ಒಟ್ಟು 23 ಕಡೆಗಳಲ್ಲಿ , 15 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುತ್ತು ಬಂತಿದೆ ದಿವ್ಯ ಮುತ್ತು ಕೊಳ್ಳಿರೋ ಪ ಮುತ್ತು ಬಂದಿಹುದೀಗ ನೀವೇತ್ತಿಕೊಳ್ಳಿರೆಲ್ಲ ಬಂದು ಉತ್ತಮ ವ್ಯಾಘ್ರಾದ್ರಿ ಪುರುಷೋತ್ತಮನೆಂಬುವ ದಿವ್ಯ 1 ಲೆಕ್ಕವಿಲ್ಲದ ಹಣವಿತ್ತರು ಸಿಕ್ಕದ ದುರ್ಲಭ ಮುತ್ತು ರೊಕ್ಕವಿಲ್ಲದೆ ಭಕ್ತರಿಗೆ ಪುಕ್ಕಟೆಯಲಿ ಸಿಕ್ಕುವಂಥ 2 ಧನವಂತರಿಗೆ ದೊರಕುವದಲ್ಲ ಜನರ ಕೈಗೆ ಸಿಕ್ಕುವದ್ಲ ಮನದಲ್ಲಿ ಧ್ಯಾನಮಳ್ಪ ಮುನಿಗಳ ಸ್ವಾಧೀನವಾದ 3 ಕ್ಷೀರಪಾರಾವಾರದಲ್ಲಿ ತೋರಿ ಮೆರೆವ ಮುತ್ತು ಶ್ರೀರಮಾ ಮನೋಹರನುದಾರ ವರದ ವಿಠಲನೆಂಬ 4
--------------
ವೆಂಕಟವರದಾರ್ಯರು
ಮುತ್ತು ಬಂದಿದೆ-ದಿವ್ಯ ಮತ್ತು ಕೊಳ್ಳಿರೋ ಪ ಮುತ್ತು ಬಂದಿಹುದೀಗನೀವೆತ್ತಿರೊಳ್ಳಿರೆಲ್ಲಬಂದು ಉತ್ತಮವ್ಯಾಘ್ರಾದ್ರಿಪುರುಷೋತ್ತಮನೆಂಬುವ ದಿವ್ಯ 1 ಲೆಕ್ಕವಿಲ್ಲದ ಹಣವಿತ್ತರು ಸಿಕ್ಕದದುರ್ಲಭ ಮುತ್ತು ರೊಕ್ಕವಿಲ್ಲದೆ ಭಕ್ತರಿಗೆ ಪುಕ್ಕಟೆಯಲಿ ಸಿಕ್ಕುವಂಥ 2 ಧನವಂತಗೆ ದೊರಕುವುದಲ್ಲ ಜನರ ಕೈಗೆ ಸಿಕ್ಕುವದಲ್ಲ ಮನದಲ್ಲಿ ಧ್ಯಾನಮಾಳ್ವಮುನಿಗಳ ಸ್ವಾಧೀನವಾದ 3 ಕ್ಷೀರಪಾರಾವಾರದಲ್ಲಿ-ತೋರಿ ಮೆರೆವ ಮುತ್ತು ಶ್ರೀರಮಾಮನೋಹರನುದಾರ ವರದ ವಿಠಲನೆಂಬ 4
--------------
ಸರಗೂರು ವೆಂಕಟವರದಾರ್ಯರು
ಶ್ರೀ ವಿದ್ಯಾಧೀಶರು ದಯಮಾಡೋ ಗುರುವೇ ವಿದ್ಯಾಧೀಶ ಪ ಅವಿದ್ಯಾ ನಿನ್ನ ಹೊರತು ನನಗನ್ಯ ಗತಿಯಿಲ್ಲ ಧನ್ಯನಿನ್ನಯ ಕುಲ ಮುನ್ನ ಉದ್ಧರಿಸಯ್ಯಾ 1 ತಾಪ ನಿನಗೆ ಇಲ್ಲಾಪೋತಗೆಲ್ಲರು ಬೋಧಾ ಯೋತಿ ಸಿಕ್ಕುವುದುಂಟೆ 2 ಹಾಕಿದ ಬೀಜವಾ ಬೀಕಲ ಮಾಡೋರೆತೋಕನಲ್ಲೆ ಕೃಪ ಯಾಕೆ ಮಾಡವಲ್ಲಿ3 ಅನವದ್ಯ ಕುಲದಿ ಪುಟ್ಟಿವಿದ್ಯಾರಹಿತನಾಗಿ ಹದ್ದಿನಂದದಿ ನಾನು4 ನಿಂದಿಸುವರೊ ನಿನ್ನ ವಂದಿತ ಕುಲವನ್ನುಮುಂದೆ ಮಾರ್ಗವ ಪೇಳಿಂದಿರೇಶನ ಪ್ರೀಯಾ 5
--------------
