ಒಟ್ಟು 29 ಕಡೆಗಳಲ್ಲಿ , 10 ದಾಸರು , 22 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಸಾಯಿ ಸ್ತುತಿಗಳು ಪಾತಕ ಪರಿಹರ ನಿತ್ಯನಿರ್ಮಲ ನಾಮ ಭಾವುಕಪ್ರೇಮ ಪ ನುತ್ಯು ದಯಾಕರ ಶಂಕರ ಸುಖಂಕರ ಭೃತ್ಯ ಮನೋರಮ ನಿರ್ಜಿತಕಾಮ ಅ.ಪ ಶಾಂತಸ್ವಭಾವ ಪರಮಪ್ರಭಾವ ದಾಂತ ಕೃಪಾಕರ ಭವಪರಿಹಾರ ಮಂತ್ರಸುಧಾರ್ಣವ ಶೀತಳಭಾವ ಭ್ರಾಂತಿವಿದೂರ ಪುಣ್ಯಶರೀರ 1 ಅಗಣಿತ ಗುಣಗಣ ಸತ್ವ ನಿರೂಪಣ ಜಗದಾನಂದದಾ ವೂದಿ ಪ್ರಸಾದ ನಿಗಮಾಗಮಗಣ ವಿನಮಿತ ಚರಣ ನಗಜಾನಂದದ ಮಾಂಗಿರಿವರದ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಪ್ರಶಾಂತ ನಿಲಯ ನಿನ್ನ ಸುಪ್ರಕಾಶ ಬೆಳಗಲಿ ಪ ಅಪ್ರಮೇಯ ನಮಗೆ ನಿನ್ನ ಸುಪ್ರಸನ್ನತೆ ದೊರೆಯಲಿ ಅ.ಪ ನಿನ್ನ ಮಹಿಮೆ ಲೋಕವಿದಿತ ನಿನ್ನ ಚರಿತೆ ಪುಣ್ಯಭರಿತ ನಿನ್ನ ಭಜನೆ ಪಾಪರಹಿತ ನಿನ್ನದರ್ಶನ ಮೋಕ್ಷಕಲಿತ1 ಇಂದು ಪರ್ತಿಯಲಿ ಜನಿಸಿ ಚಂದ್ರಮೌಳಿ ಎನಿಸಿದೆ 2 ಸತ್ಯಸಾಯಿಬಾಬ ನಿನ್ನ ತತ್ವಬೋಧ ನಿರುಪಮ ಧಾಮ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀಹರಿಸ್ತುತಿಗಳು ಕಂಡು ನಾ ಧನ್ಯನಾದೆನೋ ಶ್ರೀ ಪುರುಷೋತ್ತಮ ಪುಂಡರೀಕಾಕ್ಷ ವಿಷ್ಣುಪಾದವ ಪ ಮಗಧನಾ ದೇಶದಲ್ಲಿ ಚಂಪಕಾರಣ್ಯದಲ್ಲಿ ಮಧುವನದ ಮಧ್ಯದಿನಿಂದ ಮದನನಯ್ಯನ ಪಾದವ 1 ಶ್ರೇಷ್ಠ ಗಯಾಸುರನ ಶಿರವ ಮೆಟ್ಟಿ ಅವನ ದರ್ಪವ ನಷ್ಟವನ್ನು ಮಾಡಿದ ಸೃಷ್ಟಿಗೀಶ್ವರನ ಪಾದವ 2 ಮಂಡೆಯನ್ನು ತುಳಿದ ಭೂಮಂಡಲಾಧಿಪನ ಪಾದವ 3 ಪಿಂಡವಿಟ್ಟವರ ಪಿತೃಗಳಿಗೆ ಆನಂದಲೋಕವೀವ ಪಾದವ 4 ಹರಿಗೆ ಅಭಿಷೇಕ ಮಾಡಿ ಭರದಿ ಭಜನೆ ಮಾಳ್ಪ ಪಾದವ 5 ಸಾಸಿರನಾಮದಿಂದ ಉಲ್ಲಾಸದಿ ಪೂಜಿಸಿ ಜನರು ಲೇಸಾಯಿತೆಂದು ಪೋಪ ಈಶನ ಪಾದವ 6 ಸಂಧ್ಯಕಾಲದಲ್ಲಿ ಹರಿಗೆ ಗಂಧಮಾಲೆಯನ್ನು ಧರಿಸೀ ಸು ಗಂಧವಾದ ತುಳಸಿ ಸುತ್ತಲು ಗೋವಿಂದನ ಶ್ರೀಪಾದವ 7 ಪಾದ ಪಾದ ಪಾದ ಪಾದ 8 ಪಾದ [ಸಜ್ಜನರಿಗೆ ] ಮುಕ್ತಿಯನ್ನು ಕೊಡುವ ಪಾದವ 9
--------------
ಯದುಗಿರಿಯಮ್ಮ
ಶ್ವಾಸೋಚ್ಛ್ವಾಸನೆಂಬುದು ಪುಟಮಾಡಿ ಧ್ರುವ ಕರ್ಮಕಾಷ್ಟದಗ್ನಿ ಪುಟಗೂಡಿ ಕಾಮಕ್ರೋಧವೆಂಬ ಧೂಮ್ರ ಹೋಗಾಡಿ 1 ಆಹುತಿ ಪೂರ್ಣನೀಡಿ ತೊಳೆದು ಶುದ್ಧಮಾಡಿ 2 ವಿಶ್ವದೊಳಿದೆ ನಿಜ ನಿತ್ಯಮಾಡಿ ಲೇಸುಲೇಸಾಯಿತು ಪುಣ್ಯಗೂಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧಿಸಿ ನೋಡಿ ಸುಖ ಭೇದಿಸ್ಯನುದಿನ ಬೋಧ ನಿಜವಾದ ಸದೋದಿತ ಗುರು ಙÁ್ಞನ ಧ್ರುವ ಭಾವನೆ ನೆಲೆಗೊಂಡು ನಿಮ್ಮ ಭಕ್ತಿ ನಿಜ ಮಾಡಿ ದೈವ ಪ್ರಗಟಾಗಿ ಒಲಿವದು ನಿಜನೋಡಿ 1 ಅಸ್ತ ಉದಯವಿಲ್ಲದೆ ಸಾಭ್ಯಸ್ತ ನಿಜಗೂಡಿ 2 ಲೇಸು ಲೇಸಾಯಿತು ನೋಡಿ ಭಾಸುತೀಹ್ಯಸುಖ ದಾಸ ಮಹಿಪತಿಗಿದೆ ನೋಡಿ ಗುರು ಮುಖ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೆಟ್ಟಿತು ಕೆಲಸವೆಲ್ಲ - ಲೋಕದಿ ಕಾಮನಟ್ಟುಳಿದಶನವಾಯಿತು ಪ.ಬಟ್ಟೆ ತಪ್ಪಿ ಮುಂದೆ ಕೆಟ್ಟು ಕರ್ಮಿಯಾಗಿಬಿಟ್ಟು ಮುಂದಣ ಪಥವ - ಹೇ ದೇವಾ ಅಪಸತ್ಯ ಕಾಮ ಕರ್ಮವು ಧರ್ಮದ ಬಲಮತ್ತೆ ಅಡಗಿಹೋಯಿತುಎತ್ತ ನೋಡಲು ನೀಚವೃತ್ತಿಯೆತುಂಬಿಅತ್ಯಂತ ಪ್ರಬಲವಾಯ್ತೋ ಹೇ ದೇವಾ 1ಹೊತ್ತುಹೊತ್ತಿಗೆ ಹಲವು ಲಂಪಟತನದಲಿಚಿತ್ತ ಚಂಚಲವಾಯಿತುಸತ್ತು ಹುಟ್ಟುವ ಸುಳಿಯಲ್ಲದೆ ಮತ್ತೊಂದುಗೊತ್ತು ಇಲ್ಲದೆ ಹೋಯಿತ್ತೋ ಹೆ ದೇವಾ 2ಪೇಳುವುದೇನಿನ್ನು ದುರ್ಜನರ ಸಂಗದೋಲಾಟ ಸೊಗಸಾಯಿತುಕೀಳು ಮೇಲು ಮೇಲು ಕೀಳಾಗಿ ನಡೆಯುವಕಾಲವೆಗ್ಗಳವಾಯಿತೋ ಹೇ ದೇವಾ3ಆಳುವ ಅರಸರಿಗೆಲ್ಲ ಕಾಂತನದಾಸೆಮೇಲು ಮೇಲಾಯಿತಯ್ಯನೀಲ ಮೇಘಶ್ಯಾಮ ನಿನ್ನಾಳೆಂಬರಿಗೆಕೂಳು ಹುಟ್ಟದೆ ಹೋಯಿತೋ ಹೇ ದೇವಾ 4ಅರಿಷಡ್ವರ್ಗದಲಿ ಸಿಲುಕಿ ಸುಜ್ಞಾನದಅರಿವು ಇಲ್ಲದೆ ಹೋಯಿತುಕರಣಾಳು ಶ್ರೀ ಪುರಂದರವಿಠಲನೆ ನಿನ್ನಸ್ಮರಣೆಯಿಲ್ಲದೆ ಹೋಯಿತೋ ಹೇ ದೇವಾ 5
--------------
ಪುರಂದರದಾಸರು
ಪ್ರಥಮ ಕೀರ್ತನೆಸತ್ಯ ಬೋಧಾರ್ಯರ ವೃತತಿಜಾಂಘ್ರಿಗಳಲ್ಲಿಸತತ ಶರಣಾದೆ ನಾಹಿತದಿ ಪಾಲಿಪರುಪ್ರತತ ಭೂಮಾದಿ ಗುಣಸಿಂಧು ಪುರುಷೋತ್ತಮನವಿತತ ಮನದಲಿ ಧ್ಯಾನಿಸಿ ಒಲಿಸಿಕೊಂಡ ಪಹಂಸನಾಮಕ ವಿಷ್ಣು ವನರುಹಾಸನಸನಕದೂರ್ವಾಸಮೊದಲಾದಗುರುವಂಶಜಾತದಶಪ್ರಮತಿಸರಸಿಜನಾಭನರಹರಿತೀರ್ಥಬಿಸಜಚರಣಂಗಳಲಿ ಸತತ ನಾ ಶರಣು |1ಮಾಧವಅಕ್ಷೋಭ್ಯ ಜಯವಿದ್ಯಾಧಿರಾಜ ರಾ-ಜೇಂದ್ರ ಕವೀಂದ್ರವಾಗೀಶರಾಮಚಂದ್ರವಿಭುದೇಂದ್ರ ವಿದ್ಯಾನಿಧಿಗಳು ಈ ಸರ್ವಸತಪೋನಿಧಿ ಯತಿವರ್ಯರಿಗೆ ನಮಿಪೆ 2ವೇದಾಂತ ಕೋವಿದರು ರಘುನಾಥ ರಘುವರ್ಯಪದವಾಕ್ಯತತ್ವಜÕ ರಘೂತ್ತಮಾರ್ಯರಿಗೆವೇದವ್ಯಾಸ ಯತಿಗಳಿಗೆ ವಿದ್ಯಾಧೀಶರಿಗೆವೇದನಿಧಿಗಳಿಗೆ ನಾ ಬಾಗುವೆ ಶಿರವ 3ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆಸತ್ಯಭಿನವ ಸತ್ಯ ಪೂರ್ಣರಿಗೆ ನಮಿಪೆಸತ್ಯವಿಜಯರಿಗೆ ಸತ್ಯಪ್ರಿಯ ಸತ್ಯಬೋಧರಿಗೆಭೃತ್ಯನಾ ಎನ್ನ ವಂದನೆಗಳರ್ಪಿಸುವೆ4ಸತ್ಯಬೋಧರ ಮಹಿಮೆ ಬಹು ಬಹು ಬಹುಳವುವೇದ್ಯ ಎನಗೆ ಅತಿ ಸ್ವಲ್ಪ ಮಾತ್ರಆದರಲ್ಲೂ ಬಿಟ್ಟದ್ದು ಬಹು ಇಲ್ಲಿ ಪೇಳಿಹುದುಅತಿ ಕಿಂಚಿತ್ ಅಣುಮಾತ್ರ ಸುಜನರು ಲಾಲಿಪುದು 5ರಾಮಾಚಾರ್ಯರು ಸಣ್ಣ ವಯಸ್ಸಿನವರುನೇಮದಿಂದಾಶ್ರಮೋಚಿತ ಕರ್ಮಪರರುರಾಮ ಹಯಶೀರ್ಷ ನರಸಿಂಹನ ಗುಣರೂಪಸಮ್ಮುದದಿ ಜ್ಞಾನಭಕ್ತಿಯಲಿ ಧ್ಯಾನಿಪರು 6ಈ ರಾಯಚೂರು ರಾಮಾಚಾರ್ಯರೇ ಸತ್ಯಪ್ರಿಯಗುರುಗಳ ಸಂಸ್ಥಾನ ಪೀಠಕ್ಕೆ ಬಂದುಸೂರಿವರ್ಯರು ಸತ್ಯಬೋಧ ತೀರ್ಥರು ಎಂದುಧರೆಯಲ್ಲಿ ಪ್ರಖ್ಯಾತರಾಗಿಹರು ಕರುಣಿ 7ಬಾದರಾಯಣಮಾಧ್ವ ಸಚ್ಛಾಸ್ತ್ರ ಬೋಧಿಸಿಅಧಿಕಾರಿಗಳ ಉದ್ಧರಿಸಿ ಅಲ್ಲಲ್ಲಿವೇದ ವಿರುದ್ದ ದುರ್ವಾದಗಳ ಕತ್ತರಿಸಿಮೇದಿನಿಸಜ್ಜನರ ಪೊರೆದಂಥ ಧೀರ 8ಪೀಠ ಆರೋಹಿಸಿದ ಪೂರ್ವಗುರುಗಳ ಪೋಲುಮಠಕ್ಕೆ ಮಾನ್ಯಗಳ ಅಭರಣಗಳನ್ನಪಟ್ಟಣ ಪ್ರಮುಖರು ಧನಿಕರು ಭೂಪಾಲರುಕೊಟ್ಟದ್ದು ಅಲ್ಲಲ್ಲಿ ಸ್ವೀಕರಿಸಿದರು 9ಸತ್ಯಪ್ರಿಯರಾರಾಧನೆಗಾಗಿ ಬಂದಿದ್ದಸತ್ಯಬೋಧರ ಮಹಿಮೆಯನ್ನು ಲೆಕ್ಕಿಸದೆಬಂಧಿಸಿದ ಶ್ರೀಮಠವ ರಾಮೇಶ್ವರ ರಾಜಬಂತು ಸೈನ್ಯವು ತಿರುಚಿನಾಪಳ್ಳಿಯಿಂದ 10ತಿರುಚಿನಾಪಳ್ಳಿಯಿಂದ ಜಾನೋಜಿರಾವ್ ನಿಂಬಳ್ಕಾರನು ಸೈನ್ಯವನು ಕಳುಹಿಸಿದನುವಿರೋಧ ಬಿಡುಗಡೆ ಮಾಡಿ ಆ ರಾಜನ್ನ ಶಿಕ್ಷಿಸಿಗುರುಗಳ ಕರೆತಂದ ತಿರುಚಿನಾಪಳ್ಳಿಗೆ 11ತಿರುಚಿನಾಪಳ್ಳಿಯ ಮ್ಲೇಛ್ಬರಾಜನು ಈಗುರುಗಳ ಪ್ರಭಾವವ ಅರಿಯದೆ ಮೌಢ್ಯದಲಿವರಧನಾಪಹಾರಿಯು