ಕಾರ್ತಿಕೇಯ ಮಹಾಸೇನ ನಿಜ
ಭೃತ್ಯರೊಳಾಗು ಪ್ರಸನ್ನಪ.
ಚಿತ್ತಸಾಕ್ಷಿ ಹರಿಭಕ್ತಿಜ್ಞಾನಮ-
ನಿತ್ತು ಕಾಯೊ ಷಡ್ವದನಅ.ಪ.
ತಂದೆ ತಾಯಿ ಕುಲಸ್ವಾಮಿ ಹರಿ-
ಯೆಂದು ಭಜಿಸುವೆನು ಪ್ರೇಮಿ
ಸ್ಕಂದನಾಮಕ ನೀನಂತರ್ಯಾಮಿ
ಸುಂದರ ಮಯೂರಗಾಮಿ 1
ಪಾರ್ವತಿ ಶಿವಸಂಜಾತ ಪರಿ-
ಪಾಲಿತ ಸುಜನವ್ರಾತ
ಸರ್ವಗೀರ್ವಾಣ ಸೇನಾಧ್ಯಕ್ಷ
ಸರ್ವೋತ್ತಮ ಹರಿಪಕ್ಷ 2
ತಾರಕದ್ಯೆತ್ಯಸಂಹಾರ ಸುವಿ-
ಚಾರೈಕಪರಾಧಾರ
ಪ್ರಾರಂಭಗೈದ ಕಾರ್ಯ ಸಫಲಿಪುದು
ಭಾರ ನಿನ್ನದು ರಣಧೀರ 3
ಪಾವಂಜಪುರನಿವಾಸ ನಃ
ಪಾತು ಶಿವಗಣಾಧೀಶ
ದೇವ ಲಕ್ಷ್ಮೀನಾರಾಯಣದಾಸ
ಪಾವನಚರಿತ ವಿಲಾಸ 4