ಒಟ್ಟು 21 ಕಡೆಗಳಲ್ಲಿ , 3 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುಕ್ಮಿಣೀಶ ವಿಠಲ | ಕಾಪಾಡೊ ಇವನಾ ಪ ವಿಖನ ಸಾಂಡದ ದೊರೆಯೆ | ಅಖಳಂಕ ಮಹಿಮಾ ಅ.ಪ. ಸುಪಥದಲಿ ನಡೆವಂತ | ನಿಪುಣತರ ನಿವನೀಗೆಉಪದೇಶವಿತ್ತಿಹೆನೊ | ಅಪವರ್ಗದಾತಾ |ಕೃಪಣ ವತ್ಸಲ ನಿನ್ನ | ಕೃಪೆ ದೃಷ್ಟಿಯಲಿ ನೋಡಿಅಪೇಕ್ಷಿತವನಿತ್ತು | ನೀ ಪೋಷಿಸಿವನಾ 1 ಜ್ಞಾನವಿಜ್ಞಾನದಲಿ | ನೀನಿರುವ ತತ್ವವನುನೀನಾಗಿ ತಿಳಿಸುತ್ತ | ಕಾಪಾಡೊ ಹರಿಯೇ |ಶ್ರೀನಿವಾಸನೆ ದಯಾ | ಪೂರ್ಣ ನೀನಾಗುತ್ತಜ್ಞಾನಭಕ್ತಿಯನಿತ್ತು | ಕಾಪಾಡೊ ಹರಿಯೆ 2 ಎಲ್ಲೆಲ್ಲು ನೀನಿರುವೆ | ಸೊಲ್ಲನ್ನು ಅನುಭವಕೆಉಲ್ಲಾಸದಲಿ ಇತ್ತು | ಬಿಲ್ಲಾಳು ಎನಿಸೋಬಲ್ಲಿದರ ಕೂಟದಲಿ | ಬಿಲ್ಲಿ ನಂತರಿಸುತ್ತಮಲ್ಲಮರ್ದನಕೃಷ್ಣ | ಕಾಪಾಡೊ ಇವನ 3 ಸತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂದೆಂಬಮತಿಯನೇ ಕರುಣಿಸುತ | ಅತಿಶಯವ ತೋರೀಮತಿಮತಾಂವರರಂಘ್ರಿ | ರತಿಯನ್ನೆ ಕರುಣಿಸುತಮತಿವಂತ ನೆನಸಿವನ | ಮಾರುತನ ಮತದೀ 4 ದೇವತವ ಮಹಿಮೆಗಳು | ಭಾವದಲಿ ಪೊಳೆಯಲ್ಕೆಕೋವಿದರ ಸಂಗವನು | ನೀ ವೊಲಿದು ಈಯೋ |ನೀ ವೊಲಿಯದಿನ್ನಿಲ್ಲ | ಗೋವುಗಳ ಪರಿಪಾಲದೇವ ದೇವೇಶ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶಿರಿ ಮುದ್ದು ಕೃಷ್ಣವಿಠಲ | ಪೊರೆಯ ಬೇಕಿವಳಾ ಪ ಪಾದ | ಸಾರಿ ಭಜಿಸುವಳಾ ಅ.