ಎಂದು ಆಪಾದಿಸಿನಿರೋಧಿಸಿದ ಶೋಧನೆ ಮಾಡುವ ನೆವದಿ 12ಪರಿಶೋಧನೆಯಲ್ಲಿ ಮೈಲಿಗೆ ಆಗದಿರೆಗುರುಗಳು ರಾಮದೇವರ ಪೆಟ್ಟಿಗೆಯತಿರುಕಾಟ್ಟು ಪಳ್ಳೀಗೆ ಕಳುಹಿಸಿ ಉಪೋಷಣದಿಹರಿಯ ಮಾನಸ ಪೂಜೆ ಮಾಡುತ ಕುಳಿತರು 13ಜಾನೋಜಿರಾಯನು ವಾದಿಸೆ ಸುಲ್ತಾನತನ್ನ ಸರ್ಕಾರ ಶೋಧಕರ ಕಳುಹಿಸಿದತನ್ನ ಹಿರಿಯರ ಮತ್ತು ಇತರ ರಾಜರುಗಳಚಿಹ್ನೆ ಮುದ್ರಿತ ಒಡವೆ ಮಾತ್ರವೆ ಕಂಡ 14ವಿರೋಧ ನೀಗಿಸಿ ನಿಂಬಳ್ಕರನ ಕೈಯಿಂದಹರಿಪೂಜೆಗುರುಪೂಜೆ ಮಾಡಿಸಿ ಕಾಣಿಕೆಯುಗುರುತರದಿ ಅರ್ಪಿಸಿದ ಆ ಮ್ಲೇಛ್ಭರಾಜನುಗುರುಸತ್ಯಬೋಧರ ಕೀರ್ತಿವರ್ಧಿಸಿತು15ತಿರುಕಾಟ್ಟುಪಳ್ಳಿಯಿಂದಲಿ ಪೂಜೆ ಪೆಟ್ಟಿಗೆಯತರಿಸಿ ಹರಿಪೂಜೆಯ ಮಾಡಿ ಮುದದಿಂದಮರ್ಯಾದೆ ಕಾಣಿಕೆಗಳಕೊಂಡು ದಿಗ್ವಿಜಯಚರಿಸಿದರು ಹರಿಗುರು ತೀರ್ಥಸ್ಥಳಗಳಿಗೆ 16ಮಾರ್ಗದಲಿ ತಂಜಾವೂರಿನ ರಾಜನುಶ್ರೀ ಗುರುಗಳಿಗೆ ಸೇವೆಸÀಲ್ಲಿಸಿದನಗರದಲಿ ಪ್ರಮುಖಪಂಡಿತಗೋಸಾಯಿಯನಿಗಮಾಂತ ವಾದದಲಿ ಸೋಲಿಸಿದರು 17ಕುಂಭಕೋಣದಿ ಬ್ರಾಹ್ಮಣರ ಬೀದಿಯಲ್ಲಿಗಂಭೀರತರ ದೊಡ್ಡ ಮಂಟಪಕಟ್ಟಿಸಂಭ್ರಮದಿ ಹರಿಪೂಜೆಗೈದು ವಿದ್ವಜ್ಜನಸಭೆಯಕೂಡಿ ವಾಕ್ಯಾರ್ಥ ನಡೆಸಿದರು 18ಶ್ರೀರಂಗ ಕ್ಷೇತ್ರ ತಂಜಾವೂರು ತರುವಾಯಸಾರಂಗಪಾಣಿ ಕುಂಭೇಶ್ವರ ಕ್ಷೇತ್ರಪರಿಕಲ್ಲು ತಿರುಕೋಯಿಲೂರು ಮಾರ್ಗದಿ ಬಂದುಸೇರಿದರು ತಿರುಪತಿ ವೇಂಕಟಾಚಲಕ್ಕೆ 19ಶ್ರೀರಂಗನಾಥನಿಗೆ ಶ್ರೀರಂಗನಾಯಕಿಗೆಕ್ಷೀರಾಬ್ಧಿಯಲಿತೋರ್ದ ಧನ್ವಂತರಿಗೆನೀರುಮಧ್ಯದಿ ಇರುವ ಜಂಬುಕೇಶ್ವರನಿಗೆಭಾರಿ ಪುಣ್ಯದೆ ಕಾವೇರಿಗೆ ನಮಿಪೆ 