ಇದೇ ನಮ್ಮ ಶ್ರೀ ಹರಿ ಕೀರ್ತನಿ
ಸಾಧು ಸಜ್ಜನರ ಮೃತಸಂಜೀವನಿ
ಸದ್ಗೈಸುವ ದಿವ್ಯ ಸುಸಾಧನಿ
ಸದ್ಗುರು ಸುಮೂರ್ತಿ ಪ್ರಾರ್ಥನಿ ಧ್ರುವ
ಶಮದಮವೆಂಬೆರಡು ತಾಳಗೂಡಿ
ಪ್ರೇಮ ಭಾವನೆ ಧ್ರುಪÀದಿಗಳ ಮಾಡಿ
ಸಮರಸವೆ ಮೃದಂಗವಿದು ನೋಡಿ
ಸಮದೃಷ್ಟಿಲಿವೆ ನಾಮ ಕೊಂಡಾಡಿ 1
ಸಾವಧಾನವೆಂಬ ನಿರೋಪಣಿ
ನಿವಾಂತ ಕೇಳು ವಿಚಾರಣಿ
ಈ ವಾಕ್ಯಬಲ್ಲ ಲಕ್ಷಕೊಬ್ಬ ಙÁ್ಞನಿ
ಭಾವ ಬಲ್ಲುದೆ ಮುಖ್ಯ ಸಾಧನಿ 2
ಮನಸ್ವಸ್ತ ಮಾಡಿ ನೀವಿನ್ನು ಕೇಳಿ
ಅನುಮಾನ ಬಿಟ್ಟಿ ಇಕ್ಕಿ ಚಪ್ಪಾಳಿ
ಗನಗುರು ಪಾದದಲ್ಯೊಮ್ಮೆ ಹೊರಳಿ
ಹಣಿಗ್ಹಚ್ಚಿಕೊಂಬಾ ಗುರುಪಾದಧೂಳಿ 3
ಚಿತ್ತ ಚಂಚಲಾಗ ಬಾರದು ನೋಡಿ
ವಸ್ತು ಬಾಹುದು ಬ್ಯಾಗೆ ಕೈಗೂಡಿ
ಮಿಥ್ಯಾ ಪ್ರಪಂಚ ಈಡ್ಯಾಡಿ
ನಿತ್ಯ ನಿರ್ಗುಣಾನಂದ ಸ್ತುತಿಪಾಡಿ 4
ಪುಣ್ಯಕೀರ್ತನೆ ಕೇಳಿ ಸಂಭ್ರಮ
ಧನ್ಯ ಧನ್ಯ ಕೇಳಿದವರ ಜನ್ಮ
ಕಣ್ಣಾರೆ ಕಾಂಬುವ ನಿಜವರ್ಮ
ಚಿಣ್ಣ ಮಹಿಪತಿಗಾನಂದೋ ಬ್ರಹ್ಮ 5