ಒಟ್ಟು 45 ಕಡೆಗಳಲ್ಲಿ , 16 ದಾಸರು , 28 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮಪುರುಷ ಯದುಕುಲೇಶ ಶರಧಿ ಮಂದಿರವಾಸ ಶ್ರೀಶ ಪ ಪರಮ ಹರುಷದಿಂದಲೀಗ ಉರುಟನೆಯ ಮಾಡುವೆನು ಅ.ಪ. ನೀಲಮೇಘ ವರ್ಣ ನಿನ್ನ ಬಾಲಶಶಿಯ ಪೋಲುವಂಥ ಫಾಲವನ್ನು ತೋರುಬೇಗ ಕುಂಕುಮವ ಹಚ್ಚುವೆನು 1 ವಾರಿಜಾಕ್ಷ ಮಾರಜನಕ ವಾರಿನಿಧಿ ಗಂಭೀರ ಸುಗುಣ ತೋರು ನಿನ್ನ ಚರಣಗಳನು ಅರಿಸಿನವ ಹಚ್ಚುವೆನು 2 ಸುಂದರಾಂಗ ಮಂದಹಾಸ ಕುಂದರನೆ ಸಿಂಧುಶಯನ ಕಂಧರವ ತೋರು ಬೇಗ ಗಂಧವನು ಹಚ್ಚುವೆನು 3 ಕುಸುಮ ನೇತ್ರ ಕುಸುಮಪೀಠ ಸ್ತೋತ್ರ ಪಾದ ಕುಸುಮ ಮಾಲೆ ಹಾಕುವೆನು 4 ಚಾರು ಚರಿತ ಕರಿಗಿರೀಶ ಆರತಿಯ ಬೆಳಗುವೆನು ತೋರು ತವ ಮುಖಾರವಿಂದ 5
--------------
ವರಾವಾಣಿರಾಮರಾಯದಾಸರು
ಪೀಠಕೀಗ ಬಾರೊ ದೇವನೆ ಆದ ಪಾಠ ಸಾಕೊ ಕೃಷ್ಣನೆ ಪ. ಮುತ್ತಿನಾಭರಣವ ತೊಡಿಸುವೆನು ಕಸ್ತೂರಿ ತಿಲಕವ ತಿದ್ದುವೆನೊ ಕೃಷ್ಣ ಮಸ್ತಕದರಳೆಲೆ ಮಾಗಾಯಿ ಪೊಳೆಯುತ ಕಸ್ತೂರಿ ರಂಗ ಬಾರೊ 1 ಕಂಗಳಿಗೆ ಕಪ್ಪು ಹಚ್ಚುವೆನೊ ರÀಂಗಗೆ ಪೀತಾಂಬರುಡಿಸುವೆನೊ ಮಂಗಳಾಂಗಗೆ ನಾ ಶೃಂಗಾರ ಮಾಡಿ ಕಂಗಳಿಂ ನೋಡುವೆನೊ 2 ಕಾಲಲಂದಿಗೆ ಗೆಜ್ಜೆ ಫಳಿರೆನುತ ನೀಲಮೇಘ ಶ್ಯಾಮ ಶ್ರೀ ಶ್ರೀನಿವಾಸ ಬಾಲ ಗೋಪಾಲ ಸುಶೀಲ ಮುರಳಿಧರ ರಮಾಲೋಲ ಶ್ರೀ ಕೃಷ್ಣ ಬಾರೋ3
--------------
ಸರಸ್ವತಿ ಬಾಯಿ
ಪೆಣ್ಣೆಂದರಿದು ಮೆಚ್ಚಿ ಕೆಡಬೇಡ ನಿನ್ನ ತಿನ್ನುವ ಮರಿಗಿದು ತಿಳಿ ಮೂಢ ಪ ತಾಯಾಗಿ ಮೊದಲು ನಿನ್ನ್ಹಡೆದಿಹ್ಯದು ಪುನ: ಮಾಯಾಗಿ ಬೆನ್ನ್ಹತ್ತಿ ಸುಡುತಿಹ್ಯದು ಬಾಯೊಳು ಮೊಲೆಯಿಟ್ಟು ಬೆಳೆಸಿಹ್ಯದು ಮತ್ತು ಕೈಯೊಳು ಮೊಲೆಯಿಟ್ಟು ಕೊಲುತಿಹ್ಯದು 1 ಸುತನೆಂದು ಮುದ್ದಿಟ್ಟು ಒಲುತಿಹ್ಯದು ಮತ್ತು ಪತಿಯೆಂದು ನಿಜಮತಿ ಸುಲಿತಿಹ್ಯದು ರತಿಗೊಟ್ಟು ಅತಿಮೋಹದಾಡುವುದು ನಿನ್ನ ಗತಿಗೆಡಿಸಿ ಜವಗೀಡು ಮಾಡುವುದು 2 ಕಣ್ಣುಸನ್ನೆಯ ಮಾಡಿ ಕರಿತಿಹ್ಯದು ಬಹು ಬಣ್ಣ ಮಾತಾಡಿ ಸೋಲಿಪುದು ಕುನ್ನಿಯಂತೆ ನಿನ್ನ ಮಾಡುವುದು ಬಲು ಬನ್ನಬಡಿಸಿ ಬಾಯಿ ಬಿಡಿಸುವುದು 3 ಶ್ವಾನನಂದದಿ ಕೂಗಲ್ಹಚ್ಚುವುದು ಮಾನಾಭಿಮಾನ ತೊರೆಸುವುದು ನಿಜ ಜ್ಞಾನಕೆಡಿಸಿ ಪಾಪದ್ಹಾಕುವುದು 4 ತಂದ ಪುಣ್ಯವನೆಲ್ಲ ಸೆಳೆತಿಹ್ಯದು ಬಲು ಮಂದನೆನಿಸಿ ಕುಣಿಸ್ಯಾಡುವುದು ತಂದೆ ಶ್ರೀರಾಮಪ್ರೇಮ ಕೆಡಿಸುವುದು ನಿಜಾ ನಂದ ಮುಕ್ತಿಗೆ ಕಿಡಿ ಹಾಕುವುದು 5
--------------
ರಾಮದಾಸರು
ಬಾ ಉರುಟಣೆಗೆ ಕಾಂತ ಪ್ರಿಯಕಾಂತ ಪ. ಕರುಣವ ತೋರೋ ಕಮಲನಯನನೆ ತರುಣಿಮಣಿಯು ನಾ ಕರೆವೆನು ರಮಣ ಅ.ಪ. ವರ ಪನ್ನೀರಿಲಿ ಚರಣವ ತೊಳೆದು ಅರಿಶಿಣ ಹಚ್ಚುವೆ ಕಾಂತ ನಾ ವರ ಲಲಾಟಕೆ ಹರುಷದಿ ಕುಂಕುಮ ತಿಲಕವ ತಿದ್ದುವೆ ರಮಣ 1 ಅತ್ತರು ಪನ್ನೀರಿನ ಗಂಧವನು ಶಿಸ್ತಿಲಿ ಪೂಸುತಲೀಗ ವಿಸ್ತಾರವಾದ ಮಲ್ಲಿಗೆ ಮಾಲೆಯ ಚಿತ್ತಜನಯ್ಯ ಹಾಕುವೆನು ಪ್ರಿಯ 2 ಬಿಳಿಯೆಲೆ ಅಡಿಕೆ ಚೆಲುವಿನ ಸುಣ್ಣ ನಲಿದು ಕೊಡುವೆ ಬಾ ಕಾಂತ ಛಲವ್ಯಾಕೆನ್ನೊಳು ಶ್ರೀ ಶ್ರೀನಿವಾಸ ಒಲುವಿನಲಿ ಬಾ ಬೇಗ ರಮಣ 3
--------------
ಸರಸ್ವತಿ ಬಾಯಿ
ರತುನ ಸಿಕ್ಕಿದೆ ತಮ್ಮ ಇದು ಬಹು ಜತನೆಲೋ ನಿಸ್ಸೀಮ ರತುನ ಸಿಕ್ಕಿದೆ ಪ ನಿನ್ನ ಸುಕೃತದ ಫಲದಿಂದ ಪತಿತಪಾವನ ಸಿರಿಪತಿ ವಿಮಲನಾಮ ಅ.ಪ ದುರಿತ ದಾರಿದ್ರ್ಯವಿಲ್ಲದ ಈ ರತ್ನದಿಂ ಜರಮರಣಂಟಿಲ್ಲ ನರಹರಿ ವರಪಾದ ಶರಣರು ಪರಕ್ಕೆ ಪರಮ ಗೌಪ್ಯದಿಂದ ಶೋಧಿಸುತಿರುವಂಥ 1 ತಾಪತ್ರಯಗಳಿಲ್ಲ ಈ ರತ್ನದಿಂ ಪಾಪ ಶಾಪವಿಲ್ಲ ಪಾಪಿಯಮದೂತರ ಲೋಪಗೈದಯ ಭಯ ಆಪಾರ ಪರಲೋಕ ಸೋಪಾನಕ್ಹಚ್ಚುವ2 ಧರ್ಮಕೆ ಕೊಡು ನದರ ಈ ರತ್ನದ ಮರ್ಮ ತಿಳಿಯೆ ಚದರ ಬ್ರಹ್ಮ ಬ್ರಹ್ಮಾದಿಗಳೊಮ್ಮನದ್ಹೊಗಳುತ ನಿರ್ಮಲಾಗುವ ಪರಬ್ರಹ್ಮ ಶ್ರೀರಾಮನೆಂಬ 3
--------------
ರಾಮದಾಸರು
ರಾಮ ಜಾನಕೀರಮಣ ರಾಜೀವದಳನಯನ ಧಾಮ ನಿಧಿವಂಶ ಸೋಮನಿಗೆ ಪ ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ ಪದುಮನಾಭನು ಬಂದು ಕುಳಿತನು ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ ಪದುಮ ಸಾಧನೆ ಲಕುಮಿ ಒಪ್ಪಿದಳು. 1 ವಾರುಣಿ ಗಿರಿಜೆ ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ 2 ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ ಹೆಣ್ಣುಗಳ ಮಧ್ಯೆ ಇಳಿಸಿದರು3 ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ- ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ ತಂದು ಅರಿಶಿಣ ಎಣ್ಣೆ ಗಂಧವಿತ್ತು4 ತಡಮಾಡಲಾಗದು ಕಡಲಶಯನ ನಿಮ್ಮ ಮಡದಿಯಂಗಕ್ಕೆ ತೊಡೆವುದೆನಲು ಮಡದಿಯಂಗಕ್ಕೆ ತೊಡೆವುದು ಎನಲಾಗಿ ಕಡು ಹರುಷದಿ ಸತಿಯಳ ನೋಡಿದನು 5 ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ | ಕನ್ಯೆ ಶಿರೋಮಣಿ ಪಾವನ ದೇಹಿ || ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ | ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ 6 ತಂದೆ ನಂದನರಿಗೆ ಬಂಧು ಬಳಗ ಸುತ್ತ | ಹೊಂದಿದ ಜನರಿಗೆ ಹಲವರಿಗೆ || ಹೊಂದಿದ ಜನರಿಗೆ ಹಲವರಿಗೆ ಕದನ | ತಂದು ಹಾಕುವಳೆಂದು ಹಚ್ಚಿದನು 7 ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ | ಬಾಗಿಲ ಕಾಯಿಸುವಳೆ ಬಲ್ಲಿದರ || ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ | ಸಾಗರನ ಮಗಳು ಎಂದು ತೊಡೆದನು 8 ಇಂದಿರಾದೇವಿ ಬಾ ಮಂದಿರಾಂಬುಜ ರಾಮ | ಸುಂದರ ಶ್ರೀವಾರಿ ಮಂಗಳಗಾತ್ರೆ || ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು | ಅಂಗಜ ಜನಕನು ನಗುತಲಿದ್ದ 9 ರಮಣಿಯ ದೇಹಕ್ಕೆ ಕಮಲನಾಭನು ಎದ್ದು | ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ || ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ | ಕ್ರಮದಿಂದ ಲೇಪಿಸಿ ಊಟಣಿಸಾರಿ 10 ಸಾಕಾರಗುಣವಂತಿ ತ್ರಿಲೋಕದ ಜನನಿ | ನಾಕಜವಂದಿತಳೆ ನಾಗಗಮನೆ || ನಾಕಜವಂದಿತಳೆ ನಾಗಗಮನೆ ಏಳೂ | ಶ್ರೀಕಾಂತನ ಸೇವೆಯ ಮಾಡೆಂದರು 11 ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು | ನಿಂದು ಸಮ್ಮುಖದಲ್ಲಿ ರಂಗನ ನೋಡಿ | ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ | ಚಂದ್ರವದನೆ ಪತಿಗೆ ಹಚ್ಚಿದಳು 12 ಗೋವಳರ ಎಂಜಲು ಆವಾಗ ತಿಂದವನೆ | ಮಾವನ್ನ ಕೊಂದವನೆ ಮಾಯಾಕಾರ || ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ | ಸೇವೆಗೆ ಶಕ್ತಳೆನುತ ಹಚ್ಚಿದಳು 13 ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ | ಮುನ್ನೆ ತೊತ್ತಿನ ಮಗನ ಮನಿಯ ಉಂಡ || ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ | ಹೆಣ್ಣಾಗಿ ಇದ್ದವನೆಂದು ಹಚ್ಚಿದಳು 14 ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ | ಭಿನ್ನವಖಿಳ ಜೀವಕ್ಕೆನ್ನ ಒಡೆಯ || ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು | ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು 15 ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ | ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ || ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು | ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು 16 ದೇವಿ ದೇವೇಶಗೆ ಈ ಉರುಟಣೆಯಿಲ್ಲ | ಆವಾವ ಬಗೆ ಎಲ್ಲ ತೋರಿಸುತ್ತ || ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ | ಹೂವು ಬಾಸಿಂಗವ ರಚಿಸಿದರು17 ಅಸುರ ವಿರೋಧಿ ವಸುದೇವನಂದನ | ಪಶುಪತಿ ರಕ್ಷಕ ಪರಮ ಪುರುಷ || ಪಶುಪತಿ ರಕ್ಷಕ ಪರಮ ಪುರುಷ ಎಂದು | ಹಸನಾಗಿ ಲೇಪಿಸಿ ಇತ್ತ ಜನರ 18 ಶೃಂಗಾರವಂತೇರು ರಂಗ ಶ್ರೀಲಕುಮಿಗೆ | ಮಂಗಳಾರತಿ ಎತ್ತಿ ಹರಸಿದರು || ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ | ಅಂಗನೆಯಳ ಸಹಿತ ನಡೆಯೆಂದರಾಗ 17 ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ | ಮತ್ತೆ ಸುಗಂಧಿಯರು ಹೊಸ್ತಿಲೊಳಗೆ || ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು | ಪತ್ನಿಯ ಹೆಸರು ಪೇಳೆಂದರು ಆಗ 20 ಬೇಗ ಮಾರ್ಗವ ಸಾರಿ ತೂಗಲಾರನು ಇವಳ | ಸಾಗಿ ಪೋಗುವನೆಂದು ಪೇಳುತಿರಲು || ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ | ತೂಗವದೆಂತು ನಾಳೆ ನುಡಿಯೆಂದರು 21 ನಕ್ಕು ಸಂತೋಷದಲಿ ರುಕ್ಮಿಣಿ ಎಂದನು | ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ || ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು | ಚಕ್ರಪಾಣಿ ಎಂದು ಪೇಳಿದಳು ಲಕುಮಿ 22 ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ | ಮಂಡಲದ ಚರಿತೆ ತೋರಿದರು ಆಗ || ಮಂಡಲದ ಚರಿತೆ ತೋರಿ ವಧು-ವರಗಳಿಗೆ | ಕಂಡವರಿಗೆ ಮದುವೆಯೆನಿಸಿದರು 23 ದಂಪತಿಗಳು ಒಲಿದು ಇಂಪಾಗಿ ಉರುಟಣಿ | ಸೊಂಪಾಗಿ ಮಾಡಿದರು ಅನೇಕವಾಗಿ || ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ 24
--------------
ವಿಜಯದಾಸ
