ಒಟ್ಟು 19 ಕಡೆಗಳಲ್ಲಿ , 15 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಕಂಡೆಯಾ ಹರಿಯೆ-ನಿನ್ನ ನಾಮ-|ಕೊಡು ಕಂಡೆಯಾ ಹರಿಯೆ ಪಬಡವ ನಾನೆಂದು ಕಾಡಲಿಲ್ಲ ಹರಿಯೆ ಅ.ಪಒಡಲುತುಂಬದು ಎಂದು ಬಳಲಿಸೆ ಬರಲಿಲ್ಲ |ಸಡಗರದಿಂ ಭಾಗ್ಯ ಬೇಡಲಿಲ್ಲ ||ಮಡದಿ-ಮಕ್ಕಳಿಗಾಗಿ ಕಡು ಮೋಹವೆನಗಿಲ್ಲ |ಬಿಡದೆ ನಾಮಸ್ಮರಣೆ ಕೊಡು ಒಂದೇ ಸಾಕೊ 1ಸ್ನಾನ-ಮೌನ ಜಪ-ತಪಗಳು ಎನಗಿಲ್ಲ |ನಾನಾಯೋನಿಗಳಲ್ಲಿ ಬಳಲಿ ಬಂದೆ ||ದೀನರಕ್ಷಕ ನೀನೆ ದಯದಿಂದಲೆನಗಿನ್ನು |ಧ್ಯಾನಸುಧೆಯನಿತ್ತು ಸಲಹಯ್ಯ ಹರಿಯೆ 2ಬಲೆಗೆ ಸಿಲುಕಿದ ಮೃಗದಂತೆ ಬಾಯ್ಬಿಡುತಲಿ |ಅಲಸಿ ಕೋಟಲೆಯ ಸಂಸಾರದಿಂದ |ತಲೆಹುಳಿತ ನಾಯಂತೆ ಬಯಲಾಸೆಗೆ ಸಿಲುಕಿದೆ |ಸಲಹೊ ದೇವರ ದೇವಪುರಂದರವಿಠಲ3
--------------
ಪುರಂದರದಾಸರು
ದಾರಿಯ ತೋರೊ ಮುರಾರಿ ಮುಂದಣದಾರಿಯ ತೋರೊ ಮುರಾರಿ ಪ.ದಾರಿತೋರುಕಂಸಾರಿಭವಾಂಜನಪಾರಾವಾರಉತ್ತಾರಣಗೈಯುವಅ.ಪ.ಮಾಯಾಶ್ರಿತನಾಗಿಹೆನಲ್ಲೊ ಮೋಕ್ಷೋ-ಪಾಯಭೇದಂಗಳ ಮರತೆನಲ್ಲೊಕಾಯಜಪಿತ ಕಮಲಾಯತಲೋಚನಕಾಯದೊಳಗೆ ಸನ್ನಾಯದಿ ನೋಡುವ 1ದುಃಖವಿಲ್ಲದೆ ಸುಖವಿಲ್ಲ ಇದಒಕ್ಕಣಿಪರೆ ತುದಿಬುಡವಿಲ್ಲಸೊಕ್ಕಿ ನಡೆದು ಭವಯಿಕ್ಕುಳ ಬಾಯೊಳುಸಿಕ್ಕಿದೆನಲ್ಲವೊ ರಕ್ಕಸವೈರಿಯೆ 2ಬಲ್ಲೆನೆಂಬರೆ ಬಲವಿಲ್ಲಭವಬಲ್ಲೆಯೊಳಗೆ ಸಿಲುಕಿದೆನಲ್ಲಕಲ್ಲೊಳಗ್ನಿ ಕಲಕಿರುವಂದದಿ ಮನದಲ್ಲಿ ನಿನ್ನ ಪದಪಲ್ಲವ ಭಜಿಸುವ 3ಸಾರರಹಿತ ಸಂಸಾರದಿಮಾಯಾನಾರಿ ಗೈದ ಮಮಕಾರದಿಘೋರದುರಿತವಪಹಾರಗೈವ ಲಕ್ಷ್ಮೀನಾರಾಯಣನು ಸೇರಿ ಸೇವಿಸುವಂಥ 4
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಿನ್ನ ನೋಡಿ ಧನ್ಯನಾದೆನೊ ಶ್ರೀಕೃಷ್ಣ ದಯದಿಮನ್ನಿಸಯ್ಯ ಮರೆಯ ಹೊಕ್ಕೆನು ಪಅನ್ನಪಾನದಿಂದ ಬೆಳೆದ ತನುವು ಸ್ಥಿರವಿದೆಂದು ನಂಬಿಮುನ್ನ ಮತಿಹೀನನಾಗಿ ನಿನ್ನ ಸ್ಮರಣೆ ಮರೆತೆ ಅ.