ಇಂದಿರೇಶರು
ಸಿರಿ ಚರಣದಲ- ಪಾರ ಭಕುತಿಯನೀಯೋ ತವ ಸೇವಕನೆನಿಸಿ ಕೀರುತಿಯನು ಪಡೆಯೋ ಭವಕ್ಲೇಶ ಕಳೆಯೊ ಪ ಸೂರಿ ಸುಬ್ಬಣಾಚಾರ್ಯಕರಸ- ರೋರು ಹಗಲಲಿ ಪೂಜೆಗೊಳುತಲಿ ಚಾರುತರ ಶ್ರೀ ಜಯಮಂಗಳಿಯ ತೀರದೊಳಿರುವ ವೀರ ಮಾರುತಿ ಅ.ಪ. ಪ್ರತಿ ವರುಷ ಮಾಘಸಿತ | ನವಮಿ ದಿನದೊಳು ನೀ- ನತಿವಿಭವದೊಳು ನಗುತ | ಭಕುತರಿಷ್ಟವ ಸಲಿಸೆ ರಥದೊಳಗೆ ಕುಳ್ಳಿರುತ | ವಿಧ ವಿಧ ವಾದ್ಯಗಳ ತತಿಯನಾಲೈಸುತ | ಅತಿ ಮೋದಬಡುತ ಪರಿ ಸಂ- ಸ್ತುತಿಸೆ ಹಿಗ್ಗುತಲವರ ಸ್ವಮನೋ- ರಥಗಳ ನೀ ಸಲಿಸುವೆನೆನುತಲಿ ಅತುಳ ವಿಕ್ರಮದಭಯ ಹಸ್ತದಿ ಕೃತಿರಮಣ ಸಿರಿವರ ಹರಿಯನನು ಮತವ ಪಡೆಯುತ ರಥವ ನಡೆಸಿ ಚತುರ ದಿಕ್ಕಲಿ ಬಿಜಯ ಮಾಡುತ ಸತತ ಹರುಷವಗರೆವ ದೇವ 1 ರಕ್ಕಸಕುಲ ತಮ ಭಾನು | ತಾಮಸರ ಧ್ಯಾನಕೆ ಸಿಕ್ಕುವನಲ್ಲ ನೀನು | ಸುಜನರ ಹೃದಯದೊಳು ಅರ್ಕನೊಲು ಪೊಳೆವನು | ಹರಿಸಿರಿಗಾಳುಳಿದು ಬಕ್ಕ ದಿವಿಜರಿಗಿನ್ನು | ಗುರುಬಲ್ಲೆ ನಾನು ಚಿಕ್ಕ ರೂಪವಗೊಂಡು ಲಂಕೆಯ ಪೊಕ್ಕು ರಾಮನ ಸತಿಯ ಕಂಡು ತುಕ್ಕಿ ವನವನು ಸೂರೆ ಮಾಡಿ ಉಕ್ಕಿನ ಧ್ವಜಸ್ತಂಭದಿಂದ ಸೊಕ್ಕಿ ಬಂದ ದನುಜವ್ರಾತವ ಕುಕ್ಕಿ ಕೆಡಹಿ ಪುರವನುರಹಿ ಅಕ್ಕರದ ಮಣಿಸಹಿತ ಬಂದು ಪಕ್ಕಿದೇರನಿಗೆರಗಿ ನಿಂದೆ 2 ತುತಿಸ ಬಲ್ಲೆನೆ ನಾನು | ನಿನ್ನಯ ಸುಗುಣಗಳ ತತಿಗಳೆಲ್ಲವನು | ತ್ರಿಪುರ ಸುಂದರಿ ಪಾ- ರ್ವತಿ ಪತಿಯ ಪಡೆದವನು | ರಂಗೇಶವಿಠಲಗೆ ಅತಿಪ್ರೀತಿಸುತ ನೀನು | ನಿಷ್ಕಾಮಯುತನು ಪತಿತರನುದ್ಧರಿಸಲು ನೀ ಸಿರಿ ಪತಿಯ ಮತದೊಳು ಹನುಮ ಭೀಮ ಯತಿಯ ರೂಪವ ತಾಳಿ ಹರುಷದಿ ಕ್ಷಿತಿಯ ಭಾರವ ಹರಸಿ ಸಲಹಿದೆ ಅತುಳ ಮಹಿಮ ನಿನ್ನಪರಿಮಿತ ಶ ಕುತಿಗೆ ನಮೊ ನಮೊ ವಾಯುತನಯನೆ ಸತತ ಮುದದೊಳು ನಿನ್ನ ಸ್ಮರಿಸುವ ಮತಿಯ ಪಾಲಿಸು ಪತಿತ ಪಾವನ 3
--------------
ರಂಗೇಶವಿಠಲದಾಸರು
