ಒಟ್ಟು 17 ಕಡೆಗಳಲ್ಲಿ , 8 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಕುಲದ ಗೋಪಿಯರದೆಷ್ಟು ಧನ್ಯರೋ |ಶ್ರೀಕಾಂತನನುರಾಗದಲಿ ಪಾಡುತಿಹರೊ ಪಕುಳಿತು ಕರೆವಾಗ ನಿಂತು ಕಳವೆಗಳ ಕುಟ್ಟುವಾಗ |ತಳಿಸಾರಣಿ ಸಮ್ಮಾರ್ಜಿಸುವಾಗ ||ಅಳುವ ಮಕ್ಕಳ ತೊಟ್ಟಿಲೊಳಿಟ್ಟು ತೂಗುವಾಗ |ಬೆಳಗುಜಾವದಿ ಮೊಸರ ಕಡೆವಾಗಲು 1ನಡೆವಾಗ ನುಡಿವಾಗ ಭೋಜನವ ಮಾಡುವಾಗ |ಉಡುವಾಗ ಆಭರಣ ಇಡುವಾಗಲು ||ಮುಡಿವಾಗ ಮಲ್ಲಿಗೆ ಉಯ್ಯಲೆಯನಾಡುವಾಗ |ಅಡಿಗಡಿಗೆ ತಾಂಬೂಲ ಮೆಲುವಾಗಲು 2ಪರಿಪರಿ ರಾಗದಿಂದಲಿ ಪರಿಪರಿ ಮಾತಿನಿಂದ |ಪರಿಪರಿ ಗೀತಪ್ರಸಂಗದಿಂದ ||ಪರಿಪೂರ್ಣನಾದ ಶ್ರೀ ಪುರಂದರವಿಠಲನ |ಹಿರಿದಾಗಿ ಮನದೊಳಗೆ ಸ್ಮರಿಸುತಿಹರು 3
--------------
ಪುರಂದರದಾಸರು
ವರುಷ ಕಾರಣವಿಲ್ಲ ಹರಿಭಜನೆಗೆ |ಅರಿತ ಸಜ್ಜನರೆಲ್ಲಕೇಳಿಸಮ್ಮುದದಿಪ.ತರಳತನದಲಿ ಕಂಡ ಹರಿಯ ಧ್ರುವರಾಯನು |ಹಿರಿಯ ತಾನವನಯ್ಯ ಕಂಡನೇನೂ ? ||ತರಳ ಪ್ರಹ್ಲಾದ ನರಹರಿಯನು ತಾ ಕಂಡ |ಹಿರಿಯನವನಪ್ಪ ತಾ ಮರೆಯಲಿಲ್ಲವೇನೊ ? 1ಹಿರಿದಾಗಿ ಬಹುಕಾಲ ಮರದ ಮೇಲ್ಬಾಳುವ |ಇರುಳು ಗಣ್ಣಿನ ಗೂಗೆ ತಾ ದೊಡ್ಡದೆ ? ||ಮರೆಯಾದ ಅರಗಿಣಿ ಹರಿಕೃಷ್ಣ ಎಂದೊದರೆ |ಮರಿ ದೊಡ್ಡದೆಂತೆಂದು ಪೇಳುವರು ಬುಧರು 2ಸುರುವದಾ ಒದರುವರು ಅರಣ್ಯವಾಸಿಗಳು |ಮರದಡಿಗೆ ಬಿದ್ದ ಎಲೆಗಳ ತಿನ್ನುತ ||ಪರಮಪಾತಕಿ ಅಜಾಮಿಳನು ನಾರಗ ಎನಲು |ಭರದಿಂದ ಸಲುಹಿದನು ಪುರಂದರವಿಠಲ 3
--------------
ಪುರಂದರದಾಸರು