್ಲಭ ಮಂತ್ರಮೂರ್ತಿ ಕ್ಷೀರಾಬ್ಧಿ ಶ್ವೇತದ್ವೀಪವೈಕುಂಠಮಂದಿರತ್ರಯ ಸಾಧು-ಹೃದ್ಯ ಭಕ್ತದ್ವೇಷಭಿದ್ಯ ನಿತ್ಯಾತ್ಮ ಶ್ರೀಪದ್ಮನಾಭಾಯ ನಮಃ11ಸಾಮಗಾನವಿನೋದ ಸಾಧುಜನಸುಖಬೋಧಕಾಮಿತಾರ್ಥಪ್ರದಾತ ಕಪಿಲಋಷಿ ಪ್ರಖ್ಯಾತವ್ಯೋಮಯಾನವರೂಥ ಓಂಕಾರಭರಿತ ರಘುರಾಮಸಮರಂಗ ಭೀಮನಾಮಧಾರಕರ ಪರಿಣಾಮರೂಪಕ ಸುಜನ-ಕ್ಷೇಮಪ್ರಾಪಕ ನೀಲಜೀಮೂತನಿಭವರ್ಣಭೌಮಪುರುಷೋತ್ತಮ ನಿಯಾಮಕನೆ ರಕ್ಷಿಸೈದಾಮೋದರಾಯ ನಮೋ 12ಶಂಕರಾಂತರ್ಯಾಮಿ ಶಾಙ್ರ್ಗಪಾಣಿ ಶರಣ್ಯವೆಂಕಟಾಚಲಸದಾಲಂಕಾರ ಶೇಷಪರಿ-ಯಂಕ ಪ್ರವಿತತನಿಷ್ಕಳಂಕಚಾರಿತ್ರ ಸುಸಂಕುಲಾರ್ಚಿತ ಪದಯುಗಲಂಕಾಧಿಪತ್ಯವ ವಿಭೀಷಣನಿಗೊಲಿದಿತ್ತಓಂಕಾರನಿಧನ ಸಾಮಕಭಕ್ತರಾನೇಕಸಂಕಟವ ಪರಿಹರಿಪ ಸತ್ಯ ಸಂಕಲ್ಪ ಶ್ರೀಸಂಕರ್ಷಣಾಯ ನಮೋ13ಈ ಸಮಸ್ತ ಜಗತ್ತು ನಿನ್ನುದರದೊಳಗಿಹುದುಈ ಸಕಲಜೀವರೊಳಗಿಹ ನಿತ್ಯನಿರ್ಮುಖ್ಯಸೂಸಿಬಹ ಸಂಸಾರಸಾಗರದಿ ಮುಳುಗಿದೆನುನೀ ಸಲಹೊ ದೇವದೇವಭೂಸಲಿಲಪಾವಕಾಕಾಶಾದಿ ಭೂತಾಧಿ-ವಾಸ ರಾಕ್ಷಸವನಹುತಾಶ ನಾನಾ ರೂಪ-ವೇಷಧಾರಕ ನರಾವೇಶ ಪಾಲಿಸು ಎನ್ನವಾಸುದೇವಾಯ ನಮೋ 14ಅದ್ವಿತೀಯನೆಯಮಿತವಿಕ್ರಮನೆ ಗುಣಕಾಲವಿದ್ಯಾಪ್ರವರ್ತಕನೆ ವಿಶ್ವಾದಿ ಸಾಹಸ್ರಸಿದ್ಧನಾಮ ನರನಾರಾಯಣಪರಾಯಣನೆ ಬುದ್ಧಿಪ್ರೇರಕಪ್ರೇರ್ಯನರುದ್ರರೂಪಪ್ರತಾಪ ಋಗ್ಯಜುಸ್ಸಾಮಶ್ರುತಿ-ವೇದ್ಯ ಬ್ರಹ್ಮಾಂಡಕೋಟಿಗಳ ಸಲೆ-ಬದ್ಧಕಮನೀಯರೂಪಸುತಪದುರಾಪಪ್ರದ್ಯುಮ್ನಾಯ ತುಭ್ಯಂ ನಮಃ 15ಉದ್ಧವಾದಿ ಸಮಸ್ತ ಭಾಗವತಜನಕಮಲ-ಮಧ್ಯಚರರಾಜಹಂಸಾಯ ಮಾನಸದಶ್ರದ್ಧೆಯಂ ಕೊಟ್ಟು ರಕ್ಷಿಸು ಧೊರೆಯೆಶ್ರೀಹರಿಯೆ ವೈದ್ಯನಾಥವಿಧಾತನೆಬದ್ಧನಾದೆನು ಕರ್ಮಪಾಶದಿಂದ ದೊರೆ ಸಿಕ್ಕಿ-ಬಿದ್ದೆ ಕೈಪಿಡಿದೆಬ್ಬಿಸೆನ್ನನೆಲೆದೇವ ಮರೆಹೊದ್ದಿದೆನು ಮೈದೋರು ಚಿನುಮಯಾತ್ಮಕನೆಅನಿರುದ್ಧಾಯ ತುಭ್ಯಂ ನಮಃ 16ಕ್ಷರ ಪುರುಷರೆಲ್ಲ ಬ್ರಹ್ಮಾದಿ ಜೀವರು ರಮಾಕ್ಷರಪುರುಷಳೆನಿಸುವಳು ನೀನೆ ಉತ್ತಮ ಪರುಷಪರತರಾವ್ಯಯಲೋಕಭರಿತಮಂಗಲರಿತ ಗುರುತಮ ಗುಣಧ್ಯಕ್ಷನೆಶರಧಿಸೇತುನಿಬದ್ಧ ಶಬರಿ ಹಣ್ಣನು ಮೆದ್ದಶರಭಂಗಮುನಿಪಾಲ ಶಮಿತದಾನವಜಾಲಧುರವಿಜಯ ವಿಜಯಮೈದುನ ಕೃಷ್ಣ ರಕ್ಷಿಸೈಪುರುಷೋತ್ತಮಾಯನ್ನಮೋ 17ಅಕ್ಷಯಾತ್ಮನೆ ವಿಶ್ವರಕ್ಷಕನೆ ವಿಶ್ವಭುಗ್-ವಿಶ್ವತೋಮುಖ ವಿಶ್ವತೋಬಾಹು ಕರುಣಾಕ-ಟಾಕ್ಷದಿಂ ನೋಡೆನ್ನಮ್ಯಾಲೆದಯಮಾಡು ಶ್ರೀವಕ್ಷಸ್ಥಲನಿವಾಸನೆಲಕ್ಷ್ಮಣಾಗ್ರಜನೆ ಸುವಿಲಕ್ಷಣನೆ ಸುಜ್ಞಾನ-ಮೋಕ್ಷದಾಯಕ ಯಜÕಮೂರ್ತಿ ರೂಪತ್ರಯ ಮ-ಹೋಕ್ಷಧ್ವಜನಂ ಮೋಹಿಸಿದ ಮೋಹಕಲ್ಪಅಧೋಕ್ಷಜಾಯ ನಮೋನಮಃ 18ಕ್ರೂರಕರ್ಮಿ ಹಿರಣ್ಯಕಶಿಪುವಂ ಕೊಂದ ದು-ರ್ವಾರದುರಿತಾಬ್ಧಿಬಾಡಬ ಭಕ್ತವತ್ಸಲ ಮ-ಹಾರವಕುಲಿಶ ಶತಕೋಟಿಸದೃಶನಶಿರಪ್ರಕರಧೀರ ಪ್ರಹ್ಲಾದಾಭಿವರದಭೂರೀಕರರೂಪ ಭೂಮಕೀರ್ತಿಕಲಾಪಸಾರವಜ್ರಸ್ತಂಭದಿಂ ಬಂದ ನಂದ ಸುಕು-ಮಾರಮಾರ್ಕಾಂಡೇಯವರದ ಲೋಕಶರಣ್ಯನಾರಸಿಂಹಾಯ ನಮೋ 19ನಿಶ್ಚಲಾತ್ಮ ನಿರೀಹ ನಿರ್ವಿಕಾರಾನಂತಪ್ರೋಚ್ಛ ಸರ್ವಗ ಸದಾನಂದ ಪರಿಪೂರ್ಣ ತ-ನ್ನಿಚ್ಛೆಯಿಂದಲಿ ಜಗವ ಪಾಲಿಸುವನಿರ್ಮಿಸುವ ಆಶ್ಚರ್ಯಕೃತಸಲೀಲಮುಚ್ಚುಮರೆ ಯಾಕಿನ್ನು ಮುಗಿದು ಬೇಡುವೆ ಕೈಯಸ್ವಚ್ಛತರ ಭಕ್ತಿಭಾಗ್ಯವನಿತ್ತು ಸಲಹೊ ಮಹ-ಕಚ್ಛಪನೆ ಕಾಳೀಯಮರ್ದನಮಹಿತಶ್ರೀಮದಚ್ಯುತಾಯ ನಮೋನಮಃ 20ಚೈದ್ಯಮಥನ ಮನೋಜÕಶುದ್ಧಾತ್ಮ ಸರ್ವಜÕಯುದ್ಧದಲಿ ಸೈಂಧವನ ಶಿರವ ಕೆಡಹಿಸಿ ಜಯವಹೊದ್ದಿಸಿದ ಪಾರ್ಥನಿಂಗೆಇದ್ದು ನೀ ಹೃದಯದೊಳು ತಿದ್ದೆನ್ನ ಮತಿಯ ಸ್ಮರ-ವಿದ್ದ ಮಾನಸವ ಪಾದದ್ವಯದೊಳಿರಿಸೈ ದ-ಯಾದ್ರ್ರಚಿತ್ತ ಸ್ವಭಕ್ತಸಂಸಾರಿ ಕಾಯೆಜನಾರ್ದನಾಯ ನಮೋನಮಃ 21ಮಂದಾಕಿನಿಯ ಪಡೆದ ಮಾತೆಯ ಶಿರವ ಕಡಿದನಂದಗೋಪನ ಕಂದನೆನಿಸಿ ಬಾಲಕತನದಚಂದಮಂ ತೋರಿಸಿದ ಕುಬುಜೆಗಂಧಕೆ ಒಲಿದಸುಂದರೀರಮಣ ಜಯತುತಂದೆತಾಯಿಯು ಸರ್ವ ಜೀವರ್ಗೆ ನೀನೆ ನಿಜ-ವೆಂದು ತಿಳಿಯದೆ ಮಾಯೆಯಿಂದ ಮಮಕರಿಸಿ ಪರ-ನಿಂದಾದಿ ದೋಷಗಳ ಮಾಡಿ ಬಳಲುತ್ತಿಹರ್ಉಪೇಂದ್ರಾಯ ತುಭ್ಯಂ ನಮಃ 22ಸ್ಥಿರಚರಾತ್ಮಕ ಧೇನುಚರ ದೇವಕೀಜಠರ-ಶರಧಿಗುರುರಾಜ ಭಾಸ್ಕರಮಂಡಲಾಂತಸ್ಥಪರಮತೇಜೋಮಯ ಪುರಾಣಪುರುಷೇಶ್ವರನೆದುರಿತದೂರ ಗಭೀರನೆನಿರತಿಶಯನಿಜನಿರ್ವಿಕಲ್ಪ ಕಲ್ಪಾಂತಸಾ-ಗರದಿ ವಟಪತ್ರಪುಟಶಯನ ಪುಣ್ಯಶ್ರವಣಪುರುಷನಾಮಕ ಪುಷ್ಕರಾಕ್ಷ ಶ್ರೀಕರನೆ ಜಯಹರಯೇ ನಮೋನಮಸ್ತೇ 23ವೃಷ್ಟಿಕುಲತಿಲಕ ಸರ್ವೇಷ್ಟದಾಯಕ ನಿಮಿತ-ಶಿಷ್ಟಜನಪರಿಪಾಲ ಶಿವಗೌರೀ ಗಣಪಗುಹ-ಸೃಷ್ಟಿಶಕ್ತಿಯನೀವ ಗೋವರ್ಧನಾಚಲವ ಬೆಟ್ಟಿನಿಂದೆತ್ತಿದ ಮಹಾದುಷ್ಟ ನರಕಾದಿದಾನವರ ಮರ್ದಿಸಿದ ಜಗ-ಜಟ್ಟಿ ಜನಿಮೃತಿಭಯವಿದೂರ ವಿಷಮಯಸರ್ಪ-ಶ್ರೇಷ್ಠನಂ ಘಾತಿಸಿದ ರಾಮಾನುಜನೆಹರೇ ಕೃಷ್ಣಾಯ ತುಭ್ಯಂ ನಮಃ 24ಅಕ್ಷೀಣ ಬಲಶಾಲಿಯಾಂಜನೇಯನಿಗಿತ್ತೆಅಕ್ಷಯದ ಬ್ರಹ್ಮಪದವಿಯ ಲೋಕದೊಳಗ್ಯಾವ-ದಕ್ಷಮರ್ದನ ನಿನಗೆ ಸರ್ವತಂತ್ರಸ್ವತಂತ್ರ ಪಕ್ಷೀಂದ್ರಭುಜವಿರಾಜಸಾಕ್ಷಿಚೈತನ್ಯರೂಪನೆ ಕಮಲನಾಭನೆ ಮು-ಮುಕ್ಷುಜನಧ್ಯಾನಗಮ್ಯನೆ ಗದಾಧರ ದನುಜ-ಶಿಕ್ಷಕ ಪರೀಕ್ಷಕನೆ ಪವನವಾಹನಲಕ್ಷ್ಮೀನಾರಾಯಣಾಯ ನಮೋ25
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಆತ್ಮನಿವೇದನ ಭಕುತಿ ತನ್ನಾತ್ಮವನೀವ ಪರಮಾತ್ಮ ವಿಶ್ವಾತ್ಮಗೆ ಪ.ಸರ್ವಕರ್ಮಕರ್ತ ಸರ್ವಕಾಲವರ್ತಸರ್ವಕಾರ್ಯಕೆಹರಿಸ್ವತಂತ್ರನುಸರ್ವಾರ್ಥದಲಿ ಪೂರ್ಣಸರ್ವೇಂದ್ರಿಯ ನಿಯಂತ್ರಸರ್ವದೇಶ ಕಾಲವ್ಯಾಪ್ತ ಗೋಪ್ತನೆಂದು 1ಕಾಸು ಕೋಶಗೇಹದೇಹೇಂದ್ರಿಯ ಪ್ರಾಣಸ್ತ್ರೀ ಸುತ ಪ್ರಿಯ ದಾಸಿ ದಾಸರನುಈಶಗರ್ಪಣೆ ಮಾಡಿ ದಾಸದಾಸನಾಗಿಲೇಶವು ತನಗೆನ್ನದೆ ಸರ್ವಾರ್ಪಿಸುವುದು 2ಜನ್ಮ ಜನ್ಮಾಂತರ ಧರ್ಮ ಕರ್ಮಂಗಳುನಿರ್ಮಲ ಜ್ಞಾನ ವೈರಾಗ್ಯ ಭಕ್ತಿಸ್ವರ್ಮಂದಿರ ಭವಯಾತ್ರೆ ಗರ್ಭಯಾತ್ರೆರಮೆಯ ರಮಣಗರ್ಪಣವೆಂಬ ನಿಷ್ಠೆಯ 3ಅಹರ್ನಿಶಿಶ್ವಾಸೋಚ್ಚ್ವಾಸಾವಸ್ಥಾತ್ರಯಬಹು ಜಪತಪ ಅರ್ಚನೆಸಂಭ್ರಮಬಹುಭಿ:ಶ್ರವಣ ಬಹುಧಾಶ್ರವಣ ಮನನಶ್ರೀಹರಿ ಧ್ಯಾನ ಧ್ಯಾಸಾತ್ಮಾಥರ್Àದಿ 4ಅಲಂಬುದ್ಧಿಯನು ಬಿಟ್ಟು ಅಲಸಮತಿಯನು ಸುಟ್ಟುಅಲಸಲಕ್ಷಣ ವಿಸ್ಮøತಿಯನುನೀಗಿಅಲವಬೋಧಾಚಾರ್ಯ ಮತದವರನು ಪೊಂದಿಲಲಿತ ಪ್ರಸನ್ವೆÉಂಕಟ ಚತುರಾತ್ಮಗೆ 5
--------------
ಪ್ರಸನ್ನವೆಂಕಟದಾಸರು
ಮದ್ದು ಮಾಡಬಾರದೇನೇ ಮುದ್ದು ಮಾಯಾದೇವಿ ? ಪ.ಮುದ್ದು ಬಾಲಕೃಷ್ಣನಲ್ಲಿ ಮನಸು ನಿಲ್ಲುವ ಹಾಗೆ ಅಪಕರಗಳಿಂದ ಹರಿಯ ಮಂ ದಿರದ ಕಸವ ತೆಗೆಯಲಿಕ್ಕೆ |ನಿರುತದಲ್ಲೂ ಬೇಸರಿಯದೆ ಹರುಷವು ಪುಟ್ಟವ ಹಾಗೆ 1ಶ್ರುತಿ - ರಾಮಾಯಣ ಶ್ರೀಭಾಗವತ ಪಂಚರಾತ್ರಾಗಮಾದಿಕಥೆಯ ಕೇಳುವುದಕೆ ಬಹಳ ರತಿಯು ಪುಟ್ಟುವ ಹಾಗೆ 2ದೇಹವು ಅನಿತ್ಯವೆಂದು ನೇಹದಿಂದ ಪೋಷಿಸದಲೆ |ಮಾಹೇಂದ್ರಾವರಜನ ಅಹ ರಹರವು ಭಜಿಸುವ ಹಾಗೆ 3ನರರಸ್ತವನ ಹೇಯವೆಂದು ಅರಗಳಿಗೆಯು ಅಗಲದಲೆ |ನರಹರಿಯ ಭಕ್ತರಿಗೆ ಶರಣುಹೋಗುವ ಹಾಗೆ 4ಮನಸು ವಾಕ್ಕಾಯಗಳಿಂದ ಸದ್ ಗುಣದಿ ಪುರಂದರವಿಠಲನಅನುರಾಗದಿಂ ಬಿಡದೆ ಪಾಡಿ ಕುಣಿದು ಕುಣಿದು ದಣಿವ ಹಾಗೆ 5
--------------
ಪುರಂದರದಾಸರು
ಶ್ರೀ ನರಹರಿ ತೀರ್ಥವಿಜಯ99ಪ್ರಥಮ ಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಅಶೇಷ ಗುಣಗಣಾಧಾರ ವಿಭು ಶ್ರೀ ರಮಣಹಂಸ ನಾಮಕ ಪರಮಾತ್ಮನಿಗೆ ನಮಿಪೆಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿವಂಶಜ ಗುರುಗಳು ಸರ್ವರಿಗು ನಮಿಪೆ 1ಅಚ್ಯುತಪ್ರೇಕ್ಷಾಖ್ಯ ಪುರುಷೋತ್ತಮಾರ್ಯಕರತೋಯಜೋತ್ಪನ್ನ ಆನಂದ ತೀರ್ಥರಿಗೆಕಾಯವಾಙÕನದಿಂದ ಶರಣಾದೆ ಸಂತತತೋಯಜಭವಾಂಡದ ಸಜ್ಜನೋದ್ಧಾರ2ಶ್ರೀವರ ವೇದವ್ಯಾಸನವತಾರಕನುಸರಿಸಿಭಾವಿ ಬ್ರಹ್ಮನು ಮುಖ್ಯ ವಾಯುದೇವದೇವೀಜಯಾಸಂಕರ್ಷಣಾತ್ಮಜನು ಈಭುವಿಯಲ್ಲಿ ತೋರಿಹ ಆನಂದ ತೀರ್ಥ 3ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇಬಲ ಕಾರ್ಯ ಮಾಡಿದ ಹನುಮಂತ ಭೀಮಕಲಿಯುಗದಿ ಈ ಭೀಮ ಅವತಾರ ಮಾಡಿಹನುಕಲಿಮಲಾಪಹ ಜಗದ್ಗುರು ಮಧ್ವನಾಗಿ4ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆ ನಮಿಪೆಸುಮನಸಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು5ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂಸುಮಹಿಮ ಹರಿದಾಸವರ್ಯರು ಸರ್ವರಿಗುಸನ್ಮನದಿ ಆ ನಮಿಪೆ ಸಂತೈಪರೆಮ್ಮ 6ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿದುಸ್ತರ್ಕ ದುರ್ಮತ ಅಟವಿಗಳ ಛೇದಿಸಿದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ 7ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವರಾಯರ ಸಂಗಡ ವಾದಕ್ಕೆ ನಿಂತು |ಭಾರಿಪಂಡಿತರತ್ನಶೋಭನ ಭಟ್ಟನುಶರಣಾಗಿ ಮಧ್ವರಾಯರ ಶಿಷ್ಯನಾದ 8ಶೋಭನ ಭಟ್ಟಾಖ್ಯ ಈಗುಣಗ್ರಾಹಿಯುಶುಭಪ್ರದೆ ಲೋಕಪಾವನಿವೃದ್ಧ ಗಂಗೆಎಂಬುವ ಗೋದಾವರೀ ತೀರದಲಿ ಮಧ್ವಅಬ್ಜಹಸ್ತದಿಕೊಂಡ ತುರ್ಯಾಶ್ರಮ 9ಸತ್ತತ್ವವಾದದ ಸೊಬಗನ್ನ ಮಧ್ವವದನಾಂಬುಜದಿಂದಕೇಳಿಸುಪವಿತ್ರಪದ್ಮನಾಭತೀರ್ಥಾಖ್ಯ ನಾಮವ ಹೊಂದಿದಮುದದಿಂದ ಈ ಮಹಾತ್ಮನು ಶೋಭನನು 10ಕಳಿಂಗ ರಾಜನ ಮಂತ್ರಿಯ ಕುಮಾರನುಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿಲೀಲಾವಿನೋದ ಚಟುವಟಿಕೆ ತೊರೆದವನು 11ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವವೇದ ವೇದಾಂತವಿದ್ಯೆಸರ್ವ ಹೊಂದಿಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನುವಿದ್ವಚ್ಛಿರೋಮಣಿ ಎಂದೆನಿಸಿಕೊಂಡ 12ರಾಮ ಮಹೇಂದ್ರಪುರಪ್ರಾಂತ್ಯಸ್ಥವಾದಿಗಜಸಿಂಹ ಶೋಭನ ಭಟ್ಟನು ಈಗತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದುನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ 13ಹಿತಕರ ಈಸುದ್ದಿ ಕೇಳಲಿಕ್ಕೇವೆಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ 14ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್ಸುದೃಢ ಜ್ಞಾನಿಯು ಋಜುಮಾರ್ಗ ಚರಿಪಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ 15ನರಹರಿ ತೀರ್ಥಾಖ್ಯ ಶುಭತಮನಾಮವಶಾಸ್ತ್ರಿಗೆ ಇತ್ತರು ಆನಂದ ಮುನಿಯುಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆಇರುವುದು ಎಂದರು ಸರ್ವಜÕ ಮುನಿಯು 16ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿಚರಿಸುವ ಕಾಲವು ಬರಲಿಕ್ಕೆ ಇದೆಯುಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು 17ಗಜಪತಿ ರಾಜನ ಅರಮನೆಯಲ್ಲಿರಾಜೀವೇಕ್ಷಣ ಮೂಲರಾಮನು ಸೀತಾರಾಜಭಂಡಾರದಲ್ಲಿ ಮಂಜೂಷದಲಿರಾಜಿಸುತ ಇಹರುಮೂರ್ತಿರೂಪದಲಿ18ಕಳಿಂಗದೇಶಾಧಿಪ ಗಜಪತಿಯ ವಂಶದಲಿಬಾಲರಾಜನು ಅವನ ಪ್ರತಿನಿಧಿಯಾಗಿಆಳುವುದು ರಾಜ್ಯವ ಎಂದು ಆಚಾರ್ಯರುಪೇಳಿದರು ನರಹರಿ ತೀರ್ಥ ಆರ್ಯರಿಗೆ 19ಬಾಲರಾಜನು ಯುವಕನಾಗಿ ರಾಜ್ಯವನ್ನುಆಳುವ ಯೋಗ್ಯತೆ ಹೊಂದಿದ ಮೇಲೆಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನಕೇಳಿತರಬೇಕು ಎಂದರು ಲೋಕ ಗುರುವು 20ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತುಸಾಧುಜನ ಉದ್ಧಾರ ಬೋಧಕ್ಕೆಪದ್ಮನಾಭತೀರ್ಥರ ತತ್ಕಾಲ ನಿಲ್ಲಿರಿಸಿಬಂದರು ಉಡುಪಿಗೆ ಪೂರ್ಣ ಪ್ರಮತಿಗಳು 21ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇಸಮಯ ಒದಗಿತು ರಾಣಿ ಬಿನ್ನೈಸಿದಳುಸ್ವಾಮಿ ತಾವೇ ರಾಜ್ಯ ಆಳಬೇಕೆಂದಳುಸಮ್ಮತಿಸಿದರು ಶ್ರೀ ನರಹರಿ ಮುನಿಯು 22ಮಂತ್ರಿಪದವಿಪರಂಪರೆ ಪ್ರಾಪ್ತವಾಗಿತಂದೆ ವಹಿಸಿದ್ದರುಅವರಮುಖದಿಂದಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದರೀತಿಯ ಅರಿತವರು ಈ ಹೊಸಯತಿಯು 23ನರಹರಿ ತೀರ್ಥರ ರಾಜ್ಯ ಆಡಳಿತದಲಿಪರಿಪರಿ ರಾಜತಂತ್ರಗಳ ಕೌಶಲ್ಯಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟಶತ್ರು ನಿಗ್ರಹ ಶಿಷ್ಟಪಾಲನಏನೆಂಬೆ24ದಂಡೆತ್ತಿ ಆಗಾಗ ಬರುತಿದ್ದ ಶಬರಾದಿತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನಕಂಟಕದುರ್ಮತಿಗಳಿಂದ ಕಾಪಾಡಿದರುಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ 25ಆಶ್ರಮೋಚಿತನಿತ್ಯಜಪಪೂಜ ಕಾರ್ಯಗಳುಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹಲೇಶವೂ ಕೊರತೆ ಇಲ್ಲದೆ ಮುದದಿಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು 26ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 27- ಇತಿ ಶ್ರೀ ಪ್ರಸನ್ನ ನರಹರಿತೀರ್ಥವಿಜಯಪ್ರಥಮೋದ್ಯಾಯಃ -ದ್ವಿತೀಯಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಶ್ರೀಕೂರ್ಮಕ್ಷೇತ್ರದಲಿ ಕೂರ್ಮೇಶ್ವರಾಲಯದಿಯೋಗಾನಂದ ನರಸಿಂಹಗೆ ಗುಡಿಯಯೋಗಿವರ ನರಹರಿತೀರ್ಥರು ಕಟ್ಟಿಸಿಯೋಗಾನಂದ ನರಸಿಂಹನ ಸ್ಥಾಪಿಸಿದರು 1ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲುಕೃತಜÕ ಮನದಿಂದ ಆ ಯುವಕರಾಜಇತ್ತನು ಸನ್ನಮಿಸಿ ನರಹರಿತೀರ್ಥರಿಗೆಸೀತಾರಾಮ ವಿಗ್ರಹದ ಮಂಜೂಷ 2ನರಹರಿತೀರ್ಥರು ಶ್ರೀಮದಾಚಾರ್ಯರಲಿನೇರವಾಗಿ ಪೋಗಿ ಸಮರ್ಪಿಸಲು ಆಗಶ್ರೀರಾಮ ಸೀತಾದೇವಿಯ ಮಧ್ವಮುನಿಕ್ಷೀರಾದಿ ಪಂಚಾಮೃತದಿ ಪೂಜಿಸಿದರು 3ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾಆರಾಧನಾರ್ಚನೆ ಮೂರು ತಿಂಗಳು ಹದಿ -ನಾರುದಿನ ತಾಮಾಡಿ ಪದ್ಮನಾಭತೀರ್ಥರುತರುವಾಯ ಪೂಜಿಸಲು ಆಜೆÕ ಮಾಡಿದರು 4ಮೂರನೇಬಾರಿ ಬದರಿಗೆ ಆಚಾರ್ಯರುತೆರಳಲು ಪದ್ಮನಾಭರು ತಾವು ಪೂಜೆಚರಿಸಿ ನಿಯಮನದಂತೆ ಆರು ವರ್ಷ ತರುವಾಯನರಹರಿತೀರ್ಥರಿಗೆ ಇತ್ತರು ಮೂರ್ತಿಗಳ 5ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆಬ್ರಹ್ಮದೇವರು ಮಾಡಿ ಸೂರ್ಯವಂಶಭೂಮಿಪಾಲಕ ಕೈಯಿಂದ ಪೂಜೆಯ ಕೊಂಡುಕ್ರಮದಿ ದಶರಥರಾಜ ಕರಕೆ ಲಭಿಸಿದವು 6ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇದಶರಥ ಆರಾಧಿಸಿದ ತರುವಾಯಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನುಶಿರಿಸೀತ ತಾ ಕೊಂಡಳು ಪೂಜೆಗಾಗಿ 7ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವಸೌಮಿತ್ರಿ ಆ ಮೂರ್ತಿಗಳನ್ನು ತಾನುಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡುನೇಮದಿ ಪೂಜಿಸುತ್ತಿದ್ದನು ಬಹುಕಾಲ 8ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿನಿಜಭಾವದಲಿ ಮಾಳ್ಪಅನುದಿನಅವನುರಾಜೀವೇಕ್ಷಣ ರಾಮನನ್ನು ತಾ ನೋಡದಲೆಭೋಜನ ಮಾಡಲಾರನು ಅಂಥಭಕ್ತ 9ವಿಪ್ರವರ ಅವಾತ ವೃದ್ಧಾಪ್ಯದಲಿಅರಮನೆ ದರ್ಬಾರ ಮಂಟಪಕೆ ಬಂದಶ್ರೀರಾಮಚಂದ್ರನು ರಾಜಕಾರ್ಯೋದ್ದೇಶಹೊರಗೆ ಹೋಗಿದ್ದನು ಏಳುದಿನ ಹೀಗೆ 10ಏಳು ದಿನವೂ ಆ ವಿಪ್ರೋತ್ತಮ ಊಟಕೊಳ್ಳದೇ ದೇಹಬಲ ಬಹು ಬಹುಕುಗ್ಗಿಮೆಲ್ಲನೆ ಎಂಟನೆ ದಿನ ಬಂದುಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ 11ಕಣ್ಣಿಗೆ ಏಳುದಿನ ಕಾಣದ ಶ್ರೀರಾಮಆನಂದಮಯಶ್ರೀನಿಧಿಯ ಕಂಡಲ್ಲೇಬ್ರಾಹ್ಮಣನು ಆನಂದ್ರೋದೇಕವು ಉಕ್ಕಿಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ 12ಏಳುದಿನ ಉಪವಾಸದಿಂದಲೇ ತನುವಿನಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆಕನಕಆಸನದಿಂದಲಿ ರಾಮಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ 13ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ 14ಅನುದಿನವೃದ್ಧ ದೆಶೆಯಲ್ಲಿ ಬರಬೇಡವುಅನಾಯಾಸದಿ ತನ್ನ ಪ್ರತಿಮೆಯಲ್ಲಿಕಾಣಬಹುದು ಎಂದು ಶ್ರೀರಾಮ ಪೇಳಿದನುಆನಂದದಿಕೊಂಡಬ್ರಾಹ್ಮಣ ಮೂರ್ತಿಗಳ15ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದವಿಪ್ರಯುಕ್ತ ಕಾಲದಿ ತನು ಬಿಡುವ ಸಮಯದಲಿವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದಸೀತಾರಾಮ ಪ್ರತಿಮೆಗಳ ಭಕ್ತಿಯಲಿ 16ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕಸುಮಹಾಭಕ್ತಿಯ ಮಾಳ್ಪ ಹನುಮಂತಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದಸಮ್ಮುದದಿ ಅರ್ಚಿಸಿದ ಸೀತಾರಾಮನ್ನ 17ಸೌಗಂಧಿಕಾಪುಷ್ಪತರಲು ಭೀಮನು ಪೋಗಿಮಾರ್ಗದಲಿ ತನ್ನಯ ಪ್ರಥಮಾವತಾರಸಾಕೇತರಾಮಪ್ರಿಯತಮ ಅಂಜನಾಸುತನಸಂಗಡವಾದಿಸಿದ ಲೋಕರೀತಿಯಲ್ಲಿ 18ನರಾಧಮರ ಮೋಹಿಸುವ ಸಜ್ಜನರ ಮೋದಿಸುವಚರ್ಯಸಂವಾದ ತೋರಿಸಿ ರೂಪದ್ವಯದಿತರುವಾಯು ಹನುಮನು ಭೀಮನಿಗೆ ಕೊಟ್ಟನುಶ್ರೀರಾಮಸೀತಾ ಮೂಲಪ್ರತಿಮೆಗಳ 19ಭೀಮಸೇನನು ಆನಂದದಿ ಅರ್ಚಿಸಿದಸುಮನೋಹರ ರಾಮಸೀತಾದೇವಿಯನ್ನಈ ಮಹಾಹರಿಭಕ್ತ ಪಾಂಡವರ ವಂಶದಿಕ್ಷೇಮಕ ರಾಜನು ಕಡೆಯಾಗಿ ಬಂದ 20ಮೂಲರಾಮಸೀತೆಯ ಮುದದಿಂದ ಪೂಜಿಸಿದಶೀಲಭಾವದಲಿ ಆ ಕ್ಷೇಮಕಾಂತಮೂಲ ವಿಗ್ರಹಗಳು ತರುವಾಯ ಲಭಿಸಿದವುಕಳಿಂಗ ದೇಶಾಧಿಪ ಭಕ್ತನ ಕೈಯಲ್ಲಿ 21ಆಗಿನಕಾಲದಲ್ಲಿಪೀತಾಪುರವಿಜಯನಗರಎಂಬುವ ಪಟ್ಟಣದ ಮತ್ತುಜಗನ್ನಾಥಕ್ಷೇತ್ರ ದಕ್ಷಿಣ ಕಳಿಂಗಾಧಿಪರುಭಕುತಿ ಬೆಳೆಸಿದರು ಶ್ರೀರಾಮನಲ್ಲಿ 22ಆಗಾಗ ಹಸ್ತಿನಾಪುರ ಪೋಗುತಿದ್ದರುಗಂಗಾದಿಸ್ನಾನ ಕ್ಷೇತ್ರಾಟನ ಮಾಡಿಭಕ್ತಿಯಿಂ ಶ್ರೀರಾಮಚರಿತೆ ಕೇಳುವವರಲ್ಲಿವಿಗ್ರಹಗಳು ಲಭಿಸಿದವು ರಾಮನ ಕೃಪದಿ 23ಕಳಿಂಗದೇಶಾಧಿಪ ಗಜಪತಿ ರಾಜನುಬಲುಶ್ರದ್ಧೆ ಭಕ್ತಿಯಲಿ ಆರಾಧಿಸಿಕಾಲದೀರ್ಘದಿ ಸಂತತಿ ಪೂಜಿಸದಲೆಕೀಲುಹಾಕಿ ರಕ್ಷಿಸಿದರು ಬೊಕ್ಕಸದಿ 24ಹಿಂದೆ ತಾ ಭೀಮಾವತಾರದಲಿ ಪೂಜಿಸಿದ್ದುಎಂದು ಆನಂದಮುನಿಇಂದುವಿಗ್ರಹಗಳಹೊಂದಲು ನರಹರಿ ತೀರ್ಥರ ಕಳಿಂಗದಿನಿಂದಿರಿಸಿ ತರಿಸಿಕೊಂಡರು ಮೂರ್ತಿಗಳನು 25ಶ್ರೀಮದಾಚಾರ್ಯರು ಆರ್ಚಿಸಿ ತರುವಾಯಪದ್ಮನಾಭತೀರ್ಥರು ಆರುವರ್ಷಗಳು ಆರಾಧಿಸಿ ನರಹರಿ ತೀರ್ಥರು ಒಂಭತ್ತು ವರ್ಷಗಳುಮುದದಿಂ ಪೂಜಿಸಿದರು ಮೂಲ ರಾಮನ್ನ 26ಒಂಭತ್ತು ವರ್ಷಗಳು ಒಂದು ತಿಂಗಳು ದಿನಇಪ್ಪತ್ತ ಮೂರು ಈಕಾಲಸಂಸ್ಥಾನಶ್ರೀಪನಿಗೆ ಪ್ರಿಯತರದಿ ಆಡಳಿತ ಮಾಡಿಶ್ರೀಪನ್ನ ಧ್ಯಾನಿಸುತ ಹರಿಪುರ ಐದಿದರು 27ಶಾಲಿಶಕ ಹನ್ನೊಂದು ನೂರು ಮೂವತ್ತಾರುಶೀಲತಮ ಶ್ರೀಮುಖ ಪುಷ್ಯ ಕೃಷ್ಣಏಳನೇ ದಿನದಲ್ಲಿ ಹರಿಪುರ ಯೈದಿದರುಮಾಲೋಲ ಪ್ರಿಯತಮ ನರಹರಿ ತೀರ್ಥರು 28ಮತ್ತೊಂದು ಅಂಶದಲಿ ವೃಂದಾವನದಲಿವೃತತಿಜನಾಭ ತೀರ್ಥರ ಸಮೀಪಉತ್ತುಂಗಮಹಿಮ ತುಂಗಾನದಿ ಚಕ್ರತೀರ್ಥದಹತ್ತಿರ ಕುಳಿತಿಹರು ಸ್ಮರಿಸೆ ರಕ್ಷಿಪರು 29ಶ್ರೀರಾಮನರಹರಿ ಶ್ರೀ ಶ್ರೀನಿವಾಸನುನೇರಲ್ಲಿ ಪ್ರಸನ್ನನಾಗಿ ಈಗ ಈ ನುಡಿಗಳ್ಬರೆಸಿಹನು ಸಜ್ಜನರು ಓದಲು ಕೇಳಲುಗುರುಗಳಂತರ್ಯಾಮಿ ವಾಂಛಿತಗಳೀವ 30ಅರಸಿಕರಿಗೂ ಅಧಮ ಮಂದರಿಗು ಈವಿಜಯಬರೆಯಲಿಕು ಕೇಳಲಿಕು ಅವಕಾಶ ಕೊಡದೆಭಾರಿ ಪಂಡಿತರುಗಳೂ ಸಾಮಾನ್ಯ ಸುಜನರೂಸುಶ್ರಮಣ ಮಾಳ್ಪುದು ಹರಿಪ್ರೀತಿಗಾಗಿ 31ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 32ಶ್ರೀ ನರಹರಿತೀರ್ಥವಿಜಯಸಂಪೂರ್ಣಂ|| ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀವಿಜಯದಾಸಾರ್ಯ ಚರಿತ್ರೆ135ಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಅಶೇಷ ಗುಣಗಣಾರ್ಣವಅನಘಶ್ರೀರಮಣಶ್ರೀ ಶ್ರೀನಿವಾಸ ನರಹರಿ ವ್ಯಾಸ ಕೃಷ್ಣಹಂಸ ನಾಮಕ ಪರಂ ಬ್ರಹ್ಮವಿಧಿಸನಕಾದಿದಶಪ್ರಮತಿ ಗುರುವಂಶ ಸರ್ವರಿಗೂ ನಮಿಪೆ 1ವ್ಯಾಸರಾಜರ ಮುಖ ಕಮಲದಿಂದುಪದಿಷ್ಟದಾಸರಾಜರು ಪುರಂದರದಾಸಾರ್ಯವಸುಧೆಯಲ್ಲಿ ನಾರದರೇಪುರಂದರದಾಸರು ಎನಿಸಿಶ್ರೀಶನ್ನ ಸೇವಿಸುತ ಭಕ್ತÀನ್ನ ಕಾಯ್ತಿಹರು 2ಹರಿಸಮೀರರೂ ಸದಾ ಪ್ರಚುರರಾಗಿಹಪುರಂದರದಾಸಾರ್ಯರವರಶಿಷ್ಯರೇವೆಧರೆಯಲ್ಲಿ ಪ್ರಖ್ಯಾತ ವಿಜಯದಾಸಾರ್ಯರುಸುರವೃಂದ ಮಹಾ ಋಷಿಯು ಭೃಗು ಮಹಾ ಮುನಿಯು 3ಋಗ್ ಜಯಾಸಿತ ಯಜುಸ್ ಸಿತ ಯಜುಸ್ಸಾಮಅರ್ಥರ್ವಾಂಗಿರಸಕೆ ಕ್ರಮದಲಿ ಪ್ರವರ್ತಕರುಬಾಗುವೆ ಶಿರ ಪೈಲಗೆ ವೈಶಂಪಾಯನನಿಗೆಅರ್ಕಗೆ ಜೈಮಿನಿಗೆ ಸುಮಂತು ಸಿಂಧುಜಗೆ 4ನಮೋ ಬ್ರಹ್ಮ ವಾಯು ವಿಪ ಫಣಿಪಶುಕಸಂಕ್ರಂದಕಾಮಾರ್ಕ ನಾರದ ಭೃಗು ಸನತ್‍ಕುಮಾರಾದಿಕಾಮಯುಕ್ ಸೂತ ಗಂಧರ್ವನೃಪಶ್ರೇಷ್ಠರಿಗೆಭೂಮಿ ಸುರ ನರರಿಗೆ ಶ್ರೀಶ ಚಲಪ್ರತಿಕ 5ಸ್ವರ್ಣಾಂಡ ಬಹಿರಂತವ್ರ್ಯಾಪ್ತತೇಜಪುಂಜಜ್ಞಾನ ಸುಖ ಪೂರ್ಣ ಶ್ರೀಪತಿ ವೇದ ವ್ಯಾಸಜ್ಞಾನ ಸಂಯುತ ಕರ್ಮಯೋಗ ಪ್ರವರ್ತಿಸುವುದಕೆತಾನೇ ಸೇವಿಸಿದನು ಭೃಗು ಋಷಿಯು ಅಂದು 6ಸುರ ನದಿತೀರದಲಿ ಭೂಸುರರು ಋಷಿಗಳುಸತ್ರಯಾಗ ಎಂಬಂಥ ಜ್ಞಾನಕರ್ಮಚರಿಪೆ ಜಿಜ್ಞಾಸದಲಿ ನಾರದರು ಪ್ರೇರಿಸಿಹೊರಟರು ಭೃಗು ಮುನಿಯು ತತ್ವ ನಿರ್ಣಯಕೆ 7ಶೃತಿಸ್ಮøತಿಪುರಣೇತಿಹಾಸಾದಿಗಳಲ್ಲಿಅದ್ವಿತೀಯನು ಸರ್ವೋತ್ತಮಹರಿಶ್ರೀಶಪದುಮಭವ ರುದ್ರಾದಿಸುರರುತಾರ ತಮ್ಯದಲಿಸದಾ ಅವರಂಬುದನು ಪರಿಕ್ಷೆ ಮಾಡಿದರು 8ನೇರಲ್ಲಿ ತಾ ಪೋಗಿ ಅರಿತು ಪೇಳಿದರುಹರಿಃ ಸರ್ವೋತ್ತಮ ಸಾಕ್ಷಾತ್ ರಮಾದೇವಿ ತzನÀಂತರಸರಸಿಜಾಸನ ವಾಣಿ ರುದ್ರಾದಿಸುರರುತರತಮದಿ ಅವgವÀರು ಸಂಶಯವಿಲ್ಲ ಎಂದು 9ಈ ರೀತಿ ಹಿಂದೆ ಈ ಭೃಗು ಹರಿಯ ನಿಯಮನದಿಅರುಹಿದಂತೆ ಈಗವಿಜಯದಾಸಾರ್ಯನಾರದಪುರಂದರದಾಸಾರ್ಯರನ್ನನುಸರಿಸಿಹರಿಮಹಿಮೆ ಸತ್ ತತ್ವ ಅರುಹಿದರು ಜನಕ್ಕೆ10ವಿಜಯರಾಯರ ಶಿಷ್ಯ ಸೂರಿಗಳೊಳ್ ಪ್ರವರನುಧೂರ್ಜಟೆ ಉಮಾಸುತನುಕ್ಷಿಪ್ರಪ್ರಸಾದಗಜಮುಖನೆ ಗೋಪಾಲ ದಾಸಾರ್ಯರಾಗಿಪ್ರಜ್ವಲಿಸುತಿಹ ನಮೋ ಗುರುವರ್ಯ ಶರಣು 11ಪುರಂದರದಾಸಾರ್ಯರು ವಿಜಯರಾಯರಲ್ಲಿಇರುವರು ಒಂದಂಶದಿಂದ ಜ್ವಲಿಸುತ್ತಬರೆಸಿಹರು ಇಪ್ಪತ್ತು ಮೇಲೈದು ಸಾವಿರಶ್ರೀವರನ ಸಂಸ್ತುತಿ ತತ್ವ ಕವಿತೆಗಳ 12ಕೃತ ತ್ರೇತ ದ್ವಾಪರ ಕಲಿಯುಗ ನಾಲ್ಕಲ್ಲಿಯೂಸುತಪೋನಿಧಿ ಭೃಗು ಮೂಲ ರೂಪದಲುತ್ರೇತಾದಿ ಮೂರಲ್ಲಿಯೂ ಅವತಾರ ರೂಪದಲುಗಾಯತ್ರಿ ನಾಮನ್ನ ಸಂಸೇವಿಸುವರು 13ಪುರಂದರಾರ್ಯರ ಮನೆಯಲ್ಲಿ ಗೋವತ್ಸತರುವಾಯು ಸುಕುಮಾರ ಮಧ್ವಪತಿಯಾಗಿಸರಿದ್ವರ ಶ್ರೀ ತುಂಗಭದ್ರ ತೀರದಿ ಪುನಃಅರಳಿ ನೃಸಿಂಹ ಕ್ಷೇತ್ರದಲಿ ತೋರಿಹರು 14ಅಶ್ವತ್ಥ ನರಸಿಂಹ ಕ್ಷೇತ್ರಕ್ಕೆ ಮತ್ತೊಂದುಹೆಸರುಂಟು ರೂಢಿಯಲಿ ಚೀಕಲಾಪುರಿಯುಕುಸುಮಭವಪಿತಅಂಭ್ರಣಿಪತಿಎನ್ನಪ್ರಶಾಂತ ಚಿತ್ತದಿ ಧ್ಯಾನಿಸೆ ತಕ್ಕ ಸ್ಥಳವು 15ಶ್ರೀಪದ್ಮನಾಭತೀರ್ಥರಕರಕಂಜದಿಂದಉದ್ಭೂತ ಲಕ್ಷ್ಮೀಧರರ ವಂಶಜರುಶ್ರೀಪಾದ ರಾಜರೂ ಈ ಕ್ಷೇತ್ರದಲಿಸ್ಥಾಪಿಸಿದರು ಅಶ್ವತ್ಥÀ ನರಹರಿಯ 16ಹುಂಬೀಜ ಪ್ರತಿಪಾದ್ಯ ಭೂಪತಿಯ ವಕ್ತ್ರದಿಂಸಂಭೂತ ತುಂಗಾ ಸರಿದ್ವರದ ತೀರಗಂಭೀರ ಭೂ ಕಲ್ಪತರುವು ಅಶ್ವತ್ಥ್ಥವುಸಂರಕ್ಷಿಸುವ ನಾರಸಿಂಹ ಭದ್ರದನು 17ನಾರಾಯಣ ಬ್ರಹ್ಮರುದ್ರಾದಿ ದೇವರ್‍ಗಳುಇರುತಿಹರು ಅಶ್ವತ್ಥ್ಥ ಕಲ್ಪ ವೃಕ್ಷದಲಿನಾರಾಯಣ ಶ್ರೀ ನರಸಿಂಹ ಪುರುಷೋತ್ತಮನೆಶರಣಾದೆ ಪೊರೆಯುತಿಹವಾಂಛಿತಪ್ರದನು18ಕಾಶಿ ಬದರಿಯಂತೆ ಇರುವ ಈ ಕ್ಷೇತ್ರದಲಿಭೂಸುರವರರು ಶ್ರೀನಿವಾಸಾಚಾರ್ಯರಲಿಶ್ರೀ ಶ್ರೀನಿವಾಸನ ಪ್ರಸಾದದಿ ಜನಿಸಿಹರುಶ್ರೀಶ ಭಕ್ತಾಗ್ರಣಿ ಈ ಹರಿದಾಸವರರು 19ಕುಸುಮಾಲಯ ಪದ್ಮಾವತಿ ನೆನಪು ಕೊಡುವಕುಸುಮಕೋಮಲ ಮುಖಿ ಆದ ಕಾರಣದಿಕೂಸಮ್ಮ ನೆಂದು ಕರೆಯಲ್ಪಟ್ಟ ಸಾಧ್ವಿಯಈ ಶ್ರೀನಿವಾಸ ಆಚಾರ್ಯಕರಹಿಡಿದರು20ಪತಿವ್ರತಾ ಶಿರೋಮಣಿ ಕೂಸಮ್ಮನ ಗರ್ಭಅಬ್ಧಿಯಿಂ ಹುಟ್ಟಿತು ಉತ್ತಮ ರತ್ನಹತ್ತು ದಿಕ್ಕಲು ಪ್ರಕಾಶಿಸುವ (ದ್ಯುತಿವಂತ) ಕೀರ್ತಿಮಾನ್ಪುತ್ರ ರತ್ನನು ಬೆಳೆದ ದಾಸಪ್ಪ ನಾಮಾ 21ಕೂಸಮ್ಮ ಶ್ರೀನಿವಾಸಪ್ಪ ದಂಪತಿಗೆದಾಸಪ್ಪನಲ್ಲದೆ ಇನ್ನೂ ಕೆಲಪುತ್ರರುಕೇಶವಾನುಗ್ರಹದಿ ಹುಟ್ಟಿ ಸಂಸಾರದಿಈಜಿದರು ಯದೃಚ್ಛಾ ಲಾಭ ತುಷ್ಟಿಯಲಿ 22ಯಾರಲ್ಲೂ ಕೇಳದಲೇ ಅನಪೇಕ್ಷ ದಂಪತಿಯುಹರಿದತ್ತ ಧನದಲ್ಲಿ ತೃಪ್ತರಾಗುತ್ತಅರಳಿ ನೃಸಿಂಹನ್ನ ಸೇವಿಸುತ ಮಕ್ಕಳಲಿಹರಿಮಹಿಮೆ ಹೇಳುತ್ತ ಭಕ್ತಿ ಬೆಳಸಿದರು23ನಮ್ಮ ದಾಸಪ್ಪನಿಗೆ ಹದಿನಾಲ್ಕು ಮಯಸ್ಸಾಗೆಕರ್ಮಸುಳಿಯು ಮೆಲ್ಲ ಮೆಲ್ಲನೆ ತೋರಿಸಮುದ್ರ ಶಯನನ ಅಧೀನವು ಎಲ್ಲ ಎನ್ನುತ್ತಒಮ್ಮೆಗೂ ಲೆಕ್ಕಿಸಲಿಲ್ಲ ಬಡತನವನ್ನ 24ಬದರಮುಖ ಬ್ರಹ್ಮವರ್ಚಸ್ವಿ ದಾಸಪ್ಪಹದಿನಾರುವತ್ಸರದ ಬ್ರಹ್ಮಚಾರಿಮಾಧವನೆ ಹಾದಿ ತೋರುವ ತನಗೆ ಎಂದುಹೋದರು ಪೂರ್ವದಿಕ್ಕಿನ ಕ್ಷೇತ್ರಗಳಿಗೆ 25ಜಲರೂಪಿ ಕೃಷ್ಣನ್ನ ನೆನೆದು ಕೃಷ್ಣಾನದಿಯಲ್ಲಿ ಮಿಂದು ಅಲ್ಲಿಂದ ಮಂತ್ರಾಲಯಅಲ್ಲಿ ಶ್ರೀ ರಾಘವೇಂದ್ರರ ವಾದೀಂದ್ರರ ದಿವ್ಯಜಲಜಪಾದಗಳಿಗೆ ಬಾಗಿದರು ಶಿರವ 26ಆದವಾನಿನಗರನವಾಬನ ಸರ್ಕಾರಅಧಿಕಾರಿ ಡಾಂಭಿಕ ಓರ್ವನ ಗೃಹದಿಮದುವೆ ಪೂರ್ವದ ದೇವರ ಸಮಾರಾಧನೆಯುಹೋದರು ಆ ಮನೆಗೆ ದಾಸಪ್ಪ ಆರ್ಯ 27ಇತ್ತದ್ದು ಹರಿಯೆಂದು ತಂದೆ ಮಾಡುವ ಅತಿಥಿಸತ್ಕಾರ ನೋಡಿದ್ದ ದಾಸಪ್ಪಾರ್ಯನಿಗೆಇಂದುಆದವಾನಿ ಗೃಹಸ್ಥ ದಾಸಪ್ಪನಉದಾಸೀನ ಮಾಡಿದ್ದು ನೂತನಾನುಭವ 28ತೇನ ತ್ಯೆಕ್ತೇನ ಭುಂಜೀಥಾಃ ಮಾಗೃಥೆಃಕಸ್ಯ ಸ್ವಿದ್ಧನಂ ಎಂದು ಮನಸ್ಸಿಗೆ ತಂದುಆದವಾನೀಯಿಂದ ಹೊರಟು ಮಾರ್ಗದಲಿಇದ್ದ ಛಾಗಿ ಎಂಬ ಗ್ರಾಮ ಸೇರಿದರು 29ಉಪೋಷಣದಿ ತನುವು ಬಾಡಿದ್ದರೂ ಮುಖಸ್ವಲ್ಪವೂ ಮ್ಲಾನ ವಿಲ್ಲದೆ ಹರಿಯ ಸ್ಮರಿಸಿಬಪ್ಪ ದಾಸಪ್ಪನ್ನ ನೋಡಿ ಕೇಶವರಾಯಎಂಬ ವಿಪ್ರನು ಕರೆದ ತನ್ನ ಮನೆಗೆ 30ಛಾಗಿ ಗ್ರಾಮದ ಪ್ರಮುಖ ಕೇಶವರಾಯನುಆ ಗೃಹಸ್ಥನ ತಾಯಿ ಕುಟುಂಬಜನರೆಲ್ಲಾಭಗವಂತನ ಶ್ರೇಷ್ಠ ಪ್ರತೀಕ ಇವರೆಂದುಭಾಗಿ ಶಿರ ಆತಿಥ್ಯ ನೀಡಿದರು ಮುದದಿ 31ಆ ಮನೆಯ ದೊಡ್ಡ ಆಕೆಯು ಪಾಕ ಮಾಡಿಶ್ರೀ ಮನೋಹರನಿಗೆ ದಾಸಪ್ಪ ಅದನ್ನಸಂಮುದದಿ ನೈವೇದ್ಯ ಅರ್ಪಿಸಿ ಉಂಡರುರಮಾಪತಿನಿತ್ಯತೃಪ್ತಗೆ ತೃಪ್ತಿ ಆಯ್ತು32ಭಿನ್ನಸ್ವಭಾವಿಗಳು ಭಿನ್ನಜೀವರುಗಳಲಿಭಿನ್ನ ಕರ್ಮವ ಮಾಡಿ ಮಾಡಿಸುವಅನಘಘನ್ನ ಗುಣನಿಧಿ ಸರ್ವ ಜಡಜೀವ ಭಿನ್ನಶ್ರೀನಿಧಿಯ ಸ್ಮರಿಸುತ್ತೆ ಹೊರಟರು ವೇಂಕಟಕೆ 33ಭೂವೈಕುಂಠ ಈ ತಿರುಪತಿ ಕ್ಷೇತ್ರದಲಿದೇವದೇವೋತ್ತಮ ದೇವಶಿಖಾಮಣಿಯಮೂವತ್ತೆರಡು ಮುವತ್ತಾರುಬಾರಿಮೇಲೆಸೇವಿಸಿಹರು ಎಂದು ಕೇಳಿಹೆನು 34ದಾಸಪ್ಪ ನಾಮದಲೂ ವಿಜಯರಾಯರೆನಿಸಿಯೂದೇಶದೇಶದಿ ಹರಿಕ್ಷೇತ್ರ ಪೋಗಿಹರುಕಾಶೀಗೆ ಮೂರು ಸಲ ಪೋಗಿ ಬಂದಿರುವರುಕಾಶಿ ಬದರಿ ನಮಗೆ ಇವರ ಸಂಸ್ಮರಣೆ 35ಪಂಕೇರುಹೇಕ್ಷಣವರಾಹವೆಂಕಟ ಪತಿಯವೇಂಕಟಗಿರಿಯಲ್ಲಿ ಭಕ್ತಿಯಿಂ ಪುನಃತಾ ಕಂಡು ಆನಂದಪುಲಕಾಶ್ರು ಸುರಿಸಿಶಂಕೆಯಿಲ್ಲದೆ ಧನ್ಯ ಮನದಿ ತಿರುಗಿದರು 36ತಿರುಗಿ ಚೀಕಲಪುರಿ ಬಂದು ಹೆತ್ತವರಚರಣಪದ್ಮಗಳಲ್ಲಿ ನಮಿಸಿ ಅಲ್ಲಿನರಹರಿ ಶ್ರೀ ಶ್ರೀನಿವಾಸನ್ನ ಸೇವಿಸುತಪರಿತೋಷಿಸಿದರು ಗಾರ್ಹ ಧರ್ಮದಲಿ 37ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 38-ಇತಿಃ ಪ್ರಥಮಾಧ್ಯಾಯಃ-ದ್ವಿತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪತಿರುಪತಿ ಘಟಿಕಾದ್ರಿ ಕಾಶಿ ಮೊದಲಾದಕ್ಷೇತ್ರಾಟನೆ ಮಾಡಿ ಬಂದ ಪುತ್ರನಿಗೆಭಾರಿಗುಣ ಸಾಧ್ವಿಯ ಮದುವೆ ಮಾಡಿಸಿದರುವಿಪ್ರರ ಮುಂದೆಶುಭಮುಹೂರ್ತದಲಿ ತಂದೆ1ಗುಣರೂಪವಂತಳು ವಧು ಅರಳಿಯಮ್ಮಘನಮಹಾ ಪತಿವ್ರತಾ ಶಿರೋಮಣಿಯು ಈಕೆತನ್ನ ಪತಿಸೇವೆಯ ಪೂರ್ಣ ಭಕ್ತಿಯಲಿಅನವರತಮಾಡುವ ಸೌಭಾಗ್ಯವಂತೆ2ಪುತ್ರೋತ್ಸವಾದಿಶುಭಸಂಭ್ರಮಗಳು ಆದುವುನಿತ್ಯಹರಿತುಳಸೀಗೆ ಪೂಜಾ ವೈಭವವುತ್ರಾತಹರಿ ಸಾನ್ನಿಧ್ಯ ಅನುಭವಕೆ ಬರುತ್ತಿತ್ತುಶ್ರೀದಹರಿವಿಠ್ಠಲನು ತಾನೇವೆ ಒಲಿದ 3ಧನಸಂಪಾದನೆಗಾಗಿ ಅನ್ಯರನು ಕಾಡದೆಅನಪೇಕ್ಷ ಮನದಿಂದ ಹರಿಕೊಟ್ಟದ್ದಲ್ಲೇದಿನಗಳ ಕಳೆದರು ಹೀಗೆ ಇರುವಾಗಫಣಿಪಗಿರಿವೇಂಕಟನು ಮನದಲ್ಲಿ ನಲಿದ 4ನರಹರಿಗೆ ಸನ್ನಮಿಸಿ ಅಪ್ಪಣೆ ಪಡೆದುಹೊರಟರು ವೇಂಕಟನಾಥನ್ನ ನೆನೆದುಸೇರಿದರು ಶೇಷಗಿರಿ ನಮಿಸಿ ಭಕ್ತಿಯಲಿಏರಿದರು ಎರಗಿದರು ನಾರಸಿಂಹನಿಗೆ 5ನರಸಿಂಹನಿಗೆ ಗುಡಿ ಗಾಳಿಗೋಪುರದಲ್ಲಿಕರೆವರು ಬಾಷಿಂಗನರಸಿಂಹನೆಂದುಹರಿದಾಸರಿಗೊಲಿವ ಕಾರುಣ್ಯಮೂರ್ತಿಯುಕರುಣಿಸಿದ ಜಗನ್ನಾಥದಾಸರಿಗೆ ಪೀಠ 6ದಾಸಪ್ಪ ವಿಜಯದಾಸರು ಆದ ತರುವಾಯಈಶಾನುಗ್ರಹವ ಬ್ಯಾಗವಟ್ಟಿಯವರ್ಗೆಶಿಷ್ಯರದ್ವಾರಾ ಒದಗಿ ಜಗನ್ನಾಥದಾಸರಾಗಿ ಮಾಡಿಹರು ಪರಮದಯದಿಂದ 7ನರಸಿಂಹನಪಾದ ಭಜಿಸಿ ಅಲ್ಲಿಂದಗಿರಿ ಅರೋಹಣವನ್ನ ಮುಂದುವರಿಸಿಶ್ರೀ ಶ್ರೀನಿವಾಸನ ಭೇಟಿ ಒದಗಿಸುವಂತೆವರಅಂಜನಾಸೂನು ಹನುಮಗೆರಗಿದರು8ಮಹಾತ್ಮ್ಯೆ ಶ್ರೀ ನಿಧಿ ಶ್ರೀ ಶ್ರೀನಿವಾಸನ್ನಮಹಾದ್ವಾರ ಗೋಪುರದಲ್ಲಿ ಸಂಸ್ಮರಿಸಿಮಹಾದ್ವಾರದಲಿ ಕರಮುಗಿದು ಉತ್ತರದಿಇಹ ಸ್ವಾಮಿತೀರ್ಥದಲಿ ಸ್ನಾನ ಮಾಡಿದರು 9ಭೂರ್ಭುವಃ ಸ್ವಃಪತಿಭೂಧರವರಾಹನ್ನಉದ್ಭಕ್ತಿ ಪೂರ್ವಕದಿ ವಂದಿಸಿ ಸರಸ್ಯಇಭರಾಜವರದನ್ನ ಸ್ಮರಿಸುತ್ತ ಸುತ್ತಿಶುಭಪ್ರದಪ್ರದಕ್ಷಿಣೆ ಮಾಡಿದರು ಮುದದಿ 10ಪ್ರದಕ್ಷಿಣೆಗತಿಯಲ್ಲಿ ಸಾಕ್ಷಿಅಶ್ವತ್ಥನ್ನಭೂಧರನ್ನ ನೋಡುತ್ತ ನಿಂತ ಹನುಮನ್ನವಂದಿಸಿ ಮಹಾದ್ವಾರ ಸೇರಿ ಕೈಮುಗಿದುಇಂದಿರೇಶನ ಆಲಯದೊಳು ಹೋದರು 11ಬಲಿಪೀಠ ಧ್ವಜಸ್ತಂಭ ತತ್ರಸ್ಥ ಹರಿಯನೆನೆದುಬೆಳ್ಳಿ ಬಾಗಿಲದಾಟಿ ಗರುಡಗೆ ನಮಿಸಿಒಳಹೋಗೆ ಅಪ್ಪಣೆ ಜಯವಿಜಯರಕೇಳಿಬಲಗಾಲ ಮುಂದಿಟ್ಟು ಹೋದರು ಒಳಗೆ 12ಬಂಗಾರ ಬಾಗಿಲ ದಾಟಲಾಕ್ಷಣವೇಕಂಗೊಳಿಸುವಂತ ಪ್ರಾಜ್ವಲ್ಯ ಕಿರೀಟಚಂಚಲಿಸುವ ತಟಿನ್ನಿಭಕರ್ಣಕುಂಡಲವಿಟ್ಟಗಂಗಾಜನಕವೆಂಕಟೇಶನ್ನ ನೋಡಿದರು13ಆನಂದಜ್ಞಾನಮಯ ಪಾದಪಂಕಜತತ್ರಸುನೂಪುರ ಉಡಿವಡ್ಯಾಣಕೌಶೇಯಮಿನುಗುವಾಂಬರ ಸಾಲಿಗ್ರಾಮದ ಹಾರಘನಮಹಾ ಹಾರಗಳು ಸರಿಗೆ ವನಮಾಲೆ14ಶ್ರೀವತ್ಸ ಕೌಸ್ತುಭಮಣಿ ವೈಜಯಂತೀದಿವ್ಯ ಪ್ರಜ್ವಲಿಸುವ ಪದಕಂಗಳುಕಿವಿಯಲ್ಲಿ ಮಿಂಚಿನಂದದಿ ಪೊಳೆವಕುಂಡಲಸರ್ವಾಭರಣಗಳ ವರ್ಣಿಸಲು ಅಳವೇ 15ಅಕಳಂಕ ಪೂರ್ಣೇಂದು ಮುಖಮುಗುಳುನಗೆಯುಕಂಗಳುಕಾರುಣ್ಯ ಸುರಿಸುವನೋಟಕಾಕುಇಲ್ಲದ ನೀಟಾದ ಫಣೆ ತಿಲಕವುಚೊಕ್ಕ ಚಿನ್ನದಿ ನವರತ್ನ ಜ್ವಲಿಪ ಕಿರೀಟ 16ಬ್ರಹ್ಮಪೂಜಿತಶ್ರೀ ಶ್ರೀನಿವಾಸನ್ನಮಹಾನಂದದಿ ನೋಡಿ ಸನ್ನಮಿಸಿ ಮುದದಿಬಹಿರದಿ ಬಂದು ಮತ್ತೊಮ್ಮೆ ಪ್ರದಕ್ಷಿಣೆ ಮಾಡಿಮಹಾಪ್ರಾಕಾರದಲಿ ಕೊಂಡರು ಪ್ರಸಾದ 17ಹೇಮಮಯ ಆನಂದನಿಲಯ ವಿಮಾನ ಗೋಪುರದಿಶ್ರೀಮನೋಹರ ಶ್ರೀ ಶ್ರೀನಿವಾಸನ್ನ ಪುನಃನೆಮ್ಮದಿದಿ ನೋಡಿ ಸನ್ನಮಿಸಿ ಶ್ರೀನಾರಸಿಂಹನ್ನ ವಂದಿಸಿ ಹೋದರು ಒಳಗೆ 18ಏಕಾಂತ ಸೇವೆ ಶಯ್ಯೋತ್ಸವವ ನೋಡಿಅಕಳಂಕ ಭಕ್ತಿಯಲಿ ಮನಸಾ ಸ್ತುತಿಸಿಶ್ರೀಕರಾಲಯ ಪ್ರಕಾರ ಮಂಟಪದಲ್ಲಿಭಕುತವತ್ಸಲನ್ನ ನೆನೆದು ಮಲಗಿದರು 19ಬಂಗಾರಬಾಗಿಲು ಅರ್ಧಮಂಟಪವುಪುರಂದರದಾಸಾರ್ಯರುಯೋಗ ನಾರಸಿಂಹನ ಸ್ಥಾನ ಬಲಪಾಶ್ರ್ವಏಕಾಂತ ಮಂಟಪವುಪುರಂದರದಾಸಾರ್ಯರುಶ್ರೀಕರನ ಭಜಿಸುತ್ತಾ ಇರುವರು ಅಲ್ಲಿ 20ಅರ್ಧ ಮಂಟಪ ಹೊರಗೆ ಉತ್ತರ ಪ್ರಾಕಾರದಿಎತ್ತರ ಮಂಟಪದ ಜಗುಲಿಯಲ್ಲೂಆಸ್ಥಾನ ಮಂಟಪಕೆ ಪಶ್ಚಿಮ ಮಂಟಪದಲ್ಲೂಆಸ್ಥಾನ ಶ್ರೇಷ್ಠರು ಕುಳಿತದ್ದು ಉಂಟು 21ಮನುಷ್ಯ ಲೋಕದಿ ಹುಟ್ಟಿ ಮಾನುಷಾನ್ನವನುಂಡುಮಾನುಷಾನ್ನದ ಸೂಕ್ಷ್ಮ ಭಾಗ ಪರಿಣಮಿಸಿಮನಖಿನ್ನನಾದಂತೆ ಇದ್ದ ದಾಸಪ್ಪನಿಗೆಶ್ರೀ ಶ್ರೀನಿವಾಸನು ಬಂದು ತಾ ಒಲಿದ 22ಶ್ರೀನಿಧಿಃ ಶ್ರೀ ಶ್ರೀನಿವಾಸವೇಂಕಟಪತಿಘನದಯದಿ ಸೂಚಿಸಿದ್ದು ತಿಳಕೊಂಡರುಸ್ವಪ್ನದಿ ಭಾಗೀರಥಿಯಪುರಂದರದಾಸಾರ್ಯರಬಿಂದುಮಾಧವ ಅಂಭ್ರಣೀಶನ್ನ ನೋಡಿದರು 23ಭೂವರಾಹವೆಂಕಟರಮಣನ್ನ ಮರುದಿನಸೇವಿಸಿ ಹನುಮಂತನಿಗೆ ನಮಸ್ಕರಿಸಿದೇವಾನುಗ್ರಹದಿ ಐದಿದರು ವಾರಣಾಸಿದೇವ ತಟಿನೀಸ್ನಾನ ಮೂರ್ತೀ ದರ್ಶನವು 24ಜಾಗ್ರತೆ ಅಲ್ಲ ನಿದ್ರೆಯೂ ಅಲ್ಲ ಸಂಧಿಆ ಕಾಲದಲಿ ಆನಂದ ಅನುಭವವುಹೇಗೆಂದರೆ ವಿಠ್ಠಲ ಶ್ರೀನಿವಾಸನುಝಗಿಝಗಿಸಿ ತೋರ್ವನು ವಿಜಯಸಾರಥಿಯು 25ತೃಟಿಮಾತ್ರದಲಿ ಮುಂದೆ ನಿಂತರುಪುರಂದರವಿಟ್ಠಲ ದಾಸರು ಕೃಪೆಯ ಬೀರುತ್ತತಟ್ಟನೇ ಎದ್ದರು ದಾಸಪ್ಪ ಆರ್ಯರುಸಾಷ್ಠಾಂಗ ನಮಿಸಿದರು ಗುರುವರ್ಯರೆಂದು 26ಕರಕೊಂಡು ಹೋದರು ಆಚೆದಡದಲ್ಲಿರುವಕ್ಷೇತ್ರಕ್ಕೆ ಅಲ್ಲಿ ಶ್ರೀಪತಿವ್ಯಾಸನ್ನತೋರಿಸಿದರು ಆ ವ್ಯಾಸ ಮೂರ್ತಿಯಲ್ಲಿಸುಪ್ರಕಾಶಿಪಹರಿರೂಪಗಳ ಕಂಡರು27ವಿಜಯಸಾರಥಿಕೃಷ್ಣ ವಾಶಿಷ್ಠಮಾಧವಅಜಭುಜಗಭೂಷಣಾದಿಗಳಿಂದಸೇವ್ಯರಾಜರಾಜೇಶ್ವರಿ ಶ್ರೀನಿಧಿಯ ಮನದಣಿಯಭಜಿಸಿ ಸ್ತುತಿಸಲು ಯತ್ನಿಸಿದರು ದಾಸಪ್ಪ 28ಸೌದಾಮಿನಿಗಮಿತ ರಂಜಿಸುವ ಜ್ಯೋತಿಯುಬದರೀಶನಿಂ ಪುರಂದರದಾಸರ ದ್ವಾರಬಂದು ನೆಲಸಿತು ದಾಸಪ್ಪನ ಜಿಹ್ವೆಯತುದಿಯಲ್ಲಿ ವಿಜಯಾಖ್ಯ ಸುಶುಭನಾಮ 29ರಾಜೀವಜಾಂಡದೊರೆ ರಾಜೀವಾಲಯಪತಿವಿಜಯವಿಠ್ಠಲ ನಿಮ್ಮ ಹೃದ್‍ರಾಜೀವದಲಿಪ್ರಜ್ವಲಿಸುತಿಹ ಸರ್ವತೋಮುಖನೆಂದುನೈಜವಾತ್ಸಲ್ಯದಿ ಪೇಳಿದರು ಗುರುವು 30ಗುರುಗತುರಗಾಸ್ಯ ವಿಠ್ಯಲವ್ಯಾಸ ತನ್ನ ಹೊರವೊಳುಪ್ರಕಾಶಿಪುದು ಅನುಭವಕೆ ಬಂತುಎರಗಿದರುವಿಜಯದಾಸರು ಪುರಂದರಾರ್ಯರಿಗೆಸರಿ ಏಳು ಎಂದರು ಗುರುವರ್ಯ ಹಿತದಿ 31ಎದ್ದರು ಎಚ್ಚರಿಕೆ ಆಗಿ ವಿಜಯಾರ್ಯರುವೇದ್ಯವಾಯಿತು ಶ್ರೀಯಃಪತಿಯು ಗುರುವುಹಿತದಿ ತಾವೇ ಬಂದು ಅನುಗ್ರಹ ಮಾಡಿದ್ದುಇಂಥ ಭಾಗ್ಯವು ಎಲ್ಲರಿಗೂ ಲಭಿಸುವುದೇ 32ಶ್ರೀಕಾಂತ ಕಪಿಲ ಶ್ರೀ ಶ್ರೀನಿವಾಸನ್ನಹಿಂಕಾರ ಪ್ರತಿಪಾದ್ಯ ಕೃತಿಪತಿ ಪ್ರದ್ಯುಮ್ನಶ್ರೀಕರ ವಿಠ್ಠಲ ವ್ಯಾಸಹಯಮುಖನ್ನ ಸ್ಮರಿಸುತ್ತಗಂಗೆಯ ಸೇರಿದರು ಮಿಂದರು ಮುದದಿ 33ವಿಧಿಪೂರ್ವಕ ಸ್ನಾನ ಅಘ್ರ್ಯಾಧಿಗಳಿತ್ತು ಅಘ್ರ್ಯಾದಿಆ ದೇವತಟನೀಯ ದಡದಲ್ಲಿ ಕುಳಿತುಸದ್ವೈಷ್ಣವಚಿನ್ನಾಲಂಕೃತರು ಜಪಿಸಿದರುಮಧ್ವಸ್ಥ ವಿಜಯವಿಠ್ಠಲಶ್ರೀಪತಿಯ 34ಪದುಮಜನ ಸುತ ಭೃಗುವೆ ಅವನಿಯಲಿ ಅವತರಿಸಿಬಂದಿಹನು ಮಾಧವನು ಒಲಿದಿಹನು ಎಂದುಮಂದಾಕಿನಿವ್ಯಜನಚಾಮರಗಳ್ ಬೀಸುವಂತೆಬಂದು ಪ್ರವಹಿಸಿದಳು ದಾಸರ ಆವರಿಸಿ 35ಜನರೆಲ್ಲ ನೋಡುತಿರೆ ಪ್ರವಾಹವು ಉಕ್ಕಿಪೂರ್ಣ ಆವರಿಸಿತು ವಿಜಯರಾಯರನ್ನಏನು ಅದ್ಭುತ ಇದು ಶಾಂತವಾಗಲು ಕ್ಷಣದಿನೆನೆಯಲಿಲ್ಲ ವಸ್ತ್ರ ಊಧ್ರ್ವ ಪುಂಡ್ರಗಳು 37ಹರಿಆಜೆÕಯಲಿಸುರರುಸಜ್ಜನೋದ್ಧಾರಕ್ಕೂಪ್ರಾರಬ್ಧಕರ್ಮ ಕಳೆಯಲು ಜನಿಪರು ಭುವಿಯೋಳ್ಇರುವುವು ಅಣಿಮಾದಿಗಳು ಶಕ್ತ್ಯಾತ್ಮನಾಗುರುಒಲಿಯೆ ವ್ಯಕ್ತವಾಗುವುವು ಆಗಾಗಾ38ಸುರರುಭೃಗುದಾಸಪ್ಪ ಜಾತಾಪರೋಕ್ಷಿಗೆಪುರಂದರದಾಸ ನಾರದರೊಲಿದ ಮೇಲೆಇರುತ್ತಿದ್ದಅಪರೋಕ್ಷಅಣಿಮಾದಿ ಮಹಿಮೆಯುಸುಪ್ರಕಟವಾದವು ಶ್ರೀಶನ ದಯದಿ 39ವರ್ಣಪ್ರತಿಪಾದ್ಯಹರಿಒಲಿಯೆ ವರ್ಣಂಗಳುಆಮ್ನಾಯನಿಗಮತತಿ ಸತ್‍ತತ್ವಜ್ಞಾನಅನಾಯಸದಿಂದೊದಗಿ ವಿಜಯದಾಸಾರ್ಯರುಅನಿಲಸ್ಥ ಶ್ರೀವರನ್ನ ಸ್ತುತಿಸಿ ಹಾಡಿದರು 40ಜನಗಳು ವಿಜಯದಾಸಾರ್ಯರು ಶ್ರೀಹರಿಯಧ್ಯಾನಿಸಿ ಶ್ರೀಪತಿಯ ರೂಪಕ್ರಿಯೆಗಳನ್ನುಗುಣಗಳನ್ನು ಗಂಗಾದಡದಲ್ಲಿ ಕುಳಿತುಗಾನಮಾಡುವುದನ್ನ ಕೇಳಿದರು ಮುದದಿ 41ಘನಮಹಾತ್ಮರು- ಇವರು ಸಜ್ಜನೋದ್ಧಾರಕರುಶ್ರೀನಿಧಿಯ ಸತ್‍ತತ್ವಜ್ಞಾನ ಪೂರ್ವಕದಿಗಾನಮಾಡಿ ಲೋಕಕ್ಷೇಮಕೆÀ್ಕೂದಗುವರೆಂದುಧನ ದ್ರವ್ಯಕಾಣಿಕೆಇತ್ತರು ಜನರು42ಪೋದಕಡೆ ಎಲ್ಲೆಲ್ಲೂ ಮರ್ಯದೆ ಪೂಜೆಗಳುಸಾಧುಸಜ್ಜನರ ಕೈಯಿಂದ ತಾ ಕೊಂಡುಮಾಧವಮಧ್ವಮುನಿ ಪುರಂದರಾರ್ಯರ ಭಾಗ್ಯಎಂದು ಶ್ರಿ ಕೃಷ್ಣಂದೇ ಸರ್ವವೆಂಬುವರು 43ಭಾರಿ ಬಹು ಬಹುವುಂಟು ವಿಜಯರಾಯರ ಮಹಿಮೆಅರಿಯೆನಾ ಅಲ್ಪಮತಿ ಹೇಗೆ ವರ್ಣಿಸಲಿಹರಿಗೆ ಪ್ರಿಯತರ ಈ ಸುಮಹಾತ್ಮರು ತನಗೆಎರಗಿದವರನ್ನ ಕಾಯ್ವರು ಕೈಬಿಡದೆ 44ವಾರಣಾಸಿರಾಜ ಪೂಜಿಸಿದ ಇವರನ್ನಎರಗಿ ಜನರು ಶಿಷ್ಯ ರಾದರಲ್ಲಲ್ಲಿಊರಿಗೆ ಬರುವಷ್ಟರಲ್ಲೇ ಇವರ ಕೀರ್ತಿಹರಡಿತು ಹರಿದಾಸಜ್ಞಾನಿವರರೆಂದು 45ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೇ ಸತತ 46-ಇತಿಃ ದ್ವಿತಿಯಾಧ್ಯಾಯಃ-ತೃತೀಯಾಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪಕಾಶಿ ಗಯಾ ಪಿತೃಕಾರ್ಯ ಪೂರೈಸಿ ಬರುವಾಗದೇಶ ದೇಶದಿ ಹರಿಯ ಮಹಿಮೆ ತೋರುತ್ತಾಅಸಚ್ಚಾಸ್ತ್ರ ವಾದಗಳ ಕತ್ತರಿಸಿ ಬಿಸುಡುತ್ತಸುಚ್ಛಾಸ್ತ್ರ ಬೋದಿಸುತ್ತ ಬಂದರು ಮನೆಗೆ 1ಸಕುಟಂಬ ತಿರುಪತಿಗೆ ಪೋಗಿ ಶ್ರೀನಿಧಿಯಭಕುತಿಯಿಂದಲಿ ಸ್ತುತಿಸಿ ಊರಿಗೆ ತಿರುಗಿಶ್ರೀಕರನ ಪ್ರೀತಿಕರ ಶಿಷ್ಯೋದ್ಧಾರಕ್ಕೆಬೇಕಾದ ಯತ್ನಗೈದರು ದಾಸ ಆರ್ಯ 2ಈ ಪುಣ್ಯ ಶ್ಲೋಕರು ಷಷ್ಠ್ಯುಪರಿಸಂಖ್ಯಾಸುಪುಣ್ಯ ಶಿಷ್ಯರಿಗೆ ಬಲುದಯದಿಂದಅಪರೋಕ್ಷಒದಗಲು ಉಪದೇಶವಿತ್ತಿಹರುಅಪವರ್ಗಯೋಗ್ಯರಿಗೆಮಾರ್ಗತೋರಿಹರು3ಮೊದಲು ಗೋಪಾಲ ವೇದವ್ಯಾಸ ಹಯವದನಶ್ರೀದನ ಈ ಮೂರು ಉತ್ಕøಷ್ಠನಾಮಅಂಕಿತವ ನಾಲ್ವರಿಗೆ ವಿಜಯದಾಸಾರ್ಯರುಉತ್ತುಂಗಮಹಿಮರು ಇತ್ತಿಹರು ದಯದಿ 4ಸಾಧುವರ್ಯ ತಮ್ಮನಿಗೆ ಹಯವದನಾಂಕಿತ ನಾಮಉತ್ತನೂರು ಭಾಗಣ್ಣ ರಾಯರ್ಗೆ ಗೋಪಾಲಆದವಾಣಿ ತಿಮ್ಮಣ್ಣರ್ಗೆ ವೇಣುಗೋಪಾಲಆದವಾಣಿಯವರದ್ವಾರಾ ವ್ಯಾಸ ಸುಬ್ಬಣ್ಣರ್ಗೆ 5ಗುರುವರ್ಯ ಗೋಪಾಲದಾಸಾರ್ಯರಚರಣಸರಸಿಜಯುಗ್ಮನಾ ನಂಬಿದೆ ನಿಶ್ಚಯದಿಕಾರುಣ್ಯ ಔದಾರ್ಯ ನಿಧಿಗಳು ಇವರಲ್ಲಿಶರಣಾದೆ ಸಂತತಸ್ಮರಿಸೆ ಪಾಲಿಪರು 6ಗಾಯತ್ರಿಯಲಿ ಕೇಶವಾದಿ ಇಪ್ಪತ್ತನಾಲ್ಕುಹಯಗ್ರೀವರೂಪಗಳು ಆರನ್ನೂ ಸ್ಮರಿಸಿಗಾಯತ್ರಿನಾಮ ಶ್ರೀವೇಂಕಟಕೃಷ್ಣನಿಗೆಪ್ರಿಯಗಾಯತ್ರಿಮಂತ್ರ ಸಿದ್ಧಿಪಡೆದವರು 7ಇಂಥಾ ಮಹಾಭಕ್ತ ಭಾಗಣ್ಣನ ಬಳಿಬಂದು ವಿಜಯಾರ್ಯರು ಇತ್ತರು ದಯದಿಸೌಂದರ್ಯಸಾರ ಗೋಪಾಲವಿಠ್ಠಲ ನಾಮಇಂದಿರಾಪತಿ ಅಖಿಳಪ್ರದನ ಅಂಕಿತವ 8ಆದವಾಣಿಸುಲ್ತಾನನ ಮಂತ್ರಿಯುಸಾಧುಶೀಲನು ತಿಮ್ಮಣ್ಣರಾಯಈತನು ವೀರ ವೈಷ್ಣವಮಾಧ್ವಬ್ರಾಹ್ಮಣನುಭಕ್ತಿಮಾನ್ ಜ್ಞಾನವಾನ್ ವೈರಾಗ್ಯಶಾಲಿ 9ಹಿಂದಿನ ಜನ್ಮದಿ ಆದಿಕೇಶವನನ್ನವಂದಿಸಿ ಸ್ತುತಿಸಿದ ರಾಮಾನುಜೀಯಇಂದುಸದ್ವೈಷ್ಣವಕುಲದಲ್ಲಿ ಹುಟ್ಟಿಹನುಇಂದಿರೇಶನ ನಾಮಾಂಕಿತ ಬೇಡಿದ್ದ ಮೊದಲೇ 10ಮೊದಲೇವೆ ತಾಳೆಂದು ಹೇಳಿ ಈಗ ವಿಜಯಾರ್ಯಇತ್ತರೂ ಶ್ರೀ ವೇಣುಗೋಪಾಲವಿಠ್ಠಲ ಈಉತ್ತಮ ಈ ನಾಮ ಉಪದೇಶ ಮಾಡಿದರುಈ ತಿಮ್ಮಣ್ಣ ರಾಯರಿಗೆ ನಮೋ ನಮೋ ಎಂಬೆ 11ಕಲ್ಲೂರು ಸುಬ್ಬಣ್ಣಾಚಾರ್ಯರು ನ್ಯಾಯಸುಧಾಮಂಗಳ ಅನುವಾದ ಚರಿಸಿ ವಿಜಯಾರ್ಯಅಲ್ಲಿ ಪಾಚಕ ವೇಷದಲಿ ಪೋಗಿ ಮಂಡಿಗೆಗಳಮಾಡಿದರು ಮಧುಸೂದನನ ಪ್ರೀತಿಗೆ12ಸುಬ್ಬಣ್ಣಾಚಾರ್ಯರು ಮಹಾದೊಡ್ಡ ಪಂಡಿತರುಶುಭತಮಸುಧಾಮಂಗಳದ ಅನುವಾದಸಂಭ್ರಮದಿ ಕದಡಿದ್ದ ಬಹು ಬಹು ಮಂದಿಯಸಭೆಯೊಳು ಪ್ರವೇಶಿಸಿದರು ವಿಜಯಾರ್ಯ 13ನೆರೆದಿದ್ದವರಲ್ಲಿ ವಿಜಯರಾಯರ ಮಹಿಮೆಅರಿತಿದ್ದಜನ ನಮ್ರಭಾವದಲಿ ಎದ್ದುಮರ್ಯಾದೆ ಮಾಡಿದರು ಅದನೋಡಿ ಆಚಾರ್ಯಪ್ರಾಕೃತಹಾಡುವವಗೆ ಪೂಜೆಯೇ ಎಂದ14ವ್ಯಾಸಪೀಠದ ಮುಂದೆ ವಿಜಯರಾಯರು ಪೋಗಿವ್ಯಾಸಗೆ ಮಧ್ವಗೆ ಜಯಾರ್ಯಗೆ ನಮಿಸಿಸಂಶಯ ಕಳೆದು ಯಥಾರ್ಥಜ್ಞಾನವನೀವಶ್ರೀಸುಧಾ ಕೇಳುವೆ ಎಂದು ಪೇಳಿದರು 15ಕನ್ನಡ ಕವನಮಾಡುವ ನಿಮಗೆ ಈ ಸುಧಾಘನವಿಷಯಗಳು ತಿಳಿಯಲಿಕೆ ಬೇಕಾದಜ್ಞಾನನಿಮಗೆ ಏನು ಇದೆ ಹೇಳಿ ಎಂದು ಆಚಾರ್ಯತನ್ನ ಪಾಂಡಿತ್ಯದ ಗರ್ವದಿ ಕೇಳಿದನು 16ಸುಬ್ಬಣ್ಣಾಚಾರ್ಯನ ಈ ಮಾತುಕೇಳಿಒಬ್ಬ ಪರಿಚಾರಕನ ಕರೆದು ವಿಜಯಾರ್ಯಅವನಿಗೆ ವಿಧ್ಯಾಭ್ಯಾಸ ಉಂಟೇ ಎನ್ನೆಅಪದ್ಧಅಡದೇ ಅವ ವಿದ್ಯಾಹೀನನೆಂದ17ಸಭ್ಯರು ನೋಡುತಿರೆ ವಿಜಯದಾಸಾರ್ಯರುಕಪಿಲ ಖಪತಿ ಗರುಡಾಸನ ಘರ್ಮಶ್ರೀಪತಿ ಆಜ್ಞಾಸಾರ ವರಾಹನ್ನ ಸ್ಮರಿಸಿದರುಆ ಪರಮದಡ್ಡನ ಶಿರದಿ ಕರವಿಟ್ಟು 18ಕರವಿಡಲು ವಿಜಯರಾಯರ ಜ್ಞಾನಪೀಯೂಷಧಾರೆ ಆ ಪುರುಷನ ಶರೀರದೊಳು ಪೊಕ್ಕುರುಧಿರನಾಳಂಗಳು ತನುನರನಾಡಿ ಶಾಖೆಗಳುತೀವ್ರಸುಪವಿತ್ರವಾದವು ತತ್ಕಾಲ 19ವರ್ಣಾಭಿಮಾನಿಗಳು ಭಾರತೀ ಸಹವಾಯುವರ್ಣಪ್ರತಿಪಾದ್ಯ ಹರಿರಮಾಸಮೇತತನು ಮನವಾಕ್ಕಲ್ಲಿ ಪ್ರಚುರರಾಗಿ ಅವನುಘನತರ ಸುಧಾಪಂಕ್ತಿಗಳ ಒಪ್ಪಿಸಿದನು 20ಅಣುವ್ಯಾಖ್ಯಾನ ಸುಧಾ ನ್ಯಾಯ ರತ್ನಾವಳೀಇನ್ನು ಬಹುಗ್ರಂಥಗಳ ವಾಕ್ಪ್ರವಾಹದಲಿಘನಮಹ ವಿಷಯಗಳಸಂದೇಹಪರಿಹರಿಪಅನುವಾದಮಾಡಿದ ಅದ್ಭುತ ರೀತಿಯಲ್ಲಿ 22ಸುಬ್ಬಣ್ಣಾಚಾರ್ಯರು ದಾಸಾರ್ಯರಲ್ಲಿಉದ್ಭಕ್ತಿಗುರುಭಾವದಿಂದೆದ್ದು ನಿಲ್ಲೆಸೌಭಾಗ್ಯ ಪ್ರದಸುಧಾ ಮಂಗಳವ ಪೂರೈಸುಶುಭೋದಯವು ನಿನಗೆಂದು ಪೇಳಿದರು ದಾಸಾರ್ಯ 23ಮಂಗಳಪ್ರಸಾದವ ಸಭ್ಯರಿಗೆ ಕೊಟ್ಟಮೇಲ್ಕಂಗಳಲಿ ಭಕ್ತಿಸುಖ ಬಾಷ್ಪ ಸುರಿಸುತ್ತಗಂಗಾಜನಕಪ್ರಿಯ ವಿಜಯರಾಯರಪಾದಪಂಕಜದಿ ಶರಣಾದರು ಸುಬ್ಬಣ್ಣಾರ್ಯ 24ರಾಜೀವಾಸನಪಿತ ಶ್ರೀ ಪ್ರಸನ್ನ ಶ್ರೀನಿವಾಸರಾಜೀವಾಲಯಾಪತಿಗೆ ಪ್ರಿಯತರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣಾದೆ ಶರಣು 25-ಇತಿಃ ತೃತೀಯಾಧ್ಯಾಯಃ-ಚತುರ್ಥ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿಎನುತಶಿರಿವರಸರ್ವೋತ್ತಮನ ಪ್ರಿಯತರ ದಾಸಾರ್ಯ ಪರಾಜರು ಸ, ಂಸ್ಥಾನ ಮಂಡಲೇಶ್ವರರೆಲ್ಲವಿಜಯದಾಸಾರ್ಯರಿಗೆ ಎರಗಿ ತಮ್ಮರಾಜಧಾನಿಗೆ ಕರೆದು ಕೃತಕೃತ್ಯರಾದರುವಿಜಯಸಾರಥಿಒಲುಮೆ ಏನೆಂಬೆ ಇವರೊಳ್1ಅಲ್ಲಲ್ಲಿ ಪೋದ ಸ್ಥಳದಲ್ಲಿ ನರಹರಿ ಮಹಿಮೆಎಲ್ಲ ಸಜ್ಜನರಿಗೂ ಕೀರ್ತಿಸಿ ತೋರಿಸಿಕಲಿಕಲ್ಮಷ ಪೀಡಿತ ಜನರ ಕಷ್ಟಗಳಎಲ್ಲವ ಪರಿಹಾರ ಮಾಡಿ ಕಾಯ್ದಿಹರು 2ಹರಿನಾಮಾ ಐನೂರು ಸಾವಿರ ಕೀರ್ತನೆ ಗ್ರಂಥಗಳೊಳುತಾನೇ ಸ್ವತಮಾಡಿದ್ದಲ್ಲದೆ ಮಿಕಿಲಾದ್ದುಇನ್ನೂರೈವತ್ತುನೂರು ವಿಜಯರಾಯರಲಿ ನಿಂತುಪೂರ್ಣ ಮಾಡಿಸಿಹರು ಶ್ರೀ ಪುರಂದರದಾಸಾರ್ಯ 3ಹರಿನಾಮ ಜಿಹ್ವೆಯಲಿ ಭೂತದಯಾ ಮನಸಿನಲ್ಲಿಹರಿಮೂರ್ತಿ ಗುಣರೂಪ ಅಂತಃಕರಣದಲಿಪುರಂದರಾರ್ಯರು ಇವರು ರಚಿಸಲೆ ಬಿಟ್ಟಿದ್ದಭಾರಿ ಸಂಕೀರ್ತನೆಗಳನ್ನ ಹಾಡಿಹರು 4ಪ್ರಿಯತಮ ಶಿಷ್ಯರು ಗೋಪಾಲ ದಾಸರೊಡೆತೋಯಜಾಕ್ಷನ ಸ್ಮರಿಸಿ ನಡಿಯುತಿರುವಾಗಬಾಯಾರಿಕೆ ಪೀಡಿತ ಕತ್ತೇಗೆ ದಯಮಾಡಿತೋಯವನು ಕುಡಿಸಿಹರು ಕಾರುಣ್ಯಶರಧಿ5ಬಹುಕಾಲದ ಹಿಂದೆ ತಾ ಕೇಶವರಾಯನಗೃಹದಲ್ಲಿ ಹುಗ್ಗಿಯ ಉಂಡದ್ದು ನೆನಪಾಗಿಆ ಗೃಹಕ್ಕೆ ಪೋದರು ಗೋಪಾಲ ದಾಸರ ಸಹಹಾಹಾ ಅಲ್ಲಿಸ್ಥಿತಿ ಏನೆಂಬೆ ಆಗ 6ಏಳು ಜನ್ಮದಕರ್ಮಗತಿಸುಳಿಯಲ್ಲಿಸಿಲುಕಿ ಆ ಮನೆಯ ಯುವಕನುಅಸುಬಿಟ್ಟತಲೆ ಸ್ಫೋಟನವಾಗಿ ತಾಕಿ ಬೋದಿಗೆಗೆಅಳುತ್ತಿದ್ದರು ಜನರು ದುಃಖದಲಿ ಮುಳಗಿ 7ಕರುಣಾ ಸಮುದ್ರರು ಭೂತದಯಾ ಪರರುಎರದರು ತಮ್ಮ ಆಯುಷ್ಯದಿ ಮೂರು ವರುಷವರಾಹಭಿಷಕ್ ನರಹರಿಯ ಜಪವನ್ನು ಗೈದುನರಸಿಂಹನ ಸ್ತುತಿಸಿ ಬದಕಿಸಿದರು ಯುವಕನ್ನ 8ಅಳುತ್ತಿದ್ದ ಜನರೆಲ್ಲ ಆನಂದ ಬಾಷ್ಪದಮಳೆ ಸುರಿಸಿ ಬಲು ಕೃತಜÕತೆ ಭಾವದಿಂದಮಾಲೋಲ ಪ್ರಿಯವಿಜಯದಾಸರ ಪದಯುಗಳನಳಿನದಲಿ ನಮಿಸಿದರು ಭಕ್ತಿ ಪೂರ್ವಕದಿ 9ಚೀಕಲ ಪರವಿಯಿಂದಲಿ ನಾಲಕು ಕ್ರೋಶನಗರವು ಮಾನವಿ ಎಂಬುದು ಅಲ್ಲಿಪ್ರಖ್ಯಾತ ಪಂಡಿತನು ಶ್ರೀನಿವಾಸಾಚಾರ್ಯನುಪುಷ್ಕಲ ಶ್ರೀಮಂತ ಬಹು ಶಿಷ್ಯಸೇವ್ಯ10ಸುರಗಂಧರ್ವಾಂಶರು ಬ್ಯಾಗವಟ್ಟೀಯವರುನರಸಿಂಹ ದಾಸರುಅವರಮಗನುಈ ಶ್ರೀನಿವಾಸನು ಕೇಳಿದ್ದ ಮೊದಲೇವೇಹರಿದಾಸವರ್ಯ ವಿಜಯಾರ್ಯರ ಪ್ರಭಾವ 11ಹರಿಭಕ್ತಾಗ್ರಣಿ ಪ್ರಹ್ಲಾದನ ಭ್ರಾತನುಧೀರ ಸಂಹ್ಲಾದನೆ ಈ ಧೀರ ಶ್ರೀನಿವಾಸಭಾರಿ ಸಾಧÀನೆ ಇವಗೆ ಒದಗಿಸ ಬೇಕೆಂದುಹರಿದಾಸವರ್ಯರು ಪೋದರು ಮಾನವಿಗೆ 12ಮಾನವಿಯಲ್ಲಿ ವಿಜಯಾರ್ಯರು ಮುಖಾಂ ಹಾಕಿಜನರಲ್ಲಿ ಹರಿಭಕ್ತಿ ಜ್ಞಾನ ಬೆಳಸುತ್ತದೀನರಿಗೆ ಯೋಗ್ಯ ವಾಂಛಿತವ ಒದಗಿಸುತ್ತಘನಮಹಿಮಹರಿಸೇವೆ ಮಾಡುತ್ತ ಇದ್ದರು13ಶ್ರೀನಿವಾಸಾಚಾರ್ಯನಿಗೆ ಉದ್ಧಾರ ಕಾಲವುಶ್ರೀನಿಧಿಯ ನಿಯಮನದಿ ಬಂದಿಹುದು ಎಂದುಶ್ರೀನಿವಾಸಾಚಾರ್ಯನಲಿ ಪೋಗಿ ವಿಜಯಾರ್ಯರುಬನ್ನಿರಿ ಹರಿಪ್ರಸಾದ ಕೊಳ್ಳಿರಿ ಎಂದರು 14ವಿಜಯದಾಸಾರ್ಯರ ಆಹ್ವಾನ ಲೆಕ್ಕಿಸದೆರಾಜಸದಿ ತಾನು ಪಂಡಿತನೆಂಬ ಗರ್ವದಿವಿಜಯಾರ್ಯರ ಕುರಿತು ಅವಜÕ ಮಾಡಿದನುಬೊಜ್ಜೆಯಲಿ ರೋಗವು ತನ್ನಿಮಿತ್ತ ಬಂತು 15ಸೋತ್ತಮಾಪರಾಧದಿಂ ವ್ಯಾಧಿ ಪೀಡಿತನಾಗಿಸೋತು ತತ್ ಪರಿಹಾರ ಯತ್ನ ಸರ್ವದಲೂಬಂದು ವಿಜಯಾರ್ಯರಲಿ ಶರಣಾಗಿ ಕ್ಷಮಿಸೆನ್ನೆಹಿತದಿಂದ ವಿಜಯಾರ್ಯರು ಕರುಣಿಸಿದರು 16ಗೋಪಾಲ ದಾಸರು ಉದ್ಧರಿಸುವರು ಪೋಗೆಂದುಕೃಪೆಯಿಂದಲಿ ವಿಜಯಾರ್ಯರು ಪೇಳಿ ಶ್ರೀನಿವಾಸಗೋಪಾಲದಾಸರಲಿ ಪೋಗಿ ಶರಣಾಗಲು ದಾಸಾರ್ಯರಲಿಶ್ರೀಪನ್ನ ಸ್ತುತಿಸೆ ಗುರುಗಳು ಒಲಿದರು ಆಗ 17ಗೋಪಾಲವಿಜಯವಿಠ್ಠಲನನ್ನ ವಿಜಯಾರ್ಯಸುಪವಿತ್ರ ಚೀಕಲಪರವಿಯಲಿ ಸ್ತುತಿಸೆಗೋಪಾಲ ದಾಸಾರ್ಯರು ಅರಿತು ಶ್ರೀನಿವಾಸನಿಗೆಉಪದೇಶ ಮಾಡಿದರು ತನ್ನಗುರುಪೇಳ್ದ ರೀತಿ18ಶ್ರೀನಿವಾಸಾಚಾರ್ಯರು ಗೋಪಾಲ ದಾಸಾರ್ಯರ ದಯದಿಪುನರಾರೋಗ್ಯ ಆಯುಷ್ಯವು ಹೊಂದಿಶ್ರೀನಿಧಿ ಭೀಮರತಿ ತೀರಸ್ಥ ವಿಠ್ಠಲನ್ನಸನ್ನಮಿಸಿ ಸಂಸ್ತುತಿಸಿ ಖ್ಯಾತರಾದರು ಜಗನ್ನಾಥ ದಾಸರೆಂದು 19ವಿಜಯನಗರಾದಿ ರಾಜ ಜಮೀನುದಾರಗಳುವಿಜಯರಾಯರನ್ನ ತಮ್ಮ ಸ್ಥಳಕ್ಕೆ ಕರೆತಂದುನಿಜಭಕ್ತಿಯಲಿ ಮರ್ಯಾದೆಗಳ ಮಾಡಿದರುವಿಜಯದಾಸರ ಮಹಿಮೆ ನೇರಲ್ಲಿ ಕಂಡು 20ತಿರುಗಿ ಬರುವಾಗ ಶ್ರೀದಾಸ ಮಹಂತರುಚಕ್ರತೀರ್ಥದಿ ಸತ್ರಯಾಗ ಮಾಡಿದರುಪುರಂದರದಾಸಾರ್ಯರು ಇದ್ದ ಸ್ಥಳ ಈ ಕ್ಷೇತ್ರಹರಿಶಿರಿಗೆ ಹನುಮಗೆ ಶಿವಗೆ ಆನಮಿಪೆ 21ಸತ್ರಯಾಗ ಕಾಲದಲಿ ಒಂದು ದಿನ ರಾತ್ರಿವಿಧವೆ ಓರ್ವಳು ತನ್ನ ಕಜ್ಜಿ ಮಗು ಸಹಿತನದಿಯಲ್ಲಿ ಬೀಳಲು ಯತ್ನಿಸಲು ಅದು ಕಂಡುಇತ್ತು ಅಭಯವ ವಿಜಯಾರ್ಯರು ಕಾಯ್ದರು 22ಭೀಮಪ್ಪನಾಯಕಧನವಂತ ಬ್ರಾಹ್ಮಣನಧರ್ಮಪತ್ನಿಯು ಆಕೆ ಪತಿಯ ಕಳಕೊಂಡ್ಲುತಾಮಸಪ್ರಚುರಮೈದುನ ಬಂದು ಬಹಳ ಕ್ರೂರಹಿಂಸೆ ಕೂಡಲು ನದಿಯೊಳು ಬೀಳೆ ಬಂದಿಹಳು 23ಸಾಧ್ವಿಯೂ ಆಕೆಯೂ ಶಿಶು ಮಹಾಭಾಗವತಎಂದು ಜ್ಞಾನ ದೃಷ್ಟಿಯಲಿ ಅರಿತರು ವಿಜಯಾರ್ಯಎಂಥವರು ಆದರೂ ಆತ್ಮಹತ್ಯೆ ಶಿಶುಹತ್ಯಯತ್ನ ತಡೆದು ರಕ್ಷಿಪುದು ಭೂತದಯವು 24ತಾಯಿಶಿಶು ಈರ್ವರನು ಮಠಕೆ ಕರಕೊಂಡು ಹೋಗಿಭಾರ್ಯೆ ಅರಳಿಯಮ್ಮ ಕೈಲಿ ಒಪ್ಪಿಸಿ ಆಕೆಹಯವದನ ಆಕೆಯ ಮೃತಮಗನ ಪ್ರತಿಯಾಗಿದಯದಿ ಕೊಟ್ಟಿಹ ಶಿಶುವ ಎಂದು ಪೋಷಿಸಿದಳು 25ಔದಾರ್ಯ ಕರುಣದಿ ಶಿಶುವನ್ನು ತಾಯಿಯನ್ನುಆದರಿಸಿ ದಾಸಾರ್ಯೆ ದಂಪತಿಯು ಮಗುವಹಿತದಿ ಮೋಹನನೆಂದು ಹೆಸರಿಟ್ಟು ಆಶಿಸಿಒದಗಿದರು ಇಹಪರಉದ್ಧಾರವಾಗೆ26ಯುಕ್ತ ಕಾಲದಿ ಮುಂಜಿ ಮದುವೆ ಮೋಹ ಮೋಹನನಿಗೆಶ್ರೀಕರನ್ನ ಅನುಗ್ರಹದಿ ಮಾಡಿಸಿ ಹರಿಯುಉತ್ಕøಷ್ಠ ನಾಮಾಂಕಿತ ಮೋಹನ ವಿಠಲ ಎಂದುಕೃಪಾಕರ ದಾಸಾರ್ಯರು ಇತ್ತರು ಮುದದಿ 27ಒಂದು ಸಮಯದಿ ಮೋಹನನಿಗೆ ಅಪಮೃತ್ಯು ಬರಲಿರಲುಶ್ರೀ ದಾಸರಾಯರು ಮೊದಲೇ ಹೇಳಿದರುಶ್ರೀ ಬಿಂದು ಮಾಧವನ್ನು ಸೇವಿಸೆ ಹೋಗಿ ನಾ ಬರುವೆಮೃತನಾದ ದೇಹವ ಕಾಪಾಡು ಹರಿಯ ಸ್ಮರಿಸೆಂದು 28ಅದರಂತೆ ಮೋಹನಗೆ ಅಪಮೃತ್ಯು ಸೋಕಲುಸಾಧ್ವಿಸತಿ ದೇಹವ ಹೊರತಂದು ರಕ್ಷಿಸೆಕದನಗೈದು ಓರ್ವ ಸಾಗಿಸಲು ಯತ್ನಿಸೆಸತಿಯು ವಿಜಯಾರ್ಯರನ್ನು ಸ್ಮರಿಸಿ ಮೊರೆಯಿಟ್ಟಳು 29ಶ್ರಿಬಿಂದುಮಾಧವನ್ನ ಸೇವಿಸಿ ದಾಸಾರ್ಯರುತಾಪೋಗಿ ಧರ್ಮರಾಜನಲಿ ಅರಿಕೆ ಮಾಡಿಕ್ಷಿಪ್ರದಲಿಅಸುತಿರುಗಿ ತÀರಿಸಿ ಬದುಕಿಸಿದರುಆರ್ಭಟದಿ ಬಲುತ್ಕಾರ ಮಾಡಿದವ ಬಿದ್ದ 30ಈ ರೀತಿ ಅಪಮೃತ್ಯು ಪರಿಹರಿಸಿದ್ದನ್ನಕೇಳಿಮೋಹನಭಾರಿ ಕರುಣಾಳು ವಿಜಯಾರ್ಯರ ಸ್ತುತಿಸಿಉತ್ಕøಷ್ಟ ಕೀರ್ತನೆ ಹಾಡಿರುವುದು ಲೋಕಅರಿವುದು ಅದ್ಯಾಪಿ ಹೋಗಳುವರು ಜನರು 31ಶ್ರೀ ವಿಜಯದಾಸರ ಅನುಗ್ರಹದಿ ಮೋಹನಕೋವಿದವರ್ಯನು ಶ್ರುತಿಯುಕ್ತ ಯುತವಾದತತ್ವಬೋಧಕ ಕೀರ್ತನೆಗಳು ಶ್ರೀಹರಿಯಅವತಾರಲೀಲಾನು ವರ್ಣನ ಮಾಡಿಹರು 32ರಾಜೀವಾಸನ ಪಿತ ಪ್ರಸನ್ನ ಶ್ರೀನಿವಾಸ ಶ್ರೀರಾಜೀವಾಲಯ ಪತಿಗೆ ಪ್ರಿಯಕರ ದಾಸಾರ್ಯವಿಜಯರಾಯರೇ ನಿಮ್ಮ ರಾಜೀವಾಂಘ್ರಿಗಳಲ್ಲಿನಿಜದಿ ಶರಣು ಶರಣು ಶರಣು ಶರಣಾದೆ 33- ಇತಿ ಚತುರ್ಥಾಧ್ಯಾಯ ಸಮಾಪ್ತಿ -ಪಂಚಮ ಅಧ್ಯಾಯಶರಣು ಶರಣು ಶರಣು ವಿಜಯದಾಸಾರ್ಯರೆಶರಣಾದೆ ತವ ವಾರಿಜಾಂಘ್ರಿಯುಗ್ಮದಲಿಸೂರಿಸುರ ಜನ ಗಂಗಾಧರ ವಾಯುವಿಧಿವಿನುತಶಿರಿವರಸರ್ವೋತ್ತಮನೆ ಪ್ರಿಯತರ ದಾಸಾರ್ಯ ಪವಿಜಯದಾಸಾರ್ಯರು ದೇವ ವೃಂದದವರೆಂದುನಿಜವಾಗಿ ಅರಿವುದಕೆ ಇತಿಹಾಸ ಬಹು ಉಂಟುನಿಜಭಕ್ತರಲ್ಲದೆ ಪಾಮರರು ಸಹ ಅರಿತಸಜ್ಜನರು ಹೊಗಳುವ ಇತಿಹಾಸಕೇಳಿ1ಬಾಲ ವಿಧವೆಯುಕರ್ಮಸುಳಿಯಲ್ಲಿ ಸಿಲುಕಿಬಲು ನೀಚ ವೃತ್ತಿಯವಳಂತೆ ತೋರಿಕಲುಷವಂತಳು ಎಂದು ಬಹಿಷ್ಕøತಳಾದವಳಆಲಯದಿ ವಿಜಯಾರ್ಯ ಕೊಂಡರು ಅವತನವ 2ತಮ್ಮ ಆಹ್ವಾನವ ಲೆಕ್ಕಿಸದೆ ಮೊದಲೇ ಈಆಧಮಳ ಆಹ್ವಾನ ಮನ್ನಣೆÉ ಮಾಡಿಆ ಮನೆಯಲ್ಲಿ ಪೂಜಾನೈವೇದ್ಯ ಮಾಡಿದರೆಂದುಶ್ರೀಮಠದ ಭೂಸುರರು ಕೋಪ ಹೊಂದಿದರು 3ಶ್ರೀವರನು ವಿಧಿವಾಯು ಅಮರ ಶ್ರೇಷ್ಠರ ಸಹಯಾವ ದಾಸಾರ್ಯರಲಿ ಪ್ರಚುರನಾಗಿಹನೋಯಾರನ್ನ ಸ್ಮರಿಸಲು ದುರಿತಹರ ಪುಣ್ಯದವೋಅವರು ಭೋಜನ ಮಾಡುತಿರೆ ನಿಂತಳು ಬಾಲೆ 4ಮಹಾನ್ ದಾಸರಿಗೆ ಆಕೆ ಮಾಡಿಸಿದ ಪೂಜೆಯಿಂದೇಹಜದುರಿತಗಳು ಪರಿಹಾರವಾಗಿಶ್ರೀ ಹರಿಯದಾಸರಿಗೆ ಮನಸಾ ಸನ್ನಮಿಸಿದೇಹೇಂದ್ರಿಯಗಳ ಲಯವ ಚಿಂತಿಸಿದಳು 5ದಾಸಾರ್ಯರು ಭೋಜನವ ಪೂರೈಸಲುಅಸುಆಕೆಗಾತ್ರಬಿಟ್ಟು ಹೊರಟು ಹೋಯಿತುದಾಸವರ್ಯರು ತಾವೇ ಆಕೆಗೆ ಸಂಸ್ಕಾರಶ್ರೀಶಹರಿಪ್ರೀತಿಯಾಗಲಿಕೆ ಮಾಡಿದರು6ದೂಷಿತ ಬಹಿಷ್ಕøತ ಸ್ತ್ರೀ ಮನೆಯಲ್ಲಿ ಉಂಡುದೂಷಣಾರ್ಹ ಕ್ರಿಯಾ ಚರಿಸಿಹರು ಎಂದುದೀಕ್ಷಾ ಪ್ರವರ್ಧಕ ಶ್ರೀ ಮಠಾಧಿಕಾರಿಗಳುಬಹಿಷ್ಕಾರ ಮಾಡಿದರಂತೆ ದಾಸಾರ್ಯರಿಗೆ 7ತಪೋನಿಧಿಗಳುಸೂರಿವರಸ್ವಾಮಿಗಳುಶ್ರೀಪನ್ನ ಪೂಜಿಸಿ ಪ್ರತಿಮೆಯಲ್ಲಿಅಪರೋಕ್ಷಜ್ಞಾನದಿ ಸರ್ವವ ಅರಿತುಶ್ರೀಪ ಪ್ರಿಯ ವಿಜಯಾರ್ಯರನ್ನು ಬರಮಾಡಿದರು 8ಜ್ಞಾನಿವರ್ಯ ದಾಸಾರ್ಯರು ಇದು ಮೊದಲೇ ಅರಿತುತನ್ನ ಶಿಷ್ಯರೊಡೆ ಹೇಳೆ ಆಹ್ವಾನ ಬಂದುತನ್ನವರ ಸಹ ಶ್ರೀ ಮಠಕೆ ಪೋಗಿ ಸ್ವಾಮಿಗಳಅನುಗ್ರಹ ಹೊಂದಿ ಸಂಭಾಷಿಸಿದರು ಮುದದಿ 9ಪ್ರತಿಮೆಯಲಿ ಶ್ರೀಹರಿಯ ಸಾನ್ನಿಧ್ಯ ಲಕ್ಷಣವೇದ್ಯವಾಗುವಿಕೆ ದಾಸಾರ್ಯರು ಒದಗಲಿಕ್ಕೇ ಎಂದುಸುತಪೋನಿಧಿ ಸ್ವಾಮಿಗಳು ಹೇಳಿ ದಾಸಾರ್ಯರುಇಂದಿರೇಶ ಸುಪ್ರಚುರ ವ್ಯಾಪ್ತನೂ ಎಂದರು 10ಪ್ರತಿಮೆಯಲಿ ಹಿಂದಿನ ದಿನಕ್ಕಿಂತ ಆಗಆದಿಯಂತೇವೆಯೇ ಶ್ರೀಯಃಪತಿ ಜ್ವಲಿಸಿಮುದಮನದಿ ಶ್ರೀಗಳು ಪೂಜಾದಿ ಪೂರೈಸಿಕೇಳ್ದರು ದಾಸರನ್ನ ಬಾಲೆಯ ವೃತ್ತಾಂತವ 11ದಾಸವರ್ಯರು ಹೇಳಿದರು ಆ ಬಾಲೆಯುಸುಮನಸವೃಂದದಿ ಓರ್ವಳು ಪೂರ್ವವಸುಧೆಯಲಿ ಪುಟ್ಟುವೆನು ಎನ್ನನುದ್ಧರಿಸಿರಿವಾತ್ಸಲ್ಯದಿ ಎಂದು ಬೇಡಿದ್ದಳೆಂದು 12ತತ್ಕಾಲ ಮುಗಿಯಬೇಕಾದ ಪ್ರಾರಬ್ಧಕರ್ಮಆಕೆಗೆ ಮುಗಿಯುವ ಸಮಯ ವಿಜಯಾರ್ಯಆಕೆ ಮನೆಗೆ ಹೋಗಿ ಸಾಧನ ಸಂಪತ್ತೊದಗಿಆಕೆಗೆ ಗತಿಯ ಕಲ್ಪಿಸಿಹರು ದಯದಿ 13ಪ್ರಾರಬ್ಧ ಕಳೆಯಲಿಕೋ ಶಾಪ ನಿಮಿತ್ತವೋಸುರರುಭುವಿಯಲ್ಲಿ ಪುಟ್ಟಿ ಒಮ್ಮೊಮ್ಮೆ ನಿಷಿದ್ದಕರ್ಮಚರಿಸಿದರೂ ಪಾಪ ಲೇಪವಾಗವುಇತರರಿಗೆ ಲೇಪವುಂಟುಹರಿಪರಾನ್ಮುಖರ್ಗೆ14ಹರಿಗೆ ಪ್ರಿಯಕರ ವಿಜಯರಾಯ ಪ್ರಭಾವತೋರಿಸಿದ ಈವೃತ್ತಾಂತದಿಕ್ಕು ದಿಕ್ಕುಹರಡಿತು ಜನರೆಲ್ಲ ವಿಜಯದಾಸಾರ್ಯರುಸುರರೇವೇ ನರರಲ್ಲೆಂದು ನಿಶ್ಚಯಿಸಿದರು 15ತಿರುಪತಿಯಲ್ಲಿ ಶ್ರೀ ಶ್ರೀನಿವಾಸನ ರಥದಾರಿಯಲ್ಲಿ ನಿಲ್ಲಲು ವಿಜಯದಾಸಾರ್ಯರುಹರಿತತ್ವ ಮಹಿಮೆಯ ಕವನ ರೂಪದಿ ಸ್ತುತಿಸೆಗರುಡ ಗಮನನು ರಥದಿ ಸರಸರನೆ ಬಂದ 16ಮೂರುಬಾರಿಕಾಶಿಗೆ ಹೋದಾಗಲೂ ಗಂಗೆಅರಿತು ಭೃಗುಮುನಿ ಅವತಾರವೆಂದುಹರುಷ ತೋರಿ ಉಕ್ಕಿದಳು ಭೃಗು ವಿಜಯರಾಯರುವರಅತಿಥಿ ಶಿವತಾತ ಪ್ರಿಯರೆಂದು17ವೇದ ವೇದಾಂತ ಪುರಾಣಾರ್ಥ ರಹಸ್ಯಗಳುಸದಾಗಮ ಸರ್ವರ್ಥಗಳ ಸಾರೋದ್ಧಾರವುಈ ದಾಸ ಮಹಂತರ ಗ್ರಂಥ ಸುಳಾದಿಗಳುಓದಿ ಕೇಳ್ವವರಿಗೆ ಇಹಪರಉದ್ಧಾರ18ಇಂದ್ರಾದಿ ಜಗದ್ಗುರು ಸದಾಶಿವನ್ನ ಸೇವಿಸುತ್ತರುದ್ರಾಂತರ್ಯಾಮಿ ನರಹರಿಯ ಅರ್ಚಿಸುತ್ತವಂದಿಸುತ್ತ ಚಿಪ್ಪಗಿರಿ ವಾಸಿಷ್ಠ ವಿಜಯವಿಠ್ಠಲ ಕೃಷ್ಣನ್ನಹೊಂದಿದರು ದಾನವಾಗಿ ಆಕ್ಷೇತ್ರವನ್ನು ಮೂರ್ತಿಯನ್ನು 19ಪಾಲಸಾಗರಪೋಲು ಆ ವಾಪಿ ಸುಪವಿತ್ರತಟದಲ್ಲಿಯೇ ವಾಸಸ್ಥಾನ ಮಾಡಿಕೊಂಡುಅಲ್ಲೇ ಇದ್ದರು ದಾಸಾರ್ಯರು ಪಾಠ ಪ್ರವಚನ ಭಜನೆಮಾಲೋಲ ಸುಪ್ರೀತಿಕರವಾಗಿ ಮಾಡುತ್ತ 20ಮೋದಮಯ ಶ್ರೀ ಶ್ರೀನಿವಾಸನ್ನ ಸೇವಿಸುತಮೇದಿನಿಯಲಿ ಸುಜರನ್ನ ಉದ್ಧರಿಸಿಕಾರ್ತೀಕ ಶುಧ್ಧ ದಶಮಿಯಲ್ಲಿ ಸ್ವಸ್ಥಾನಯೈದಿದರು ಹರಿಪಾದ ಧ್ಯಾನಿಸುತ್ತ ಧೀರ 21ವಿಜಯರಾಯರ ನೆನೆದರೆ ಆಯುಷ್ಯ ಆರೋಗ್ಯಶ್ರೀನಿಜಭಕ್ತಿ ಜ್ಞಾನವುವಿಜಯಎಲ್ಲೆಲ್ಲೂವಿಜಯದಾಸಾಂತಸ್ಥ ಮಧ್ವಾಂತರ್ಗತ ಶ್ರೀಶವಿಜಯಸಾರಥಿ ಶ್ರೀನಿವಾಸನುಈವ22ಧೀರ ಭಕ್ತಾಗ್ರಣಿ ಶ್ರೀಮದ್ ಗುರುವರ್ಯರುಭೂರಿಕರುಣಿಯು ಗೋಪಾಲದಾಸಾರ್ಯಹರಿದಾಸವರ ಹಯವದನ ವಿಠ್ಠಲವಿರಾಗಿ ವೇಣುಗೋಪಾಲ ಜಗನ್ನಾಥದಾಸರು 23ಹರಿದಾಸ ವೃಂದದಿ ಖ್ಯಾತ ಸೂರಿಗಳೆಲ್ಲರೂಗುರುಶ್ರೀಶ ವಿಠ್ಠಲಾಂಕಿತ ಕುಂಠೋಜಿ ಆರ್ಯಶ್ರೀ ರಘುಪತಿ ವಿಠ್ಠಲ ಇಂಥ ಸರ್ವರೂನೂಪರಿಪರಿ ವಿಧದಿ ಸ್ತುತಿಸಿಹರು ವಿಜಯಾರ್ಯರನ್ನ 24ವಿಜಯಾರ್ಯ ರಕ್ಷಿತ ಪೋಷಿತ ಉಪದಿಷ್ಟನಿಜದಾಸವರ್ಯ ಮೋಹನ್ನ ದಾಸಾರ್ಯವಿಜಯದಾಸಾರ್ಯನುಗ್ರಹದಿ ಬಹುಕವನಗಳಭುಜಗಭೂಷಣ ಈಡ್ಯನ್ನ ಸ್ತುತಿಸಿ ರಚಿಸಿಹರು25ಉತ್ತಮಶ್ಲೋಕ ಸ್ತುತಿಶತ ಸಹಕೀರ್ತನೆಗಳ್ಭಕ್ತಿಜ್ಞಾನ ವರ್ಧಿಪುದು ಮಹಾನ್ ಮೋಹನ್ನ ರಚಿಸಿದ್ದುಗ್ರಂಥಗಳುಪಂಡಿತಪಾಮರರಿಗೂ ಸಹ ಸುಬೋಧಕವುಸುಧಾರಸ ಪೋಲು ಹಾಡಿ ರಸಿಕರೇ ಪಠಿಸಿ 26ನಿರ್ಮತ್ಸರ ಸಾತ್ವಿಕನು ಹರಿಭಕ್ತನುವಿಮಲ ಹರಿದಾಸ ಸಾಹಿತ್ಯ ಸೂತ್ರಭಾಷ್ಯಕ್ರಮದಿ ಕಲಿತ ಆನಂದಾಚಾರ್ಯ ಎನ್ನಲಿ ಬಂದುಪ್ರೇಮದಿಂ ಪಠಿಸೆ ನಾಕೇಳಿಸುಖಿಸಿಹೆನು27ಪ್ರಸನ್ನರಾಮ ಶ್ರೀನಿವಾಸಅಖಿಳಸದ್ಗುಣನಿಧಿಯೇದೋಷದೂರನೇ ಗುರಗ ದಯದಿ ಸಲಹೋ ಇವನ್ನದಾಸದೀಕ್ಷೆ ಜ್ಞಾನ ಪ್ರವಚನ ಪಟುತ್ವವೀಯೋಕುಸುಮಭವ ಪಿತ ನಮೋ ಶ್ರೀ ಪ್ರಸನ್ನ ಶ್ರೀನಿವಾಸ 28 ಪ- ಇತಿ ಪಂಚಮೋದ್ಯಾಯ ಸಮಾಪ್ತ-
--------------
ಪ್ರಸನ್ನ ಶ್ರೀನಿವಾಸದಾಸರು
ಸಖ್ಯವಿರಬೇಕು ಹರಿಭಕ್ತಜನಕೆಮುಕ್ತಿದಾಯಕ ಪಾರ್ಥಸಖನ ಪಾದಾಬ್ಜದಲಿ ಪ.ಅನಾದ್ಯನಂತ ಕಾಲಕ್ಕು ಸಾಯುಜ್ಯಸಖಅನಂತಜೀವರಿಗೆ ಬಿಂಬರೂಪತಾನೆ ಜೀವರಿಗನ್ನಪಾನಿತ್ತು ಪಾಲಿಸುವಪ್ರಾಣೇಶ ಹೃದ್ಗುಹ ಪ್ರಾಣಪ್ರಿಯನ 1ಶ್ರೇಯಸವನೀವಪ್ರತಿಶ್ರೇಯಸದ ಬಯಕಿಲ್ಲಗೀಶ್ರೇಯಸವನೀವ ಔದಾರ್ಯಗುಣದಿಮಾಯ ದಾರಿದ್ರಾದ್ಯವಿದ್ಯತಮೋಭಾನುವಾಯುಸಖ ಜ್ಞಾನಿಜನಪ್ರಿಯ ಸಖನೊಳು 2ಕ್ಷುತ್ತøಷೆ ಭಯಾಂತ ಸರ್ವತ್ರ ಸಂರಕ್ಷಕ ಷಟ್ಶತ್ರು ಸಂಹಾರಿಪರಾತ್ಪರಸಖವೇತ್ತøಜನಧೇನು ವೇದೋಪನಿಷದ್ವೇದ್ಯಮಿತ್ರೇಂದು ಕೋಟಿ ಭ್ರಾಜಿತಗಾತ್ರ ಹರಿಯ 3ಕರುಣಾರ್ಣವನು ಶರಣು ಸುರವೃಕ್ಷ ಸುಖವಾರ್ಧಿದುರಿತಭವದೂರ ನಿರ್ದೋಷಗುಣದಿಸುರಮುನಿನಿಕರಸೇವ್ಯಶಾಶ್ವದೇಕೋಭವ್ಯವರಸಹಸ್ರಾನಂತ ವಿಗ್ರಹನೊಳು4ಪಾರ್ಥಸಖಗೋಪವಧೂಗೋತ್ರಸಖ ಸ್ತ್ರೀಪುತ್ರಮಿತ್ರದೇಹೇಂದ್ರಿಯಾತ್ಪ್ರಿಯ ಕೃಷ್ಣಮಿತ್ರವರನೊಬ್ಬ ಸರ್ವತ್ರ ನಾರಾಯಣಾನ್ಯತ್ರ ಸ್ನೇಹವ ತ್ಯಜಿಸಿ ಶ್ರೀ ಪ್ರಸನ್ವೆಂಕಟನ 5
--------------
ಪ್ರಸನ್ನವೆಂಕಟದಾಸರು