ಪಮಾಯ ಪಾಶದಲಿ ಸಿಲುಕಿದೆಯನ್ನನಗಲಿ ಅಳಿದ ತಾಯಿತಂದೆಯರಿಗೆ ಮರುಗಿದೇ ಪ್ರಿಯಮಡದಿ ಪರಸ್ತ್ರೀಯರಲಿ ಮೋಹವೆರಸಿಮರುಳನಾದೆಕಾಯಸುಖವನೆಣಿಸಿಸರ್ವೇ ನ್ಯಾಯ ತಪ್ಪಿ ನಡೆದೆ ಕೃಷ್ಣಾ 1ಹಲವು ಜನ್ಮವೆತ್ತಿ ತೊಳಲಿದೇ ತರಳನೆನಿಸಿಹಲವು ಜಾತಿ ಮೊಲೆಯ ಭುಜಿಸಿದೆಹಲವು ದೇಶಗಳನು ಸುತ್ತಿ ಹಲವುಕ್ರೂರಕೃತ್ಯ ಗೈದೆ ತಲೆಯ ಹಿಂದೆಇರುವ ಮೃತ್ಯು ನೆಲೆಯನರಿಯದಿರ್ದೆ ಕೃಷ್ಣಾ 2ಆಶಾಪಾಶಗಳಲಿ ಸರ್ವ ದೋಷ ಮೋಸವೆಣಿಸದಾದೆಲೇಸ ಕಾಣೆ ಮುಂದೆ ಯಮನ ಪಾಶಕರ್ಹನಾದೆ ಕೃಷ್ಣಾ3ಅರಿಗಳಾರು ಮಂದಿ ದೇಹದಿ ನೆಲಸಿರ್ದು ಎನ್ನಮರುಳುಗೊಳಿಸೆ ಇಂದ್ರಿಯ ಸಹಾಯದಿನರವು ಮಾಂಸ ಅಸ್ಥಿಯಿಂದ ವಿರಚಿಸಿದ ದೇಹವಿದನುಪರಿಪರಿಯ ಶೃಂಗರಿಸುತ ಸ್ಮರನ ತೆರದಿ ಮೆರೆದೆ ಕೃಷ್ಣಾ 4ಒಂದು ದಿನವು ಸುಖವ ಕಾಣೆನೂ ಈ ಜೀವನಸಂಬಂಧಿಗಳ್ಯಾರೆಂಬುದನರಿಯೆನೂಬಂಧು ನೀನೇ ಸರ್ವಪ್ರದನು ಮುಂದೆ ಜನುಮವೆತ್ತದಂತೆಬಂದು ಎನ್ನ ಸಲಹೋ ಗೋವಿಂದದಾಸನೊಡೆಯ ಕೃಷ್ಣಾ 5
--------------
ಗೋವಿಂದದಾಸ
ವಿಠಲ ಎನ್ನನು ಕಾಯೊ ವಿಠಲ ಪಂಢರಿರಾಯವಿಠಲ ಭಕ್ತವತ್ಸಲ ವಿಠಲಹರಿವಿಠಲಪ.ದಿಟ್ಟ ಪುಂಡಲೀಕ ತನ್ನ ಪುಟ್ಟಿಸಿದವರ ಮನಮುಟ್ಟಿ ಪೂಜಿಸಲು ಚಿತ್ತಗೊಟ್ಟು ಬಂದೆಯೊ ವಿಠಲಬಿಟ್ಟು ಬರದಲೆ ಒಡನಿಟ್ಟಿ ನೀಡಲು ಚೆಲುವಇಟ್ಟಂಗಿ ಮ್ಯಾಲಂಘ್ರಿಪದ್ಮವಿಟ್ಟು ನಿಂತ್ಯಯ್ಯ ವಿಠಲ 1ಕೊಟ್ಟ ಭಾಷೆಗೆ ಭಕ್ತರ ಕಟ್ಟಲಿ ಸಿಲುಕಿದೆಯೊ ಕಂಗೆಟ್ಟೆನೊ ಭವದಿ ನಿನ್ನಗುಟ್ಟುತೋರಯ್ಯ ವಿಠಲಪಟ್ಟಗಟ್ಟ್ಟ್ಯಜಭವರ ಕಟ್ಟಿಲೆ ಇದ್ದ ವೈಕುಂಠಪಟ್ಟಣ ಭೀಮಾತೀರದಿ ನಟ್ಟು ನಿಂತ್ಯಯ್ಯ ವಿಠಲ 2ನೆಟ್ಟನೆ ವೇದವ ತಂದು ಬೆಟ್ಟವೆತ್ತಿ ಇಳೆಯ ಪೊತ್ತಿಸಿಟ್ಟು ತಾಳ್ದೆವಟುಖಳರೊಟ್ಟಿಲೊದ್ಯೈಯ್ಯ ವಿಠಲಕಟ್ಟಿದೆ ಕಡಲ ಜಗಜಟ್ಟಿ ಗೋಪ ಬೌದ್ಧ ಕಲಿಯಮೆಟ್ಟಿ ಆಳ್ದೆ ಪ್ರಸನ್ವೆಂಕಟ ಕೃಷ್ಣಯ್ಯ ವಿಠಲ 3
--------------
ಪ್ರಸನ್ನವೆಂಕಟದಾಸರು