ಬಾಲನ ಮೇಲೆ ನಿನ್ನ ಮೋಹವಮ್ಮ ನಾವುಹೇಳಿದ ಮಾತು ನೀ ಕೇಳೆಯಮ್ಮ ಪ.ಚಿಣ್ಣಗಿಣ್ಣನೆಂಬುವÀ ಬಣ್ಣ ಬ್ಯಾಡೆ ನಮ್ಮಬೆಣ್ಣೆ ಕದ್ದು ಮೆದ್ದ ಕಟವಾಯಿ ನೋಡೆಸಣ್ಣಗಿಣ್ಣವನಿವನಾದರೆ ಪರರ ಚೆಲುವಹೆಣ್ಣಿನೊಳಗಾಡುವನೆ ಕುವರ 1ಪುಟ್ಟಗಿಟ್ಟನೆಂಬುವ ಮಾತು ಬೇಡೆ ನಮ್ಮರಟ್ಟು ಮಾಡುವ ಜನರೊಳು ನೋಡೆಸಿಟ್ಟುಗಿಟ್ಟಿಗೆ ಕೃಷ್ಣ ಅಳುಕನಮ್ಮ ನಮ್ಮಬಟ್ಟ ಕುಚವಿಡಿವ ದಿಟ್ಟನಮ್ಮ 2ಚಿಕ್ಕಗಿಕ್ಕವನೆಂಬುದುರೂಢಿಕಾಣೆ ನಮ್ಮಪಕ್ಕವ ಬಿಡನು ಬಾಲಕಾರ್ಯವೇನೆಅಕ್ಕೊ ಇಕ್ಕೊ ಎಂಬುವನ್ನಕ್ಕ ಕಳ್ಳ ನಮ್ಮಠÀಕ್ಕಿಸೆದ್ದೋಡುವ ಸಿಕ್ಕುವನಲ್ಲ 3ಕಕ್ಕುಲಾತಿತೋರೆ ನಮ್ಮ ಮನೆಗಳ ಪೊಕ್ಕು ಸಣ್ಣಮಕ್ಕಳಾಟವಾಡದೆಮ್ಮ ನೋಡಿ ನಕ್ಕುತಕ್ಕೈಸಿ ಓಡುವ ಮಹಾಮಾಯಗಾರನಮ್ಮದಕ್ಕಲೀಸ ಪತಿವ್ರತಧರ್ಮಜಾರಕೃಷ್ಣ4ಕೂಸುಗೀಸು ಇನ್ನೆನ್ನಬಾರದವಗೆಭವಘಾಸಿಯ ತಪ್ಪಿಸುವ ಎಂದಿಗೆಮಗೆಬೇಸರ ಗೀಸರದೆ ನೆನೆವರ ಒಡೆಯಲಕ್ಷ್ಮೀಶ ಪ್ರಸನ್ವೆಂಕಟ ರಂಗಯ್ಯ 5
--------------
ಪ್ರಸನ್ನವೆಂಕಟದಾಸರು
ಸಿಕ್ಕಿದನೆಹರಿಅಕ್ಕಕ್ಕ ಸುಖದಕ್ಕಿಸಿ ಕೊಳಬನ್ನ್ಯಕ್ಕಕ್ಕಚಿಕ್ಕವನಿವನಲ್ಲಮ್ಮಮ್ಮ ಬಿಡೆಪುಕ್ಕಟೆ ಜಾರುವನಮ್ಮಮ್ಮ ಪ.ಚಲ್ಲಿದ ಹಾಲ್ಮೈಯೆಲ್ಲಾಗಿದೆ ಹೊನ್ಚಲ್ಲಣ ತೊಯಿದಿದೆ ನೋಡವ್ವೆಅಳ್ಳೆದೆಗಾರನು ಅಳುಕುವನೆ ಹಗಲ್ಗಳ್ಳನ ಮಾಟವ ನೋಡವ್ವೆ 1ಮುಂಗುರುಳಿಗೆ ಮೆತ್ತಿದೆ ಕೆನೆಮೊಸರುಕಂಗಳುತುಪ್ಪಾಗಿದೆ ತಂಗಿ ರತ್ನದುಂಗುರ ಬೆರಳು ಮುಂಗೈಯ ಮತ್ತಂಗೈ ಬೆಣ್ಣ್ಯಾಗಿದೆ ತಂಗಿ 2ಪಡಗೊಡಿದು ಬಿಸಳಿಗೆ ನುಗ್ಗಲ್ಲೆಅಡಗ್ಯಡಗ್ಯಾಡುವನಿವನಂತೆಬಡಗಣ ಮೂಡಣ ಪಡು ತೆಂಕಣದಿತುಡುಗನ ಹುಯ್ಯಲು ಘನವಂತೆ 3ಗೋಡೆಯನೇರುವ ಧುಮುಕುವ ತಾ ಸಿಡಿದೋಡುವನಂಜದೆ ಅಲ್ಲಲ್ಲೆನೋಡಲು ಬಾಲಕ ಬಾಲೆಯರ ಪಿಡಿದಾಡ್ಯಾಲಂಗಿಪನಲ್ಲಲ್ಲೆ 4ಈಗಲೆ ಕಟ್ಟುವ ಬಿಟ್ಟರೆ ಇನ್ನಾವಾಗಲಿ ಸಿಕ್ಕುವನೆ ಬಾಲೆಹ್ಯಾಗಾದರೆ ಪ್ರಸನ್ವೆಂಕಟಗಿರಿಭೋಗಿಯ ಹೊಂದುವ ಬಾಲೆ 5
--------------
ಪ್ರಸನ್ನವೆಂಕಟದಾಸರು