ಒಟ್ಟು 23 ಕಡೆಗಳಲ್ಲಿ , 14 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಕಾಂತನನ್ನೊಲಿಸುವಾ ಬಗೆಯಾನೊರೆವೆ ಮಾನವ ಪ. ಶ್ರೀಕರಗುಣಯುತ ಪಾಕಶಾಸನವಿನುತ ಲೋಕೈಕ ವೀರನನ್ನೊಲಿಸುವಾ ತೆರನ ಪೇಳ್ವೆನಾಲಿಸು ಅ.ಪ. ಶಕ್ತಿ ಸಾಹಸಗಳಿಗೆ ಸೋಲುವನಲ್ಲ ರಕ್ಕಸಾಂತಕಮಲ್ಲ ಯುಕ್ತಿಮಾರ್ಗಕೆ ಮನವ ಸಿಲುಕಿಪನಲ್ಲ ಭಕ್ತವತ್ಸಲ ಸಿರಿನಲ್ಲ ವಿತ್ತ ಮೂಲಕದಿಂದ ಚಿತ್ತ ಚಲಿಸುವುದಲ್ಲ ಮುಕ್ತಿದಾಯಕನ ಮೆಚ್ಚಿಸಲ್ ವಿರಕ್ತಿಯಿಂ ಫಲವಿಲ್ಲ [ಮತ್ತ] ಖಿಲಾಂಡಕೋಟಿ ಬ್ರಹ್ಮಾಂಡನಾಯಕನ ಮೆಚ್ಚಿಸಲ್ ಭಕ್ತಿಯೊಂದೇ ಉತ್ತಮೋಪಾಯ ಕೇಳೆಲೈ1 ದೃಢದಿ ಶೈಶವದೊಳೇ ಅಡವಿಯನಾರಯ್ಯುತೆ ಪೊಡವೀಶನಡಿಗಿತ್ತ ತೊಡವಾವುದದ ಪೇಳ್ ಕಡು ಭಕ್ತನಾ ವಿದುರ ಪಡೆದನಸುರಾರಿಯಾಲಿಂಗನದ ಸುಖಮಂ ಮಡದಿಮಣಿ ಪಾಂಚಾಲಿ ಪಡೆದಳಕ್ಷಯಪ್ರದಾನಮಂ ತಡೆಯೇನು ಪೇಳಾ ಪರಮಾತ್ಮನೊಲ್ಮೆಗಿನ್ನು ದೃಢಭಕ್ತಿಗಿಂ ಮಿಗಿಲು ತೊಡವಾವುದಿರ್ಪುದೈ 2 ದಾನವವಂಶದಲಿ ಜನಿಸಿದನಾ [ಸು]ಜ್ಞಾನಿ ಪ್ರಹ್ಲಾದನು ಸಾನುರಾಗದಿ ಹರಿಯ ಭಕ್ತಿಯಿಂ ಧ್ಯಾನಿಸೆ ಕಂಬದಿಂ ನುನಿಸಿಯಾಕ್ಷಣದಲ್ಲಿ ಮನುಜಕೇಸರಿಯಾಗಿ ಘನದಾಕೋಪವನು ತಾಳಿ ದನುಜನ ಉರವ ಸೀಳಿ ಮನ್ನಿಸುತೆ ಭಕ್ತನಂ ನನ್ನಿಯಿಂ ಮೈದಡಹಿ ಉನ್ನತೋನ್ನತ ಪದವನಿತ್ತನಾಖಲಕುಠಾರಿಶೌರಿ ಮುನ್ನ ಭಕ್ತಿಯಿದುವೇ ಮುಖ್ಯಸಾಧನ ಕೇಳೈ 3
--------------
ನಂಜನಗೂಡು ತಿರುಮಲಾಂಬಾ
ಸುಳಾದಿ ತಾಳ-ಝಂಪೆ ನೋಡುವರೆ ನೀರದಶ್ಯಾಮಸುಂದರ ಮೂರ್ತಿ ಪಾಡುವರ ಪರಮಪಾವನ್ನ ಕೀರ್ತಿ ಕೂಡುವರೆ ಕೇವಲಾನಂದ ಚಿನ್ಮಯಗಾತ್ರ ನೀಡುವರೆ ನಿಖಿಳಲೋಕೈಕಪಾತ್ರ ನೋಡಿ ನಮಿಸುವರುಂಟು ಪಾಡಿಹಿಗ್ಗುವರೂಟ ಕೂಡಿ ಸುಖಿಸುವರುಂಟು ನೀಡಿ ನಲಿವವರುಂಟು ನೋಡಿಸುತ ಪಾಡಿಸುತ ಕೂಡಿಸುತ ಬೇಡಿಸುತ ನಾಡದೈವಂಗಳ ಕೊಂಡಾಡಿಸದಲೆ ಬೇಡಿದಿಷ್ಟವ ಕೊಡುತ ಶ್ರೀದವಿಠಲ ದಯ - ಮಾಡಿ ನಮ್ಮನು ಪೊರೆವ ರೂಢಿಗೊಡೆಯ ನಾಡದೈವಂಗಳ ಕೊಂಡಾಡಿಸದಲೆ 1 ತಾಳ-ಮಟ್ಟ ಸಕಲ ಶ್ರುತಿನಿಕರಸಾರಹೋ ಶುಕಮಹಾಮುನೀಂದ್ರ ಸನ್ನುತ ಪ್ರಕಟ ಮಾಡಲ್ಯಾಕೆ ನಿನ್ನನು ಪರಮಪುರುಷ ಪ್ರಕಟಮಾಡಲ್ಯಾಕೆ ನಿನ್ನನು ಭಕ್ತವತ್ಸಲನೆಂಬೆನಲ್ಲದೆ ಮುಕುತವಂದ್ಯ ಶ್ರೀದವಿಠಲ ಯುಕುತಾಯುಕುತವೊಂದನರಿಯದೆ ಪ್ರಕಟಮಾಡಲ್ಯಾಕೆ ನಿನ್ನನು 2 ತಾಳ-ತ್ರಿವಿಡಿ ಆಯನುಭವ ಭಯ ಲಯವರ್ಜಿತ ನಯನೋತ್ಸಹಕಾರಕ ತಾರಕ ಜಯಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾÀಟ ಸಯವೇ ಸೈ ಶ್ರೀದವಿಠಲ ನಿ ನ್ನಯ ಚರಣಕೆ ನಮಿಸುವೆ ನಮಿಸುವೆ ಜಯ ಮಂಗಳ ಮಂಗಳ ಮಂಗಳ ಮಾಯಾ ಮಾಮರ ದೇವರಾಟ 3 ತಾಳ-ಅಟ ಬಾರೋ ಬಾರೋ ಭವದೂರ ದೀನಜನ ಭಾರ ನಿನ್ನದಯ್ಯಾ ಅಯ್ಯಯ್ಯಾ ಸಾರಿದೆನೊ ನಾ ನಿನ್ನ ಸಾರಿದೆನೊ ನಿನ್ನ 4 ತಾಳ-ಆದಿ ಶ್ರೀರಮಣ ಶ್ರೀದವಿಠಲ ಸಂ - ಚಾರು ಚರಣಗಳ ಸಾರಿದೆನೊ ನಿನ್ನ ಶಿರಿಗುರವಿತ್ತೆ ಪರಮನ ಪೆತ್ತೆ ಗಿರಿಜೇಶಗೆ ನಿನ್ನ ಮೈ ಇತ್ತೆ ಶರಣಾಗತವತ್ಸಲ ಕರುಣಾಕರ ಶ್ರೀದವಿಠಲ ಸರಿಬಂದರೆ ಸಾಕುವದೆಮ್ಮನು ಶರಣಾಗತವತ್ಸಲ 5 ಜತೆ ಸೋಲು ಶ್ರೀದವಿಠಲ ಸೋಲು ಗೆಲುವು ನಿನ್ನ
--------------
ಶ್ರೀದವಿಠಲರು
ಸ್ವಾಮಿ ಸದ್ಗುರುದಯವೆ ತಾ ನಿಜ ನೇಮ Pರಿಗಿದೇವೆ ಹಿತಗುಜ ಸಮಸ್ತ ಜನರಿಗಿದೆ ಸುಬೀಜ ಪ್ರೇಮವಿಟ್ಟವರಿಗ್ಹೊಳೆವದು ಸಹಜ 1 ಗುರು ಉಪಾಸನೆ ಎಲ್ಲಕೆ ಮೇಲು ಸುರಜನರಿಗಿದೊಂದೇ ಕೀಲು ಅರಿತವರಿಗೆ ಮುಕ್ತಿ ಬಾಗಿಲು ತ್ಯರ ತಿಳಿಯದವರಿಗಿದೇ ಸೋಲು 2 ನಂಬಿ ನಡೆಯಬೇಕು ಸದ್ಗುರುಪಾದ ಇಂದುದೋರಿಕೊಡುವದು ಸುಬೋಧ ಗುಂಭಗುರುತಾಗಿದೋರುದು ಸ್ವಾದ ಹಂಬಲಿಸಿಕೊಳಬೇಕು ಸುಪ್ರಸಾದ 3 ಗುರುಮಾರ್ಗವೆಂಬುದೆ ಸಾಕ್ಷಾತ್ಕಾರ ಸೂರೆಗೊಂಡು ಮ್ಯಾಲೆ ಸುಖಸಾಗರ ಮರುಳ ಬಲ್ಲವೇನಿದರ ವಿಚಾರ ಶರಣಜನರಿಗಿದೇ ಸಹಕಾರ 4 ಗುರುಕೃಪೆಯಾದವಗೆ ಪ್ರಾಂಜಳ ಸಾರಾಯ ಕೊಂಬುವನೆ ತಾ ವಿರಳ ಅರಿಯೋ ಮಹಿಪತಿ ನಿನ್ನೊಳು ಸಕಳ ಹರುಷವಾಗೆದಿಂತು ಈ ಸುಖಕಲ್ಲೋಳ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಲಿಯುಗದ ಮಹಿಮೆಯನು ಕಾಣಬೇಕಿಂತು ಪ.ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |ಗುರುಹಿರಿಯರೊಳು ದೋಷವೆಣಿಸುತಿಹರು |ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |ತರುಣಿಯರ ನುಡಿಗಳನು ಲಾಲಿಸುತ್ತಿಹರು 1ಕಂಡುದನೆ ಹೇಳರು ಕಾಣದನೆ ಹೇಳುವರು |ಉಂಡ ಮನೆಗೆರಡನ್ನೆ ಎಣಿಸುತಿಹರು ||ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |ದಂಡಿಸುವರಿಂಗೆ ಧನಗಳನು ಕೊಡುತಿಹರು 2ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |ಒಳ್ಳೆಯವರೊಡನೆ ವಂಚನೆ ಮಾಳ್ಪರು ||ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |ಬಲ್ಲಿದವರಿಗೆ ಬಾಯ ಸವಿಯನುಣಿಸುವರು 3ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು 4ಮಾಡಿದುಪಕಾರವನು ಮರೆತುಕಳೆವರು ಮತ್ತೆ |ಕೂಡಾಡಿ ಬೇಡುವರು ಕುಟಿಲತ್ವದಿಂದ ||ರೂಢಿಗೊಡೆಯನು ನಮ್ಮ ಪುರಂದರವಿಠಲನ |ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ 5
--------------
ಪುರಂದರದಾಸರು
ಕ್ಷುಲ್ಲರಿಗೊದಗದು ಫುಲ್ಲನಾಭನ ಪದಅಲ್ಲ್ಲ್ಯವಧಾರಣ ಬುದ್ಧಿಗಳುಬಲ್ಲಿದಸುಖತೀರ್ಥರುಲ್ಲಾಸದಪಥದಲ್ಲಿಹರಿಗೆ ಪರಸಿದ್ಧಿಗಳು ಪ.ಆಡುವುದಮಿತವು ಮಾಡುವುದಹಿತೀಶಾಡುವದಾಶೆಗಳಬ್ಧಿನಾಡವಚನ ಉಪಗೂಡಿಸಿ ಠಾಳಿಪಮೂಢರ್ಗೆ ವಿಷಯದ ಲುಬ್ಧಿರೂಢಿಯೊಳಿವ ತನುಗೂಡಿದ ಬಯಕೆಯ ನೀಡಾಡಿದರೆ ಸುಖ ಲಬ್ಧಿಹಾಡಿ ಹರಿಯ ಕೊಂಡಾಡ್ಯನುದಿನಕೋಲ್ಯಾಡಲು ಒಲಿವ ದಯಾಬ್ಧಿ 1ಹೀನ ಶ್ರದ್ಧದಿಘನಸ್ನಾನ ಸುರಾರ್ಚನೆನಾನಾಡಂಬರಕುದಿಸುವ ಗಳಿಕೆಮೌನವೆ ವಧು ಹಣ ಧ್ಯಾನದಾರೋಹಣಜ್ಞಾನದೊಳಜ್ಞಾನದ ಬಳಕೆಏನೊಂದರಿಯರು ಮಾನುಭವಾರ್ಯರುಮಾನಪಮಾನ್ಗಳ ವೆಗ್ಗಳಿಕೆಶ್ರೀನಾಥಪದಕೊಪ್ಪು ಪ್ರಾಣವನೊಪ್ಪಿಪಜಾಣರ್ಗೆ ಮುಕುತಿಯ ಕಳವಳಿಕೆ 2ತರ್ಕಕೆ ನಿಶಿದಿನಕರ್ಕಶಭಾವದವರ್ಕಡು ಪಾತಕರ್ಬಾಧಕರುಮರ್ಕಟ ಮುಷ್ಟಿಯೊಳು ಮೂರ್ಖ ಪ್ರತಿಷ್ಠೆಯೊಳುನರ್ಕಪದೇ ಪದೇ ಸಾಧಕರುಆರ್ಕೂಡ ಮುಕ್ತರು ಶರ್ಕರ ಸೂಕ್ತರುಅರ್ಕಸುತೇಜ ಮುಖಾಧೀಶರುತರ್ಕೈಪರು ಸಂತರ್ಕಳಖಳಸಂಪರ್ಕಕೆ ಹೆದರುವ ಭೇದಕರು 3ಶಾಸ್ತ್ರ ವಿಚಾರಿಸಿ ಪ್ರಸ್ತಾರದೋರಿ ಸ್ಮರಾಸ್ತ್ರಕೆ ಮಗ್ಗುತ ಸೋಲುವರುಸ್ವಸ್ಥ ಮನಿಲ್ಲದೆ ದುಸ್ತರಬೋಧಸಮಸ್ತರೊಳಗೆ ಬೋಧಿಪರವರುವಿಸ್ತರ ತತ್ವ ಪ್ರಶಸ್ತ ಬೀರುತ್ತ ಪರಸ್ತ್ರೀ ಜನನಿಸಮನೆಂಬುವರುಅಸ್ತಮಯೋದಯದಿ ವ್ಯಸ್ತವಿದೂರ ಹೃದಯಸ್ಥ ಹರಿಯನೆ ಚರಿಸುವರು 4ಒಂದರಿದವರು ನೂರೊಂದನರಿತವರಾರೆಂದತಿಶಯಮದ ವಿಹ್ವಲರುಕುಂದುಕುಚೇಷ್ಟೆ ವಿನಿಂದೆಯ ಧೃಷ್ಟ ಮುನೀಂದ್ರ ದ್ರೋಹದಗುಣಸಂಕುಲರುಮಂದರಧರನವರಂದನುಭವದಿವನೊಂದನರಿಯರತಿ ನಿರ್ಮಳರುತಂದೆ ಪ್ರಸನ್ವೆಂಕಟೇಂದ್ರನಕಿಂಕರರೆಂದೆಂದಿಗಪವಾದಕೊಳಗೊಳರು 5
--------------
ಪ್ರಸನ್ನವೆಂಕಟದಾಸರು
ಶೋಭನವೆಹರಿಶೋಭನವೆಪ.ಶೋಭನವೆನ್ನಿರಿ ಶುಭಕರದಿಂದಲಿಶೋಭನ ಶ್ರೀಲೋಲಗೋಪಾಲನೆನ್ನಿರೆಅಪಪಾಲುಗಡಲು ಮನೆಯಾಗಿರಲುಆಲದೆಲೆಯ ಮೇಲೆ ಮಲಗುವರೆ ||ಮೂಲೋಕವೇ ನಿನ್ನುದರದೊಳಿರಲುಬಾಲಕನಾಗಿ ಎತ್ತಿಸಿಕೊಂಬುವರೆ 1ಸಿರಿ ನಿನ್ನ ಕೈವಶವಾಗಿರಲುತಿರುಮಲ ಮಲೆಯನು ಸೇರುವರೆ ||ಸರಸಿಜಭವ -ಭವ ನಿನ್ನ ಪೂಜಿಸಲುನರನ ಬಂಡಿಯ ಬೋವನೆನಿಸುವರೆ 2ಕಮ್ಮಗೋಲನ ಪಿತನಾಗಿರಲುಗಮ್ಮನೆ ಕುಬುಜೆಗೆ ಸೋಲುವರೆ ||ಬ್ರಹ್ಮ ಪರಬ್ರಹ್ಮ ಚರಣಕೆ ಶರಣು
--------------
ಪುರಂದರದಾಸರು
ಸೋಲು-ಗೆಲುವಿಗೆಲ್ಲ ನೀನು |ಬಾಲಕರೊಳು ಕೂಡಿಕೊಂಡು ||ಮೇಲೆ ಮಮತೆಯಿಂದೆ ಸಾನು-|ಕೂಲವಾಗಿ ನಡಸುವಂತೆ2ಪುಟ್ಟ ಪುಟ್ಟ ಕೊಳಲು ಕಂಬಳಿ |ಕಟ್ಟಿಬುತ್ತಿ ಕೈಯಲಿ ಕೋಲು ||ದಿಟ್ಟ ಚೆಲುವನಾದ ಪುರಂದರ-|ವಿಠಲ ಗೋವಳರ ರಾಯ 3
--------------
ಪುರಂದರದಾಸರು