ಕೊಳಲಕೃಷ್ಣ ಬಂದು ನಿಲ್ಲೊ ಹೃದಯ ಕಮಲದಿ
ನಳಿನನಾಭ ನಿನ್ನ ದಿವ್ಯ ಚಲುವ ರೂಪದಿ ಪ.
ಶಿರದಿ ಮಕುಟ ಫಣೆಯ ತಿಲುಕ ಒಲಿವ ಮುಂಗುರುಳು
ನಾಸಿಕ ಗಲ್ಲ ಹೊಳೆಯುತ 1
ಕರ್ಣದಲಿ ಕುಂಡಲಗಳು ಸ್ವರ್ಣ ಕಂಠವು
ನಿನ್ನ ದಂತ ಹೊಳೆಯುತಿರಲು ಚನ್ನ ಶ್ರೀಹರಿಯೆ 2
ಅಧರ ಉರದಿ ಲಕ್ಷಿಯು
ನಳಿತೋಳಿನಲಿ ಶಂಖ ಚಕ್ರ ವೇಣು ಪಿಡಿದಿಹ 3
ಕಮಲ ಮಾಲೆ ಮೇಲೆ ತುಳಸಿಯು
ಮಾರಜನಕ ಹೊಳೆವೊ ಜರಿಯ ಪೀತ ವಸನವು 4
ರಕ್ತವರ್ಣ ವಸನ ಉಟ್ಟು ಕಟ್ಟಿ ಕಿರುಗೆಜ್ಜೆ
ಮುಕ್ತರೊಡೆಯ ಮುಕ್ತಿಕೊಡುವ ಪಾದಕಮಲವು 5
ಕ್ಲೇಶ ಕಳೆಯುತ
ದಾಸ ಜನರ ಕಾಯ್ವ ಕೃಷ್ಣ ಘಾಸಿಗೊಳಿಸದೆ 6
ಗುರುಗಳಲ್ಲಿ ನಿಂತು ಎನ್ನ ಹರುಷಪಡಿಸೊ ನೀ
ಪರಮಪುರುಷ ನರಹರಿಯೆ ದುರಿತದೂರನೆ 7
ನೀರೊಳಾಡಿ ಭಾರಪೊತ್ತು ಕೋರೆ ತೋರಿದೆ
ಘೋರರೂಪಿ ಬ್ರಹ್ಮಚಾರಿ ಕ್ಷತ್ರಿಯಾರಿ ನೀ 8
ಶ್ರೀ ಹರಿ ರಾಮ ಕೃಷ್ಣ ಬೌದ್ಧ ಕಲ್ಕಿಯೆ
ಗೋಪಾಲಕೃಷ್ಣವಿಠ್ಠಲ ರೂಪ ತೋರೊ ನೀ 9