ಒಟ್ಟು 198 ಕಡೆಗಳಲ್ಲಿ , 31 ದಾಸರು , 184 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನೆ ಬಂತಿದಕೋ ಮಹಾಮದ್ದಾನೆ ಬಂತಿದಕೋ ಸ್ವಾನಂದದಲಿ ಮೆಲ್ಲಮೆಲ್ಲನೆ ಅಡಿಗಳ ತಾನಿಡು ತೊಲವುತಲಿ ನೋಡಮ್ಮ ಧ್ರುವ ಕರಿಯ ಬಣ್ಣದಲೊಪ್ಪುತ ಕಿರಿಗೂದÀಲು ಶಿರದಲಿ ಹೊಳೆವುತ ಪೆರೆನೊಸಲೊಳು ಕೇಸರದ ಕಸ್ತೂರಿ ರೇಖೆ ಕರುಣ ಭಾವದ ಕಂಗಳು ನೋಡಮ್ಮ 1 ಝಳಝಳಿಪಂಬರದಿ ಫಣ ಫಣವೆಂಬ ಚೆಲುವ ಗಂಟÉಯರವದಿ ಒಲಿದು ತನ್ನಯ ನಿಜ ಶರಣರ ಅನುಮತ ದಲಿ ನಲಿದಾಡುತಲಿ ನೋಡಮ್ಮ 2 ದುಷ್ಟ ಜನರು ತೊಲಗಿ ಎನುತ ಮುಂದೆ ಶಿಷ್ಟ ಜನರು ಒದಗಿ ಅದ್ದಹಾಸದಿ ಬಂದರಿದೆ ಮಹಿಪತಿ ಜನ ಇಷ್ಟದೈವತ ಎನಿಪ ನೋಡಮ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಆರತಿ ಗುರುರಾಯಾ :ಸ್ವಾನಂದ ಚಂದ್ರೋದಯಾ ದೋರಲು ಭವತಾಪಾ :ಹೋಯಿತು ನಿಶ್ಚಯಾ ಪ ಚಿತ್ತಚಕೋರಕಿಂದು :ಬೋಧಾಮೃತವನುಣಿಸೀ ಮತ್ತಹೃದಯನೈದಿಲಿಗೆ :ಸುಖವಿತ್ತೆ ಕರುಣಿಸಿ 1 ಜ್ಞಾನಚಂದ್ರ ಕಾಂತಿಯಲ್ಲಿ :ರಾಮರಸವಿಸೀ ತಾನೇಪದ ರೂಪದಿಂದಾ :ನೆಲಿಸಿತು ಧನ್ಯಗೈಸಿ 2 ಶರಧಿ :ಹೊರಚೆಲ್ಲಿ ತೈಯಿಂದು ತಂದೆ ಮಹಿಪತಿ ಸ್ವಾಮಿ :ಕಂದನುದ್ಧರಿಸೆಂದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆರತಿಯನೆತ್ತಿರೆಲ್ಲ ಆನಂದಗೆಆರತಿಯನೆತ್ತಿರೆಲ್ಲ ಸ್ವಾನಂದಗೆ ಪ ಸದನ ಸದನ ಬಿಟ್ಟಿಹಗೆತೋರುತಿಹ ಬ್ರಹ್ಮರಂಧ್ರ ತುರೀಯ ರೂಪಗೆ 1 ಕಣ್ಣಿನೊಳಗೆ ಕಣ್ಣು ತೆರೆದು ನಿರೀಕ್ಷಿಪಗೆಕಣ್ಣ ಬೊಂಬೆಯೊಳಗೆ ಕುಳಿತು ನೋಡುತಿಹಗೆಭಿನ್ನವಿಲ್ಲದ ಆನಂದ ಸುಖದಿ ರಮಿಸುತಿಹನಿಗೆಹೊನ್ನ ತಗಡಿನಂತೆ ಥಳಥಳಿಸುತಿಹಗೆ 2 ಉಕ್ಕುವ ತೇಜಗಳೆಲ್ಲ ತಾವೊಂದಾಗಿ ಕೂಡಿಮಿರು ಹರಿವ ಬೆಳದಿಂಗಳಂತೆಯಿಹಗೆಲೆಕ್ಕವಿಲ್ಲದಲೆಯುತಿಹ ಸುಖದ ರಾಶಿಗೆಮುಕ್ತಿ ಮೂರುತಿ ಶ್ರೀ ಚಿದಾನಂದ ಗುರುವಿಗೆ 3
