ಒಟ್ಟು 28 ಕಡೆಗಳಲ್ಲಿ , 14 ದಾಸರು , 28 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಕೃಷ್ಣನಂದ ಮುಕುಂದಾ ಪ ನಿನ್ನೆತ್ತಿ ಆಡಿಸಲು ನಂದ ಯಶೋದೆಯಲ್ಲಾ ನಿನ್ನೆಂತು ಸೇವಿಸುವೆ ಪೇಳು ಇಂದಿರೆರಮಣಾ1 ನಿನ್ನ ಸಹಪಾರಿ ಸುಧಾಮನಾನಲ್ಲಾ ನಿನ್ನೆಂತು ಸೇವಿಸಲೊ ಯದುಕುಲೋತ್ತಮನೇ2 ಅಗರು ಚಂದನ ಪರಿಮಳದ್ರವ್ಯಗಳನೆ ತಂದು ಅರ್ಪಿಸಲು ಕುಬುಜೆಯಲ್ಲಾ ಆದರದಿ ಪಾಲ ನೀಡೆ ವಿದುರನಲ್ಲಾ ಅನಂತ ಗುಣಪೂರ್ಣನೇ ಶ್ರೀ ಹರಿ3 ಗೋವುಪಾಲನು ತಂದು | ನಿನಗ ಭಿಷೇಕ ಮಾಡುವೆನೆ ವಿಧ ವಿಧ ಪುಷ್ಪಗಳ ತಂದು ಅರ್ಚಿಸಲು ಪೊಕ್ಕಳೊಳು ಪುಷ್ಪವನೆಪಡೆದಿರುವೆ ಹರಿಯೆ 4 ಕರಿರಾಜ ನಿನ್ನ ಕರೆಯೆ ಕರುಣದಿಂದ ಬಂದೆ ಪ್ರಹ್ಲಾದಗೋಲಿದು ಕಂಬದಲಿ ನಿಂತೇ ದ್ರೌಪದೀ ದೇವಿಗಕ್ಷಯಾಂಬರ ವಿತ್ತೆ ಅಂತೆ ಎನ್ನಪಾಲಿಸೊ ಲಕ್ಷ್ಮೀಕಾಂತನೇ 5 ಪರಿಪಯಲಿಭಕ್ತರ ಪಾಲಿಸಿದೆಯೊ ದೇವಾ ಪರಮ ದಯಾಳುವೆಂದೆನಿಸಿಕೊಂಡೇ ಪರಮ ಪುರುಷನು ನೀನು ಪಾಮರನು ನಾನಹುದೊ ದಾರಿ ಕಾಣದೆ ಇರುವೆ ದಯೆತೋರು ಮುರಾರಿ6 ಭಕ್ತವತ್ಸಲ ನೀನೆ ಭಯನಿವಾರಣ ನೀನೇ ಭಾಗವತಜನಪ್ರಿಯ ನೀನೆ ಸರ್ವರಕ್ಷಕ ನೀನೆ ಶ್ರೀ ವೇಂಕಟವಿಠಲಾ 7
--------------
ರಾಧಾಬಾಯಿ
ಬಹುದೂರ ಮುಕ್ತಿಪಥದಿ ನಡೆದು ನೀವುಹೋಗಲದನಳವಡಿಸಿಕೊಳ್ಳಿರೊ ಪ. ಸಂಸಾರವೆಂಬಡವಿಯ ಸುತ್ತ ಸುಳಿವಸಂಕಟವ ಕಳೆವರೆಕಂಸಾರಿ ತ್ರಿವಿಕ್ರಮನಿಗೆ ಸೇವೆಯಅಂಶುಪ್ರದಕ್ಷಿಣವ ಮಾಡಿರೊ 1 ಏಕಂ ವಿನಾಯಕೇ ಕುರ್ಯಾದ್ವೇ ಸೂರ್ಯೇನತ್ರೀಣೆ ಶಂಕರೆಚತ್ವಾರಿ ಕೇಶವೇ ಕುರ್ಯಾತ್ ಸಪ್ತಶ್ವತ್ಥಪ್ರದಕ್ಷಿಣವ ಮಾಡಿರೊ 2 ಬ್ರಹ್ಮತ್ಯವೆಂಬ ಪಾಪವ ಕಳೆವರೆಬ್ರಹ್ಮಪಿತನ ಪಟ್ಟದರಸಿಗೆಒಮ್ಮನದಲೊಮ್ಮೆ ಪ್ರದಕ್ಷಿಣವಮಾಡಿನಿರ್ಮಲ ಸುಖವ ಪಡೆಯಿರೊ3 ತೀರ್ಥಯಾತ್ರೆಗಳು ಬೇಡ ನೀವು ಗಳಿಸಿದರ್ಥವ್ಯರ್ಥವ ಕೆಡಿಸಬೇಡಚಿತ್ತದಲ್ಲಿ ಹರಿಯ ಚರಣವನು ಕೂಡಿಸತ್ಸುಖವನುಂಬುದು ಕಾಣಿರೊ4 ಅಸ್ವಸ್ಥರಾದ ಜನರು ಬಿಡದೆ ನಮ್ಮ-ಶ್ವತ್ಥ ನಾರಾಯಣನಿಗೆದಾಸ್ಯಮಂ ಪಡೆದು ಭಕ್ತಿಯಿಂತುತತ್ಸುಖವನುಂಬುದು ಕಾಣಿರೊ 5 ಇಂತು ಪ್ರದಕ್ಷಿಣವ ಮಾಡಿ ಲಕ್ಷ್ಮೀಕಾಂತನ ಕೃಪೆಯ ಪಡೆವರೆಚಿಂತೆಗಳ ಕಳೆದಮೇಲೆ ಮುಕ್ತಿಯಲಿಸಂತೋಷದಲಿ ಸುಖಿಪರು6 ಹಯವದನನೆಂಬ ಗುರುಕೊಟ್ಟಮಂತ್ರದಿಭಯವೆಂಬ ಭುಜಂಗನ ಜಯಿಸಿ ಮೂರು ಬಾರಿ ಸುತ್ತಿ ಹÀರಿಯ ಪದದಣಿಯ ಕಟ್ಟಿ ನಡೆಯಿರೊ 7
--------------
ವಾದಿರಾಜ
ಭಾರತಿ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ಪ ಭವ ಸಂಹಾರಣ ಪರಾಶರ ಮತ ವಿಸ್ತರಣಅ.ಪ. ತ್ರೇತೆಯೊಳಂಜನೆ ಉದರದಿ ಜನಿಸಿ ಸೀತಾನಾಥನ ಪಾದಕೆ ನಮಿಸಿ ದೌತ್ಯವ ವಹಿಸಿ ಕೀರ್ತಿಯ ಗಳಿಸಿ ಭಕ್ತಾಗ್ರಣಿಯೆನಿಸಿದ ಗುರುವೆ 1 ದ್ವಾಪರದಲಿ ನೃಪ ಕುಲದಲಿ ಬಂದು ಪಾಪಿ ಮಾರ್ಗದ ಪ್ರಮುಖರ ಕೊಂದು ದ್ರೌಪದಿ ಬೇಡಿದ ಸುಮವನು ತಂದು ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2 ಕಲಿಯೊಳು ಕುಜನರ ಮತಗಳ ಜರಿದು ಸುಲಲಿತ ಭಕ್ತಿಯ ಮತವನು ಒರೆದು ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ ತುಳುವ ವಿಪ್ರನಲಿ ಉದಿಸಿದೆ ಗುರುವೆ 3
--------------
ಲಕ್ಷ್ಮೀನಾರಯಣರಾಯರು
