ಏನಾರಿಸುವಿ ಹರಿಯೇ ಎನ್ನವಗುಣಾ
ಅನಂತಾನಂತ ತಪ್ಪು ಮಾಡಿದ ಪಾಮರೊಳೇನಾ ಪ
ಉದಯ ಉದ್ಯೋಗನೆನುವೆ ಮಧ್ಯಾಹ್ನಕ
ಕ್ಷುಧೆ ತೃಷೆಯಲ್ಲಿ ದಣಿವೆ ಇರುಳಿಗಿನ್ನು
ವದಗಿ ನಿದ್ರೆ ಯನುವೆ
ಇದರೊಳು ನಿನ್ನ ನಾಮನೆನೆಯದೆ ದಿನಗಳೆದೇನಾ 1
ನಿನ್ನ ಕಥೆಯಾ ಕೇಳದೇ ಮಂಗಳಂಗುಟ
ಕಣ್ಣಿನೊಳಿಟ್ಟು ನೋಡದೇ ಸರ್ವಾಂಗದಿ
ಚೆನ್ನಾಗಿ ಮಾಡದೇ
ಎನ್ನ ಕಾಯವು ಸತಿಸುತರಿಗೆ ಮಾರಿದೇನಾ 2
ಹರಿ ಭಕ್ತಿ ಮುದ್ರೆ ಧರಿಸೀ ಹೆಮ್ಮಿಲಿ
ದುರಾಚರಣೆ ಮಾಡಿದ ಕ್ಷಮಿಸೀ ಸತ್ಸಂಗದಿ
ಅರಿವಿಗೆ ಮನನೀಲಿಸೀ ಹೊರೆವದು
ಗುರು ಮಹಿಪತಿಸ್ವಾಮಿ ಕರುಣಿಸಿ ಎನ್ನಾ 3