ಒಟ್ಟು 17 ಕಡೆಗಳಲ್ಲಿ , 13 ದಾಸರು , 17 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶರಣು ಕೃಷ್ಣವೇಣಿ ಶರಣು ಪುಣ್ಯಾಭರಣಿ ಶರಣು ಇಹಪರದಾಯಿನೀ ಪ ಸರ್ವವ್ಯಾಪಕನಿರಂಜನನೆನಿಪ ಶ್ರೀವಿಷ್ಣು ಉರ್ವಿಯೊಳು ದ್ರವರೂಪದೀ ಹರ್ವಿತಿಹಸಂದೇಹವಿಲ್ಲದಕೆ ಭಕುತಿಯಲಿ ಅರ್ವವನೆ ಗತಿಯ ಪಡದಾ ಮುದದಿ 1 ಅಚ್ಯುತನು ಕೃಷ್ಣನದಿ ಹರಿವುತಿಹನೆಂದು ಮೆಚ್ಚಿವೇಣಿಯ ನಾಮದಿ ನಿಚ್ಚ ಸತ್ಸಂಗವೆಂದರಿತು ಕೂಡಿದ ಶಿವನು ಸಚ್ಚರಿತನಾಮಮಹಿಮಾನೇಮಾ 2 ನಿನ್ನ ಪೂರೆಲುದಿತ ಪವನದಿ ದುರಿತವೋಡಿದವು ಇನ್ನು ಮಿಂದವನ ಗತಿಯಾ ಬಣ್ಣಿಸುವ ನಾವನೆಲೆ ಜನನೀತಾರಿಸುಯನ್ನ ಮನ್ನಿಸು ಗುರುವಿನಾಸುತನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಆಗಲೆ ಕಾಯಬೇಕು ಅಂಬುಜಾಕ್ಷನೆ ಎನ್ನ |ಈಗ ನೀ ಕಾಯ್ದರೇನು ಕಾಯದಿದ್ದರೇನು ಪಹೊನ್ನು ಹಣ ಎನಗುಂಟು ಹೆಸರಾದ ಮನೆಯುಂಟು |ಚಿನ್ನ-ಚೀನಾಂಬರವುಂಟು ಚೆಲುವುಪ್ಪರಿಗೆಯುಂಟು ||ಮೊನ್ನೆ ಹುಟ್ಟಿದ ಗಂಡು ಮಗು ಒಂದು ಎನಗುಂಟು |ಸನ್ನೆ ಶಕ್ತಿಗುಂದಿದಾಗ ಸಂಗಡಲೊಬ್ಬರ ಕಾಣೆ 1ನಂಟರಿಷ್ಟರು ಉಂಟು ನೆರೆ-ಹೊರೆ ಎನಗುಂಟು |ಎಂಟು ಭಾಗ್ಯಗಳುಂಟು ಬಂದು ಹೋಗುವರುಂಟು ||ಕಂಠಕೆ ಹೊದ್ದಿದ ಕಾಂತೆಯರೆನಗುಂಟು |ಒಂಟಿಯಾಗಿ ಹೋಗುವಾಗ ಸಂಗಡೊಬ್ಬರನು ಕಾಣೆ 2ಒಂದು ಕ್ಷಣ ಮೊದಲಾದವಾತಘಾತಗಳಿಂದ |ಅಂದಿನ ವ್ಯಾಧಿಗಳು ಬಾಧಿಸುತಿರಲು ||ಇಂದಿರೇಶನೆ ನಿನ್ನ ಸಂಗವೆಲ್ಲವೆ ಬಿಟ್ಟೆ |ಬಂದಿನ್ನು ಕಾಯಬೇಕೊ ಪುರಂದರವಿಠಲ 3
--------------
ಪುರಂದರದಾಸರು