ಶಾಂತೇರಿ ಕಾಮಾಕ್ಷಿ ಲಕ್ಷ್ಮೀಕಾಂತನ ಸೋದರಿ ಸಂತಜನರ ಭಯನಿವಾರಿ ಕಂತುಸಹಸ್ರ ಸುಂದರಿ ಪ. ಬಂಗಧಿ ದೇವಿ ಸುಪ್ರಸಿದ್ಧೆ ಮಹೇಶ್ವರಿ ಶುದ್ಧ ಶ್ರೀಹರಿಭಕ್ತಿಜ್ಞಾನ ಶ್ರದ್ಧೆಯ ನೀಡಮ್ಮ ಶಂಕರಿ 1 ಪಂಚಾಸ್ಯನಾರಿ ಪಾವನೆ ಕಾಂಚನಾಭೆ ಗೌರಿ ಪಂಚ ಮಹಾಪಾಪವಿದಾರಿ ಪಾಹಿಮಾಂ ಶ್ರೀವಿಶ್ವಂಭರಿ 2 ಸುಕ್ಷೇತ್ರ ಕುಮಟಾಖ್ಯ ನಗರಾಧ್ಯಕ್ಷೆ- ದೇವಿ ಭವಾನಿ ತ್ರೈಕ್ಷನ ರಾಣಿ ಕಲ್ಯಾಣಿ ಲಕ್ಷ್ಮೀನಾರಾಯಣಿ3
--------------
ತುಪಾಕಿ ವೆಂಕಟರಮಣಾಚಾರ್ಯ
ಶುಕಮುನಿ ಕರ್ಣಾಧಾರನ ಕೂಡಿ ಅನುಗತ ಭವಸಿಂಧು ಭಯವ ದೂಡಿ ಪ. ಅಂತಪಾರವೆಂದಿಗಿಲ್ಲವು ನಾನಾ ಭ್ರಾಂತಿ ಸುಳಿಗಳು ತುಂಬಿರುವವು ಚಿಂತಾಪರಾಕ್ರಾಂತಿಯಳವು ಪೋಕ ತಿಮಿರ ಬಾಧೆ ಬಹಳವು ಅಂತರಂಗದಿ ಲಕ್ಷ್ಮೀಕಾಂತನೆಂಬ ನಾವೆ ಯಂತಾದರು ತಂದು ಪಂತರಗೊಳಿಸುವ 1 ಸ್ವರ್ಗಾದಿ ಸುಖವೆಂದು ದ್ವೀಪವು ನಾನಾ ಕರ್ಮ ಕಲಾಪವು ನಿರ್ಗಮಗೊಳುವ ಸಂತಾಪವು ವೈರಿ ಜನಿತ ಮತಿಲೋಪವು ಇಂತು ದೀರ್ಘವಾದ ದುಃಖ ವರ್ಗ ತಪ್ಪಿಸಿ ಶ್ರೀ ಭೂ ದುರ್ಗಾವರ ಸಂಸರ್ಗವಿತ್ತು ಕಾವ 2 ತಾನೆ ಕರ್ತುವೆಂದು ಪೇಳದೆ ಮೋಹ ಧಾನೀ ಕೂಪದ ಮಧ್ಯ ಬೀಳದೆ ಹೀನ ಕರ್ಮಗಳನ್ನು ಬೆಳಸದೆ ಸವ ಮಾನ ಜನ ವಿರೋಧ ಮಾಡದೆ ದೀನಬಂಧು ಸರ್ವದಾನವಾರಿ ಲಕ್ಷ್ಮಿ ಪ್ರಾಣನಾಯಕ ವೆಂಕಟೇಶನ ನೆನೆಯಿಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀದೇವಿಯಂ ಭಕ್ತರೊಡನೆ ಶುಭಕಾಯವೊಲಿದು ಆಡಿದನುಯ್ಯಾಲ ಪ ನೀಲಿಮಾಣಿಕದ ಮಂಟಪವ ಕಟ್ಟಿ ಮುತ್ತಿನ ಸರಪಣಿಗಳನೆ ಬಿಗಿಸಿ ಮೇಲುಕಟ್ಟುಗಳ ಹಾಸಿ ಮಲ್ಲಿಗೆಮಾಲೆಗಳ ಶೃಂಗರಿಸಿ 1 ಪಟಹ ನಿಸ್ಸಾಳ ಭೇರಿ ಕೊಳಲು ತಮಟವಾದ್ಯ ಮೊಳಗುತಿರಲು ಕುಟಿಲಕುಂತಲೆಯರೊಡನೆ ಆದಿಪತಿ ವಿಠಲನಾಡಿದ 2 ಚಂದ್ರಮನ ಪೋಲ್ವ ಮುಖದಿ ಫಣಿಯೊಳು ಶೌನಕಾದಿಗಳು ಸೇರಿ [ಅಂದದಿ] ಸ್ತುತಿಸೆ ಕ್ಷೀರಾಬ್ಧಿಶಯನನಾಡಿದ3 ಭೇರಿ ಶಂಖಗಳ ದ್ವನಿಯ ದುಂದುಭಿಯ ಭೋರಿಡುವ ಜಯರವಗಳ ನಾರಿಯರು ಶೋಭನಗಳ ಪಾಡುತ್ತಿರೆ ಧೀರನಾಡಿದ 4 ವೇದಚೋರನ ತರಿದು ಆದಿಮೂರುತಿ ವರದನ ವಿ- ನೋದದಿ ತೂಗಿದರು ರವಿಸೌಂದರಿಯನಾಡಿದ 5 ನೀಲವೇಣಿಯರು ಪಾಡುತ ತೂಗಿದರು ಗೋಪಾಲನಾಡಿದ 6 ಪರಶುಧರನೆನಿಸಿ ಹರನ ಶ್ರೀರಾಮಚಂದ್ರ ಕರುಣಾ ವಾರಿಧಿ ಕೃಷ್ಣನ ತೂಗಿದರು ವರಸತಿಯರು 7 ಚೋಜಿಗದಮತ್ಪುರದಸತಿಯರನುವೋಜಿಗಲಿಸಿದಭೌದ್ಧನಾ ತೇಜಿವಾಹನಕಲ್ಕ್ಯನಾ ತೂಗಿದರು ರಾಜೀವನೇತ್ರೆಯರು ಪಾಡುತ 8 ಚಿತ್ತಜೌಘ ಮನಮನದ ಚದುರೆಯರು ಮುತ್ತು ಸರಗಳನೆ ಧರಿಸಿ ದತ್ಯಂತ ಮೋಹದಿಂದ ತೂಗಿದರು ಹಸ್ತಿನೀಕಾಮಿನಿಯರು9 ಮತ್ತೆಸಾರಂಗವೆನಲುನಡೆಯುತಲಿವಿಸ್ತರಿಸಿಕುಚಯುಗಳದಿ ಕಸ್ತೂರಿಯ ಗಂಧವೆಸೆಯೆ ತೂಗಿದರು ಚಿತ್ತಿನೀಜಾತದವರು 10 ಕುಂಕುಮಾಂಕಿತ ಚದುರೆಯರಲಂಕರಿಸಿ ಭೂಷಣಗಳ ಶಂಕರನಸಖನ ಪಾಡಿ ತೂಗಿದರು ಶಂಖಿನೀಕಾಮಿನಿಯರು 11 ಕದಪುಗಳ ಕಾಂತಿಹೊಳೆಯೆ ಮೊಗಸಿರಿಯಪದುಮವನು ಪೋಲ್ವಂದ ಯದುವೀರನನು ಪಾಡುತತೂಗಿದರು ಕುಮುದಿನೀಕಾಮಿನಿಯರು 12 ಅಂಗನಮಣಿ ಪಾರ್ವತಿ ಸರಸ್ವತಿಯರು ರಂಗುಮಾಣಿಕರತ್ನದ ಮಂಗಳಾರತಿಯನೆತ್ತಿ ತೂಗಿದರು ಗಂಗೆಯನು ಪಡೆದಯ್ಯನ 13 ಚಿಂತಿತಾರ್ಥವ ಸಲಿಸುವ ಮುದ್ದುವೆಂಕಟೇಶನು ತಾನೆನಿಸುವ ಪಿತ ದೇವಪುರದ ಶ್ರೀಲಕ್ಷ್ಮೀಕಾಂತನಾಡಿದನುಯ್ಯಾಲಾ 14
--------------
ಕವಿ ಲಕ್ಷ್ಮೀಶ
