ಹರಿಯೆ ಯನ್ನ ಧೊರೆಯೆ ನಿನ್ನಮರೆಯ ಹೊಕ್ಕೆನೊ
ಸಿರಿಯರಮಣ ಪ
ಸಕಲ ಲೋಕಗಳನುನೀನೇ ಸೃಜಿಸುವಾತನು
ಸುಖದಿ ಪ್ರಾಣಿಗಳನು ನೀನೆ ಸಲಹುವಾತಾನು
ಪ್ರಕಟವಾದ ಜಗವ ನೀನೆ-ಪ್ರಳಯಗೈವನು
ನಿಖಿಲ ಜೀವಸಾಕ್ಷಿಯಾಗಿ ನಿತ್ಯನೀನೆನಿಯಮಿಸುವನು 1
ಸ್ಥೂಲಸೂಕ್ಷ್ಮರೂಪನೀನೆ ಮೂಲಪುರುಷನು
ಲೀಲೆಯನ್ನು ಪ್ರಕಟಗೈವ ಕಾಲರುಪನು
ನೀಲ ಲೋಹಿತಾದಿ ವಿಬುಧಜಾಲ ವಂದ್ಯನು
ಪಾಲಿತಾಖಿಲಾಂಡ ರಮಾಲೋಲ ಸುಗುಣಜಾಲ ಶ್ರೀ 2
ಪರಮ ಪುರುಷ ಪಂಕಜಾಕ್ಷ-ಪತಿತ ಪಾವನ
ಶರಧಿಶಯನ ಸಕಲಲೋಕ ಸಂವಿಭಾವನ
ವಿಶ್ವ ಮೋಹನ
ದುರಿತ ಗಜಮೃಗಾಧಿರಾಜವರದ ವಿಠಲ ವಿಹಗಯಾನ 3