ವಿಧಿಗೆ ದಯವಿಲ್ಲವಕ್ಕ ಎಮ್ಮ ಮ್ಯಾಲೆ ಯದುಪತಿಯನಗಲಿಸಿದ ಒಮ್ಮಿಂದಲೊಮ್ಮೆ ಅ.ಪ.
ಎವೆಯ ಮರೆಯ ಮಾತನಾಡಿ ಪೋದ ಯಾಕೋ ವಿಧಿಯೇಸುಳಿಗುರುಳು ಕಡೆಗಣ್ಣ ನೋಟದಿಂದಲಿಕವಕವಿಸಿ ನಗುವ ಮುದ್ದು ಮುಖವನುತವಕದಿಂದ ಮರಳಿ ಮರಳಿ ನೋಡದ್ಹೋದೆವೆ 1
ಹಕ್ಕಿಯ ಮ್ಯಾಲುಳ್ಳ ದಯ ನಮ್ಮ ಮ್ಯಾಲೆಇಕ್ಕದೇಕೆ ಹೋದ್ಯೋ ವಿಧಿಯೇರೆಕ್ಕೆ ಎರಡುಳ್ಳರೆ ಮಧುರೆಗೆ ಪೋಗಿಫಕ್ಕನೆ ಶ್ರೀ ಹರಿಯೊಡನೆ ಕೂಡುತಿದ್ದೆವಲ್ಲ 2
ತಂಗೀ ನಮ್ಮೆದೆಯು ಕಲ್ಲಾಗಿ ಇದ್ದೇವೆಹಿಂಗುವರೆ ಸಖಿಯರು ಒಮ್ಮಿಂದಲೊಮ್ಮೆರಂಗವಿಠಲನ್ನ ಅಂಗ ಸಂಗವ ಬಿಟ್ಟು ಇಂಥಭಂಗ ಜೀವ ಸುಡ ಸುಡ ಸುಡಲ್ಯಾತಕೋ 3