ಲಕ್ಷ್ಮಿ ರಮಣಗೆ ಮಾಡಿದಳು ಉರುಟಾಣಿÉ ಪ. ಇಳೆಯೊಳಗತಿಜಾಣೆ ಸುಂದರ ಫಣಿವೇಣಿ ಅ.ಪ. ಕಚ್ಛಪ ಕಿರನೆ ಕೇಸರಿಯಂದದ ಮುಖನೆ ಸ್ವಚ್ಛಮುಖವ ತೋರೈ ಅರಿಸಿನ ಹಚ್ಚುವೆನು 1 ದುರುಳ ಕ್ಷತ್ರಿಯರನ್ನು ಕೊರಳ ತರಿದ ಹರಿಯೆ ಹರುಷದಿಂ ಕೊರಳ ತೋರೈ ಗಂಧವ ಹಚ್ಚುವೆನು 2 ದಶರಥsÀನಲಿ ಜನಿಸಿ ದಶಮುಖನ ಸಂಹರಿಸಿ ಕುಸುಮ ಮುಡಿಸುವೆನು 3 ಹರಿನಾರು ಸಾಸಿರ ಸುದತಿಯರನಾಳಿದನೆ ಪದುಮಕರವ ತೋರೈ ವೀಳ್ಯವ ಕೊಡುವೆನು 4 ವಸನರಹಿತನಾಗಿ ವಸುಧೆಯ ತಿರುಗಿದೆ ಬಿಸಜನಾಭನೆ ನಿನಗೆ [ವಸನ ಉಡಿಸುವೆನು] 5 ವರ ತುರಗವನೇರಿ ಕಲಿಯ ಸಂಹರಿಸುವಿ ಸಿರಿಹಯವದನನೆ ಆರತಿಯೆತ್ತುವೆನು 6
--------------
ವಾದಿರಾಜ
ಹೆರಳು ಹಾಕುವೆ ಬಾ ಮುರಲಿಯಲ್ಲೇ ಇಟ್ಟುಗುರುಳು ಮೋರೆಯ ಮೇಲೆ ಹರವಿ ಬಿದ್ದಿಹವೋ ಕಣ್ಣಮರೆಯ ಮಾಡಿಹವೋ ಪ ಕೋಡಿನ್ಹೆರಳನ್ಹಾಕಿ ಕೂಸ ಮುಂದಲೆ ಹೂಜೋಡಿರೆ ಅರಳೆಲೆ ನೋಡಿ ಇಡುವೆನೋ 1 ಹಚ್ಚುವೆ ಕಾಡಿಗೆ ಮುಚ್ಚದೆ ತೆರಿ ಕಣ್ಣುಹೊಚ್ಚಿ ಕುಂಚಿಗೆ ನಿನ್ನ ಎತ್ತಿಕೊಳ್ಳುವೆ ಬಾ 2 ಕರವ ಪಿಡಿದಂದು ಎತ್ತುವೆ ಬಾ 3
--------------
ಇಂದಿರೇಶರು
93ಅಕ್ಕಟಕ್ಕಟೆಂನಗಂಡ ವೈಷ್ಣವನಾದ ಕಾರಣ |ರಕ್ಕಸಾಂತಕನ ಭಜಿಸಿರಚ್ಚೆ ಗೋಡಾಯಿತೆಂನ ಬದುಕು |ಅಕ್ಕಟಕ್ಕಟರೆಂನಗಂಡಪ.ಅಡ್ಡಗಂಧ ಹಚ್ಚುವಾಗ ರುದ್ರದೇವರ ಭಜಿಸಿಲಾಗಿ |ಬಡ್ಡಿವಾಸಿಂರೊಳಗೆ ನಾಉ ಸುಖದೊಳಿದ್ದೆವು | ಅಡ್ಡಗಂಧವನು ಬಿಟ್ಟು ಶ್ರೀ ಮುದ್ರೆಯನು ಧರಿಸಲಾಗಿ |ಬಡ್ಡಿವಾಸಿಯಲ್ಲ ಹೋಗಿ ಬಾಯೊಳ್ಗೆ ಬಿದ್ದಿಂತಾಯಿತವ್ವ, ಅಕ್ಕಟ 1ಹೇಡಿಗೆ ತುಂಬ ದೇವರು ನಮ್ಮ ಮನೆಯೊಳಿರುವಕಾಲದಲ್ಲಿ | ವಡವೆ ವಸ್ತು ಸೌಭಾಗ್ಯ ಸುಖದೊಳಿದ್ದೆವುಹಾದಿಯ ತುಂಬ ಕರಿದು ಬಿಳಿದು ಸಾಲಿಗ್ರಾಮಭಜಿಸಲಾಗಿ | ವಡವೆ ವಸ್ತು ಎಲ್ಲ ಹೋಗಿ ಬಾಯೊಳ್ಹುಡಿಯುಬಿದ್ದಂತಾಯಿತವ್ವ | ಅಕ್ಕಟ | 2ಕಾಲಿಝಂಣಕಾಲದಲ್ಲಿ ಮೂಲಂಗಿ ಬೊಳ್ಳಳ್ಳಿಗೆಡ್ಡೆ ತಂದುಕೊಟ್ಟರೆ ದೇವಸುಖವ ಕೊಡುವನೂ |ವೀರವಿಷ್ಣುವಿಗೆ ಕೊಟ್ಟುತ್ರಾಹಿ ತ್ರಾಹಿ ಎನ್ನಲಾಗಿಪಚ್ಚೆ ಕರ್ಪೂರದಂತ ಬದುಕು ನಿಸ್ತುತವಾಗಿಹೋಯಿತವ್ವ | ಅಕ್ಕಟ3ಅತ್ತೆ ಕೇಳೆ ಹಿಂದೆನಂಮ ಮದುವೆ ಮುಂಜಿಕಾಲದಲ್ಲಿ | ಆರ್ತಿಗಾದರು ಒಮ್ಮೆ ಕಚ್ಚೆಕಟ್ಟಿದ್ದೇವೊಅರ್ಥಿಕಚ್ಚೆಯಂನು ಬಿಟ್ಟುನಿತ್ಯ ಕಚ್ಚೆ ಉಡೆಯಲಾಗಿವಿತ್ತಬದುಕುಯೆಲ್ಲ ಹೋಗಿ ವ್ಯರ್ಥವಾಗಿಹೋಯಿತವ್ವ | ಅಕ್ಕಟ4ಅತ್ತೆ ಮಾವ ಸತ್ತ ದಿವಸ ಪಿತ್ರುಕಾರ್ಯನಡಸಲಾಗಿ | ಕತ್ತೆ ನಾಯಿಹೊರಳಿದಂತೆ ನಂಟುನಂಟರಿಷ್ಟರೂ | ಶ್ರೀ ಪುರಂದರವಿಠಲನಭಜಿಸಲಾಗಿ | ತುತ್ತ ಗೊಂಬುದೊಂದು ಕೂಳುಬೆಲ್ಲದಹಾಗೆ ಆಯಿತವ್ವ5
--------------
ಪುರಂದರದಾಸರು
ಎನ್ನ ಭಕುತಿ ನೋಡಲು ಎಳ್ಳನಿತು ಹುರುಳಿಲ್ಲನಿನ್ನ ನಾಮವೆ ನಾ ನಂಬಿದಮುನ್ನೆಲೆಕೃಷ್ಣಪ.ನಿಚ್ಚನೀರೊಳಗೆ ಪೋಗಿ ಮುಳುಗಿ ಮುಳುಗಲೇನುಮತ್ಸ್ಯಸ್ನಾತಿಯೆನಿಸುವುದೆ ಮಹೀತಳದಿಅಚ್ಯುತನಿನ್ನಯ ಧ್ಯಾನವಿಲ್ಲದೆ ದ್ವಾದಶನಾಮಹಚ್ಚುವೆನು ಮೊಲನಾಳು[ವೇಷ]ವಿಟ್ಟ ತೆರದಿ 1ಬಯಲು ಡಂಬಕದಿಂದ ಬಹಳ ತುಲಸೀಮಾಲೆನಯದಿ ಕಂಠದೊಳಾಂತಪಾರ ಗರ್ವದಿಆಯಾಟೆಸಬಟ್ಟೆನು ಹರಿದಾಸನೆನಿಪೆನೆಂದು¥ಯೋನಿಧಿವಾಸ ನಿನ್ನ ಪದವ ಲಕ್ಷಿಸೆ ನಾ 2ಮುಸುಕು ಮೌನದಿ ಹರಿಯೆಂದು ಜಪಿಸಲಿಲ್ಲವಸುಧೆವಸುಕಾಂತೆಯರ ಚಿಂತಿಪೊಹರಿದಾಸ ಬೆಳ್ವಕ್ಕಿಯಂತೆನಗೆ ಹೇಯಂಗಳಿಲ್ಲಪ್ರಸನ್ವೆಂಕಟಪತಿ ತಪ್ಪ ಕಾಯೊಜೀಯ3
--------------
ಪ್ರಸನ್ನವೆಂಕಟದಾಸರು
ಧಾನ್ಯ ದೊರಕಿತು ಎನಗೆಧನವು ದೊರಕಿತು ಪಓಣಿಯೊಳಗೆ ಹೋದ ಮಾ-ಣಿಕ್ಯದ ಹರಳು ದೊರಕಿತೋ ಅ.ಪಕಟ್ಟಿಹಗೆಯ ಹಾಕುವುದಲ್ಲಒಟ್ಟಿ ಕೆಸರ ಬಡಿಯುವುದಲ್ಲ ||ಮುಟ್ಟಿ ಹಿರಿದು ಮೇಯಿಸಿದರೊಂದಿಷ್ಟು ಸೂಡು ಸವಿಯಲಿಲ್ಲ 1ಹರಿದುಗೊಣಸುಹಚ್ಚುವುದಲ್ಲಮುರಿದು ಸಣ್ಣಗೆ ಮಾಡುವುದಲ್ಲ ||ಅರಿದುಇದನು ಪೇಟೆಗೆ ಒಯ್ದರೆಕರೆದು ಬೆಲೆಯನು ಕಟ್ಟುವುದಲ್ಲ 2ಪಾಲುಪಸುಗೆಹಂಚುವುದಲ್ಲಮೇಲೆಚಾರರುಒಯ್ಯುವುದಲ್ಲ ||ಶ್ರೀಲೋಲಪುರಂದರವಿಠಲನಮೂಲನಾಮ ದೊರಕಿತಲ್ಲ 3
