ಒಟ್ಟು 21 ಕಡೆಗಳಲ್ಲಿ , 13 ದಾಸರು , 21 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವ್ಯಾಘ್ರಗಿರಿವಾಸ ಶ್ರೀ ಶ್ರೀನಿವಾಸ ಸೇವ್ಯ ಪಾದಾಜ್ಜ ಪ ಕಮಲಸಂಭವಜನಕ ಕಮಲಾಪ್ತ ಕುಲತಿಲಕ ಕಮಲ ಸನ್ನಿಭಚರಣ ಕಲುಷಗಣಹರಣ ಕಮನೀಯ ಗುಣಹಾರ ಕಲ್ಯಾಣಗುಣ ಪೂರ ಕಮಲಾ ಮನೋಹರ ಕಲಿತ ಶೃಂಗಾರ 1 ಲೋಕಮೋಹನರೂಪ ಲೋಕರಕ್ಷಣ ಚಾಪ ಸುಕೃತಿ ಪರಿವಾರ ನಾಕನಿಲಯ ಸಮಾಜ ನಮಿತ ಪಾದಾಂ ಭೋಜ ಪಾಕರಿಪು ಮಣಿನೀಲ ಪದ್ಮಾನುಕೂಲ2 ಮಾಂಡವ್ಯ ಮುನಿಸೇವ್ಯ ಮಾನಸಾಂಬುಜಭವ್ಯ ಪಾಂಡುಸುತ ಪರಿಪಾಲ ಪಾವನ ಸುಶೀಲ ಭಾಗವತ ಸನ್ಮೋದ ಗಾಂಡೀವಿ ಸುಶ್ಯಾಲ ಗಾನರಸಲೋಲ 3 ತವಚರಣ ಪಂಕಜಂ ತೃಪ್ತಜನ ಸುರಕುಜಂ ಭವಜಲಧಿಕಾರಣಂ ಭವತು ಮಮ ಶರಣಂ ತವನಾಮಕೀರ್ತನಂ ತಾಪಪರಿಮೋಚನಂ ಶ್ರವಣಯೋರ್ದೇಹಿಮಮ ಶಮಿತಾಘಮಹಿಮಾ 4 ಸಕಲಲೋಕ ಶರಣ್ಯ ಸರ್ವದೇವವರೇಣ್ಯ ನಿಖಿಲಭೂತವಾದ ನಿರ್ಮಲ ಸುವೇಷ ಅಕಲಂಕ ಚರಿತ ನಿತ್ಯಾನಂದ ಗುಣಭರಿತ ಶಿಖಿರಿಷ ವಿಹರಣ ಕುಶಲ ಶ್ರೀವರದ ವಿಠಲ 5
--------------
ವೆಂಕಟವರದಾರ್ಯರು
ಶ್ರೀರಂಗ ಶ್ಯಾಮಲಕೋಮಲಾಂಗ ಕ್ರೂರರಕ್ಕಸಕುಲನಿವಾರಣ ನಾರದಾದಿವಂದ್ಯನೆ ಪ. ಮಾಣಿಕ್ಯ ಮೌಕ್ತಿಕಹಾರ ಧೀರ ವಾಣೀಪತಿಪಿತ ವನಜನೇತ್ರನೆ ವಾಣಿಬಾಹೋತ್ತಂಡನ ಚಾಣೂರಮರ್ದನ ಚಿದಾನಂದ ವೇಣುನಾದಪ್ರಿಯದೇವನೆ ಇನಕುಲಾಂಬುಧಿಚಂದ್ರನೆ 1 ಅಕ್ರೂರ ಅಂಬರೀಷವರದ ನಕ್ರಬಂಧನ ನಾಗಸ್ತ್ರೀರಕ್ಷಕ ಚಕ್ರಧರ ಮುಕುಂದನೆ ರುಕ್ಮಿಣೀವಲ್ಲಭ ವಾಸುದೇವ ಶಕ್ರಶಶಿಧರಶೇಷಸನ್ನುತ ಸಕಲಲೋಕೋತ್ಪತ್ಯನೆ 2 ನಿತ್ಯಾನಂದನೆ ನಿಗಮಗೋಚರನೆ ಮದನ ಶ್ರೀಗೋಪಾಲನೆ ಕರ್ತು ಹೆಳವನಟ್ಟೆರಂಗನೆ ಕೃಪಾಂಗನೆ3
--------------
ಹೆಳವನಕಟ್ಟೆ ಗಿರಿಯಮ್ಮ
ಸಕಲಲೋಕಪಾಲಕ ರಕ್ಷಿಸೈ ನಿಖಿಲವ್ಯಾಪಕ ಪ ಚರಣದಾಸನ ಮೊರೆಯ ಪಾಲಿಸಿ ಕರುಣವಂ ಬೆರೆಸಿ ಪೊರೆಯೊ ಶರಣಜನ ಪ್ರಿಯಕರನೆ ಮರೆಯ ಹೊಕ್ಕೆನು 1 ಇಂದೊದಗಿಬಂದ ದುರಿತವನು ತಂದೆ ನೀಬಂದು ಪರಿಹರಿಸೊ ಮುಂದಿನ್ನು ಬಂಧನದ ಬಲೆಯಚಿಂದಿಸಿ ಚಂದದಿಂ ಕಾಯೊ 2 ಕಾಯಜಪಿತನೆ ನಿನ್ನ್ಹೊರತು ಕಾಯುವ ಹಿತರು ಇಲ್ಲಯ್ಯ ದೂರದ ಸುತನ ಮೊರೆ ಕೇಳೊ ಕ್ಷಿತಿಜಪತಿಯೆ ಶ್ರೀರಾಮ 3
--------------
ರಾಮದಾಸರು
ಹರಿಯೆ ಎನ್ನ ದೊರೆಯೆ ನಿನ್ನಯ ಮರೆಯಹೊಕ್ಕೆನೊ ಪ ವ್ಯಾಘ್ರಗಿರಿಯೊಳಿರುವ ಸಿರಿನಾರಾಯಣ ಅ.ಪ ಸಕಲ ಲೋಕಗಳನು ನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೇ ಸಲಹುವಾತನು ಪ್ರಕಟವಾದ ಜಗವ ನೀನೆ ಪ್ರಳಯಗೈವನು ನಿತ್ಯ ನೀನೆ ನಿಯಮಿಸುವನು 1 ಸ್ಥೂಲ ಸೂಕ್ಷ್ಮರೂಪ ನೀನೆ ಮೂಲ ಪುರುಷನು ಲೀಲೆಯನ್ನು ಪ್ರಕಟಗೈವ ಕಾಲರೂಪನು ನೀಲಲೋಹಿತಾದಿ ವಿಬುಧಜಾಲವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮಪುರುಷ ಪಂಕಜಾಕ್ಷ ಪತಿತಪಾವನ ಶರಧಿ ಶಯನ ಸಕಲಲೋಕ ಸಂವಿಭಾವನ ವರಗುಣಾಢ್ಯ ವಿಗತಮಾಯ ವಿಶ್ವಮೋಹನ ದುರಿತಗಜ ಮೃಗಾಧಿರಾಜ ವರದವಿಠಲ ವಿಹಗಯಾನ3
--------------
ವೆಂಕಟವರದಾರ್ಯರು
ಹರಿಯೆ ಯನ್ನ ಧೊರೆಯೆ ನಿನ್ನಮರೆಯ ಹೊಕ್ಕೆನೊ ಸಿರಿಯರಮಣ ಪ ಸಕಲ ಲೋಕಗಳನುನೀನೇ ಸೃಜಿಸುವಾತನು ಸುಖದಿ ಪ್ರಾಣಿಗಳನು ನೀನೆ ಸಲಹುವಾತಾನು ಪ್ರಕಟವಾದ ಜಗವ ನೀನೆ-ಪ್ರಳಯಗೈವನು ನಿಖಿಲ ಜೀವಸಾಕ್ಷಿಯಾಗಿ ನಿತ್ಯನೀನೆನಿಯಮಿಸುವನು 1 ಸ್ಥೂಲಸೂಕ್ಷ್ಮರೂಪನೀನೆ ಮೂಲಪುರುಷನು ಲೀಲೆಯನ್ನು ಪ್ರಕಟಗೈವ ಕಾಲರುಪನು ನೀಲ ಲೋಹಿತಾದಿ ವಿಬುಧಜಾಲ ವಂದ್ಯನು ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2 ಪರಮ ಪುರುಷ ಪಂಕಜಾಕ್ಷ-ಪತಿತ ಪಾವನ ಶರಧಿಶಯನ ಸಕಲಲೋಕ ಸಂವಿಭಾವನ ವಿಶ್ವ ಮೋಹನ ದುರಿತ ಗಜಮೃಗಾಧಿರಾಜವರದ ವಿಠಲ ವಿಹಗಯಾನ 3
--------------
ಸರಗೂರು ವೆಂಕಟವರದಾರ್ಯರು
ಮಂದಗಮನೆ, ಇವನಾರೆ ಪೇಳಮ್ಮ |ಮಂದರಧರಗೋವಿಂದ ಕಾಣಮ್ಮಪಕೆಂದಳಿದನಖಶಶಿಬಿಂಬ ಪಾದಪದ್ಮ |ಅಂದುಗೆಯಿಟ್ಟವನಾರು ಪೇಳಮ್ಮ ||ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |ನಂದನ ಕಂದ ಮುಕುಂದ ಕಾಣಮ್ಮ 1ಉಡುಗೆ ಪೀತಾಂಬರ ನಡುವೀಣೆ ಉಡುದಾರ |ಕಡಗ-ಕಂಕಣವಿಟ್ಟವನಾರಮ್ಮ ||ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |ಒಡನೆ ತೋರಿದ ಜಗದೊಡೆಯ ಕಾಣಮ್ಮ 2ನೀರದನೀಲದಂತೆಸೆವ ವಕ್ಷದಿ ಕೇ-|ಯೂರ-ಹಾರಗಳನಿಟ್ಟವನಾರಮ್ಮ ||ನೀರೆ ಕೇಳು ನಿರ್ಜರರಾದವರಿಗೆ |ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ 3ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|ಲಂಕೃತನಹನೀತನಾರಮ್ಮ ||ಪಂಕಜಮುಖಿಶ್ರೀಭೂದೇವಿಯರರಸನು |ಶಂಕೆಇಲ್ಲದೆ ಗೋಪೀತನಯ ಕಾಣಮ್ಮ4ಕಂಬುಕಂಧರಕರ್ಣಾಲಂಬಿತಕುಂಡಲ|ಅಂಬುಜಮುಖದವನಾರೆ ಪೇಳಮ್ಮ ||ರಂಭೆ ಕೇಳೀತ ಪುರಂದರವಿಠಲ |ನಂಬಿದ ಭಕ್ತಕುಟುಂಬಿ ಕೇಳಮ್ಮ 5
--------------
ಪುರಂದರದಾಸರು