ಒಟ್ಟು 19 ಕಡೆಗಳಲ್ಲಿ , 15 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹುಚ್ಚನಾಗಬೇಕೋ ಜಗದಿ ಹುಚ್ಚನಾಗಬೇಕೋ ಪ ಅಚ್ಚುತಾನಂತನ ನಿಶ್ಚಲ ಧ್ಯಾನದಿ ಇಚ್ಛೆಯಿಟ್ಟು ಜಗದೆಚ್ಚರ ನೀಗಿ ಅ.ಪ ಮರವೆ ಹರಿಯಬೇಕೋ ಪರಲೋಕ ದರಿವಿನೊಳಿರಬೇಕೊ ಪರಿಪರಿಯಿಂದಲಿ ಸಿರಿಯರಸನ ಪಾದ ಸ್ಮರಿಸಿ ಇಹ್ಯದರಿವು ತೊರೆದಾನಂದದಿ 1 ಪರನೆಲೆ ತಿಳಬೇಕೋ ಕಾಯದ ನರನೊದೆಯ ಬೇಕೊ ದುರಿತಾಕಾರಿಗಳ ಕಿರಿಕಿರಿಯಿಲ್ಲದೆ ಹರಿಹರಿಯೆನ್ನುತ ಪರಮಾನಂದದಿ 2 ಕಾಮ ಕಳೆಯಬೇಕೋ ಕಾಯದ ಪ್ರೇಮ ತೊರೆಯಬೇಕೊ ನೇಮದಿಂದ ಮಮಸ್ವಾಮಿ ಶ್ರೀರಾಮನ ನಾಮ ಭಜಿಸಿ ನಿಸ್ಸೀಮನಾಗಾನಂದದಿ 3
--------------
ರಾಮದಾಸರು
ನಿನ್ನ ಸಮಾನ ದೇವರುಂಟೇನೋ ಎನ್ನಯ್ಯ ರಂಗ ಪನಿನ್ನ ಸಮಾನ ದೇವರುಂಟೇ ಇನ್ನೀ ಭುವನಭವಾಂಡದೊಳಗೆಬನ್ನಬಡಿಸದೆ ದಾಸಜನರ ನಿನ್ನ ಪ್ರಾಣಸಮಮಾಡಿ ಪೊರೆಯುವಿ ಅ.ಪಸೋಮಕಾಸುರ ದೈತ್ಯನ್ನ ವಧಿಸಿ ವೇದವನು ತಂದುನೇಮದಿಂ ಮತ್ತೀ ಸೃಷ್ಟಿ ನಿಲ್ಲಿಸಿ ಸಾಗರವ ಮಥಿಸಿಪ್ರೇಮದಮೃತ ಸುರರಿಗುಣಬಡಿಸಿ ನಿಸ್ಸೀಮನೆನಿಸಿಸೋಮಶೇಖರನಮಿತ ಕಷ್ಟವ ಪ್ರೇಮ ದೃಷ್ಟಿಯಿಂ ದೂರ ಮಾಡಿಭೂಮಿತ್ರಯಕೆ ಕ್ಷೇಮ ನೀಡಿದಿ ಕಾಮಿತ ಭಕ್ತರ್ವರಪ್ರದಾತ 1ಎರಡೆ ಅಡಿಗಿಡಿಭುವನವನು ತುಳಿದಿ ಅಮಿತಮಹಿಮಪರಮಉಗ್ರರೂಪ ಧರಿಸಿದಿ ಭಕುತಗಾಗಿಅರಮನೆಯ ಸ್ತಂಭೊಡೆದು (ಮೂ) ಡಿದಿ ಪರಮದಯಾನಿಧಿಚರಣದಾಸರ ಪೊರೆಯುಲೋಸುಗ ನರನ ರೂಪದಿನಿರುತ ವಿಪಿನಕೆ ತೆರಳಿ ದಕ್ಷಿಣಶರಧಿ ಹೂಳಿಸಿದುರಳರ್ಹಾವಳಿ ದೂರ ಮಾಡಿದಿ 2ದ್ವಾರಕೆಂಬ ಪುರವ ನಿರ್ಮಿಸಿ ಅದಕೊಡೆಯನೆನಿಸಿಸಾರಭಕುತರ ಇಷ್ಟಪೂರೈಸಿ ಮಹಲೀಲೆ ನಡೆಸಿಪರಮಕಂಟಕರನ್ನು ನಾಶಿಸಿ ಧರೆಭಾರಮಿಳಿಸಿಪರಮಸುರಗಣಕ್ಹರುಷವಿತ್ತು ಧಾರುಣಿಯನು ಪರಿಶುದ್ಧಮಾಡಿಕರುಣದಾಳುವಿ ಭುವನತ್ರಯವನು ಶರಣಜನಪ್ರಿಯವರದ ಶ್ರೀರಾಮ 3
--------------
ರಾಮದಾಸರು
ವೃಂದಾವನದೊಳಾಡುವನಾರೆ - ಗೋಪ-|ಚಂದಿರವದನೆ ನೋಡುವ ಬಾರೆ ಪಅರುಣಪಲ್ಲವಪಾದಯುಗಳನೆ ದಿವ್ಯ-|ಮರುಕತ ಮಂಜುಳಾಭರಣನೆ ||ಸಿರಿವರ ಯದುಕುಲ ಸೋಮನೆ ಇಂಥ-|ಪರಿಪೂರ್ಣ ಕಾಮ ನಿಸ್ಸೀಮನೆ 1ಹಾರ-ಹೀರ ಗುಣಧಾರನೆ - ದಿವ್ಯ |ಸಾರಶರೀರ ಶೃಂಗಾರನೆ ||ಆರಿಗಾದರು ಮನೋದೂರನೆ ತನ್ನ-|ಸೇರಿದವರ ಮಾತ ವಿೂರನೆ 2ಮಕರಕುಂಡಲಕಾಂತಿ ಭರಿತನೆ - ದಿವ್ಯ |ಆಕಳಂಕರೂಪ ಲಾವಣ್ಯನೆ ||ಸಕಲರೊಳಗೆ ದೇವನೀತನೆ - ನಮ್ಮ |ಮುಕುತೀಶಪುರಂದರವಿಠಲನೆ3
--------------
ಪುರಂದರದಾಸರು