ರಾಮ ರಾಮ ಶ್ರೀ ರಘುರಾಮ ನೀಲಮೇಘ-
ಶ್ಯಾಮ ನಿಸ್ಸೀಮ ಕಾಮಿತಾರ್ಥವಕರೆದತಿ-
ಪ್ರೇಮದಿಂದ ಪಾಲಿಸುವುದು ನಿನ್ನ ನಾಮ ಪ
ಕಲ್ಲೋದ್ಧಾರಕ ಕರುಣಾಳು ರಾಮ
ಬಿಲ್ಲನೆತ್ತಿದ್ದ ಬಿರುದಾತ ರಾಮ
ಸೊಲ್ಲು ಸೊಲ್ಲಿಗಿರಲು ಹರಿನಾಮ
ಚೆಲ್ಲ್ಯಾಡುವ ದಯ ಅವರಲ್ಲಿ ಪ್ರೇಮ 1
ಧೀರಪುರುಷನೆ ದಿಗ್ವಿಜಯ ರಾಮ
ವಾರಿಧಿಯ ಕಟ್ಟಿದ್ವನಜಾಕ್ಷ ರಾಮ
ಕ್ರೂರರಾಕ್ಷಸರನು ಕೊಂದು ಲಂಕಾ
ಸೂರೆಯನು ಮಾಡಿದಂಥ ನಿಸ್ಸೀಮ 2
ದುಷ್ಟರಾವಣಶತ್ರು ಶ್ರೀರಾಮ
ಹುಟ್ಟಿ ಭಾನುವಂಶದಿ ಸೀತಾರಾಮ
ಮುಟ್ಟಿಭಜಿಸೆ ಸಜ್ಜನರಿಗೆ ಭೀಮೇಶ-
ಧಾಮ 3