ಒಟ್ಟು 23 ಕಡೆಗಳಲ್ಲಿ , 4 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರೆತರತಾಮರ ವಲ್ಲದು ನೋಡಲು | ಅರತರತಾ ಅರವಲ್ಲದು ನಿಜದೊಳು | ಅರಹು ಮರಹು ಎರಡನೇ ಮೀರಿಹ | ಘನದರುವೇ ತಾನಾಗಿ | ಕುರುವಿನೊಳಿರುವಾಗಿಹ ಸ್ವಾನಂದದಿ | ತೆರವಿಲ್ಲದೆ ಸೆಲೆತುಂಬಿ ತುಳುಕುತಿಹ | ಪರವೆಂದೆನಿಸಿದ ಶರಣ ರಕ್ಷಕ | ಗುರು ಮಹಿಪತಿ ಜಯ ಜಯತು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಮ ಬಂದನೇನೆ | ಶ್ರೀ ರಘು ರಾಮ ಬಂದನೇನೆ|| ಪ್ರೇಮಿಕ ಜನರನು ಪೊರೆಯಲಾಗಿ|ಶ್ರೀರಘು ಪ ಜಾನಕಿ ಸಹಿತ ಲಕ್ಷಣರೊಡಗೂಡಿ | ಸ್ವಾನಂದದಿ ದಿಗ್ವಿಜಯಮಾಡಿ | 1 ಈರೇಳು ವರುಷಕೆ ಬರುವೆನೆಂದು ಮುನ್ನ | ಸಾರಿದ ನುಡಿ ಸತ್ಯಮಾಡಿ ದೋರಲು 2 ಹಾರೈಸಿ ನೋಡಲು ಕಣ್ಣಿಗೆ ಹಬ್ಬ | ದೋರಲು ಮೋಹದ ಮುದ್ದು ಮೊಗದಾ3 ಅವಧಿಯ ಮೀರಲು ಅಸುವ ತೊರೆವೆಸಿಂದು | ತವಕದಿ ಭರತನ ಪಾಲಿಸಲಿಕ್ಕೆ 4 ಸಾಕೇತ ಪುರಪತಿ ಸಾಮ್ರಾಜ್ಯಲೋಲನಾಗಿ | ಸಾಕುವ ಜಗಂಗುರು ಮಹೀಪತಿ ಪ್ರಭು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧಕರೊಳು ಸಿದ್ಧನು | ಹರಿಪಾದಕಮಲ ಕಾಣಬೇಕೆಂದು ಬಯಸುವವ ಪ ಭಕ್ತಿಯ ಹಡಗವ ಸಾರಿ ಭವಾಂಬುಧಿ | ಯುಕ್ತಿಲಿ ದಾಟಿ ಮನೋರಥದಾ | ಮುಕ್ತಿಯ ಪಟ್ಟಣದಲ್ಲಿಹ ನಿಜಘನಾ | ಸಕ್ತಿಲಿ ಪಡಕೊಂಡು ಸುಖದಲಿ ಕುಳಿತಾ 1 ಉಣಲಾಡುವಲ್ಲಿ ಸರ್ವ ಅನುಭವದಲಿ ಹರಿ | ನೆನೆಯದೆ ಅರ್ಪಣೆಯಾಗುವದು | ಜನದೊಳು ಅವರವರಂತೆ ಸೋಪಾಧಿಕ | ಯೋಗಿ 2 ಕ್ಷೀರ ನೀರ ಭೇದ ಮಾಡುವ ಹಂಸ ವಿ | ಚಾರದಿ ಸಾರಾಸಾರವ ತಿಳಿದು | ಪ್ರಾರಬ್ಧ ಗತಿಯಲಿ ಸ್ವಾನಂದದಿಂದಿಹ | ಧಾರುಣಿ ಜನರನು ತಾರಿಸುವಾ 3 ಪುಣ್ಯದ ಫಲದಾಶೆಯಾತಕ ಬಾಲಗ | ಹೊನ್ನ ತಾ ಗುಂಬೆಂಬ ತ್ಯರನಂದದಿ | ಪರಿ | ಚೆನ್ನಾಗಿ ತಿಳಿದಿಹ ನಿದ್ವಂದಿಯೋ 4 ಬಲ್ಲವಿಕೆಯ ದೋರಿ ಸೊಲ್ಲಿಗೆ ಬಾರದೆ | ಬೆಲ್ಲಸವಿದ ಮೂಕನಂದದಲಿ | ಪುಲ್ಲನಾಭನು ಇರುವೆಲ್ಲರೊಳಗೆ ನೋಡಿ | ನಿಲ್ಲವ ಗುರು ಮಹಿಪತಿ ಪ್ರಭು ಶರಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ವಾನಂದದ ಘನಸುಖ ಏನೆಂದ್ಹೇಳಲಿ ಕೌತುಕ ಧ್ರುವ ಬಲಗೊಂಡದೆ ಬ್ರಹ್ಮಭಾವ ನೆಲಗೊಂಡದೆ ಸರ್ವದ ಬಲುದೋರುತದೆ ಸುಸ್ವಾದ ಸುಲಭ ಸದ್ಗುರು ಪ್ರಸಾದ 1 ತಾನಾಗ್ಯದೆ ತಾರ್ಕಣ್ಯಸ್ವಾನುಭವದ ಸುಪುಣ್ಯ ಮುನಿಜನರೆ ಧನ್ಯಧನ್ಯ ಅಣುರೇಣುಕ ತಾ ಮಾನ್ಯ 2 ಮನೋನ್ಮನದಾಶ್ರಯ ಭಾನುಕೋಟಿ ಉದಯ ದೀನ ಮಹಿಪತಿಗಿದೆ ಸಾಹ್ಯ ಅನುದಿನಿದೇ ಉಚ್ಛ್ರಾಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾನಂದದ ಸುಖ ಏನೆಂದ್ಹೇಳಲಿ ಕೌತುಕ ಧ್ರುವ ಒಡೆದು ಹೇಳುವದಲ್ಲ ಹಿಡಿದು ತಾ ಕೊಡಲಿಕ್ಕಿಲ್ಲ ಪಡೆದುಕೊಂಡವನೆ ಬಲ್ಲ ಗೂಡಿನ ಸೊಲ್ಲ 1 ಸಕ್ಕರಿ ಸವಿದಂತೆ ಮೂಕ ಪ್ರಕಟಿಸೇನೆಂದರೆ ಸುಖ ಯುಕುತಿಗೆ ಬಾರದು ನಿಶ್ಸಂಕ ಸುಖ ಅಲೌಕಿಕ 2 ಮುನಿಜನರ ಹೆಜ್ಜೆಮೆಟ್ಟು ಏನೆಂದ್ಹೇಳಲಿ ನಾ ಗುಟ್ಟು ಅನುದಿನ ಮಹಿಪತಿ ಗುಟ್ಟು ಘನ ಕೈ ಗೊಟ್ಟು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದ್ವಂದ್ವವೆ ವಸಂತದ ಹಬ್ಬದ್ವಂದ್ವವೆ ಇಹಪರದಲ್ಲಿ ಹಬ್ಬ ಪ.