20ಶಾಙ್ರ್ಗಧರಚಕ್ರಧರಕುಂಭೇಶ್ವರಅಂಬಮಂಗಳನಾಯಕಿ ವಿಜಯೀಂದ್ರರಿಗೆನಾಗೇಶ್ವರನಿಗೆ ವಿದ್ಯುಪುರಿ ಶ್ರೀಶನಿಗೆಭೃಗುಸುತಪತಿ ಶ್ರೀನಿವಾಸನಿಗೆ ನಮಿಪೆ 21ಪರಿಕಲ್ಲು ಎಂಬುವ ಗ್ರಾಮದಲಿ ನರಸಿಂಹಶ್ರೀರಮಾಪತಿ ಇಹನು ಸರ್ವೇಷ್ಟದಾತಪರಿಪರಿ ಭಕ್ತರ ಪೀಡೆಗಳ ಪರಿಹರಿಪಶರಣಾದೆ ಶ್ರೀ ಲಕ್ಷ್ಮಿ ನರಸಿಂಹನಲ್ಲಿ 22ತಿರುಕೋಯಿಲೂರಲ್ಲಿ ಮೂರ್ಲೋಕ ಅಳೆದವನಭಾರಿಆಲಯಉಂಟು ಶಿವಕುಮಾರರಿಗೂಪಾತ್ರ ವಿಶಾಲವು ದಕ್ಷಿಣ ಪಿನಾಕಿನಿಯತೀರದಲಿ ಶ್ರೀರಘೂತ್ತಮರು ಕುಳಿತಿಹರು 23ಪಿನಾಕಜಾ ಈ ಪಿನಾಕಿಯಲ್ಲಿಹನುಅನಿಮಿತ್ತ ಬಂಧುಶ್ರೀಕೇಶವ ಸರ್ವೇಶಸ್ನಾನ ಜಪದಾನಗಳು ಪಣ್ಯಪ್ರದತತ್ತೀರವನದಲ್ಲಿ ಶ್ರೀ ರಘೂತ್ತಮರ ವೃಂದಾವನ 24ಶ್ರೀಯುತ ತ್ರಿವಿಕ್ರಮ ವಿಶ್ವರೂಪಗೆ ನಮೋಕಾತ್ಯಾಯನಿ ಶಿವಗೂ ಸ್ಕಂಧವಲ್ಲಿಗೂಕಾಯವಾಕ್ಕು ಮನದಿ ಟೀಕಾಭಾವಬೋಧರಿಗೂಕಾಯಮನ ಶುದ್ಧಿಕರ ಪಿನಾಕಿನಿಗೂ ನಮಿಪೆ 25ತಿರುಕೋಯಿಲೂರಿಗೆ ಕ್ರೋಶತ್ರಯದೊಳಗೇವೆವೀರ ಚೋಳಪುರದಲ್ಲಿ ಶ್ರೀ ಸತ್ಯನಾಥತೀರ್ಥರು ಅಭಿನವ ಚಂದ್ರಿಕಾಕಾರರುಇರುತಿಹರು ವೃಂದಾವನದಲ್ಲಿ ವಂದೇ 26ತಿರುಕೋಯಿಲೂರಿಂದ ತಿರುವಣ್ಣಾಮಲೆಯೆಂಬಅರುಣಾಚಲಕೆ ಪೋಗಿ ಅಲ್ಲಿ ರಾಜಿಸುವಕರುಣಾಬ್ಧಿ ಗಿರಿಜಾರಮಣನ್ನ ವಂದಿಸಿತಿರುಪತಿಗೆ ಹೊರಟರು ಗುರುಸರ್ವಭೌಮ 27ಹೇಮಗರ್ಭನತಾತಶ್ರಿಪತಿ ಜಗನ್ನಾಥಆಮಲಗುಣಗಣಸಿಂಧು ಪ್ರಸನ್ನ ಶ್ರೀನಿವಾಸರಾಮ ಹಯಮುಖವ್ಯಾಸನೃಹರಿಗೆ ಪ್ರಿಯತಮರೆನಿಮ್ಮಲ್ಲಿ ಶರಣಾದೆ ಸತ್ಯಬೋಧಾರ್ಯ 28 ಪ
--------------
ಪ್ರಸನ್ನ ಶ್ರೀನಿವಾಸದಾಸರು