ಸರ್ವವು ಹರಿಗೊಪ್ಪಿಸಿದರೆ ನಿಶ್ಚಿಂತೆ ಗರ್ವದಿಂದಲಿ ವ್ಯರ್ಥ ಕೆಡದಿರು ಭ್ರಾಂತೆ ಪ. ಲೇಶ ಸ್ವತಂತ್ರವನಿತ್ತದ ನಂಬೀ ಶಾಭಿಮಾನದಿ ಮಾಡುವ ಡೊಂಬಿ ದೋಷಗಳಿಂದಾಹ ಫಲವೆ ನೀನುಂಬಿ ವಾಸುದೇವನ ಮೂರ್ತಿಯನೆಂತು ಕಾಂಬಿ 1 ಹಸುತೃಷೆ ನಿದ್ರೆ ತಡೆಯಲೊಲ್ಲಿ ಯಾಕೆ ದಶಕರಣಗಳು ದುರ್ವಿಷಯದಿ ನೂಕೆ ವಶವಿಲ್ಲದಲೆ ಬಿದ್ದು ಬಳಲುವಿ ಯಾಕೆ ವಸುದೇವ ಸುತನ ಮರೆಯದಿರು ಜೋಕೆ 2 ಸತ್ಯ ಸಂಕಲ್ಪನಲ್ಲದೆ ಕರ್ತನಾವ ತತ್ವೇಶರರಿತು ಕರ್ಮವ ಮಾಳ್ಪ ಸೋವ ನಿತ್ಯ ನೀ ವರಿತ ಹಮ್ಮಮತೆಯ ಭಾವ ಹತ್ತದಂತಿರೆ ಕಾವ ಕರುಣಾಳು ದೇವ 3 ಒಡೆಯರಿಲ್ಲದೆ ಪೋದ ವೃಕ್ಷದ ಫಲವ ಬಡಿದು ತಿಂಬುವರು ಕಂಡವರೆಲ್ಲ ನೋಡು ಕರ್ಮ ಮಡದಿ ಮೊದಲುಗೊಂಡು ಕಡಲಶಯನಗರ್ಪಿಸುತ ಕಷ್ಟ ದೂಡು 4 ವಹಿಸು ಭಾರವ ಲಕ್ಷ್ಮೀಕಾಂತನ ಮೇಲೆ ಇಹರಹರಾದರದಿಂದ ತಲ್ಲೀಲೆ ಮಹಿಮೆಯ ಪೊಗಳಿ ತೂಗಾತನೂಯ್ಯಾಲೆ ಅಹಿಪತಿ ಗಿರಿರಾಜ ಎತ್ತುವ ಮೇಲೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಹಿಮಾಚಲೇಂದ್ರನ ಕುಮಾರಿ ಶಂಕರಿ ಉಮಾಂಬೆ ಬಾರಮ್ಮ ಪ ಕುಮಾರ ಶಕ್ರಾದಿ ಸಮಸ್ತ ಸುರಗಣ ಸಮರ್ಚಿತಾಂಘ್ರಿಯೆ ನಮೋನಮೋ ಎಂಬೆ ಅ.ಪ. ಬುದ್ಧ್ಯಾಭಿಮಾನಿಯೆ ಸದ್ಯೋಜಾತನ ರಾಣಿ ಹೃದ್ಧ್ಯೋಮದಲಿ ಪೊಳೆದು ವಿದ್ಯಾ ಬುದ್ಧಿಯನಿತ್ತು ಶುದ್ಧಾತ್ಮನನು ಮಾಡಿ ಸದ್ಭಕ್ತಿ ಪಂಥದ ಸಿದ್ಧಾಂತ ತಿಳಿಸಮ್ಮ 1 ಘೋರ ಭವಾಬ್ಧಿಯ ತಾರಿಪ ಸುಲಭದ ದಾರಿಯ ತೋರೆನುತ ಮುರಾರಿಯನು ಬೇಡಿ ಶ್ರೀ ರಾಮ ನಾಮದ ರುಚಿ ಬೀರಿದೆ ಜಗದೊಳು 2 ಲಕ್ಷಾಘ ಧ್ವಂಸಿನಿ ದಾಕ್ಷಾಯಿಣೀ ಗಣಾ ಧಕ್ಷನ ವರ ಜನನಿ ಲಕ್ಷ್ಮೀಕಾಂತನ ಅಪರೋಕ್ಷದಿ ಕಾಂಬುವ ಸೂಕ್ಷ್ಮವನೊರೆದೆನ್ನ ರಕ್ಷಿಸು ಅಮ್ಮಯ್ಯ 3
--------------
ಲಕ್ಷ್ಮೀನಾರಯಣರಾಯರು
ಹೊನ್ನ ತಾ ಗುಬ್ಬಿ ಹೊನ್ನ ತಾ ಚೆನ್ನ ಗೋಪಾಲ ಚೆಲುವ ಕೃಷ್ಣನ ಕೈಗೆ ಪ. ಆಗಮವನು ತಂದು ಅಜಗಿತ್ತ ಕೈಗೆ ಸಾಗರವನೊತ್ತಿಕ್ಕಿ ಸುಧೆಯಿತ್ತ ಕೈಗೆ ನಾಗಶಯನ ನರಸಿಂಹನ ಕೈಗೆ 1 ಬಲಿಯ ದಾನವ ಬೇಡಿ ಬಂದಂಥ ಕೈಗೆ ಛಲದಿಂದ ಕ್ಷತ್ರಿಯರ ಕೊಂದಂಥ ಕೈಗೆ ಕಲಿ ವಿಭೀಷಣಗಭಯವಿತ್ತಂಥ ಕೈಗೆ ಬಲುಗಿರಿಯ ಬೆರಳಲ್ಲಿ ಆತಂಥ ಕೈಗೆ 2 ಪತಿವ್ರತೆಯರ ವ್ರತವಳಿದಂಥ ಕೈಗೆ ಹಿತವಾಜಿಯನೇರಿ ದುರುಳಮರ್ದನ ಕೈಗೆ ಸತಿ ಶಿರೋಮಣಿ ಲಕ್ಷ್ಮೀಕಾಂತನ ಕೈಗೆ ಚತುರ ಹೆಳವನಕಟ್ಟೆÉ ರಂಗನ ಕೈಗೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಏಕೆ ದಯಮಾಡಲೊಲ್ಲೆ - ಎಲೊ ಹರಿಯೆ |ಮೂಕನಾಗುವರೆ ಹೀಗೆ ಪಲೋಕವನು ರಕ್ಷಿಪ ಲಕ್ಷ್ಮೀಕಾಂತನು ನೀನೇ |ವಾಕುಮೊರೆಗಳಕೇಳಿಒಲಿದು ದಯಮಾಡಯ್ಯಅ.ಪಅರ್ಥವಿಲ್ಲದ ಬಾಳ್ವೆಯು - ಇರುವುದಿದು|ವ್ಯರ್ಥವಾಗಿದೆ ಶ್ರೀಪತಿ ||ಕರ್ತುನಿನ್ನೊಳು ನಾನು ಕಾಡಿ ಬೇಡುವನಲ್ಲ|ಸತ್ವರದಿ ದಯಮಾಡೊ ತುಳಸೀದಳಪ್ರಿಯ 1ಮನದೊಳಗಿನ ಬಯಕೆ - ಎಲೈಸ್ವಾಮಿ |ನಿನಗೆ ಪೇಳುವೆನು ನಾನು ||ಬಿನುಗುದೇವತೆಗಳಿಗೆ ಪೇಳಲಾರೆವೊ ಹರಿಯೆ|ತನುಮನ ನಿನ್ನ ಕೂಡ ಇಹವು ದಯಮಾಡೊ 2ಮೂರು ಲೋಕವ ಪಾಲಿಪ - ಎನ್ನಯ ಸ್ವಾಮಿ |ಭಾರವೆ ನಿನಗೆ ನಾನು ||ಕಾರುಣ್ಯನಿಧಿ ನಮ್ಮ ಪುರಂದರವಿಠಲ ಶ್ರೀ - |ದಾರಾಮನೋಹರ ಸಾಕಾರ ದಯವಾಗೊ3
--------------
ಪುರಂದರದಾಸರು
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ -ರಂಗದೊಳಗೆಲ್ಲ ಪಾಂಡುರಂಗ ಪರದೈವವೆಂದು ಪ.ಹರಿಯು ಮುಡಿದ ಹೂವ ಹರಿವಾಣದೊಳಗಿಟ್ಟುಕೊಂಡುಹರುಷದಿಂದ ಹಾಡಿ ಪಾಡಿ ಕುಣಿದು ಚಪ್ಪಳಿಕ್ಕುತ 1ಒಡಲ ಜಾಗಟೆಯ ಮಾಡಿ ಮಿಡಿವಗುಣಿ ನಾಲಗೆಯ ಮಾಡಿಒಡನೆ ಢಣ ಢಣ ಢಣ ಢಣ ಎಂದುಕುಣಿದು ಚಪ್ಪಳಿಕ್ಕುತ 2ಇಂತು ಸಕಲ ಜಗಕೆ ಲಕ್ಷ್ಮೀಕಾಂತನೆ ಪರದೈವವೆಂದುಕಂತುಪಿತ ಪುರಂದರವಿಠಲ ಪರದೈವವೆಂದು 3