ದ್ವಂದ್ವಾಮೃತ ಕ್ಷೇಮಅಭಯವಸಂತದ್ವಂದ್ವ ಜೀವೇಶರ ತಿಳಿದವ ಶಾಂತದ್ವಂದ್ವದ ನಡೆನುಡಿ ಬಲ್ಲವ ಸಂತದ್ವಂದ್ವವರಿಯದನ ಗತಿಯೆ ವಸಂತ 1ದ್ವಂದ್ವ ಶೀತೋಷ್ಣ ಸಮಾನವ ಕಂಡುದ್ವಂದ್ವ ನಿಂದಾಸ್ತುತಿ ಸರಿಯಿಟ್ಟುಕೊಂಡುದ್ವಂದ್ವವಮಾನವಹಿಡಿದರೆ ಭಂಡುದ್ವಂದ್ವ ಪಕ್ಷಿಗಳ ಬಗೆಯ ಕೇಳಿಕೊಂಡು 2ಫಾಲ್ಗುಣ ಪೌರ್ಣಿಮೆ ಬಂದಿತಿಳೆಗೆಬಾಲಕರೆಲ್ಲ ನೆರೆವುದೊಂದು ‌ಘಳಿಗೆಹೋಳಿಯನಾಡುವ ಸಂಭ್ರಮದೊಳಗೆಕಾಳಗಬೇಡಿರೊ ನಿಮ್ಮ ನಿಮ್ಮೊಳಗೆ3ಅಜೆÕೈಕ್ಯ ಪ್ರತಿಪದ ಹಿಂದಾದರಿಂದಸುಜ್ಞಾನ ದ್ವಿತಿಯಕ್ಕೆ ತೋರುವ ಚಂದ್ರಒಗ್ಗೂಡಿ ಗೆಳೆಯರೊಮ್ಮತದಿಂದಲಗ್ಗೆಕಾರರು ಮುಂದೆ ನಡೆವುದೆ ಚಂದ 4ಭಕ್ತೆಂಬೊ ಪುರದಲ್ಲಿ ಒಂಬತ್ತು ಬೀದಿ ವಿರಕ್ತಿರಂಹಸ ಬ್ರಹ್ಮದ್ಹಾದಿಯ ಐದಿವ್ಯಕ್ತವಾಗುವ ವಸ್ತು ಓದಿಕೆ ಓದಿರಿಕ್ತದ ನುಡಿಗಳು ತಮಸಿನ ಹಾದಿ 5ದಿನಪತಿ ಅಡಗಿರೆ ಮಲಗದೆ ಎದ್ದುಮನೆಯವರನು ಎಚ್ಚರಿಸಬ್ಯಾಡಿ ಸದ್ದುನೆನೆವ ವಿಷಯಗೋಡೆ ಏರುತ್ತ ಬಿದ್ದುಮನೆ ಮನೋವಾರ್ತೆಯ ಕುರುಳನೆ ಕದ್ದು 6ಹಾರುವರ ಕೇರಿಯ ಹೊಗಬ್ಯಾಡಿಕೇಳಿಬೇರೂರವರ ಬಿಟ್ಟು ಬಿಡಿ ದೂರದಲ್ಲಿದೂರುವರೊಡನಾಟ ದುರ್ದೆಶೆಫಲವು ವಸ್ತುದೋರುವ ಮನೆಯೇವೆ ಸರಸ ವೆಗ್ಗಳವು 7ಧೂಳಿ ನೀರುರಿಗಾಳಿ ಬಯಲೊಳಗಾಡಿಮ್ಯಾಲೆ ಮೂರುರಿಯೊಳು ಮತಿಗುಂದಬ್ಯಾಡಿಹಾಳು ತುರುಕರ ಕೇರಿಯೊಳು ನಿಷ್ಫಲವುಜಾಲಗಾರರ ಕೇರಿ ಹೊಕ್ಕರೆ ಫಲವು 8ಹಿಂಚಾದ ಹಿರಿಯರ ಮಾತಲೆ ನಡೆದುವಂಚಕ ಮೂವರ ಸಂಗವ ಕಡಿದುಮಿಂಚುವ ಮಾನ್ಯರ ಪ್ರೀತಿಯ ಪಡೆದುಸಂಚಿತಪ್ರಾರಬ್ಧಾಗಾಮಿಯ ಒಡೆದು9ಮುಚ್ಚಿದ ಕದವೆರಡನು ಮುರಿಹೊಯ್ದುಇಚ್ಛೆ ಮೂರೆಂಬ ನಾಯಿಗಳಜಿಹ್ವೆಕೊಯ್ದುಬೆಚ್ಚದೆ ಮನೆ ಮೆಲ್ಲನೆ ಹೊಗಿರಣ್ಣಸಚ್ಚಿದ ಗೋರಸ ಸೂರ್ಯಾಡಿರಣ್ಣ 10ಏಕಾಧಿಪತಿಯಾಜÕ ಅಭಯವು ಬೇಕುನಾಕು ಝಾವಿನ ರಾತ್ರಿ ನಲವಿರಬೇಕುಪೋಕಕಳ್ಳಾರ್ವರ ಮೆಟ್ಟ್ಯಾಳಬೇಕುಭೂಕಾಂತಗೆ ಸೇವೆಯೊಪ್ಪಿಸಬೇಕು 11ರಮಣನೊಲ್ಲದ ಆರ್ವರ ಸಂಗವಿಡಿದುರಮಿಸುವ ಬುದ್ಧಿಜಾರಿಯ ಗಟ್ಟಿವಿಡಿದುಅಮಿತ ವೈರಾಗ್ಯಹಗ್ಗದಿ ಕೈಯಕಟ್ಟಿಶ್ರೀರಮಣನಂಘ್ರಿಗೆ ಒಪ್ಪಿಸಲು ಕಾರ್ಯ ಗಟ್ಟಿ 12ಎಲ್ಲೆಲ್ಲ್ಯಜ್ಞಾನಾಹಿ ವಿಷಯ ತೇಳುಗಳುಎಲ್ಲೆಲ್ಲಿ ನಿರ್ಜಲಸೃತಿಯ ಬಾವಿಗಳುಎಲ್ಲೆಲ್ಲಿನಿರಯಕಮ್ಮರಿ ಮಿಟ್ಟೆಗಳುಎಲ್ಲ ತಪ್ಪಿಸಿ ಜ್ಞಾನ ಬೆಳದಿಂಗಳೊಳು 13ವ್ಯಾಳ್ಯವರಿತು ತತ್ವಸಂಧಿಯ ಒಲಿದುಸೂಳಿ ಮದೆಂಟರ ಕೈಸೆರೆವಿಡಿದುಕಾಲಾಖ್ಯ ತಳವಾರನಾಳಿಗೆ ಕೊಟ್ಟುಮ್ಯಾಳದ ಗೆಳೆಯರು ಸಂತೋಷಪಟ್ಟು 14ಎಂಬತ್ತು ನಾಲ್ಕು ಲಕ್ಷಾಗಾರ ಹೊಗುತಡೊಂಬಿಯಿಲ್ಲದೆ ಬಂದ ಬನ್ನವಬಡುತಕುಂಭಿಣಿಸುರ ಕುಲ ಭೂಮಿಗೆ ಬಂದುದಂಭ ಮಾಡದಲೆ ಕುರುಳ ಒಯ್ಯಿರೆಂದು 15ರಾಗ ಮತ್ಸರಗೂಡಿದರ ಕುರುಳನೊಟ್ಟಿಭೂಗಗನ ಹೊಗುವ ಕಾಮವಕಟ್ಟಿಯೋಗವಾಗಿರುವ ಹುಬ್ಬಿನ ಕ್ಷೇತ್ರದಲಿಮ್ಯಾಗ ವಿಜ್ಞಾನಗ್ನಿ ಹಾಕಬೇಕಲ್ಲಿ 16ಲೋಭ ಹೋಳಿಕೆಯ ಹೋಳಿಗೆ ತುಪ್ಪ ಸವಿದುಲಾಭಕ್ಕೆ ಕುಣಿಯಲು ವೇತ್ರರು ಹೊಯ್ದುಶೋಭನ ರಸ ಬೊಬ್ಬೆಯ ಸಾಧುಹಿಂಡುತ್ರಿಭುವನಪತಿಕಾಮನಯ್ಯನ ದಂಡು17ಸ್ವರ್ಧುನಿಜನಕನ ಗುಣಗಣಕೀರ್ತಿಊಧ್ರ್ವಸ್ವರದಿ ಹಾಡಿ ಹೊಗಳುವಅರ್ಥಿನಿರ್ಧೂಮಜ್ವಾಲೆಯ ಬೆಳಗಲಿ ಸುತ್ತಿದುರ್ದೇಹಿಗಳ ಕಿವಿಧಾರೆಯ ಕಿತ್ತಿ 18ಅವಿದ್ಯ ಕಾಮ್ಯಕರ್ಮದ ಹೋಳಿ ಸುಟ್ಟುಹ್ಯಾವಿನ ಮೈಯ ಬೂದಿಯ ಮಾಡಿಬಿಟ್ಟುಕೋವಿದರ ಚಾತುರ್ಯಕೆ ಒಡಂಬಟ್ಟು ಚಿದ್ಭಾವ ಮಂದಿರದ ಬ್ರಹ್ಮಕೆ ಲಕ್ಷ್ಯವಿಟ್ಟು 19ಹಂಗಿಲೆ ಬೆಳೆದ ವೃಕ್ಷದ ಮೂಲ ಮುರಿದೂಧ್ರ್ವಾಂಗಕ್ಕೆ ಸುತ್ತುವ ಜಾಣರ ಬಿರಿದುರಂಗು ಮುತ್ತಿನ ಮೂಗುತಿ ಹೆಣ್ಣವಿಡಿದುಶೃಂಗಾರ ಚೇಷ್ಟೆಯ ಮಾಡಿರೊಜಡಿದು20ಬೆಳಗಿನ ಝಾವದಿ ಬೂದಿ ಚಲ್ಲ್ಯಾಡಿಗೆಳೆಯರು ನೆರೆವುದೊಂದೆ ತಾಣ ನೋಡಿಜಲಜಾಕ್ಷನುದ್ಯಮದಂಗಡಿಯಲ್ಲಿನಲಿವ ಸ್ವಾನಂದದೂಟವ ಬೇಡಿಕೊಳ್ಳಿ 21ತಿರುತಿರುಗಿ ಬಂದು ದಣಿದು ನೀವಿಂದುಹರಿಯ ಮೈ ಬೆವರಿನ ಹೊಳೆಯಲ್ಲಿ ಮಿಂದುಥರ ಥರದ್ಹದಿನಾರು ವರ್ಣಗಳಿಂದತರುಣ ತರಣಿಯಂತೆ ಹೊಳೆವುದು ಚಂದ 22ಆನಂದಮಯವಾಸುದೇವನ ಕಂಡುಆನಂದಪುರದಿ ಭಕ್ತಿಯ ನೆರೆಗೊಂಡುಆನಂದ ತೀರ್ಥಗುರು ಕೃಪೆಯಿಂದಸ್ವಾನಂದದೋಕುಳಿಯಾಡುವ ಚಂದ 23ಈ ವಿಧ ಅಧ್ಯಾತ್ಮ ಹೋಳಿಯ ಭೇದಭಾವುಕ ಜನರಿಗೆ ಪರಮಾಹ್ಲಾದದೇವ ಋಷಿಕುಲದೈವ ಮುಕುಂದಕಾವನು ಕರುಣಾಬ್ಧಿಕೇಳಿಗೋವಿಂದ24ವೇದನ ತಂದ ಹಯಾಸ್ಯನ ಹೋಳಿಭೂಧರಧರಿಸಿದಮರ ಕಾರ್ಯಕೇಳಿಮೇದಿನ ತರಲಡ್ಡಾದವನೊಮ್ಮೆ ಹೋಳಿ ಪ್ರಹ್ಲಾದನಿಷ್ಠೆಗೆಹರಿಉದಿಸಿದಕೇಳಿ25ನಾನೆಂಬೊ ದಾನವೇಂದ್ರನ ಮದ ಹೋಳಿಹೀನರಿಗಾಗಿ ಕೊಡಲಿ ಹೊತ್ತಕೇಳಿಜಾನಕಿ ತಂದ ದಶಾಸ್ಯನ ಹೋಳಿಮಾನಿನಿಯರಾಳ್ದ ವಿಡಂಬನಕೇಳಿ26ಸನ್ಮಾರ್ಗ ಬಿಟ್ಟ ಖಳರ ಮತಿ ಹೋಳಿಉನ್ಮತ್ತಕಲಿಯನರಸಿ ಕೊಂದಕೇಳಿಚಿನ್ಮಯಮೂರ್ತಿ ಭೂಭಾರವ ಹೋಳಿಜನ್ಮಿಸಿಬಹುದೆಲ್ಲ ಮೋಹನಕೇಳಿ27ಅನಂತದುರಿತರಾಶಿಗಳನ್ನು ಹೋಳಿಆನಂದ ಸುಖವೀವ ನೆನೆದರೆಕೇಳಿಅನಂತ ಅನವದ್ಯಗುಣ ಪರಿಪೂರ್ಣಅನಂತಾದ್ಭುತಕರ್ಮದೀನ ದಯಾರ್ಣ28ಈಪರಿವಿಜ್ಞಾನವಸಂತದಾಟಚೌಪದಿ ರತ್ನಮಾಲಿಕೆ ಮಾಡಿ ಪಾಠಶ್ರೀಪ್ರಸನ್ವೆಂಕಟ ಕಿಟಿರೂಪಿ ಕೃಷ್ಣತಾ ಪರಿಪಾಲಿಪ ಪುರುಷವರಿಷ್ಠ 29
--------------
ಪ್ರಸನ್ನವೆಂಕಟದಾಸರು