ಪ. ಪರಿಪರಿಯ ವಿಧದಿಂದ | ತೈಜಸನೆ ನೀನಾಗಿವರಸೂ ರೂಪಗಳಿಂದ | ವಸುದೇವ ಸುತನೇತರಳೆಗತಿ ಆಶ್ಚರ್ಯ | ತೋರಿ ಅಡಗಿದೆ ದೇವಶಿರಿಮುದ್ದು ಕೃಷ್ಣನೇ | ಮರುತಂತರಾತ್ಮ 1 ಸುಪ್ತಿಯಲಿ ಗುರುಪಾದ | ಭಕ್ತಿಯಲಿ ನಮಿಸುತ್ತತೀರ್ಥವನೆ ತಕ್ಕೊಂಡು | ಧನ್ಯನಾನೆಂದುಅತ್ಯಂತ ಹರ್ಷದಲಿ | ಸ್ತೋತ್ರವನೆ ಮಾಡುತ್ತಸಕ್ತಿಯನೆ ತೋರಿಹಳು | ದಾಸಪಂಥದಲೀ 2 ಭುವನ ಪಾವನವೆನಿಪ | ಮಧ್ವಮತದಾಸಕ್ತಿಶ್ರವಣಕಾನಂದವೆನೆ | ಕವನ ಸಂಸ್ಪೂರ್ತೀಜೀವೊತ್ತಮರ ಭಕುತಿ | ವಿಷಯದಲಿ ವಿರಕ್ತಿಹವಣಿಸೋ ಶ್ರೀಹರಿಯೆ | ಭವಕರಿಗೆ ಹರಿಯ 3 ಪತಿಸುತರು ಹಿತರಲ್ಲಿ | ಮತಿಮತಾಂವರರಲ್ಲಿರತನು ಶ್ರೀಹರಿಯೆಂಬ | ಸುಜ್ಞಾನವನ್ನುಕೃತಿಪತಿಯ ಕರುಣಿಸುತ | ಸಾಧನವ ಗೈಸುವುದುಚತುರಾಸ್ಯಪಿತ ಹರಿಯೆ | ದುರಿತವನ ದಾವಾ 4 ಮಾನನಿಧಿ ಶ್ರೀಹರಿಯೆ | ಧ್ಯಾನಾನುಕೂಲಿಸುತಸಾನುರಾಗದಿ ನಿನ್ನ | ರೂಪಹೃದ್ಗುಹದೀಕಾಣಿಪಂತಸಗೊ ಗುರು | ಗೋವಿಂದ ವಿಠಲನೆಆವಾದದನ್ಯವನು | ಬೇಡ ಬಂದಿಲ್ಲ5
--------------
ಗುರುಗೋವಿಂದವಿಠಲರು
ಶೇಷ ಪರ್ಯಂಕ ಶಯನ ವಿಠಲ ಪೊರೆ ಇವಳ ಪ ವಾಸುದೇವನೆ ನಿನ್ನ | ದಾಸಿ ಎಂದೆನಿಸಿ ಭವಪಾಶವನೆ ಕಳೆಯೊ ಸುವಿ | ಶೇಷ ಹರಿಯೇ ಅ.ಪ. ಪತಿಸುತರು ಹಿತರಲ್ಲಿ | ವಿತತವಾಗಿರುವಂಥಅತಿಶಯದ ತವರೂಪ | ಸತತ ಚಿಂತಸುವಾ |ಮತಿಯನೇ ಕರುಣಿಸುತ | ಕೃತ ಕಾರ್ಯಳೆಂದೆನಿಸೊಕ್ಷಿತಿರಮಣ ಭಿನ್ನವಿಪೆ | ಪತಿಕರಿಸೊ ಇದನಾ 1 ಬುದ್ಧಿಯಲಿ ಸನ್ನಿಹಿತ | ವೃದ್ಧಿಗೈಸಿವಳಲ್ಲಿಮಧ್ವಮತ ಸಿದ್ಧಾಂತ | ಪದ್ಧತಿಗಳಾಅಧ್ವರೇಡ್ಯನೆ ಅನಿ | ರುದ್ಧ ಮೂರುತಿ ಹರಿಯೇಕೃದ್ಧಖಳ ಸಂಹಾರಿ | ಪದ್ಮನಾಭಾ 2 ಕೀಚಕಾರಿ ಪ್ರಿಯನೆ | ಮೋಚಕೇಚ್ಛೆಯ ಮಾಡಿಪ್ರಾಚೀನ ಕರ್ಮದಿಂ | ಮೋಚನವ ಗೈಸೋ |ಯಾಚಿಸುವೆನೋ ಸವ್ಯ | ಸಾಚಿಸಖ ನೀನೆಂದುಈಕ್ಷಿಪುದು ಕರುಣ ಕಟಾಕ್ಷದಲಿ ಹರಿಯೇ 3 ಸಾರ ಸುಖಸಾಂದ್ರಾ 4 ಕಾವ ಕರುಣಿಗಳರಸ | ಭಾಮಕರ ಪರಿಪಾಲಾಓವಿತವ ಸಂಸ್ಮರಣೆ | ಸಾರ್ವಕಾಲಿದಲೀಈವುದಿವಳಿಗೆ ಎಂದು | ಭಾವದಲಿ ಭಿನ್ನವಿಪೆಗೋವಿದಾಂ ಪತಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶೇಷವಂದ್ಯ ಹರಿ ವಿಠಲ | ನೀ ಸಲಹೊ ಇವಳಾ ಪ ವಾಸುದೇವನೆ ಕೃಷ್ಣ | ಶ್ರೀಶ ಪುರುಷೋತ್ತಮ ಅ.ಪ. ಸೂಕರ ನೀಚ | ಯೋನಿಗಳಲಿ ಜನಿಸಿಜ್ಞಾನಾನು ಸಂಧಾನ | ಕಾಣದಿದ್ದಾಗ್ಯೂಅನೇಕ ಪೂರ್ವವೆನೆ | ಪುಣ್ಯ ಸಂಚಿತದಿಂದಮಾನವ ಸುಜನ್ಮದೊಳು | ಜನುಮ ಪೊತ್ರಿಹಳೊ 1 ತೈಜಸ ಸೂಚಿ | ವರ ಅಂಕಿತವನಿತ್ತೆಮರುತಾಂತರಾತ್ಮಕನೆ | ಮದ್ಬಿಂಜ ಪೊರೆಯಿವಳಾ 2 ವರಸು ಸೌಭಾಗ್ಯವನೆ | ಪರಿಹರಿಸಿ ದುಷ್ಕರ್ಮನಿರುತ ನಿನ್ನಯ ನಾಮ | ಸ್ಮರಣೆ ಸುಖವಿತ್ತೂಮರುತ ಮತ ತತ್ವಗಳ | ಅರಿವಾಗುವಂತೆಸಗೋಕರಿವರದ ಕಮಲಾಕ್ಷ | ಕಾರುಣ್ಯ ಮಾರ್ತೇ 3 ಪತಿಸುತರು ಹಿತರಲ್ಲಿ | ಕೃತಿರಮಣ ಸುವ್ಯಾಪ್ತಮತಿಇತ್ತು ಪೊರೆ ಇವಳ | ಕ್ಷಿತಿರಮಣ ದೇವಾಮತಿಮತಾಂ ವರರಂಘ್ರಿ | ಹಿತಸೇವೆ ದೊರಕಿಸುತಕೃತ ಕೃತ್ಯಳೆಂದೆನಿಸೊ | ಅತಿ ಚಿತ್ರ ಚರಿತಾ 4 ಕಾವ ಕರುಣಿಯೆ ದೇವ | ಭಾವುಕರ ಪರಿಪಾಲನೀವೊಲಿಯ ದಿನ್ನಿಲ್ಲ | ಆವತ್ರೈ ಜಗದೀನೋವುಸುಖ ದ್ವಂದ್ವಗಳ | ಸಮತೆಯು ಉಂಬಂತೆನಿವೊಲಿಯೊ ದೇವ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರವಣಾನಂದ ವಿಠಲ | ಭುವನ ಪಾವನನೇ ಪ ಪವಿತರಗೈ ಇವಳ | ತವಗುಣ ಗಾನದೀ ಅ.