ಒಟ್ಟು 19 ಕಡೆಗಳಲ್ಲಿ , 9 ದಾಸರು , 19 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪ ಪಿತನಿಂದ ನೊಂದು ರತಿಪಿತನ ಸ್ಮರಿಸುತ ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು ಬಲು ಮತಿವಂತನಾಗಿ ಮುದದೀ ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು ಅಚ್ಯುತನ ವರದಿಂದ ಬಂದು 1 ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ ಮುನಿ ಮೆಲ್ಲನೇ ನಡತಂದನು2 ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು ಇಂದು ನಿಮ್ಮಯಾ ದರುಶನಾ ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ ಬಂದ ವಿಚಾರ ಪೇಳೆಂದು ಬಿನ್ನೈಸಲು ನಂದದಲಿ ಹಾಹಾ ಎನುತಾ 3 ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು ವೈದಿಕ ಮಾರ್ಗವನ್ನೇ ಧರಿಸಿ ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ ಜಕನಾಗಿಪ್ಪೆನೆಂದು ತಲೆವಾಗಲು ಇಂದು ಪ್ರಕಟವಾಯಿತು ಧರೆಯೊಳು 4 ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ ಮೈಮರೆದು ದೇವಕಿ ನಂದನನ ನೆನೆದು ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ 5 ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ 6 ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ ಸುವರ್ಣ ಛಾಯದಂತೆ ಕಾಂತಿಲೀ ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ ಸ್ಥಾಯವಾದರು ಪೊಂಪದಿ7 ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ ಸಂತ ವಾದಿರಾಜಗೊಲಿದು ಪುರಂದರ ಮಂತ್ರ ಸಿದ್ಧಿಯನೆ ಕೊಟ್ಟು ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು ಚಿಂತಿತಾ ಫಲದಾಯಕ 8 ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ ಪದ್ಧತಿಯನು ಪೇಳಿ ತವಕದಿಂದಲಿ ತಾವು ಸದ್ವೈಷ್ಣವ ಲೋಕ ಸಿರಿಮರಳೈದಿದರು ಪಾದದ್ವಯವ ಭಜಿಸುವವರೂ ಕೇಳಿ 9
--------------
ವಿಜಯದಾಸ
ಶರ್ವೇಡ್ಯ ಮೋಹನ ವಿಠಲ ಪೊರೆ ಇವನ ಪ ಸರ್ವತ್ರ ಸರ್ವದಾ | ಸರ್ವ ಮಂಗಳನೇ ಅ.ಪ. ಸುಕೃತ | ರಾಶಿ ಫಲಿಸಿತೋ ಇವಗೆದಾಸ ದೀಕ್ಷೆಯಲಿ ಮನ | ಲೇಸುಗೈದಿಹನೋ |ವಾಸವಾದೀ ವಂದ್ಯ | ಭಾಸುರಾಂಗನೆ ದೇವದೋಷಾಗಳನಳಿದು ಸಂ | ತೋಷವನೆ ಪಡಿಸೋ1 ಹರಿದಾಸ ರೊಲಿದಿವಗೆ | ದರುಶನವನಿತ್ತಿಹರುಗುರು ರಘೋತ್ತಮರಂತೆ | ಬೃಂದಾವನಸ್ಥಾನರಹರಿಯು ಸ್ವಪ್ನದಲಿ | ಹರಿಹಯಾಸ್ಯವ ತೆರದಿದರುಶನಕೆ ಕಾರಣವು | ಪರಮ ಪ್ರಿಯರ್ದಯವೂ 2 ಅದ್ವೈತ ತ್ರಯಜ್ಞಾನ | ಸಿದ್ಧಿಸುತ ಸಂಸಾರಅಬ್ಧಿಯನೆ ಉತ್ತರಿಸೊ | ಮಧ್ವಾಂತರಾತ್ಮಾ 3 ಕಿಂಕಿಣಿಯ ಶೋಭಿತನೆ | ಶಂಕರೇಡ್ಯನೆ ನಿನ್ನಅಂಕಿತವ ನಿತ್ತಿಹೆನೊ | ಲೆಂಕತನದವಗೇವೆಂಕಟ ಕೃಷ್ಣ ಹೃತ್ | ಪಂಕಜದಿ ತವರೂಪಕಿಂಕರಗೆ ತೋರೆಂದು | ಶಂಕಿಸದೆ ಬೇಡ್ವೇ 4 ಸರ್ವಜ್ಞ ಸರ್ವೇಶ | ದುರ್ವಿಭಾವ್ಯನೆ ಹರಿಯೆದರ್ವಿಜೀವನ ಕಾವ | ಹವಣೆ ನಿನದಲ್ಲೇ |ಪರ್ವ ಪರ್ವದಿ ಇವಗೆ | ನಿರ್ವಿಘ್ನ ನೀಡಯ್ಯಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಸಿದ್ಧಬಸವ ಪ್ರಸಿದ್ಧನ ಮಹಿಮೆಯ ಕೇಳಿರಿ ನೀವಿನ್ನು |ವಿದ್ಯಾ ಬುದ್ಧಿ ಧನ ಧಾನ್ಯವನು ಸಿದ್ಧಿಸುವವಿನ್ನೂ ಪ ಶಿವನ ಅಪ್ಪಣೆ ತೆಗೆದುಕೊಂಡು ಶಿವಕಂಚಿಯೊಳಗೆ |ಪಾವನ ಚರಿತ ಬ್ರಾಹ್ಮಣನಲ್ಲಿ ಪುಟ್ಟಿದನು ಬೇಗ ||ದಿವಸ ದಿವಸಕೆ ಬೆಳೆದನು ಬಿದಗಿ ಚಂದ್ರಮನ ಹಾಗೆ |ಜಾವ ಜಾವಕೆ ಶಿವನ ಧ್ಯಾನವ ಮಾಡುವ ಮನದೊಳಗೆ1 ಮುಂಜಿ ಮಾಡಿಸಿಕೊಂಡನು ಸಿದ್ಧನು ಮದುವೆಯಾಗಲಿಲ್ಲ |ರಂಜಿಸುತಿಹನು ಸೂರ್ಯನಂತೆ ತೋರುವ ಜಗಕೆಲ್ಲ ||ಬಂಜೆ ಒಬ್ಬಳು ಇದ್ದಳು ಆಕೆಗೆ ಮಗನ ಕೊಟ್ಟನಲ್ಲ |ಸಂಜೆ ಹಗಲು ಕಾಣದ ಕುರುಡಗ ಕೊಟ್ಟನು ಕಣ್ಣುಗಳ 2 ತಂದೆ ತಾಯಿಗೆ ಹೇಳಿದನಾಗ ಪೋಗುವೆ ನಾನೆಂದು |ಕಂದ ನಮ್ಮನು ಬಿಟ್ಟು ಪೋಗುವದುಚಿತವೆ ನಿನಗೆಂದು ||ಅಂದ ತಾಯಿಗೆ ವಂದಿಸಿ ಹೇಳಿದ ಮಗನಾಗುವೆನೆಂದು |ಸಂದೇಹವು ಬೇಡೆಂದು ಪೇಳುತ ತೆರಳಿದ ದಯಾಸಿಂಧು 3 ಮಹಾಶಿವಾಲಯ ಕಂಡನು ಸಿದ್ಧನು ದೇಶ ತಿರುಗುತಲಿ |ಆ ಸೀಮೆಯಲಿ ಹಳ್ಳದ ನೀರು ನಿರ್ಮಲ ನೋಡುತಲಿ ||ಆಸನ ಹಾಕಿ ಕುಳಿತನು ಶಿವನ ಧ್ಯಾನವ ಮಾಡುತಲಿ |ಆ ಸಮಯದಿ ಬಂದನು ಕರಣಿಕ ಹೊಲಗಳ ನೋಡುತಲಿ 4 ಉದ್ದಂಡ ಸಂತತಿ ಆಗಲಿ ಇನ್ನು 5 ನಿನ್ನಯ ಪೂಜೆಯ ಮಾಡುವದ್ಹೇಗೆ ಹೇಳೋ ನಮಗೀಗ |ಮನ್ನಿಸಿ ಅವಗೆ ಪೇಳಿದ ಸಿದ್ಧ ಪುರುಷನು ತಾ ಬೇಗ ||ಸಣ್ಣ ಬಿಂದಿಗೆಯನಿಟ್ಟು ದ್ವಿಜರ ಪಾದೋದಕವೀಗ |ಸಂಖ್ಯೆಯಿಲ್ಲದ ಕೊಡಗಳ ಹಾಕಲು ತುಂಬದು ಎಂದೀಗೆ 6 ಅಂದಿಗೆ ಉಂಟು ಇಂದಿಗೆ ಇಲ್ಲ ಎನಲಾಗದು ನೀನು |ಸಂದೇಹವಿಲ್ಲ ಆಶ್ವೀನ ವದ್ಯ ದ್ವಿತೀಯದ ದಿನವು ||ಇಂದಿಗೆ ಕರಣಿಕ ವಂಶದವರು ಮಾಡುತಾರೆ ಇನ್ನೂ |ಮುಂದಕೆ ತೆರಳಿ ಕೊಳಕೂರಕೆ ಬಂದ ಸಿದ್ಧ ತಾನು 7 ಗಾಣಿಗರ ಮನೆಯೊಳಗಿದ್ದು ಗಾಣಾ ಹೂಡಿದನು |ಪ್ರಾಣ ತೊಲಗಿದ ಹೆಣ್ಣುಮಗಳಿಗೆ ಪ್ರಾಣವನಿತ್ತಾನು ||ಗೋಣಿಯೊಳಗೆ ಹೊಲಿದು ನದಿಯಲಿ ಪಾಚ್ಛಾ ಹಾಕಿದನು |ಕಾಣಿಸದಂತೆ ಬೇಗನೆ ಹೊರಗೆ ಹೊರಟು ಬಂದಾನು 8 ಹೆಸರು ನಿನ್ನದು ಏನು ಎಂದು ಪಾಚ್ಛಾ ಕೇಳಿದನು |ಹೆಸರು ನನಗೆ ಬಸವನೆಂದು ಕರೆತಾರೆ ಇನ್ನು ||ಪಶು ನೀನಾದರೆ ಸೊಪ್ಪಿಯ ಬೇಗ ತಿನಬಾ ಎಂದನು |ನಸು ನಗುತಲಿ ಸೊಪ್ಪಿಯ ತಿಂದು ಡುರಕಿ ಹೊಡೆದಾನು 9 ಗೊಂಬಿಗೆ ವಸ್ತಾ ಸೀರೆಯನುಡಿಸಿ ಸಿಂಗಾರ ಮಾಡಿದನು |ರಂಭೆಗೆ ಸರಿ ಈ ಹೆಣ್ಣು ಮಗಳಿಗೆ ಮದುವ್ಯಾಗೋ ನೀನು ||ಅಂಬುಜ ಮುಖಿ ಬಾರೆಂದು ಕರೆದನು ಸಿದ್ಧ ಮುನೀಶ್ವರನು |ತುಂಬಿದ ಬಸುರೊಳು ಮಗನ ಪಡೆದಳು ವಂಶಾದೆ ಇನ್ನು 10|| ನೇಮವ ಮಾಡಿ ಕೊಳಕೂರದಿ ಇರುವೆನು ನಾನೆನುತ |ಈ ಮಹಿಮೆಯೊಳಗೆ ಭೀಮಾ ದಕ್ಷಿಣವಾಹಿನಿ ಮಹಾಕ್ಷೇತ್ರ ||ಗ್ರಾಮಸ್ಥರನು ಕರೆದು ಹೇಳಿದನು ಅಡಗುವೆ ನಾನೆನುತ |ನೀವು ಮಾತ್ರ ನಾವಿದ್ದ ಸ್ಥಳವನು ನೋಡಬೇಡೆನುತ 11 ಕಲಿಕಾಲವನು ಕಂಡು ಸಿದ್ಧನು ಅದೃಶ್ಯನಾದನು |ತಿಳಿದು ಭಕ್ತಿ ಮಾಡಿದವರಿಗೆ ವರಗಳ ಕೊಡುತಿಹನು ||ಸುಳಿವನು ಕಣ್ಣಿಗೆ ಸತ್ಪುರುಷರಿಗೆ ಸಿದ್ಧ ಬಸವ ತಾನು |ಹಲವು ಹಂಬಲ ಮಾಡಲು ಬೇಡರಿ ಇರುವೆ ನಾನಿನ್ನೂ 12 ಹನ್ನೆರಡು ನುಡಿ ಸಿದ್ಧನ ಸ್ತೋತ್ರವ ಕೇಳಿದವರಿಗೆ |ಮುನ್ನ ಮಾಡಿದ ಪಾಪವು ನಾಶಾಗಿ ಹೋಗುವದು ಬೇಗ ||ಧನ್ಯನಾಗುವ ಕೀರ್ತಿ ಪಡೆಯುವ ಲೋಕದ ಒಳಗ |ಚನ್ನಾಗಿ ಶ್ರೀಪತಿ ಗುರುವಿಠ್ಠಲನು ಒಲಿವನು ತಾ ಬೇಗ 13
--------------
ವಿಶ್ವಪತಿ
ನಿನ್ನ ಸೇರಿದೆ ಮಹಾಲಿಂಗ ಎನ-ಗಿನ್ಯಾರುಗತಿಕಾಣೆ ಕರುಣಾಂತರಂಗ ಪಾರ್ವತಿ ಮೋಹನಾಂಗಪ.ನಿನ್ನಂತೆ ಕೊಡುವ ಉದಾರ ತ್ರಿಭು-ವನ್ನದೊಳಿಲ್ಲದಕ್ಯಾವ ವಿಚಾರಮುನ್ನ ಮಾರ್ಕಾಂಡೇಯ ಮುನಿಯ ಭಯವನ್ನು ಪರಿಹರಿಸಿದೆಯೊ ಸದುಪಾಯ ನಮೋ ಶಿವರಾಯ 1ಸರ್ವಾಪರಾಧವ ಕ್ಷಮಿಸು ಮಹಾ-ಗರ್ವಿತರಾಶ್ರಯಕ್ಕೊಲ್ಲದು ಮನಸುಶರ್ವರೀಶಭೂಷ ನಿನ್ನ ಹೊರ-ತೋರ್ವರಿಲ್ಲ ರಣಮಲ್ಲ ಮುಕ್ಕಣ್ಣ ಕಾಯೊ ಸುಪ್ರಸನ್ನ 2ಅಂತರಂಗದ ದಯದಿಂದ ಯುದ್ಧ-ಮಂ ತೊಡಗಿದೆ ಪಾರ್ಥನೊಳತಿಚಂದಪಂಥದ ನೆಲೆಯನ್ನು ತಿಳಿದು ಸರ್ವ-ಮಂತ್ರಾಸ್ತ್ರಗಳನಿತ್ತೆಯೊ ಭಕ್ತಗೊಲಿದುದೊಡ್ಡದು ನಿನ್ನ ಬಿರುದು 3ಸಿದ್ಧಿಸು ಸರ್ವಸಂಕಲ್ಪ ಅಡ್ಡ-ಬಿದ್ದು ಬೇಡುವೆ ನಿನಗ್ಯಾವದನಲ್ಪಬುದ್ಧಿಯ ನಿರ್ಮಲಮಾಡು ನಿನ್ನಹೊದ್ದಿದವರಿಗಿಲ್ಲೆಂದಿಗು ಕೇಡು ದುಷ್ಟರದ್ಯಾವ ಪಾಡು 4ಅಂಜಿಕೆ ಬಿಡಿಸಯ್ಯ ಹರನೆ ಪಾ-ವಂಜಾಖ್ಯವರಸುಕ್ಷೇತ್ರಮಂದಿರನೆಸಂಜೀವನ ತ್ರಿಯಂಬಕನೆ ನವ-ಕಂಜಾಕ್ಷ ಲಕ್ಷುಮಿನಾರಾಯಣಸಖನೆಸಲಹೊ ಪಂಚಮುಖನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