ನಿನ್ನರಮನೆ ಕಾಯ್ವ ಪಶುದೇಹಧಾರಿಯಮಾಡುಕಂಡ್ಯ ಕೃಷ್ಣನಿನ್ನವನಲ್ಲದಮಾನವಜನುಮೆಂದು ಬ್ಯಾಡ ಕಂಡ್ಯಪ.ಅಚ್ಯುತಚಿತ್‍ಸ್ವರೂಪೋಚ್ಚಾರಿಪ ಗಿಣಿಮಾಡುಕಂಡ್ಯ ಕೃಷ್ಣನಿಚ್ಚಾರಿ ನಿಶಾಚರಹರನೆಂಬ ಜಾಣ್ವಕ್ಕಿಮಾಡುಕಂಡ್ಯ1ಅಹೋ ಮಾಉಮೇಶವಿಧಿಪನೆಂಬ ನವಿಲುಮಾಡುಕಂಡ್ಯ ಕೃಷ್ಣಕುಹಕಕುವ್ರತವೈರಿಅವರಿಗೆಂಬ ಪಿಕನಮಾಡುಕಂಡ್ಯ2ಹರಿಯವಯವಗಳೆಂಬ ಪುಷ್ಪದಿ ಚರಿಪಾಳಿಯಮಾಡುಕಂಡ್ಯ ಕೃಷ್ಣಪರಮಮುಕ್ತಾಹಾರದ ಪರಮಹಂಸನಮಾಡುಕಂಡ್ಯ3ಭುಲ್ಲಿಪ ವೈಕುಂಠ ಸಿರಿಯ ನಿಟ್ಟಿಪಹುಲ್ಲೆಮಾಡುಕಂಡ್ಯ ಕೃಷ್ಣಎಲ್ಲ ಪ್ರಕಾರದ ಸಾರಿ ಕೂಗುವ ನರಿಯಮಾಡುಕಂಡ್ಯ4ಸ್ವರೂಪ ಬಿಂಬವ ನೋಡಿ ನರ್ತಿಪ ಕುದುರೆಯಮಾಡುಕಂಡ್ಯ ಕೃಷ್ಣವರಮುಕ್ತರರಮನೆಭಾರ ಹೊರುವ ಗೂಳಿಮಾಡುಕಂಡ್ಯ5ನವೀನ ಮುಕ್ತರಿಗೊದಗುವ ಬಾಗಿಲ ಕುನ್ನಿಮಾಡುಕಂಡ್ಯ ಕೃಷ್ಣಗೋವಿಂದ ಗೋವಿಂದೆಂದು ಬೀದಿಲೊದರುವ ಕತ್ತೆಮಾಡುಕಂಡ್ಯ6ಹರಿನಿರ್ಮಾಲ್ಯ ಕಸ್ತೂರಿ ಕರ್ದಮದ ಪತ್ರಿಮಾಡುಕಂಡ್ಯ ಕೃಷ್ಣಸ್ವರ್ಗಾಮೃತ ತಟವಾಪಿಯ ಮೀನವಮಾಡುಕಂಡ್ಯ7ಬಾಡಿ ಕೆಡದ ಪುಷ್ಪಲತೆ ತರುಗುಲ್ಮವಮಾಡುಕಂಡ್ಯ ಕೃಷ್ಣನೋಡಿ ಸ್ವಾನಂದದಿ ಜಿಗಿದಾಡುವ ಕಪಿಯಮಾಡುಕಂಡ್ಯ8ನಾಕಕೈವರ ಸಂಗತಿ ಬಿಟ್ಟಗಲದಂತೆಮಾಡುಕಂಡ್ಯ ಕೃಷ್ಣಆಕಾಂಕ್ಷವಿಲ್ಲದುಗ್ಗಡಿಪ ಭಟನನ್ನೆಮಾಡುಕಂಡ್ಯ9ಮಣಿಮಯ ಭಿತ್ತಿ ಸೋಪಾನ ವಿತಾನವಮಾಡುಕಂಡ್ಯ ಕೃಷ್ಣತೃಣ ಮುಕ್ತಾದವರೊಳಗೊಂದಾರೆ ಜಾತಿಯಮಾಡುಕಂಡ್ಯ10ಜ್ಞಾನಾನಂದಗಳ ಯೋಗ್ಯತೆ ನೋಡಿ ಕೂಡುವಂತೆಮಾಡುಕಂಡ್ಯ ನೀದಾನಕ್ಕೆ ಮೊಗದೋರಿಕೈವಲ್ಯಪುರಾಗಾರಮಾಡುಕಂಡ್ಯ11ಈಪರಿಬಿನ್ನಹವಾಲಿಸಿ ಭವದೂರಮಾಡುಕಂಡ್ಯ ಕೃಷ್ಣಶ್ರೀ ಪ್ರಸನ್ವೆಂಕಟಪತಿ ಬಿಂಬಾತ್ಮಕ ಕೃಪೆಮಾಡುಕಂಡ್ಯ12
--------------
ಪ್ರಸನ್ನವೆಂಕಟದಾಸರು