--------------
ಚಿದಾನಂದ ಅವಧೂತರು
ಇಕ್ಕೊ ಇಲ್ಲೆ ಹಾನೆ ಸಕಲ ಪಾಲಕ ತಾನೆ ಭಕುತಿ ನಿಜವಾಗಲಿಕೆ ಪ್ರಕಟವಾಗತಾನೆ ಧ್ರುವ ಒಡನೆ ತನ್ನೊಳು ನೋಡಲಿಕ್ಕೆ ಜಯಜಯವೆನ್ನಿ 1 ಪಡೆದುಕೊಳ್ಳಿ ಖೂನವಿಡಿದು ಗುರುಙÁ್ಞನ ಬಿಡದೆ ಭಾಸುತಾನೆ ಒಡಿಯ ನೋಡಿ ನಿಜಸ್ಥಾನ 2 ಹಿಡಿಯಬೇಕು ಬ್ಯಾಗ ಜಡಿದು ಮನಯೋಗ ಕುಡುವಾ ಮಹಿಪತಿ ಗುರು ಸ್ವಾನುಭವಭೋಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಟ್ಹಾಂಗಿರಬೇಕು ಮಾಂ ಇಟ್ಹಾಂಗಿರಬೇಕು ಸೃಷ್ಟೀಶ ನಮ್ಮ ಧ್ರುವ ಸಕಳವೆಲ್ಲ ಹರಿ ಸೂತ್ರವು ಇರಲಿಕ್ಕೆ | ವಿಕಳಿತಗೊಂಬುವದ್ಯಾಕೆ ಮಾಂ | ಅಖಿಳ ಭುವನಕೆಲ್ಲ ಸಾಕಿ ಸ - | ಹಕಾರ ನೊಬ್ಬ ಶ್ರೀಪತಿಯ ಮಾಂ | 1 ಯಂತ್ರಜೀವ ತಂತ್ರ ಶಿವ ಇರಲಿಕ್ಕೆ ಸ್ವ | ತಂತ್ರವೆ ನಾನೆಂಬುದ್ಯಾತಕೆ ಮಾಂ | ಚಿತ್ರ ವಿಚಿತ್ರವು ದೋರುವ ಸೂತ್ರವು | ಕರ್ತು ಸದ್ಗುರು ಸುತಂತ್ರವು ಮಾಂ 2 ಅಂತ್ರ ಬಾಹ್ಯ ವ್ಯಾಪಕನಾಗಿರಲಿಕ್ಕೆ | ತಂತ್ರ ಮಂತ್ರಗಳ್ಯಾತಕೆ ಮಾಂ | ಜಂತ್ರ ಮಾಡಿ ಜನ್ಮ ಮರಣದ ತಿರಿಹುವಾ | ಗಂತ್ರವು ಎಂದಿಗೆ ತಿಳಿಯದು ಮಾಂ 3 ಇಟ್ಹಾಂಗ ಇರಬೇಕು ಕೊಟ್ಹಾಂಗ ಕೊಂಡಿನ್ನು | ತುಟ್ಟಿಲೆ ಮಿಸುಕದೆ ಗುಟ್ಟಿಲೆ ಮಾಂ | ಹೊಟ್ಟಿಗಾಗಿ ಅಷ್ಟು ಸಾಯಾಸ | ಬಟ್ಟರೆ ಸಾರುಸದೇ ಅಟ್ಟಿಸುವದು ಮಾಂ 4 ಇಟ್ಹಾಂಗ ಇರೋ ಮಹಿಪತಿ ಸೃಷ್ಟಿಯೊಳಿನ್ನು | ಘಟ್ಟಿಗೊಂಡ ಗುರುಪಾದವು ಮಾಂ | ಮುಟ್ಟಿ ಮುದ್ರಿಸಿ ಕೃಪಾದೃಷ್ಟಿಲೆ ಹೊರೆವನು | ಕೊಟ್ಟು ನಿನಗೆ ಸ್ವಾನುಭವವು ಮಾಂ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದರೆ ರಮಣಾ ಇಟ್ಟಾಂಗಿರಬೇಕು ಪ ಒಮ್ಮಿಗೆ ಕದಶನ ಶಾಖಾ ಆಹಾರವ ನೀಡುವನು ಒಮ್ಮಿಗೆ ಷೆಡ್ರಸದ್ದನ್ನವ ಸಾರುಣಿಸುವನು 1 ಒಮ್ಮಿಗೆ ಜೀರ್ಣ ಕಂಥಾಧಾರಿಯೆನಿಸುವನು| ಒಮ್ಮಿಗೆ ದಿವ್ಯಾಂಬರಗಳ ನುಡಿಸಿ ನೋಡುವನು 2 ಒಮ್ಮಿಗೆ ಧರಿಯಲಿ ತೋಳತಲೆದಿಂಬದಲಿಡುವಾ| ಒಮ್ಮಿಗೆ ಪರ್ಯಾಂಕಾಸನ ಸಂಪದ ಕೊಡುವಾ 3 ಒಮ್ಮಿಗೆ ಕವಡಿ ಲಾಭಕ ಕೃತ-ಕೃತ್ಯೆಯೆನಿಸುವನು ತಂದೆ ಮಹಿಪತಿ-ಕಂದಗ ಸಾರಿದ ನಿಜ ಖೂನಾ 4 ತಂದೆ ಮಹೀಪತಿ-ಕಂದಗ ಸಾರಿದ ನಿಜ ಖೂನಾ| ದ್ವಂದ್ವ ಗೆಲಿದು ಸ್ವಾನಂದದಲಿರುವವನೇ ಜಾಣಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ನಮ್ಮನಿಯಲಿ ಆನಂದ ಬಂದ ನೋಡಿ ಮುಕುಂದ ಗುರುಕೃಪೆಯಿಂದ ಧ್ರುವ ಸದಮಲ ಸುಖಕಲ್ಲೋಳ ಬೆಳಗುದೋರುತಲ್ಯದೆ ಬಹಳ ಹೇಳಲಳವಲ್ಲದು ಬಲುಸೂಕ್ಷ್ಮ ತಿಳಿದವ ತಾ ವಿರಳ ಇಳೆಯೊಳು ನಿಜ ಆನಂದವು ದೋರಿತು ಸ್ವಾನುಭವಕ ಸುಕಾಲ 1 ಮಾಯವಗಂಡು ಧನ್ಯಧನ್ಯಗೈಯಿತು ಜೀವನ ತಾ ಸನ್ಮತ ಸುಖಸವಿಗೊಂಡು ಪುಣ್ಯರಥ ಪರಿಣಾಮದಲನುದಿನ ಮನಬೆರೆಯಿತು ನೆಲೆಗೊಂಡು ಸ್ಮರಣಿಯ ಸವಿದುಂಡು 2 ಸದ್ಗುರು ಎನ್ನೊಡೆಯ ಚಂದವಾಯಿತು ಆನಂದದ ಸುಖವಿದು ಮಹಿಪತಿಗೆಡೆಯಡಿಯ ಸಂದಹರೆವ ಜನ್ಮ ಮರಣದ ಹೇಳಿದ ತಾ ನಿಜನುಡಿಯ ಹೊಂದಿ ಹರುಷಬಡುವಾನಂದವುದೋರುತಿದೆ ಸಿಲುಕಡಿಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮನಿಲಿ ಬ್ರಹ್ಮಾನಂದ ತಂದೆ ಸದ್ಗುರು ಸ್ವಾಮಿ ಕೃಪೆಯಿಂದ ಧ್ರುವ ವಸ್ತುದಯ ಬೀರುವಾನಂದ ಪ್ರಸ್ತ ಹಸ್ತ ಬಂದವರಿಗೆ ಸಾಧ್ಯಸ್ತ ಪ್ರಸ್ತ ಉಂಟಾಗಿದೆ ನೋಡಿ ಸಮಸ್ತ ಸ್ವಸ್ತ ಚಿತ್ತಲುಣಬೇಕು ಪ್ರಶಸ್ತ 1 ಉಂಬುದಕನುಮಾನ ಮಾಡಬ್ಯಾಡಿ ಕೊಂಬುದೆಲ್ಲ ಬಾಯಿದೆರೆದು ಬೇಡಿ ತುಂಬಿತುಳುಕುತಲ್ಯಾನಂದ ನೋಡಿ ಅಂಬುಜಾಕ್ಷನ ಸುಖಾಶ್ರಯ ಮಾಡಿ 2 ಸ್ವಾನುಭವದ ಪ್ರಸ್ತ ಸರ್ವಕಾಲ ತಾನೆ ತಾನಾಗಿ ದೋರುತದಚಲ ದೀನಮಹಿಪತಿಗಾನಂದ ಸುಕಾಲ ಭಾನುಕೋಟಿತೇಜ ದಾಸಾನುಕೂಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ನಮ್ಮಮನಿಲ್ಯಾನಂದ ಇಂದಿರೇಶನೆ ಬಂದ ಸಂದಲ್ಯಾಗೇದ ಸ್ವಾನಂದ ಸಂದಿಸಿ ತುಂಬೇದ ಸುಖ ಸಾಂದ್ರ ಧ್ರುವ ಅತಿಶಯಾನಂದ ಕಂದ ಪತಿತಪಾವನ ಮುಕುಂದ ಹಿತದೋರಲಿಕ್ಕೆ ಬಂದ ಸತತ ಸುದಯದಿಂದ 1 ಪುಣ್ಯದಿರಿಟ್ಟತು ಈಗ ಎನ್ನೊಡಿಯ ಬಂದಾಗ ಧನ್ಯಗೈಸಿದೆನಗೆ ಚೆನ್ನಾಗಿ ಬಂದು ಮನೆಗೆ 2 ಮನಮಂದಿರಕೆ ಬಂದ ಅನುಕೂಲವಾಗಿ ಗೋವಿಂದ ಘನಗುರು ಕೃಪೆಯಿಂದ 3 ಬಾಹ್ಯಾಂತ್ರ ಭಾಸುವ ಕ್ರಮ ಮಹಾಗುರುವಿನ ಧರ್ಮ ಮಹಿಪತಿಯ ಸಂಭ್ರಮ ಇಹಪರಾನಂದೋಬ್ರಹ್ಮ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಸುದಿವಸ ನೋಡಿ ಕಂಡೆವು ಕಣ್ಣಾರೆ ಚಂದವಾಗಿ ಗುರು ಪೂರ್ಣಮಾಡಿದ ಮನೋಹರ ಧ್ರುವ ಕೇಳದಾ ಕೇಳಿದೆವು ಫೇಳಿಸುವದೆನ್ನೊಳಗೆ ಹೇಳೇನೆಂದರೆ ಬಾರದು ಸುಳವು ಇನ್ನೊಬ್ಬರಿಗೆ ತಾಳಮೃದಂಗ ಭೇರಿ ಭೋರಿಡುತ ಒಳ ಹೊರಗೆ ತಿಳಿದೇನಂದರದೇ ನೋಡಿ ಉಲುವು ತಾ ತನ್ನೊಳಗೆ 1 ಕಾಣದ ಕಂಡೆವು ಖೂನ ತಾ ಕಣ್ಣಿನ ಕೊನೆಯೊಳಗೆ ಪ್ರಾಣ ಪಾವನ್ನವಾಯಿತು ಪುಣ್ಯ ಪ್ರಭೆಯೊಳಗೆ ಭಾನುಕೋಟಿತೇಜ ಧನ್ಯಗೈಸಿದ ಎನಗೆ ಸ್ವಾನುಭವದ ಸುಖ ಎದುರಿಟ್ಟಿತು ಜಗದೊಳಗೆ 2 ನುಡಿಯು ಕೇಳಿದಂಥ ನುಡಿಗೇಳಿದೆವಿಂದು ಕಡಿಗಾಯಿತು ನೋಡಿ ಹುಟ್ಟಿಬಾಯ ಜನ್ಮಸಂದು ವಿಡಿದು ಗುರುಪಾದ ಜನ್ಮಸಾರ್ಥಕಾಯಿತಿಂದು ಪಡೆದ ಮಹಿಪತಿ ನಿಜಾನಂದ ವಸ್ತುವಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ಜ್ಞಾನವೊ ಇದೇ ಮಾನವೊ ಧ್ರುವ ಕೇಳಿ ಕೇಳಿ ಕೇಳಿ ಕೇಳುವ ಮಾತಿದು ಕೇಳಿದಂತೆ ನೀವು ಬಾಳಿ ಬಾಳಿದ ಮ್ಯಾಲಿನ್ನು