ನಡುನೀರೊಳಗೆ ಕೈಯ್ಯ ಬಿಡುವುದೆ ಸಿರಿನಲ್ಲ
ಕಡೆ ಹಾಯಿಸದೆ ಮೋಸ ಕೊಡುವುದು ತರವಲ್ಲ ಪ.
ನಾನಾ ವಿಧದ ನೀಚಯೋನಿಗಳನು ದಾಟಿ
ಮಾನುಷೋತ್ತಮ ಮಧ್ವಮತದಿ ಪುಟ್ಟಿ
ನೀನೆ ಮುಕ್ತಿದನೆಂಬೊ ಜ್ಞಾನವಂತರ ಭೇಟಿ
ನಾನೈದಬೇಕೆಂದು ಧ್ಯಾನಗೊಂಡಿಹೆನೆಂದು 1
ವೇದ ವಿಹಿತಕರ್ಮವಾದರು ಕ್ರಮವಾಗಿ
ಸಾಧಿಸಲಿಲ್ಲ ಸಂತತಿಗಳಿಲ್ಲ
ಪಾದ ಪದ್ಮ ಪರಾಗ
ಮೋದಾನುಭವದಿ ಶುಭೋದಯಗೊಳಲಿಲ್ಲ 2
ಕೆಲವು ಕಾಲವ ಬಾಲ್ಯದಲಿ ಕಳೆದೆನು ಮತ್ತೆ
ಲಲನೇರ ಮೋಹದಿ ಬಳಲಿದೆನು
ಬಲವು ಕುಂದುತ ದೇಹ ಗಳಿತವಾಗುವುದಿನ್ನು
ನಳಿನಾಕ್ಷ ಪದಪದ್ಮ ನೆಳಲನೈದದ ಮುನ್ನು 3
ಮೂರೊಂದು ಪುರುಷಾರ್ಥ ತೋರುವ ಪುರುಷ ಶ-
ರೀರವ ಕರುಣಿಸಿದವನೆ ನೀನು
ಮೂರಾರು ವಿಧ ಭಕ್ತಿ ಸಾರುವ ತಿಳಿಸಿ ಕಂ
ಪಾದ ಪರಿಯಂತ 4
ಸಂಚಿತಾಗಾಮಿ ದುಷ್ಕøತಗಳನಳಿಸಿ ಪ್ರಾ
ಪಂಚಿಕ ಭೋಗ ಪೂರಣಗೊಳಿಸಿ
ಪಂಚಭೌತಿಕ ಹರ ವಂಚನೆ ಮಾಡದೆ ಶ್ರೀ ವಿ
ರಿಂಚಿವರದ ದೇವ ವೆಂಕಟೇಶ ನೀ ಕರುಣಿಸು 5