ಪ. ಸುಪ್ತಿಯಲಿ ಗುರುದತ್ತ | ಉತ್ತುಮಾಂಕಿತ ಕೇಳಿಇತ್ತಿಹೆನೊ ಉಪದೇಶ | ಭಕ್ತವತ್ಸಲನೇಎತ್ತಿ ಭವದಿಂದವಳಾ | ಉತ್ತರಿಸ ಬೇಕಯ್ಯಚಿತ್ತಜಾಪಿತ ಸರ್ವ | ಕರ್ತೃಕಾರಕನೇ 1 ಪತಿಸುತರು ಹಿತರಲ್ಲಿ | ವ್ಯಾಪ್ತ ನಿನ್ನನು ತಿಳಿದುಹಿತದಿಂದ ಸೇವಿಸುತ | ಮತಿಯ ಕರುಣಿಸುತಾ | ಗತಿ ಗೋತ್ರ ನೀನಾಗಿ | ಮತಿ ಮತಾಂವರರಂಘ್ರಿಶತ ಪತ್ರ ಪೂಜಿಸುವ | ಪಥದಲ್ಲಿ ಇರಿಸೋ 2 ಹರಿಗುರೂ ಸದ್ಭಕ್ತಿ | ನಿರುತ ವೃದ್ಧಿಸುತಿವಳಪರಿಪರಿಯ ಸತ್ಕಾಮ | ಪರಿಪೂರ್ಣಗೊಳಿಸೀನೆರೆಯವರಿಗಾಶ್ಚರ್ಯ | ತೆರೆದಂತೆ ನೀ ಮಾಡಿಮೆರೆಸೊ ಈ ಭುವದಲ್ಲಿ | ಪರಮ ಕೃಪೆ ಸಾಂದ್ರ 3 ವೇಣುಗೋಪನೆ ನಿನ್ನ | ಗಾನಕಲೆ ವೃದ್ಧಿಸುತಸಾನುರಾಗದಿ ಕಾಯೊ | ಜ್ಞಾನಿ ಜನ ವಂದ್ಯಾ |ಮಾನಾಭಿ ಮಾನಗಳು | ನಿನ್ನದೆಂದೆನಿವಮತಿನೀನಾಗಿ ಕರುಣಿಪುದು | ಮಾನನಿಧಿ ದೇವಾ 4 ಪರಿ ಪಾಲಿಸಿವಳಾ 5
--------------
ಗುರುಗೋವಿಂದವಿಠಲರು
ಶ್ರೀ ಸುಧಾಮ ಚರಿತ್ರೆಶ್ರೀ ಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನೂ ಪಘೋರದಾರಿದ್ಯ್ರದ ಬಾಧೆಯೊಳಿರುತಲಿಚಾರುಸಚ್ಚರಿತೆಯ ಆಗರವಾಗಿಹ ಅ.ಪ.ಶೀಲ ಸದ್ಗುಣವತಿಯು ಸುಸೀಲೆಯುಸತಿಮಣಿ ಪತಿವ್ರತೆಯುಬಾಲಕ ಸಲಹಲು ಕಡು ಕಷ್ಟ ಬಡುತಲಿ ಶ್ರೀಲೋಲನ ಧ್ಯಾನದಿ ಕಾಲಕಳೆಯುತಲಿಹಳು 1ಮನದಲಿ ಯೋಚಿಸುತ ಅನುನಯದೊಳುಪತಿಗೆ ತಾ ನುಡಿದಳೆಂದೂಅನುಭವಿಸಲಾರೆಘನದಾರಿದ್ರ್ಯವನುಸಂ ಮ್ಮಂಧಿಗಳು ಸ್ನೇಹಿತರಲ್ಲವೇ ನಿಮಗೆ 2ಅಂದ ಮಾತನು ಕೇಳುತ ಕುಚೇಲ ತಾಹಿಂದೆ ಗುರುಕುಲ ವಾಸದಿನಂದ ಬಾಲನ ಕೂಡ ಹೊಂದಿದ ಸ್ನೇಹವತಂದು ಸ್ಮರಣೆಗೆ ಶ್ರೀ ಕೃಷ್ಣ ಸಖನು ಎಂದಾ 3ಕಡುಹರುಷದಿ ಸತಿಯುಒಡನೆ ತಂದು ಪ್ರಥಕು ತಂಡುಲವ ನೀಡೀಕಡಲೊಡೆಯಪಾದದರುಶನ ಕೊಂಡು ನೀವಸಡಗರದಲಿ ಬನ್ನಿರೆಂದು ಕಳುಹಿದಳು 4ಭರತ ಮಾರ್ಗದಿ ಹರಿಯಾಸ್ಮರಿಸುತಲೆ ಮನದೊಳು ಪೂಜಿಸುತಸುರ ವೈಭವದಲಿ ಮೆರೆಯುವ ದ್ವಾರಕಾಪುರವನುನೋಡುತ ಬೆರಗಾಗಿ ನಿಂದನು 5ಚಾರರೊಡನೆ ಪೇಳಿದಾಶ್ರೀ ಕೃಷ್ಣನ ಬಾಲ್ಯದಸಖತಾನೆಂದುದೂರದಿ ಬಂದು ದ್ವಾರದಿ ನಿಂದಿಹುದನುಅರುಹಿರಿ ಹರಿಗೆಂದು ಕಳುಹಿದನವರನು 6ವಾರುತಿಯನು ಕೇಳುತಾಶ್ರೀಕೃಷ್ಣ ತಾ ವಿಪ್ರನೆಡೆಗೆ ಬರುತಾಕರಪಿಡಿದವನ ಕರೆತಂದನರಮನೆಗೆ ತಾವರಸಿಂಹಾಸನದಲ್ಲಿ ಕುಳ್ಳಿರಿಸಿದನಾಗ 7ದೂರದ ದಾರಿಯನು ನಡೆದು ಬಂದಶ್ರಮ ಪರಿಹಾರಕೆಂದುನಾರಿ ರುಕ್ಮಿಣಿ ನೀರ ನೆರೆಯ ಪಾದವ ತೊಳೆದುಭಾರಿ ಉಪಚಾರ ಮಾಡುತಿದ್ದನು ಕೃಷ್ಣಾ 8ಮಡದಿ ಮಕ್ಕಳ ಕ್ಷೇಮವ ವಿಚಾರಿಸಿಕಡು ಸಂಭ್ರಮವ ತೋರುತಷಡುರಸದನ್ನವ ಮಡದಿ ರುಕ್ಮಿಣಿ ಬಡಿಪೆಸಡಗರದಲಿ ಸುಭೋಜನವ ಮಾಡಿಸಿದನು 9ಅಂದಿನಿರುಳು ಕಳೆಯೇತಂದಿಹುದೇನುಕಾಣಿಕೆತಮಗೆನುತಾಚಿಂದೆ ಬಟ್ಟೆಯೊಳಿದ್ದ ಪ್ರಥಕು ತಂಡುಲವ [ಅವಲಕ್ಕಿ]ಬ್ರಹ್ಮಾಂಡದೊಡೆಯ ತಾ ಕೊಂಡೆ ಸಂಭ್ರಮದಿಂದ 10ಪ್ರಥಕು ತಂಡುಲವ ಕೊಂಡುಸುಧಾಮನ ಭಕುತಿ ಭಾವನೆ ಕಂಡುಅತುಲ ಐಶ್ವರ್ಯದ ಸುಖ ಸಂಪದವಿತ್ತುಮುಕುತಿ ನೀಡಿದ ನಮ್ಮ ಭಕುತ ವತ್ಸಲ ಕೃಷ್ಣಾ 11ಮಂಗಲಂ ಮಚ್ಛಕೂರ್ಮವರಹ ನರಸಿಂಹ ಸುಂದರ ವಾಮನಮಂಗಲಂ ಭ್ರಗುರಾಮ ದಶರಥ ತನಯಗೆಮಂಗಲಂಸಿರಿಕೃಷ್ಣ ಬೌದ್ಧ ಸುಕಲ್ಕಿಗೆ 12ಮಂಗಲಂ ಪ್ರದ ಚರಿತ್ರೆಯಾಭಕುತಿಯಿಂ ಪೇಳಿ ಕೇಳಿದ ಜನಕೆಹಿಂಗದೆ ಸಕಲ ಸೌಭಾಗ್ಯ ಸಂಪದ ವೀವಾಅಂಗಜಪಿತ ತಂದೆಸಿರಿವಿಠಲ ಸ್ವಾಮಿ 13ಶ್ರೀಹರಿಪ್ರಿಯ ಸಖನು ಕುಚೇಲನುವರವಿಪ್ರೋತ್ತಮನವನುನೀರಜನಾಭನ ಕರುಣೆಯಿಂದಲಿ ತಾಭೂರಿಸಂಪದಸಿರಿಭೋಗಿಸುತಿದ್ದನು 14ಶ್ರೀ ಸುಧಾಮ ಚರಿತ್ರ ಸಂಪೂರ್ಣಂ
--------------
ಸಿರಿವಿಠಲರು