ಒಟ್ಟು 19 ಕಡೆಗಳಲ್ಲಿ , 11 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾದಾದಿದೇವ ನಮೋ ಮಹಾಮಹಿಮನೆ ನಮೋಪ್ರಹಲ್ಲಾದವರದ ಅಹೋಬಲ ನರಸಿಂಹ ಪ.ತರಣಿಗುಬ್ಬಸವಾಗೆ ತಾರಾಪತಿಯು ನಡುಗೆಸುರರು ಕಂಗೆಟ್ಟೋಡೆ ನಭವ ಬಿಟ್ಟು ||ತರುಗಿರಿಗಳಲ್ಲಾಡೆ ಶರಧಿಗಳು ಕುದಿದುಕ್ಕೆಉರಿಯನುಗುಳುತ ಉದ್ಭವಿಸಿದೆಯೊ ನರಸಿಂಹ 1ಸಿಡಿಲಂತೆ ಗರ್ಜಿಸುತೆ ಕುಡಿಯ ನಾಲಗೆ ಚಾಚಿಅಡಿಗಡಿಗೆ ಹುಂಕರಿಸಿ ಕಡುಕೋಪದಿಂದ ||ಮುಡಿವಿಡಿದು ರಕ್ಕಸನ ಕೆಡವಿ ನಖದಿಂದೊತ್ತಿಬಿಡದೊಡಲ ಬಗೆದ ಕಡುಗಲಿ ನಾರಸಿಂಹ 2ಸರಸಿಜೋದ್ಭವ ಹರ ಪುರಂದರಾದಿ ಸಮಸ್ತಸುರರು ಅಂಬರದಿ ಪೂಮಳೆಗರೆಯಲುಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತರನುಕರುಣಿಸುವ ಪುರಂದರವಿಠಲ ನಾರಸಿಂಹ 3
--------------
ಪುರಂದರದಾಸರು
ವಾಸವನೆ ಮಾಡಿರೋ ಕಾಶಿಯಲಿ ಪವಾಸವನೆ ಮಾಡಿ ಕಾಶಿಯಲಿ ವಸುಧೆಯ ಜನರು |ಏಸುಜನ್ಮದ ಪಾಪವನೆ ಕಳೆದು ಯಮಪುರಿಯ ||ಹೇಸಿಕೆಯ ರಾಶಿಗಳ ಒದೆದು ಹೆಚ್ಚಳವಾದ |ಮೀಸಲಳಿಯದಪದವಿಸಾರಿರಯ್ಯಅಪಶ್ರೀ ವಿಷ್ಣು ಸಿರಿಸಹಿತ ಗರುಡ ವಾಹನನಾಗಿ |ಜೀವಿಗಳ ಸ್ಥಿತಿಯ ನೋಡುತ ಬರಲು ಮರುಗಿ ಆ |ದೇವಿ ಬಿನ್ನಹ ಮಾಡಲಾಗ ಕರುಣಾಕರನು |ಭಾವಿಸಿದನೀ ಕೃತಿಯನು |ದೇವತ್ರಿಧಾಮನವ ದಿವ್ಯ ವೈಕುಂಠದೊಳು |ಪಾವನಸ್ಥಳವಿದೆಂದೊರೆದ ಧರೆಯೊಳು ಕಾಶಿ |ಶ್ರೀ ವಾರಣಾಸಿ ಪಂಚಕ್ರೋಶಮಿತಿಯಲ್ಲಿಆ ವಿಪುಳ ಮಣಿಕರಣಿಕೆ 1ಬಲಿಯ ಬಳಿ ಮೂರಡಿಯ ಭೂದಾನವನೆ ಬೇಡಿ |ನೆಲನಳೆಯ ಈರಡಿಗೆ ಸಾಲದಿರೆ ಬ್ರಹ್ಮಾಂಡ |ಬಲಪದದ ನಖದಿ ಸೀಳಲ್ಕೆ ಬಹಿರಾವರಣ |ಜಲಸುರಿಯೆ ಅಂಗುಟದಲಿ ||ಸಲೆ ತೀರ್ಥವೆಂದಜ ಕಮಂಡಲದೊಳಗೆ ಧರಿಸಿ |ತೊಳೆದನಾ ಚರಣಗಳ ಬಲು ಗಂಗೆ ಬರಲು ಜಡೆ - |ತಲೆಯೊಳಿಟ್ಟಾ ಶಿವ ಭಗೀರಥನ ಯತ್ನದಿಂ |ದಿಳಿದಿಹಳು ಕಾಶಿಯಲ್ಲಿ 2ಪರಮನಿರ್ಮಲ ಶುಭ್ರತರದ ಭಾಗೀರಥಿಯನಿರಜೆ ನೀಲಾಭೆ ಯಮುನೆಯ ಮಧ್ಯದಲಿ ಕಾರ್ತ |ಸ್ವರವರ್ಣದಿಂದಲ್ಲಿ ಗುಪ್ತಗಾಮಿನಿಯಾದ |ಸರಸತಿಯ ಸಂಗಮದಲಿ ||ಮೆರೆಯುವ ತ್ರಿವೇಣಿಯೆನಿಸುವ ತೀರದಲ್ಲಿ ವಟ - |ತರುಛಾಯೆಯಲ್ಲಿಹುದು ದೇವ ಋಷಿ - ಮೌನೀಗಣ 3
--------------
ಪುರಂದರದಾಸರು
ಶ್ರೀ ನರಸಿಂಹ ಸ್ತೋತ್ರ11ವಂದಿಸು ನರಹರಿಯ ಮನವೆ ವಂದಿಸು ನರಹರಿಯವಂದ್ಯವಂದ್ಯನು ಬಹು ಸುಂದರ ಸುಖಮಯಇಂದಿರರಸ ಅರವಿಂದ ಸುನಾಭನ ವಂದಿಸು ನರಹರಿಯ ಪಸಿಂಧುಸಂಚರ ಬಹು ಸುಂದರ ಗಿರಿಧರತಂದನು ವಸುಧೆಯ ಕಂದನ ಕಾಯ್ದ ಪುರಂದರವರದ ಮುನೀಂದ್ರ ಕುಮಾರ ಕಪೀಂದ್ರಗÉ ಒಲಿದಮರೇಂದ್ರಗೆ ಬೋಧಿಸಿನಿಂದ ದಿಗಂಬರಕುಂಭಿಣಿಸುರನುತಮಂದರಗಿರಿ ಎತ್ತಿ ಸಿಂಧುವಿಂದಲಿ ಬಂದುಅಂಧ ಮೂಢರ ತನ್ನ ಅಂದ ಮೋಹದಿಕಟ್ಟಿದಾನ್ತ ಸುರರಿಗೆಲ್ಲ ಚಂದ ಸುಧೆಯನಿತ್ತಇಂದಿರಾಕಾಂತನನಂತ ಸುಗುಣಗಳಚಿಂತಿಸಿ ಯೋಗ್ಯದಿ ಕಂದದ ಪ್ರೇಮದಿವಂದಿಸು ನರಹರಿಯ 1ವೇದಾಂತರ್ಗತಬಾದರಾಯಣಹರಿಪಾದಾರಾಧಕಮೋದಸುತೀರ್ಥರಪಾದಾವಲಂಬಕ ಸಾಧು ಸುಮೇಧರಹೃದಯಾಕಾಶದಿ ಪದುಮದ ಮೂಲದಿಸದಮಲಾತ್ಮನಾದಿತ್ಯನುಪೋಲುವಿಧವಿಧಭಾಸದಿ ಪದೆ ಪದೆ ನೋಡುತವಿಧಿಯ ತಾತನ ಬಹುಮೋದಸುಗುಣಗಳಮುದದಲಿ ಚಿಂತಿಪಕೋವಿದಹಿರಿಯರಪಾದಸುಪಾಂಶುವ ನಿಯಮದಿ ಪೊಂದಿ ನೀಪದುಮೇಶನ ನಿನ್ನ ಹೃದಯದಿ ಚಿಂತಿಸಿವಂದಿಸು ನರಹರಿಯ 3ನಿಜಸುಖಮಾರ್ಗದಿ ಭಜಕ ಬಾಲಕ ಪೋಗೆಅರ್ಜಿತ ದ್ವೇಷದಿ ಮೂರ್ಜಗ ಶತ್ರುಗಜಾದಿಗಳಿಂ ಹೆಜ್ಜೆಜ್ಜೆಗೆ ಬಾಧಿಸೆಧೂರ್ಜಟಸೇವ್ಯ ಜನಾರ್ಧನ ನರಹರಿಗರ್ಜಿಪ ವದನನು ಸಜ್ಜನಪಾಲಕಅಜಸುರರೆಲ್ಲರು ತೇಜೋಮಯ ಅತಿಜ್ವಲಿಸುವ ನಖದಿಂ ದುರ್ಜನ ರಾಜನಜೋಜ್ಜೆಯ ಛೇದಿಸಿ ಭಜಕಗೆ ವರವಿತ್ತುಸೃಜ್ಯಾಸೃಜ್ಯರ ಪ್ರಾಜÕನ ಮರೆಯದೆವಂದಿಸು ನರಹರಿಯ 3ಸೃಷ್ಟ್ಯಾಧೀಶನದೃಷ್ಟನಾಗಿರುತಿಹಸೃಷ್ಟಾಸೃಷ್ಟ ಪ್ರವಿಷ್ಟಾಸೃಷ್ಟನುಶಿಷ್ಟರ ಇಷ್ಟ ಸುದೃಷ್ಟಿಯ ಬೀರುತಶಿಷ್ಟರ ಬಹು ವಿಧ ಕಷ್ಟಗಳಳಿದುಅಭೀಷ್ಟಗಳೀವನು ದುಷ್ಟರ ಶಿಕ್ಷಿಪಭ್ರಷ್ಟಜನರಿಗಿವ ಸ್ಪಷ್ಟನಾಗುವನಲ್ಲಶ್ರೇಷ್ಠೋತ್ತಮಪರಮೇಷ್ಠಿಜನಕನಿವಕಾಷ್ಟಾಗ್ನಿಯವೊಲ್ ಅದೃಷ್ಟಾದೃಷ್ಟನುದುಷ್ಟದೂರ ವಾಸಿಷ್ಠ ಶ್ರೀ ಕೃಷ್ಣನುತಿಷ್ಟನು ನಿನ್ನೊಳುತ್ಕøಷ್ಟನೆಂದರಿತುವಂದಿಸು ನರಹರಿಯ 4ಸರಿಪರರಿಲ್ಲದ ಸಿರಿಯರಸನಚಾರುಚರಣಾರಾಧನ ಪರಸುಖವೀವುದುಸಿರಿದೊರೆ ಸುಹೃದನು ಸಿರಿಸಹ ಮೆರೆಯುತಅರಿತ ಸುಜನರನು ಪೊರೆವನು ದಯದಿಮೊರೆಯನು ಲಾಲಿಸಿ ಪೊರೆದನು ಗರ್ಭವಮರೆತು ನಾರಾ ಎಂದ ನರಸುರಗೊಲಿದನುಪೊರೆದನು ದಯದಿ ನರಾಧಮ ಎನ್ನನುಕರಿವರ ದ್ರೌಪದಿವರದ ವಿಖ್ಯಾತನುಸರಸಿಜಭವತಾತ ಪ್ರಸನ್ನ ಶ್ರೀನಿವಾಸಪೊರೆವನು ನೆನೆವರ ಸಿರಿಭೂದೊರೆಯೆಂದುವಂದಿಸು ನರಹರಿಯ 5
--------------
ಪ್ರಸನ್ನ ಶ್ರೀನಿವಾಸದಾಸರು