ಹೇಳ್ಯಾಡುವ ಮಾತಿನ ಮೊಳೆ ಅಂಕುರನೆ ಸೀಳಿ ಒಳಿತಾಗಿದೆ ಪೂರ್ಣ ಕೇಳಿ ಕಳೆದ ದುಸ್ಸಂಗವು ಕೇಳುವನಾದರೆ ತಿಳಿಸಿಕೊಡುವನು ಗುರು ಹೇಳಿ 1 ಸೂಟಿ ತಿಳಿದು ನಿಜಧಾಟಿಗೆ ಬಂದರೆ ಕೋಟಿಗವನೇ ಒಬ್ಬ ಙÁ್ಞನಿ ನೀಟಾಗಿಹ್ಯ ಘನಕೂಟವು ತಿಳಿದರೆ ನೋಟದಲ್ಲವ ಬಲು ತ್ರಾಣಿ ನೋಟದಲ್ಲಿಹುದು ತ್ರಾಟಿವ ಬಲ್ಲನೆ ಬೂಟಕ ದೇಹಾಭಿಮಾನಿ ನಾಟಿ ಮನದೊಳು ಮಾಟಿಸಿಕೊಂಬುದು ಘಟಿಸಿತಿದೆ ಸಾಧನ 2 ನೆನೆಯಲಿಕ್ಕೆ ಮನ ಘನಬೆರದಾಡುವ ಖೂನಾಗುವದಿದೆ ರಾಜಯೋಗ ಅನುಭವಿಗಳಿಗೆ ಅನುಕೂಲವಾಗಿನ್ನು ಅನುವಾಗಿದೋರುದು ಬ್ಯಾಗ ಭಾನುಕೋಟಿತೇಜ ತಾನೆತಾನಾದನು ಎನ್ನ ಮನದೊಳು ಈಗ ದೀನ ಮಹಿಪತಿಗೆ ಸನಾಥಮಾಡುವ ಸ್ವಾನುಭವದ ಬ್ರಹ್ಮಭೋಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇ ದೇವ ಪೂಜಿಯು ನೋಡಿ ಹೃದಯದಲಿ ನಿಜ ಒಡಗೂಡಿ ಧ್ರುವ ಮೂರ್ತಿಎಂಬುದೆ ಅಮೂರ್ತಿ ನಾಮರೂಪ ನಿಜ ಗುಹ್ಯವಾರ್ತಿ ವ್ಯೋಮಾಕಾರದ ಮನೆಮೂರ್ತಿ ಸ್ವಾಮಿ ಸದ್ಗುರುವಿನ ಕೀರ್ತಿ 1 ನಿತ್ಯನಿರ್ಗುಣ ನಿರ್ವಿಕಲ್ಪ ಸತ್ಯಸದ್ಗುರು ಸ್ವರೂಪ ನಿತ್ಯ ನಿತ್ಯದಿತ್ಯರ್ಥ ಸುದೀಪ ತತ್ವಙÁ್ಞನ ಮನಮಂಟಪ 2 ಸ್ವಾನುಭವ ಸ್ವಾದೋದಕ ಙÁ್ಞನ ಭಾಗೀರಥಿ ಅಭಿಷೇಕ ಮೌನ ಮೌನ್ಯ ವಸ್ತ್ರಾಮೋಲಿಕ ಧಾನ್ಯವೆಂಬುದೆ ಸೇವಿ ಅನೇಕ 3 ಗಂಧಾಕ್ಷತಿ ಪರಿಮಳ ಫಲಪುಷ್ಪ ಬುದ್ಧಿ ಮನವಾಯಿತು ಸ್ವರೂಪ ಸದ್ವಾಸನ್ಯಾಯಿತು ಧೂಪ ದೀಪ ಸದ್ಭಾವನೆ ನೈವೇದ್ಯ ಮೋಪ 4 ಫಲತಾಂಬೂಲವೆ ಸದ್ಭಕ್ತಿ ಮೂಲಜೀವ ಭಾವನೆ ಮಂಗಳಾರ್ತಿ ಬಾಲಕ ಮಹಿಪತಿ ನಿಜಪೂಜಿಸ್ಥಿತಿ ಕುಲಕೋಟಿ ಉದ್ಧರಿಸುವ ಗತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇನೈ ಛಂದಾ | ಗುರುವೇ | ಇದೇನೈ ಛಂದಾ ಪ ಅರೂಪದಲಿ ಗೋಚರಿಸಿತು ಪ್ರೇಮ1 ವನದೊಳು