--------------
ಪುರಂದರದಾಸರು
ಬೇಡವೆನ್ನೆ ನೀನು ಗೋಪಮ್ಮ ಪಕಾಡುವ ಕೃಷ್ಣಗೆ ಕರೆದು ಬುದ್ಧಿಯ ಹೇಳೆ ಅ.ಪಎಣ್ಣೆ ಮಂಡೆಯಲಿ ಬಣ್ಣದ ಬಚ್ಚಲೊಳಗಿರೆ |ಬಣ್ಣಿಸಿ ಆಟಕಾಳಿ ಹಚ್ಚುವೆನೆನುತಲಿ ||ಬೆನ್ನು ಒರಸಲು ಬಂದ-ಬೆದರೇಳ್ವರ |ಮುನ್ನ ತಕೈಸಿಕೊಂಡ-ಗೋಪಮ್ಮ ನಿನ್ನ |ಚಿಣ್ಣಸಿರಿಗೇಡಿಯು ಎನ್ನ ನಾಚಿಕೆಗೊಂಡ1ನೆಲುವಿಗೆ ಹಾಲ ಏರಿಸುವಳ ಕೈವಿಡಿದು |ಕಿಲಿಕಿಲಿ ಕಿವಿಮಾತ ಹೇಳುವೆ ಎನುತಲಿ ||ಕಲೆಯನಿಕ್ಕಿದ ಗಲ್ಲಕೆ-ಮೇಲ್ಮಲಕಿನ |ತಳಕಿಕ್ಕಿ ಕೆಡಹಲಿಕೆ-ಕೆಳಗೆ ಬಿದ್ದು |ಬಳಲಿ ಬಂದೆವೆ ನಿಮ್ಮ ಬಳಿಗೆ ಗೋಪಮ್ಮ 2ಮನೆಮನೆಯೊಳು ದಂಪತಿಗಳಿದ್ದ ಮಂಚ-|ವನು ನಡು ಬೀದಿಯೊಳ್ ಹಾಕಿ ಕಲೆವನೆ ಕೃಷ್ಣ ||ಮನು ಮಥನಯ್ಯ ಕಾಣೆ-ಈತನು ಮಹಾ |ಮುನಿಗಳ ಮನಕೆ ನಿಲುಕದಿಪ್ಪಗೆ-ಮೂಲೋಕಕೆ |ಘನಮಹಿಮ ನಮ್ಮ ಶ್ರೀ ಪುರಂದರವಿಠಲಗೆ 3
--------------
ಪುರಂದರದಾಸರು
ಸುಲಭಪೂಜೆಯಕೇಳಿ ಬಲವಿಲ್ಲದವರು<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಕಾಲಕಾಲದಕರ್ಮಕಮಲಾಕ್ಷಗರ್ಪಿಸಿರಿಪ.ಇರುಳು ಹಚ್ಚುವ ದೀಪ ಹರಿಗೆ ನೀಲಾಂಜನವು |ಮರುವುಡುವ ಧೋತರವು ಪರಮವಸ್ತ್ರ ||ತಿರುಗಾಡಿ ದಣಿಯುವುದು ಹರಿಗೆ ಪ್ರದಕ್ಷಿಣೆಯುಮರಳಿ ಹೊಡಮರುಳುವುದು ನೂರೆಂಟು ದಂಡ 1ನುಡಿವ ಮಾತುಗಳೆಲ್ಲ ಪಾಂಡುರಂಗನ ಜಪವುಮಡದಿ ಮಕ್ಕಳು ಎಲ್ಲ ಒಡನೆ ಪರಿವಾರ ||ನಡುಮನೆಯ ಅಂಗಳವುಉಡುಪಿ ಭೂವೈಕುಂಠಎಡ ಬಲದ ಮನೆಯವರು ಕಡುಭಾಗವತರು 2ಹೀಗೆ ಈ ಪರಿಯಲಿನಿತ್ಯ ನೀವರಿತಿರಲುಜಗದೊಡೆಯ ಶ್ರೀ ಕೃಷ್ಣ ದಯವ ತೋರುವನು ||ಬೇಗದಿ ತಿಳಿದುಕೇಳಿ ಹೋಗುತಿದೆ ಆಯುಷ್ಯಯೋಗಿಪುರಂದರವಿಠಲ ಸಾರಿ ಪೇಳಿದನು3
--------------
ಪುರಂದರದಾಸರು