--------------
ಪುರಂದರದಾಸರು
ರಾಜ ರಾಜರ ನೋಡ ಅಮ್ಮಯ್ಯಕೋಟಿ ತೇಜರು ನಿಂತಿಹರಮ್ಮಯ್ಯ ಪ.ಕುಂತಿ ಮಕ್ಕಳ ನೋಡ ಅಮ್ಮಯ್ಯಚಂದ್ರ ಕಾಂತಿಯಿಂದೊಪ್ಪುತ ಅಮ್ಮಯ್ಯನಿಂತ ಸೊಬಗು ನೋಡ ಅಮ್ಮಯ್ಯಲಕ್ಷ್ಮೀಕಾಂತನ ಇದುರಿಗೆ ಅಮ್ಮಯ್ಯ 1ಪಾಂಡವರ ನೋಡ ಅಮ್ಮಯ್ಯಸೂರ್ಯ ಮಂಡಲದಂತಿಹರ ಅಮ್ಮಯ್ಯದುಂಡಾಗಿ ನಿಂತಿಹರಮ್ಮಯ್ಯಅವರಕೊಂಡಾಡಲ್ವಶವಲ್ಲ ಅಮ್ಮಯ್ಯ2ಶಶಿಮುಖಿಯರ ನೋಡ ಅಮ್ಮಯ್ಯಕಾಂತೆ ದೇಶಲೆಲ್ಲ ಬೆಳಕು ನೋಡ ಅಮ್ಮಯ್ಯಹಸುಳೆಯರು ನಿಂತಿಹರಮ್ಮಯ್ಯನಮ್ಮ ಕುಸುಮನಾಭನ ಮುಂದೆ ಅಮ್ಮಯ್ಯ 3ಕಡು ಚಲುವೆಯರ ನೋಡಮ್ಮಯ್ಯನಿಂತಉಡುರಾಜಮುಖಿಯರಮ್ಮಯ್ಯಕಡಲಶಯನನ ಮುಂದೆ ಅಮ್ಮಯ್ಯಅವರಬೆಡಗು ಎಷ್ಟು ಹೇಳಲಮ್ಮಯ್ಯ4ಲಕ್ಷಣವಂತರಮ್ಮಯ್ಯನಿಂತು ನಕ್ಷತ್ರ ಮಾಲೆಯಂತೆ ಅಮ್ಮಯ್ಯವೀಕ್ಷಿಸಿ ರಾಮೇಶನ ಅಮ್ಮಯ್ಯಸುಖಅಕ್ಷಯಪಡೆದಿಹರಮ್ಮಯ್ಯ5
--------------
ಗಲಗಲಿಅವ್ವನವರು
ಶಾಂತೇರಿ ಕಾಮಾಕ್ಷಿ ಲಕ್ಷ್ಮೀಕಾಂತನ ಸೋದರಿಸಂತಜನರ ಭಯನಿವಾರಿ ಕಂತುಸಹಸ್ರ ಸುಂದರಿ ಪ.ಬಂಗಧಿ ದೇವಿ ಸುಪ್ರಸಿದ್ಧೆ ಮಹೇಶ್ವರಿಶುದ್ಧ ಶ್ರೀಹರಿಭಕ್ತಿಜ್ಞಾನ ಶ್ರದ್ಧೆಯ ನೀಡಮ್ಮ ಶಂಕರಿ 1ಪಂಚಾಸ್ಯನಾರಿ ಪಾವನೆ ಕಾಂಚನಾಭೆ ಗೌರಿಪಂಚ ಮಹಾಪಾಪವಿದಾರಿ ಪಾಹಿಮಾಂ ಶ್ರೀವಿಶ್ವಂಭರಿ 2ಸುಕ್ಷೇತ್ರ ಕುಮಟಾಖ್ಯ ನಗರಾಧ್ಯಕ್ಷೆ- ದೇವಿ ಭವಾನಿತ್ರೈಕ್ಷನ ರಾಣಿ ಕಲ್ಯಾಣಿ ಲಕ್ಷ್ಮೀನಾರಾಯಣಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