ವೃಂದಾವನದೊಳು ನಲಿದೆ2 ಯಾತಕೆ ಮೌನದ ರೀತಿಯ ಹಿಡಿದೆ 3 ಏನೆಂದು ಅರಿಯದ ಜ್ಞಾನಿಯುನಾನು | ನ್ಯೂನಾರಿಸದೆ ನೀಡು ಸ್ವಾನಂದವನು 4 ಎಂದೆಂದು ಕರಿಯೆ `ಓ' ಎಂದನು ಕರುಣಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇದೇವೆ ಗುರುಕೃಪೆಯದಾಟಗಳು ಧ್ರುವ ಮನಯೋಗದ ಗೋಲ್ಹಾಟಗಳು ಅನುದಿನ ಅನಿಮಿಷ ನಯನದ ನೋಟಗಳು ಜ್ಞಾನ ಸಮುದ್ರದ ಲೋಟಗಳು ಏನೇಂದ್ಹೇಳಲಿ ಸ್ವಾನಂದದ ಸುಖ ಅನಂದೋಬ್ರಹ್ಮದ ಆಟಗಳು 1 ಸೊನ್ನೆಯ ಸೂಟಿಗಳು ತಾಳಮೃಂದಗವು ಭೇರಿಡುತಿಹ್ಯ ಕೇಳುವ ಧಿಮಿಧಿಮಿಟಗಳು ತಲ್ಲೀನದಿ ಶ್ರುತಿಘೋಷಾಲಿಸುವನೀದೃಶ್ಯದ ಉದಾಟಗಳು ತಿಳಿಯಲು ಬಲು ಆವ್ಹಾಟಗಳು 2 ಬಲ್ಲವೇನು ನರಕೀಟಗಳು ದೇವದೇವೋತ್ಮನ ನೋಟಗಳು ದಯಕರುಣದಿ ಜೀವನ ¸ದ್ಗೈಸುವ ಭವನಾಶನ ಕೃಪಾದೃಷ್ಟಿಗಳು ಧನ್ಯಧನ್ಯ ಕುಲಕೋಟಿಗಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಲ್ಲೆ ಉಂಟು ಮುಕುತಿ ನೋಡಿ ನೋಡಿ ಒಂದೆ ಮನದಲಿ ಸುಲಭವಾಗಿ ದೋರುತಿಹ್ಯದು ಗುರುಕರುಣದಲಿ ಧ್ರುವ ಏನುಹೇಳಲಿ ಸ್ವಾನುಭವ ಸುಖದ ಸಿದ್ಧಿಯ ಜ್ಞಾನಿಬಲ್ಲ ಭಾಸುತಿಹ್ಯ ಸ್ವಕೀಲ ಸಿದ್ಧಿಯ ಮನವ ಬಲಿದು ಮಾಡಿಕೊಳ್ಳಿ ಜ್ಞಾನಸಿದ್ಧಿಯ ತನುವಿನೊಳು ದೋರುತೀಹ್ಯ ಶ್ರೀಗುರು ಸುಧೆಯ 1 ನಿಟಿಲ ಭ್ರೂಮಧ್ಯ ದಾಟಿನೋಡಿ ಮುಕ್ತಿಯ ದಿಟವಾಗಿ ಕೂಡಿ ಪ್ರಭಯ ಜ್ಞಾನ ಶಕ್ತಿಯ ಕುಟಿಲವಲ್ಲ ಕೇಳಿ ಮಾತು ನಿಜಯುಕ್ತಿಯ ನಟನೆ ತನ್ನೊಳು ದೋರುವ ಗುರುಭಕ್ತಿಯ 2 ಲೇಸು ಲೇಸಾಯಿತು ಎನಗೆ ಭಾಸ್ಕರ ಕರುಣವು ಭಾಸುತಿಹ್ಯದು ವಾಸುದೇವನ ಪುಣ್ಯಚರಣವು ಮೋಸವಿಲ್ಲದೆ ನೀಗಿತು ಜೀವನ ಜನ್ಮಮರಣವುದಾಸ ಮಹಿಪತಿಗಾಯಿತು ಘನಸ್ಫುರಣವು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು